ವಿಷಯಕ್ಕೆ ಹೋಗು

ರಬ್ಬರು ಬೀಜದ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರಬ್ಬರುಬೀಜದೆಣ್ಣೆ ಇಂದ ಪುನರ್ನಿರ್ದೇಶಿತ)
ರಬ್ಬರು ಮರದ ತೊಗಟೆ
ಎಲೆ, ಪುಷ್ಪ ವಿನ್ಯಾಸ-ರೇಖಾಚಿತ್ರ ,ಕಾಯಿ
ರಬ್ಬರು ಬೀಜಗಳು

ರಬ್ಬರು ಬೀಜದಿಂದ ಎಣ್ಣೆಯನ್ನು ಸಂಗ್ರಹಿಸಲಾಗುತ್ತದೆ. ಆದರೆ ಈ ಎಣ್ಣೆಯನ್ನು ಅಡುಗೆಗೆ ಉಪಯೋಗಿಸಲು ಆಗುವುದಿಲ್ಲ. ಈ ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳಿಂದ, ಬೇರೆ ಬೇರೆ ರಾಸಾಯನಿಕ ಪದಾರ್ಥಗಳನ್ನು ತಯಾರಿಸಲಾಗುತ್ತದೆ

ರಬ್ಬರು ಮರ

[ಬದಲಾಯಿಸಿ]

ರಬ್ಬರು ಮರ ಯುಫೋರ್ಬಿಯೇಸಿ ಕುಟುಂಬಕ್ಕೆ ಸೇರಿದ ಮರ. ಮರದ ಸಸ್ಯ ಶಾಸ್ತ್ರೀಯ ಹೆಸರು 'ಹೆವಿಯೇ ಬ್ರಾಸಿಲೈನ್ನಿಸ್ '. ರಬ್ಬರು ಮರಗಳನ್ನು ಮರದಿಂದ ಸೋರುವ /ಸಿಗುವ ಲ್ಯಾಟೆಕ್ಸ್ಎನ್ನುವ ಬೆಳ್ಳಗೆ, ದಪ್ಪಗೆ ಇರುವ ಸಾರದ ಸಲುವಾಗಿ ಬೆಳೆಸುತ್ತಾರೆ.ಲ್ಯಾಟೆಕ್ಸಿನಿಂದ ನೈಸರ್ಗಿಕ ರಬ್ಬರನ್ನು ತಯಾರಿಸಲಾಗುತ್ತದೆ. ರಬ್ಬರು ಮರದಿಂದ ಲ್ಯಾಟೆಕ್ಸಿನಿಂದ ದೊರೆಯುವುದಲ್ಲದೆ, ದಾರು(wood), ಬೀಜ(seed),ಮತ್ತು ರಬ್ಬರು ತುಪ್ಪ(honey)ಗಳನ್ನು ಸಂಗ್ರಹಿಸಲಾಗುತ್ತದೆ. ಹೆವಿಯೇ ಬ್ರಾಸಿಲೈನ್ನಿಸ್ ಮರವನ್ನು ಲ್ಯಾಟೆಕ್ಸಿಗಾಗಿಯೇ ಹೆಚ್ಚಾಗಿ ಬೆಳೆಸುತ್ತಾರೆ. ಈ ಕೆಳಗಿನ ಮೂರು ತರದ ಮರಗಳನ್ನೂ ಲ್ಯಾಟೆಕ್ಸಿಗಾಗಿ ಬೆಳೆಸಲಾಗುತ್ತದೆ:

  1. Manihot glaziol(ಯುಫೋರ್ಬಿಯೇಸಿ)
  2. Parthenium argentatuam(ಕಾಂಪೊಸಿಟೇ)
  3. Taraxaum kakasaghyz(ಕಾಂಪೊಸಿಟೇ)

ರಬ್ಬರು ಮರದ ಆವಾಸ/ಮೂಲ

[ಬದಲಾಯಿಸಿ]

