ಮ
ಗೋಚರ
|
ಮ, ಕನ್ನಡ ವರ್ಣಮಾಲೆಯ ಪ-ವರ್ಗದ ಐದನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ. ಓಷ್ಠ್ಯ ಅನುಸಾನಿಕ ಧ್ವನಿ
ಚಾರಿತ್ರಿಕ ಹಿನ್ನೆಲೆ
[ಬದಲಾಯಿಸಿ]ಅಶೋಕನ ಕಾಲದಲ್ಲಿ ಈ ಅಕ್ಷರ ಕನ್ನಡದ ನಾಲ್ಕು ಎಂಬ ಸಂಖ್ಯೆಯನ್ನು ಹೋಲುತ್ತಿತ್ತು. ಸಾತವಾಹನ ಕಾಲದಲ್ಲಿ ವೃತ್ತಾಕಾರ ತ್ರಿಕೋನಾಕಾರವಾಗಿ ಬದಲಾವಣೆ ಹೊಂದಿತು. ಕದಂಬರ ಕಾಲದಲ್ಲಿ ಆಯಾಕಾರವಾಗಿ ಪರಿವರ್ತಿತವಾಯಿತು. ಗಂಗರ ಕಾಲದಲ್ಲಿ ಆಯಾಕಾರ ಹೆಚ್ಚು ಅಗಲವಾಯಿತು. ರಾಷ್ಟ್ರಕೂಟರ ಕಾಲದಲ್ಲಿ ಈ ಆಕಾರ ಕೆಳಗೆ ವಿಭಾಗವಾಗಿ ಒಂದು ಡೊಂಕಾದ ರೇಖೆ ಬಳಕೆಗೆ ಬಂತು. ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಹೆಚ್ಚು ಅಭಿವೃದ್ಧಿಗೊಂಡು ಕೆಳಗಿನ ಆಯಾಕಾರ ಸ್ವಲ್ಪ ದುಂಡಾಗಿ ಪಾರ್ಶ್ವದ ರೇಖೆಯಿಂದ ಬೇರೆಯಾಯಿತು. ಇದು ಈಗಿನ ಬರವಣಿಗೆಯ ಸ್ವರೂಪವನ್ನು ಹೆಚ್ಚು ಹೋಲುತ್ತದೆ. ಇದೇ ರೂಪ ಹೊಯ್ಸಳ, ಸೇವುಣ ಮತ್ತು ಕಳಚೂರಿ ಕಾಲಗಳಲ್ಲಿ ಮುಂದುವರಿಯಿತು. ವಿಜಯನಗರ ಕಾಲದಲ್ಲಿ ಆಯಾಕಾರದ ಒಂದು ಭಾಗ ಮೊಟಕಾಯಿತು. ಇದಕ್ಕೆ ಮೈಸೂರು ಅರಸರ ಕಾಲದಲ್ಲಿ (18ನೆಯ ಶತಮಾನದಲ್ಲಿ) ಒಂದು ಸಣ್ಣಕೊಂಡಿ ಸೇರಿ ಇದೇ ರೂಪ ಮುಂದುವರಿಯಿತು.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: