ವಿಷಯಕ್ಕೆ ಹೋಗು

ವಿಜಾಪುರ ನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿಜಾಪುರ
ರಾಜ್ಯ
 - ಜಿಲ್ಲೆ
[[ಕರ್ನಾಟಕ]]
 - ವಿಜಾಪುರ
ನಿರ್ದೇಶಾಂಕಗಳು 16.12° N 75.72° E
ವಿಸ್ತಾರ
 - ಎತ್ತರ
೧೦೫೪೦ km²
 - ೭೭೦ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೧೧)
 - ಸಾಂದ್ರತೆ
೨೦0೭೭೫೫
 - ೨೦೭/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೮೬೧೦೧-೧೦೫
 - +೯೧ (೦) ೮೩೫೨
 - ಕೆಎ-೨೮
ಅಂತರ್ಜಾಲ ತಾಣ: www.bijapur.nic.in
ವಿಶ್ವಗುರು ಮಹಾತ್ಮ ಬಸವಣ್ಣನವರು
ಶಿವನ ವಿಗ್ರಹ ,ಬಿಜಾಪೂರ

ವಿಜಾಪುರ (ಆಂಗ್ಲ: ಬಿಜಾಪುರ) ಕರ್ನಾಟಕ ರಾಜ್ಯದ ಒಂದು ಜಿಲ್ಲೆ ಮತ್ತು ನಗರ. ಈ ಜಿಲ್ಲೆಯ ಜಿಲ್ಲಾಡಾಳಿತ ಮತ್ತು ಪ್ರಮುಖ ನಗರ ವಿಜಾಪುರ. ಬಿಜಾಪುರ ನಗರ ಬೆಂಗಳೂರಿನಿಂದ ಉತ್ತರಪಶ್ಚಿಮಕ್ಕೆ ೫೩೦ ಕಿಮೀ ದೂರದಲ್ಲಿದೆ.

ಚರಿತ್ರೆ

[ಬದಲಾಯಿಸಿ]
ಗೋಳ ಗುಂಬಜ್

ವಿಜಾಪುರದ (ಇಂಗ್ಲೀಷ್:ಬಿಜಾಪುರ) ಪುರಾತನ ಹೆಸರು ವಿಜಯಪುರ ,ಬಿಜ್ಜನಹಳ್ಳಿ. ಈ ಜಿಲ್ಲೆಯು ಐತಿಹಾಸಿಕ ಸ್ಥಳಗಳಿಂದ ಕೂಡಿದೆ. ೧೦-೧೧ ನೆ ಶತಮಾನಗಳಲ್ಲಿ ಕಲ್ಯಾಣಿ ಚಾಲುಕ್ಯರಿಂದ ಸ್ಥಾಪಿತವಾಯಿತು. ೧೩ ನೆ ಶತಮಾನದ ಕೊನೆಯ ಹೊತ್ತಿಗೆ ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ಬಿಜಾಪುರ, ಕಿ. ಶ. ೧೩೪೭ ರಲ್ಲಿ ಬೀದರಿನ ಬಹಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು.

ಕ್ರಿ. ಶ. ೧೫೧೮ ರಲ್ಲಿ ಬಹಮನಿ ಸುಲ್ತಾನೇಟ್ ಸಾಮ್ರಾಜ್ಯ ಒಡೆದು ಐದು ರಾಜ್ಯಗಳಾಗಿ ಹಂಚಿಹೋಯಿತು. ಆಗ ರೂಪುಗೊಂಡ ರಾಜ್ಯಗಳಲ್ಲಿ ವಿಜಾಪುರವೂ ಒಂದು. ಇದು ಆದಿಲ್ ಶಾಹಿ ಸುಲ್ತಾನರ ರಾಜ್ಯ. ಕ್ರಿ. ಶ. ೧೬೮೬ ರಲ್ಲಿ ಮುಘಲ್ ಸಾಮ್ರಾಜ್ಯದ ಔರಂಗಜೇಬ್ ಈ ಪ್ರದೇಶವನ್ನು ಗೆದ್ದ ನಂತರ ಆದಿಲ್ ಶಾಹಿ ಸುಲ್ತಾನರ ಆಳ್ವಿಕೆ ಕೊನೆಗೊಂಡಿತು. ಕ್ರಿ. ಶ. ೧೭೨೪ರಲ್ಲಿ ವಿಜಾಪುರ ಹೈದರಾಬಾದನ ನಿಜಾಮರ ಆಳ್ವಿಕೆಗೆ ಒಳಪಟ್ಟಿತು. ಕ್ರಿ. ಶ. ೧೭೬೦ ರಲ್ಲಿ ಮರಾಠರಿಂದ ನಿಜಾಮರು ಸೋಲಲ್ಪಟ್ಟಾಗ ವಿಜಾಪುರ ನಿಜಾಮರಿಂದ ಮರಾಠ ಪೇಶಾವರ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ಕ್ರಿ. ಶ. ೧೮೧೮ ರ ೩ ನೆ ಆಂಗ್ಲ-ಮರಾಠಾ ಯುದ್ದದಲ್ಲಿ ಬ್ರಿಟಿಷರಿಂದ ಮರಾಠರು ಸೋಲಲ್ಪಟ್ಟಾಗ ವಿಜಾಪುರ ಮರಾಠರಿಂದ ಬ್ರಿಟಿಷರ ಅಳ್ವಿಕೆಗೆ ಒಳಪಟ್ಟಿತ್ತು. ನಂತರ ವಿಜಾಪುರನ್ನು ಬ್ರಿಟಿಷ ಈಸ್ಟ್ ಇಂಡಿಯಾ ಕಂಪನಿಗೆ ಹಸ್ತಾಂತರಿಸಲಾಯಿತು. ಬಳಿಕ ಸಾತಾರಾ ರಾಜರಿಗೆ ಓಪ್ಪಿಸಲಾಯಿತು.

ಕ್ರಿ. ಶ. ೧೮೪೮ ರಲ್ಲಿ ಸಾತಾರಾ ಮತ್ತು ವಿಜಾಪುರನ್ನು ಮುಂಬಯಿ ಪ್ರಾಂತ್ಯಕ್ಕೆ ಸೇರಿಸಲಾಯಿತು. ಬ್ರಿಟಿಷರಿಂದ ನಿರೂಪಿಸಲ್ಪಟ್ಟ ಕಲದಗಿ ಜಿಲ್ಲೆಗೆ ಈಗಿನ ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಸೇರಿಸಲ್ಪಟ್ಟವು. ಕ್ರಿ. ಶ. ೧೮೮೫ ರಲ್ಲಿ ವಿಜಾಪುರನ್ನು ಜಿಲ್ಲಾಡಳಿತ ಪ್ರದೇಶವಾಗಿ ಮಾಡಲಾಯಿತು ಮತ್ತು ವಿಜಾಪುರನ್ನು ಆಗಿನ ಮುಂಬಯಿ (ಬಾಂಬೆ) ರಾಜ್ಯಕ್ಕೆ ಸೇರಿಸಲಾಯಿತು. ತದನಂತರ ಕ್ರಿ.ಶ. ೧೯೫೬ ರಲ್ಲಿ ಆಗಿನ ಮೈಸೂರು ರಾಜ್ಯಕ್ಕೆ (ಈಗಿನ ಕರ್ನಾಟಕ ರಾಜ್ಯಕ್ಕೆ) ಸೇರಿಸಲಾಯಿತು. ವಿಜಾಪುರ ನಗರವು ಒಂದು ಕಾಲದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ನಗರವಾಗಿತ್ತು.

ಭೌಗೋಳಿಕ

[ಬದಲಾಯಿಸಿ]

ವಿಜಾಪುರ ಜಿಲ್ಲೆಯ ವಿಸ್ತೀರ್ಣ ೧೦೫೪೧ ಚದರ ಕಿಲೋಮಿಟರಗಳು.ವಿಜಾಪುರ ಜಿಲ್ಲೆಯು; ಗುಲ್ಬರ್ಗಾ ಜಿಲ್ಲೆ (ಪೂರ್ವಕ್ಕೆ), ರಾಯಚೂರು ಜಿಲ್ಲೆ (ದಕ್ಷಿಣಕ್ಕೆ), ಬಾಗಲಕೋಟೆ ಜಿಲ್ಲೆ (ದಕ್ಷಿಣ-ಪಶ್ಚಿಮಕ್ಕೆ), ಬೆಳಗಾವಿ ಜಿಲ್ಲೆ (ಪಶ್ಚಿಮಕ್ಕೆ), ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ(ಉತ್ತರ-ಪಶ್ಚಿಮಕ್ಕೆ) ಮತ್ತು ಮಹಾರಾಷ್ಟ್ರದ ಸೊಲಾಪುರ ಜಿಲ್ಲೆಯಿಂದ (ಉತ್ತರಕ್ಕೆ) ಆವೃತಗೊಂಡಿದೆ.