ರಬ್ಬರು ಮರ ನೇರವಾಗಿ ಬೆಳೆಯುವ ಬಹುವಾರ್ಷಿಕ ಮರ. ರಬ್ಬರು ಮರದ ಮೂಲ ಸ್ಥಾನ ದಕ್ಷಿಣ ಅಮೇರಿಕಾದ ಅಮೆಜಾನ್ ಪ್ರಾಂತ್ಯವಾಗಿದೆ. ಅಲ್ಲಿಂದಭಾರತ ದೇಶಕ್ಕೆ ತರಲಾಗಿದೆ. ಅಮೇಜಾನ್ನಿಂದ ಮೊದಲಾಗಿ ದಕ್ಷಿಣ ಏಷ್ಯಾದವರೆಗೂ ತನ್ನ ವ್ಯಾಪ್ತಿ ಹೊಂದಿದೆ. ಕ್ರಿಸ್ತಶಕ ೧೮೭೬ ಸಂವತ್ಸರದಲ್ಲಿ ಭಾರತ ದೇಶಕ್ಕೆ ರಬ್ಬರು ಗಿಡವನ್ನು ತಂದಿದ್ದಾರೆ. ಹೆನ್ರಿವಿಕ್ ಮೆನ್ ಅನ್ನುವವನು ಬ್ರೆಜಿಲ್ನಿಂದ ಇಂಡಿಯಾಗೆ ತಂದಿದ್ದಾನೆ. ಆಮೇಲೆ ರಬ್ಬರು ಮರ ಸಾಗುವಳಿ ಏಷ್ಯಾ, ಆಫ್ರಿಕಾ, ಮತ್ತು ಅಮೆರಿಕಾ ದೇಶಗಳಲ್ಲಿ ವ್ಯಾಪಿಸಿದೆ. ಭಾರತ ದೇಶದಲ್ಲಿ ಕೇರಳ ರಾಜ್ಯದೊಳಗೇ ಹೆಚ್ಚಾಗಿ ಸಾಗುವಳಿಯಲ್ಲಿದೆ. ಕೇರಳದಲ್ಲಿ ೪೫ ಸಾವಿರ ಹೆಕ್ಟೇರುಗಳಲ್ಲಿ ರಬ್ಬರು ತೋಟಗಳಿವೆ.

ರಬ್ಬರು ಬೀಜ

[ಬದಲಾಯಿಸಿ]

ರಬ್ಬರು ಬೀಜ ನೋಡುವುದಕ್ಕೆ ಔಡಲ(castor)ಬಿತ್ತನೆ ತರಹ ಇದ್ದು, ಪ್ರಮಾಣದಲ್ಲಿ ದೊಡ್ಡದಾಗಿರುತ್ತದೆ. ಬೀಜ ಅಂಡಾಕಾರ ರೂಪದಲ್ಲಿದ್ದು, ಉದ್ದ ೨೦.೦ಸೆಂ.ಮೀ ಗಳಷ್ಟು ಇರುತ್ತದೆ. ಒಂದು ಪಕ್ಕ ಸಾಗಿದ ಅಂಡಾಕಾರವಾಗಿದ್ದು, ಎರಡು ನೆಪಕ್ಕೆ ಒತ್ತಾಗಿ ಇರುತ್ತದೆ. ಬೀಜದ ಮೇಲೆ ಸುಲಭವಾಗಿ ಒಡೆಯುವ ಸಿಪ್ಪೆ ಇರುತ್ತದೆ. ಇದರ ಒಳಗೆ ಮೃದುವಾದ ಕಾಳು(kernel) ಇರುತ್ತದೆ. ಸಿಪ್ಪೆ ಮೇಲೆ ಮಚ್ಚೆಗಳಿರುತ್ತವೆ. ಕಾಳು ಎರಡು ಭಾಗಗಳಾಗಿದ್ದು, ಜೋಡಿಸಲಾಗಿರುತ್ತದೆ. ಬೀಜದಲ್ಲಿ ಸಿಪ್ಪೆ(hull)35.0%, ಕಾಳು ೪೫. ೦%,ಮತ್ತು ತೇವ ೨೫.೦% ವರೆಗೆ ಇರುತ್ತವೆ. ಕಾಳಿನಲ್ಲಿ ೩೦-೩೫% ಎಣ್ಣೆ ಇರುತ್ತದೆ. ಒಣಗಿಸಿದ ಬೀಜದಲ್ಲಿ ತೇವ ೬-೮%,ಎಣ್ಣೆ ೩೮-೪೫% ವರೆಗೆ ಇರುತ್ತವೆ. ಇಳುವರಿ ಒಂದು ಹೆಕ್ಟೇರುಗೆ ೧೦೦೦-೧೫೦೦ ಕೇ.ಜಿ. ಗಳು ಬರುತ್ತದೆ.

