ಟಾಮ್ ಅಂಡ್ ಜೆರ್ರಿ
Tom and Jerry | |
---|---|
ಚಿತ್ರ:TomandJerryTitleCard2.jpg | |
ನಿರ್ದೇಶನ | William Hanna and Joseph Barbera |
ನಿರ್ಮಾಪಕ | Rudolf Ising (first short) Fred Quimby (95 shorts) William Hanna and Joseph Barbera (18 shorts) |
ಲೇಖಕ | William Hanna and Joseph Barbera |
ಸಂಗೀತ | Scott Bradley (113 shorts) Edward Plumb (73rd short) |
ವಿತರಕರು | MGM Cartoon studio |
ಬಿಡುಗಡೆಯಾಗಿದ್ದು | 1940 - 1958 (114 shorts) |
ಅವಧಿ | approx. 6 to 10 minutes (per short) |
ದೇಶ | ಟೆಂಪ್ಲೇಟು:FilmUS |
ಭಾಷೆ | English |
ಬಂಡವಾಳ | approx. US$ 30,000.00 to US$ 75,000.00 (per short) |
ಟಾಮ್ ಅಂಡ್ ಜೆರ್ರಿ ಎಂಬುದು ಮೆಟ್ರೋ-ಗೋಲ್ಡ್‌ವಿನ್-ಮೇಯರ್ ಸಂಸ್ಥೆಗಾಗಿ ವಿಲಿಯಂ ಹಾನ್ನಾ ಮತ್ತು ಜೋಸೆಫ್ ಬಾರ್ಬೆರಾ ಜೋಡಿಯು ಸೃಷ್ಟಿಸಿದ, ನಾಟಕೀಯ ಚಲಿತ ಕಿರುಚಿತ್ರಗಳ ಒಂದು ಸರಣಿ. ಒಂದು ಮನೆಬೆಕ್ಕು (ಟಾಮ್) ಹಾಗೂ ಒಂದು ಇಲಿ (ಜೆರ್ರಿ) ಇವುಗಳ ನಡುವಿನ ಕೊನೆಯಿಲ್ಲದ ಪೈಪೋಟಿಯ ಮೇಲೆ ಈ ಸರಣಿಯು ಕೇಂದ್ರೀಕೃತವಾಗಿದ್ದು, ಅವುಗಳ ಬೆನ್ನಟ್ಟುವಿಕೆಗಳು ಹಾಗೂ ಸೆಣಸಾಟಗಳಲ್ಲಿ ಅಲ್ಲಲ್ಲಿ ಹಾಸ್ಯಪೂರಿತ ಬಿರುಸಾಟಗಳು ಸೇರಿಗೊಂಡಿರುವುದು ಇಲ್ಲಿನ ವೈಶಿಷ್ಟ್ಯ.
ಇತಿವೃತ್ತ
[ಬದಲಾಯಿಸಿ]- 1940 ಮತ್ತು 1957ರ ನಡುವೆ, ಅನಿಮೇಷನ್ ಘಟಕವು ಮುಚ್ಚಲ್ಪಟ್ಟಾಗ, ಕ್ಯಾಲಿಫೋರ್ನಿಯಾದ ಹಾಲಿವುಡ್ನಲ್ಲಿರುವ MGM ಕಾರ್ಟೂನ್ ಸ್ಟುಡಿಯೋದಲ್ಲಿ, ಹಾನ್ನಾ ಮತ್ತು ಬಾರ್ಬೆರಾರವರು ಕೊನೆಯಲ್ಲಿ ನೂರಾ ಹದಿನಾಲ್ಕು ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಯನ್ನು ಬರೆದು ನಿರ್ದೇಶಿಸಿದರು.
- ಇದರ ಮೂಲ ಸರಣಿಯು ಅತ್ಯುತ್ತಮ ಕಿರುಚಿತ್ರ ವಿಷಯಕ್ಕಾಗಿ (ವ್ಯಂಗ್ಯಚಿತ್ರ ಮಾಲಿಕೆಗಳು) ಮೀಸಲಿಟ್ಟಿರುವ ಅಕೆಡೆಮಿ ಪ್ರಶಸ್ತಿಗಳನ್ನು ಏಳುಬಾರಿ ಗೆಲ್ಲುವ ಮೂಲಕ ಗಮನ ಸೆಳೆದಿದ್ದು, ಅತಿಹೆಚ್ಚು ಬಾರಿ ಆಸ್ಕರ್ ಪ್ರಶಸ್ತಿಗಳನ್ನು ಪಡೆದ ವಾಲ್ಟ್ ಡಿಸ್ನಿಯವರ ಸಿಲ್ಲಿ ಸಿಂಫನೀಸ್ ಎಂಬ ನಾಟಕೀಯ ಚಲಿತ ಸರಣಿಚಿತ್ರಗಳೊಂದಿಗೆ ಯಶಸ್ಸು ಸಮನಾಗಿಸಿದ ಕೀರ್ತಿಯನ್ನು ಹೊಂದಿದೆ.
- 1960ರ ದಶಕದ ಆರಂಭದಲ್ಲಿನ ಮೂಲ ಸರಣಿಯ ಜೊತೆ ಜೊತೆಗೇ, ಪೂರ್ವ ಯುರೋಪ್‌ನಲ್ಲಿ ಜೀನ್ ಡೀಚ್‌ರವರ ನೇತೃತ್ವದ ರೆಮ್‌ಬ್ರಾಂಡ್ ಫಿಲ್ಮ್ಸ್‌ನಿಂದ ನಿರ್ಮಿಸಲ್ಪಟ್ಟ ಹೊಸ ಕಿರುಚಿತ್ರಗಳನ್ನೂ ಸಹ MGM ಸಂಸ್ಥೆಯು ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಚಕ್ ಜೋನ್ಸ್‌ರವರ ಸಿಬ್-ಟವರ್ 12 ಪ್ರೊಡಕ್ಷನ್ಸ್‌ನ ಅಡಿಯಲ್ಲಿ, 1963ರಲ್ಲಿ ಟಾಮ್ ಅಂಡ್ ಜೆರ್ರಿ ಕಿರುಚಿತ್ರಗಳ ತಯಾರಿಕಾ ಪ್ರಕ್ರಿಯೆಯು ಹಾಲಿವುಡ್‌ಗೆ ಮರಳಿತು.
- 1967ರವರೆಗೂ ಮುಂದುವರಿದ ಈ ಸರಣಿಯು ತನ್ಮೂಲಕ ಒಟ್ಟು ಕಿರುಚಿತ್ರಗಳ ಸಂಖ್ಯೆಯನ್ನು 161ಕ್ಕೆ ಮುಟ್ಟಿಸಿತು. 1970, 1980 ಮತ್ತು 1990ರ ದಶಕಗಳಲ್ಲಿ ಹಾನ್ನಾ-ಬಾರ್ಬೆರಾ ಮತ್ತು ಫಿಲ್ಮೇಷನ್ ಸ್ಟುಡಿಯೋಸ್‌ನಿಂದ ನಿರ್ಮಿಸಲ್ಪಟ್ಟ ದೂರದರ್ಶನದ ವ್ಯಂಗ್ಯಚಿತ್ರ ಮಾಲಿಕೆಗಳಲ್ಲಿ ಬೆಕ್ಕು ಮತ್ತು ಇಲಿ ಎಂಬ ಈ ತಾರೆಗಳು ಮತ್ತೊಮ್ಮೆ ಕಾಣಿಸಿಕೊಂಡವು.
- 1992ರಲ್ಲಿ ನಿರ್ಮಾಣಗೊಂಡು 1993ರಲ್ಲಿ ಸ್ವದೇಶದಲ್ಲಿ ಬಿಡುಗಡೆಯಾದ ಟಾಮ್ ಅಂಡ್ ಜೆರ್ರಿ: ದಿ ಮೂವಿ ಎಂಬ ಒಂದು ರೂಪಕ ಚಿತ್ರ ಹಾಗೂ ಕಾರ್ಟೂನ್ ನೆಟ್‌ವರ್ಕ್‌ಗಾಗಿ 2000ದಲ್ಲಿ ಬಂದ ಟಾಮ್ ಅಂಡ್ ಜೆರ್ರಿ: ದಿ ಮ್ಯಾನ್‌ಷನ್ ಕ್ಯಾಟ್ ಎಂಬ ಅವರ ಮೊಟ್ಟಮೊದಲ TV ಕಿರುಚಿತ್ರ ಈ ಸರಣಿಯಲ್ಲಿ ಸೇರಿವೆ.
- ದಿ ಕರಾಟೆಗಾರ್ಡ್ ಎಂಬ ತೀರಾ ಇತ್ತೀಚಿನ, ಟಾಮ್ ಅಂಡ್ ಜೆರ್ರಿ ನಾಟಕೀಯ ಕಿರುಚಿತ್ರದ ಕಥೆಯನ್ನು ಬರೆದು, ಸಹ-ನಿರ್ದೇಶನ ಮಾಡಿ, ಸಹ-ನಿರ್ಮಾತೃವಾಗಿಯೂ ಕೆಲಸ ಮಾಡಿದ ಜೋ ಬಾರ್ಬೆರಾ, 2005ರ ಸೆಪ್ಟೆಂಬರ್ 27ರಂದು ಲಾಸ್ ಏಂಜಲೀಸ್ ಸಿನೆಮಾಸ್ ಸಂಸ್ಥೆಯಲ್ಲಿ ಪಾದಾರ್ಪಣ ಮಾಡಿದರು. ಈಗ, ಟೈಮ್ ವಾರ್ನರ್ ಸಂಸ್ಥೆಯು (ತನ್ನ ಟರ್ನರ್ ಎಂಟರ್‌ಟೈನ್‌ಮೆಂಟ್ ವಿಭಾಗದ ಮೂಲಕ) ಟಾಮ್ ಅಂಡ್ ಜೆರ್ರಿಯ ಹಕ್ಕುಗಳನ್ನು ಹೊಂದಿದೆ. (ವಿತರಣೆಯ ಕಾರ್ಯವನ್ನು ವಾರ್ನರ್ ಬ್ರದರ್ಸ್ ಸಂಸ್ಥೆ ನಿರ್ವಹಿಸುತ್ತದೆ).
- ವಿಲೀನವಾದಂದಿನಿಂದ, ಟರ್ನರ್ ಸಂಸ್ಥೆಯು ಚಿತ್ರಸರಣಿಯನ್ನು ನಿರ್ಮಿಸುತ್ತಾ ಬಂದಿದೆ. ದಿ CWನಲ್ಲಿ ಶನಿವಾರ ಬೆಳಗ್ಗೆ ಪ್ರಸಾರವಾಗುವ "ದಿ CW4 ಕಿಡ್ಸ್" ಎಂಬ ಕಾರ್ಯಕ್ರಮಕ್ಕಾಗಿ ಟಾಮ್ ಅಂಡ್ ಜೆರ್ರಿ ಟೇಲ್ಸ್ ಸರಣಿಯೂ ಸೇರಿದಂತೆ, 2005ರಲ್ಲಿ ಬಂದ ಇತ್ತೀಚಿನ ಟಾಮ್ ಅಂಡ್ ಜೆರ್ರಿ ಕಿರುಚಿತ್ರವಾದ ದಿ ಕರಾಟೆಗಾರ್ಡ್ ಮತ್ತು ಟಾಮ್ ಅಂಡ್ ಜೆರ್ರಿ ಡೈರೆಕ್ಟ್-ಟು-ವಿಡಿಯೋ ಸ್ವರೂಪದ ಚಲನಚಿತ್ರಗಳ ಸರಮಾಲೆಯೇ ಈ ಸರಣಿಯಲ್ಲಿ ಸೇರಿದೆ. ಈ ಎಲ್ಲವೂ ವಾರ್ನರ್ ಬ್ರದರ್ಸ್ ಅನಿಮೇಷನ್ ಸಂಸ್ಥೆಯ ಸಹಯೋಗದೊಂದಿಗೆ ನಿರ್ಮಿಸಲ್ಪಟ್ಟಿವೆ ಎಂಬುದು ಗಮನಾರ್ಹ ಅಂಶ.
- ಟಾಮ್ ಮತ್ತು ಜೆರ್ರಿಯ ತಾರಾಗಣವಿರುವ ಒಟ್ಟು 162 ನಾಟಕೀಯ ಕಿರುಚಿತ್ರಗಳು ಈಗ ಲಭ್ಯವಿವೆ. ಟಾಮ್ ಮತ್ತು ಜೆರ್ರಿಯ ಎಲ್ಲಾ ನಾಟಕೀಯ ಕಿರುಚಿತ್ರಗಳ ಒಂದು ಪಟ್ಟಿಗಾಗಿ, ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಗಳ ಪಟ್ಟಿಯನ್ನು ನೋಡಿ. ಟಾಮ್ ಮತ್ತು ಜೆರ್ರಿಯ ಎಲ್ಲಾ ಕಥೆಗಳ ಕಂತುಗಳ ಪಟ್ಟಿಗಾಗಿ, ಟಾಮ್ ಅಂಡ್ ಜೆರ್ರಿ ಟೇಲ್ಸ್ ಕಂತುಗಳ ಪಟ್ಟಿಯನ್ನು ನೋಡಿ.
ಕಥಾವಸ್ತು ಮತ್ತು ಸ್ವರೂಪ
[ಬದಲಾಯಿಸಿ]ಜೆರ್ರಿಯನ್ನು ಹಿಡಿಯುವ ಟಾಮ್‌ನ ಅಸಂಖ್ಯಾತ ಪ್ರಯತ್ನಗಳು ಹಾಗೂ ಅದರ ಪರಿಣಾಮವಾಗಿ ಉಂಟಾಗುವ ಹಾನಿ ಮತ್ತು ಧ್ವಂಸಕಾರ್ಯಗಳ ಮೇಲೆ ಪ್ರತಿಯೊಂದು ಕಿರು ಚಿತ್ರದ ಕಥಾವಸ್ತುವೂ ಸಾಮಾನ್ಯವಾಗಿ ಕೇಂದ್ರೀಕೃತವಾಗಿರುತ್ತದೆ. ಜೆರ್ರಿಯನ್ನು ತಿಂದುಹಾಕಲು ಟಾಮ್ ಪ್ರಯತ್ನಿಸು ವುದು ತೀರಾ ಅಪರೂಪವಾಗಿರುವುದರಿಂದ ಮತ್ತು ಕೆಲವೊಂದು ಕಿರು ವ್ಯಂಗ್ಯಚಿತ್ರ ಮಾಲಿಕೆಗಳಲ್ಲಿ ಈ ಜೋಡಿಯು ಚೆನ್ನಾಗಿ ಹೊಂದಿಕೊಂಡು ಹೋಗುತ್ತಿರುವಂತೆ ತೋರಿಸಲ್ಪಟ್ಟಿರುವುದರಿಂದ, ಜೆರ್ರಿಯನ್ನು ಟಾಮ್ ಅಷ್ಟೊಂದು ಬೆನ್ನಟ್ಟಲು ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ.
- ಬೆಕ್ಕು ಮತ್ತು ಇಲಿಯ ಮಧ್ಯೆ ಇರುವ ಎಂದಿನ ಸಹಜ ವೈರತ್ವದ ಜೊತೆಜೊತೆಗೇ ಮತ್ತಷ್ಟು ಅಂಶಗಳೂ ಈ ಬೆನ್ನಟ್ಟುವಿಕೆಗೆ ಕಾರಣವಾಗಿರಬಹುದು. ಟಾಮ್‌ಗೆ ಅದರ ಒಡೆಯನು ವಹಿಸಿರುವ ಕೆಲಸವನ್ನು ಹಾಳುಗೆಡವಲು ಜೆರ್ರಿ ಪ್ರಯತ್ನಿಸಿದಾಗ, ಅಂದರೆ, ತನ್ನ ಒಡೆಯನ ಆಹಾರವನ್ನು ರಕ್ಷಿಸುವ ಹೊಣೆಯನ್ನು ಟಾಮ್ ಹೊತ್ತಿರುವಾಗ ಜೆರ್ರಿಯು ಆ ಆಹಾರವನ್ನು ತಿಂದುಹಾಕಿದಾಗ, ಒಡೆಯನ ಆದೇಶದ ಅನುಸಾರ ಕರ್ತವ್ಯ ಪಾಲಿಸಲು ಜೆರ್ರಿಯನ್ನು ಟಾಮ್ ಬೆನ್ನಟ್ಟುತ್ತಿರಬಹುದು. ಅಥವಾ, ಇತರ ಸಂಭಾವ್ಯ ಬೇಟೆಗಳನ್ನು (ಬಾತುಕೋಳಿ, ಕೆನರೀಸ್ ಹಕ್ಕಿ ಅಥವಾ ಹೊಂಬಣ್ಣದ ಮೀನು ಇವೇ ಮೊದಲಾದವುಗಳು) ಟಾಮ್ ತಿಂದುಹಾಕದಂತೆ ಜೆರ್ರಿಯು ರಕ್ಷಿಸಿದಾಗ ಹುಟ್ಟಿಕೊಂಡ ವೈರತ್ವವು ಇದಕ್ಕೆ ಕಾರಣವಿರಬಹುದು.
- ಇಲ್ಲವೆ ಮಾಯಾಂಗನೆಯಂತೆ ಕಾಣುವ ಹೆಣ್ಣು ಬೆಕ್ಕೊಂದನ್ನು ಸೆಳೆಯುವ ಪ್ರಯತ್ನದಲ್ಲಿ ಮತ್ತೊಂದು ಬೆಕ್ಕಿನೊಂದಿಗೆ ಸ್ಪರ್ಧೆಗೆ ಇಳಿದಿರುವ ಟಾಮ್‌ನ ಪ್ರಯತ್ನವನ್ನು ಜಿಗುಪ್ಸೆಯಿಂದಲೋ ಅಥವಾ ಅಸೂಯೆಯಿಂದಲೋ ಜೆರ್ರಿಯು ಹಾಳುಗೆಡವುವುದೂ ಇದಕ್ಕೆ ಮತ್ತೊಂದು ಕಾರಣವಿರಬಹುದು. ಆದರೆ, ಮುಖ್ಯವಾಗಿ ಜೆರ್ರಿಯ ಬುದ್ಧಿವಂತಿಕೆ, ಚಾಣಾಕ್ಷ ತಂತ್ರಗಳು ಹಾಗೂ ಅದೃಷ್ಟದ ಕಾರಣದಿಂದಾಗಿ ಅವನನ್ನು ಹಿಡಿಯುವಲ್ಲಿ ಟಾಮ್ ಅಷ್ಟೊಂದು ಯಶಸ್ವಿಯಾಗುವುದಿಲ್ಲ.
- ಕುತೂಹಲಕರ ವಿಷಯವೆಂದರೆ, ಸರಣಿಯ ಬಹುತೇಕ ಶೀರ್ಷಿಕೆ ಪಟ್ಟಿಗಳು (ಟೈಟಲ್ ಕಾರ್ಡ್‌ಗಳು) ಟಾಮ್ ಮತ್ತು ಜೆರ್ರಿ ಒಂದನ್ನೊಂದು ನೋಡಿಕೊಂಡು ನಗುತ್ತಿರುವಂತೆಯೇ ತೋರಿಸುತ್ತವೆ. ಇದನ್ನು ನೋಡಿದಾಗ, ಪ್ರತಿ ವ್ಯಂಗ್ಯಚಿತ್ರ ಮಾಲಿಕೆಯಲ್ಲಿಯೂ ಅವು ಪರಸ್ಪರ ಹೊರಹೊಮ್ಮಿಸುವ ತೀವ್ರ ಕಿರಿಕಿರಿ ಅಥವಾ ಕಾಟಗಳ ಬದಲಿಗೆ, ಅವುಗಳ ನಡುವೆ ಒಂದು ಪ್ರೀತಿ-ದ್ವೇಷದ ಸಂಬಂಧವಿರುವುದು ಗೋಚರಿಸುತ್ತದೆ.
- ಒಂದಷ್ಟು ವ್ಯಂಗ್ಯಚಿತ್ರ ಮಾಲಿಕೆಗಳಲ್ಲಿ, ಅವು ನಿಷ್ಕಲ್ಮಷ ಸ್ನೇಹವನ್ನು ವ್ಯಕ್ತಪಡಿಸುವ (ಉದಾಹರಣೆಗೆ "ಸ್ಪ್ರಿಂಗ್‌ಟೈಮ್ ಫಾರ್ ಥಾಮಸ್") ಮತ್ತು ಪರಸ್ಪರರ ಯೋಗಕ್ಷೇಮದೆಡೆಗೆ ಕಾಳಜಿ ವಹಿಸುವಂಥಾ ಹಲವಾರು ಸನ್ನಿವೇಶಗಳೂ ಇವೆ ("ಜೆರ್ರಿ ಅಂಡ್ ದಿ ಲಯನ್" ಎಂಬ ವ್ಯಂಗ್ಯಚಿತ್ರ ಮಾಲಿಕೆಯ ಒಂದು ಸನ್ನಿವೇಶದಲ್ಲಿ, ಜೆರ್ರಿಯನ್ನ್ನು ತಾನು ಕೊಂದುಹಾಕಿದೆ ಎಂಬ ಆಲೋಚನೆಯು ಟಾಮ್‌ನಲ್ಲಿ ಮೂಡುವಂತೆ ಜೆರ್ರಿಯು ಭ್ರಮೆಯನ್ನು ಹುಟ್ಟಿಸುತ್ತಾನೆ; ಇದರಿಂದಾಗಿ ಪ್ರಥಮ ಚಿಕಿತ್ಸೆಯ ಪೆಟ್ಟಿಗೆಯನ್ನು ಹಿಡಿದುಕೊಂಡು ಟಾಮ್ ಓಡಿಬರುತ್ತಾನೆ).
- ನಾಟಕೀಯವಾಗಿರುವ ಚಲಿತ ವ್ಯಂಗ್ಯಚಿತ್ರ ಮಾಲಿಕೆಗಳಲ್ಲಿ ಹಿಂದೆಂದೂ ಸೃಷ್ಟಿಸಲಾಗಿಲ್ಲದಂತಹ ಕೆಲವೊಂದು ಅತಿ ಉಗ್ರವಾದ ಹಾಸ್ಯಪ್ರಸಂಗಗಳಿಗೆ ಕಿರುಚಿತ್ರದ ಕಂತುಗಳು ಹೆಸರುವಾಸಿಯಾಗಿವೆ. ಅವುಗಳೆಂದರೆ: ಟಾಮ್‌ನ ತಲೆಯನ್ನು ಕಿಟಕಿಯೊಂದರಲ್ಲಿ ಅಥವಾ ಬಾಗಿಲೊಂದರಲ್ಲಿ ಸಿಕ್ಕಿಸಿ ಜೆರ್ರಿಯು ಅವನನ್ನು ಅರ್ಧದಲ್ಲಿ ಸಿಗಿದು ಹಾಕುವುದು; ಕೊಡಲಿ, ಪಿಸ್ತೂಲು, ಸ್ಫೋಟಕ, ಬೋನು ಮತ್ತು ವಿಷ ಹೀಗೆ ಕೈಗೆ ಸಿಕ್ಕ ಎಲ್ಲವನ್ನೂ ಬಳಸುವ ಟಾಮ್ ಜೆರ್ರಿಯನ್ನು ಕೊಲೆ ಮಾಡಲು ಪ್ರಯತ್ನಿಸುವುದು; ದೋಸೆ ಕಾವಲಿಯೊಂದರಲ್ಲಿ (ಹಿಂದೊಮ್ಮೆ ಬಟ್ಟೆ ಒಗೆಯುವ ಹಳೆಯ ಯಂತ್ರವಾಗಿತ್ತು ಎಂಬಂತೆ ಕಾಣಿಸುವ ಸಾಧನವೊಂದರಲ್ಲಿಯೂ ಸಹ) ಟಾಮ್‌ನ ಬಾಲವನ್ನು ಜೆರ್ರಿಯು ತುರುಕುವುದು.