ವಿಜಾಪುರ ಜಿಲ್ಲೆಯಲ್ಲಿ ಹರಿಯುವ ಎರಡು ಮುಖ್ಯ ನದಿಗಳೆಂದರೆ ಕೃಷ್ಣಾ ಮತ್ತು ಭೀಮಾ. ವಿಜಾಪುರ ಪಟ್ಟಣವು ಬೆಂಗಳೂರಿನಿಂದ ೫೩೫ ಕಿಮೀ, ಪುಣೆಯಿಂದ ೩೫೦ ಕಿಮೀ, ಮುಂಬಯಿದಿಂದ ೫೦೦ ಕಿಮೀ,ಹೈದರಾಬಾದ್ದಿಂದ ೩೮೦ ಕಿಮೀ,ಗೋವದಿಂದ ೩೧೦ ಕಿಮೀ, ಗುಲ್ಬರ್ಗಾಾದಿಂದ ೧೬೫ ಕಿಮೀ, ಧಾರವಾಡದಿಂದ ೨೦೦ ಕಿಮೀ,ಹುಬ್ಬಳ್ಳಿಯಿಂದ ೧೯೦ ಕಿಮೀ ಮತ್ತು ಬೆಳಗಾವಿಯಿಂದ ೨೧೦ ಕಿಮೀ ದೂರದಲ್ಲಿದೆ.

ಈ ಜಿಲ್ಲೆಯು ಕರ್ನಾಟಕ ರಾಜ್ಯದ ೫.೪೯% ವಿಸ್ತೀರ್ಣವನ್ನು ಹೊಂದಿದೆ. ಈ ಜಿಲ್ಲೆಯು ಭೌಗೋಳಿಕದಲ್ಲಿ ೧೫*x ೫೦ ಮತ್ತು ೧೭*x ೨೮ ಉತ್ತರ ಅಕ್ಷಾಂಶ ಮತ್ತು ೭೪*x ೫೪ ಮತ್ತು ೭೬*x ೨೮ ಪಶ್ಚಿಮ ರೇಖಾಂಶದಲ್ಲಿ ಬರುತ್ತದೆ. ಈ ಜಿಲ್ಲೆಯ ಜಿಲ್ಲಾಡಾಳಿತ ಕೇಂದ್ರ ಮತ್ತು ಪ್ರಮುಖ ಪಟ್ಟಣ ವಿಜಾಪುರ.

ಹವಾಮಾನ

[ಬದಲಾಯಿಸಿ]
  • ಬೆಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಬಿಜಾಪೂರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ. ಬೇಸಿಗೆ - ೩೫°C-೪೨°C ಡಿಗ್ರಿ ಸೆಲ್ಸಿಯಸ್, ಚಳಿಗಾಲ ಮತ್ತು ಮಳೆಗಾಲ - ೧೮°C-೨೮°Cಡಿಗ್ರಿ ಸೆಲ್ಸಿಯಸ್.
  • ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.

ಸಾಂಸ್ಕೃತಿಕ

[ಬದಲಾಯಿಸಿ]

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡ 'ವಿಜಾಪುರ ಕನ್ನಡ'ವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ (ಚಡಚಣ, ತಾಂಬಾ, ವಂದಾಲ ಮುಂ.)ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: ಜೋಳ, ಸಜ್ಜೆ, ಶೇಂಗಾ,ಚಿಕ್ಕು, ಸೂರ್ಯಕಾಂತಿ, ಉಳ್ಳಾಗಡ್ಡಿ (ಈರುಳ್ಳಿ). ವಿಜಾಪುರದ ದ್ರಾಕ್ಷಿ, ದಾಳಿಂಬೆ, ನಿಂಬೆ ಹಣ್ಣುಗಳು ಪರರಾಜ್ಯಗಳಿಗೆ, ಪರದೇಶಗಳಿಗೆ ರಫ್ತು ಆಗುತ್ತವೆ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. 'ಜವಾರಿ' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಾಪುರದ ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಸಾಕ್ಷರತೆ

[ಬದಲಾಯಿಸಿ]

ವಿಜಾಪುರ ನಗರದ ಸಾಕ್ಷರತೆಯ ಪ್ರಮಾಣ ೬೭%.ಅದರಲ್ಲಿ ೭೭% ಪುರುಷರು ಹಾಗೂ ೫೬% ಮಹಿಳೆಯರು ಸಾಕ್ಷರತೆ ಹೊಂದಿದೆ. ಜಿಲ್ಲೆಯಲ್ಲಿ ಪುರುಷರು ೭ ಲಕ್ಷಕ್ಕೂ ಹೆಚ್ಚು ಪುರುಷರು ಮತ್ತು ೫ ಲಕ್ಷಕ್ಕೂ ಹೆಚ್ಚು ಮಹಿಳೆಯರು ಸಾಕ್ಷರರಾಗಿದ್ದಾರೆ.

ಪ್ರವಾಸ

[ಬದಲಾಯಿಸಿ]
ಉತ್ತರ ಕರ್ನಾಟಕದ ಪ್ರವಾಸಿ ಸ್ಥಳಗಳು

ವಿಜಾಪುರ(ಬಿಜಾಪುರ) ಜಿಲ್ಲೆಯಲ್ಲಿ ಅನೇಕ ಚಾರಿತ್ರಿಕ ಆಕರ್ಷಣೆಗಳಿವೆ. ಮುಖ್ಯವಾಗಿ, ವಿಜಾಪುರ ಮುಸ್ಲಿಮ್ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರಾಗಿದೆ.

ಮುಸ್ಲಿಮ್ ಶೈಲಿಯ ವಾಸ್ತುಶಿಲ್ಪಗಳು

ಇದು ಮಹಮದ್ ಆದಿಲ್ ಶಾ (ಆಳ್ವಿಕೆ: ೧೬೨೭-೧೬೫೭)ನ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದನ್ನು ೧೬೫೯ರಲ್ಲಿ ಪ್ರಸಿದ್ದ ವಾಸ್ತುಶಿಲ್ಪಿಗಳಾದ ಯಾಕುತ್ ಮತ್ತು ದಬೂಲ್ರವರು ನಿರ್ಮಿಸಿದ್ದಾರೆ. ಇದರ ಉದ್ದ ಮತ್ತು ಅಗಲ ೫೦ ಮೀ , ಹೊರಗಡೆ ಎತ್ತರ ೧೯೮ ಅಡಿ ಮತ್ತು ಒಳಗಡೆ ಎತ್ತರ ೧೭೫ ಅಡಿ ಇದ್ದು ಮೇಲಿನ ಗೋಲಾಕಾರದ ಗುಂಬಜ್ ೩೯ ಮೀ (೧೨೪ ಅಡಿ) ವ್ಯಾಸ ಹೊಂದಿದೆ.ಅದರಂತೆ ೮ ಅಂತಸ್ತುಗಳಿವೆ. ಇದು ವಿಶ್ವದ ಎರಡನೆ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್ (ಇಟಲಿಯ ರೋಮ್ ನಗರದ ಬೆಸಿಲಿಕಾ ಚರ್ಚ್ - ವಿಶ್ವದ ಅತಿ ದೊಡ್ಡ ಮಾನವನಿರ್ಮಿತ ಗುಂಬಜ್). ಇದರ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ!ಹಾಗೆಯೆ ಇಲ್ಲಿರುವ "ಪಿಸುಗುಟ್ಟುವ ಶಾಲೆ"ಯಲ್ಲಿ ಅತಿ ಸಣ್ಣ ಶಬ್ದವೂ ೩೭ ಮಿ ದೂರದಲ್ಲಿ ಸ್ಪಷ್ಟವಾಗಿ ಕೇಳಿಬರುತ್ತದೆ. ಇದರ ಹತ್ತಿರ ವಿಜಾಪುರ ಆದಿಲ್ ಶಾಹಿಗಳಿಗೆ ಸಂಭದಿಸಿದ ವಸ್ತು ಸಂಗ್ರಾಹಾಲಯವು ಇದೆ.

  • ಇಬ್ರಾಹಿಮ್ ರೋಜಾ

ಇದು ಇಬ್ರಾಹಿಮ್ ಆದಿಲ್ ಶಾ (ಆಳ್ವಿಕೆ: ೧೫೮೦-೧೬೨೭) ಮತ್ತು ಆತನ ರಾಣಿಯಾದ ತಾಜ್ ಸುಲ್ತಾನಳ ಗೋರಿ. ಇದನ್ನು ೧೬೨೭ ರಲ್ಲಿ ನಿರ್ಮಿಸಿದ್ದಾರೆ. ಒಂದೇ ಶಿಲೆಯಲ್ಲಿ ಕಟ್ಟಲ್ಪಟ್ಟ ರೋಜಾ ತನ್ನ ಉದ್ದಳತೆಯ ಸಮರೂಪತೆಗೆ ಹೆಸರಾಗಿದೆ. ಇದರ ಶಿಲ್ಪಿ ಮಲಿಕ್ ಸಂದಾಲ್ ಇರಾನ್ ದೇಶದವನಾಗಿದ್ದು, ಶಿಲ್ಪಿಯ ಗೋರಿಯೂ ಸಹ ಇಲ್ಲಿಯೇ ಇದೆ. ಇದರ ವಿನ್ಯಾಸ ಮುಂದೆ ಪ್ರಸಿದ್ಧ ತಾಜ್ ಮಹಲ್ ನ ವಿನ್ಯಾಸಕ್ಕೆ ಸ್ಫೂರ್ತಿಯಾಯಿತೆಂಬ ಹೇಳಿಕೆಯಿದೆ.

