ರಾಮ ಮಂದಿರ, ಅಯೋಧ್ಯೆ

ವಿಕಿಪೀಡಿಯ ಇಂದ
Jump to navigation Jump to search
ರಾಮಮಂದಿರ ಅಯೋಧ್ಯೆ.
Shri Ram in Ram Mandir Ayodhya (Illustration).jpg
ರಾಮಮಂದಿರದ ಪ್ರಾರೂಪ
ಹೆಸರು: ರಾಮಮಂದಿರ ಅಯೋಧ್ಯೆ.
ಪ್ರಮುಖ ದೇವತೆ: ರಾಮಲಲ್ಲಾ(ಬಾಲ ರಾಮ)
ವಾಸ್ತುಶಿಲ್ಪ: ದೇವಾಲಯ

ಅಯೋಧ್ಯೆಯ ರಾಮಮಂದಿರ ಹಿಂದೂ ದೇವಾಲಯವಾಗಿದ್ದು, ಇದನ್ನು ಭಾರತದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಜನ್ಮಭೂಮಿಯ ಪವಿತ್ರ ಯಾತ್ರಾ ಸ್ಥಳದಲ್ಲಿದೆ..[೧] ೦೬-೦೮-೨೦೧೮ ರಂದು ಭಾರತಪ್ರಧಾನಿ ನರೇಂದ್ರಮೋದಿ ದೇವಾಲಯದ ಶಿಲಾನ್ಯಾಸವನ್ನು ನೆರವೇರಿಸಿದರು. ಹಿಂದೂಗಳು ಈ ಸ್ಥಳವು ರಾಮನ ಜನ್ಮಸ್ಥಳವೆಂದು ನಂಬುತ್ತಾರೆ, ರಾಮ ವಿಷ್ಣುವಿನ ಏಳನೇ ಅವತಾರ ಎಂದು ಪೂಜಿಸುತ್ತಾರೆ. ೧೫೨೮ ರಲ್ಲಿ ಮೊಘಲರು ರಾಮಮಂದಿರವನ್ನು ಕೆಡವಿ ಬಾಬರಿ ಮಸೀದಿಯನ್ನು ನಿರ್ಮಿಸಿದರು. ರಾಮಜನ್ಮಭೂಮಿಯ ಸ್ಥಳದ ಬಗೆಗೆ ಅನೇಕ ವಿವಾದಗಳು ನಡೆದವು. ೧೯೯೨ ರಲ್ಲಿ ಕರಸೇವಕರ ಗುಂಪು ಮಸೀದಿಯನ್ನು ಕೆಡವಿತು.

ಈ ದೇವಾಲಯದ ನಿರ್ಮಾಣದ ಹೊಣೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ್ದು . ಗುಜರಾತ್‌ನ ಸೋಮಪುರ ಕುಟುಂಬ ಈ ದೇವಾಲಯವನ್ನು ವಿನ್ಯಾಸಗೊಳಿಸಿದೆ.

ಇತಿಹಾಸ[ಬದಲಾಯಿಸಿ]

೧೯೯೨ ರಲ್ಲಿ ಕೆಡವಲ್ಪಟ್ಟ ಬಾಬ್ರಿ ಮಸೀದಿ

ವಿಷ್ಣು ದೇವರ ಅವತಾರವೆಂದು ಪರಿಗಣಿಸಲ್ಪಟ್ಟ ರಾಮನು ವ್ಯಾಪಕವಾಗಿ ಪೂಜಿಸಲ್ಪಡುವ ಹಿಂದೂ ದೇವತೆ . ಪ್ರಾಚೀನ ಭಾರತೀಯ ಮಹಾಕಾವ್ಯವಾದ ರಾಮಾಯಣದ ಪ್ರಕಾರ, ರಾಮನು ಅಯೋಧ್ಯೆಯಲ್ಲಿ ಜನಿಸಿದನು. ಇದನ್ನು ರಾಮ್ ಜನ್ಮಭೂಮಿ ಅಥವಾ ರಾಮ್ ಲಲ್ಲಾ (ರಾಮನ ಬಾಲರೂಪ) ಅವರ ಜನ್ಮಸ್ಥಳ ಎಂದು ಕರೆಯಲಾಯಿತು. ೧೫ ನೇ ಶತಮಾನದಲ್ಲಿ ಮೊಘಲರು ರಾಮ್ ಜನ್ಮಭೂಮಿಯಲ್ಲಿ ಬಾಬರಿ ಮಸೀದಿ ಎಂಬ ಮಸೀದಿಯನ್ನು ನಿರ್ಮಿಸಿದರು. ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ ನಂತರ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂಗಳು ಹೋರಾಟವನ್ನು ಆರಂಭಿಸಿದರು. ೧೮೫೦ ರ ದಶಕದಲ್ಲಿ ಪುನಃ ಹಿಂಸಾತ್ಮಕ ವಿವಾದ ಉಂಟಾಯಿತು[೨].