- ಶೀತಕಯಂತ್ರದ (ರೆಫ್ರಿಜಿರೇಟರ್) ಒಳಗೆ ಹೋಗಿ ಬೀಳುವಂತೆ ಟಾಮ್‌ನ್ನು ಝಾಡಿಸಿ ಒದೆಯುವುದು; ಅದರ ಬಾಲವನ್ನು ವಿದ್ಯುತ್ ಕುಹರದೊಳಕ್ಕೆ ಸಿಕ್ಕಿಸುವುದು; ಮುಸಲ, ದೊಣ್ಣೆ ಅಥವಾ ಬಡಿಗೆ ಇವೇ ಮೊದಲಾದವುಗಳಿಂದ ಟಾಮ್‌ನ್ನು ಕುಟ್ಟುವುದು; ಮರ ಅಥವಾ ವಿದ್ಯುತ್ ಕಂಬವೊಂದನ್ನು ಬಳಸಿಕೊಂಡು ಟಾಮ್‌ನು ಬಯಲಿಗೆ ಹೋಗಿ ಬೀಳುವಂತೆ ಮಾಡುವುದು, ಅವನ ಕಾಲುಗಳಿಗೆ ಬೆಂಕಿಕಡ್ಡಿಗಳನ್ನು ಸಿಕ್ಕಿಸಿ ಹೊತ್ತಿಸುವುದು- ಹೀಗೆ ಅತಿ ಉಗ್ರವೆಂಬಂತೆ ಕಾಣಿಸುವ ಹಾಸ್ಯಪ್ರಸಂಗಗಳಿಗೆ ಇಲ್ಲೇನೂ ಕೊರತೆಯಿಲ್ಲ.
- ಇದರ ಎಲ್ಲಾ ತೆರನಾದ ಜನಪ್ರಿಯತೆಯ ಹೊರತಾಗಿಯೂ, ಅತಿ ಹೆಚ್ಚಿನ ಪ್ರಮಾಣದ ಹಿಂಸೆಯನ್ನು ಒಳಗೊಂಡಿದೆ ಎಂಬ ಕಾರಣಕ್ಕಾಗಿ ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಯು ಆಗಾಗ ಕಟುಟೀಕೆಗೂ ಒಳಗಾಗಿದೆ.[೧]: 42 [೨]: 134
- ಹಿಂಸಾತ್ಮಕ ದೃಶ್ಯಗಳು ಅಲ್ಲಲ್ಲಿ ಕಂಡುಬಂದರೂ ಸಹ, ಮೂಲ ವ್ಯಂಗ್ಯಚಿತ್ರ ಮಾಲಿಕೆಗಳಲ್ಲಿ ಯಾವುದೇ ರಕ್ತಪಾತವಾಗಲೀ ಅಥವಾ ತಿವಿಯುವಿಕೆಯಾಗಲೀ ಇಲ್ಲದಿರುವುದು ಈ ಜೋಡಿಯನ್ನು ಮನೆಮಾತಾಗಿಸಿದೆ. ಆದರೂ ಸಹ, ಟಾಮ್ ಅಂಡ್ ಜೆರ್ರಿ: ದಿ ಮೂವಿ ಸರಣಿಯ ಆರಂಭಿಕ ಕೊಡುಗೆಗಳಲ್ಲಿ, ತೀರಾ ಅಪರೂಪವೆಂಬಂತಹ ಸನ್ನಿವೇಶವೊಂದರಲ್ಲಿ ಟಾಮ್ ಚೂರುಚೂರಾಗಿ ಹೋಗುವಂತೆ ತೋರಿಸಲಾಗಿದ್ದು, ರಕ್ತವು ನಿಚ್ಚಳವಾಗಿ ಕಾಣಿಸುತ್ತದೆ. ಪದೇ ಪದೇ ಮರುಕಳಿಸುವ ಹಾಸ್ಯಪ್ರಸಂಗವೊಂದರಲ್ಲಿ, ಟಾಮ್ ಅನ್ಯಮನಸ್ಕನಾಗಿ ಕುಳಿತಿರುವ ಸಂದರ್ಭದಲ್ಲಿ ಜೆರ್ರಿಯು ಅವನಿಗೆ ಹೊಡೆಯುವ ದೃಶ್ಯವಿದೆ.
- ಇದಕ್ಕೆ ಪ್ರತಿಯಾಗಿ, ಟಾಮ್ ಮೊದಲಿಗೆ ಏನೂ ನೋವೇ ಆಗಿಲ್ಲವೆಂಬಂತೆ ತೋರಿಸಿಕೊಂಡು ನಂತರದ ಕೆಲ ಕ್ಷಣಗಳಲ್ಲಿ ನೋವಿನ ಭಾವವನ್ನು ವ್ಯಕ್ತಪಡಿಸುವುದು ಅಥವಾ ಮೊದಲು ನೋವು ತೋರಿಸಿಕೊಂಡು ನಂತರ ಏನೂ ಆಗಿಲ್ಲವೆಂಬಂತೆ ತೋರಿಸಿಕೊಳ್ಳುವುದು ಇದರಲ್ಲಿ ಸೇರಿದೆ. ಮತ್ತೊಂದು ಸನ್ನಿವೇಶದಲ್ಲಿ, ತನ್ನನ್ನು ಅಟ್ಟಿಸಿಕೊಂಡು ಬರುತ್ತಿರುವ ಟಾಮ್‌ನ್ನು ತಾನು ಏನೋ ಚೇಷ್ಟೆ ಮಾಡುವುದಕ್ಕೆ ಮುಂಚಿತವಾಗಿ ಅರ್ಧದಲ್ಲಿಯೇ ತಡೆಯುವ ಜೆರ್ರಿ (ವಿರಾಮ ನೀಡಲು ಕೇಳುತ್ತಿದೆಯೇನೋ ಎಂಬಂತೆ), ಸಾಮಾನ್ಯವಾಗಿ ಟಾಮ್‌ಗೆ ನೋವಾಗುವಂತೆ ಮಾಡುತ್ತದೆ.
- ರೂಢಿಗತ ಮಾದರಿಗಳ ಮೇಲೆಯೇ ತನ್ನ ವಿಶ್ವಾಸವನ್ನು ಇಟ್ಟುಕೊಂಡಿರುವುದಕ್ಕೂ ಸಹ ಈ ವ್ಯಂಗ್ಯಚಿತ್ರ ಮಾಲಿಕೆಯು ಗಮನಾರ್ಹವಾಗಿದೆ. ಸ್ಫೋಟಗಳು ನಡೆದ ನಂತರ ಪಾತ್ರಗಳ ದೇಹ ಕಪ್ಪಗಾಗುವುದು ಮತ್ತು ಭಾರೀ ಹಾಗೂ ಹಿಗ್ಗಿಸಲ್ಪಟ್ಟ ನೆರಳುಗಳ ಬಳಕೆ (Dr. ಜೆಕಿಲ್ ಅಂಡ್ ಮಿ. ಮೌಸ್ ವ್ಯಂಗ್ಯಚಿತ್ರ ಮಾಲಿಕೆ ಇದಕ್ಕೊಂದು ಉದಾಹರಣೆ) ಮೊದಲಾದವುಗಳು ಇದಕ್ಕೆ ನಿದರ್ಶನವಾಗಿವೆ. ದೈನಂದಿನ ವಸ್ತುಗಳು ಹಾಗೂ ಘಟನೆಗಳಿಗೆ ಹೋಲಿಕೆಯಿರುವುದು ಈ ಸರಣಿಯಲ್ಲಿನ ದೃಷ್ಟಿ ಗೋಚರ ಹಾಸ್ಯದ ಚರ್ಚಾರ್ಹ, ಮುಖ್ಯ ಆಕರ್ಷಣೆಯ ಗುಣವಾಗಿದೆ. ಸರಣಿಯ ಪಾತ್ರಗಳು ಅಸಂಬದ್ಧವಾದ, ಆದರೆ ಸನ್ನಿವೇಶಕ್ಕೆ ದೃಢವಾಗಿ ಪೂರಕವಾಗಿರುವ ಆಕಾರಗಳಿಗೆ ತಮ್ಮನ್ನು ನಿಯಮಿತವಾಗಿ ಮಾರ್ಪಡಿಸಿಕೊಳ್ಳುತ್ತವೆ.
- ಬಹುಪಾಲು ಸಂದರ್ಭಗಳಲ್ಲಿ ಅನೈಚ್ಛಿಕ ರೀತಿಯಲ್ಲಿ, ಮುಖವಾಡ ಧರಿಸಿದ್ದರೂ ಭೀಭತ್ಸವಾಗಿರುವ ವಿಧಾನಗಳಲ್ಲಿ ಇದು ನಡೆಯುತ್ತದೆ. ಪಾತ್ರಧಾರಿಗಳ ನಟನೆಗೆ ಒತ್ತು ನೀಡುವ ಮೂಲಕ, ಸಾಂಪ್ರದಾಯಿಕ ಧ್ವನಿ ಪರಿಣಾಮಗಳನ್ನು ತುಂಬಿಸುವ ಮೂಲಕ ಹಾಗೂ ದೃಶ್ಯಗಳಿಗೆ ಭಾವತೀವ್ರತೆ ಯನ್ನು ನೀಡುವ ಮೂಲಕ ಸಂಗೀತವು ಈ ಕಿರುಚಿತ್ರಗಳಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಂಗೀತ ನಿರ್ದೇಶಕ ಸ್ಕಾಟ್ ಬ್ರಾಡ್ಲಿ ಸಂಕೀರ್ಣ ಸ್ವರೂಪದ ಸಂಗೀತವನ್ನು ಸಂಯೋಜಿಸಿದ್ದು, ಜಾಝ್, ಶಾಸ್ತ್ರೀಯ ಮತ್ತು ಪಾಪ್ ಸಂಗೀತದ ಉತ್ತಮ ಅಂಶಗಳು ಅದರಲ್ಲಿ ಮಿಳಿತಗೊಂಡಿವೆ.
- ದಿ ವಿಜರ್ಡ್ ಆಫ್ ಆಸ್ ಮತ್ತು ಮೀಟ್ ಮಿ ಇನ್ ಸೇಂಟ್ ಲೂಯಿಸ್ ಚಿತ್ರಗಳೂ ಸೇರಿದಂತೆ MGM ಸಂಸ್ಥೆಯ ಚಲನಚಿತ್ರಗಳ ಗೀತೆಗಳು ಹಾಗೂ ಸಮಕಾಲೀನ ಪಾಪ್ ಗೀತೆಗಳನ್ನು ಬ್ರಾಡ್ಲಿ ಆಲ್ಲಲ್ಲಿ ಪುನರಾವರ್ತಿಸಿದ್ದಾರೆ. ಟಾಮ್ ಮತ್ತು ಜೆರ್ರಿ ಪಾತ್ರಗಳು ಹೆಚ್ಚೂಕಮ್ಮಿ ಮಾತಾಡುವುದೇ ಇಲ್ಲವಾದ್ದರಿಂದ, ಈ ವ್ಯಂಗ್ಯಚಿತ್ರ ಮಾಲಿಕೆಯಲ್ಲಿ ಸಂಭಾಷಣೆಗಳು ಸಾಮಾನ್ಯವಾಗಿ ತುಂಬಾ ಕಡಿಮೆ ಎನ್ನಬೇಕು. ಆದಾಗ್ಯೂ, ಸಣ್ಣಪುಟ್ಟ ಪಾತ್ರಗಳಿಗೆ ಈ ರೀತಿಯ ಮಿತಿಯನ್ನೇನೂ ಹೇರಲಾಗಿಲ್ಲ. ಉದಾಹರಣೆಗೆ, ದಿ ಲಿಟ್ಲ್ ಆರ್ಫನ್ ಕಂತನ್ನು ಹೊರತುಪಡಿಸಿದರೆ, ಮ್ಯಾಮಿ ಟೂ ಷೂಸ್ ಪಾತ್ರವು ಕಾಣಿಸಿಕೊಳ್ಳುವ ಪ್ರತಿ ಕಂತಿನಲ್ಲೂ ಆ ಪಾತ್ರಕ್ಕೆ ಒಂದಷ್ಟು ಸಂಭಾಷಣೆ ಇದೆ.
- ಟಾಮ್ ಮತ್ತು ಜೆರ್ರಿಯಿಂದ ಹೊರಬೀಳುವ ಬಹುತೇಕ ಸಂಭಾಷಣೆಯೆಂದರೆ, ದೊಡ್ಡ-ಸ್ಥಾಯಿಯಲ್ಲಿ ಅವೆರಡೂ ನಗುವುದು ಮತ್ತು ಏದುಸಿರು ಬಿಡುತ್ತಾ ಕೀರಲು ದನಿಯಲ್ಲಿ ಕಿರಿಚುವುದು, ಅಷ್ಟೇ. ಈ ಧ್ವನಿಯನ್ನು ಒಂದು ತುತ್ತೂರಿ ಅಥವಾ ಮತ್ತಾವುದೇ ಸಂಗೀತ ಉಪಕರಣದಿಂದ ನೀಡಬಹುದು. 1954ಕ್ಕಿಂತಲೂ ಮುಂಚಿತವಾಗಿ, ಎಲ್ಲಾ ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಗಳೂ ನಿಗದಿತವಾದ, ಅಕೆಡೆಮಿ ಅನುಪಾತ ಹಾಗೂ ಸ್ವರೂಪದಲ್ಲಿಯೇ ತಯಾರಿಸಲ್ಪಟ್ಟಿದ್ದವು. 1954ರ ಅಂತ್ಯದಿಂದ 1955ರವರೆಗೆ ಕೆಲವೊಂದು ಚಿತ್ರಗಳನ್ನು ಅಕೆಡೆಮಿ ಸ್ವರೂಪ ಹಾಗೂ ವಿಶಾಲಪರದೆಯ ಸಿನೆಮಾಸ್ಕೋಪ್ ಪ್ರಕ್ರಿಯೆಗಳೆರಡರಲ್ಲಿಯೂ ತಯಾರಿಸಲಾಯಿತು.
- 1956ರಿಂದ ಪ್ರಾರಂಭಿಸಿ ಒಂದು ವರ್ಷದ ನಂತರ MGM ಕಾರ್ಟೂನ್ ಸ್ಟುಡಿಯೋ ಮುಚ್ಚಲ್ಪಡುವವರೆಗೂ, ಎಲ್ಲಾ ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಗಳೂ ಸಿನೆಮಾಸ್ಕೋಪ್‌ನಲ್ಲಿಯೇ ನಿರ್ಮಾಣಗೊಂಡವು. ಅದರಲ್ಲೂ ಕೆಲವೊಂದು ಚಿತ್ರಗಳ ಧ್ವನಿಪಥವನ್ನು ಪರ್‌ಸ್ಪೆಕ್ಟಾ ಡೈರೆಕ್ಷನಲ್ ಆಡಿಯೋದಲ್ಲಿ ಧ್ವನಿಮುದ್ರಿಸಲಾಯಿತು. 1960ರ ದಶಕದಲ್ಲಿ ಬಂದ ಜೀನ್ ಡೀಚ್ ಮತ್ತು ಚಕ್ ಜೋನ್ಸ್‌ರವರ ಕಿರುಚಿತ್ರಗಳೆಲ್ಲವೂ ಅಕೆಡೆಮಿ ಸ್ವರೂಪದಲ್ಲಿಯೇ ನಿರ್ಮಾಣಗೊಂಡರೂ ಸಹ, ಒಂದಷ್ಟು ಜೋಡಣೆಗಳನ್ನು ಅಥವಾ ಸಂಯೋಜನೆಗಳನ್ನು ಅವು ಹೊಂದಿದ್ದರಿಂದಾಗಿ ಅಕೆಡೆಮಿ ವಿಶಾಲಪರದೆಯ ಸ್ವರೂಪಕ್ಕೂ ಅವು ಹೊಂದಿಕೊಳ್ಳಲು ಸಾಧ್ಯವಾಯಿತು. ಹಾನ್ನಾ ಮತ್ತು ಬಾರ್ಬೆರಾ ಜೋಡಿಯು ಸೃಷ್ಟಿಸಿದ ಎಲ್ಲಾ ವ್ಯಂಗ್ಯಚಿತ್ರ ಮಾಲಿಕೆಗಳೂ ಮೂರು-ಪಟ್ಟಿಯ ಟೆಕ್ನಿಕಲರ್‌ನಲ್ಲಿ ನಿರ್ಮಾಣಗೊಂಡರೆ, 1960ರ ದಶಕದ ಚಿತ್ರಗಳು ಮೆಟ್ರೋಕಲರ್‌ನಲ್ಲಿ ರೂಪಿಸಲ್ಪಟ್ಟವು.
ಪಾತ್ರಗಳು
[ಬದಲಾಯಿಸಿ]ಶೀರ್ಷಿಕೆ ಪಾತ್ರಗಳು
[ಬದಲಾಯಿಸಿ]- ಟಾಮ್ ಎಂಬುದು ರಷ್ಯನ್ ನೀಲಿಬಣ್ಣದ ಒಂದು ಟಾಮ್‌ಬೆಕ್ಕು ಆಗಿದ್ದು, ಸುಖಜೀವನವನ್ನು ಅವನು ಸಾಗಿಸುತ್ತಿದ್ದರೆ, ಜೆರ್ರಿಯು ಒಂದು ಪುಟ್ಟ, ಕಂದುಬಣ್ಣದ ಮನೆ ಇಲಿಯಾಗಿದ್ದು, ಟಾಮ್‌ಗೆ ಹತ್ತಿರವಿರುವ ಸ್ಥಳದಲ್ಲಿಯೇ ಅವನು ಯಾವಾಗಲೂ ವಾಸಿಸುತ್ತಿರುತ್ತಾನೆ.
"ಟಾಮ್" ಎಂಬುದು ಒಂದು ಗಂಡು ಬೆಕ್ಕು ಅಥವಾ ಟಾಮ್‌ಬೆಕ್ಕಿ ನ ಕುಲಕ್ಕೆ ಸಂಬಂಧಿಸಿದ ಹೆಸರು (ವಾರ್ನರ್ ಬ್ರದರ್ಸ್ ಸಂಸ್ಥೆಯ ವ್ಯಂಗ್ಯಚಿತ್ರ ಮಾಲಿಕೆಯ ಪಾತ್ರವಾದ ಸಿಲ್ವೆಸ್ಟರ್‌ನ್ನು ಮೂಲತಃ "ಥಾಮಸ್" ಎಂದು ಕರೆಯಲಾಗುತ್ತಿತ್ತು).
- ಮೊಟ್ಟ ಮೊದಲ ಕಿರುಚಿತ್ರವಾದ ಪುಸ್ ಗೆಟ್ಸ್ ದಿ ಬೂಟ್ ನಲ್ಲಿ ಟಾಮ್‌ನ್ನು ಮೂಲತಃ "ಜಾಸ್ಪರ್" ಎಂದು ಕರೆಯಲಾಗಿದ್ದರೆ, ಜೆರ್ರಿಗೆ ಜಿಂಕ್ಸ್ ಎಂದು ಹೆಸರಿಡಲಾಗಿತ್ತು. ಟಾಮ್ ಶೀಘ್ರ-ಕೋಪಿಯಾಗಿದ್ದು ಬೇಗನೇ ಕ್ಷೋಭೆಗೆ ಒಳಗಾಗುವ ಸೂಕ್ಷ್ಮಜೀವಿಯಾಗಿದ್ದರೆ, ಜೆರ್ರಿಯು ಸ್ವತಂತ್ರಜೀವಿಯಷ್ಟೇ ಅಲ್ಲ, ಅವಕಾಶವಾದಿಯೂ ಆಗಿರುವುದು ಇಲ್ಲಿನ ವಿಶೇಷ. ತನ್ನ ಗಾತ್ರಕ್ಕೆ ಹೋಲಿಸಿದಾಗ ಆಶ್ಚರ್ಯಕರ ಎನ್ನುವಂಥಾ ಶಕ್ತಿಯನ್ನೂ ಹೊಂದಿರುವುದು ಜೆರ್ರಿಯ ಲಕ್ಷಣ.
- ಬಡಿಗಲ್ಲಿನಂತಹಾ ವಸ್ತುಗಳನ್ನೂ ಅತಿ ಸುಲಭವಾಗಿ ಎತ್ತಿ ಹಿಡಿಯುವುದೇ ಅಲ್ಲದೇ ಅದರ ಗಣನೀಯ ಪರಿಣಾಮಗಳನ್ನು ತಡೆದುಕೊಳ್ಳುವುದು ಜೆರ್ರಿಯ ಈ ಸಾಮರ್ಥ್ಯವನ್ನು ತೋರಿಸುತ್ತದೆ. ಟಾಮ್ ಅತ್ಯಂತ ಶಕ್ತಿವಂತನಾಗಿದ್ದು ದೃಢಸಂಕಲ್ಪವನ್ನು ಹೊಂದಿದ್ದರೂ ಸಹ, ಜೆರ್ರಿಯ ಬುದ್ಧಿವಂತಿಕೆ ಹಾಗೂ ಚಾತುರ್ಯಕ್ಕೆ ಅವನು ಸರಿಸಾಟಿಯಲ್ಲ ಎಂಬುದು ವಿಶೇಷ. ಪ್ರತಿ ವ್ಯಂಗ್ಯಚಿತ್ರ ಮಾಲಿಕೆಯ ಕೊನೆಯಲ್ಲಿನ "ಐರಿಸ್-ಔಟ್" ಅಥವಾ "ಫೇಡ್-ಔಟ್" ಪರಿಣಾಮದ ಹೊತ್ತಿಗೆ, ಜೆರ್ರಿ ಸಾಮಾನ್ಯವಾಗಿ ವಿಜಯಶಾಲಿಯಾಗಿದ್ದರೆ, ಟಾಮ್‌ನ್ನು ಸೋತ ಸ್ಪರ್ಧಿಯಂತೆ ತೋರಿಸಲಾಗುತ್ತದೆ.
- ಆದರೂ, ಬೇರೆಯದೇ ರೀತಿಯ ಫಲಿತಾಂಶಗಳೂ ಬರಲು ಇಲ್ಲಿ ಸಾಧ್ಯವಿದೆ. ಜೆರ್ರಿಯು ಆಕ್ರಮಣಕಾರಿಯಾಗಿದ್ದಾಗ ಅಥವಾ ಒಂದು ರೀತಿಯ ಎಲ್ಲೆಯನ್ನು ಅವನು ದಾಟಿದಂತಹ ಅಪರೂಪದ ಸಂದರ್ಭಗಳಲ್ಲಿ, ಟಾಮ್ ಜಯಶಾಲಿಯಾಗುತ್ತಾನೆ (ಇದಕ್ಕೆ ಅತ್ಯುತ್ತಮ ನಿದರ್ಶನ ದಿ ಮಿಲಿಯನ್ ಡಾಲರ್ ಕ್ಯಾಟ್ ಕಂತಿನಲ್ಲಿ ಕಂಡುಬರುತ್ತದೆ. ಒಂದು ಇಲಿಯೂ ಸೇರಿದಂತೆ ಯಾವುದೇ ಪ್ರಾಣಿಗೂ ಟಾಮ್ ತೊಂದರೆ ಕೊಟ್ಟರೆ, ಟಾಮ್ ಹೊಸದಾಗಿ ಕೈವಶ ಮಾಡಿಕೊಂಡ ಸಂಪತ್ತು ಕೈಬಿಟ್ಟು ಹೋಗುತ್ತದೆ ಎಂಬುದನ್ನು ಕಂಡುಕೊಂಡ ನಂತರ ಟಾಮ್‌ಗೆ ಜೆರ್ರಿಯು ಕಿರುಕುಳ ಕೊಡುತ್ತಲೇ ಹೋಗುತ್ತಾನೆ. ಕೊನೆಗೊಮ್ಮೆ ಸಹನೆ ಕಳೆದುಕೊಂಡ ಟಾಮ್ ಜೆರ್ರಿಯ ಮೇಲೆ ಆಕ್ರಮಣ ಮಾಡುತ್ತಾನೆ). ಕೆಲವೊಮ್ಮೆ, ಪರಿಸ್ಥಿತಿಯ ವ್ಯಂಗ್ಯವೆಂಬಂತೆ ಅವರಿಬ್ಬರೂ ಸೋಲುಣ್ಣಬೇಕಾಗುತ್ತದೆ.
