ಶಾರ್ಕ್ ಮೀನು
- ಪರಿಚಯ
ಜಲಚರ ವಾಸಿ ಪ್ರಾಣಿಗಳಲ್ಲಿ ಮೀನುಗಳು ತಮ್ಮ ಆಕಾರ, ಗಾತ್ರದಲ್ಲಿ ಅಚ್ಚರಿಗೆ ಕಾರಣವಾಗುತ್ತದೆ. ಕೊಚ್ಚಿನ್ ಸಮುದ್ರ ತೀರದ ಶಾರ್ಕ್ ವಲಯಕ್ಕೆ ಭೇಟಿ ನೀಡಿದರೆ ಶಾರ್ಕ್ ಮೀನುಗಳು ಹಾರುವುದನ್ನು ನೋಡುವುದು ಅತ್ಯಂತ ಮನಮೋಹಕವಾಗಿರುತ್ತದೆ. ಶಾರ್ಕ್ ಒಂದು ಜಲಚರ ಪ್ರಾಣಿ. ಇದರಲ್ಲಿ ಮೂಳೆ ಇರದೇ, ಕೇವಲ (ಮೃದ್ವಸ್ತಿ) ಮಾಂಸವನ್ನು ಮಾತ್ರ ಹೊಂದಿರುತ್ತದೆ. ಈ ಶಾರ್ಕ್ ಮೀನು ಸಣ್ಣ ಸಣ್ಣ ಮೀನುಗಳು,ಸೀಗಡಿ, ಇತರೆ ಜಲಚರಗಳನ್ನು ಹಿಡಿದು ತಿನ್ನುತ್ತದೆ.
ಸಾಮಾನ್ಯವಾಗಿ ಶಾರ್ಕ್ ಮೀನು ಹೊಸದಾಗಿ ಸೇರಿದ ನೀರಿನಲ್ಲಿ ವಾಸಿಸುವುದಿಲ್ಲ. ಅತಿ ಕಡಿಮೆ ಆಮ್ಲಜನಕವಿರುವ ನೀರಿನಲ್ಲಿಯೂ ಸಹ ೪-೫ ಗಂಟೆಯವರೆಗೆ ಶಾರ್ಕ್ ಜೀವಿಸಬಲ್ಲದು.ಚಿಕ್ಕ ಚಿಕ್ಕ ಮೀನುಗಳ ಸಹಿತವಾಗಿ ದೈತ್ಯಾಕಾರ ಪ್ರಾಣಿಗಳಾದ ತಿಮಿಂಗಲುಗಳು ಜಲಚರ ವಾಸಿಗಳಾಗಿವೆ. ಶಾರ್ಕ್ ಮೀನುಗಳು ಬೃಹತ್ ದೇಹ ಗಾತ್ರ ಹೊಂದಿದ್ದು [೧] ವಂಶದ ಕಾಂಡ್ರಿಕ್ತೀಸ್ ವರ್ಗಕ್ಕೆ ಸೇರಿದ ಕಾರ್ಟಿಲೇಜಿನಸ್ ಮೀನುಗಳಾಗಿವೆ[೨]. ಅವುಗಳ ಬದುಕು ಮತ್ತು ಆಯುಷ್ಯ ನಡುವೆ ವಿಸ್ಮಯವೆಂಬಂತೆ ಜೀವಿಸುತ್ತವೆ. ಇತ್ತೀಚೆಗೆ ಫಿಲಿಪೈನ್ಸ್ ಮೀನುಗಾರರು ಒಂದು ದೊಡ್ಡದಾದ ಸತ್ತ ಶಾರ್ಕ್ ಮೀನನ್ನು ಸೆರೆ ಹಿಡಿದ್ದಾರೆ. ಇದು ಹಲ್ಲಿಲ್ಲದ ದೊಡ್ಡ ಬಾಯಿರುವ ದೈತ್ಯ ಮೀನು. ೧೫ ಅಡಿ ಉದ್ದವಿದ್ದು. ೫ ಮೀಟರ್‌ನಷ್ಟು ಬಾಯಗಲವನ್ನು ಹೊಂದಿದೆ. ಈ ಶಾರ್ಕ್ ಗಂಡು ಪ್ರಭೇದವಾಗಿದೆ. ಎಲ್ಲರಿಗೂ ಅಚ್ಚರಿ ಸಂಗತಿ ಎಂದರೆ ಸಾಮಾನ್ಯವಾಗಿ ಶಾರ್ಕ್ ಮೀನುಗಳಿಗೆ ಕನಿಷ್ಠ ಪಕ್ಷ ೫೦ ಹಲ್ಲುಗಳಿರುತ್ತವೆ. ಆದರೆ ಈ ಸತ್ತು ಸೆರೆಸಿಕ್ಕ ದೈತ್ಯ ಶಾರ್ಕ ಮೀನಿಗೆ ಇಲ್ಲ. ನಡೆದಾಡುವ ಶಾರ್ಕ್- ಶಾರ್ಕ್ ಎಂದೊಡನೆ ವೇಗವಾಗಿ ಈಜುತ್ತಾ ಮೀನನ್ನು ಕಚ್ಚಿ ಓಡುವ ಶಾರ್ಕ ಚಿತ್ರ ಕಣ್ಣ ಮುಂದೆ ಬರುತ್ತದೆ.