ವಿಶ್ವಹಿಂದೂಪರಿಷತ್ ರಾಮಜನ್ಮಭೂಮಿಯ ಶಿಲಾನ್ಯಾಸವನ್ನು ನಡೆಸಲು ೧೯೮೦ ರ ದಶಕದಲ್ಲಿ ಪ್ರಯತ್ನಗಳನ್ನು ಆರಂಭಿಸಿತು. ಅಲಹಾಬಾದ್ ಹೈಕೋರ್ಟ್ ನ ಲಖನೌ ಪೀಠ ಶಿಲಾನ್ಯಾಸಕ್ಕೆ ತಡೆಯಾಜ್ಞೆಯನ್ನು ನೀಡಿತು. ನಂತರ ವಿವಾದಿತವಲ್ಲದ ಜಾಗದಲ್ಲಿ ಶಿಲಾನ್ಯಾಸ ನಡೆಸಲು ಅನುಮತಿ ನೀಡಲಾಯಿತು. ಆಗಿನ ಗೃಹಸಚಿವ ಬೂಟಾಸಿಂಗ್ ವಿ.ಹೆಚ್ ಪಿ ನಾಯಕ ಅಶೋಕ ಸಿಂಘಲ್ ರಿಗೆ ಔಪಚಾರಿಕವಾಗಿ ಅನುಮತಿ ನೀಡಿದರು. ನವಂಬರ್ ೯ ರ೯೮೯ ರಂದು ವಿ.ಹೆಚ್.ಪಿ ನಾಯಕರು ಹಾಗೂ ಸಾಧುಗಳ ಗುಂಪು ಹಳ್ಳ ತೆಗೆದು ಅಡಿಪಾಯ ಹಾಕಿತು. ಗರ್ಭಗುಡಿ ವಿವಾದಿತ ಸ್ಥಳದಲ್ಲಿತ್ತು.[೩] ಬಿಹಾರ ಮೂಲದ ದಲಿತ ನಾಯಕ ಶಿಲಾನ್ಯಾಸ ಮಾಡಿದ ಮೊದಲ ಜನರಲ್ಲಿ ಒಬ್ಬರಾದರು[೪].

ಕೆ. ಪರಾಶರನ್

೬ ಡಿಸೆಂಬರ್ ೧೯೯೨ ರಂದು ವಿಶ್ವ ಹಿಂದೂ ಪರಿಷತ್ ಮತ್ತು ಭಾರತೀಯ ಜನತಾ ಪಕ್ಷವು ಕರಸೇವಕರು ಎಂದು ಕರೆಯಲ್ಪಡುವ ೧೫೦೦೦೦ ಸ್ವಯಂಸೇವಕರನ್ನು ಒಳಗೊಂಡ ಸ್ಥಳದಲ್ಲಿ ಶೋಭಾಯಾತ್ರೆ ಆಯೋಜಿಸಿತು. ಶೋಭಾಯಾತ್ರೆ ಹಿಂಸಾತ್ಮಕವಾಯಿತು, ಕರಸೇವಕರು ಭದ್ರತಾ ಪಡೆಗಳನ್ನೂ ಲೆಕ್ಕಿಸದೆ ಬಾಬ್ರಿ ಮಸೀದಿಯನ್ನು ಉರುಳಿಸಿದರು.[೫][೬][೭] ತದನಂತರ ಭಾರತದ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಹಲವಾರು ತಿಂಗಳುಗಳ ಗಲಭೆಯಾಯಿತು, ಕನಿಷ್ಠ ೨೦೦೦ ಜನ ತಮ್ಮ ಪ್ರಾಣಗಳನ್ನು ಕಳೆದುಕೊಂಡರು.[೮]

