ತಲೆಬುರುಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಲಿಯ ತಲೆಬುರುಡೆ

ತಲೆಬುರುಡೆಯು ಕಶೇರುಕಗಳಲ್ಲಿನ ತಲೆಯನ್ನು ರಚಿಸುವ ಮೂಳೆಯುಳ್ಳ ರಚನೆ. ಅದು ಮುಖದ ರಚೆನಗಳಿಗೆ ಆಧಾರ ನೀಡುತ್ತದೆ ಮತ್ತು ಮಿದುಳಿಗೆ ಒಂದು ರಕ್ಷಣಾತ್ಮಕ ಕುಹರವನ್ನು ಒದಗಿಸುತ್ತದೆ. ತಲೆಬುರುಡೆಯು ಎರಡು ಭಾಗಗಳನ್ನು ಒಳಗೊಂಡಿರುತ್ತದೆ: ಮೆದುಳು ಕೋಶ ಮತ್ತು ಮ್ಯಾಂಡಿಬಲ್. ಮಾನವರಲ್ಲಿ ಇವೆರಡು ಭಾಗಗಳೆಂದರೆ ನ್ಯೂರೋಕ್ರೇನಿಯಮ್ ಮತ್ತು ವಿಸರೋಕ್ರೇನಿಯಮ್ ಅಥವಾ ಮುಖದ ಅಸ್ಥಿಪಂಜರ. ವಿಸರೋಕ್ರೇನಿಯಮ್ ತನ್ನ ಅತಿ ದೊಡ್ಡ ಎಲುಬಾಗಿ ಮ್ಯಾಂಡಿಬಲ್ ಅನ್ನು ಒಳಗೊಂಡಿರುತ್ತದೆ. ತಲೆಬುರುಡೆಯು ಅಸ್ಥಿಪಂಜರದ ಅತ್ಯಂತ ಮೇಲಿನ ಭಾಗವನ್ನು ರಚಿಸುತ್ತದೆ ಮತ್ತು ಸೆಫ಼ಲೈಜ಼ೇಶನ್ ಪ್ರಕ್ರಿಯೆಯ ಉತ್ಪನ್ನವಾಗಿದೆ. ತಲೆಬುರುಡೆಯು ಮಿದುಳು ಮತ್ತು ಕಣ್ಣುಗಳು, ಕಿವಿಗಳು, ಮೂಗು ಮತ್ತು ಬಾಯಿಯಂತಹ ಹಲವು ಇಂದ್ರಿಯ ರಚನೆಗಳಿಗೆ ಸ್ಥಳ ಒದಗಿಸುತ್ತದೆ.[೧] ಮಾನವರಲ್ಲಿ ಈ ಇಂದ್ರಿಯ ರಚನೆಗಳು ಮುಖದ ಅಸ್ಥಿಭಾಗದ ಭಾಗವಾಗಿರುತ್ತವೆ.

ತಲೆಬುರುಡೆಯ ಕಾರ್ಯಗಳಲ್ಲಿ ಮಿದುಳಿನ ರಕ್ಷಣೆ, ಸ್ಟೀರಿಯೋಸ್ಕೋಪಿಕ್ ದೃಷ್ಟಿಗೆ ಅವಕಾಶ ನೀಡಲು ಕಣ್ಣುಗಳ ನಡುವಿನ ದೂರವನ್ನು ನಿಗದಿಮಾಡುವುದು, ಮತ್ತು ಶಬ್ದಗಳ ದಿಕ್ಕು ಮತ್ತು ದೂರದ ಧ್ವನಿ ಸ್ಥಳೀಕರಣವನ್ನು ಸಕ್ರಿಯಗೊಳಿಸಲು ಕಿವಿಗಳ ಸ್ಥಾನವನ್ನು ನಿಗದಿಮಾಡುವುದು ಸೇರಿವೆ. ಕೊಂಬಿರುವ ಗೊರಸುಳ್ಳ ಪ್ರಾಣಿಗಳಂತಹ ಕೆಲವು ಪ್ರಾಣಿಗಳಲ್ಲಿ, ತಲೆಬುರುಡೆಯು ಕೊಂಬುಗಳಿಗೆ (ಮುಮ್ಮೂಳೆ ಮೇಲೆ) ಆಧಾರವನ್ನು ಒದಗಿಸುವ ಮೂಲಕ ರಕ್ಷಣಾತ್ಮಕ ಕಾರ್ಯವನ್ನು ಕೂಡ ಹೊಂದಿರುತ್ತದೆ. ಅನೇಕ ಸಂಯೋಜಿತ ಚಪ್ಪಟೆ ಮೂಳೆಗಳಿಂದ ತಲೆಬುರುಡೆಯ ರಚನೆಯಾಗಿರುತ್ತದೆ. ತಲೆಬುರುಡೆಯು ಅನೇಕ ಫ಼ಾರೇಮನ್‍ಗಳು, ಫ಼ಾಸಾಗಳು, ವಾಳಗಳು, ಮತ್ತು ಹಲವಾರು ಕುಳಿಗಳು ಅಥವಾ ಸೈನಸ್‍ಗಳನ್ನು ಹೊಂದಿರುತ್ತದೆ. ಪ್ರಾಣಿಶಾಸ್ತ್ರದಲ್ಲಿ ತಲೆಬುರುಡೆಯಲ್ಲಿ ಫ಼ೇನೆಸ್ಟ್ರಾಗಳು ಎಂದು ಕರೆಯಲ್ಪಡುವ ರಂಧ್ರಗಳಿರುತ್ತವೆ.

ಮಾನವ ತಲೆಬುರುಡೆಯೆಂದರೆ ಮಾನವ ಅಸ್ಥಿಪಂಜರದಲ್ಲಿ ತಲೆಯನ್ನು ರಚಿಸುವ ಮೂಳೆಯುಳ್ಳ ರಚನೆ. ಅದು ಮುಖದ ರಚನೆಗಳಿಗೆ ಆಧಾರ ನೀಡುತ್ತದೆ ಮತ್ತು ಮೆದುಳಿಗಾಗಿ ಕುಹರವನ್ನು ರಚಿಸುತ್ತದೆ. ಇತರ ಕಶೇರುಕಗಳ ತಲೆಬುರುಡೆಗಳಂತೆ, ಇದು ಮೆದುಳಿಗೆ ಗಾಯವಾಗದಂತೆ ರಕ್ಷಿಸುತ್ತದೆ. ನ್ಯೂರೋಕ್ರೇನಿಯಮ್ ಮೆದುಳು ಮತ್ತು ಮೆದುಳುಕಾಂಡವನ್ನು ಸುತ್ತುವರಿಯುವ ಮತ್ತು ಅವುಗಳಿಗೆ ಸ್ಥಳ ನೀಡುವ ರಕ್ಷಣಾತ್ಮಕ ಕಪಾಲ ಕುಹರವನ್ನು ರೂಪಿಸುತ್ತದೆ. ಕಪಾಲ ಮೂಳೆಗಳ ಮೇಲಿನ ಪ್ರದೇಶಗಳು ಬುರುಡೆ ಟೋಪಿಯನ್ನು (ತಲೆಚಿಪ್ಪು) ರೂಪಿಸುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. "Cephalization: Biology". Encyclopædia Britannica. Archived from the original on 2 ಮೇ 2016. Retrieved 23 ಏಪ್ರಿಲ್ 2016. {{cite web}}: Unknown parameter |deadurl= ignored (help)