ಹೆಬ್ರಿ

ವಿಕಿಪೀಡಿಯ ಇಂದ
Jump to navigation Jump to search
ಹೆಬ್ರಿ
ಹೆಬ್ಬೇರಿ
ಪಟ್ಟಣ
ಹೆಬ್ರಿ is located in Karnataka
ಹೆಬ್ರಿ
ಹೆಬ್ರಿ
ಕರ್ನಾಟಕ , ಭಾರತ
Coordinates: 13°28′N 74°59′E / 13.467°N 74.983°E / 13.467; 74.983Coordinates: 13°28′N 74°59′E / 13.467°N 74.983°E / 13.467; 74.983
ದೇಶ ಭಾರತ
ರಾಜ್ಯಕರ್ನಾಟಕ
ಭಾಷೆಗಳು
 • ಅಧಿಕೃತಕನ್ನಡ, ತುಳು
ಸಮಯ ವಲಯIST (ಯುಟಿಸಿ+5:30)
ಪಿನ್ ಕೋಡ್576112
ವಾಹನ ನೊಂದಣಿKA-20
ಹತ್ತಿರದ ನಗರಉಡುಪಿ , ಕಾರ್ಕಳ
ಲೋಕಸಭಾ ಕ್ಷೇತ್ರಉಡುಪಿ-ಚಿಕ್ಕಮಗಳೂರು

ಹೆಬ್ರಿ ಉಡುಪಿ ಜಿಲ್ಲೆಯ ಪ್ರಮುಖ ವ್ಯಾಪಾರ ಕೇಂದ್ರ ಹಾಗೂ ತಾಲೂಕು... ಉಡುಪಿಯಿಂದ ಶಿವಮೊಗ್ಗ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದಲ್ಲಿ ಹೆಬ್ರಿ ಪಟ್ಟಣ ಸಿಗುತ್ತದೆ . ಆಕರ್ಷಕ ಆಗುಂಬೆ ಘಾಟ್ ನ ಕೆಳ ಭಾಗದಲ್ಲಿರುವ ಈ ಪಟ್ಟಣ ಗೋಡಂಬಿ ಸಂಸ್ಕರಣೆ, ಅಕ್ಕಿ ಗಿರಣಿಗಳು, ತೈಲ ಗಿರಣಿಗಳು ಪಶು ಆಹಾರ ತಯಾರಿ ಮುಂತಾದ ಕೃಷಿಯಾಧಾರಿತ ಕೈಗಾರಿಕೆಗಳಿಂದ ಪ್ರಸಿದ್ಧಿ [೧]. ಸೀತಾ ನದಿ ಇಲ್ಲಿ ಹರಿಯುತ್ತದೆ . ಉತ್ತಮ ಮಳೆಯಾಗುವುದರಿಂದ ಇಲ್ಲಿನ ಪರಿಸರ ಹಸಿರು ಭತ್ತದ ಗದ್ದೆಗಳು, ಅಡಿಕೆ, ತೆಂಗು ಮತ್ತು ಗೋಡಂಬಿ ತೋಟ ಮತ್ತು ಹಸಿರು ಕಾಡುಗಳಿಂದ ಆವ್ರತಗೊಂಡು ಶಾಂತ ವಾತಾವರಣವನ್ನು ಹೊಂದಿದೆ . ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯದ ವ್ಯಾಪ್ತಿಗೆ ಬರುವ ಸೋಮೇಶ್ವರ ವನ್ಯಜೀವಿಧಾಮ ಹೆಬ್ರಿಗೆ ತಾಗಿಕೊಂಡಿದೆ . ಅಳಿವಿನಂಚಿನಲ್ಲಿರುವ ಸಾಕಷ್ಟು ಜೀವ ಪ್ರಭೇದಗಳಿಗೆ ಇದು ಆಶ್ರಯ ತಾಣ . ಕಾಳಿಂಗ ಸರ್ಪ ಇವುಗಳಲ್ಲೊಂದು .