ಮುಂದಿನ ದಿನಗಳಲ್ಲಿ ವಿವಾದಾತ್ಮಕ ಭೂಮಿಯ ಕುರಿತಾಗಿ ಸುದೀರ್ಘ ಕಾನೂನು ವಿವಾದಗಳು ನಡೆದವು. ದೇವಾಲಯದ ದೇವತೆಯಾದ ರಾಮ್ ಲಲ್ಲಾ ಹೆಸರಿನಲ್ಲಿ 1989 ರಲ್ಲಿ ದಾವೆ ಹೂಡಲಾಗಿತ್ತು. ಹಿರಿಯ ವಿಎಚ್‌ಪಿ ನಾಯಕ ತ್ರಿಲೋಕಿ ನಾಥ್ ಪಾಂಡೆ ರಾಮಲಲ್ಲಾನ ಪ್ರತಿನಿಧಿಯಾಗಿದ್ದರು. ಕೆ. ಪರಾಶರನ್ ರಾಮಲಲ್ಲಾನ ಪರವಾಗಿ ವಾದ ಮಂಡಿಸಿದವರಲ್ಲಿ ಪ್ರಮುಖರು. ಅಯೋಧ್ಯೆ ವಿವಾದದ ಕುರಿತು ೨೦೧೯ ನವಂಬರ್ ೯ ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ವಿವಾದಿತ ಭೂಮಿಯನ್ನು ಸರ್ಕಾರ ರಚಿಸಿದ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಲು ನಿರ್ಧರಿಸಲಾಯಿತು[೨]. ೨೦೨೦ ರ ಫೆಬ್ರವರಿ ೫ ರಂದು ಪ್ರಧಾನಮಂತ್ರಿ ಸಚಿವಾಲಯವು ದೇವಾಲಯವನ್ನು ನಿರ್ಮಿಸುವ ಯೋಜನೆಯನ್ನು ಅಂಗೀಕರಿಸಿದೆ ಎಂದು ಸಂಸತ್ತಿನಲ್ಲಿ ಘೋಷಿಸಲಾಯಿತು[೯].

ಶಿಲ್ಪಕಲೆ[ಬದಲಾಯಿಸಿ]

ರಾಮ್ ದೇವಾಲಯದ ಮೂಲ ವಿನ್ಯಾಸವನ್ನು ೧೯೮೮ ರಲ್ಲಿ ಅಹಮದಾಬಾದ್‌ನ ಸೋಂಪುರ ಕುಟುಂಬ ಸಿದ್ಧಪಡಿಸಿತು[೧೦]. ಸೋಂಪುರ ಕುಟುಂಬಸ್ಥರು ಕನಿಷ್ಠ 15 ತಲೆಮಾರುಗಳಿಂದ ವಿಶ್ವದಾದ್ಯಂತ 100 ಕ್ಕೂ ಹೆಚ್ಚು ದೇವಾಲಯಗಳ ಶಿಲ್ಪಿಗಳು.[೧೧]. ಮೂಲ ವಿನ್ಯಾಸದಿಂದ ಕೆಲವು ಬದಲಾವಣೆಗಳೊಂದಿಗೆ ರಾಮ್ ದೇವಸ್ಥಾನಕ್ಕೆ ಹೊಸ ವಿನ್ಯಾಸವನ್ನು 2020 ರಲ್ಲಿ ಸೋಂಪುರರು ಸಿದ್ಧಪಡಿಸಿದರು. ಈ ದೇವಾಲಯವು ೨೩೫ ಅಡಿ ಅಗಲ, ೩೬೦ ಅಡಿ ಉದ್ದ ಮತ್ತು ೧೬೧ ಅಡಿ ಎತ್ತರವನ್ನು ಹೊಂದಿರುತ್ತದೆ.[೧೨][೧೧]. ದೇವಾಲಯದ ಮುಖ್ಯ ವಾಸ್ತುಶಿಲ್ಪಿಗಳು ಚಂದ್ರಕಾಂತ್ ಸೋಂಪೂರ ಮತ್ತು ಅವರ ಇಬ್ಬರು ಪುತ್ರರಾದ ನಿಖಿಲ್ ಸೋಂಪೂರ ಮತ್ತು ಆಶಿಶ್ ಸೋಂಪೂರ. ಸೊಂಪುರ ಕುಟುಂಬವು ಭಾರತೀಯ ದೇವಾಲಯದ ವಾಸ್ತುಶಿಲ್ಪಗಳಲ್ಲಿ ಒಂದಾದ 'ನಾಗರ' ಶೈಲಿಯ ವಾಸ್ತುಶಿಲ್ಪವನ್ನು ಅನುಸರಿಸಿ ರಾಮ್ ದೇವಾಲಯವನ್ನು ವಿನ್ಯಾಸಗೊಳಿಸಿದೆ[೧೧].