  • ಮಲಿಕ್-ಎ-ಮೈದಾನ್ ಫಿರಂಗಿ (ಮಲಿಕ್ ತೋಪ್)

ಮಲಿಕ್-ಎ-ಮೈದಾನ್ ಫಿರಂಗಿ (ಮಲಿಕ್ ತೋಪ್)ನ್ನು ಮಹಮದ್ ಬಿನ್ ಹುಸ್ಸೇನ್ ರುಮಿವು ೧೬೩೨ ರಲ್ಲಿ ನಿರ್ಮಿಸಿದ್ದಾನೆ. ಜಗತ್ತಿನ ಅತಿ ದೊಡ್ಡದಾದ ಫಿರಂಗಿಗಳಲ್ಲಿ ಒಂದು. ಇದು ೧೪ (೪.೨ ಮೀಟರ) ಅಡಿ ಉದ್ದ , ೧.೫ ಮೀಟರ ವ್ಯಾಸ, ೫೫ ಟನ್ ತೂಕ ಹೊಂದಿದೆ. ಇದನ್ನು ೧೭ ನೇ ಶತಮಾನದಲ್ಲಿ ಅಮ್ಮದನಗರದಿಂದ ೧೦ ಆನೆಗಳು, ೪೦೦ ಎತ್ತುಗಳು ಮತ್ತು ನೂರಾರು ಮನುಷ್ಯರು ಎಳೆದು ತಂದಿದ್ದಾರೆ. ಈ ಫಿರಂಗಿಯನ್ನು ಯುದ್ದಕ್ಕಾಗಿ ಬಳಸಲಾಗುತ್ತಿತ್ತು.

  • ಜುಮ್ಮಾ ಮಸೀದಿ

ಜುಮ್ಮಾ ಮಸೀದಿಯನ್ನು ೧೫೭೬ರಲ್ಲಿ ನಿರ್ಮಿಸಿದ್ದಾರೆ. ಇದರ ವಿಸ್ತೀರ್ಣ ೧೦,೮೦೦ ಸ್ಕ್ವೇರ್ ಮೀಟರ್ ಇದ್ದು ಒಂದೆ ಬಾರಿಗೆ ೨೫೦೦ ಜನ ಪ್ರಾರ್ಥನೆ ಮಾಡಬಹುದಾಗಿದೆ. ಇಲ್ಲಿ ಮುಸ್ಲಿಂ ಧರ್ಮದ ಅನುಯಾಯಿಗಳು ಪ್ರಾರ್ಥನೆಗಾಗಿ ಉಪಯೋಗಿಸುತ್ತಿದ್ದರು.ಈ ಮಸೀದಿಯಲ್ಲಿ ಕುರಾನಿನ ಬಂಗಾರದ ಹೊತ್ತಿಗೆಯಿದೆ.

  • ಬಾರಾ ಕಮಾನ್

ಬಾರಾ ಕಮಾನ್ನನ್ನು ಅಲಿ ರೋಜಾ ೧೬೭೨ ರಲ್ಲಿ ನಿರ್ಮಿಸಿದ್ದಾನೆ. ಇದನ್ನು ಹನ್ನೆರಡು ಉದ್ದ , ಹನ್ನೆರಡು ಅಗಲ ಮತ್ತು ಹನ್ನೆರಡು ಎತ್ತರದ ಅಂತಸ್ತಿನ ಕಮಾನುಗಳುಳ್ಳ ಸ್ಮಾರಕವಾಗಿ ನಿರ್ಮಿಸಲು ಯೋಜನೆ ಮಾಡಲಾಗಿತ್ತು. ಇದು ಹನ್ನೆರಡು ಕಮಾನುಗಳುಳ್ಳ ಅರ್ಧಕ್ಕೆ ನಿಲ್ಲಿಸಿದ ಸ್ಮಾರಕವಾಗಿದೆ.

  • ಅಸರ ಮಹಲ್

ಅಸರ ಮಹಲ್ನ್ನು ೧೬೪೬ರಲ್ಲಿ ಮಹಮದ್ ಆದಿಲ್ ಶಾ ನಿರ್ಮಿಸಿದ್ದಾರೆ. ಇದನ್ನು ನ್ಯಾಯಾಲಯದ ಸಂಕೀರ್ಣವಾಗಿ ಉಪಯೋಗಿಸುತ್ತಿದ್ದರು. ಇದರ ಒಳಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಸುತ್ತಲೂ ೩ ಸಣ್ಣ ಕೆರೆಗಳಿವೆ.

  • ಗಗನ್‌ ಮಹಲ್

ಗಗನ್‌ ಮಹಲ್ನ್ನು ೧೫೬೦ ರಲ್ಲಿ ಅಲಿ ಆದಿಲ್ ಶಾ ನಿರ್ಮಿಸಿದ್ದಾರೆ. ಇದನ್ನು ಸ್ವರ್ಗದ ಅರಮನೆ ಅಥವಾ ದರ್ಬಾರ್ ಹಾಲ್ ಎಂದು ಕರೆಯುತ್ತಿದ್ದರು. ಒಂದು ದೊಡ್ಡದಾದ ಕಮಾನು ೨೦ ಮೀಟರ್ ಉದ್ದವಾಗಿದ್ದು , ೧೭ ಮೀಟರ್ ಎತ್ತರವಾದ ಮತ್ತು ಎರಡು ಚಿಕ್ಕದಾದ ಕಮಾನುಗಳನ್ನು ಮಾಡಿ ಸಂಗೀತ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಚರಿಸಲು ಉಪಯೋಗಿಸುತ್ತಿದ್ದರು.

  • ಸಂಗೀತ ಮಹಲ್

ಸಂಗೀತ ಮಹಲ್ವು ಬಿಜಾಪೂರ ನಗರದ ಹೊರ ವಲಯದ ತೊರವಿ ಗ್ರಾಮದಲ್ಲಿದ್ದು ಇಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದರು.

  • ಉಪ್ಪಲಿ ಬುರಜ್

ಉಪ್ಪಲಿ ಬುರಜ್ನ್ನು ೧೫೮೪ ರಲ್ಲಿ ಹೈದರ ಖಾನ್ನು ನಿರ್ಮಿಸಿದ್ದಾನೆ. ಇದು ೨೪ ಮೀಟರ್ ಎತ್ತರವಾಗಿದ್ದು ಇದರ ಮೇಲೆ ೯ ಅಡಿ ಮತ್ತು ೮.೫ ಅಡಿ ಉದ್ದವಿರುವ ಎರಡು ಫಿರಂಗಿಗಳಿವೆ. ಇದಕ್ಕೆ ಹೈದರ ಬುರಜ್ ಎಂತಲೂ ಕರೆಯುತ್ತಾರೆ.

  • ಜೋಡ ಗುಮ್ಮಟ

ಇವು ಎರಡು ಅವಳಿ ಗುಮ್ಮಟದ ಆಕಾರದಲ್ಲಿರುವ ಅಷ್ಟಭುಜಾಕೃತಿಯ ಸಮಾಧಿಗಳಾಗಿವೆ. ಇದನ್ನು ಸೇನಾಧಿಕಾರಿಯಾದ ಖಾನ್ ಮಹಮ್ಮದ್ ಮತ್ತು ಅವನ ಆಧ್ಯಾತ್ಮಿಕ ಸಲಹೆಗಾರನಾದ ಅಬ್ದುಲ್ ರಜಾಕ್ ಖಾದ್ರಿ ನಿನಪಿಗಾಗಿ ನಿರ್ಮಿಸಲಾಗಿದೆ.

  • ಮೆಹತರ ಮಹಲ್

ಈ ಮಹಲನ್ನು ೧೬೨೦ರಲ್ಲಿ ಮಹಮದ್ ಆದಿಲ್ ಶಾನು ಕಸಗೂಡಿಸುವರಿಗಾಗಿ ನಿರ್ಮಿಸಿದ್ದನು. ಈ ಮಹಲನ್ನು ಇಂಡೋ - ಸಾರ್ಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ.

  • ತಾಜ್ ಬೌಡಿ(ಮೆಕ್ಕಾ ಗೇಟ್)

ಇದು ಬಿಜಾಪುರದ ಐದು ಗೇಟುಗಳಲ್ಲಿ ಒಂದು. ತಾಜ್ ಬೌಡಿಯು ದೊಡ್ಡದಾದ ನೀರಿನ ಬಾವಿಯಿದ್ದು ಇದನ್ನು ತಾಜ್ ಸುಲ್ತಾನ್ಳ ನೆನಪಿಗಾಗಿ ೧೬೨೦ರಲ್ಲಿ ಇಬ್ರಾಹಿಮ್ ೨ ಕಟ್ಟಿಸಿದ್ದಾನೆ. ಬಾವಿಯ ನೀರನ್ನು ಕುಡಿಯಲು, ಸ್ನಾನಕ್ಕಾಗಿ , ಮೂರ್ತಿಗಳನ್ನು ಮುಳುಗಿಸಲು ಹಾಗೂ ಇನ್ನಿತರ ಕಾರ್ಯಗಳಿಗಾಗಿ ಉಪಯೋಗಿಸುತ್ತಿದ್ದರು.

