ಕಬ್ಬಿನಾಲೆ
ಕಬ್ಬಿನಾಲೆ | |
---|---|
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಉಡುಪಿ |
ತಾಲ್ಲೂಕು | ಹೆಬ್ರಿ |
Government | |
• Body | ಗ್ರಾಮ ಪಂಚಾಯತ್ |
ಭಾಷೆ | |
• ಸ್ಥಳೀಯ | ತುಳು |
Time zone | UTC+5:30 (IST(ಭಾರತದ ನಿರ್ದಿಷ್ಟ ಕಾಲಮಾನ)) |
ISO 3166 code | IN-KA |
Vehicle registration | KA 20 |
Website | karnataka |
ಕಬ್ಬಿನಾಲೆ ಪಶ್ಚಿಮ ಘಟ್ಟಗಳ (ಸಹ್ಯಾದ್ರಿ) ಆಗುಂಬೆ ಶ್ರೇಣಿಯ ಬೆಟ್ಟಗಳ ತಪ್ಪಲಿನಲ್ಲಿರುವ ಒಂದು ಗ್ರಾಮವಾಗಿದ್ದು, ಇದು ಭಾರತದ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಹೆಬ್ರಿ ತಾಲ್ಲೂಕಿನಲ್ಲಿದೆ. ಕನ್ನಡ ಭಾಷೆಯಲ್ಲಿ ಕಬ್ಬಿನಾಲೆ ಎಂದರೆ "ಕಬ್ಬಿನ ಪುಡಿ ಮಾಡುವ ಘಟಕ" ಎಂದರ್ಥ. ಕಬ್ಬಿನಾಲೆಯಿಂದ ೮೬ ಕಿ.ಮೀ ದೂರದಲ್ಲಿರುವ ಮಂಗಳೂರಿನಲ್ಲಿ ಹತ್ತಿರದ ವಿಮಾನ ನಿಲ್ದಾಣವಿದೆ.
ಈ ಗ್ರಾಮವು ಉಡುಪಿ ಪಟ್ಟಣದಿಂದ ಸುಮಾರು ೫೦ ಕಿ.ಮೀ ದೂರದಲ್ಲಿದೆ. ಇದರ ಹತ್ತಿರದ ಪಟ್ಟಣವೆಂದರೆ ಹೆಬ್ರಿ, ಇದು ಕಬ್ಬಿನಾಲೆಯಿಂದ ಸುಮಾರು ೨೦ ಕಿ.ಮೀ ದೂರದಲ್ಲಿದೆ. ಈ ಪ್ರದೇಶವು ದಟ್ಟವಾದ ಮಳೆಕಾಡುಗಳಿಂದ ಆವೃತವಾಗಿದೆ, ನಿತ್ಯಹರಿದ್ವರ್ಣ ಮತ್ತು ಕಾಡು ಪ್ರಾಣಿಗಳಿಂದ ಕೂಡಿದೆ. ಕುಚೂರು ಎಂದು ಕರೆಯಲ್ಪಡುವ ಕೊನೆಯ ವಸಾಹತು, ಸಮುದ್ರ ಮಟ್ಟದಿಂದ ಸುಮಾರು ೧೫೦೦ ಅಡಿ ಎತ್ತರದಲ್ಲಿದೆ. ಕೊರ್ತ್ ಬೈಲ್ ಕಬ್ಬಿನಾಲೆ ಗ್ರಾಮದ ಅತ್ಯಂತ ಎತ್ತರದ ಮತ್ತು ಕೊನೆಯ ಬಿಂದುವಾಗಿದೆ. ಹೆಬ್ರಿಯಿಂದ ಮುದ್ರಾಡಿ ಅಥವಾ ಬಚ್ಚಪ್ಪು ಅಥವಾ ಅಜೆಕಾರ್ ಮೂಲಕ, ಮುನ್ನಿಯಾಲ್ ಮೂಲಕ ಕಬ್ಬಿನಾಲೆಗೆ ತಲುಪಬಹುದು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯೋಜನೆಗೆ ಲಕ್ಷ್ಮೀನಾರಾಯಣಗೆ ಸೇರ್ಪಡೆಯಾಗಿದ್ದು, ಕಬ್ಬಿಯಾಲೆ ಸೇರಿದಂತೆ ಗ್ರಾಮಗಳನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸುವ ಸರ್ಕಾರದ ಕ್ರಮವನ್ನು ಹಲವಾರು ಗ್ರಾಮಗಳ ಸ್ಥಳೀಯ ಜನರು ವಿರೋಧಿಸುತ್ತಿದ್ದಾರೆ.[೧] ಇಲ್ಲಿನ ಅತಿ ಎತ್ತರದ ವಸಾಹತು ಕುಚೂರ್ ಆಗಿದೆ. ಕಬ್ಬಿನಾಲೆಯ ಉಳಿದ ಭಾಗವು ಹಲವಾರು ಮನೆಗಳನ್ನು ಒಳಗೊಂಡಿದೆ. ಅಲ್ಲಿ ಹಲವಾರು ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಕುಟುಂಬಗಳು ನೆಲೆಸಿದ್ದಾರೆ. ಸ್ಥಾನಿಕ ಬ್ರಾಹ್ಮಣರು ದೊಡ್ಡ ಅರೆಕಾ ತೋಟಗಳನ್ನು ಹೊಂದಿರುವ ಗ್ರಾಮದ ಮುಖ್ಯ ವಸಾಹತುಗಾರರು ಜೂತೆಗೆ ಅವರು ಗ್ರಾಮದ ಸುತ್ತಮುತ್ತಲಿನ ಪ್ರಮುಖ ಅಭಿವರ್ಧಕರೂ ಆಗಿದ್ದಾರೆ. ಆಳವಾದ ಅರಣ್ಯ ವ್ಯಾಪ್ತಿಯಲ್ಲಿ ಅನೇಕ ಮಲೆಕುಡೆಯ ಕುಟುಂಬಗಳು ನೆಲೆಸಿವೆ. ಜೇನು ಸಂಗ್ರಹವು ಮಲೆಕುಡಿಯರ ಪ್ರಮುಖ ಚಟುವಟಿಕೆಗಳಲ್ಲಿ ಒಂದಾಗಿದೆ.