ದೇವಾಲಯ ಸಂಕೀರ್ಣದಲ್ಲಿ ಪ್ರಾರ್ಥನಾ ಮಂದಿರ, "ರಾಮಕಥಾ ಕುಂಜ್ (ಉಪನ್ಯಾಸ ಭವನ), ವೈದಿಕ್ ಪಾಠಶಾಲಾ (ಶೈಕ್ಷಣಿಕ ಸೌಲಭ್ಯ), ಸಂತ ನಿವಾಸ್ (ಸಂತರ ನಿವಾಸ) ಮತ್ತು ಯಾತ್ರಿ ನಿವಾಸ್ (ಸಂದರ್ಶಕರಿಗೆ ವಸತಿನಿಲಯ) ಮತ್ತು ಮ್ಯೂಸಿಯಂನಂತಹ ಇತರ ಸೌಲಭ್ಯಗಳು ಇರಲಿವೆ[೧೩]. ದೇವಾಲಯ ಸಂಕೀರ್ಣ ಪೂರ್ಣಗೊಂಡ ನಂತರ ವಿಶ್ವದ ಮೂರನೇ ಅತಿದೊಡ್ಡ ಹಿಂದೂ ದೇವಾಲಯವಾಗಲಿದೆ[೧೨] . ಪ್ರಸ್ತಾವಿತ ದೇವಾಲಯದ ಮಾದರಿಯನ್ನು ೨೦೧೯ ರಲ್ಲಿ ಪ್ರಯಾಗ್ ಕುಂಭ ಮೇಳದಲ್ಲಿ ಪ್ರದರ್ಶಿಸಲಾಯಿತು[೧೪].

ನಿರ್ಮಾಣ[ಬದಲಾಯಿಸಿ]

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾರ್ಚ್ ೨೦೨೦ ರಲ್ಲಿ ರಾಮ್ ದೇವಾಲಯದ ಮೊದಲ ಹಂತದ ನಿರ್ಮಾಣವನ್ನು ಪ್ರಾರಂಭಿಸಿತು[೧೫][೧೬]. ಆದಾಗ್ಯೂ, ಭಾರತದಲ್ಲಿ ಕರೋನಾ ಸಾಂಕ್ರಾಮಿಕ ಲಾಕ್‌ಡೌನ್ ಮತ್ತು ೨೦೨೦ ರ ಚೀನಾ-ಭಾರತ ಮಾತಿನ ಚಕಮಕಿ ನಿರ್ಮಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು[೧೭][೧೮][೧೯]. ನಿರ್ಮಾಣ ಸ್ಥಳದ ನೆಲಮಟ್ಟದಲ್ಲಿ ಮತ್ತು ಉತ್ಖನನದ ಸಮಯದಲ್ಲಿ ನೆಲದ ಅಡಿಭಾಗದಲ್ಲಿ ಶಿವಲಿಂಗ, ಕಂಬಗಳು ಮತ್ತು ಮುರಿದ ವಿಗ್ರಹಗಳು ಕಂಡುಬಂದವು[೨೦] [೨೧]. ಮಾರ್ಚ್ ೨೫, ೨೦೨೦ ರಂದು ರಾಮವಿಗ್ರಹವನ್ನು ಉತ್ತರ ಪ್ರದೇಶಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ತಾತ್ಕಾಲಿಕ ಸ್ಥಳಕ್ಕೆ ಸ್ಥಳಾಂತರಿಸಲಾಯಿತು[೨೨].