ಎಣ್ಣೆ ತೆಗೆಯುವ ವಿಧಾನ

[ಬದಲಾಯಿಸಿ]

ರಬ್ಬರು ಬೀಜದಿಂದ ಎಣ್ಣೆಯನ್ನು ಸಂಗ್ರಹಣೆ ಮಾಡುವುದಕ್ಕೆ ರೋಟರಿ ಗಾಣ ಮತ್ತು ಸ್ಕ್ರೂಪ್ರೆಸ್ಸುಗಳನ್ನು(ಎಕ್ಸುಪೆಲ್ಲರು) ಬಳಸುತ್ತಾರೆ. ಸಾಲ್ವೆಂಟ್ ಪ್ಲಾಂಟ್ಗಳಿಂದ ತೆಗೆಯುವ ಅವಕಾಶ ವಿದ್ದರೂ, ಇತ್ತೀಚೆಗೆ ಯಾರು ಅಂತಹ ಪ್ರಯತ್ನ ಮಾಡಿದ್ದು ಕಂಡಿಲ್ಲ. []. ರಬ್ಬರು ತೋಟಗಳು ಕೇರಳದಲ್ಲಿ ಇದ್ದರೂ ಬೀಜಗಳಿಂದ ಎಣ್ಣೆ ತೆಗೆಯುವ ಗಿರಣಿ/ಕಾರ್ಖಾನೆಗಳು ಪಕ್ಕದಲ್ಲಿರುವ ತಮಿಳುನಾಡುನಲ್ಲಿ ಇವೆ. ತಮಿಳುನಾಡಿನ ಅರುವುಕೊಟ್ಟಾಯ್, ತೆಂಗಾಸಿ, ಮತ್ತು ನಾಗರ್ ರ್ಕೋಯಿಲ್ಯಲ್ಲಿ ರಬ್ಬರು ಬೀಜದಿಂದ ಎಣ್ಣೆಯನ್ನು ಸಂಗ್ರಹ ಮಾಡುವ ಗಿರಣಿಗಳಿವೆ. ಇದಕ್ಕೆ ಕಾರಣ ಬಿತ್ತನೆ ಇಳುವರಿ ಸಮಯದಲ್ಲಿ ಕೇರಳದಲ್ಲಿ ಮಳೆ ಬಿಳುವ ಸಮಯ ಆಗಿರುವುದರಿಂದ, ವಿತ್ತವನ್ನು ಒಣಗಿಸುವುದಕ್ಕೆ ಆಗುವುದಿಲ್ಲ. ಬೀಜದಲ್ಲಿ ತೇವ ಹೆಚ್ಚಾಗುವ ಸಮಯ ಇದಾಗಿರುತ್ತದೆ. ಅದಕ್ಕೆ ತಮಿಳುನಾಡಿನಲ್ಲಿ ಗಿರಣಿಗಳನ್ನು ಹಾಕಲಾಗಿದೆ. ಶೇಖರಿಸಿದ ತಾಜಾ ಬೀಜದಲ್ಲಿ ೨೫% ತನಕ ತೇವ ಇರುತ್ತದೆ, ಅದಕ್ಕೆ ಬೀಜಗಳನ್ನು ಆದಷ್ಟು ಬೇಗ ಒಣಗಿಸಬೇಕು, ಇಲ್ಲದಿದ್ದರೆ ಬೀಜದ ಒಳಗಿದ್ದ ಎಣ್ಣೆ ಕೆಟ್ಟು ಹೋಗುತ್ತದೆ. ಬೀಜವನ್ನು ಕಲ್ಲಿನಲ್ಲಿ ಇರುವ ಪ್ಲಾಟ್ಫಾರಂ (platform) ಮೇಲೆ ಹಾಕಿ ಒಣಗಿಸುತ್ತಾರೆ. ಇಲ್ಲಂದರೆ ಗಿರಣಿಗಳಲ್ಲಿ ಇರುವ ರೋಟರಿ ಡ್ರೈಯರು ಸಹಾಯದಿಂದ ಒಣಗಿಸುತ್ತಾರೆ.