  • ಚಾಂದ್ ಬೌಡಿ

ಇದು ೨೦ ಮಿಲಿಯನ್ ಲೀಟರ್ ನೀರು ಸಂಗ್ರಹಿಸಿ ರಾಜಧಾನಿಗೆ ಪೂರೈಸಲಾಗುತ್ತಿತ್ತು. ಇದನ್ನು ಅಲಿ ಆದಿಲ್ ಶಾಹಿಯು ತನ್ನ ಪತ್ನಿಯಾದ ಚಾಂದ ಬೇಬಿಯ ಸ್ಮರಣೆಗಾಗಿ ನಿರ್ಮಿಸಿದ್ದಾನೆ.

  • ಸಾತ್ ಮಂಜಿಲ್

ಹೆಸರೆ ಹೇಳವಂತೆ ಏಳು ಅಂತಸ್ತುಗಳ್ಳುಳ್ಳ ಕಟ್ಟಡವಾಗಿದ್ದು ನೋಡಲು ಸುಂದರವಾಗಿದೆ.

  • ಜಲ ಮಂಜಿಲ್

ಜಲ ಮಂಜಿಲ್ನ್ನು ರಾಣಿಯರ ಸ್ನಾನದ ಗೃಹವಾಗಿ ಉಪಯೋಗಿಸುತ್ತಿದ್ದರು.

  • ಆನಂದ ಮಹಲ್

ಆನಂದ ಮಹಲ್ನ್ನು ಇಬ್ರಾಹಿಮ್ ಆದಿಲ್ ಷಾರವರು ಕಟ್ಟಿಸಿದ್ದಾರೆ.

  • ಕೋಟೆ: ಬಿಜಾಪುರದ ಕೋಟೆ ಬಹುಶಃ ಭಾರತದ ಬೃಹತ್ ಕೋಟೆಗಳಲ್ಲೊಂದು. ವೃತ್ತಾಕಾರದಲ್ಲಿರುವ ಈ ಕೋಟೆಯ ಹೊರಸುತ್ತಿನ ಗೋಡೆಯ ಸುತ್ತಳತೆ ಸುಮಾರು 10 ಕಿ.ಮೀ. ಎಂದರೆ ಇದರ ವಿಸ್ತಾರದ ಪರಿಚಯವಾಗುತ್ತದೆ. ದೊಡ್ಡ ಕಲ್ಲುಗಳಿಂದ ಕಟ್ಟಿರುವ ಕೋಟೆ ಕೆಲವೆಡೆ 50 ಅಡಿಗಳಷ್ಟು ದಪ್ಪವಿದೆ. ಕೋಟೆಯ ಸುತ್ತ 50 ಅಡಿ ಅಗಲದ ಕಂದಕವಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಕೋಟೆ ಅತ್ಯಂತ ಬಲಿಷ್ಠವೆಂದೇ ಪರಿಗಣಿತವಾಗಿದೆ.
  • ನೋಡಬೇಕಾದ ಸ್ಥಳಗಳು: ಒಳಕೋಟೆಯಾದ ಅರಕಿಲ್ಲಾ, ಎರಡನೇ ಇಬ್ರಾಹೀಂ ಆದಿಲ್ ಶಾ 1589ರಲ್ಲಿ ಕಟ್ಟಿಸಿದ ಅರಮನೆ ಆನಂದಮಹಲ್, ಹಳೆಯ ಹಿಂದೂ ದೇವಾಲಯಗಳ ಚಪ್ಪಡಿ, ಕಂಬ ಬಳಸಿ ದೇವಾಲಯ ವಾಸ್ತು ರೀತ್ಯ ಕಟ್ಟಲಾಗಿರುವ ಕರೀಮುದ್ದೀನನ ಮಸೀದಿ, ರಾಜಸಭಾ ಸದನ ಗಗನ್‌ಮಹಲ್, ಬೃಹತ್ ಕಟ್ಟಡಗಳಾದ ಸಾತ್ ಮಂಜಿಲ್, ಜಲಮಂಜಿಲ್, ಅಸಾರ್ ಮಹಲ್, ನಗರ್‌ಖಾನಾ, ಜಹಾಜ್ ಮಹಲ್, ಜಾಮಿ ಮಸೀದಿ, ಚಾಂದ ಬೌಡಿ, ತಾಜ್ ಬೌಡಿ ಹಾಗೂ ಇಬ್ರಾಹಿಂ ರೋಜಾ. ಇಬ್ರಾಹಿಂ ರೋಜಾದ ವಾಸ್ತುವೇ ತಾಜಮಹಲಿಗೆ ಬುನಾದಿಯೆಂದು ಹೇಳಲಾಗುತ್ತದೆ.

ಹಿಂದೂ ಶೈಲಿಯ ದೇವಾಲಯಗಳು / ವಾಸ್ತುಶಿಲ್ಪಗಳು

  • ಶಿವನ ಬೃಹತ ಪ್ರತಿಮೆ- ಭಾರತ ದೇಶದ ಮೂರನೇಯ ಬೃಹತ್ ಶಿವನ ಪ್ರತಿಮೆಯಾಗಿದೆ.
  • ಶ್ರೀ ಸಿದ್ದೇಶ್ವರ ದೇವಾಲಯ
  • ತೊರವಿ ನರಸಿಂಹ ದೇವಾಲಯ
  • ಸಹಸ್ರ ಫಣಿ ಜಿನಾಲಯ
  • ರುಕ್ಮಾಂಗದ ಪಂಡಿತರ ಸಮಾಧಿ

ಸಮೀಪದ ಪ್ರವಾಸಿ ಸ್ಥಳಗಳು

ಅಣ್ಣ ಬಸವಣ್ಣ
ಜುಮ್ಮಾ ಮಸೀದಿ
ಬಾರಾ ಕಮಾನ್
ಇಬ್ರಾಹಿಮ್ ರೋಜಾ
ಮಲಿಕ್- ಎ - ಮೈದಾನ ತೋಪು
ತಾಜ್ ಬೌಡಿ

ಜನಸಂಖ್ಯೆ

[ಬದಲಾಯಿಸಿ]

ಬಿಜಾಪೂರ ನಗರದ ಜನಸಂಖ್ಯೆಯು ೩ ಲಕ್ಷಕ್ಕೂ ಅಧಿಕವಾಗಿದೆ.

ಧರ್ಮಗಳು

[ಬದಲಾಯಿಸಿ]

ಬಿಜಾಪೂರ ನಗರದಲ್ಲಿ ಹಿಂದೂ, ಮುಸ್ಲಿಂ, ಕ್ರಿಸ್ಟಿಯನ್ ಹಾಗೂ ಜೈನ ಧರ್ಮದ ಜನರಿದ್ದಾರೆ.

ಭಾಷೆಗಳು

[ಬದಲಾಯಿಸಿ]

ನಗರದಲ್ಲಿ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ, ಉರ್ದು ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.

ಹಣಕಾಸು

[ಬದಲಾಯಿಸಿ]

ನಗರದಲ್ಲಿ ಅನೇಕ ಹಣಕಾಸು ಸಂಸ್ಥೆಗಳು ಕಾರ್ಯಾನಿರ್ವಹಿಸುತ್ತವೆ. ಬಿಜಾಪುರ ನಗರದ ಬಸವನ ಬಾಗೇವಾಡಿ ರಸ್ತೆಯ ಇಬ್ರಾಹಿಮಪುರ ಗೇಟಿನ ಬಳಿ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಕಚೇರಿಯಿದೆ.

ಆರ್ಥಿಕತೆ

[ಬದಲಾಯಿಸಿ]

ನಗರದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದಿದೆ.

ವ್ಯಾಪಾರ

[ಬದಲಾಯಿಸಿ]

ಬಿಜಾಪುರ ನಗರವು ಪ್ರಮುಖ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರವಾಗಿದೆ.