ರಾಮಮಂದಿರದ ನಿರ್ಮಾಣದ ಅಂಗವಾಗಿ ವಿಶ್ವ ಹಿಂದೂ ಪರಿಷತ್ ವಿಜಯ ಮಹಾಮಂತ್ರ ಜಪಾನುಷ್ಠಾನವನ್ನು ಏರ್ಪಡಿಸಿತು. ರಾಮಭಕ್ತರು ಶ್ರೀ ರಾಮ್, ಜೈ ರಾಮ್, ಜೈ ಜೈ ರಾಮ್, ಎಂದು ೨೦೨೦ ರ ಏಪ್ರಿಲ್ ೬ ರಂದು ಜಪಿಸುತ್ತಿದ್ದರು. ದೇವಾಲಯದ ನಿರ್ಮಾಣಕಾಲದಲ್ಲಿನ ಸಂಕಷ್ಟಗಳ ನಿವಾರಣೆಗಾಗಿ ಜಪಾನುಷ್ಠಾನವನ್ನು ಆಯೋಜಿಸಲಾಗಿತ್ತು. ಲಾರ್ಸೆನ್ ಆ್ಯಂಡ್ ಟೌಬ್ರೊ ಸಂಸ್ಥೆ ದೇವಾಲಯನಿರ್ಮಾಣದ ಗುತ್ತಿಗೆ ತೆಗೆದುಕೊಂಡಿದೆ.

ಶಿಲಾನ್ಯಾಸ[ಬದಲಾಯಿಸಿ]

ಭೂಮಿಪೂಜೆ ನಡೆಸುತ್ತಿರುವ ನರೇಂದ್ರ ಮೋದಿ

೫ ಆಗಸ್ಟ್ ೨೦೨೦ ರಂದು ಶಿಲಾನ್ಯಾಸದ ನಂತರ ಅಧಿಕೃತವಾಗಿ ದೇವಾಲಯದ ನಿರ್ಮಾಣವು ಮತ್ತೆ ಪ್ರಾರಂಭವಾಯಿತು. ಮೂರು ದಿನಗಳ ಕಾಲ ಸುದೀರ್ಘವಾದ ವೈದಿಕ ಆಚರಣೆಗಳನ್ನು ನಡೆಸಿ ಶಿಲಾನ್ಯಾಸ ನಡೆಸಲಾಯಿತು. ಆಗಸ್ಟ್ ೪ ರಂದು ರಾಮಾರ್ಚನ ಪೂಜೆಯನ್ನು ನಡೆಸಿ ಎಲ್ಲಾ ದೇವತೆಗಳನ್ನೂ ಮಂದಿರಕ್ಕೆ ಆಹ್ವಾನಿಸಲಾಯಿತು. ಆಗಸ್ಟ್ ೫ ರಂದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅಡಿಪಾಯದಲ್ಲಿ ೪೦ ಕೆ.ಜಿ ಭಾರದ ಬೆಳ್ಳಿಯ ಇಟ್ಟಿಗೆಯನ್ನು ಸ್ಥಾಪಿಸಿದರು[೨೩].

