ದಂಡಾವತಿ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಂಡಾವತಿ
ಉಗಮ ಕಟ್ಟಿನಕೆರೆ (ಕುಪ್ಪೆ ಗ್ರಾಮ)
ಕೊನೆ ವರದ ನದಿ (ಬಂಕಸಾಣ)
ಉದ್ದ ೫೫ ಕಿ.ಮಿ.

ದಂಡಾವತಿಯು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನಲ್ಲಿ ಪ್ರವಹಿಸುವ ಸಣ್ಣ ನದಿ. ದಂಡಾವತಿ ನದಿಯ ಉಗಮವು ಸೊರಬ ತಾಲೂಕಿನ, ಸೊರಬ ಪಟ್ಟಣದಿಂದ ದಕ್ಷಿಣಕ್ಕೆ ೧೫ ಕಿಮೀ ದೂರದಲ್ಲಿರುವ ಕುಪ್ಪೆ ಗ್ರಾಮದ ಹತ್ತಿರವಿರುವ ಕಟ್ಟಿನಕೆರೆಯಗಿದೆ, ಕಟ್ಟಿನಕೆರೆ ಕೋಡಿ ಮತ್ತು ಸುತ್ತಲಿನ ನೀರಿನ ಹರಿವು ಸೇರಿ ದಂಡಾವತಿ ನದಿಯಗಿ ಮುಂದೆ ಸಾಗುತ್ತದೆ[೧].

ದಂಡಾವತಿ ನದಿಯು ಉತ್ತರಾಭೀಮುಕವಾಗಿ 55 ಕಿಮೀ ದೂರ ಹರಿದು ಅನವಟ್ಟಿ ಬಳಿಯ ಬಂಕಸಾಣ ಎಂಬ ಸ್ಥಳದಲ್ಲಿ ವರಾದಾ ನದಿಗೆ ಸೇರುತ್ತದೆ. ಮುಂದೆ ವರದಾ ನದಿಯು ತುಂಗಭದ್ರ ನದಿಗೆ ಸೇರುತ್ತದೆ ಮತ್ತು ನಂತರ ತುಂಗಭದ್ರ ನದಿಯು ಕೃಷ್ಣಾ ನದಿಗೆ ಸೇರಿ ಅಂತಿಮವಾಗಿ ಭಾರತದ ಪೂರ್ವ ಕರಾವಳಿಯಲ್ಲಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ದಂಡಾವತಿ ನದಿಯು ಒಟ್ಟು ೧೧೮.೮೮ ಚ.ಕಿ.ಮೀ ಜಲಾನಯನ ಪ್ರದೇಶವನ್ನು ಹೊಂದಿದೆ, ಈ ಪ್ರದೇಶವು 75° E ಮತ್ತು 75° 30'E ರಲ್ಲಿದೆ. ಸೊರಬದ ಶ್ರೀ ರಂಗನಾಥ ದೇವಸ್ಥಾನವು ದಂಡಾವತಿ ನದಿಯ ಬಲ ದಂಡೆಯಲ್ಲಿ ಸ್ಥಿತವಾಗಿದೆ[೨].

ಪುರಾಣಗಳಲ್ಲಿ ದಂಡಾವತಿ ನದಿ[ಬದಲಾಯಿಸಿ]

ಹಳೆಯ ದಂತಕಥೆಯ ಪ್ರಕಾರ ಶ್ರೀ ರಾಮಚಂದ್ರ, ಲಕ್ಷ್ಮಣ ಮತ್ತು ಸೀತಾ ವನವಾಸ ಕಾಲದಲ್ಲಿ ಅವರು ಸೊರಬ ಮೂಲಕ ಹಾದು ಹೋದರು. ಸೀಗತೆಗೆ ಬಾಯಾರಿಯಗಲು, ಶ್ರೀ ರಾಮಚಂದ್ರ ನೀರು ಕಂಡುಕೊಳ್ಳಲು ನೆಲದಲ್ಲಿ ಒಂದು ರಂಧ್ರವನ್ನು ಮಾಡಿ ಹರಿಸುತ್ತನೆಂದು ನಂಬಲಾಗಿದೆ. ರಾಮನಿಂದ ದೊರೆತ ನೀರು ಇಂದು ದಂಡವತಿ ನದಿಯಗಿ ಹರಿಯುತ್ತಿದೆ ಎಂಬ ಪ್ರತೀತಿಯಿದೆ.