ಬ್ಯಾಂಕುಗಳು

[ಬದಲಾಯಿಸಿ]

ಜಿಲ್ಲೆಯಲ್ಲಿ ಸರ್ಕಾರಿ ರಾಷ್ತ್ರೀಕೃತ, ಸಹಕಾರಿ, ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳು ಕಾರ್ಯಾನಿರ್ವಹಿಸುತ್ತವೆ

ರಾಷ್ತ್ರೀಕೃತ ಬ್ಯಾಂಕುಗಳು

  • ಎಸ್.ಬಿ.ಐ.ಬ್ಯಾಂಕ - ವಿಜಾಪುರ
  • ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ - ವಿಜಾಪುರ
  • ಐ.ಎನ್.ಜಿ ವೈಶ್ಯ ಬ್ಯಾಂಕ್ - ವಿಜಾಪುರ
  • ಸಿಂಡಿಕೇಟ್ ಬ್ಯಾಂಕ್ - ವಿಜಾಪುರ
  • ಎಚ್.ಡಿ.ಎಪ್.ಸಿ.ಬ್ಯಾಂಕ್ - ವಿಜಾಪುರ
  • ಐ.ಡಿ.ಐ.ಬಿ.ಬ್ಯಾಂಕ್ - ವಿಜಾಪುರ
  • ಐ.ಸಿ.ಐ.ಸಿ.ಐ.ಬ್ಯಾಂಕ್ - ವಿಜಾಪುರ
  • ಎಸ್.ಬಿ.ಎಮ್.ಬ್ಯಾಂಕ್ - ವಿಜಾಪುರ
  • ಎಸ್.ಬಿ.ಎಚ್.ಬ್ಯಾಂಕ್ - ವಿಜಾಪುರ
  • ಕೆನರಾ ಬ್ಯಾಂಕ್ - ವಿಜಾಪುರ
  • ಕಾರ್ಪೋರೇಶನ್ ಬ್ಯಾಂಕ್ - ವಿಜಾಪುರ
  • ವಿಜಯ ಬ್ಯಾಂಕ್ - ವಿಜಾಪುರ
  • ಬ್ಯಾಂಕ್ ಆಫ್ ಮಹಾರಾಷ್ಟ್ರ - ವಿಜಾಪುರ
  • ಯುನಿಯನ್ ಬ್ಯಾಂಕ್ ಆಫ್ ಇಂಡಿಯಾ - ವಿಜಾಪುರ
  • ಪಂಜಾಬ್ ನ್ಯಾಶನಲ್ ಬ್ಯಾಂಕ್ - ವಿಜಾಪುರ
  • ಆಕ್ಸಿಸ್ ಬ್ಯಾಂಕ್ - ವಿಜಾಪುರ
  • ಬ್ಯಾಂಕ್ ಆಫ್ ಇಂಡಿಯಾ - ವಿಜಾಪುರ
  • ಬ್ಯಾಂಕ್ ಆಫ್ ಬರೋಡ - ವಿಜಾಪುರ
  • ಇಂಡಸಲ್ಯಾಂಡ್ ಬ್ಯಾಂಕ್ - ವಿಜಾಪುರ
  • ಇಂಡಿಯನ್ ಬ್ಯಾಂಕ್ - ವಿಜಾಪುರ
  • ಇಂಡಿಯನ್ ಒವರಸೀಸ್ ಬ್ಯಾಂಕ್ - ವಿಜಾಪುರ
  • ದೇನಾ ಬ್ಯಾಂಕ್ - ವಿಜಾಪುರ
  • ಕ್ಯಾತೋಲಿಕ್ ಸಿರಿಯನ್ ಬ್ಯಾಂಕ್ - ವಿಜಾಪುರ
  • ಆಂಧ್ರ ಬ್ಯಾಂಕ್ - ವಿಜಾಪುರ
  • ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ - ವಿಜಾಪುರ
  • ಅಲಹಾಬಾದ್ ಬ್ಯಾಂಕ್ - ವಿಜಾಪುರ

ಖಾಸಗಿ ಬ್ಯಾಂಕುಗಳು

  • ಕರ್ನಾಟಕ ಬ್ಯಾಂಕ್ - ವಿಜಾಪುರ

ಸಹಕಾರಿ ಬ್ಯಾಂಕುಗಳು

  • ಶ್ರೀ ಸಿದ್ದೇಶ್ವರ ಬ್ಯಾಂಕ, ಬಿಜಾಪೂರ.(ಮುಖ್ಯ ಕಚೇರಿ)
  • ಬಿಜಾಪೂರ ಜಿಲ್ಲಾ ಮಹಿಳಾ ಸಹಕಾರಿ ಬ್ಯಾಂಕ, ಬಿಜಾಪೂರ.(ಮುಖ್ಯ ಕಚೇರಿ)
  • ಮಹಾಲಕ್ಷ್ಮೀ ಅರ್ಬನ್ ಸಹಕಾರಿ ಬ್ಯಾಂಕ್, ಬಿಜಾಪೂರ.(ಮುಖ್ಯ ಕಚೇರಿ)
  • ಬಿಜಾಪೂರ ಸಹಕಾರಿ ಬ್ಯಾಂಕ, ಬಿಜಾಪೂರ.(ಮುಖ್ಯ ಕಚೇರಿ)
  • ಬಿಜಾಪೂರ ಜಿಲ್ಲಾ ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ, ಬಿಜಾಪೂರ.(ಮುಖ್ಯ ಕಚೇರಿ)
  • ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ, ಬಿಜಾಪೂರ.(ಮುಖ್ಯ ಕಚೇರಿ)
  • ಡೆಕ್ಕನ್ ಅರ್ಬನ್ ಸಹಕಾರಿ ಬ್ಯಾಂಕ್, ಬಿಜಾಪೂರ.(ಮುಖ್ಯ ಕಚೇರಿ)

ಅಂಚೆ ಕಚೇರಿ ಮತ್ತು ಪಿನಕೋಡ್ ಸಂಕೇತಗಳು

[ಬದಲಾಯಿಸಿ]

ಜಿಲ್ಲೆಯಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಅಂಚೆ ಕಚೇರಿಗಳಿವೆ. ಪ್ರಧಾನ ಅಂಚೆ ಕಚೇರಿಯು ಬಿಜಾಪೂರ ನಗರದ ಎಮ್.ಜಿ. ರಸ್ತೆಯಲ್ಲಿದೆ.

ಬಿಜಾಪೂರ ನಗರ ಭಾಗದ ಪಿನಕೋಡ್ ಸಂಕೇತಗಳು

  • ಬಿಜಾಪೂರ ಮುಖ್ಯ ಕಚೇರಿ - ೫೮೬೧೦೧
  • ಬಿಜಾಪೂರ ಸೈನಿಕ ಶಾಲೆ - ೫೮೬೧೦೨
  • ಬಿಜಾಪೂರ ವಿಜಯ ಕಾಲೇಜ್ - ೫೮೬೧೦೩
  • ಬಿಜಾಪೂರ ಜುಮ್ಮಾ ಮಸೀದಿ - ೫೮೬೧೦೪
  • ಬಿಜಾಪೂರ ಎ.ಎಮ್.ಸಿ - ೫೮೬೧೦೮
  • ಬಿಜಾಪೂರ ದರ್ಬಾರ ಗಲ್ಲಿ - ೫೮೬೧೦೯

ಬಿಜಾಪೂರ ನಗರದ ವಿದ್ಯುತ್ ಪರಿವರ್ತನಾ ಕೇಂದ್ರಗಳು

[ಬದಲಾಯಿಸಿ]
  • ೨೨೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಬಿಜಾಪೂರ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಕೆ.ಐ.ಎ.ಡಿ.ಬಿ., ಬಿಜಾಪೂರ
  • ೧೧೦ ಕೆವಿ ವಿದ್ಯುತ್ ಪರಿವರ್ತನಾ ಕೇಂದ್ರ, ಬಿಜಾಪೂರ ನಗರ

ಆರಕ್ಷಕ (ಪೋಲಿಸ್) ಠಾಣೆಗಳು

[ಬದಲಾಯಿಸಿ]

ವಿಜಾಪುರ ನಗರದಲ್ಲಿರುವ ಎಸ್.ಪಿ. ಆಫೀಸ್ ಕೇಂದ್ರ ಕಚೇರಿಯೊಂದಿಗೆ ಜಿಲ್ಲೆಯ ಎಲ್ಲ ಪೋಲಿಸ್ ಠಾಣೆಗಳು ಕಾರ್ಯನಿರ್ವಹಿಸುತ್ತವೆ.

ವಿಜಾಪುರ ನಗರದಲ್ಲಿರುವ ಪೋಲಿಸ್ ಠಾಣೆಗಳು

  • ಪೋಲಿಸ್ ಠಾಣೆ, ಆದರ್ಶ ನಗರ, ವಿಜಾಪುರ
  • ಪೋಲಿಸ್ ಠಾಣೆ, ಎ.ಪಿ.ಎಮ್.ಸಿ., ವಿಜಾಪುರ
  • ಪೋಲಿಸ್ ಠಾಣೆ, ಟ್ರಾಫಿಕ್, ವಿಜಾಪುರ
  • ಪೋಲಿಸ್ ಠಾಣೆ, ಗಾಂಧಿ ಚೌಕ, ವಿಜಾಪುರ
  • ಪೋಲಿಸ್ ಠಾಣೆ, ಗ್ರಾಮೀಣ, ವಿಜಾಪುರ
  • ಪೋಲಿಸ್ ಠಾಣೆ, ಗೋಲ್ ಗುಂಬಜ್, ವಿಜಾಪುರ
  • ಪೋಲಿಸ್ ಠಾಣೆ, ಜಲನಗರ, ವಿಜಾಪುರ

ಆಸ್ಪ ತ್ರೆಗಳು

[ಬದಲಾಯಿಸಿ]

ಬಿಜಾಪೂರ ನಗರದಲ್ಲಿ ಒಳ್ಳೆಯ ಸರಕಾರಿ ಹಾಗೂ ಖಾಸಗಿ ಆಸ್ಪ ತ್ರೆಗಳು ಕಾರ್ಯನಿರ್ವಹಿಸುತ್ತವೆ.