ಭೂಮಿ-ಪೂಜೆಯ ಸಂದರ್ಭದಲ್ಲಿ ಭಾರತದ ವಿವಿಧ ಮೂಲೆಗಳಿಂದ ಪವಿತ್ರವಾದ ಮಣ್ಣು ಹಾಗು ನೀರನ್ನು ಸಂಗ್ರಹಿಸಲಾಗಿತ್ತು.ತ್ರಿವೇಣಿ ಸಂಗಮ ,ತಲಕಾವೇರಿ, ಕಾಮಾಕ್ಯ ದೇವಾಲಯ, ಜೈನ ಹಾಗೂ ಸಿಖ್ ಮಂದಿರಗಳೇ ಮುಂತಾದ ಹಲವಾರು ಸ್ಥಳಗಳಿಂದ ಪವಿತ್ರ ಮಣ್ಣು ಹಾಗೂ ನೀರನ್ನು ತರಲಾಗಿತ್ತು.[೨೪][೨೫][೨೬]. ಪಾಕಿಸ್ಥಾನದ ಶಾರದಾ ಪೀಠದಿಂದಲೂ ನೀರನ್ನು ತರಲಾಗಿತ್ತು. ಶಿಲಾನ್ಯಾಸದ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್ ಕೆನಡಾ ಮುಂತಾದ ದೇಶಗಳಲ್ಲಿನ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನಡೆದವು. ಹನುಮಾನ್ ಗಡೀ ಮಂದಿರದಿಂದ ೭ ಕಿಮೀ ವ್ಯಾಪ್ತಿಯಲ್ಲಿನ ಎಲ್ಲಾ ದೇವಾಲಯಗಳಲ್ಲೂ ವಿಶೇಷವಾಗಿ ದೀಪಗಳನ್ನು ಬೆಳಗಿಸಲಾಯಿತು. ರಾಮನನ್ನು ತಮ್ಮ ಪೂರ್ವಜರೆಂದು ನಂಬುವ ಅಯೋಧ್ಯೆಯ ಮುಸ್ಲಿಮರು ಕೂಡಾ ಶಿಲಾನ್ಯಾಸದಲ್ಲಿ ಭಾಗವಹಿಸಿದರು. ಎಲ್ಲಾ ಪಂಥಗಳ ಧಾರ್ಮಿಕ ಮುಖಂಡರನ್ನು ಶಿಲಾನ್ಯಾಸಕ್ಕೆ ಆಹ್ವಾನಿಸಲಾಗಿತ್ತು[೨೭][೨೭]

ಶಿಲಾನ್ಯಾಸ ಸಭೆ[ಬದಲಾಯಿಸಿ]

ಶಿಲಾನ್ಯಾಸದ ಅನಂತರ ಸಭಾ ಕಾರ್ಯಕ್ರಮ

ನರೇಂದ್ರ ಮೋದಿ ಹನುಮಾನ್ ಗಢಿ ಮಂದಿರದಲ್ಲಿ ಪೂಜೆ ನೆರವೇರಿಸಿ ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರಿಸಿದ ನಂತರ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು[೨೮]. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರ್. ಎಸ್. ಎಸ್ ಸರಸಂಘಚಾಲಕ ಮೋಹನ್ ಭಾಗವತ್, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ವತ್ಯಗೋಪಾಲ್ ದಾಸ್ ಮುಂತಾದವರು ಉಪಸ್ಥಿತರಿದ್ದರು. ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ ಜೈ ಸಿಯಾ ರಾಮ್ ಎಂಬ ಘೋಷಣೆಯೊಂದಿಗೆ ಭಾಷಣವನ್ನಾರಂಭಿಸಿದರು. ರಾಮನಾಮದ ಉದ್ಘೋಷ ಅಯೋಧ್ಯೆಯಲ್ಲಿ ಮಾತ್ರವಲ್ಲದೆ ಇಂದು ಪ್ರಪಂಚದಾದ್ಯಂತ ಪ್ರತಿಧ್ವನಿಸುತ್ತಿದೆ", "ರಾಮ್ ಮಂದಿರ ನಮ್ಮ ಸಂಪ್ರದಾಯಗಳ ಆಧುನಿಕ ಸಂಕೇತವಾಗಲಿದೆ" ಎಂದು ಅವರು ಹೇಳಿದರು.[೨೯][೩೦][೩೧] ದೇವಾಲಯವನ್ನು ಪ್ರತಿಷ್ಠಾಪಿಸಲು ಕೊಡುಗೆ ನೀಡಿದ ಎಲ್ ಕೆ ಅಡ್ವಾಣಿ ಅವರನ್ನು ಮೋಹನ್ ಭಾಗವತ್ ನೆನಪಿಸಿಕೊಂಡರು[೩೨] ಕಾರ್ಯಕ್ರಮದ ಅಂಗವಾಗಿ ಪ್ರಧಾನಮಂತ್ರಿ ಪಾರಿಜಾತ ಸಸಿಯನ್ನೂ ನೆಟ್ಟರು[೩೩]. ಕರೋನಾ ಕಾರಣದಿಂದಾಗಿ ದೇವಾಲಯದ ಆವರಣದಲ್ಲಿ ೧೭೫ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು[೨೮].