- ಜೆರ್ರಿಯ ಕೊನೆಯ ಉಪಾಯವು ಅವನಿಗೇ ತಿರುಗುಬಾಣವಾದಾಗ ಅದು ಮೊದಲು ಟಾಮ್‌ಗೆ ಹಾನಿಯುಂಟುಮಾಡಿ ನಂತರ ಜೆರ್ರಿಯನ್ನು ಕಾಡುತ್ತದೆ (ಇದನ್ನು ಚಕ್ ಜೋನ್ಸ್‌ರವರ ಫಿಲೆಟ್ ಮಿಯಾಂವ್ ಕಿರುಚಿತ್ರದಲ್ಲಿ ನೋಡಬಹುದು. ಈ ಚಿತ್ರದಲ್ಲಿ, ಹೊಂಬಣ್ಣದ ಮೀನನ್ನು ಟಾಮ್ ತಿನ್ನದಂತೆ ಹೆದರಿಸಲು ಜೆರ್ರಿಯು ಷಾರ್ಕ್ ಒಂದಕ್ಕೆ ಆದೇಶ ನೀಡುತ್ತಾನೆ. ನಂತರದಲ್ಲಿ, ಜೆರ್ರಿಯನ್ನೂ ಷಾರ್ಕ್ ಹೆದರಿಸುತ್ತದೆ) ಅಥವಾ ಆ ಭಾಗದ ಕೊನೆಯಲ್ಲಿ ಜೆರ್ರಿಯು ಏನನ್ನಾದರೂ ಮೇಲಿನಿಂದ ಕೆಳಗೆ ಗಾಬರಿಯಿಂದ ನೋಡುತ್ತಾನೆ.
- ಕೆಲವೊಮ್ಮೆ ಇಬ್ಬರೂ ಕೊನೆಯಲ್ಲಿ (ಜೆರ್ರಿಯನ್ನು ಟಾಮ್ ಮತ್ತೆ ಬೆನ್ನಟ್ಟಿ ಹೋಗಲು ನೆರವಾಗುವಂಥಾದ್ದು ಮತ್ತೇನಾದರೂ ಸಂಭವಿಸುವುದಕ್ಕಾಗಿ ಮಾತ್ರ) ಸ್ನೇಹಿತರಾಗುತ್ತಾರೆ. ಎರಡೂ ಪಾತ್ರಗಳು ಹಿಂಸಾನಂದದ ಪ್ರವೃತ್ತಿಗಳನ್ನು ಅಭಿವ್ಯಕ್ತಿಸುತ್ತವೆ. ಹೀಗಾಗಿ ಪರಸ್ಪರರನ್ನು ಚಿತ್ರಹಿಂಸೆ ಕೊಟ್ಟು ಪೀಡಿಸುವಲ್ಲಿಯೇ ಅವರಿಬ್ಬರಿಗೂ ಆನಂದ ಸಿಗುತ್ತದೆ ಹಾಗೂ ಆ ವಿಷಯದಲ್ಲಿ ಇಬ್ಬರೂ ಒಂದೇ ಎಂಬುದು ವ್ಯಕ್ತವಾಗುತ್ತದೆ.
- ಆದರೂ ಸಹ, ಆಯಾ ವ್ಯಂಗ್ಯಚಿತ್ರ ಮಾಲಿಕೆಯನ್ನು ಅವಲಂಬಿಸಿ, ಒಂದು ಪಾತ್ರವು ಮಾರಣಾಂತಿಕ ಅಪಾಯದಲ್ಲಿ (ಅಪಾಯಕರ ಸನ್ನಿವೇಶವೊಂದರಲ್ಲಿ ಅಥವಾ ಮೂರನೇ ವ್ಯಕ್ತಿಯಿಂದ ಒದಗಿದ ಅಪಾಯದಲ್ಲಿ) ಸಿಲುಕಿದೆ ಎನಿಸಿದಾಗ, ಮತ್ತೊಂದು ಪಾತ್ರವು ಕಾಳಜಿಯನ್ನು ವ್ಯಕ್ತಪಡಿಸಿ, ಅದನ್ನು ಉಳಿಸುವುದು ಕಂಡುಬರುತ್ತದೆ. ಕೆಲವೊಮ್ಮೆ ಯಾವುದಾದರೂ ಅಹಿತಕರ ಅನುಭವಗಳಾದಾಗ, ಪರಸ್ಪರ ಭಾವನಾತ್ಮಕತೆಯನ್ನು ಹೊಮ್ಮಿಸಿ ಬಾಂಧವ್ಯವನ್ನು ಏರ್ಪಡಿಸಿಕೊಳ್ಳುವ ಈ ಜೋಡಿಯು ಪರಸ್ಪರ ನಡೆಸುವ ಮೇಲಾಟಗಳು, ಗಂಭೀರ ಸ್ವರೂಪದ ದಾಳಿಗಿಂತ ಆಟದ ಸ್ವರೂಪದಲ್ಲಿರುತ್ತವೆ. ನಗಣ್ಯ ಪ್ರಮಾಣದ ಕಲಹ, ಸಮಸ್ಯೆಗಳೊಂದಿಗೆ ಈ ಜೋಡಿಯು ಜೀವನ ಸಾಗಿಸುವುದನ್ನು ಬಹುತೇಕ ಕಿರುಚಿತ್ರಗಳು ತೋರಿಸಿವೆ.
- ಅಷ್ಟೇ ಅಲ್ಲ, ಅನಿವಾರ್ಯ ಸನ್ನಿವೇಶಗಳಲ್ಲಿ ಅಥವಾ ಸಾಮಾನ್ಯವಾಗಿ ಮೂರನೇ ವ್ಯಕ್ತಿಯೊಂದು ಇಬ್ಬರಿಗೂ ಕಿರುಕುಳ ಕೊಟ್ಟು ಅವಮಾನಿಸುವ ಸಂದರ್ಭಗಳಲ್ಲಿ, ಒಗ್ಗಟ್ಟಿನಿಂದ ಕೆಲಸ ಮಾಡುವುದಕ್ಕೂ ಮೀರಿದ ಸಾಮರ್ಥ್ಯವನ್ನು ಈ ಜೋಡಿಯು ತೋರಿಸುತ್ತದೆ. ಒಂದು ಕಿರುಚಿತ್ರದಲ್ಲಿ, ಟಾಮ್ ಮೀಟ್‌ಹೆಡ್‌ನ್ನು ಮೊದಲು ಭೇಟಿ ಮಾಡುತ್ತಾನೆ. ನಂತರ ಅವನು ಹಾಗೂ ಆ ಕೊಳಕು ಕುನ್ನಿ ಇಬ್ಬರೂ ಸೇರಿ ಜೆರ್ರಿಯನ್ನು ಹಿಡಿಯುವ ಪ್ರಯತ್ನ ಮಾಡುತ್ತಾರೆ.
ಆದರೆ, ಮೀಟ್‌ಹೆಡ್‌ನ ಶಿರಚ್ಛೇದ ಮಾಡುವ ಮೂಲಕ ಆತನಿಗೆ ಘಾಸಿಮಾಡು ಎಂದು ಟಾಮ್‌ನ ಪ್ರೇತವು ಒತ್ತಾಯಿಸಿದಾಗ, ಶಿರಚ್ಛೇದ ಮಾಡುವ ಬದಲು ಒಂದು ಊತವನ್ನು ಅದು ಉಂಟುಮಾಡುತ್ತದೆ. ಐದು ಕಿರುಚಿತ್ರಗಳು ಟಾಮ್‌ನ ಮರಣದ ಸ್ಪಷ್ಟವಾದ ಚಿತ್ರಣದೊಂದಿಗೆ ಅಂತ್ಯಗೊಳ್ಳುತ್ತವೆಯಾದರೂ, ಅವನ ಕಣ್ಮರೆ ಎಂದೂ ಶಾಶ್ವತವಲ್ಲ;ಜೆರ್ರೀಸ್ ಡೈರಿಯಲ್ಲಿ ಬರುವ ಫ್ಲಾಶ್‌ಬ್ಯಾಕ್ ಒಂದರಲ್ಲಿ ಅವನು ತನ್ನ ಸಾವಿನ ಕುರಿತಾಗಿ ಓದುವಂತೆಯೂ ತೋರಿಸಲಾಗಿದೆ.
- ಮೌಸ್ ಟ್ರಬಲ್ ಹಾಗೂ ಯಾಂಕೀ ಡೂಡ್ಲ್ ಮೌಸ್ ಕಂತುಗಳಲ್ಲಿನ ಸ್ಫೋಟಗಳಲ್ಲಿ ಟಾಮ್ ಸಾಯುವಂತೆ ಕಾಣಿಸಿಕೊಂಡರೆ (ಅದಾದ ನಂತರ ಸ್ವರ್ಗದಲ್ಲಿ ಅವನು ಕಾಣಿಸಿಕೊಳ್ಳುತ್ತಾನೆ), ದಿ ಟೂ ಮಸ್ಕೆಟಿಯರ್ಸ್‌ನಲ್ಲಿ ಅವನು ತೆರೆಯಾಚೆಯಲ್ಲಿ ತಲೆಕಡಿತಕ್ಕೆ ಒಳಗಾಗುವಂತೆ ತೋರಿಸಲಾಗಿದೆ.
- ಬಹಳಷ್ಟು ಪೋಷಕ ಪಾತ್ರಗಳು ಹಾಗೂ ಸಣ್ಣಪುಟ್ಟ ಪಾತ್ರಗಳು ಮಾತನಾಡುತ್ತವೆಯಾದರೂ, ಟಾಮ್ ಮತ್ತು ಜೆರ್ರಿ ತಮ್ಮತಮ್ಮೊಳಗೆ ಹಾಗೆ ಮಾತಾಡುವುದು ತುಂಬಾ ಅಪರೂಪ.ಹೆಣ್ಣು ಬೆಕ್ಕುಗಳನ್ನು ಓಲೈಸುವ ಸಂದರ್ಭದಲ್ಲಿ ಟಾಮ್ ಭರ್ಜರಿಯಾಗಿಯೇ ಹಾಡುತ್ತಾನೆ. 1946ರಲ್ಲಿ ಬಂದ ಕಿರುಚಿತ್ರವಾದ ಸಾಲಿಡ್ ಸೆರನೇಡ್ ನಲ್ಲಿ ಲೂಯಿಸ್ ಜೋರ್ಡಾನ್‌ರವರ "ಈಸ್ ಯು ಈಸ್ ಆರ್ ಈಸ್ ಯು ಆರ್‌ನಾಟ್ ಮೈ ಬೇಬಿ" ಹಾಡನ್ನು ಟಾಮ್ ಹಾಡುವುದು ಇದಕ್ಕೊಂದು ಉತ್ತಮ ಉದಾಹರಣೆ.
- ಹೆಣ್ಣು ಬೆಕ್ಕಿನೊಂದಿಗೆ ಟಾಮ್ ಪ್ರಣಯ ಸಲ್ಲಾಪದಲ್ಲಿ ತೊಡಗಿರುವಾಗ, ಚಿತ್ರನಟ ಚಾರ್ಲ್ಸ್ ಬಾಯರ್‌ನ ಧ್ವನಿಯನ್ನು ಹೋಲುವ ಫ್ರೆಂಚ್-ಉಚ್ಚಾರಣಾ ಶೈಲಿಯ ಧ್ವನಿಯಲ್ಲಿ ಓಲೈಸುವುದನ್ನು ಒಂದೆರಡು ಕಿರುಚಿತ್ರಗಳಲ್ಲಿ ಕಾಣಬಹುದು. ಜೆರ್ರಿಯು ಅಧೈರ್ಯ ಗೊಂಡು, ಉಗುಳು ನುಂಗಿಕೊಂಡು ಮಾಡುವ ಧ್ವನಿ ಮತ್ತು ಟಾಮ್‌ನ ಜೋರುದನಿಯ ಕಿರುಚುವಿಕೆ (ಹಾನ್ನಾರ ಕಿರಿಚುವಿಕೆಯನ್ನು ಧ್ವನಿಮುದ್ರಿಸಿಕೊಂಡು, ನಂತರ ಧ್ವನಿಮುದ್ರಣದ ಆರಂಭ ಮತ್ತು ಅಂತ್ಯವನ್ನು ತೆಗೆದುಹಾಕಿ, ಧ್ವನಿಪಥದಲ್ಲಿ ಕೇವಲ ಕಿರಿಚುವಿಕೆಯ ದೃಢವಾದ ಭಾಗವನ್ನು ಮಾತ್ರವೇ ಉಳಿಸಿಕೊಳ್ಳುವ ಮೂಲಕ ಇದನ್ನು ಸೃಷ್ಟಿಸಲಾಯಿತು) ಇವೇ ಮೊದಲಾದ, ಟಾಮ್ ಅಂಡ್ ಜೆರ್ರಿ ಸರಣಿಯ ಅತಿ ಪ್ರಸಿದ್ಧವಾದ ಶಬ್ದದ ಪರಿಣಾಮಗಳೂ ಸೇರಿದಂತೆ, ಇಲಿಯ ಕೀಚುಧ್ವನಿ, ಏದುಸಿರು ಬಿಡುತ್ತಾ ಮಾತಾಡುವಿಕೆ ಹಾಗೂ ಇತರ ಧ್ವನಿ ಪರಿಣಾಮಗಳನ್ನು ಈ ಜೋಡಿಗಾಗಿ ಸಹ-ನಿರ್ದೇಶಕ ವಿಲಿಯಮ್ ಹಾನ್ನಾ ಒದಗಿಸಿದ್ದಾರೆ.
- ಸಮಂಜಸವಾಗಿರುವ ಇತರ ಸಾಮಾನ್ಯ ಧ್ವನಿಪರಿಣಾಮಗಳನ್ನು ಸ್ವತಃ ಟಾಮ್ ಮಾಡುತ್ತಾನೆ. ಒಂದು ನಿರ್ದಿಷ್ಟ ಘಟನೆ ಅಥವಾ ಸಂಭವನೀಯ ಘಟನೆಯು ನಡೆಯುವುದು ಸಾಧ್ಯವಿಲ್ಲವೆಂದು ಹೊರಗಿನ ಕೆಲ ಪ್ರಸ್ತಾಪಗಳು ಸಮರ್ಥಿಸಿದಾಗ, ಅದು ಅನಿವಾರ್ಯವಾಗಿಯೂ, ವ್ಯಂಗ್ಯವಾಗಿ ಯೂ ಟಾಮ್‌ನ ಉದ್ದೇಶಗಳಿಗೆ ಭಂಗವುಂಟುಮಾಡುತ್ತದೆ. ಇಂಥಾ ಸಂದರ್ಭಗಳಲ್ಲಿ ಮೈಕೈಯನ್ನೆಲ್ಲಾ ಕೊಳೆಮಾಡಿಕೊಂಡು ಕಿವುಚಿಕೊಂಡಂತೆ ಕಾಣಿಸುವ ಟಾಮ್, ಕಾಡುವ, ಪ್ರತಿಧ್ವನಿಸುವ ಧ್ವನಿಯಲ್ಲಿ "ಇದನ್ನು ನೀವು ನಂಬೋಲ್ವಾ!" ಎಂದು ಕೇಳುತ್ತಾನೆ. ಇದು 1940ರ ದಶಕದ ಪ್ರಸಿದ್ಧ IIನೇ ಜಾಗತಿಕ ಸಮರದ ಕೆಲವೊಂದುಪ್ರಚಾರ ಕಿರುಚಿತ್ರಗಳಿಗೆ ಒಂದು ಉಲ್ಲೇಖವಾಗಿದೆ.
- ಸರಣಿಯ ಒಂದು ಕಂತಿನಲ್ಲಿ, ಇಲಿಯ ನಿರ್ಮೂಲಗಾರನೊಬ್ಬನನ್ನು ಟಾಮ್ ನೇಮಿಸಿಕೊಳ್ಳುತ್ತಾನೆ. ಜೆರ್ರಿಯನ್ನು ಹೊರಗಟ್ಟಲು ಆತ ಮಾಡಿದ ಹಲವಾರು ಪ್ರಯತ್ನಗಳು ವಿಫಲವಾದ ನಂತರ, ತನ್ನ ವೃತ್ತಿಶೀರ್ಷಿಕೆಯಲ್ಲಿರುವ "ಇಲಿ" ಎಂಬ ಪದದ ಮೇಲೆ ಅಡ್ಡಲಾಗಿ ಗೆರೆಯನ್ನು ಎಳೆದು, ಆ ಜಾಗದಲ್ಲಿ "ಬೆಕ್ಕು" ಎಂದು ಬರೆಯುವ ಮೂಲಕ, ಆತ ತನ್ನ ವೃತ್ತಿಯನ್ನು ಬೆಕ್ಕು ನಿರ್ಮೂಲಗಾರ ಎಂದು ಬದಲಿಸಿಕೊಳ್ಳುತ್ತಾನೆ. ಇದನ್ನು ಕಂಡ ಟಾಮ್, ಆ ಪದವನ್ನು ಜೋರಾಗಿ ಹೇಳಿಕೊಂಡು, ಮನಸ್ಸಿಲ್ಲದ ಮನಸ್ಸಿನಲ್ಲಿ ತನ್ನೆಡೆಗೆ ತೋರಿಸಿಕೊಳ್ಳುತ್ತಾನೆ.
- ಬ್ಲೂ ಕ್ಯಾಟ್ ಬ್ಲೂಸ್ ಎಂಬ 1956ರ ಒಂದು ಕಿರುಚಿತ್ರವು ಅಶರೀರವಾಣಿಯ ಸ್ವರೂಪದಲ್ಲಿ ಜೆರ್ರಿಯಿಂದ (ಇದಕ್ಕೆ ಧ್ವನಿ ನೀಡಿದವರು ಪಾಲ್ ಫ್ರೀಸ್) ನಿರೂಪಿಸಲ್ಪಟ್ಟಿದೆ. 1943ರಲ್ಲಿ ಬಂದ ದಿ ಲೋನ್‌ಸಮ್ ಮೌಸ್ ಕಿರುಚಿತ್ರದಲ್ಲಿ ಟಾಮ್ ಮತ್ತು ಜೆರ್ರಿಗಳಿಬ್ಬರೂ ಒಂದಕ್ಕಿಂತ ಹೆಚ್ಚುಬಾರಿ ಮಾತನಾಡುತ್ತಾರೆ.
- ಎಲ್ಲೆಡೆ ಪ್ರಸಿದ್ಧವಾಗಿರುವ ಈ ಬೆಕ್ಕು-ಮತ್ತು-ಇಲಿ ಜೋಡಿಯು, ಈ ವ್ಯಂಗ್ಯಚಿತ್ರ ಮಾಲಿಕೆಯ ಸರಣಿಯ ಮೊದಲ ಅಳವಡಿಕೆಯಾದ (ಮತ್ತು ಇದುವರೆಗಿನದರಲ್ಲಿ ಏಕೈಕವಾದುದಾಗಿರುವ) ಟಾಮ್ ಅಂಡ್ ಜೆರ್ರಿ: ದಿ ಮೂವಿ ಎಂಬ ಚಿತ್ರದಲ್ಲಿ ಮನುಷ್ಯರು ಮತ್ತು ಇತರ
ಮಾನವ ರೂಪಿ ಪ್ರಾಣಿಗಳೆರಡರೊಂದಿಗೂ ನಿರಂತರವಾಗಿ ಮಾತನಾಡುತ್ತದೆ. ಟಾಮ್ ಮತ್ತು ಜೆರ್ರಿಗೆ ಮಾತನ್ನಾಡುವ ಸಂಪೂರ್ಣ ಸಾಮರ್ಥ್ಯಗಳಿದ್ದರೂ ಸಹ, ಕೇವಲ ಕೆಲವೇ ಮಾತುಗಳನ್ನಾಡಿ, ಹೆಚ್ಚಿನ ಮಾತಿನ ಭಾಗವನ್ನು ಉಳಿದ ಪಾತ್ರಗಳಿಗೆ ಬಿಡುವ ಕಡೆಗೆ ಆದ್ಯತೆ ನೀಡುತ್ತಾರೆ ಎಂಬುದು ಇದರ ಹಿಂದಿನ ಸಾಧ್ಯತೆಯಾಗಿದೆ.
ಪುನರಾವರ್ತನೆಯಾಗುವ ಪಾತ್ರಗಳು
[ಬದಲಾಯಿಸಿ]- ಜೆರ್ರಿಯನ್ನು ಹಿಡಿಯುವ ತನ್ನ ಪ್ರಯತ್ನಗಳಲ್ಲಿ ಬುಚ್ ಮತ್ತು ಸ್ಪೈಕ್ ಎಂಬ ಪ್ರಾಣಿಗಳೊಡನೆ ಟಾಮ್ ವ್ಯವಹರಿಸಬೇಕಾಗುತ್ತದೆ. ಬುಚ್ ಎಂಬುದು ಕಾಲೆಳೆದುಕೊಂಡು ನಡೆಯುವ, ಒಬ್ಬ ಕರಿಯ ಸಹವರ್ತಿ ಬೆಕ್ಕಾಗಿದ್ದು ಜೆರ್ರಿಯನ್ನು ಹಿಡಿದು ತಿನ್ನಲು ಅವನು ಬಯಸು ತ್ತಿರುತ್ತಾನೆ. ಅದೇ ರೀತಿಯಲ್ಲಿ ಸ್ಪೈಕ್ ("ಕಿಲ್ಲರ್" ಅಥವಾ "ಬುಚ್" ನಂತೆ ಕೆಲವೊಮ್ಮೆ ಇವನಿಗೆ ಕೊಕ್ಕು ಇರುತ್ತದೆ) ಎಂಬುದು ಒಬ್ಬ ಕೋಪಿಷ್ಟ, ದುಷ್ಟ, ರಕ್ಷಕ ಗೂಳಿನಾಯಿಯಾಗಿದ್ದು, ಜೆರ್ರಿಯನ್ನು ಹಿಡಿಯುವ ಪ್ರಯತ್ನದಲ್ಲಿರುವ ಟಾಮ್ ತನ್ನ ಮಗನಾದ ಟೈಕ್‌ನಿಗೆ (ಇದನ್ನು "ಕಿರಿಯ" ಎಂದೂ ಕೆಲವೊಮ್ಮೆ ಕರೆಯಲಾಗುತ್ತದೆ) ಕಿರುಕುಳ ಕೊಡುತ್ತಿರುವುದಕ್ಕಾಗಿ ಟಾಮ್‌ನ ಮೇಲೆ ಆಕ್ರಮಣ ಮಾಡಲು ಪ್ರಯತ್ನಿಸುತ್ತಾನೆ.