ದಂಡವತಿ ನೀರಾವರಿ ಯೋಜನೆ[ಬದಲಾಯಿಸಿ]

ಸೊರಾಬ ತಾಲೂಕಿನ ಚೀಲನೂರು ಗ್ರಾಮದ ಹತ್ತಿರ ದಂಡವತಿಯ ನದಿಗೆ ಅಡ್ಡಲಾಗಿ ಒಂದು ಜಲಾಶಯವನ್ನು ನಿರ್ಮಿಸುವ ಯೋಜನೆ ಇದೆ. ಈ ಯೋಜನೆಯು ಸೊರಾಬ ಮತ್ತು ಶಿಕಾರಿಪುರ ತಾಲ್ಲೂಕುಗಳ 50,500 ಎಕರೆ ಭೂಮಿಯನ್ನು ನೀರಾವರಿ ಮಾಡುತ್ತದೆ. 1986-87ರ ಅಂಕಿ ಅಂಶಗಳ ಪ್ರಕಾರ ದಂಡವತಿ ನದಿ ಗರಿಷ್ಠ 5.5 ಟಿಎಂಸಿ ಅಡಿ ನೀರು ಒಯ್ಯುತ್ತದೆ ಮತ್ತು ಉತ್ತಮ ಮಳೆಗಾಲದಲ್ಲಿ ಸರಾಸರಿ 4 ಟಿಎಂಸಿ ಅಡಿ ಇರುತ್ತದೆ. ದಾಂಡವತಿ ನದಿಯುದ್ದಕ್ಕೂ ಅಣೆಕಟ್ಟು ನಿರ್ಮಾಣದ ಯೋಜನೆಯನ್ನು ಮೊದಲು 1895 ರಲ್ಲಿ ಬ್ರಿಟೀಷರು ಪ್ರಸ್ತಾಪಿಸಿದರು. ಪ್ರವಾಹವನ್ನು ನಿಯಂತ್ರಿಸುವ ಮತ್ತು ನೀರಿನ ಉಪಯೋಗವನ್ನು ಪಡೆದುಕೊಳುವುದು ಈ ಯೋಜನೆಯ ಉದ್ದೇಶವಗಿತ್ತು. ಅಲ್ಲಿಂದೀಚೆಗೆ, 1927 ರಿಂದ 2010 ರ ವರೆಗೆ ಹಲವು ಸಹ ಈ ಯೋಜನೆಯ ಪ್ರಸ್ತಾಪವಯಿತ್ತು ಆದರೆ, ಇದುವರೆಗು ಈ ಯೋಜನೆಯು ಅನುಷ್ಠಾನಗೊಂಡಿಲ.ಯೋಜನೆಯಿಂದ ಸಮಸ್ಯೆಗಳುಂಟಾಗುತ್ತವೆಂದು ಹಲವು ರೈತರು ಹಲವಾರು ಪ್ರತಿಭಟನೆಗಳನ್ನು ನಡೆಸುತ್ತಿದಾರೆ. ಸಂಸತ್ತಿನಲ್ಲಿ ರಾಜಕಾರಣಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣಾ ಸಮಯದಲ್ಲಿ ಈ ಯೋಜನೆಯನ್ನು ಪ್ರಮುಖ ವಿವಾದವನ್ನು ಬಳಸಲಾಯಿತು. ಕೃಷಿಕ ಜಲ ವಿವಾದ ನ್ಯಾಯಾಂಗ ನಿರ್ದೇಶನಗಳ ಪ್ರಕಾರ ಕೃಷ್ಣ ಕಣಿವೆಯಲ್ಲಿ ಬರುವ ನದಿ ನೀರಿನ ಮಟ್ಟವನ್ನು ಬಳಸಬೇಕು ಎಂದು ದಂಡವತಿ ಯೋಜನೆಯ ಅನುಷ್ಠಾನದಲ್ಲಿ ಕಾನೂನು ಅಡಚಣೆಗಳಿವೆ ಎಂದು ಜಲ ಸಂಪನ್ಮೂಲ ಇಲಾಖೆಯ ಮೂಲಗಳು ತಿಳಿಸಿವೆ [೩] [೪]