ದೇವತೆ[ಬದಲಾಯಿಸಿ]

ವಿಷ್ಣುವಿನ ಅವತಾರವಾದ ರಾಮನ ಶಿಶು ರೂಪವಾದ ರಾಮ್ ಲಲ್ಲಾ ರಾಮಮಂದಿರದ ಪ್ರಧಾನ ದೇವತೆ. ರಾಮಲಲ್ಲಾನ ಉಡುಪನ್ನು ದರ್ಜಿಗಳಾದ ಭಗವತ್ ಪ್ರಸಾದ್ ಮತ್ತು ಶಂಕರ್ ಲಾಲ್ ಹೊಲಿಯಲಿದ್ದಾರೆ; ಶಂಕರ್ ಲಾಲ್ ರಾಮನ ವಿಗ್ರಹಕ್ಕೆ ನಾಲ್ಕನೇ ತಲೆಮಾರಿನ ದರ್ಜಿ[೩೪][೩೫].

ಉಲ್ಲೇಖ[ಬದಲಾಯಿಸಿ]

 1. Bajpai, Namita (7 May 2020). "Land levelling for Ayodhya Ram temple soon, says mandir trust after video conference". The New Indian Express. Retrieved 8 May 2020.
 2. ೨.೦ ೨.೧ Deepalakshmi, K. (8 November 2019). "Ramjanmabhoomi-Babri Masjid title dispute: The story so far". The Hindu. ISSN 0971-751X. Retrieved 25 July 2020.
 3. Mathew, Liz (4 August 2020). "Explained: The Ayodhya Ram temple journey, from November 9, 1989 to August 5, 2020". The Indian Express (in ಇಂಗ್ಲಿಷ್). Retrieved 4 August 2020.
 4. "Ministry of Home Affairs notifies temple trust; RSS, VHP members kept out". The Hindu. 5 February 2020. Retrieved 31 July 2020.
 5. Tully, Mark (5 December 2002). "Tearing down the Babri Masjid". BBC News. Retrieved 29 September 2010.
 6. Guha, Ramachandra (2007). India After Gandhi. MacMillan. pp. 582–598.
 7. "Report: Sequence of events on December 6". Ndtv.com. Retrieved 20 June 2012.
 8. Guha, Ramachandra (2007). India After Gandhi. MacMillan. pp. 633–659.
 9. Phukan, Sandeep (5 February 2020). "PM announces Cabinet nod for Ram temple in Ayodhya". The Hindu (in ಇಂಗ್ಲಿಷ್). ISSN 0971-751X. Retrieved 9 May 2020.
 10. Pandey, Alok (23 July 2020). "Ayodhya's Ram Temple Will Be 161-Foot Tall, An Increase Of 20 Feet". NDTV. Retrieved 23 July 2020.
 11. ೧೧.೦ ೧೧.೧ ೧೧.೨ Sampal, Rahul (28 July 2020). "Somnath, Akshardham & now Ram Mandir – Gujarat family designing temples for 15 generations". ThePrint (in ಇಂಗ್ಲಿಷ್). Retrieved 29 July 2020.
 12. ೧೨.೦ ೧೨.೧ Bajpai, Namita (21 July 2020). "280-feet wide, 300-feet long and 161-feet tall: Ayodhya Ram temple complex to be world's third-largest Hindu shrine". The New Indian Express. Retrieved 23 July 2020.
 13. "Grand Ram temple in Ayodhya before 2022". The New Indian Express. IANS. 11 November 2019. Retrieved 26 May 2020.CS1 maint: others (link)
 14. India, Press Trust of (6 February 2020). "Ayodhya Ram Mandir construction to begin in April this year: Trustee". Business Standard India. Retrieved 9 May 2020.
 15. Sharma, Pratul (23 March 2020). "1st phase of Ram temple construction begins in Ayodhya". The Week (in ಇಂಗ್ಲಿಷ್). Retrieved 9 May 2020.
 16. "Ram Mandir Construction: राम मंदिर निर्मितीच्या पहिल्या टप्प्यातील काम सुरू" [Ram Mandir Construction: Ram mandir Foundation Starts First Phase of Work]. Times Now Marathi (in ಮರಾಠಿ). 8 May 2020. Retrieved 8 May 2020.
 17. Bajpai, Namita (9 April 2020). "Ram Mandir plans continue during COVID-19 lockdown, temple trust releases its official Logo". The New Indian Express. Retrieved 9 May 2020.