- ಹಾಸ್ಯ ಕಲಾವಿದ ಜಿಮ್ಮಿ ಡ್ಯುರಾಂಟೆಯ ಮಾದರಿಯ ಒಂದು ಧ್ವನಿ ಹಾಗೂ ಅಭಿವ್ಯಕ್ತಿಯನ್ನು ಬಳಸಿಕೊಂಡು ಸ್ಪೈಕ್ ಆಗಾಗ ಮಾತನಾಡಿದ್ದಾನೆ (ಇದನ್ನು ಮಾಡಿದ್ದು ಬಿಲ್ಲಿ ಬ್ಲೆಚರ್ ಮತ್ತು ತದನಂತರ ಡಾಸ್ ಬಟ್ಲರ್). ಸ್ಪೈಕ್‌ನ ಮೇಲಂಗಿಯ ಬಣ್ಣವು ಬೂದು ಮತ್ತು ಕೆನೆ ನಸುಗೆಂಪು ಬಣ್ಣದ ನಡುವೆ ಹಲವು ವರ್ಷಗಳಿಂದ ಆಗಾಗ ಮಾರ್ಪಾಡಿಗೆ ಒಳಗಾಗುತ್ತಲೇ ಬಂದಿದೆ. 1940ರ ದಶಕದ ಅಂತ್ಯದಲ್ಲಿ ಸ್ಪೈಕ್‌ನ ಮಗ ಟೈಕ್‌ನ ಪಾತ್ರವನ್ನು ಸೇರಿಸಿದ್ದರಿಂದಾಗಿ, ಸ್ಪೈಕ್‌ನ ಪಾತ್ರವು ಕೊಂಚ ಮೃದುವಾಗಿರುವುದಲ್ಲದೇ, ಸ್ಪೈಕ್ ಅಂಡ್ ಟೈಕ್ ಎಂಬ ಕಿರು-ಅವಧಿಯ, ನಾಟಕೀಯ ಉಪ-ವ್ಯಂಗ್ಯಚಿತ್ರ ಮಾಲಿಕೆಯ ಸರಣಿಗಳು ಹೊರಬರಲು ಸಾಧ್ಯವಾಯಿತು.
ಬುಚ್ ಮತ್ತು ಟೂಡಲ್ಸ್ ಗಲೋರ್
[ಬದಲಾಯಿಸಿ]- ಮೇಲೆ ತಿಳಿಸಲಾಗಿರುವಂತೆ, ಬುಚ್ ಒಂದು ಕರಿಯ ಸಹವರ್ತಿ ಬೆಕ್ಕಾಗಿದ್ದು, ಜೆರ್ರಿಯನ್ನು ಹಿಡಿದು ತಿನ್ನಲು ಅವನೂ ಸಹ ಬಯಸುತ್ತಿರುತ್ತಾನೆ. ಅವನು ಟಾಮ್‌ನ ಅತಿ ವಾಡಿಕೆಯ ಪ್ರತಿಸ್ಪರ್ಧಿ. ಆದರೂ ಸಹ, ಅವನು ಕಾಣಿಸಿಕೊಳ್ಳುವ ಬಹುತೇಕ ಕಂತುಗಳಲ್ಲಿ ಟೂಡಲ್ಸ್‌ಗೆ ಸಂಬಂಧಿಸಿ ದಂತೆ ಅವನು ಟಾಮ್‌ನೊಂದಿಗೆ ದ್ವೇಷ ಸಾಧಿಸುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಕೆಲವೊಂದು ವ್ಯಂಗ್ಯಚಿತ್ರ ಮಾಲಿಕೆಗಳಲ್ಲಿರುವಂತೆ, ಟಾಮ್‌ನ ಸಂಗಾತಿಗಳು ಅಥವಾ ನಿಕಟವರ್ತಿಗಳಲ್ಲಿ ಒಬ್ಬನೆಂಬಂತೆಯೂ ಬುಚ್ ಕಾಣಿಸಿಕೊಂಡಿದ್ದು, ಅದರಲ್ಲಿ ಟಾಮ್‌ನ ಗೆಳೆಯರಾದ ಮೀಟ್‌ಹೆಡ್ ಹಾಗೂ ಟಾಪ್ಸಿಗೆ ಅವನು ನಾಯಕನಾಗಿರುತ್ತಾನೆ.
- ತನ್ನ ಪ್ರೇಮಾಸಕ್ತಿಯನ್ನು ಟಾಮ್ ಬಹಳಷ್ಟು ಸಲ ಬದಲಿಸುತ್ತಿರುತ್ತಾನೆ. ಅವನ ಮೊದಲ ಪ್ರೇಮಾಸಕ್ತಿಯೆಂದರೆ ಶೀಕಿ. ದಿ ಝೂಟ್ ಕ್ಯಾಟ್ ಕಂತಿನಲ್ಲಿ ಬಿಗುಮಾನದ ಧ್ವನಿಯಲ್ಲಿ ಮಾತಾಡುವ ಇವಳು, ದಿ ಮೌಸ್ ಕಮ್ಸ್ ಟು ಡಿನ್ನರ್ ಕಂತಿನಲ್ಲಿ ಟಾಮ್‌ನ್ನು "ಟಾಮಿ" ಎಂದು ಕರೆಯುತ್ತಾಳೆ. ಟಾಮ್‌ನ ಎರಡನೇ ಮತ್ತು ಅತಿ ವಾಡಿಕೆಯ ಪ್ರೇಮಾಸಕ್ತಿಯೆಂದರೆ ಟೂಡಲ್ಸ್ ಗಲೋರ್. ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಗಳಲ್ಲಿ ಈ ಪಾತ್ರಕ್ಕೆ ಯಾವುದೇ ಸಂಭಾಷಣೆಯಿಲ್ಲ.
- ಮ್ಯಾಮಿ ಟೂ ಷೂಸ್ ಎಂಬ ರೂಢಿಗತ ಮಾದರಿಯ, ಅಮೆರಿಕಾದ ನೀಗ್ರೋ ಪಂಗಡಕ್ಕೆ ಸೇರಿದ ಮನೆಕೆಲಸದಾಕೆಯೊಂದಿಗೂ (ಇದಕ್ಕೆ ಧ್ವನಿ ನೀಡಿರುವುದು ಲಿಲಿಯನ್ ರಾಂಡಾಲ್ಫ್) ಟಾಮ್ ಮೊದಲಿನಿಂದಲೂ ವ್ಯವಹರಿಸಬೇಕಾಗುತ್ತದೆ.ಆರಂಭಿಕ ಕಿರುಚಿತ್ರಗಳಲ್ಲಿ, ಟಾಮ್ ಮತ್ತು ಜೆರ್ರಿ ವಾಸಿಸುತ್ತಿರುವ, ಶ್ರೀಮಂತರ ಮನೆಯ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿರುವ ಕೆಲಸದಾಕೆಯಂತೆ ಮ್ಯಾಮಿಯನ್ನು ಚಿತ್ರಿಸಲಾಗಿದೆ.
- ಕಾಲಾನಂತರದಲ್ಲಿ, ಮ್ಯಾಮಿಯ ಸ್ವಂತ ಮನೆಯೆಂಬಂತೆ ತೋರುವ ನೆಲೆಯಲ್ಲಿ ಟಾಮ್ ಅಂಡ್ ಜೆರ್ರಿ ಕಿರುಚಿತ್ರಗಳನ್ನು ಆಯೋಜಿಸಲಾಗಿದೆ. ಆಕೆಯ ಮುಖ (1950ರಲ್ಲಿ ಬಂದ ಸಾಟರ್ಡೆ ಈವ್‌ನಿಂಗ್ ಪುಸ್ ಕಂತಿನಲ್ಲಿ, ಆಕೆಯು ಕ್ಯಾಮೆರಾದ ಕಡೆಗೆ ಓಡಿಬರುವಾಗ ಮುಖವು ತುಂಬಾ ಸಂಕ್ಷಿಪ್ತವಾಗಿ ಕಾಣಿಸುವುದನ್ನು ಬಿಟ್ಟರೆ) ಎಂದಿಗೂ ಕಾಣಿಸುವುದಿಲ್ಲ ಮತ್ತು ಬೆಕ್ಕು ಏನಾದರೂ ಚೇಷ್ಟೆಗಳನ್ನು ಮಾಡಿದಾಗ, ಅವನನ್ನು ಪೊರಕೆಯಿಂದ ಆಕೆ ಬಡಿಯುತ್ತಾಳೆ.
- ಮ್ಯಾಮಿಯು ಇಲ್ಲದಿದ್ದಾಗ, ಇತರ ಮಾನವ ಪಾತ್ರಧಾರಿಗಳು ಕೆಲವೊಮ್ಮೆ ಕಾಣಿಸಿಕೊಂಡರೂ, ಕುತ್ತಿಗೆಯಿಂದ ಕೆಳಗಿನ ಭಾಗವನ್ನಷ್ಟೇ ಸಾಮಾನ್ಯವಾಗಿ ತೋರಿಸಲಾಗುತ್ತದೆ. 1952ರಲ್ಲಿ ಬಂದ ಪುಷ್-ಬಟನ್ ಕಿಟ್ಟಿ ಎಂಬ ಕಂತಿನವರೆಗೂ ಮ್ಯಾಮಿ ಪಾತ್ರವು ಅನೇಕ ವ್ಯಂಗ್ಯಚಿತ್ರ ಮಾಲಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ನಂತರ ಬಂದ ವ್ಯಂಗ್ಯಚಿತ್ರ ಮಾಲಿಕೆಗಳು ಈ ಪಾತ್ರದ ಬದಲಿಗೆ 1950ರ ದಶಕದ ಶ್ರೀಮಂತ-ಶೈಲಿಯ ದಂಪತಿಗಳ ಮನೆಯಲ್ಲಿ ಟಾಮ್ ಮತ್ತು ಜೆರ್ರಿ ಜೋಡಿಯು ವಾಸಿಸುತ್ತಿರುವಂತೆ ತೋರಿಸಿ ದವು. ಕೆಲವೇ ಸಮಯದಲ್ಲಿ, ಸರಣಿಯಲ್ಲಿನ ಎಲ್ಲಾ ಮಾನವ ಪಾತ್ರಧಾರಿಗಳ ಮುಖವನ್ನೂ ತೋರಿಸುವುದು ರೂಢಿಯಾಯಿತು.
- ಟಫಿಯು ಜೆರ್ರಿಗೆ ಹತ್ತಿರವಾಗಿರುವ ಒಂದು ಇಲಿ.ಅವನು ತನ್ನನ್ನು ಜೆರ್ರಿಯ ಸೋದರ ಸಂಬಂಧಿಯಂತೆಯೂ ಕೆಲವೊಮ್ಮೆ ತೋರಿಸಿಕೊಳ್ಳುತ್ತಾನೆ. ಸರಣಿಯ ಅನೇಕ ಕಂತುಗಳಲ್ಲಿ, ಟಫಿಯನ್ನು ಬಹಳಷ್ಟು ತಿನ್ನುತ್ತಲೇ ಇರುವವನಂತೆ (ಅವನಿಗೆ ಯಾವಾಗಲೂ ತುಂಬಾ ಹಸಿವೆಯಿರುತ್ತದೆ) ತೋರಿಸಲಾಗಿದೆ. ಅವನು ಸರಣಿಯಲ್ಲಿ ಮೊದಲಬಾರಿಗೆ ಕಾಣಿಸಿಕೊಂಡಾಗಲೇ, ಜೆರ್ರಿಯ ಮನೆಯ ಬಾಗಿಲ ಬಳಿ ಅವನನ್ನು ಬಿಟ್ಟುಹೋಗಿರುವಂತೆ ತೋರಿಸಲಾಗಿದೆ. ಅವನ ಹೊಟ್ಟೆಬಾಕತನದಿಂದಾಗಿ ಅವನ ಅಪ್ಪ-ಅಮ್ಮ ಅವನನ್ನು ಪರಿತ್ಯಜಿಸಿರುತ್ತಾರೆ.
- ಟಫಿಯು ಜೆರ್ರಿಯೊಂದಿಗೆ ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತಾನೆ. ಹಾಗೆ ಕಾಣಿಸಿಕೊಂಡಾಗಲೆಲ್ಲಾ, ಜೆರ್ರಿಯನ್ನು ಅಟ್ಟಿಸಿಕೊಂಡು ಹೋಗುವಂತೆಯೇ ಅವನನ್ನೂ ಅಟ್ಟಿಸಿಕೊಂಡು ಹೋಗುವುದರಲ್ಲಿ ಟಾಮ್‌ಗೆ ಖುಷಿ ಸಿಗುತ್ತದೆ. ವಿಚಿತ್ರವೆಂಬಂತೆ, ಟಾಮ್ ಅಂಡ್ ಜೆರ್ರಿ: ದಿ ಮ್ಯಾಜಿಕ್ ರಿಂಗ್ ಕಂತಿನಲ್ಲಿ ಟಫಿಯನ್ನು ಮತ್ತೊಮ್ಮೆ ನಿಬಲ್ಸ್ ಎಂದೇ ಕರೆಯಲಾಗಿದೆ. ಸಾಕುಪ್ರಾಣಿಗಳ ಅಂಗಡಿಯಲ್ಲಿರುವ, ಗೊತ್ತುಗುರಿಯಿಲ್ಲದ ಈ ಇಲಿಯ ಬಗ್ಗೆ ಜೆರ್ರಿಗೆ ಗೊತ್ತೇ ಇರುವುದಿಲ್ಲ.
- ಈ ಸರಣಿಯಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಇನ್ನೊಂದು ಪಾತ್ರವೆಂದರೆ ಲಿಟ್ಲ್ ಕ್ವ್ಯಾಕರ್ ಎಂಬ ಮರಿಬಾತುಕೋಳಿ. ಈ ಪಾತ್ರವನ್ನು ಕಾಲಾನಂತರದಲ್ಲಿ ಹಾನ್ನಾ-ಬಾರ್ಬೆರಾರವರ ಪಾತ್ರವಾದ ಯಕ್ಕಿ ಡೂಡ್ಲ್‌ನೊಂದಿಗೆ ಬದಲಾಯಿಸಲಾಯಿತು.
ಲಿಟ್ಲ್ ಕ್ವ್ಯಾಕರ್ , ದಿ ಡಕ್ ಡಾಕ್ಟರ್ , ಜಸ್ಟ್ ಡಕಿ, ಡೌನ್‌ಹಾರ್ಟೆಡ್ ಡಕ್ಲಿಂಗ್, ಸೌತ್‌ಬೌಂಡ್ ಡಕ್ಲಿಂಗ್, ದಟ್ಸ್ ಮೈ ಮಮ್ಮಿ, ಹ್ಯಾಪಿ ಗೋ ಡಕಿ ಮತ್ತು ದಿ ವ್ಯಾನಿಷಿಂಗ್ ಡಕ್ ಎಂಬ ಕಂತುಗಳಲ್ಲಿ ಅವನು ಕಾಣಿಸಿಕೊಳ್ಳುತ್ತಾನೆ.
- ಟಾಮ್ ಮತ್ತು ಜೆರ್ರಿಗೆ ಹೋಲಿಸಿದರೆ ಕ್ವ್ಯಾಕರ್ ತುಂಬಾ ಮಾತಾಡುತ್ತಾನೆ. ಬಹಳಷ್ಟು ಕಂತುಗಳಲ್ಲಿ, ಮಾತನಾಡುವ ಏಕೈಕ ಪಾತ್ರವೆಂದರೆ ಅವನೊಬ್ಬನೇ. ಮರುಕಳಿಸುತ್ತಲೇ ಇರುವ ಕೊನೆಯ ಪಾತ್ರವೆಂದರೆ ಹೆಸರಿಲ್ಲದ ಪುಟ್ಟ ಹಸಿರು ಪ್ರೇತ. ನೋಡಲಿಕ್ಕೆ ಇದು ಟಾಮ್‌ನಂತೆ ಇದ್ದರೂ, ಗಾತ್ರ ಜೆರ್ರಿಯಷ್ಟು ಇರುತ್ತದೆ. ಸ್ಪ್ರಿಂಗ್‌ಟೈಮ್ ಫಾರ್ ಥಾಮಸ್, ಸ್ಮಿಟನ್ ಕಿಟನ್ ಮತ್ತು ಸಫರಿಂಗ್ ಕ್ಯಾಟ್ಸ್! ಎಂಬ ಕಂತುಗಳಲ್ಲಿ ಮಾತ್ರವೇ ಅವನು ಕಾಣಿಸಿ ಕೊಳ್ಳುತ್ತಾನೆ.
- ಸ್ಪ್ರಿಂಗ್‌ಟೈಮ್ ಫಾರ್ ಥಾಮಸ್ ಮತ್ತು ಸ್ಮಿಟನ್ ಕಿಟನ್ ಕಂತುಗಳಲ್ಲಿ ಹೆಣ್ಣು ಬೆಕ್ಕಿನೊಂದಿಗೆ ಟಾಮ್ ಪ್ರೇಮಕ್ಕೆ ಸಿಲುಕಿದಾಗಲೆಲ್ಲಾ ಅವರಿಬ್ಬರನ್ನೂ ಬೇರ್ಪಡಿಸಲು ಪ್ರಯತ್ನಿಸುವಂತೆ ಈ ಪ್ರೇತಾತ್ಮನು ಜೆರ್ರಿಗೆ ಸಲಹೆ ನೀಡುತ್ತಿರುತ್ತಾನೆ. ಸಫರಿಂಗ್ ಕ್ಯಾಟ್ಸ್! ಕಂತಿನಲ್ಲಿ, ಕೊಡಲಿಯಿಂದ ಜೆರ್ರಿಯ ದೇಹವನ್ನು ಸಿಗಿದುಹಾಕಲು ಟಾಮ್ ಮತ್ತು ಮೀಟ್‌ಹೆಡ್ ಯೋಜಿಸುತ್ತಿರುವಾಗ, ಅದರ ಬದಲಿಗೆ ಮೀಟ್‌ಹೆಡ್‌ನ ಬುರುಡೆಯನ್ನು ಒಡೆದು, ಜೆರ್ರಿಯನ್ನು ತನ್ನೊಂದಿಗೆ ಇಟ್ಟುಕೊಂಡಿರುವಂತೆ ಅವನು ಟಾಮ್‌ಗೆ ಸಲಹೆ ನೀಡುತ್ತಾನೆ.
ಚರಿತ್ರೆ ಮತ್ತು ವಿಕಾಸ
[ಬದಲಾಯಿಸಿ]ಹಾನ್ನಾ-ಬಾರ್ಬೆರಾ ಯುಗ (1940 – 1958)
[ಬದಲಾಯಿಸಿ]- ವಿಲಿಯಂ ಹಾನ್ನಾ ಮತ್ತು ಜೋಸೆಫ್ ಬಾರ್ಬೆರಾರಿಬ್ಬರೂ 1930ರ ದಶಕದ ಅಂತ್ಯದಲ್ಲಿ, MGM ಕಾರ್ಟೂನ್ ಸ್ಟುಡಿಯೋದಲ್ಲಿನ ರುಡಾಲ್ಫ್ ಐಸಿಂಗ್ ಘಟಕದ ಅಂಗವಾಗಿದ್ದರು. ಓರ್ವ ಕಥೆಗಾರ ಮತ್ತು ಪಾತ್ರ ವಿನ್ಯಾಸಗಾರರಾಗಿದ್ದ ಬಾರ್ಬೆರಾ, ಅನುಭವಸ್ತ ನಿರ್ದೇಶಕರಾಗಿದ್ದ ಹಾನ್ನಾರ ಜೊತೆ ಸೇರಿ ಐಸಿಂಗ್ ಘಟಕಕ್ಕಾಗಿ ಚಲನಚಿತ್ರಗಳನ್ನು ನಿರ್ದೇಶಿಸಲು ಪ್ರಾರಂಭಿಸಿದರು. ಇವರ ನಿರ್ದೇಶನದಲ್ಲಿ ಬಂದ ಪುಸ್ ಗೆಟ್ಸ್ ದಿ ಬೂಟ್ ಎಂಬ ಮೊದಲ ಚಿತ್ರವು ಒಂದು ಬೆಕ್ಕು-ಮತ್ತು-ಇಲಿಯ ವ್ಯಂಗ್ಯಚಿತ್ರ ಮಾಲಿಕೆಯಾಗಿತ್ತು. 1939ರ ಅಂತ್ಯದಲ್ಲಿ ಸಂಪೂರ್ಣಗೊಂಡು, 1940ರ ಫೆಬ್ರವರಿ 10ರಂದು ಪುಸ್ ಗೆಟ್ಸ್ ದಿ ಬೂಟ್ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
- ಜಾಸ್ಪರ್ ಎಂಬ ಒಂದು ಬೂದುಬಣ್ಣದ ಕಪ್ಪುಪಟ್ಟೆಯ ಬೆಕ್ಕಿನ ಮೇಲೆ ಇದು ಕೇಂದ್ರೀಕೃತವಾಗಿದ್ದು, ಹೆಸರಿಲ್ಲದ ಒಂದು ದಂಶಕ (ಕೋರೆಹಲ್ಲು ಹೊಂದಿರುವ) ಪ್ರಾಣಿಯನ್ನು ಅದು ಹಿಡಿಯಲು ಪ್ರಯತ್ನಿಸುವುದು, ಈ ಪ್ರಯತ್ನದಲ್ಲಿ ಒಂದು ಮನೆಯ ಗಿಡ ಹಾಗೂ ಅದರ ಪೀಠವನ್ನು ಒಡೆದುಹಾಕುವುದು, ಅಮೆರಿಕಾದ ನೀಗ್ರೋ ಬುಡಕಟ್ಟಿಗೆ ಸೇರಿದ ಮ್ಯಾಮಿ ಎಂಬ ಮನೆಕೆಲಸದಾಕೆಯು (ನಂತರ ಅವಳೇ ಟಾಮ್‌ನ ಒಡತಿಯಾಗುತ್ತಾಳೆ) ಇದನ್ನು ನೋಡಿ, ಮನೆಯಲ್ಲಿನ ಮತ್ತೇನನ್ನಾದರೂ ಜಾಸ್ಪರ್ ಮುರಿದಲ್ಲಿ, ಅವನನ್ನು ಆಚೆಗೆ ಎಸೆಯುತ್ತೇನೆಂದು ಹೆದರಿಸುವುದು (ಮ್ಯಾಮಿಯು ಉಚ್ಚರಿಸುವುದು ಹೀಗೆ: "O-W-T, ಔಟ್)- ಇವೇ ಮೊದಲಾದ ಸನ್ನಿವೇಶಗಳನ್ನು ಅದು ಒಳಗೊಂಡಿದೆ.
- ಸಹಜವಾಗಿಯೇ ಇದನ್ನು ಇಲಿಯು ತನ್ನ ಪ್ರಯೋಜನಕ್ಕೆ ತಕ್ಕಂತೆ ಬಳಸಿಕೊಂಡು, ಮದ್ಯದ ಲೋಟಗಳು, ಪಿಂಗಾಣಿ ತಟ್ಟೆಗಳು, ಚಹಾ ಕುಡಿಕೆಗಳು ಮತ್ತು ಸುಲಭವಾಗಿ ಒಡೆಯುವ ಯಾವುದೇ ಮತ್ತು ಎಲ್ಲ ವಸ್ತುಗಳನ್ನೂ ಮೇಲಕ್ಕೆ ಎಸೆಯಲು ಪ್ರಾರಂಭಿಸುತ್ತದೆ. ಹೀಗೆ ಮಾಡುವುದರಿಂದ ಜಾಸ್ಪರ್‌ನ್ನು ಮನೆಯಿಂದ ಆಚೆಗೆ ಓಡಿಸಬಹುದು ಎಂಬುದು ಅದರ ಉದ್ದೇಶವಾಗಿರುತ್ತದೆ. ಪುಸ್ ಗೆಟ್ಸ್ ದಿ ಬೂಟ್ ಚಿತ್ರದ ಪೂರ್ವಭಾವಿ ಪ್ರದರ್ಶನವನ್ನು ಏರ್ಪಡಿಸಲಾಯಿತು ಮತ್ತು ಯಾವುದೇ ಆಡಂಬರದ ಪ್ರದರ್ಶನವಿಲ್ಲದೆಯೇ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ಹಾನ್ನಾ ಮತ್ತು ಬಾರ್ಬೆರಾ ಜೋಡಿಯು ಇತರ ಕಿರುಚಿತ್ರಗಳನ್ನು (ಬೆಕ್ಕು-ಮತ್ತು-ಇಲಿಗೆ ಸಂಬಂಧಪಡದಿರುವುದು) ನಿರ್ದೇಶಿಸುತ್ತಾ ಹೋಯಿತು.