ಆಕಾಶವಾಣಿ ಬಾನುಲಿ ಕೇಂದ್ರ

[ಬದಲಾಯಿಸಿ]

ವಿಜಾಪುರ ನಗರದ ಅಥಣಿ ರಸ್ತೆಯಲ್ಲಿ ಆಕಾಶವಾಣಿ ಕೇಂದ್ರವಿದೆ. ೧೦೧.೮ ಮೆಗಾ ಹರ್ಟ್ಸ್ ತರಂಗಾಂತರದಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತದೆ.

ವಾಹನ ಸಾರಿಗೆ

[ಬದಲಾಯಿಸಿ]

ವಿಜಾಪುರ ಪಟ್ಟಣವು ನಗರ ಹಾಗೂ ಗ್ರಾಮೀಣ ಸಾರಿಗೆ ಹೊಂದಿದೆ. ಪಟ್ಟಣದಲ್ಲಿ ೯ ಫೆಬ್ರುವರಿ ೨೦೧೩ ರಂದು ಅತ್ಯ್ಯಾಧುನಿಕ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ ವಾಹನಗಳು ಪ್ರಾರಭವಾಗಿ ನಗರದ ಜನತೆಗೆ ಪ್ರಯಾಣದ ಸೌಕರ್ಯವನ್ನು ಕಲ್ಪಿಸಲಾಗಿದೆ. ನಗರ ಸಾರಿಗೆ ವಾಹನಗಳಿಗೆ ವಿಜಯಪುರ ನಗರ ಸಾರಿಗೆ (ದಿ ಸಿಟಿ ಆಫ್ ವಿಕ್ಟರಿ) ಎಂದು ಹೆಸರಿಸಲಾಗಿದೆ.ಮತ್ತು ದಿನಕ್ಕೆ ರೂ.೨೦ ಯಂತೆ ದಿನದ ಪಾಸನ್ನು ಪಡೆದು ನಗರದ ತುಂಬೆಲ್ಲ ಹಾಗೂ ಪ್ರವಾಸಿ ಸ್ಥಳಗಳನ್ನು ನೋಡಬಹುದಾಗಿದೆ. ಸರಕಾರೇತರ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಾರಿಗೆ ವಾಹನಗಳುಜಿಲ್ಲೆಯಾದ್ಯಂತ ಸಂಚರಿಸುತ್ತವೆ. ವಿಜಾಪುರದಿಂದ ಮುಂಬಯಿ, ಪೂನಾ, ಬೆಂಗಳೂರು, ಹೈದರಾಬಾದುಗಳಿಗೆ ಐಷಾರಾಮಿ ಬಸ್ಸುಗಳು ಓಡಾಡುತ್ತವೆ. ಇತರೆ ನಿಗಮದ ಬಸ್ಸುಗಳು,ಅಂತರರಾಜ್ಯ (ಗೋವಾ ಮತ್ತು ಮಹಾರಾಷ್ಟ್ರ) ವಾಹನಗಳು ಕೂಡ ಸಂಚರಿಸುತ್ತವೆ.

ರೈಲು ಸಾರಿಗೆ

[ಬದಲಾಯಿಸಿ]

ಬಿಜಾಪುರದಿಂದ ಹೊರಡುವ ರೈಲುಗಳು

ಬಿಜಾಪುರ ರೈಲು ವಿಭಾಗವು ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗದಲ್ಲಿ ಬರುತ್ತದೆ.

19405/19406 ಬೆಂಗಳೂರು < - > ಅಮದಾಬಾದ್ ( ವ್ಹಾಯಾ ಹುಬ್ಬಳ್ಳಿ , ಬಿಜಾಪೂರ, ಸೊಲ್ಲಾಪುರ ) (ವಾರಕ್ಕೆ ಒಂದು ಸಲ)
16201/16202 ಶಿರಡಿ < - > ಮೈಸೂರ ( ವ್ಹಾಯಾ ಬೆಂಗಳೂರು,ಬಳ್ಳಾರಿ, ಗದಗ, ಬಿಜಾಪೂರ, ಸೊಲ್ಲಾಪುರ ) (ವಾರಕ್ಕೆ ಒಂದು ಸಲ)
16535/16536 ಬೆಂಗಳೂರು < - > ಸೊಲ್ಲಾಪುರ (ಗೊಳಗುಂಬಜ್ ಎಕ್ಸ ಪ್ರೆಸ್) ( ವ್ಹಾಯಾ ಹುಬ್ಬಳ್ಳಿ , ಗದಗ, ಬಿಜಾಪೂರ, ಸೊಲ್ಲಾಪುರ ) (ಪ್ರತಿದಿನ)
17307/17308 ಬೆಂಗಳೂರು < - > ಬಾಗಲಕೋಟ (ಬಸವ ಎಕ್ಸ ಪ್ರೆಸ್) ( ವ್ಹಾಯಾ ಗುಂತಕಲ್, ಗುಲಬರ್ಗಾ, ಸೊಲ್ಲಾಪುರ, ಬಿಜಾಪೂರ) (ಪ್ರತಿದಿನ)
11423/11424 ಸೊಲ್ಲಾಪುರ < - > ಹುಬ್ಬಳ್ಳಿ ಎಕ್ಸ ಪ್ರೆಸ್ (ಪ್ರತಿದಿನ)
01493/01494 ಹುಬ್ಬಳ್ಳಿ < - > ಬಿಜಾಪೂರ ಇಂಟರಸಿಟಿ ಎಕ್ಸ ಪ್ರೆಸ್ (ಪ್ರತಿದಿನ)
57641/57642 ಸೊಲ್ಲಾಪುರ < - > ಗದಗ ಪ್ಯಾಸೆಂಜರ (ಪ್ರತಿದಿನ)
56903/56904 ಧಾರವಾಡ < - > ಸೊಲ್ಲಾಪುರ ಪ್ಯಾಸೆಂಜರ (ಪ್ರತಿದಿನ)
56905/56906 ಸೊಲ್ಲಾಪುರ < - > ಹುಬ್ಬಳ್ಳಿ ಪ್ಯಾಸೆಂಜರ (ಪ್ರತಿದಿನ)
57685/57686 ಸೊಲ್ಲಾಪುರ < - > ಬಿಜಾಪೂರ ಪ್ಯಾಸೆಂಜರ (ಪ್ರತಿದಿನ)
57133/57134 ಬಿಜಾಪೂರ < - > ರಾಯಚೂರ ಪ್ಯಾಸೆಂಜರ ( ವ್ಹಾಯಾ ಸೊಲ್ಲಾಪುರ, ಗುಲಬರ್ಗಾ ) (ಪ್ರತಿದಿನ)
51029/51030 ಮುಂಬಯಿ ಸಿ ಎಸ್ ಟಿ < - > ಬಿಜಾಪೂರ ಪಾಸ್ಟ ಪ್ಯಾಸೆಂಜರ ( ವ್ಹಾಯಾ ಸೊಲ್ಲಾಪುರ, ಪುಣೆ) (ವಾರದಲ್ಲಿ ನಾಲ್ಕು ದಿನ)
57129/57130 ಬಿಜಾಪೂರ < - > ಬೊಳರಮ್ (ಹೈದರಾಬಾದ್) ಪ್ಯಾಸೆಂಜರ ( ವ್ಹಾಯಾ ಸೊಲ್ಲಾಪುರ, ಗುಲಬರ್ಗಾ , ವಾಡಿ) (ಪ್ರತಿದಿನ)

ವಿಮಾನಯಾನ ಸಾರಿಗೆ

[ಬದಲಾಯಿಸಿ]

ವಿಮಾನ ನಿಲ್ದಾಣ

ವಿಜಾಪುರ ವಿಮಾನ ನಿಲ್ದಾಣವು ಪಟ್ಟಣದಿಂದ ೫ಕಿ.ಮೀ (ಮಧಬಾವಿ-ಭುರಣಾಪೂರ ಗ್ರಾಮದ ಹತ್ತಿರ) ಇದೆ.ಇದಕ್ಕಾಗಿ ರಾಜ್ಯ ಸರಕಾರವು ೭೨೫ ಎಕರೆ ಭೂಮಿಯನ್ನು ಖರೀದಿಸಿದೆ.

ಜಲಸಾರಿಗೆ

[ಬದಲಾಯಿಸಿ]

ಬಂದರು

ನಗರಕ್ಕೆ ಹತ್ತಿರವಾದ ಕಾರವಾರ ಹಾಗೂ ಗೋವಾ ಬಂದರುಗಳಿವೆ.

ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳು

[ಬದಲಾಯಿಸಿ]

ರಾಷ್ಟ್ರೀಯ ಹೆದ್ದಾರಿಗಳು

ನಗರದಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುತ್ತವೆ. ಅವುಗಳೆಂದರೆ ರಾಷ್ಟ್ರೀಯ ಹೆದ್ದಾರಿ - ೧೩ ಮತ್ತು ರಾಷ್ಟ್ರೀಯ ಹೆದ್ದಾರಿ - ೨೧೮

ರಾಷ್ಟ್ರೀಯ ಹೆದ್ದಾರಿ - ೧೩ => ಸೋಲಾಪೂರ - ಬಿಜಾಪೂರ - ಇಲಕಲ್ಲ - ಹೊಸಪೇಟೆ - ಚಿತ್ರದುರ್ಗ - ಶಿವಮೊಗ್ಗ - ಮಂಗಳೂರ.

