ನಂದಿನಿ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Nandini river

ನಂದಿನಿ ನದಿ

ಕಟೀಲು ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಕ್ಷಣಿಯ ಪುಣ್ಯ ಸ್ಥಳಗಳಲ್ಲಿ ಒಂದು.ನಂದಿನಿ ನದಿಯ ದಂಡೆಯ ಮೇಲಿರುವ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಜಿಲ್ಲೆಯ ಪ್ರಮುಕ ದೇವಾಲಯಗಳಲ್ಲೊಂದು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ ಈ ದೇವಾಲಯವು ನಂದಿನಿ ಎಂಬ ಪುಟ್ಟ ನದಿಯ ಮದ್ಯದಲ್ಲಿರುವ ಒಮದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತೀ ವರ್ಷವೂ ಸಾವಿರಾರು ಯಾತ್ರಿಕರೂ ಇಲ್ಲಿಗೆ ತಾಯಿ ದುರ್ಗಾಪರಮೇಶ್ವರಿ ದಶ೯ನಕ್ಕಾಗಿ ಭೇಟಿ ನೀಡುತ್ತಾರೆ. 'ಈ ಪ್ರದೇಶದ ಹಿಂದಿನ ದಂತಕಥೆ ಹೀಗಿದೆ.' ದೀರ್ಘವಾದ ಧ್ಯಾನದಲ್ಲಿ ಮುಳುಗಿದ್ದ ಮಹಾಜ್ನನಿಯಾದ ಜಾಬಾಲಿ ಮಹಷಿ‍೯ಜನರ ಕಷ್ಟಗಳನ್ನ ತನ್ನ ದಿವ್ಯ ದೃಷ್ಟಿಯಲ್ಲಿ ಕಂಡನು. ಅವರ ಮೇಲಿನ ಕನಿಕರದಿಂದ ಅವರನ್ನು ನೋವುಗಳಿಂದ ಮುಕ್ತಗೊಳಿಸುವ ನಿಧಾ೯ರವನ್ನು ಕೈಗೊಂಡನು.ಆತನು ಒಂದು ಯಜ್ನವನ್ನು ನಡೆಸಲು ನಿನ‍ಯಿಸಿ ಪುಣ್ಯ ಹಸುವಾಗಿದ್ದ ಕಾಮಧೇನುವನ್ನು ಭೂಮಿಗೆ ಕರೆತರಲು ನಿಧ೯ರಿಸಿದನು. ಕಾಮಧೇನು ಕರೆತರಲು ದೇವತೆಗಳ ಒಡೆಯನಾದ ಇಂದ್ರನ ಒಪ್ಪಿಗೆ ಕೇಳಿದಾಗ ಇಂದ್ರನು ಕಾಮಧೇನುವು ವರುಣ ಲೋಕಕ್ಕೆ ಹೋಗಿರುವುದಾಗಿಯೂ ಅದರ ಬದಲು ಪುತ್ರಯಾದ ನಂದಿನಿಯನ್ನ ಕರೆದೊಯ್ಯಬಹುದೆಂದು ತಿಳಿಸಿದನು. ಆದರೆ ನಂದಿನಿಯೂ ಜಾಬಾಲಿಯ ಜೊತೆಗೆ ಭೂಲೋಕಕ್ಕೆ ಹೋಗಲು ನಿಷ್ಟುರದಿಂದ ನಿರಾಕರಿಸಿದಳು. ಭೂಲೋಕವು ಪಾಪಿಗಳ ಲೋಕ ಹಾಗಾಗಿ ನಾನೆಂದು ಅಲ್ಲಿಗೆ ಬರುವುದಿಲ್ಲವೆಂದು ಹೇಳಿದಳು .ಜಾಬಾಲಿಯೂ ಪದೇ ಪದೇ ಮನವಿ ಮಾಡಿಕೊಂಡರೂ ನಂದಿನಿ ಹಠ ಹಿಡಿದು ಬರಲು ಒಪ್ಪಲಿಲ್ಲ. ಇದರಿಂದ ಕೋಪಗೊಂಡ ಜಾಬಾಲಿ ಮಹಷಿ೯ಯೂ ಭೂಲೋಕಕ್ಕೆ ಬರಲೊಪ್ಪದ ನಂದಿನಿಯೂ ಇನ್ನು ಮುಂದೆ ನದಿಯ ರೂಪದಲ್ಲಿ ಭೂಮಿಗಿಳಿಯುವಂತೆ ಶಾಪವಿತ್ತನು.ಆಶಪಕ್ಕೊಳಗಾದ ನಂದಿನಿಯೂ ಚಿಂತೆಗೀಡಾಗಿ ಜಾಬಾಲಿ ಮಹಷಿ೯ಗೆ ಕರುಣೆ ಮಾಡಿ ಶಾಪ ಹಿಂತೆಗೆದುಕ್ಕೊಳ್ಳಬೇಕು ಇಲ್ಲವಾದಲ್ಲಿ ಶಾಪವಿಮೋಚನೆಯನ್ನಾದರೂ ತಿಳಿಸಬೇಕೆಂದು ಬೇಡಿಕೊಂಡಳು. ಆಗ ಜಾಬಾಲಿ ಮಹಷಿ೯ಯೂ ನಿರಂತರವಾಗಿ ದುರ್ಗಾದೇವಿಯನ್ನ ಪ್ರಾರ್ಥಿಸಿ ದರೆ ಶಾಪ ವಿಮೋಚನೆಯನ್ನು ಆ ತಾಯಿಯೇ ತೋರಿಸುತ್ತಾಳೆ.ಎಂದು ಹೇಳಿದನು. ನಂದಿನಿಯೂ ಅನಂತರ ದೇವಿಯನ್ನು ಪ್ರಾಥಿ೯ಸಲು ದುಗಿ೯ಯು ಪ್ರತ್ಯಕ್ಷಳಾಗಿ ಜಾಬಾಲಿ ಮಹಷಿ೯ಯ ಶಾಪದಂತೆ ನದಿಯಾಗಿ ಹರಿಯುವಂತೆ ಹೇಳಿದಳು.ನಂತರ ತಾನೇ ಆಕೆಯ ಮಗಳಂತೆ ಹುಟ್ಟಿ ಮಹಷಿ೯ ಜಾಬಾಲಿಯ ಶಾಪ ವಿಮೋಚನೆಗೊಳಿಸುವುದಾಗಿ ಆಶೀವ೯ದಿಸಿದಳು. ಅದರಂತೆ ಕಟೀಲಿನ ಕನಕ ಗಿರಿಯಿಂದ ನಂದಿನಿ ನದಿಯ ರೂಪದಲ್ಲಿ ಹರಿದಳು. ಈ ನದಿಯ ದಂಡೆಯ ಮೇಲೆ ಜಾಬಾಲಿ ಮಹಷಿ೯ಯೂ ಯಜ್ಞ ಯಾಗಾದಿಗಳನ್ನು ನಡೆಸಿದ ನಂತರ ಎಲ್ಲೆಡೆ ಸಮ್ರದ್ದ ಮಳೆಯಾಗಿ ಜನರಲ್ಲಿ ಶಾಂತಿ ನೆಮ್ಮದಿ ಅಲೆಸಿ ಅಭ್ಯುದಯ ಹೊಂದಿದಳು.