ನಡೆದಾಡುವ ಶಾರ್ಕ್ ನಲ್ಲಿ ಕಿವಿರಸೀಳಿನ ಕೆಳಭಾಗದ ರೆಕ್ಕೆಗಳು ನಡೆಪಾದದಂತೆ ಮಾರ್ಪಾಡುಗೊಂಡಿರುತ್ತವೆ. ಇದು ತನ್ನ ರೆಕ್ಕೆಗಳ ಸಹಾಯದಿಂದ ನಡೆದು ಬೀಚಿನ ಮೇಲೆ ಓಡಾಡುತ್ತದೆ.
ವಿಧಗಳು[ಬದಲಾಯಿಸಿ]
ಅತೀ ಸಣ್ಣ ಗಾತ್ರದ ಶಾರ್ಕ ಮೀನುಗಳಿಂದ ಹಿಡಿದು ದೈತ್ಯಾಕಾರದ ಶಾರ್ಕ್ ಮೀನುಗಳಿವೆ. ಶಾರ್ಕ್ ಮೀನುಗಳಲ್ಲಿ ಪ್ರಧಾನವಾಗಿ ಎರಡು ವಿಧಗಳಿವೆ. ಅವುಗಳೆಂದರೆ ರೇ ಶಾರ್ಕ್ ಮತ್ತು ಸ್ಕೇಟ್ ಶಾರ್ಕ್ . ಇನ್ನೂ ಶಾರ್ಕ್ ಮೀನುಗಳ ರಚನೆ,ಆಕಾರ, ಗಾತ್ರ,ಚರ್ಮದ ಹೊದಿಕೆ ಇವುಗಳ ಆಧಾರದ ಮೇಲೆ ಸುಮಾರು ೪೫೦ ಕ್ಕೂ ಹೆಚ್ಚಿನ ಶಾರ್ಕ್ ಪ್ರಭೇಧಗಳನ್ನು ನಾವು ಕಾಣಬಹುದಾಗಿದೆ.
ಶಾರ್ಕ್ ಮೀನುಗಳ ಉದಾಹರಣೆಗಳು[ಬದಲಾಯಿಸಿ]




ಕ್ರಮ ಸಂಖ್ಯೆ | ವರ್ಗ | ಉದಾಹರಣೆ |
---|---|---|
೧ | ಕಾಂಡ್ರಿಕ್ತೀಸ್ | Heterodontus galeatus |
೨ | ಕಾಂಡ್ರಿಕ್ತೀಸ್ | Carcharodon carcharias |
೩ | ಕಾಂಡ್ರಿಕ್ತೀಸ್ | Squatina angelus |
ಬಾಹ್ಯ ಸಂಪರ್ಕ[ಬದಲಾಯಿಸಿ]
ಉಲ್ಲೇಖಗಳು[ಬದಲಾಯಿಸಿ]
- ↑ Vertebrate Pests chapter in United States Environmental Protection Agency and University of Florida/Institute of Food and Agricultural Sciences National Public Health Pesticide Applicator Training Manual
- ↑ Allen, Thomas B. (1999). The Shark Almanac. New York: The Lyons Press. ISBN 1-55821-582-4. OCLC 39627633
- ↑ ಬಲೆಗೆ ಸಿಲುಕಿ ಉಸಿರುಗಟ್ಟಿ ಸಾವು;ಅಪರೂಪದ 700 ಕೆ.ಜಿ ತೂಕದ ಶಾರ್ಕ್ ಸಾವು;28 Mar, 2017