- "ಅಷ್ಟಕ್ಕೂ ಇಲ್ಲಿ ಬೆಕ್ಕು-ಮತ್ತು-ಇಲಿಯ ವ್ಯಂಗ್ಯಚಿತ್ರ ಮಾಲಿಕೆಗಳು ಸಾಕಷ್ಟಿಲ್ಲವಾ?" ಎಂದು MGMನ ಬಹಳಷ್ಟು ಸಿಬ್ಬಂದಿ ಉದ್ಗಾರವೆತ್ತಿದರು. ಚಿತ್ರಮಂದಿರದ ಮಾಲೀಕರುಗಳಿಗೆ ಈ ಚಿತ್ರವು ಅಚ್ಚುಮೆಚ್ಚಿನದಾಗಿ ಪರಿಣಮಿಸಿದಾಗ ಮತ್ತು 1941ರ ಅಕೆಡೆಮಿ ಅವಾರ್ಡ್ ಫಾರ್ ಬೆಸ್ಟ್ ಷಾರ್ಟ್ ಸಬ್ಜೆಕ್ಟ್: ಕಾರ್ಟೂನ್ಸ್ ಪ್ರಶಸ್ತಿಗಾಗಿ ಈ ಚಿತ್ರವನ್ನು ಅಕೆಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ನಾಮನಿರ್ದೇಶನ ಮಾಡಿದಾಗ, ಬೆಕ್ಕು ಮತ್ತು ಇಲಿಯ ಜೋಡಿಯೆಡೆಗಿನ ನಿರಾಶಾದಾಯಕ ನಡವಳಿಕೆಯು ಬದಲಾಯಿತು.ಆದರೆ, MGMನ ಮತ್ತೊಂದು ವ್ಯಂಗ್ಯಚಿತ್ರ ಮಾಲಿಕೆಯಾದ, ರುಡಾಲ್ಫ್ ಐಸಿಂಗ್‌ರವರ ದಿ ಮಿಲ್ಕಿ ವೇ ಚಿತ್ರದಿಂದಾಗಿ ಇದಕ್ಕೆ ಪ್ರಶಸ್ತಿ ಲಭಿಸಲಿಲ್ಲ.
- MGM ಅನಿಮೇಷನ್ ಸ್ಟುಡಿಯೋವನ್ನು ನಡೆಸುತ್ತಿದ್ದ ನಿರ್ಮಾಪಕ ಫ್ರೆಡ್ ಕ್ವಿಂಬಿ, ಹಾನ್ನಾ ಮತ್ತು ಬಾರ್ಬೆರಾ ಜೋಡಿಯು ಕೆಲಸ ಮಾಡುತ್ತಿದ್ದ ಇತರ ಏಕ-ಪ್ರಯತ್ನದ ವ್ಯಂಗ್ಯಚಿತ್ರ ಮಾಲಿಕೆಗಳಿಂದ ಅವರನ್ನು ಕೂಡಲೇ ಆಚೆಗೆ ತಂದು, ಬೆಕ್ಕು ಮತ್ತು ಇಲಿ ಪಾತ್ರಧಾರಿ ಗಳನ್ನು ಒಳಗೊಂಡ ಸರಣಿಯೊಂದನ್ನು ಸೃಷ್ಟಿಸಲು ನಿಯೋಜಿಸಿದರು. ತಮಗೆ ತೋಚಿದಂತೆ ಹೆಸರುಗಳನ್ನು ಬರೆಯುವ ಮೂಲಕ ಈ ಜೋಡಿಗೆ ಒಂದು ಹೊಸ ಹೆಸರನ್ನು ಸೂಚಿಸಲು ಹಾನ್ನಾ ಮತ್ತು ಬಾರ್ಬೆರಾ ಸ್ಟುಡಿಯೋದ ಒಳಗಡೆಯೇ ಒಂದು ಸ್ಪರ್ಧೆಯನ್ನು ಏರ್ಪಡಿಸಿದರು.
- ಟಾಮ್ ಅಂಡ್ ಜೆರ್ರಿ ಎಂಬ ಹೆಸರನ್ನು ಸೂಚಿಸುವ ಮೂಲಕ, ಜಾನ್ ಕ್ಯಾರ್ ಎಂಬ ಓರ್ವ ಅನಿಮೇಟರ್ 50$ ಬಹುಮಾನವನ್ನು ಗೆದ್ದ.[೩] 1941ರಲ್ಲಿ ಬಂದ ದಿ ಮಿಡ್‌ನೈಟ್ ಸ್ನ್ಯಾಕ್ ಎಂಬ ಚಿತ್ರದೊಂದಿಗೆ ಟಾಮ್ ಅಂಡ್ ಜೆರ್ರಿ ಸರಣಿಯು ನಿರ್ಮಾಣಕ್ಕೆ ಅಡಿಯಿಟ್ಟಿತು. MGMನ ತೆಕ್ಕೆಯಲ್ಲಿ ಇರುವವರೆಗೂ ಹಾನ್ನಾ ಮತ್ತು ಬಾರ್ಬೆರಾ ಜೋಡಿಯು ಈ ಬೆಕ್ಕು-ಮತ್ತು-ಇಲಿಯ ವ್ಯಂಗ್ಯಚಿತ್ರ ಮಾಲಿಕೆಗಳನ್ನು ಹೊರತುಪಡಿಸಿ ಮತ್ತಾವುದನ್ನೂ ನಿರ್ದೇಶಿಸಲಿಲ್ಲ.
- ಟಾಮ್‌ನ ದೈಹಿಕ ರೂಪವು ವರ್ಷ ವರ್ಷವೂ ಗಣನೀಯವಾಗಿ ವಿಕಸಿಸುತ್ತಲೇ ಹೋಯಿತು. 1940ರ ದಶಕದ ಆರಂಭದಲ್ಲಿ, ಟಾಮ್‌ನ ರೂಪದಲ್ಲಿ ಎಲ್ಲವೂ ಹೆಚ್ಚುವರಿ ಪ್ರಮಾಣದಲ್ಲಿಯೇ ಇದ್ದವು. ಅಂದರೆ, ಜಡೆಗಟ್ಟಿದ ತುಪ್ಪಳ, ಮುಖದಲ್ಲಿನ ಅಸಂಖ್ಯಾತ ಸುಕ್ಕುಗಳು, ಹೆಚ್ಚಿನ ಪ್ರಮಾಣದಲ್ಲಿರುವ ಹುಬ್ಬಿನ ಗುರುತುಗಳು ಇವೆಲ್ಲವೂ ಇದ್ದವು. 1940ರ ಅಂತ್ಯದ ವೇಳೆಗೆ ಈ ಎಲ್ಲಾ ಲಕ್ಷಣಗಳನ್ನೂ ಒಂದು ಹೆಚ್ಚು ಕಾರ್ಯಸಾಧ್ಯದ ರೂಪಕ್ಕೆ ಸುಧಾರಿಸಲಾಯಿತು. ಹೀಗಾಗಿ ಅವನು ಒಂದು ನಿಜವಾದ ಬೆಕ್ಕಿನಂತೆಯೇ ತೋರಲಾರಂಭಿಸಿದ. ಇದರ ಜೊತೆಗೆ, ಆರಂಭದಲ್ಲಿ ಚತುಷ್ಪಾದಿಯಾಗಿದ್ದ ಟಾಮ್, ಕಾಲಕ್ರಮೇಣ ಸುಧಾರಿಸುತ್ತಾ ಕೊನೆಗೊಮ್ಮೆ ಅಕ್ಷರಶಃ ದ್ವಿಪಾದಿಯೇ ಆಗಿಹೋದ.
- ಆದರೆ, ವಿಲಕ್ಷಣವೆನ್ನುವಂತೆ ಜೆರ್ರಿಯ ವಿನ್ಯಾಸವು ಸರಣಿಯ ಅವಧಿ ಪೂರಾ ಅದೇ ರೀತಿಯಲ್ಲಿ ಮುಂದುವರಿದುಕೊಂಡು ಹೋಯಿತು. 1940ರ ದಶಕದ ಮಧ್ಯದ ವೇಳೆಗಾಗಲೇ ಚುರುಕಾದ, ಹೆಚ್ಚು ಶಕ್ತಿಶಾಲಿಯಾದ (ಮತ್ತು ಬಿರುಸಾದ) ಧ್ವನಿಯನ್ನು ಸರಣಿಯು ಬೆಳೆಸಿಕೊಂಡಿತ್ತು. ಇದಕ್ಕೆ ಪ್ರೇರಣೆ ಒದಗಿಸಿದ್ದು MGM ಕಾರ್ಟೂನ್ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಸ್ ಎವೆರಿ ಎಂಬ ಓರ್ವ ಸಹೋದ್ಯೋಗಿಯ ಕೆಲಸ. ಈತ ಸ್ಟುಡಿಯೋವನ್ನು 1942ರಲ್ಲಿ ಸೇರಿದ. ಪ್ರತಿ ಕಿರುಚಿತ್ರದ ತಿರುಳು ವಾಸ್ತವಿಕವಾಗಿ ಒಂದೇ ಆಗಿದ್ದರೂ, ಅಂದರೆ ಬೆಕ್ಕು ಇಲಿಯನ್ನು ಬೆನ್ನಟ್ಟುವ ಕಥೆಯೇ ಆಗಿದ್ದರೂ, ಅದೇ ತಿರುಳನ್ನು ಇಟ್ಟುಕೊಂಡು ಕೊನೆಯೇ ಇಲ್ಲದ ವೈವಿಧ್ಯತೆಗಳನ್ನು ಅಥವಾ ಮಾರ್ಪಾಡುಗಳನ್ನು ಕಂಡುಕೊಂಡರು.
- ಬಾರ್ಬೆರಾ ಕಥಾಫಲಕಗಳು ಹಾಗೂ ಕರಡು ರಚನೆಗಳು ಮತ್ತು ವಿನ್ಯಾಸಗಳು ಹಾನ್ನಾರವರ ಕಾಲಯೋಜನೆಯೊಂದಿಗೆ ಸಂಯೋಜನೆಗೊಂಡು, MGMನ ಅತ್ಯಂತ ಜನಪ್ರಿಯ ಹಾಗೂ ಯಶಸ್ವೀ ವ್ಯಂಗ್ಯಚಿತ್ರ ಮಾಲಿಕೆಯ ಸರಣಿಯಾಗಿ ಹೊರಹೊಮ್ಮಿತು. ಪುಸ್ ಗೆಟ್ಸ್ ದಿ ಬೂಟ್ ಚಿತ್ರವೂ ಸೇರಿದಂತೆ ಟಾಮ್ ಅಂಡ್ ಜೆರ್ರಿ ಸರಣಿಯಲ್ಲಿನ ಹದಿಮೂರು ಪ್ರವೇಶಗಳನ್ನು ಅತ್ಯುತ್ತಮ ಕಿರುಚಿತ್ರದ ವಿಷಯ: ವ್ಯಂಗ್ಯಚಿತ್ರ ಮಾಲಿಕೆ ಎಂಬ ವರ್ಗದ ಅಡಿಯಲ್ಲಿ ಅಕೆಡೆಮಿ ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡಲಾಯಿತು. ಅವುಗಳಲ್ಲಿ ಏಳು ಚಿತ್ರಗಳು ಅಕೆಡೆಮಿ ಪ್ರಶಸ್ತಿಯನ್ನು ಪಡೆಯುವ ಮೂಲಕ, ಆ ವರ್ಗದಲ್ಲಿ ಡಿಸ್ನಿ ಸ್ಟುಡಿಯೋ ಹೊಂದಿದ್ದ ವಿಜಯ ಪರಂಪರೆಯನ್ನು ಮುರಿದವು.
- ಇನ್ನಾವುದೇ ಪಾತ್ರಾಧಾರಿತ ನಾಟಕೀಯ ಚಲಿತ ವ್ಯಂಗ್ಯಚಿತ್ರ ಮಾಲಿಕೆಯ ಸರಣಿಗಳಿಗಿಂತ ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಯ ಸರಣಿಯು ಹೆಚ್ಚು ಅಕೆಡೆಮಿ ಪ್ರಶಸ್ತಿಗಳನ್ನು ಗೆದ್ದಿತು.
1950ರ ದಶಕದಲ್ಲಿ ಚಿತ್ರನಿರ್ಮಾಣ ವೆಚ್ಚಗಳು ಬಿಗಿಯಾದಂತೆ ಕಂಡುಬಂದು ಕಿರುಚಿತ್ರಗಳ ನಿರ್ಮಾಣವೇಗದಲ್ಲಿ ಕುಸಿತವಾದರೂ ಸಹ, ತಮ್ಮ ನಾಟಕೀಯ ಚಿತ್ರಗಳ ಪ್ರದರ್ಶನದಾದ್ಯಂತ ಟಾಮ್ ಅಂಡ್ ಜೆರ್ರಿ ಪಾತ್ರಗಳು ಜನಪ್ರಿಯವಾಗೇ ಉಳಿದವು. ಆದಾಗ್ಯೂ, 1950ರ ದಶಕದಲ್ಲಿ ದೂರದರ್ಶನವು ಜನಪ್ರಿಯವಾದ ನಂತರ, ನಾಟಕೀಯ ಚಲನಚಿತ್ರಗಳು ಮತ್ತು ಕಿರುಚಿತ್ರಗಳಿಗೆ ಸಂಬಂಧಿಸಿದಂತೆ ಗಲ್ಲಾಪೆಟ್ಟಿಗೆಯ ಆದಾಯವು ಕಡಿಮೆಯಾಯಿತು. ಈ ಪರಿಸ್ಥಿತಿಯನ್ನು ಎದುರಿಸುವ ಮೊದಲ ಹಂತವಾಗಿ, MGM ಸಂಸ್ಥೆಯು ವ್ಯಂಗ್ಯಚಿತ್ರ ಮಾಲಿಕೆಯ ಎಲ್ಲಾ ತಯಾರಿಕೆಗಳನ್ನೂ ಸಿನೆಮಾಸ್ಕೋಪ್ ಸ್ವರೂಪದಲ್ಲಿ ನಿರ್ಮಿಸಿತು.
- ತಮ್ಮ ಸಂಸ್ಥೆಯ ಹಳೆಯ ಕಿರುಚಿತ್ರಗಳ ಮರು-ಬಿಡುಗಡೆಯು ಹೊಸ ಚಲನಚಿತ್ರಗಳಷ್ಟೇ ಆದಾಯವನ್ನು ಹೊತ್ತು ತರುತ್ತಿದೆ ಎಂಬುದು MGMನ ಅರಿವಿಗೆ ಬಂದ ನಂತರ, ಸ್ಟುಡಿಯೋದ ಸಿಬ್ಬಂದಿಗಳಿಗೇ ಅತೀವ ಆಶ್ಚರ್ಯವಾಗುವ ರೀತಿಯಲ್ಲಿ ಅದರ ಕಾರ್ಯನಿರ್ವಹಣಾಧಿಕಾರಿಗಳು ಅನಿಮೇಷನ್ ಘಟಕವನ್ನು ಮುಚ್ಚಲು ನಿರ್ಧರಿಸಿದರು. 1957ರಲ್ಲಿ MGM ಕಾರ್ಟೂನ್ ಸ್ಟುಡಿಯೋವನ್ನು ಮುಚ್ಚಲಾಯಿತು .
- ಹಾನ್ನಾ ಹಾಗೂ ಬಾರ್ಬೆರಾರ 114 ಟಾಮ್ ಅಂಡ್ ಜೆರ್ರಿ ಕಿರುಚಿತ್ರಗಳ ಅಂತಿಮ ಭಾಗವಾದ ಟಾಟ್ ವಾಚರ್ಸ್ ಚಿತ್ರವನ್ನು 1958ರ ಆಗಸ್ಟ್ 1ರಂದು ಬಿಡುಗಡೆ ಮಾಡಲಾಯಿತು. 1957ರಲ್ಲಿ ಹಾನ್ನಾ-ಬಾರ್ಬೆರಾ ಪ್ಪ್ರೊಡಕ್ಷನ್ಸ್ ಎಂಬ ತಮ್ಮದೇ ಸ್ವಂತ ದೂರದರ್ಶನ ಅನಿಮೇಷನ್ ಸ್ಟುಡಿಯೋ ಒಂದನ್ನು ಸ್ಥಾಪಿಸಿದ ಹಾನ್ನಾ ಮತ್ತು ಬಾರ್ಬೆರಾ ಜೋಡಿಯು, ಅದರ ಮೂಲಕ ಪ್ರಸಿದ್ಧ TV ಪ್ರದರ್ಶನಗಳು ಹಾಗೂ ಚಲನಚಿತ್ರಗಳನ್ನು ನಿರ್ಮಿಸುತ್ತಾ ಹೋಯಿತು.
ಜೀನ್ ಡೀಚ್ ಯುಗ (1960 – 1962)
[ಬದಲಾಯಿಸಿ]ನಿರ್ದೇಶನ | Gene Deitch |
---|---|
ನಿರ್ಮಾಪಕ | William L. Snyder |
ಲೇಖಕ | Larz Bourne Chris Jenkyns Eli Bauer |
ಸಂಗೀತ | Steven Konichek |
ಬಿಡುಗಡೆಯಾಗಿದ್ದು | 1961 - 1962 (13 shorts) |
ದೇಶ | ಟೆಂಪ್ಲೇಟು:FilmUS Czechoslovakia |
ಭಾಷೆ | English |
- 1960ರಲ್ಲಿ ಹೊಸ ಟಾಮ್ ಅಂಡ್ ಜೆರ್ರಿ ಕಿರುಚಿತ್ರಗಳನ್ನು ನಿರ್ಮಿಸಲು MGM ನಿರ್ಧರಿಸಿತು. ಝೆಕೋಸ್ಲೋವಾಕಿಯಾದ ಪ್ರಾಗ್ವೆಯಲ್ಲಿ ಸಾಗರೋತ್ತರ ಚಲನಚಿತ್ರಗಳನ್ನು ನಿರ್ಮಿಸಲೆಂದು ಝೆಕ್-ಮೂಲದ ಅನಿಮೇಷನ್ ನಿರ್ದೇಶಕ ಜೀನ್ ಡೀಚ್ ಮತ್ತು ಅವನ ರೆಮ್‌ಬ್ರಾಂಡ್ ಫಿಲ್ಮ್ಸ್‌ಸ್ಟುಡಿಯೋದೊಂದಿಗೆ ನಿರ್ಮಾಪಕ ವಿಲಿಯಮ್ ಎಲ್. ಸ್ನೈಡರ್ ಒಪ್ಪಂದವೊಂದನ್ನು ಮಾಡಿಕೊಂಡರು. ಡೀಚ್/ಸ್ನೈಡರ್ ತಂಡವು 13 ಕಿರುಚಿತ್ರಗಳನ್ನು ನಿರ್ಮಿಸಿತು. ಅವುಗಳಲ್ಲಿ ಬಹಳಷ್ಟು ಚಿತ್ರಗಳು ಅತಿ ವಾಸ್ತವಿಕತೆಯ ಗುಣವನ್ನು ಹೊಂದಿದ್ದವು.
- ಡೀಚ್/ಸ್ನೈಡರ್ ತಂಡವು ಟಾಮ್ ಅಂಡ್ ಜೆರ್ರಿ ಯ ಕೆಲವೇ ಕೆಲವು ಮೂಲ ಕಿರುಚಿತ್ರಗಳನ್ನು ನೋಡಿದ್ದರಿಂದಾಗಿ, ಹೀಗೆ ಹೊರಬಂದ ಚಿತ್ರಗಳು ಅಸಾಮಾನ್ಯ ಎಂದು ಪರಿಗಣಿಸಲ್ಪಟ್ಟವಷ್ಟೇ ಅಲ್ಲದೇ, ಬಹುತೇಕ ರೀತಿಯಲ್ಲಿ ಅವು ವಿಲಕ್ಷಣವಾಗಿಯೂ ಇದ್ದವು. ಪಾತ್ರಗಳ ಹಾವ ಭಾವಗಳನ್ನು ಅಲ್ಲಲ್ಲಿ ಅತಿವೇಗವಾಗಿ ನಿರ್ವಹಿಸಲಾಗಿದ್ದರಿಂದ, ಅತಿಯಾದ ಚಲನೆಯ ಕಾರಣದಿಂದುಂಟಾದ ಅಸ್ಪಷ್ಟತೆ ಗೋಚರಿಸುತ್ತಿತ್ತು. ಇದರ ಪರಿಣಾಮವಾಗಿ, ಪಾತ್ರಗಳ ಚಲನಶೀಲತೆಯು ಒಂದಕ್ಕೊಂದು ಹೊಂದಿಕೆಯಿಲ್ಲದಂತೆ ಮತ್ತು ಪೇಲವವಾದ ರೀತಿಯಲ್ಲಿ ಕಾಣಿಸುತ್ತಿತ್ತು. *ಸಂಗೀತದ ಧ್ವನಿಪಥಗಳಲ್ಲಿ ವಿರಳವಾದ ಸಂಗೀತ, ದೀರ್ಘವಾದ ಧ್ವನಿಪರಿಣಾಮಗಳಿದ್ದರೆ, ಅದರ ಜೊತೆಗಿದ್ದ ಸಂಭಾಷಣೆಯು ಮಾತಿನ ರೂಪದಲ್ಲಿದ್ದುದಕ್ಕಿಂತ ಗೊಣಗಾಟದ ರೂಪದಲ್ಲಿತ್ತು ಮತ್ತು ಪ್ರತಿಧ್ವನಿಯ ಪರಿಣಾಮವನ್ನು ಅದು ಹೆಚ್ಚು ಒಳಗೊಂಡಿತ್ತು. ಜೀನ್ ಡೀಚ್‌ರವ ಕಿರುಚಿತ್ರಗಳಲ್ಲಿ ಮೊದಲನೆಯದಾದ ಸ್ವಿಚಿಂಗ್ ಕಿಟನ್ ನಲ್ಲಿ ಅನಿರ್ದಿಷ್ಟವಾದ ಗ್ರಾಫಿಕಲ್ ತೊಡಕುಗಳು, ಚಿತ್ರಚೌಕಟ್ಟಿನ ಪ್ರಮಾಣದಲ್ಲಿನ ತಪ್ಪುಗಳು ಹಾಗೂ ತಾರಕ-ಸ್ಥಾಯಿಯಲ್ಲಿರುವ ಸಮ್ಮೋಹಕ ಸಂಗೀತ ಹಾಗೂ ಧ್ವನಿ ಪರಿಣಾಮಗಳು ಸೇರಿಕೊಂಡಿರುವುದರಿಂದಾಗಿ ಈ ಕಿರುಚಿತ್ರವು ಹೆಚ್ಚೂ ಕಡಿಮೆ ವೀಕ್ಷಣೆಗೆ ಅನರ್ಹವಾಗಿದೆ.
- ಈ ಸಮಸ್ಯೆಗಳನ್ನು ಎಂದಿಗೂ ದುರಸ್ತಿ ಮಾಡಲೇ ಇಲ್ಲ. ಹೀಗಾಗಿ ಈ ಚಿತ್ರವು ಟಾಮ್ ಅಂಡ್ ಜೆರ್ರಿ ಕಿರುಚಿತ್ರ ಸರಣಿಯಲ್ಲಿಯೇ ಅತ್ಯಂತ ಕಳಪೆ ಮಟ್ಟದ ಚಿತ್ರ ಎಂದು ಇಂದಿಗೂ ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದೆ. ಆದರೆ, ಜೆರ್ರಿಗೆ ಅಪಾಯವೊಡ್ಡುವ ಬೆಕ್ಕಿನಂತೆ ಟಾಮ್‌ನ್ನು ಎಂದಿಗೂ ಚಿತ್ರಿಸದಿರುವ ಕಾರಣದಿಂದಾಗಿ ಟಾಮ್‌ನನ್ನು ತುಂಬಾ ಆಳವಾಗಿ ಆರಾಧಿಸುತ್ತಿದ್ದ ಅಭಿಮಾನಿಗಳು ಡೀಚ್‌ನ ವ್ಯಂಗ್ಯಚಿತ್ರ ಮಾಲಿಕೆಗಳನ್ನು ಕಟುವಾಗಿ ಟೀಕಿಸಿದರು. ಬಹುತೇಕ ಸನ್ನಿವೇಶಗಳಲ್ಲಿ, ಜೆರ್ರಿಯು ತನ್ನ ದಾರಿಗೆ ಎದುರಾದಾಗ ಅಥವಾ ಅಡ್ಡಬಂದಾಗ ಮಾತ್ರವೇ ಟಾಮ್ ಜೆರ್ರಿಯನ್ನು ಘಾಸಿಗೊಳಿಸಲು ಪ್ರಯತ್ನಿಸುತ್ತಾನೆ. ಮ್ಯಾಮಿ ಟೂ ಷೂಸ್ ಎಂಬ ಕೆಲಸದಾಕೆಗೆ ಹೋಲಿಸಿದರೆ, ಟಾಮ್‌ನ ಹೊಸ ಮಾಲೀಕನಾದ ಓರ್ವ ಸ್ಥೂಲಕಾಯದ ಬಿಳಿ ಮನುಷ್ಯನೂ ಕೂಡ ಟಾಮ್‌ನ ತಪ್ಪುಗಳಿಗೆ ಶಿಕ್ಷೆ ನೀಡುವಾಗ ಹೆಚ್ಚು ಕ್ರೂರವಾಗಿ ನಡೆದುಕೊಳ್ಳುವಂತೆ ಚಿತ್ರಿಸ ಲಾಗಿದೆ.