೬೦-೭೦ C ವರೆಗೆ ಬಿಸಿ ಮಾಡಿದ ಗಾಳಿಯನ್ನು ರೋಟರಿ ಡ್ರಮ್ಮುನಲ್ಲಿದ್ದ ಬೀಜದ ಮೇಲೆ ಆರಿಸಿ ತೇವವನ್ನು ಕಡಿಮೆ ಮಾಡುವರು. ತೇವ ಶತಮಾನ ೬-೮% ಬರುವವರೆಗೂ ಹೀಗೆ ಮಾಡುವರು. ತೇವ ತೆಗೆದ ಬೀಜವನ್ನು ಜಲ್ಲಿಸಿ, ಮಣ್ಣು, ಸಣ್ಣ ಕಲ್ಲುಗಳನ್ನು ಬೇರೆ ಮಾಡಲಾಗುತ್ತದೆ. ಆಮೇಲೆ ಬಿತ್ತನೆಯನ್ನು ಹಮರು ಮಿಲ್ಲಿ(hammer mill)ನಲ್ಲಿ ಹಾಕಿ ಚಿಕ್ಕ ಭಾಗಗಳಾಗುವಂತೆ ಮಾಡುವರು. ಕಂಡೀಷನನ್ನು ಯಂತ್ರದಲ್ಲಿ ಕಿಗ್ಗಿಸಿದ ಬೀಜವನ್ನು ಸ್ಟೀಮು(steam)ಸಹಾಯದಿಂದ ಬಿಸಿ ಮಾಡುವರು. ಬಿಸಿ ಮಾಡಿದ ಬೀಜವನ್ನು ಎಕ್ಸುಪೆಲ್ಲರು ಯಂತ್ರದಲ್ಲಿ ಹಾಕಿ ಎಣ್ಣೆಯನ್ನು ಸಂಗ್ರಹಿಸಲಾಗುತ್ತದೆ. ರಬ್ಬರು ಬೀಜವನ್ನು ಸ್ಕ್ರೂಪ್ರೆಸ್ಸು/ಎಕ್ಸುಪೆಲ್ಲರು ಯಂತ್ರಗಳಿಂದ ನಡೆಸಿದಾಗ ಬರುವ ಹಿಂಡಿ ಯಲ್ಲಿ ಉಳಿದಿದ್ದ ಎಣ್ಣೆ ೬-೮% ಇದ್ದರೆ ರೋಟರಿಯಲ್ಲಿ ನಡೆಸಿದ ಹಿಂಡಿಯಲ್ಲಿ ೧೫-೧೬% ಉಳಿಯುತ್ತದೆ. ಬೀಜವನ್ನು ರೋಟರಿನಲ್ಲಿ ಹಾಕಿ ನೆಡಿಸುವಾಗ ಅದಕ್ಕೆ ವೊಲಾಸಿಸ್ ಎನ್ನುವ ಮಿಶ್ರಣ ಮಾಡುತ್ತಾರೆ. ರಬ್ಬರು ಬೀಜದ ಹಿಂಡಿಯನ್ನು ಸೇಂದ್ರಿಯ ಎರುಬಾಗಿ ಬಳಸುತ್ತಾರೆ.