 18. "COVID-19: लॉकडाउन खत्म होते ही अयोध्या में शुरू होगा भव्य राम मंदिर निर्माण" [COVID-19: The Ram Temple construction will begin in Ayodhya after the end of lockdown]. News18 India (in ಹಿಂದಿ). 1 January 1970. Retrieved 8 May 2020.
 19. "Indo-China border standoff: Plan to start construction of Ram Temple in Ayodhya suspended". The Economic Times. Retrieved 25 July 2020.
 20. "Shivling, carvings on sandstone found at Ram Janmabhoomi site: Temple trust". The Times of India. ANI. 21 May 2020. Retrieved 27 May 2020.
 21. Rashid, Omar (25 March 2020). "U.P. Chief Minister Adityanath shifts Ram idol amid lockdown". The Hindu (in ಇಂಗ್ಲಿಷ್). ISSN 0971-751X. Retrieved 24 July 2020.
 22. "VHP to organise 'Vijay Mahamantra Jaap Anushthan'". Outlook. IANS. 4 April 2020. Retrieved 2 August 2020.
 23. "'Ramarchan puja' begins ahead of 'bhoomi pujan' in Ayodhya". DNA India (in ಇಂಗ್ಲಿಷ್). 4 August 2020. Retrieved 5 August 2020.
 24. Mehta, Kriti (22 July 2020). "Ram temple bhumi pujan: Sangam soil, water to be taken to Ayodhya; proceedings to be telecast live". The Times Of India.
 25. "Water, soil from Kodagu sent to Ayodhya". Deccan Herald. 24 July 2020.
 26. "Sacred Soil of Kamakhya Temple taken for Construction of Ram Mandir". Guwahati Plus (in ಇಂಗ್ಲಿಷ್). 28 July 2020. Retrieved 28 July 2020.
 27. ೨೭.೦ ೨೭.೧ "Muslim devotees of Lord Ram gear up to celebrate temple 'bhoomi pujan' in Ayodhya". The Hindu (in ಇಂಗ್ಲಿಷ್). PTI. 27 July 2020. ISSN 0971-751X. Retrieved 2 August 2020.CS1 maint: others (link)
 28. ೨೮.೦ ೨೮.೧ Ray, Meenakshi, ed. (5 August 2020). "After bhoomi poojan at Ayodhya, RSS' Mohan Bhagwat says we have fulfilled our resolve". Hindustan Times (in ಇಂಗ್ಲಿಷ್). Retrieved 5 August 2020.
 29. "From Laos to Lanka, Ram is everywhere: PM Modi in Ayodhya". India Today (in ಇಂಗ್ಲಿಷ್). 5 August 2020. Retrieved 5 August 2020.
 30. "'Jai Siyaram' call resonating throughout the world: PM Narendra Modi". The Times of India (in ಇಂಗ್ಲಿಷ್). 5 August 2020. Retrieved 5 August 2020.
 31. "Long wait ends today: PM chants 'Jai Siya Ram' in Ayodhya". Punjab News Express. 5 August 2020. Retrieved 5 August 2020.
 32. Tripathi, Ashutosh, ed. (5 August 2020). "At Ayodhya Ram temple event, PM Modi reiterates mantra to fight coronavirus". Hindustan Times (in ಇಂಗ್ಲಿಷ್). Retrieved 5 August 2020.
 33. Jain, Sanya (5 August 2020). "Watch: PM Narendra Modi Plants Parijat Sapling At Ram Temple". NDTV.com. Retrieved 5 August 2020.
 34. "अयोध्या: 5 अगस्त को इस टेलर का सिला पोशाक पहनेंगे रामलला" [On 5 August Ram will wear clothes stitched by this tailor]. News18 India (in ಹಿಂದಿ). 27 July 2020. Retrieved 27 July 2020.
 35. "What the idol of Ram Lalla will don for the Ayodhya temple 'bhoomi pujan' - Divine Couture". The Economic Times. 4 August 2020. Retrieved 4 August 2020.