ರಾಷ್ಟ್ರೀಯ ಹೆದ್ದಾರಿ - ೨೧೮ => ಹುಬ್ಬಳ್ಳಿ - ನವಲಗುಂದ - ನರಗುಂದ - ಬಾಗಲಕೋಟ (ಗದ್ದನಕೇರಿ ಕ್ರಾಸ್) -ಬೀಳಗಿ(ಕ್ರಾಸ್) - ಬಿಜಾಪುರ - ಸಿಂದಗಿ - ಜೇವರ್ಗಿ - ಗುಲಬುರ್ಗಾ - ಹುಮನಾಬಾದ.

ರಾಜ್ಯ ಹೆದ್ದಾರಿಗಳು

ಜಿಲ್ಲೆಯಲ್ಲಿ ೫ ರಾಜ್ಯ ಹೆದ್ದಾರಿ ಇವೆ.ಅವು ಕೆಳಗಿನಂತಿವೆ,

ರಾಜ್ಯ ಹೆದ್ದಾರಿ - ೧೨ => ಬಿಜಾಪೂರ - ಅಥಣಿ - ಚಿಕ್ಕೋಡಿ - ಸಂಕೇಶ್ವರ

ರಾಜ್ಯ ಹೆದ್ದಾರಿ - ೧೬ => ಸಿಂದಗಿ - ಶಹಾಪೂರ - ಯಾದಗಿರಿ - ಗುರಮಟ್ಕಲ್

ರಾಜ್ಯ ಹೆದ್ದಾರಿ - ೪೧ => ಶಿರಾಡೋಣ - ಝಳಕಿ -ಇಂಡಿ - ದೇವರ ಹಿಪ್ಪರಗಿ - ಹೂವಿನ ಹಿಪ್ಪರಗಿ - ಮುದ್ದೇಬಿಹಾಳ - ನಾರಾಯಣಪೂರ

ರಾಜ್ಯ ಹೆದ್ದಾರಿ - ೫೫ => ಬಬಲೇಶ್ವರ - ಕಾಖಂಡಕಿ - ಮಮದಾಪೂರ - ಕಂಬಾಗಿ - ಗಲಗಲಿ - ಮುಧೋಳ -ಯಾದವಾಡ - ಯರಗಟ್ಟಿ

ರಾಜ್ಯ ಹೆದ್ದಾರಿ - ೬೧ => ಮನಗೊಳಿ - ಬಸವನ ಬಾಗೇವಾಡಿ - ತಾಳಿಕೋಟೆ - ದೇವಾಪುರ - ದೇವದುರ್ಗ - ಶಿರವಾರ

ರಾಜ್ಯ ಹೆದ್ದಾರಿ - ೬೫ => ಬಿಜಾಪೂರ - ಜಮಖಂಡಿ - ಮುಧೋಳ - ರಾಮದುರ್ಗ - ಸವದತ್ತಿ -ಧಾರವಾಡ

ಸೇತುವೆಗಳು

[ಬದಲಾಯಿಸಿ]

ಬಿಜಾಪೂರ ಜಿಲ್ಲೆಯಲ್ಲಿ ಸುಮಾರು ೨೦ಕ್ಕಿಂತ ಅಧಿಕ ಸೇತುವೆಗಳಿವೆ. ಸೇತುವೆಗಳನ್ನು ಮುಖ್ಯವಾಗಿ ಕೃಷ್ಣಾ , ಭೀಮಾ ಮತ್ತು ಡೋಣಿ ನದಿಗಳಿಗೆ ಮತ್ತು ಹಳ್ಳಗಳಿಗೆ ಅಡ್ಡಲಾಗಿ ಕಟ್ಟಲಾಗಿದೆ.

ಕ್ರೀಡಾಂಗಣ

[ಬದಲಾಯಿಸಿ]

ಜಿಲ್ಲಾ ಕ್ರೀಡಾಂಗಣ : ಡಾ|| ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ,ವಿಜಾಪೂರ.

ಕ್ರೀಡೆ

[ಬದಲಾಯಿಸಿ]

ಬಿಜಾಪೂರ ನಗರವು ಸೈಕ್ಲಿಸ್ಟಗಳ ಕಣಜ. ಪ್ರಮುಖವಾಗಿ ಪ್ರೇಮಲತಾ ಸುರೇಬಾನ, ಯಲಗುರೇಶ ಗಡ್ಡಿ , ಲಕ್ಕಪ್ಪ ಕುರಣಿ, ಗೀತಾಂಜಲಿ ಜ್ಯೋತೆಪ್ಪನ್ನವರ ಮತ್ತು ನೀಲಮ್ಮ ಮಲ್ಲಿಗವಾಡ ಮುಂತಾದವರು. ಇಲ್ಲಿನ ಅನೇಕ ಕ್ರೀಡಾಪಟುಗಳು ರಾಜ್ಯ , ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದಾರೆ. ಬಿಜಾಪೂರ ಜಿಲ್ಲೆಯವರಾದ ಕಿರಣ ಕಟ್ಟಿಮನಿಯವರು ಕರ್ನಾಟಕ ಪ್ರೀಮಿಯರ್ ಲೀಗ್ನ ಬಿಜಾಪೂರ ಬುಲ್ಸ್ ಕ್ರಿಕೆಟ್ ತಂಡದ ಮಾಲೀಕರಾಗಿದ್ದಾರೆ.

ಚಿತ್ರ ಮಂದಿರಗಳು

[ಬದಲಾಯಿಸಿ]

ಬಿಜಾಪೂರ ನಗರದಲ್ಲಿ ೬ ಚಿತ್ರ ಮಂದಿರಗಳು ಇವೆ.

  • ೧.ಲಕ್ಷ್ಮಿ,
  • ೨.ಡ್ರ್ರೀಮಲ್ಯಾಂಡ್
  • ೩.ಜಯಶ್ರೀ
  • ೪.ಅಮೀರ
  • ೫.ಅಲಂಕಾರ
  • ೬.ಅಪ್ಸರಾ

ಶಿಕ್ಷಣ

[ಬದಲಾಯಿಸಿ]
ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಾಪೂರ

ಪ್ರಮುಖ ವಿದ್ಯಾಸಂಸ್ಥೆಗಳು

ವಿಶ್ವವಿದ್ಯಾಲಯಗಳು

  • ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ವಿಜಾಪೂರ
  • ಬಿ.ಎಲ್.ಡಿ.ಇ.ಎ. (ಬಿಜಾಪುರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆ)ವಿಶ್ವವಿದ್ಯಾಲಯ (ಡೀಮ್ಡ್ ವಿಶ್ವವಿದ್ಯಾಲಯ), ವಿಜಾಪೂರ
  • ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ, ವಿಜಾಪೂರ

ತಾಂತ್ರಿಕ ಮಹಾವಿದ್ಯಾಲಯಗಳು

ಪಾಲಿಟೆಕ್ನಿಕ್ ಮಹಾವಿದ್ಯಾಲಯಗಳು

  • ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ವಿಜಾಪೂರ
  • ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ಝಳಕಿ, ಇಂಡಿ, ವಿಜಾಪೂರ
  • ಸಿಕ್ಯಾಬ್ ಮಲಿಕ್ ಸಂದಲ್ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ವಿಜಾಪೂರ
  • ಬಿ.ಎಲ್.ಡಿ.ಇ.ಎ. ಪಾಲಿಟೆಕ್ನಿಕ್ ಮಹಾವಿದ್ಯಾಲಯ, ವಿಜಾಪೂರ
  • ಶ್ರೀ ಸುಭಾಸ ನಾಗೂರ ಸ್ಮಾರಕ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ವಿಜಾಪೂರ

ವೈದ್ಯಕೀಯ ಮಹಾವಿದ್ಯಾಲಯಗಳು

ಔಷಧ ಮಹಾವಿದ್ಯಾಲಯಗಳು

  • ಬಿ.ಎಲ್.ಡಿ.ಇ. ಔಷಧ ಮಹಾವಿದ್ಯಾಲಯ, ಬಿಜಾಪೂರ

ಆರ್ಯುವೇದ ಮಹಾವಿದ್ಯಾಲಯಗಳು

  • ಬಿ.ಎನ್.ಎಮ್. ಆರ್ಯುವೇದ ಮಹಾವಿದ್ಯಾಲಯ, ಬಿಜಾಪೂರ
  • ಬಿ.ಎಲ್.ಡಿ.ಇ.ಆರ್ಯುವೇದ ಮಹಾವಿದ್ಯಾಲಯ, ಬಿಜಾಪೂರ
  • ರಾಜೇಶ್ವರಿ ಕರ್ಪೂರಮಠ ಸ್ಮಾರಕ ಆರ್ಯುವೇದ ಮಹಾವಿದ್ಯಾಲಯ, ಬಿಜಾಪೂರ