ರಬ್ಬರು ಬಿತ್ತನೆ ಹಿಂಡಿಯ ಪೌಷ್ಟಿಕಾಂಶಗಳು

ಪೌಷ್ಟಿಕ ಪದಾರ್ಥ ಮಿತಿ
ತೇವ 9.0-10%
ಎಣ್ಣೆ 6-8
ಪ್ರೋಟಿನ್ 29-30
ಕಾರ್ಬೋಹೈಡ್ರೇಟೆಸ್ 19-20
ಫೈಬರು 8.0
ಬೂದಿ 6.5

ರಬ್ಬರು ಬೀಜದ ಎಣ್ಣೆ

[ಬದಲಾಯಿಸಿ]

ತಾಜಾ ಬೀಜದಿಂದ ಸಂಗ್ರಹಣೆ ಮಾಡಿದ ಎಣ್ಣೆ ಅರಿಷಿಣ ಬಣ್ಣದಲ್ಲಿರುತ್ತದೆ. ಕೆಟ್ಟ, ಹಾಳಾದ, ಬಹು ದಿನ ದಾಸ್ತಾನು ಮಾಡಿದ ಬೀಜದಿಂದ ತೆಗೆದ ಎಣ್ಣೆಗೆ ಗಾಢ ಬಣ್ಣವೂಂದಿರುತ್ತದೆ. ರಬ್ಬರು ಬೀಜದ ಎಣ್ಣೆ ಅಡುಗೆ ಮಾಡುವುದಕ್ಕೆ ಸರಿಯಾಗುವುದಿಲ್ಲ. ಇದನ್ನು ಕೆಮಿಕಲ್/ರಾಸಾಯನಿಕ ಕಾರ್ಖಾನೆಯಲ್ಲಿ ಬಳಸುವುದು ಜಾಸ್ತಿ. ರಬ್ಬರು ಬೀಜದ ಎಣ್ಣೆಯಲ್ಲಿ ೫೦% ಗೆ ಹೆಚ್ಚಾಗಿ ಅಸಂತೃಪ್ತ ಕೊಬ್ಬಿನ ಆಮ್ಲಗಳಿರುತ್ತವೆ(unsaturated fatty acids). ಇದು ಸೆಮಿ ಡ್ರಯಿಂಗ್ ಎಣ್ಣೆ. ಇದನ್ನು ನಾರಗಸೆ ಎಣ್ಣೆಗೇ ಬದಲಾಗಿ ಬಣ್ಣದ ತಯಾರಿಕೆಯಲ್ಲಿ ಉಪಯೋಗಿಸುವುದಕ್ಕೆ ಸೂಕ್ತವಾಗಿದೆ.

ರಬ್ಬರು ಬೀಜದ ಎಣ್ಣೆಯ ಭೌತಿಕ ಲಕ್ಷಣಗಳು

ಲಕ್ಷಣಗಳು ಮಿತಿ
ಸಾಂದ್ರತೆ(density) 0.9012
ವಕ್ರೀಭವ ಸೂಚಕ 1.4656
viscosity 38.05
ಆಮ್ಲ ಮೌಲ್ಯ 9
ಸಪೋನಿಫಿಕೆಸನ್ ಮೌಲ್ಯ 182
ಐಯೋಡಿನ್ ಮೌಲ್ಯ 144
ಅನ್ಸಪೋನಿಫಿಯಬುಲ್ ಪದಾರ್ಥ 0.14
ಪೆರಾಕ್ಸೈಡ್ ಮೌಲ್ಯ 0.2