- ಟಾಮ್‌ಗೆ ಪದೇ ಪದೇ ಹೊಡೆಯುವುದು, ಚಾವಟಿಯಿಂದ ತೀಡುವುದು, ಅವನ ಮುಖವನ್ನು ಕಾದ ಕಬ್ಬಿಣದ ಸರಳಿನಿಂದ ಬರೆಹಾಕುವುದು ಮತ್ತು ಕಾರ್ಬನೀಕೃತ ಪಾನೀಯವನ್ನು ಸಂಪೂರ್ಣವಾಗಿ ಕುಡಿಯುವಂತೆ ಟಾಮ್‌ನನ್ನು ಒತ್ತಾಯಿಸುವುದು ಇವೆಲ್ಲವೂ ಅದರಲ್ಲಿ ಸೇರಿವೆ.
ಆಶ್ಚರ್ಯವೆಂದರೆ, ಜೀನ್ ಡೀಚ್‌ನ ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಗಳು ಈಗಲೂ ಅರೆ-ನಿಯಮಿತ ಸರಣಿಯ ಆಧಾರದಲ್ಲಿ ಪುನರ್ ಪ್ರದರ್ಶನ ಕಾಣುತ್ತಿವೆ. ಕಂತಿನ ಪ್ರಸಾರದ ಅಂತ್ಯದಲ್ಲಿ "U.S.Aಯ ಹಾಲಿವುಡ್‌ನಲ್ಲಿ ತಯಾರಾದದ್ದು" ಎಂಬ ಪದಗುಚ್ಛವನ್ನು ಒಳಗೊಳ್ಳದ, ಕೆಲವೊಂದು ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಗಳಲ್ಲಿ ಈ ಕಿರುಚಿತ್ರಗಳೂ ಸೇರಿವೆ.
- ಡೀಚ್‌ನ ಸ್ಟುಡಿಯೋ ಉಕ್ಕಿನ ಪರದೆಯ ಹಿಂದೆ ಅಂದರೆ, ರಷ್ಯಾದ ಪ್ರಭಾವಲಯದ ಎಲ್ಲೆಯಲ್ಲಿ ಇದ್ದುದರಿಂದಾಗಿ, ನಿರ್ಮಾಣ ಸ್ಟುಡಿಯೋದ ತಾಣವನ್ನು ಸಂಪೂರ್ಣವಾಗಿ ಅದರ ಮೇಲೆಯೇ ಬಿಟ್ಟುಬಿಡಲಾಯಿತು. ಡೀಚ್‌ನಿಂದ ಸೃಷ್ಟಿಸಲ್ಪಟ್ಟ ಸರಣಿಯ ಕಂತುಗಳು ಒಪ್ಪ-ಓರಣವಿಲ್ಲದ ಅನಿಮೇಷನ್ ಕಾರ್ಯವನ್ನು ಒಳಗೊಂಡಿರುತ್ತವೆಯಾದ್ದರಿಂದ, ವ್ಯಂಗ್ಯಚಿತ್ರ ಮಾಲಿಕೆಯ ಸರಣಿಯ ಉಳಿದ ಭಾಗಗಳಿಗೆ ಹೋಲಿಸಿದಾಗ ಅವುಗಳೆಡೆಗೆ ಸಾರ್ವತ್ರಿಕ ಪ್ರೇಕ್ಷಕರು ಸಾಮಾನ್ಯವಾಗಿ ಒಲವು ತೋರಿರುವುದು ಕಡಿಮೆ ಎನ್ನಬಹುದು.
ಚಕ್ ಜೋನ್ಸ್ ಯುಗ (1963 – 1967)
[ಬದಲಾಯಿಸಿ]ನಿರ್ದೇಶನ | Chuck Jones Maurice Noble Ben Washam Abe Levitow Tom Ray Jim Pabian |
---|---|
ನಿರ್ಮಾಪಕ | Chuck Jones Walter Bien Les Goldman Earl Jonas |
ಲೇಖಕ | Michael Maltese Jim Pabian Bob Ogle John W. Dunn Irv Spector |
ಸಂಗೀತ | Eugene Poddany Carl Brandt Dean Elliott |
ವಿತರಕರು | MGM Animation/Visual Arts (Sib Tower 12 Productions) |
ಬಿಡುಗಡೆಯಾಗಿದ್ದು | 1963 - 1967 (34 shorts) |
ಅವಧಿ | approx. 6 to 8 minutes (per short) |
ದೇಶ | ಟೆಂಪ್ಲೇಟು:FilmUS |
ಭಾಷೆ | English |
ಬಂಡವಾಳ | US$ 42000.00 (per short) |
- ಡೀಚ್ ಸೃಷ್ಟಿಸಿದ ಕಟ್ಟಕಡೆಯ ವ್ಯಂಗ್ಯಚಿತ್ರ ಮಾಲಿಕೆಯು ಬಿಡುಗಡೆಯಾದ ನಂತರ, ವಾರ್ನರ್ ಬ್ರದರ್ಸ್ ಕಾರ್ಟೂನ್ಸ್‌ನಲ್ಲಿನ ಮೂವತ್ತು ವರ್ಷಗಳಿಗೂ ಮೀರಿದ ಸೇವೆಯಿಂದ ವಜಾಗೊಳಿಸಲ್ಪಟ್ಟ ಜೋನ್ಸ್, ಲೆಸ್ ಗೋಲ್ಡ್‌ಮನ್‌ನ ಪಾಲುದಾರಿಕೆಯೊಂದಿಗೆ ಸಿಬ್ ಟವರ್ 12 ಪ್ರೊಡಕ್ಷನ್ಸ್ ಎಂಬ ತನ್ನದೇ ಸ್ವಂತ ಅನಿಮೇಷನ್ ಸ್ಟುಡಿಯೋವನ್ನು ಪ್ರಾರಂಭಿಸಿದ. 1963ರಿಂದ ಪ್ರಾರಂಭಿಸಿ, 34 ಟಾಮ್ ಅಂಡ್ ಜೆರ್ರಿ ಕಿರುಚಿತ್ರಗಳನ್ನು ಜೋನ್ಸ್ ಮತ್ತು ಗೋಲ್ಡ್‌ಮನ್ ಒಟ್ಟಾಗಿ ನಿರ್ಮಿಸಿದರು. ಇವೆಲ್ಲದರಲ್ಲೂ ಜೋನ್ಸ್‌ನ ವಿಶಿಷ್ಟ ಶೈಲಿ (ಮತ್ತು ಕೊಂಚ ಉಜ್ವಲವಾದ ಪ್ರಭಾವ) ಎದ್ದು ಕಾಣುತ್ತಿತ್ತು.
- ವಾರ್ನರ್ ಬ್ರದರ್ಸ್ ಸ್ಟುಡಿಯೋದಲ್ಲಿ ಈ ಹಿಂದೆ ಜೋನ್ಸ್‌ನೊಂದಿಗೆ ಕೆಲಸ ಮಾಡಿದ್ದ ಅದೇ ಕಲಾವಿದರೇ ಈ ಹೊಸ ಕಿರುಚಿತ್ರಗಳ ಅನಿಮೇಷನ್ ಕಾರ್ಯವನ್ನೂ ನಿರ್ವಹಿಸಿದ್ದರಾದರೂ ಸಹ, ಬಗೆಬಗೆಯ ವಿಮರ್ಶಾತ್ಮಕ ಯಶಸ್ಸು ಅವುಗಳಿಗೆ ದೊರೆಯಿತು.ಟಾಮ್ ಅಂಡ್ ಜೆರ್ರಿಯ ಹಾಸ್ಯದ ಮುದ್ರೆಗೆ ಹಾಗೂ ವ್ಯಂಗ್ಯಚಿತ್ರ ಪ್ರಭಾವಿತ ಅಸಂಖ್ಯಾತ ನಿಲುವುಗಳು, ವ್ಯಕ್ತಿತ್ವಗಳು ಹಾಗೂ ಕಥೆಯ ಸಾರಕ್ಕೆ ತಕ್ಕಂತಿರುವ ಶೈಲಿ' ಗೆ ತನ್ನ ಶೈಲಿಯನ್ನು ಒಗ್ಗಿಸಿಕೊಳ್ಳಲು ಅಥವಾ ಅಳವಡಿಸಿಕೊಳ್ಳಲು ಜೋನ್ಸ್‌ಗೆ ಒಂದಿಷ್ಟು ತೊಂದರೆಗಳಿದ್ದವು. ಪಾತ್ರಗಳ ಹೊರನೋಟದಲ್ಲಿ ಒಂದಿಷ್ಟು ಬದಲಾವಣೆಗಳಾದವು.
- ದಪ್ಪನಾದ, ಬೋರಿಸ್ ಕರ್ಲೋಫ್‌ನಂಥಾ ಹುಬ್ಬುಗಳು (ಜೋನ್ಸ್‌ನ ಗ್ರಿಂಚ್ ಅಥವಾ ಕೌಂಟ್ ಬ್ಲಡ್ ಕೌಂಟ್ ಹೋಲುವಂತೆ), ಕಡಿಮೆ ಸಂಕೀರ್ಣವಾದ ನೋಟ (ಟಾಮ್‌ನ ತುಪ್ಪುಳದ ಬಣ್ಣವು ಬೂದುಬಣ್ಣವಾಗುವುದೂ ಸೇರಿದಂತೆ), ಚೂಪಾದ ಕಿವಿಗಳು ಮತ್ತು ತುಪ್ಪುಳದಂಥಾ ಕಪೋಲಗಳು ಇವೇ ಮೊದಲಾದ ಲಕ್ಷಣಗಳನ್ನು ಟಾಮ್‌ಗೆ ನೀಡಲಾಯಿತು. ಅದೇ ರೀತಿಯಲ್ಲಿ, ಜೆರ್ರಿಗೆ ದೊಡ್ಡದಾದ ಕಣ್ಣುಗಳು ಮತ್ತು ಕಿವಿಗಳು, ನಸು ಕಂದುಬಣ್ಣ ಹಾಗೂ ಮುದ್ದಾದ, ಮುಳ್ಳುಹಂದಿಯ ಥರದ ಅಭಿವ್ಯಕ್ತಿ ಲಕ್ಷಣಗಳನ್ನು ನೀಡಲಾಯಿತು.
- ಜೋನ್ಸ್ ಸೃಷ್ಟಿಸಿದ ಕೆಲವೊಂದು ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಗಳು, ಆತ ಈ ಹಿಂದೆ ಕೆಲಸ ಮಾಡಿದ್ದ ವೈಲ್ ಇ. ಕಯೋಟ್ ಹಾಗೂ ದಿ ರೋಡ್‌ರನ್ನರ್ ಪಾತ್ರಗಳನ್ನು ನೆನಪಿಗೆ ತರುವಂತಿದ್ದು, ಮರೆಮಾಚುವ ಹಾಸ್ಯಪ್ರಸಂಗಗಳು ಹಾಗೂ ಎತ್ತರದ ಜಾಗಗಳಿಂದ ಪಾತ್ರಗಳು ಕೆಳಗೆ ಬೀಳುವುದನ್ನು ಒಳಗೊಂಡ ಹಾಸ್ಯಪ್ರಸಂಗಗಳ ಬಳಕೆಯನ್ನು ಒಳಗೊಂಡಿದ್ದವು. ವಿನ್ಯಾಸ ರಚನಾ ಕಲಾವಿದ ಮೌರಿಸ್ ನೋಬಲ್‌ರೊಂದಿಗೆ ತನ್ನ ಬಹುತೇಕ ಕಿರುಚಿತ್ರಗಳನ್ನು ಜೋನ್ಸ್ ಸಹ-ನಿರ್ದೇಶನ ಮಾಡಿದ.
- ಉಳಿದ ಕಿರುಚಿತ್ರಗಳನ್ನು ಅಬೆ ಲೆವಿಟೊ ಮತ್ತು ಬೆನ್ ವ್ಯಾಷಮ್ ನಿರ್ದೇಶಿಸಿದರು. ಹಾನ್ನಾ ಮತ್ತು ಬಾರ್ಬೆರಾರಿಂದ ನಿರ್ದೇಶಿಸಲ್ಪಟ್ಟ ಈ ಮುಂಚಿನ ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಗಳಿಂದ ಪಡೆದುಕೊಂಡ ಧ್ವನಿಮುದ್ರಿತ ಭಾಗದ ಸುತ್ತ ನಿರ್ಮಿಸಲಾದ ಎರಡು ಕಿರುಚಿತ್ರಗಳನ್ನು ಟಾಮ್ ರೇ ನಿರ್ದೇಶಿಸಿದರು. ವೈವಿಧ್ಯಮಯ ಧ್ವನಿ ಲಕ್ಷಣಗಳನ್ನು ಮೆಲ್ ಬ್ಲಾಂಕ್ ಮತ್ತು ಜೂನ್ ಫೋರೆ ಒದಗಿಸಿದರು.
- ಅಂತಿಮವಾಗಿ, 1967ರಲ್ಲಿ ಸಂಸ್ಥೆಯು ಟಾಮ್ ಅಂಡ್ ಜೆರ್ರಿ ಕುರಿತಾದ ಚಿತ್ರಗಳ ನಿರ್ಮಾಣವನ್ನು ನಿಲ್ಲಿಸಿತು. ಅಷ್ಟು ಹೊತ್ತಿಗಾಗಲೇ ಸಿಬ್ ಟವರ್ 12 ಸಂಸ್ಥೆಯು MGM ಅನಿಮೇಷನ್/ವಿಷುಯಲ್ ಆರ್ಟ್ಸ್ ಆಗಿ ಬದಲಾಗಿತ್ತು ಹಾಗೂ ದೂರದರ್ಶನಕ್ಕೆ ಸಂಬಂಧಿಸಿದ ವಿಶೇಷ ಕಾರ್ಯಕ್ರಮಗಳು ಮತ್ತು ದಿ ಫ್ಯಾಂಟಮ್ ಟೋಲ್‌ಬೂತ್ ಎಂಬ ರೂಪಕ ಚಿತ್ರದ ಕಡೆಗೆ ಜೋನ್ಸ್ ತನ್ನನ್ನು ತೊಡಗಿಸಿಕೊಂಡಿದ್ದ.
ದೂರದರ್ಶನವನ್ನು ಮುಟ್ಟಿದ ಟಾಮ್ ಅಂಡ್ ಜೆರ್ರಿ
[ಬದಲಾಯಿಸಿ]- 1965ರ ಆರಂಭದಲ್ಲಿ ಹಾನ್ನಾ ಮತ್ತು ಬಾರ್ಬೆರಾರ ಟಾಮ್ ಅಂಡ್ ಜೆರ್ರಿ ಸರಣಿಯ ಪ್ರದರ್ಶನಗಳು, ಅತೀವವಾಗಿ ಪರಿಷ್ಕೃತಗೊಂಡ ಸ್ವರೂಪದಲ್ಲಿ ದೂರದರ್ಶನದಲ್ಲಿ ಕಾಣಿಸಿಕೊಳ್ಳತೊಡಗಿದವು. ಮ್ಯಾಮಿ ಪಾತ್ರವನ್ನು ಒಳಗೊಂಡ ವ್ಯಂಗ್ಯಚಿತ್ರ ಮಾಲಿಕೆಗಳನ್ನು (ಸಾಟರ್ಡೆ ಈವ್‌ನಿಂಗ್ ಪುಸ್ ನಂತಹ ಚಿತ್ರಗಳನ್ನು) ಕೈಗೆತ್ತಿಕೊಂಡು, ಅವಳ ಪಾತ್ರವನ್ನು ರೋಟೋಸ್ಕೋಪ್ ತಂತ್ರದ ನೆರವಿನೊಂದಿಗೆ ಹೊರ ತೆಗೆದು, ಆ ಜಾಗಕ್ಕೆ ತೆಳ್ಳಗಿರುವ ಬಿಳಿಯ ಮಹಿಳೆಯೋರ್ವಳನ್ನು ಇರಿಸುವ ಕೆಲಸವನ್ನು ಜೋನ್ಸ್‌ನ ತಂಡ ಮಾಡಬೇಕಾಗಿ ಬಂತು.
- ಅದೇ ರೀತಿಯಲ್ಲಿ, ಲಿಲಿಯನ್ ರಾಂಡಾಲ್ಫ್‌ರ ಮೂಲಧ್ವನಿಯನ್ನು ಹೊಂದಿದ್ದ ಧ್ವನಿಪಥಗಳನ್ನು ಜೂನ್ ಫೋರೆಯ ಧ್ವನಿಯೊಂದಿಗೆ ಬದಲಿಸಬೇಕಾಗಿ ಬಂತು. ಆದರೂ ಕೂಡಾ, ವ್ಯಂಗ್ಯಚಿತ್ರ ಮಾಲಿಕೆಗಳ ಸ್ಥಳೀಯ ಪ್ರಸಾರದಲ್ಲಿ ಮತ್ತು ಬೂಮರಾಂಗ್‌ನಲ್ಲಿ ಪ್ರದರ್ಶಿಸಲ್ಪಟ್ಟವುಗಳಲ್ಲಿ, ಇತರ ಕಿರುಚಿತ್ರಗಳಲ್ಲಿ ಕಾಣಿಸಿಕೊಂಡ ಮ್ಯಾಮಿ ಪಾತ್ರವನ್ನು ಮತ್ತೊಮ್ಮೆ ಕಾಣಲು ಸಾಧ್ಯವಿತ್ತು. ತೀರಾ ಇತ್ತೀಚೆಗೆ ನೀಗ್ರೋ ಬುಡಕಟ್ಟಿನ ರೂಢಿಗತ ಧ್ವನಿಗಿಂತ ವಿಭಿನ್ನವಾದ ಹೊಸರೀತಿಯ ಧ್ವನಿಯನ್ನು ಅವಳ ಪಾತ್ರಕ್ಕೆ ಥಿಯಾ ವಿಡೇಲ್ ಒದಗಿಸಿದ್ದರು
- ವ್ಯಂಗ್ಯಚಿತ್ರ ಮಾಲಿಕೆಗಳಲ್ಲಿ ತುಂಬಿಕೊಂಡಿದ್ದ ಮಿತಿಮೀರಿದ ಹಿಂಸೆಯ ಬಹುಪಾಲನ್ನೂ ಕತ್ತರಿಸಿ ತೆಗೆದುಹಾಕಲಾಯಿತು. 1965ರ ಸೆಪ್ಟೆಂಬರ್ 25ರಂದು, CBSನ ಶನಿವಾರದ ಬೆಳಗಿನ ಕಾರ್ಯಕ್ರಮ ಸೂಚಿಯಲ್ಲಿ ಪ್ರಾರಂಭವಾದ ಟಾಮ್ ಅಂಡ್ ಜೆರ್ರಿ ಸರಣಿಯು ಎರಡು ವರ್ಷಗಳ ನಂತರ CBSನ ಭಾನುವಾರದ ಕಾರ್ಯಕ್ರಮ ಸೂಚಿಗಳಲ್ಲೂ ಸ್ಥಾನಗಿಟ್ಟಿಸಿದ್ದೇ ಅಲ್ಲದೇ, 1972ರ ಸೆಪ್ಟೆಂಬರ್ 17ರವರೆಗೂ ಅಲ್ಲಿಯೇ ತನ್ನ ಸ್ಥಾನವನ್ನು ಕಾಯ್ದುಕೊಂಡಿತ್ತು.
ಟಾಮ್ ಮತ್ತು ಜೆರ್ರಿಯ ಹೊಸ ಮಾಲೀಕರುಗಳು
[ಬದಲಾಯಿಸಿ]- WTBSನ ಸಂಸ್ಥಾಪಕನಾದ ಟೆಡ್ ಟರ್ನರ್ 1986ರಲ್ಲಿ MGM ಸಂಸ್ಥೆಯನ್ನು ಖರೀದಿಸಿದ. ಕೆಲವೇ ದಿನಗಳ ನಂತರ ಆ ಕಂಪನಿಯನ್ನು ಟರ್ನರ್ ಮಾರಾಟ ಮಾಡಿದರೂ, MGMನ ಬಳಿಯಿದ್ದ 1986ಕ್ಕೂ ಮುಂಚಿನ ಚಲನಚಿತ್ರ ಭಂಡಾರವನ್ನು ತನ್ನಲ್ಲಿಯೇ ಉಳಿಸಿಕೊಂಡ. ಹೀಗಾಗಿ ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಗಳು ಟರ್ನರ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಸ್ವತ್ತಾಗಿಯೇ ಉಳಿದವು.
- (ಆದರೆ ಹಕ್ಕುಗಳು ಮಾತ್ರ ಇಂದಿಗೂ ವಾರ್ನರ್ ಬ್ರದರ್ಸ್ ಸಂಸ್ಥೆಯ ಮೂಲಕವೇ ಇವೆ) ಮತ್ತು ನಂತರದ ವರ್ಷಗಳಲ್ಲಿ ಟರ್ನರ್‌ನಿಂದ ನಡೆಸಲ್ಪಟ್ಟ ಕೇಂದ್ರಗಳಾದ, TBS,TNT, ಕಾರ್ಟೂನ್ ನೆಟ್‌ವರ್ಕ್, ಬೂಮರಾಂಗ್ ಮತ್ತು ಟರ್ನರ್ ಕ್ಲಾಸಿಕ್ ಮೂವೀಸ್ ವಾಹಿನಿಗಳಲ್ಲಿ ಪ್ರಸಾರವಾದವು.
ಸಂಯುಕ್ತ ಸಂಸ್ಥಾನದ ಆಚೆಗೆ ಟಾಮ್ ಅಂಡ್ ಜೆರ್ರಿ
[ಬದಲಾಯಿಸಿ]- ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಗಳು ಯುನೈಟೆಡ್ ಕಿಂಗ್‌ಡಂನಲ್ಲಿನ ಟೆರೆಸ್ಟ್ರಿಯಲ್ ದೂರದರ್ಶನದಲ್ಲಿ (ಸಾಮಾನ್ಯವಾಗಿ BBCಯಲ್ಲಿ, 1967ರಿಂದ 2000ದವರೆಗೆ) ಪ್ರದರ್ಶಿಸಲ್ಪಟ್ಟಾಗ, ಅದರಲ್ಲಿದ್ದ ಹಿಂಸಾತ್ಮಕ ದೃಶ್ಯಗಳಿಂದಾಗಿ ಈ ವ್ಯಂಗ್ಯಚಿತ್ರ ಮಾಲಿಕೆಗಳಿಗೆ ಯಾವುದೇ ಕತ್ತರಿ ಪ್ರಯೋಗವಾಗಲಿಲ್ಲ ಹಾಗೂ ಮ್ಯಾಮಿ ಪಾತ್ರವನ್ನೂ ಉಳಿಸಿಕೊಳ್ಳಲಾಗಿತ್ತು. ನಿಯಮಿತ ಕಾರ್ಯಕ್ರಮ ಸೂಚಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದರ ಜೊತೆಜೊತೆಯಲ್ಲಿಯೇ ಟಾಮ್ ಅಂಡ್ ಜೆರ್ರಿ ಸರಣಿಯು ಮತ್ತೊಂದು ರೀತಿಯಲ್ಲಿ BBCಗೆ ಸೇವೆ ಸಲ್ಲಿಸಿತು.
