ಲಿಂಗವು ದೇವಾಲಯಗಳಲ್ಲಿ ಪೂಜೆಗಾಗಿ ಬಳಸಲಾಗುವ ಹಿಂದೂ ದೇವತೆ ಶಿವನ ಒಂದು ನಿರೂಪಣೆ. ಸಾಂಪ್ರದಾಯಿಕ ಭಾರತೀಯ ಸಮಾಜದಲ್ಲಿ, ಲಿಂಗವನ್ನು ಹೆಚ್ಚಾಗಿ ದೇವರ ಶಕ್ತಿ ಹಾಗು ಸಾಮರ್ಥ್ಯದ ಸಂಕೇತವಾಗಿ ಕಾಣಲಾಗುತ್ತದೆ. ಲಿಂಗವನ್ನು ಹಲವುವೇಳೆ ದೇವತೆ ಅಥವಾ ಶಕ್ತಿಯ ಸಂಕೇತವಾದ ಯೋನಿಯ ಜೊತೆಗೆ ಚಿತ್ರಿಸಲಾಗುತ್ತದೆ.