ಹೆಬ್ಬೇರಿ ಎಂಬ ಹೆಸರು ಕಾಲಕ್ರಮೇಣ ಹೆಬ್ರಿ ಎಂದು ಬದಲಾಯಿತೆಂದು ನಂಬಲಾಗಿದೆ . ವಿಕೋಪಗಳ ಸಮಯದಲ್ಲಿ ಜನರನ್ನು ಎಚ್ಚರಿಸಲು ಒಂದು ದೊಡ್ಡ "ಭೇರಿ"ಯನ್ನು ಈ ಗ್ರಾಮ ಹೊಂದಿತ್ತು. ಇದೇ ಭೇರಿ (ಹಿರಿದು ಭೇರಿ - ಹೆಬ್ಬೇರಿ) ಈ ಪಟ್ಟಣಕ್ಕೆ ಒಂದು ಸುಂದರ ಹೆಸರು ತಂದಿತು.[೨]

ಸಮುದಾಯಗಳು, ಸಂಸ್ಕೃತಿ ಹಾಗೂ ಭಾಷೆಗಳು[ಬದಲಾಯಿಸಿ]

ಬಿಲ್ಲವ ಮತ್ತು ಬಂಟ ಇಲ್ಲಿ ಕಂಡು ಬರುವ ಪ್ರಮುಖ ಜಾತಿಗಳು . ಉಳಿದಂತೆ ಬಾಹ್ಮಣ , ಗೌಡ ಸಾರಸ್ವತ ಬಾಹ್ಮಣ , ದೇವಾಡಿಗ ಮುಂತಾದ ಹಿಂದೂ ಧರ್ಮೀಯರು ನೆಲೆಸಿದ್ದಾರೆ . ಕ್ರೈಸ್ತರು ಮತ್ತು ಮುಸ್ಲಿಮರು ಕಡಿಮೆ .

ಕುಂದಗನ್ನಡ ಸಾಮಾನ್ಯ ಆಡು ಭಾಷೆ . ಕೆಲವರು ತುಳುವಿನಲ್ಲೂ ವ್ಯವಹರಿಸುತ್ತಾರೆ . ಕೊಂಕಣಿಯಂತ ಸಮುದಾಯ ಕೇಂದ್ರಿತ ಭಾಷೆಗಳೂ ಬಳಕೆಯಲ್ಲಿದೆ .

ಅನಂತ ಪದ್ಮನಾಭ ಹೆಬ್ರಿಯ ಗ್ರಾಮ ದೇವರು . ಅನಂತ ಪದ್ಮನಾಭ ದೇವಾಲಯ ಮುಖ್ಯ ರಸ್ತೆಗೆ ತಾಗಿಕೊಂಡಿದೆ . ಕಪ್ಪು ಗ್ರಾನೈಟ್ ಶಿಲ್ಪದಿಂದ ಕೆತ್ತಿರುವ ಮೂರು ಅಡಿ ಎತ್ತರದ ಸುಂದರ ದೇವರ ಮೂರ್ತಿ ನಿಂತಿರುವ ಭಂಗಿಯಲ್ಲಿದೆ,

ಪ್ರವಾಸೀ ತಾಣಗಳು[ಬದಲಾಯಿಸಿ]