- ನಿರ್ಧರಿತ ಕಾರ್ಯಕ್ರಮ ಸೂಚಿಗಳಿಗೆ ಅಡೆತಡೆಗಳುಂಟಾದಾಗ (ನೇರ ಪ್ರಸಾರದ ಕಾರ್ಯಕ್ರಮಗಳು ಮಿತಿಮೀರಿ ನಡೆದಾಗ ಸಂಭವಿಸುವಂತೆಯೇ), ಎದುರಾಗುವ ಯಾವುದೇ ಅಂತರವನ್ನು ತುಂಬಿಸುವ ಸಲುವಾಗಿ BBCಯು ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಯ ತುಣುಕುಗಳನ್ನು ಸೇರಿಸಿಬಿಡುತ್ತಿತ್ತು. ಇದರಿಂದಾಗಿ ಮತ್ತೊಂದು ವಾಹಿನಿಗೆ ಬದಲಾಯಿಸದಂತೆ ಬಹಳಷ್ಟು ವೀಕ್ಷಕರನ್ನು ಹಿಡಿದಿಡಲು ಸಾಧ್ಯ ಎಂಬುದು BBCಯ ದೃಢವಿಶ್ವಾಸವಾಗಿತ್ತು. ಇದು ನಿರ್ದಿಷ್ಟವಾಗಿ 1993ರಲ್ಲಿ ಹೆಚ್ಚು ಪ್ರಯೋಜನಕಾರಿಯಾಗಿ ಕಂಡಿತು. IRA ಬಾಂಬ್ ಬೆದರಿಕೆ ಕರೆಯೊಂದರ ಕಾರಣ BBC ದೂರದರ್ಶನ ಕೇಂದ್ರದಲ್ಲಿ ನೋಯೆಲ್ಸ್ ಹೌಸ್ ಪಾರ್ಟಿ ಕಾರ್ಯಕ್ರಮವನ್ನು ರದ್ದುಮಾಡಬೇಕಾಗಿ ಬಂದಾಗ, ಅದರ ಬದಲಿಗೆ ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಯನ್ನು ಪ್ರಸಾರ ಮಾಡಿ, ಮುಂದಿನ ಕಾರ್ಯಕ್ರಮದವರೆಗಿನ ಅಂತರವನ್ನು ತುಂಬಲಾಯಿತು.
- ತನ್ನ ಪ್ರೇಮಾಸಕ್ತಿಯ ಕುರಿತಾಗಿ ಪ್ರಭಾವ ಬೀರುವ ಪ್ರಯತ್ನವಾಗಿ ಟಾಮ್ ಆಗಾಗ ಧೂಮಪಾನದ ಮೊರೆಹೋಗುವುದರಿಂದಾಗಿ ಕೆಲವೊಂದು ವ್ಯಂಗ್ಯಚಿತ್ರ ಮಾಲಿಕೆಗಳಲ್ಲಿ ಧೂಮಪಾನದ ದೃಶ್ಯಗಳು ಪ್ರಸಾರವಾಗುವುದರ ಕುರಿತು ಓರ್ವ ತಾಯಿ OFCOMಗೆ ಇತ್ತೀಚೆಗೆ ದೂರುನೀಡಿದ್ದಳು. ಇದರ ಫಲವಾಗಿ ಟಾಮ್ ಅಂಡ್ ಜೆರ್ರಿ ಚಲನಚಿತ್ರದಲ್ಲಿನ ಧೂಮಪಾನದ ದೃಶ್ಯಗಳನ್ನು ಕತ್ತರಿ ಪ್ರಯೋಗಕ್ಕೆ (ಸೆನ್ಸಾರ್‌ಷಿಪ್‌ಗೆ) ಒಳಪಡಿಸಬಹುದು ಎಂಬ ವರದಿಗಳು ಹೊರಬಂದವು.[೪]
- ಸಂಭಾಷಣೆಯು ಇಲ್ಲದ ಕಾರಣದಿಂದಾಗಿ ಟಾಮ್ ಅಂಡ್ ಜೆರ್ರಿ ಸರಣಿಯನ್ನು ವಿವಿಧ ವಿದೇಶಿ ಭಾಷೆಗಳಿಗೆ ಸುಲಭವಾಗಿ ಭಾಷಾಂತರಿಸಲಾಯಿತು. ಜಪಾನ್‌ನಲ್ಲಿ 1964ರಲ್ಲಿ ಟಾಮ್ ಅಂಡ್ ಜೆರ್ರಿ ಯ ಪ್ರಸಾರ ಪ್ರಾರಂಭವಾಯಿತು. ಜಪಾನ್‌ನಲ್ಲಿ TV ಅಸಾಹಿ ಎಂಬ ವಾಹಿನಿಯಿಂದ 2005ರಲ್ಲಿ ಕೈಗೊಳ್ಳಲಾದ ರಾಷ್ಟ್ರವ್ಯಾಪಿ ಸಮೀಕ್ಷೆಯಲ್ಲಿ ಹದಿಹರೆಯದವರಿಂದ ಮೊದಲ್ಗೊಂಡು ಅರವತ್ತರ ವಯಸ್ಸಿನಲ್ಲಿರುವ, ಮಾದರಿ ವಯೋಮಾನದ ಗುಂಪಿಗೆ ಸೇರಿದ ಜನರು ಸಾರ್ವಕಾಲಿಕವಾದ 100 ಅಗ್ರಗಣ್ಯ "ಅನಿಮೆ"ಗಳ ಪಟ್ಟಿಯಲ್ಲಿ ಟಾಮ್ ಅಂಡ್ ಜೆರ್ರಿ ಗೆ #85ರ ಶ್ರೇಯಾಂಕವನ್ನು ನೀಡಿದರು.
- ಇದೇ ರೀತಿಯಲ್ಲಿ, ಶ್ರೇಯಾಂಕ ಪಟ್ಟಿಯನ್ನು ಪ್ರಸಾರ ಮಾಡಿದ ನಂತರ ವೆಬ್ ಮಾಧ್ಯಮದ ಮೂಲಕ ಇದೇ ಮಾದರಿ ವಯೋಮಾನದವರ ಜನಮತ ಸಂಗ್ರಹ ಮಾಡಿದಾಗ, ಟಾಮ್ ಅಂಡ್ ಜೆರ್ರಿಗೆ #58ರ ಶ್ರೇಣಿಯು ದೊರೆತಿದ್ದು, ಇದು ಆ ಪಟ್ಟಿಯಲ್ಲಿನ ಏಕೈಕ ಜಪಾನಿಯೇತರ ಅನಿಮೇಷನ್ ಚಿತ್ರಸರಣಿಯಾಗಿದೆ. ಅಷ್ಟೇ ಅಲ್ಲ, ಸುಬಾಸಾ: ರಿಸರ್ವಾಯರ್ ಕ್ರಾನಿಕಲ್ , ಎ ಲಿಟ್ಲ್ ಪ್ರಿನ್ಸೆಸ್ ಸಾರಾ ದಂತಹ ಶ್ರೇಷ್ಠ ಅನಿಮೆ ಚಿತ್ರಗಳನ್ನು ಹಾಗೂ ಮೆಕ್ರಾಸ್ , ಘೋಸ್ಟ್ ಇನ್ ದಿ ಷೆಲ್ ಮತ್ತು ರುರೌನಿ ಕೆನ್‌ಶಿನ್ ನಂತಹ ಅತಿ-ಶ್ರೇಷ್ಠ ಚಿತ್ರಗಳನ್ನು ಟಾಮ್ ಅಂಡ್ ಜೆರ್ರಿಯು ಈ ಮೂಲಕ ಬಗ್ಗು ಬಡಿದಿದೆ.
- (ಮೂಲ ಯಾವುದೇ ಇರಲಿ, ಜಪಾನ್‌ನಲ್ಲಿ ಕೇವಲ ಜಪಾನಿಯರ ಅನಿಮೇಷನ್ ಚಿತ್ರಗಳಿಗೆ ಮಾತ್ರವೇ ಅಲ್ಲದೇ ಎಲ್ಲಾ ಅನಿಮೇಷನ್ ಚಿತ್ರಗಳನ್ನೂ "ಅನಿಮೆ" ಎಂದೇ ಉಲ್ಲೇಖಿಸಲಾಗುತ್ತದೆ ಎಂಬುದನ್ನು ಇಲ್ಲಿ ಗಮನಿಸಬೇಕು). ಟಾಮ್ ಅಂಡ್ ಜೆರ್ರಿ ಜೋಡಿಯು ದೀರ್ಘಕಾಲದಿಂದಲೂ ಜರ್ಮನಿಯಲ್ಲಿ ಜನಪ್ರಿಯವಾಗಿವೆ. ಪ್ರಾಸಬದ್ಧವಾದ ಜರ್ಮನ್ ಭಾಷೆಯ ಸಾಲುಗಳನ್ನು ಬಳಸಿ ಸದರಿ ವ್ಯಂಗ್ಯಚಿತ್ರ ಮಾಲಿಕೆಗಳಿಗೆ ಮರುಮಾತಿನ ಲೇಪ ನೀಡಲಾಗಿದ್ದು, ತೆರೆಯ ಮೇಲೆ ಏನು ನಡೆಯುತ್ತಿದೆ ಎಂಬುದನ್ನು ಅದು ವಿವರಿಸುವುದಲ್ಲದೆ ಹೆಚ್ಚುವರಿಯಾಗಿ ತಮಾಷೆಯ ವಸ್ತು-ವಿಷಯವನ್ನು ಒದಗಿಸುತ್ತದೆ.
- ಜೆರ್ರೀಸ್ ಡೈರಿ (1949) ಎಂಬ ಕಂತಿನಲ್ಲಿ ವಿವಿಧ ಕಂತುಗಳು ಸಾಮಾನ್ಯವಾಗಿ ಸೇರಿಸಿಕೊಂಡಿದ್ದು, ಅದರಲ್ಲಿ ಹಿಂದಿನ ಸಾಹಸಗಳ ಕುರಿತು ಟಾಮ್ ಓದುತ್ತಾನೆ.ಭಾರತ, ಆಗ್ನೇಯ ಏಷ್ಯಾ, ಮಧ್ಯಪ್ರಾಚ್ಯ, ಪಾಕಿಸ್ತಾನ, ಅರ್ಜೆಂಟೈನಾ, ಮೆಕ್ಸಿಕೋ, ಕೊಲಂಬಿಯಾ, ಬ್ರೆಜಿಲ್, ವೆನಿಜುವೆಲಾ ಮತ್ತು ಇತರ ಲ್ಯಾಟಿನ್ ಅಮೆರಿಕನ್ ದೇಶಗಳಷ್ಟೇ ಅಲ್ಲದೇ, ರೊಮೇನಿಯಾದಂತಹ ಪೌರ್ವಾತ್ಯ ಯುರೋಪ್ ದೇಶಗಳಲ್ಲೂ ಸಹ ಕಾರ್ಟೂನ್ ನೆಟ್‌ವರ್ಕ್ ವಾಹಿನಿಯು ಪ್ರತಿ ದಿನವೂ ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಗಳನ್ನು ಈಗಲೂ ಪ್ರಸಾರ ಮಾಡುತ್ತಿದೆ. ರಷ್ಯಾದಲ್ಲಿನ ಸ್ಥಳೀಯ ವಾಹಿನಿಗಳೂ ಸಹ ತಮ್ಮ ಹಗಲುಹೊತ್ತಿನ ಕಾರ್ಯಕ್ರಮಗಳ ಸೂಚಿಯಲ್ಲಿ ಇದರ ಪ್ರದರ್ಶನವನ್ನು ಪ್ರಸಾರಮಾಡುತ್ತವೆ. 1989ರಲ್ಲಿ ಕಮ್ಯುನಿಸ್ಟ್ ಸಿದ್ಧಾಂತವು ಕುಸಿಯುವುದಕ್ಕೆ ಮುಂಚಿತವಾಗಿ, ಝೆಕೋಸ್ಲೋವಾಕಿಯಾದಲ್ಲಿ (1998ರಲ್ಲಿ) ಪ್ರಸಾರವಾದ ಪಾಶ್ಚಿಮಾತ್ಯ ಮೂಲದ ಕೆಲವೇ ವ್ಯಂಗ್ಯಚಿತ್ರ ಮಾಲಿಕೆಗಳಲ್ಲಿ ಟಾಮ್ ಅಂಡ್ ಜೆರ್ರಿ ಯೂ ಒಂದಾಗಿತ್ತು.
ವಿವಾದ
[ಬದಲಾಯಿಸಿ]- 1940, 1950 ಮತ್ತು 1960ರ ದಶಕದ ಇತರ ಅಸಂಖ್ಯಾತ ಚಲಿತ ವ್ಯಂಗ್ಯಚಿತ್ರ ಮಾಲಿಕೆಗಳಂತೆ ಟಾಮ್ ಅಂಡ್ ಜೆರ್ರಿ ಯು ನಂತರದ ವರ್ಷಗಳಲ್ಲಿ ರಾಜಕೀಯೋಚಿತವಾದುದು ಎಂದು ಪರಿಗಣಿಸಲ್ಪಡಲಿಲ್ಲ. ವರ್ಣಭೇದ ನೀತಿಯ ಅಂಶಗಳನ್ನಾಗಲೀ ಅಥವಾ ಸ್ಫೋಟವೊಂದರ ನಂತರ ಕಪ್ಪುಮುಖದಲ್ಲಿ ಕಾಣಿಸಿಕೊಳ್ಳುವ ಪಾತ್ರವನ್ನಾಗಲೀ ಹೊಂದಿರುವ ಸರಿಸುಮಾರು ಇಪ್ಪತ್ನಾಲ್ಕು ವ್ಯಂಗ್ಯಚಿತ್ರ ಮಾಲಿಕೆಗಳು ಈ ಮುಂಚೆ ಲಭ್ಯವಿದ್ದು, ಇಂದು ದೂರದರ್ಶನದಲ್ಲಿ ಅವು ಪ್ರಸಾರವಾಗುವ ಸಮಯದಲ್ಲಿ ಆ ಭಾಗಕ್ಕೆ ಕತ್ತರಿ ಪ್ರಯೋಗ ಮಾಡಲಾಗುತ್ತಿದೆ. ಇಷ್ಟಿದ್ದರೂ ಕೂಡ, ದಿ ಯಾಂಕೀ ಡೂಡ್ಲ್ ಮೌಸ್ ಕಂತಿನಲ್ಲಿ ಬರುವ ಕಪ್ಪುಮುಖದ ಹಾಸ್ಯಪ್ರಸಂಗ ಹಾಗೂ ಸೇಫ್ಟಿ ಸೆಕೆಂಡ್ ಕಂತಿನ ಅಂತ್ಯದಲ್ಲಿ ಬರುವ ಮತ್ತೊಂದು ಕಪ್ಪುಮುಖದ ಹಾಸ್ಯಪ್ರಸಂಗಗಳು, ಅವು ಪ್ರಸಾರವಾಗುವ ದೇಶವನ್ನು ಅವಲಂಬಿಸಿ ಹಾಗೆಯೇ ಉಳಿದುಕೊಂಡಿವೆ.
- ಮ್ಯಾಮಿ ಟೂ ಷೂಸ್ ಎಂಬ ಕಪ್ಪುವರ್ಣೀಯ ಮನೆಕೆಲಸದಾಕೆಯ ಪಾತ್ರವನ್ನು, ದಂಶಕ (ಕೋರೆಹಲ್ಲು ಹೊಂದಿರುವ) ಪ್ರಾಣಿಯೊಂದರಿಂದ ಸಮಸ್ಯೆಯನ್ನು ಎದುರಿಸುತ್ತಿರುವ ಬಡಪಾಯಿ ಕಪ್ಪು ಮಹಿಳೆಯಂತೆ ಚಿತ್ರಿಸಿರುವುದು ವರ್ಣಭೇದ ನೀತಿಯನ್ನು ಪ್ರತಿಪಾದಿಸಿದಂತೆ ಎಂದು ಹಲವು ಸಂದರ್ಭಗಳಲ್ಲಿ ಪರಿಗಣಿಸಲಾಗಿದೆ. ಆ ಮನೆಕೆಲಸದಾಕೆಯ ಪಾತ್ರವು ಕಡಿಮೆ ರೂಢಮಾದರಿಯ ಹಾಗೆ ಧ್ವನಿಸುವಂತೆ ಮಾಡುವ ಆಶಯದೊಂದಿಗೆ 1990ರ ದಶಕದ ಮಧ್ಯಭಾಗದಲ್ಲಿ ಆಕೆಯ ಧ್ವನಿಯ ಮೇಲೆ ಟರ್ನರ್‌ರಿಂದ ಮಾತಿನ ಮರುಲೇಪನ ಮಾಡಿಸಲಾಯಿತು. ಇದರ ಪರಿಣಾಮವಾಗಿ ಧ್ವನಿಯ ಉಚ್ಚಾರಣೆಯು ಹೆಚ್ಚು ಐರಿಷ್ ಶೈಲಿಯಲ್ಲಿ ಮೂಡಿಬಂತು.
- ನಿರ್ದಿಷ್ಟವಾಗಿ ಹೇಳಬೇಕೆಂದರೆ, ಹಿಸ್ ಮೌಸ್ ಫ್ರೈಡೆ ಎಂಬ ವ್ಯಂಗ್ಯಚಿತ್ರ ಮಾಲಿಕೆಯಲ್ಲಿ ನರಭಕ್ಷಕರನ್ನು ರೂಢಿಗತ ವರ್ಣಭೇದ ನೀತಿಯ ಮಾದರಿಯಂತೆ ತೋರಿಸಲಾಗಿರುವುದರಿಂದ ಅದನ್ನೀಗ ದೂರದರ್ಶನದ ಪ್ರಸಾರದ ಶ್ರೇಣಿಯಿಂದಲೇ ಹೊರಗಿಡ ಲಾಗಿದೆ. ಒಂದು ವೇಳೆ ಅದನ್ನು ತೋರಿಸಿದರೂ, ಆ ನರಭಕ್ಷಕಗಳ ಬಾಯಿಗಳ ಅಲುಗಾಟ ಕಂಡುಬಂದರೂ ಸಹ, ಸಂಭಾಷಣೆಯನ್ನು ಕತ್ತರಿಸಲಾಗಿರುತ್ತದೆ. 2006ರಲ್ಲಿ ಯುನೈಟೆಡ್ ಕಿಂಗ್‌ಡಂನ ಬೂಮರಾಂಗ್ ವಾಹಿನಿಯು UKಯಲ್ಲಿ ಪ್ರಸಾರವಾಗುತ್ತಿದ್ದ ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಗಳನ್ನು ಪರಿಷ್ಕರಿಸಲು ಯೋಜಿಸಿತು.
- ಇಲ್ಲಿನ ಪಾತ್ರಗಳು "ಮನ್ನಿಸುವಿಕೆಗೆ ಅರ್ಹವಾಗಿದ್ದ, ಸ್ವೀಕಾರಾರ್ಹ ಅಥವಾ ಚಿತ್ತಾಕರ್ಷಕ" ಮಾದರಿಯಲ್ಲಿ ಧೂಮಪಾನವನ್ನು ಮಾಡುತ್ತಿರುವಂತೆ ಈ ವ್ಯಂಗ್ಯಚಿತ್ರ ಮಾಲಿಕೆಯಲ್ಲಿ ತೋರಿಸಲಾಗಿತ್ತು. ಇದನ್ನನುಸರಿಸಿ, ಈ ವ್ಯಂಗ್ಯಚಿತ್ರ ಮಾಲಿಕೆಗಳು ಯುವ ವೀಕ್ಷಕರ ವೀಕ್ಷಣೆಗೆ ಸೂಕ್ತವಾಗಿಲ್ಲ ಎಂದು ವೀಕ್ಷಕರೊಬ್ಬರಿಂದ ದೂರೊಂದು ಬಂತು. ತರುವಾಯ, UK ಮಾಧ್ಯಮದ ಕಾವಲುಸಂಸ್ಥೆಯಾದ OFCOMನಿಂದ ತನಿಖೆಯೂ ಪ್ರಾರಂಭವಾಯಿತು. ಇದು U.S.ಗೂ ತಲುಪಿದ್ದರಿಂದ ಈ ವಿಷಯದಲ್ಲಿ ಅದೂ ಸಹ ತೊಡಗಿಸಿಕೊಂಡು, ಕಪ್ಪುಮುಖದ ಹಾಸ್ಯಪ್ರಸಂಗಗಳನ್ನು ಕತ್ತರಿಸಿ ಹಾಕುವಲ್ಲಿ ವಿಷಯವು ಪರ್ಯವಸಾನವಾಯಿತು. ಈ ಮಾದರಿಯ ಎಲ್ಲಾ ದೃಶ್ಯಗಳನ್ನೂ ಕತ್ತರಿಸಿಹಾಕಿಲ್ಲವಾದ್ದರಿಂದ ಈ ಕ್ರಮವನ್ನು ಮನಬಂದಂತೆ ಮಾಡಿದ ಕ್ರಮ ಎನ್ನಬಹುದು.
- ಚರಿತ್ರಾರ್ಹ ವ್ಯಂಗ್ಯಚಿತ್ರ ಮಾಲಿಕೆಗಳನ್ನು ಪರಿಷ್ಕರಿಸುವ 1990ರ ದಶಕದ ಮಧ್ಯಭಾಗದ ಪ್ರಯತ್ನಗಳು, ಆ ಕಾಲದ ವೀಕ್ಷಣೆಗೆ ಅವನ್ನು ವೀಕ್ಷಣಾಯೋಗ್ಯವನ್ನಾಗಿಸುವ ಒಂದು ಮಾರ್ಗದಂತೆ ಕಂಡರೂ ಸಹ, ಮೂಲಸ್ವರೂಪದ ವ್ಯಂಗ್ಯಚಿತ್ರ ಮಾಲಿಕೆಗಳನ್ನು ಪರಿಷ್ಕರಿಸುವ ಅಥವಾ ಕತ್ತರಿ ಪ್ರಯೋಗಕ್ಕೆ ಗುರಿಮಾಡುವ ಕ್ರಮವು ವಿವಾದಾಸ್ಪದವಾಗಿದೆ. ಏಕೆಂದರೆ ಇದು ಸದರಿ ವ್ಯಂಗ್ಯಚಿತ್ರ ಮಾಲಿಕೆಯು ಜನಪ್ರಿಯವಾಗಲು ಕಾರಣವಾದ ಮೂಲ ಕಲಾತ್ಮಕ ಅಂಶವನ್ನು ಕುಗ್ಗಿಸುತ್ತದೆ. ಇಂದಿನ ಮಾನದಂಡಗಳಿಗೆ ಹೋಲಿಸಿದಾಗ ಮ್ಯಾಮಿ ಟೂ ಷೂಸ್ ಪಾತ್ರದ ಸಂಭಾಷಣೆಯು ವರ್ಣಭೇದ ನೀತಿ ಹಾಗೂ ರೂಢಿಗತ ಮಾದರಿಯ ಪ್ರತಿರೂಪದಂತೆ ಕಂಡರೂ ಸಹ, ಇದಕ್ಕೆ ಲಿಲಿಯನ್ ರಾಂಡಾಲ್ಫ್ ಕೂಡಾ ಧ್ವನಿ ನೀಡಿದ್ದರು ಎಂಬುದು ಗಮನಾರ್ಹ ಅಂಶ.