ಎಣ್ಣೆಯಲ್ಲಿರುವ ಫ್ಯಾಟಿ(ಕೊಬ್ಬಿನ)ಆಮ್ಲಗಳು

ಕೊಬ್ಬಿನ ಆಮ್ಲ ಶೇಕಡ
ಸಂತೃಪ್ತ ಫ್ಯಾಟಿ ಆಮ್ಲ
ಪಾಮಿಟಿಕ್ ಆಮ್ಲ 8.0-9.0
ಸ್ಟಿಯರಿಕ್ ಆಮ್ಲ 10.0-11.0
ಅಸಂತೃಪ್ತ ಫ್ಯಾಟಿ ಆಮ್ಲ
ಒಲಿಕ್ ಆಮ್ಲ 21.0-23.0
ಲಿನೊಲಿಕ್ ಆಮ್ಲ 36.0-37.5
ಲಿನೊಲೆನಿಕ್ ಆಮ್ಲ 19.0-20.0

ರಬ್ಬರು ಬೀಜದ ಎಣ್ಣೆಯ ಉಪಯುಕ್ತತೆಗಳು

[ಬದಲಾಯಿಸಿ]
  • ಈ ಎಣ್ಣೆಯನ್ನು ಲಾಂಡ್ರಿ ಸಾಬೂನು ತಯಾರಿಸಲು, ಬಣ್ಣಗಳು(paints), ವಾರ್ನಿಶ್(varnish) ತಯಾರಿಸಲು ಉಪಯೋಗಿಸುತ್ತಾರೆ.
  • ತೊಗಲು ಶುದ್ಧೀಕರಣ ಕಾರ್ಖಾನೆಯಲ್ಲಿ ಟಾನಿಕ್ಕಿಗೆ ಬೇಕಾಗುವ ದ್ರವರೂಪದ ಕೊಬ್ಬನ್ನು ಈ ಎಣ್ಣೆಯಿಂದ ತಯಾರಿಸುತ್ತಾರೆ.
  • ಆಂಟಿ ಕೊರೋಸಿವ್(anti corrosive) ಕೋಟಿಂಗುಗಳಲ್ಲಿಯೂ ಬಂಕೆ(ಗೋಂದು) ಮತ್ತು ಅಂಟುಗಳನ್ನು ತಯಾರಿಸಲೂ ಉಪಯೋಗಿಸುತ್ತಾರೆ.
  • ಅಲ್ಕಿಡ್ ರೆಸಿನ್(alkd resin) ತಯಾರಿಸಲು ಉಪಯೋಗಿಸುತ್ತಾರೆ.
  • ಕೀಲೆಣ್ಣೆ, ಪ್ರಿಂಟಿಂಗ್ ಇಂಕ್ ಮತ್ತು ಗ್ರೀಸುಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.
  • ಎಪೋಕ್ಸಿನ್ ತಯಾರಿಸಲು ಉಪಯೋಗಿಸುತ್ತಾರೆ.
  • ಲ್ಯಾಟೆಕ್ಸ್ ಫೋಮಿಂಗ್ ತಯಾರಿಸಲು ಉಪಯೋಗಿಸುತ್ತಾರೆ.
  • ಬಯೋಡೀಸೆಲ್ ತಯಾರಿಸಲು ಉಪಯೋಗಿಸುತ್ತಾರೆ.[]

ಆಧಾರಗಳು

[ಬದಲಾಯಿಸಿ]

1. European journal of scientific Research, 2009

2. African journal of Agricultural Research, july2008

3.http://commons.wikimedia.org/wiki/Hevea_brasiliensis

ಉಲ್ಲೇಖನಗಳು

[ಬದಲಾಯಿಸಿ]
  1. http://eprints.utp.edu.my/602/
  2. "ಆರ್ಕೈವ್ ನಕಲು". Archived from the original on 2013-08-10. Retrieved 2013-08-23.