ಲಕ್ಷ್ಮೀನಾರಾಯಣ ದೇವಸ್ಥಾನ ಮೇಲುಮಠ, ಗೋಪಾಲಕೃಷ್ಣ ದೇವಸ್ಥಾನ ಕೆಳಮಠ, ಉಮಾಮಹೇಶ್ವರ ದೇವಸ್ಥಾನ ಇಟ್ಟುಗುಂಡಿ (ವಿಠ್ಠಲಗುಂಡಿ) ಇವು ಕಬ್ಬಿನಾಲೆಯ ಪ್ರಮುಖ ದೇವಾಲಯಗಳಾಗಿವೆ. ದೇವಿ ಅನ್ನಪೂರ್ಣೇಶ್ವರಿ ದೇವಸ್ಥಾನವು ಹತ್ತಿರದ ದುರ್ಗಾ ಗ್ರಾಮದಲ್ಲಿ ಜನಪ್ರಿಯ ಮತ್ತು ಐತಿಹಾಸಿಕವಾಗಿದೆ. ಅತ್ಯಂತ ಎತ್ತರದ ವಸಾಹತುವಾದ ಕುಚೂರ್‌ನಲ್ಲಿ ಕುಟುಂಬ ದೇವತೆ ಶ್ರೀ ದುರ್ಗಾಪರಮೇಶ್ವರಿಯ ದೇವಾಲಯವಿದೆ.
ತುಳುನಾಡು ಸಂಸ್ಕೃತಿಯ ಭಾಗವಾಗಿ ಈ ಗ್ರಾಮದಲ್ಲಿ ಭೂತಾರಾಧನೆಯನ್ನು ಸಂರಕ್ಷಿಸಲಾಗಿದೆ. ಕೊಡಮಣಿತ್ತಾಯ, ಪಂಜುರ್ಲಿ, ಕಲ್ಕುಡ, ಮರ್ಲು ಜುಮಾದಿ ಮುಂತಾದ ಎಲ್ಲಾ ದೈವಗಳನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ.
ಗುಂಚಿ, ಗುಬ್ಬಿಮಾರು, ಬಾಳೆಗುಂಡಿ, ಗೋವಿಂದಬೆಟ್ಟು, ಪುಲ್ಲಂಟು, ಕುಚೂರು ಇವು ಅರಣ್ಯ ವಲಯಗಳಲ್ಲಿ ದೊಡ್ಡ ಮನೆಗಳು / ಅರಮನೆಗಳನ್ನು ಹೊಂದಿರುವ ಕೆಲವು ಜನಪ್ರಿಯ ಕುಟುಂಬಗಳಾಗಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ "Centre urged to rescind proposal on tiger reserve". The Hindu, news paper. 4 August 2012. Retrieved 23 July 2015.
- Pages using the JsonConfig extension
- Short description is different from Wikidata
- Pages using infobox settlement with bad settlement type
- Pages using infobox settlement with no map
- Pages using infobox settlement with no coordinates
- ಉಡುಪಿ ಜಿಲ್ಲೆಯ ಗ್ರಾಮಗಳು
- ಭಾರತದ ಗ್ರಾಮಗಳು
- ಪ್ರವಾಸಿ ತಾಣಗಳು
- ವಿಕಿ ಇ-ಲರ್ನಿಂಗ್ನಲ್ಲಿ ತಯಾರಿಸಿದ ಲೇಖನ