 • ಕೂಡ್ಲು ತೀರ್ಥ ಜಲಪಾತ : ಕೂಡ್ಲು ತೀರ್ಥ ಜಲಪಾತವು ಪಶ್ಚಿಮ ಘಟ್ಟಗಳ ಮಧ್ಯದಲ್ಲಿ ನೆಲೆಗೊಂಡಿರುವ ಅತ್ಯಂತ ಸುಂದರವಾದ ಜಲಪಾತಗಳಲ್ಲೊಂದು.ಈ ಜಲಪಾತವು ಸೀತಾ ನದಿಯ ಮೂಲವೆಂದು ಕರೆಯಲ್ಪಡುವ ಒಂದು ಕೊಳದಿಂದ ಸುಮಾರು 126 ಅಡಿ ಮೇಲಿನಿಂದ ಧುಮ್ಮಿಕ್ಕಿ ಹರಿಯುತ್ತದೆ. ಪ್ರವಾಸಿಗರು ಮೂರರಿಂದ್ ನಾಲ್ಕು ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದರೆ ಈ ಜಲಪಾತವನ್ನು ತಲುಪಬಹುದು.
ಕೂಡ್ಲು ತೀರ್ಥ ಜಲಪಾತ
 • ಒನಕೆ ಅಬ್ಬಿ ಜಲಪಾತ : ಒನಕೆ ಅಬ್ಬಿ ಜಲಪಾತವು ಆಗುಂಬೆಯ ಪ್ರವಾಸಿ ತಾಣಗಳಲ್ಲಿಯೇ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ಜಲಪಾತಕ್ಕೆ ಮನೆಗಳಲ್ಲಿ ಕುಟ್ಟಲು ಬಳಸುವ ಒನಕೆಯಂತೆ ಕಾಣುವುದರಿಂದ ಒನಕೆ ಹೆಸರು ಬಂದಿದೆ. ಈ ಜಲಪಾತವನ್ನು ಹೆಬ್ರಿಯಿಂದ ಸೋಮೇಶ್ವರಕ್ಕೆ ತೆರೆಳಿ ಚಾರಣದ ಮೂಲಕ ತಲುಪಬಹುದು. ಈ ಜಲಪಾತ ಮೇಲ್ಭಾಗಕ್ಕೆ ಆಗುಂಬೆಯಿಂದ ಕೂಡ ತಲುಪಬಹುದು . ಜಲಪಾತದ ಕವಲಿನ ತುದಿ ತಲುಪಲು ಮೆಟ್ಟಿಲುಗಳನ್ನು ಸಹಾ ಕೊರೆದಿದ್ದು ಪ್ರವಾಸಿಗರು ಹತ್ತಿ ಅಲ್ಲಿಂದ ಜಲಪಾತದ ನಯನ ಮನೋಹರ ಸೌಂದರ್ಯವನ್ನು ಸವಿಯಬಹುದು.[೩]
ಒನಕೆ ಅಬ್ಬಿ
 • ವರಂಗ ಕೆರೆ ಬಸದಿ : ವರಂಗ ಇರುವುದು ಉಡುಪಿ ಜಿಲ್ಲೆಯ ಹೆಬ್ರಿಯಿಂದ ಕಾರ್ಕಳದ ಕಡೆಗೆ 5 ಕಿ.ಮೀ. ದೂರದಲ್ಲಿ.14 ಎಕರೆ ವಿಸ್ತಾರದ ತುಂಬಿ ತುಳುಕುವ ಕೆರೆಯ ನಡುವೆ ನೆಲೆ ನಿಂತಿರುವ ನಕ್ಷತ್ರಾಕಾರದ ಚತುರ್ಮುಖ ಬಸದಿ ಚೆಲುವನ್ನು ನೋಡಿಯೇ ಆನಂದಿಸಬೇಕು. ಪದ್ಮಾವತಿ ದೇವಿಯ ಸನ್ನಿಧಿಯನ್ನು ತಲುಪಲು ದೋಣಿಯೊಂದೇ ದಾರಿ. ಸುಮಾರು 100 ಮೀಟರ್‌ಗಿಂತಲೂ ಹೆಚ್ಚು ದೂರವನ್ನು ಯಾವ ಮಳೆ, ಬಿಸಿಲು ಕಾಲದಲ್ಲೂ ದೋಣಿಯ ಮೂಲಕವೇ ಕ್ರಮಿಸಬೇಕು. ಆ ದೋಣಿ ಪಯಣವೇ ಒಂದು ರೋಚಕ ಅನುಭವ. [೪]