ದಂಡವತಿ ವಿರೋಧಿ ಹೋರಾಟ ಸಮಿತಿ[ಬದಲಾಯಿಸಿ]

ಯೋಜನೆಯ ವಿರುದ್ಧದ ಹೋರಾಟವನ್ನು ಪ್ರಾರಂಭಿಸಿರುವ ದಂಡವತಿ ವಿರೋಧಿ ಹೋರಾಟ ಸಮಿತಿಯು ರಾಜಕೀಯ ಕಾರಣಗಳಿಗಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದೆ. ಮಳೆಕಾಡು ಮತ್ತು ಶ್ರೀಮಂತ ಕೃಷಿ ಭೂಮಿಗಳನ್ನು ನಾಶಮಾಡುವ ಮೂಲಕ ಶುಷ್ಕ ಭೂಮಿಯನ್ನು ನೀರಾವರಿ ಮಾಡಿಕೊಳ್ಳುವ ತಾರ್ಕಿಕತೆಯ ಈ ಚಳುವಳಿ ಪ್ರಶ್ನಿಸಿದೆ. ತಾಲ್ಲೂಕಿನ ನೀರಾವರಿ ಮೇಲೆ ಸರ್ಕಾರವು ತುಂಬಾ ಉತ್ಸುಕನಾಗಿದ್ದಲ್ಲಿ, ಅದು ಎಪ್ಪತ್ತರ ದಶಕದಲ್ಲಿ ಯೋಜಿಸಲಾಗಿರುವ ಬೈಥಾನಲಾ ನೀರಾವರಿ ಯೋಜನೆಯನ್ನು ಜಾರಿಗೆ ತರಬೇಕುಂದು ಕೋರಿದೆ. ದಾಂಡವತಿ ಯೋಜನೆಯ ಅನುಷ್ಠಾನದ ಪ್ರಕ್ರಿಯೆಯಲ್ಲಿ ಕಾನೂನು ಅಡಚಣೆಗಳಿಗೆ ಇದು ದಾರಿ ಮಾಡಿಕೊಡುತ್ತದೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಪ್ರತಿಭಟನೆಗೆ ಬೆಂಬಲವನ್ನು ನೀಡಿದ್ದರು [೫]

ಉಲ್ಲೇಖಗಳು[ಬದಲಾಯಿಸಿ]

  1. //nihroorkee.gov.in/TechnicalPapers/Rainfall_Runoff_Modelling_of_Western_Ghat_Region_of_Karnataka.pdf
  2. http://nihroorkee.gov.in/TechnicalPapers/Rainfall_Runoff_Modelling_of_Western_Ghat_Region_of_Karnataka.pdf[ಶಾಶ್ವತವಾಗಿ ಮಡಿದ ಕೊಂಡಿ]
  3. http://www.thehindu.com/todays-paper/tp-national/tp-karnataka/dandavathi-reservoir-project-in-limbo/article2734046.ece
  4. http://knnlindia.com/pdf/Annual%20Report%202017%20English%20with%20Photos.pdf
  5. http://www.thehindu.com/todays-paper/tp-national/tp-karnataka/dandavathi-reservoir-project-in-limbo/article2734046.ece