ಹೋಮಿಯೋಪಥಿ ಮಹಾವಿದ್ಯಾಲಯಗಳು

  • ಅಲ್ - ಅಮೀನ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ, ಬಿಜಾಪೂರ

ಯುನಾನಿ ಮಹಾವಿದ್ಯಾಲಯಗಳು

  • ಲುಕಮುನ ಯುನಾನಿ ಮಹಾವಿದ್ಯಾಲಯ, ಬಿಜಾಪೂರ

ದಂತ ವೈದ್ಯಕೀಯ ಮಹಾವಿದ್ಯಾಲಯಗಳು

  • ಅಲ್ - ಅಮೀನ್ ದಂತ ವೈದ್ಯಕೀಯ ಮಹಾವಿದ್ಯಾಲಯ, ಬಿಜಾಪೂರ

ಶುಶ್ರೂಷಾ ಮಹಾವಿದ್ಯಾಲಯಗಳು

  • ಬಿ.ಎಮ್.ಪಾಟೀಲ ಶುಶ್ರೂಷಾ ಮಹಾವಿದ್ಯಾಲಯ, ಬಿಜಾಪೂರ
  • ಅಲ್ - ಅಮೀನ್ ಫಾತೀಮಾ ಶುಶ್ರೂಷಾ ಮಹಾವಿದ್ಯಾಲಯ, ಬಿಜಾಪೂರ
  • ತುಳಜಾ ಭವಾನಿ ಶುಶ್ರೂಷಾ ಮಹಾವಿದ್ಯಾಲಯ, ಬಿಜಾಪೂರ
  • ಶ್ರೀ ಸಿದ್ದೇಶ್ವರ ಶುಶ್ರೂಷಾ ಮಹಾವಿದ್ಯಾಲಯ, ಬಿಜಾಪೂರ

ವಾಣಿಜ್ಯ ಮಹಾವಿದ್ಯಾಲಯಗಳು

  • ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ,ವಿಜಾಪೂರ
  • ಸಿಕ್ಯಾಬ್ ವಾಣಿಜ್ಯ ಮಹಾವಿದ್ಯಾಲಯ, ವಿಜಾಪೂರ

ಕೇಂದ್ರೀಯ ಪಠ್ಯ ಕ್ರಮದ ಮಹಾವಿದ್ಯಾಲಯಗಳು

ಕೃಷಿ ಮಹಾವಿದ್ಯಾಲಯ

  • ಕೃಷಿ ಮಹಾವಿದ್ಯಾಲಯ,ಹಿಟ್ಟಿನಹಳ್ಳಿ , ಬಿಜಾಪೂರ

ಕಾನೂನು ಮಹಾವಿದ್ಯಾಲಯಗಳು

  • ಶ್ರೀ ಸಿದ್ದೇಶ್ವರ ಕಾನೂನು ಮಹಾವಿದ್ಯಾಲಯ, ಬಿಜಾಪೂರ
  • ಅಂಜುಮನ್ ಕಾನೂನು ಮಹಾವಿದ್ಯಾಲಯ, ಬಿಜಾಪೂರ

ಸಾಹಿತ್ಯ

[ಬದಲಾಯಿಸಿ]

ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನ

೧೯೨೩ರಲ್ಲಿ ೯ನೇ ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನವು ಸಿದ್ದಾಂತಿ ಶಿವಶಂಕರ ಶಾಸ್ತ್ರಿಯವರ ಅಧ್ಯಕ್ಷತೆಯಲ್ಲಿ ಜರುಗಿತ್ತು.ನಂತರ ಇದೆ ವರ್ಷ ಅಖಿಲ ಭಾರತ ೭೯ನೇ ಕನ್ನಡ ಸಾಹಿತ್ಯ ಸಮ್ಮೇಳನ, ವಿಜಾಪೂರ Archived 2013-02-14 ವೇಬ್ಯಾಕ್ ಮೆಷಿನ್ ನಲ್ಲಿ. ವು ಕೊ.ಚನ್ನಬಸಪ್ಪರವರ ಅಧ್ಯಕ್ಷತೆಯಲ್ಲಿ ೯,೧೦,೧೧ ಫೆಬ್ರುವರಿ ೨೦೧೩ರಂದು ಜರುಗಿತು.

ವಿಜ್ಞಾನ ಮತ್ತು ತಂತ್ರಜ್ಞಾನ

[ಬದಲಾಯಿಸಿ]

ಭಾಸ್ಕರಾಚಾರ್ಯರು ಬಿಜಾಪುರ ಜಿಲ್ಲೆಯ ಗಣಿತಜ್ಞರು.

ಹೋಟೆಲುಗಳು

[ಬದಲಾಯಿಸಿ]
  • ಶಶಿನಾಗ ರೆಸಿದೆನ್ಸಿ ಹೊಟೇಲ್, ವಿಜಾಪುರ
  • ಹೋಟೆಲ ಕಾಮತ್, ವಿಜಾಪುರ
  • ಹೋಟೆಲ ಅಶೋಕ, ವಿಜಾಪುರ
  • ಮಧುವನ ಹೊಟೇಲ್, ವಿಜಾಪುರ
  • ಪ್ಲಿಜಂಟ ಸ್ಟೆ ಹೊಟೇಲ್, ವಿಜಾಪುರ
  • ಕನಿಷ್ಟ ಇಂಟರನ್ಯಾಶನಲ್ ಹೊಟೇಲ್, ವಿಜಾಪುರ
  • ನವರತ್ನ ಇಂಟರನಾಶನಲ್ ಹೊಟೇಲ್, ವಿಜಾಪುರ
  • ಪರ್ಲ ಹೊಟೇಲ್, ವಿಜಾಪುರ
  • ಕೆ.ಎಸ್.ಟಿ.ಡಿ.ಸಿ. ಮಯೂರ ಆದಿಲ್ ಶಾಹಿ ಹೊಟೇಲ್, ವಿಜಾಪುರ
  • ಮೆಘರಾಜ ಹೊಟೇಲ್, ವಿಜಾಪುರ
  • ಸಾಗರ ಹೊಟೇಲ್, ವಿಜಾಪುರ
  • ಪಾರೆಖಾ ಹೊಟೇಲ್, ವಿಜಾಪುರ
  • ಬ್ಲೂ ಡಾಯಮಂಡ್ ಹೊಟೇಲ್, ವಿಜಾಪುರ
  • ಬಸವ ರೆಸಿಡೆನ್ಸಿ ಹೊಟೇಲ್, ವಿಜಾಪುರ
  • ಗೊಲ್ಡನ್ ಹೈಟ್ಸ್ ಹೊಟೇಲ್, ವಿಜಾಪುರ
  • ಸನ್ಮಾನ ಹೊಟೇಲ್, ವಿಜಾಪುರ
  • ಮೈಸೂರ ಹೊಟೇಲ್, ವಿಜಾಪುರ
  • ಗೊದಾವರಿ ಹೊಟೇಲ್, ವಿಜಾಪುರ
  • ರತ್ನಾ ಪ್ಯಾಲೇಸ ಹೊಟೇಲ್, ವಿಜಾಪುರ
  • ಯಾತ್ರಿ ನಿವಾಸ ಹೊಟೇಲ್, ವಿಜಾಪುರ
  • ಮಧುವನ ಹೊಟೇಲ್, ವಿಜಾಪುರ
  • ಟೌನ ಪ್ಯಾಲೇಸ ಹೊಟೇಲ್, ವಿಜಾಪುರ
  • ಕೊಹಿನೂರ ಹೊಟೇಲ್, ವಿಜಾಪುರ
  • ರಾಯಲ್ ಹೊಟೇಲ್, ವಿಜಾಪುರ
  • ಲಲಿತ ಹೊಟೇಲ್, ವಿಜಾಪುರ
  • ಹೆರಿಟೇಜ ಹೊಟೇಲ್, ವಿಜಾಪುರ
  • ಟೂರಿಸ್ಟ ಹೊಟೇಲ್, ವಿಜಾಪುರ
  • ಮೋಯಿನ್ ಹೊಟೇಲ್, ವಿಜಾಪುರ

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ವಿಜಾಪುರ ಜಿಲ್ಲೆಯ ಅಧಿಕೃತ ಸರ್ಕಾರಿ ತಾಣ Archived 2019-05-14 ವೇಬ್ಯಾಕ್ ಮೆಷಿನ್ ನಲ್ಲಿ.

ವಿಜಾಪುರ ಜಿಲ್ಲೆಯ ಸಂಪೂರ್ಣ ಮಾಹಿತಿ

ಬಿಜಾಪುರ ನಗರಸಭೆ, ವಿಜಾಪುರ Archived 2005-10-30 ವೇಬ್ಯಾಕ್ ಮೆಷಿನ್ ನಲ್ಲಿ.

ಬಿ ಎಲ್ ಡಿ ಇ ವಿಶ್ವವಿದ್ಯಾಲಯ, ವಿಜಾಪುರ Archived 2011-07-09 ವೇಬ್ಯಾಕ್ ಮೆಷಿನ್ ನಲ್ಲಿ.

ಬಿ ಎಲ್ ಡಿ ಇ ಸಂಸ್ಥೆಯ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ವಿಜಾಪುರ Archived 2012-06-21 ವೇಬ್ಯಾಕ್ ಮೆಷಿನ್ ನಲ್ಲಿ.

ವಿಜಾಪುರ ಜಿಲ್ಲೆಯ ನಕಾಶೆ