 • ಸೀತಾನದಿ ನಿಸರ್ಗ ಧಾಮ : ಕರ್ನಾಟಕ ಸರ್ಕಾರದ ಒಡೆತನದ ಸೀತಾನದಿ ನಿಸರ್ಗ ಧಾಮ ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ಒಂದು ಭಾಗವಾಗಿದೆ . ಸೀತಾನದಿಯ ತಟದಲ್ಲಿದೆ .ಪ್ರಕೃತಿಯನನ್ನು ಸವಿಯುತ್ತಾ ವಾರಾಂತ್ಯ ಕಳೆಯಲು ಹೇಳಿ ಮಾಡಿಸಿದ ಜಾಗ . ಮಳೆಗಾಲದಲ್ಲಿ ಇಲ್ಲಿ ರಾಫ್ಟಿಂಗ್ ಸೌಲಭ್ಯ ಕೂಡ ಇರುತ್ತದೆ. [೫]


 • ಜೊಮ್ಲು ತೀರ್ಥ ಜಲಪಾತ : ಬ್ರಹ್ಮಾವರ-ಹೆಬ್ರಿ ಮಧ್ಯಭಾಗದಲ್ಲಿದೆ. ಉಡುಪಿಯಿಂದ 35ಕಿಮೀ. ದೂರದಲ್ಲಿರೋ ಈ ಜಲಪಾತ ಬೆಳ್ವೆ ಎಂಬ ಗ್ರಾಮದಲ್ಲಿದ್ದು, ಇಲ್ಲಿಗೆ ಹೋಗಲು ರಸ್ತೆ ಸೌಕರ್ಯವಿದೆ. ಯಾವುದೇ ವಾಹನದಲ್ಲಾದರೂ ಇಲ್ಲಿಗೆ ಪ್ರಯಾಣ ಬೆಳೆಸಬಹುದು. 20 ಅಡಿ ಎತ್ತರದಿಂದ ಹರಿಯುವ ಸೀತಾನದಿ ಇಲ್ಲಿ ನಿಸರ್ಗ ರಮಣೀಯ ಜಲಧಾರೆಯಾಗಿ ಸೃಷ್ಟಿಯಾಗಿದೆ. [೬]
 • ಕಬ್ಬಿನಾಲೆ : ಪಶ್ಚಿಮ ಘಟ್ಟಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಅತ್ಯಂತ ಸುಂದರ ಸ್ಥಳ . ಕನಿಷ್ಠ 6000 ವರ್ಷಗಳ ಹಿಂದಿನ ಶಿಲಾಯುಗದ ಸಂಸ್ಕೃತಿಯ ಕುರುಹುಗಳು ಈ ಹಳ್ಳಿಯಲ್ಲಿ ಗೋಚರಿಸುತ್ತವೆ. ಅರಣ್ಯ ಮತ್ತು ನ್ಯಾಷನಲ್ ಪಾರ್ಕ್ ಒಳಗೆ ಅಲ್ಲಲ್ಲಿ ವಸಾಹತುಗಳು ಕಂಡುಬರುತ್ತವೆ.

ಉಲ್ಲೇಖಗಳು[ಬದಲಾಯಿಸಿ]

 1. http://www.udupipages.com/temples/anantha-padmanabha-temple.php
 2. http://www.panoramio.com/photo/35809343
 3. http://kannada.nativeplanet.com/agumbe/attractions/onake-abbi-falls/
 4. http://vijaykarnataka.indiatimes.com/articleshow/16879467.cms?prtpage=1
 5. http://cbivishy.blogspot.in/2013/11/seethanadi-hebri-2013.html
 6. http://vijaykarnataka.indiatimes.com/articleshow/21374244.cms


"https://kn.wikipedia.org/w/index.php?title=ಹೆಬ್ರಿ&oldid=873876" ಇಂದ ಪಡೆಯಲ್ಪಟ್ಟಿದೆ