- ಆ ಕಾಲದಲ್ಲಿನ ಕೆಲವೇ ಕೆಲವು, ಅಮೆರಿಕನ್ ನೀಗ್ರೋ ಪ್ರದರ್ಶನ ಕಲಾವಿದರಲ್ಲಿ ಒಬ್ಬರಾಗಿದ್ದ ಅವರು ಮನರಂಜನಾ ಉದ್ಯಮದಲ್ಲಿ ತಮ್ಮ ನೆಲೆಯನ್ನು ಕಂಡುಕೊಂಡಿದ್ದರು. ಮ್ಯಾಮಿ ಪಾತ್ರಕ್ಕೆ ನೀಡಲಾಗಿರುವ ಹೊಸ ಅಶರೀರವಾಣಿಗಳು ರಾಂಡಾಲ್ಫ್‌ರ ಸಂಭಾಷಣಾ ದನಿಯ ಹೆಚ್ಚಿನಂಶವನ್ನು ಹಿಡಿದಿಟ್ಟುಕೊಂಡಿದ್ದರೂ ಸಹ, ವ್ಯಂಗ್ಯಚಿತ್ರ ಮಾಲಿಕೆಯ ಸರಣಿಗೆ ರಾಂಡಾಲ್ಫ್ ನೀಡಿರುವ ಕಲಾತ್ಮಕ ಕೊಡುಗೆಯನ್ನು ಅಳಿಸಿಹಾಕಿವೆ ಎನ್ನಬಹುದು. ಅಶರೀರವಾಣಿಗಳ ಬಳಕೆಯು, ವಿವಾದಕ್ಕೆ ಸಂಬಂಧಿಸಿದಂತೆ ಋಣಾತ್ಮಕ ಗಮನವನ್ನು ಸೆಳೆಯುವುದರ ಜೊತೆಗೆ ಹೆಚ್ಚಿನ ಸಮಸ್ಯೆಗಳನ್ನೂ ಹುಟ್ಟುಹಾಕುತ್ತದೆಯಾದ್ದರಿಂದ ಅಶರೀರವಾಣಿಗಳನ್ನು ಮತ್ತೊಮ್ಮೆ ಕೈಗೆತ್ತಿಕೊಳ್ಳುವುದೂ ಕೂಡಾ ಗಮನ ಸೆಳೆದಿವೆ.
ನಂತರದ ಪ್ರದರ್ಶನಗಳು, ವಿಶೇಷ ಕಾರ್ಯಕ್ರಮಗಳು ಮತ್ತು ಕಿರುಚಿತ್ರಗಳು
[ಬದಲಾಯಿಸಿ]- 1975ರಲ್ಲಿ ಹಾನ್ನಾ ಮತ್ತು ಬಾರ್ಬೆರಾರೊಂದಿಗೆ ಟಾಮ್ ಅಂಡ್ ಜೆರ್ರಿ ಮತ್ತೆ ಒಂದುಗೂಡಿದ್ದರಿಂದಾಗಿ, ಶನಿವಾರದ ಮುಂಜಾನೆಯ ಪ್ರದರ್ಶನಗಳಿಗಾಗಿ ಒಂದಷ್ಟು ಹೊಸ ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಗಳು ಅವರಿಂದ ನಿರ್ಮಾಣಗೊಂಡವು. ಏಳು-ನಿಮಿಷಗಳ ಅವಧಿಯ ಈ 48 ಕಿರು ವ್ಯಂಗ್ಯಚಿತ್ರ ಮಾಲಿಕೆಗಳು ದಿ ಗ್ರೇಟ್ ಗ್ರೇಪ್ ಏಪ್ ಮತ್ತು ಮಂಬ್ಲಿ ವ್ಯಂಗ್ಯಚಿತ್ರ ಮಾಲಿಕೆಗಳೊಂದಿಗೆ ಜೊತೆಗೂಡಿ, ದಿ ಟಾಮ್ ಅಂಡ್ ಜೆರ್ರಿ/ಗ್ರೇಪ್ ಏಪ್ ಷೋ , ದಿ ಟಾಮ್ ಅಂಡ್ ಜೆರ್ರಿ/ಗ್ರೇಪ್ ಏಪ್/ಮಂಬ್ಲಿ ಷೋ , ಮತ್ತು ದಿ ಟಾಮ್ ಅಂಡ್ ಜೆರ್ರಿ/ಮಂಬ್ಲಿ ಷೋ ಎಂಬ ಪ್ರದರ್ಶನ ಸರಣಿಯನ್ನೇ ಸೃಷ್ಟಿಸಿದವು.
- 1975ರ ಸೆಪ್ಟೆಂಬರ್ 6ರಿಂದ 1977ರ ಸೆಪ್ಟೆಂಬರ್ 3ರವರೆಗೆ ಈ ಎಲ್ಲಾ ಕಿರುಚಿತ್ರಗಳೂ ABC ವಾಹಿನಿಯ ಶನಿವಾರದ ಬೆಳಗಿನ ಕಾರ್ಯಕ್ರಮ ಸೂಚಿಯಲ್ಲಿ ಪ್ರದರ್ಶನ ಕಂಡವು. ದೂರದರ್ಶನದಲ್ಲಿ ನಾಟಕೀಯ ಕಿರುಚಿತ್ರಗಳು ಪ್ರದರ್ಶನಗೊಂಡ ಎಷ್ಟೋ ವರ್ಷಗಳ ನಂತರದಲ್ಲಿನ, TVಗಾಗಿಯೇ ನಿರ್ಮಾಣಗೊಂಡ ಹೊಸ ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಯ ಸರಣಿಗಳಲ್ಲಿ ಇದೇ ಮೊದಲನೆಯದು. ತಾವು ರೂಪುಗೊಳ್ಳುತ್ತಿದ್ದ ವರ್ಷಗಳ ಅವಧಿಯಲ್ಲಿ ಶತ್ರುಗಳಾಗಿದ್ದ ಟಾಮ್ ಅಂಡ್ ಜೆರ್ರಿ (ಈಗ ಬಿಲ್ಲುಕುಣಿಕೆಯ ಕೆಂಪು ಟೈ ಹೊಂದಿದ್ದಾನೆ), ಈ ವ್ಯಂಗ್ಯಚಿತ್ರ ಮಾಲಿಕೆಗಳಲ್ಲಿ ಅಹಿಂಸಾವಾದಿ ಸ್ನೇಹಿತರಾಗಿ ಬದಲಾಗಿದ್ದು ಜೊತೆಜೊತೆಯಾಗಿಯೇ ಸಾಹಸಕಾರ್ಯಗಳನ್ನು ಕೈಗೊಳ್ಳುತ್ತಾರೆ.
- ಮಕ್ಕಳ TVಗಾಗಿ ರೂಪಿಸಲಾದ, ಹಿಂಸೆಯನ್ನು ವಿರೋಧಿಸುವ ಕಟ್ಟುನಿಟ್ಟಾದ ನಿಯಮಗಳನ್ನು ಹಾನ್ನಾ-ಬಾರ್ಬೆರಾ ಜೋಡಿಯು ಪಾಲಿಸಬೇಕಿದ್ದರಿಂದ ಈ ಕ್ರಮ ಕೈಗೊಳ್ಳಬೇಕಾಯಿತು. ಕೆನಡಾದ TELETOON ವಾಹಿನಿ ಮತ್ತು ಅದರ ಶಿಷ್ಟ ಪ್ರತಿರೂಪವಾದ TELETOON ರೆಟ್ರೋದ ಮೂಲಕ ದಿ ಟಾಮ್ ಅಂಡ್ ಜೆರ್ರಿ ಷೋ ಈಗಲೂ ಪ್ರಸಾರವಾಗುತ್ತಿದೆ. ಫಿಲ್ಮೇಷನ್ ಸ್ಟುಡಿಯೋಸ್ (MGM ಟೆಲಿವಿಷನ್‌ನ ಸಹಯೋಗದೊಂದಿಗೆ) ಕೂಡಾ ಟಾಮ್ ಅಂಡ್ ಜೆರ್ರಿ TV ಸರಣಿಯೊಂದನ್ನು ನಿರ್ಮಿಸಲು ಪ್ರಯತ್ನಪಟ್ಟಿತ್ತು. ದಿ ಟಾಮ್ ಅಂಡ್ ಜೆರ್ರಿ ಕಾಮಿಡಿ ಷೋ ಎಂಬ ಅವರ ಕಥನವು 1980ರಲ್ಲಿ ಪ್ರಥಮ ಪ್ರದರ್ಶನ ಕಂಡಿತು.
- ಮೂಲ MGM ಕಿರುಚಿತ್ರಗಳು ಬಂದಾಗಿನಿಂದಲೂ ಕಾಣಿಸದ ಡ್ರೂಪಿ, ಸ್ಪೈಕ್ (ಟೆಕ್ಸ್ ಎವೆರಿಯಿಂದ ಸೃಷ್ಟಿಸಲ್ಪಟ್ಟ ಮತ್ತೊಂದು ಗೂಳಿನಾಯಿ) ಮತ್ತು ಬಾರ್ನೆ ಕರಡಿಯಂತಹ ಪಾತ್ರಗಳ ತಾರಾಗಣವಿದ್ದ ಹೊಸ ವ್ಯಂಗ್ಯಚಿತ್ರ ಮಾಲಿಕೆಗಳನ್ನೂ ಅದು ಒಳಗೊಂಡಿತ್ತು. ಫಿಲ್ಮೇಷನ್ ಸ್ಟುಡಿಯೋದಿಂದ ನಿರ್ಮಾಣಗೊಂಡ ಮೂವತ್ತು ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಗಳು ಹಾನ್ನಾ-ಬಾರ್ಬೆರಾರ ಪ್ರಯತ್ನಗಳಿಗಿಂತ ಗಮನಾರ್ಹವಾಗಿ ವಿಭಿನ್ನವಾಗಿದ್ದವು. ಹೆಚ್ಚು ಪ್ರಮಾಣದಲ್ಲಿ "ಕೋಡಂಗಿ ಆಟ"ದ ಹಾಸ್ಯ ಸ್ವರೂಪದೊಂದಿಗೆ ಟಾಮ್ ಅಂಡ್ ಜೆರ್ರಿ ಯನ್ನು ಅದರ ಮೂಲ ಸ್ವರೂಪವಾದ ಬೆನ್ನಟ್ಟುವಿಕೆಯ ಸೂತ್ರಕ್ಕೆ ಮರಳಿ ತಂದಿದ್ದರಿಂದ ಈ ವಿಭಿನ್ನತೆ ಕಂಡುಬಂತು.
- ಬಹುಪಾಲು 1975ರ ಆವೃತ್ತಿಯಂತೆ, ಈ ಅವತಾರವನ್ನೂ ವೀಕ್ಷಕರು ಮೂಲ ಕೃತಿಗಳಷ್ಟು ಚೆನ್ನಾಗಿ ಸ್ವೀಕರಿಸಲಿಲ್ಲ. ಹೀಗಾಗಿ ಈ ಸರಣಿಯು CBS ವಾಹಿನಿಯ ಶನಿವಾರದ ಬೆಳಗಿನ ಕಾರ್ಯಕ್ರಮ ಸೂಚಿಯಲ್ಲಿ 1980ರ ಸೆಪ್ಟೆಂಬರ್ 6ರಿಂದ 1982ರ ಸೆಪ್ಟೆಂಬರ್ 4ರವರೆಗೆ ಮಾತ್ರ ಪ್ರಸಾರವಾಯಿತು. ಇದರ ಅನಿಮೇಷನ್ ಶೈಲಿಯು ದಿ ನ್ಯೂ ಅಡ್ವೆಂಚರ್ಸ್ ಆಫ್ ಮೈಟಿ ಮೌಸ್ ಅಂಡ್ ಹೆಕ್ಲ್ & ಜೆಕ್ಲ್ ನ ಶೈಲಿಯನ್ನು ಗಾಢವಾಗಿ ಹೋಲುತ್ತಿತ್ತು.
- ಹಳೆಯ, ಶಿಷ್ಟ ಶೈಲಿಯ ವ್ಯಂಗ್ಯಚಿತ್ರ ಮಾಲಿಕೆಯ ತಾರಾಪಾತ್ರಗಳನ್ನು ಮತ್ತೆ "ಶೈಶವರೂಪ"ಕ್ಕೆ ತರುವುದು 1980 ಮತ್ತು 1990ರ ದಶಕಗಳಲ್ಲಿನ ಶನಿವಾರದ ಬೆಳಗಿನ ದೂರದರ್ಶನ ಕಾರ್ಯಕ್ರಮಗಳಲ್ಲಿ ಕಂಡುಬಂದ ಅತಿದೊಡ್ಡ ಪ್ರವೃತ್ತಿಯಾಗಿತ್ತು. ಟರ್ನರ್ ಎಂಟರ್‌ಟೈನ್‌ಮೆಂಟ್ ಹಾಗೂ ಹಾನ್ನಾ-ಬಾರ್ಬೆರಾ ಪ್ರೊಡಕ್ಷನ್ಸ್‌ನ (ಇದು ಟರ್ನರ್ ಸಂಸ್ಥೆಗೆ 1991ರಲ್ಲಿ ಮಾರಾಟವಾಯಿತು) ಸಹ-ನಿರ್ಮಾಣದಲ್ಲಿ ಹೊರಬಂದ ಟಾಮ್ ಅಂಡ್ ಜೆರ್ರಿ ಕಿಡ್ಸ್ ಸರಣಿಯು 1990ರ ಸೆಪ್ಟೆಂಬರ್ 8ರಂದು FOX ವಾಹಿನಿಯಲ್ಲಿ ಪ್ರಥಮ ಪ್ರದರ್ಶನ ಕಂಡಿತು.
- ಸುಪ್ರಸಿದ್ಧ ಬೆಕ್ಕು-ಮತ್ತು-ಇಲಿ ಜೋಡಿಯು ಪರಸ್ಪರರನ್ನು ಬೆನ್ನಟ್ಟುವ ಪ್ರಕ್ರಿಯೆಯ ಹುರುಪಿನ ಕಥನವೊಂದನ್ನು ಇದು ಒಳಗೊಂಡಿತ್ತು. 1975ರ H-B ಸರಣಿಯಲ್ಲಿರುವಂತೆ ಜೆರ್ರಿಯು ತನ್ನ ಬಿಲ್ಲುಕುಣಿಕೆಯ ಕೆಂಪು ಟೈ ಧರಿಸುತ್ತಾನೆ, ಟಾಮ್ ಈಗ ಒಂದು ಕೆಂಪು ಟೋಪಿಯನ್ನು ಧರಿಸುತ್ತಾನೆ.ಸ್ಪೈಕ್ ಮತ್ತು ಅವನ ಮಗ ಟೈಕ್, ಹಾಗೂ ಡ್ರೂಪಿ ಮತ್ತು ಅವನ ಮಗ ಡ್ರಿಪಲ್ ಇವರೇ ಮೊದಲಾದ ಪಾತ್ರಧಾರಿಗಳು ಸದರಿ ಪ್ರದರ್ಶನದ ಮೀಸಲು ವಿಭಾಗಗಳಲ್ಲಿ ಕಾಣಿಸಿಕೊಂಡಿದ್ದು, ಅದು 1993ರ ಅಕ್ಟೋಬರ್ 2ರವರೆಗೂ ಪ್ರಸಾರವಾಗಿದೆ.
- 2000ದಲ್ಲಿ ಟಾಮ್ ಅಂಡ್ ಜೆರ್ರಿ:ದಿ ಮ್ಯಾನ್‌ಷನ್ ಕ್ಯಾಟ್ ಎಂಬ ಶೀರ್ಷಿಕೆಯ ಹೊಸ ದೂರದರ್ಶನ ವಿಶೇಷ ವ್ಯಂಗ್ಯಚಿತ್ರ ಮಾಲಿಕೆಯು ಕಾರ್ಟೂನ್ ನೆಟ್‌ವರ್ಕ್ ನಲ್ಲಿ ಪ್ರಥಮ ಪ್ರದರ್ಶನ ಕಂಡಿತು. ವ್ಯಂಗ್ಯಚಿತ್ರ ಮಾಲಿಕೆಯಲ್ಲಿ ಎಂದಿಗೂ ಮುಖವನ್ನೇ ತೋರಿಸದ ಟಾಮ್‌ನ ಮಾಲೀಕನ ಧ್ವನಿಯ ಸ್ವರೂಪದಲ್ಲಿ ಜೋ ಬಾರ್ಬೆರಾ (ಅವರು ಓರ್ವ ಸೃಜನಶೀಲ ಸಮಾಲೋಚಕರು ಕೂಡಾ) ಇದರಲ್ಲಿ ಪಾಲ್ಗೊಂಡಿದ್ದಾರೆ.
- ಈ ವ್ಯಂಗ್ಯಚಿತ್ರ ಮಾಲಿಕೆಯಲ್ಲಿ, ಹ್ಯಾಬಿಟ್‌ರೈಲು ಒಂದರಲ್ಲಿ ವಾಸವಾಗಿರುವ ಜೆರ್ರಿಯು ಟಾಮ್‌ನಂತೆಯೇ ಒಂದು ಸಾಕುಪ್ರಾಣಿಯಾಗಿರುತ್ತದೆ. "ಎಲ್ಲದಕ್ಕೂ ಆ ಇಲಿಯನ್ನೇ ದೂಷಿಸುತ್ತಾ" ಇರದಂತೆ ಅವರ ಮಾಲೀಕ ಟಾಮ್‌ಗೆ ಆಗಾಗ ಸೂಚಿಸುತ್ತಿರುತ್ತಾನೆ.
2005ರಲ್ಲಿ ದಿ ಕರಾಟೆಗಾರ್ಡ್ ಎಂಬ ಶೀರ್ಷಿಕೆಯ, ಟಾಮ್ ಮತ್ತು ಜೆರ್ರಿಯ ಹೊಸ ನಾಟಕೀಯ ಕಿರುಚಿತ್ರವೊಂದು 2005ರ ಸೆಪ್ಟೆಂಬರ್ 27ರಂದು ಲಾಸ್ ಏಂಜಲೀಸ್ ಸಿನೆಮಾಸ್‌ನಲ್ಲಿ ಪ್ರಥಮ ಪ್ರದರ್ಶನವನ್ನು ಕಂಡಿತು. ಇದರ ಕಥೆ ಮತ್ತು ನಿರ್ದೇಶನ ವಿಭಾಗವನ್ನು ಬಾರ್ಬೆರಾ ಹಾಗೂ ಸ್ಪೈಕ್ ಬ್ರಾಂಡ್ ನಿರ್ವಹಿಸಿದ್ದರೆ, ಜೋಸೆಫ್ ಬಾರ್ಬೆರಾ ಹಾಗೂ ಇವಾವೊ ಟಕಮೊಟೊ ಕಥಾಫಲಕವನ್ನು ರಚಿಸಿದ್ದರು.
- ಈ ಕಿರುಚಿತ್ರವನ್ನು ಜೋಸೆಫ್ ಬಾರ್ಬೆರಾ, ಸ್ಪೈಕ್ ಬ್ರಾಂಡ್ ಮತ್ತು ಟೋನಿ ಸೆರ್ವೋನ್‌ರವರುಗಳು ನಿರ್ಮಿಸಿದ್ದರು. ಟಾಮ್ ಅಂಡ್ ಜೆರ್ರಿಯ 'ಅರವತ್ತೈದನೇ ವಾರ್ಷಿಕೋತ್ಸವದ ಆಚರಣೆಯ ಅಂಗವಾಗಿ ಈ ಕಿರುಚಿತ್ರವು ಬಂದಿತು. ಬಾರ್ಬೆರಾ ಮತ್ತು ಹಾನ್ನಾರವರ ಮೂಲ MGM ಕಿರು ವ್ಯಂಗ್ಯಚಿತ್ರ ಮಾಲಿಕೆಗಳು ಬಂದಾಗಿನಿಂದ ಮೊದಲ್ಗೊಂಡು, ಸರಣಿಯಲ್ಲಿ ಬಾರ್ಬೆರಾ ಓರ್ವ ಕತೆಗಾರನಾಗಿ, ನಿರ್ದೇಶಕನಾಗಿ ಮತ್ತು ಕಥಾಫಲಕದ ಕಲಾವಿದನಾಗಿ ಮೊದಲ ಬಾರಿಗೆ ಮರಳುವಲ್ಲಿ ಈ ಚಿತ್ರವು ಸಾಕ್ಷಿಯಾಯಿತು. ನಿರ್ದೇಶಕ/ಅನಿಮೇಟರ್ ಸ್ಪೈಕ್ ಬ್ರಾಂಡ್‌ರನ್ನು ಪಾತ್ರದ ಅತ್ಯುತ್ತಮ ಅನಿಮೇಷನ್ ಕಾರ್ಯಕ್ಕಾಗಿ ಆನ್ನೀ ಪ್ರಶಸ್ತಿಗಾಗಿ ನಾಮಕರಣ ಮಾಡಲಾಯಿತು.
- 2006ರ ಜನವರಿ 27ರಂದು ಈ ಕಿರುಚಿತ್ರವು ಕಾಟೂನ್ ನೆಟ್‌ವರ್ಕ್‌ನಲ್ಲಿ ಮೊದಲ ಪ್ರದರ್ಶನ ಕಂಡಿತು. 2006ರ ವರ್ಷದ ಪ್ರಥಮಾರ್ಧದ ಅವಧಿಯಲ್ಲಿ, ಟಾಮ್ ಅಂಡ್ ಜೆರ್ರಿ ಟೇಲ್ಸ್ ಎಂಬ ಹೆಸರಿನ ಹೊಸ ಸರಣಿಯು ವಾರ್ನರ್ ಬ್ರದರ್ಸ್ ಅನಿಮೇಷನ್ ಸಂಸ್ಥೆಯಲ್ಲಿ ನಿರ್ಮಾಣವಾಯಿತು. ಸಂಯುಕ್ತ ಸಂಸ್ಥಾನಗಳ ಮತ್ತು ಯುನೈಟೆಡ್ ಕಿಂಗ್‌ಡಂನ ಹೊರಗಿರುವ ಮಾರುಕಟ್ಟೆಗಳು ಮಾತ್ರವೇ ಒಪ್ಪಂದಕ್ಕೆ ಸಹಿ ಹಾಕಿದ್ದರಿಂದಾಗಿ, ಅರ್ಧಗಂಟೆ ಅವಧಿಯ ಹದಿಮೂರು ಕಂತುಗಳನ್ನು (ಪ್ರತಿಯೊಂದೂ ಮೂರು ಕಿರುಚಿತ್ರಗಳನ್ನು ಒಳಗೊಂಡಿದ್ದವು) ನಿರ್ಮಿಸಲಾಯಿತು.
- ಈ ಪ್ರದರ್ಶನವು ನಂತರ 2006ರ ಫೆಬ್ರವರಿಯಲ್ಲಿ UKಯನ್ನು ಪ್ರವೇಶಿಸಿ ಬೂಮರಾಂಗ್‌ನಲ್ಲಿ ಪ್ರಸಾರವಾಯಿತು ಹಾಗೂ U.S.ನ್ನೂ ಪ್ರವೇಶಿಸಿ ದಿ CWನ ದಿ CW4ಕಿಡ್ಸ್ ವಾಹಿನಿಯಲ್ಲೂ ಮೂಡಿಬಂತು.[೫] ಹಿಂಸಾತ್ಮಕ ದೃಶ್ಯಗಳ ಜೊತೆಗೆ, ಶಿಷ್ಟ ಕಿರುಚಿತ್ರಗಳ ಮೂಲ ಶೈಲಿಯನ್ನು ಅಳವಡಿಸಿಕೊಂಡಿರುವ ಟಾಮ್ ಅಂಡ್ ಜೆರ್ರಿ TV ಸರಣಿಯಲ್ಲಿ ಟೇಲ್ಸ್ ಮೊಟ್ಟಮೊದಲನೆಯದಾಗಿದೆ. 2008ರ ಮಾರ್ಚ್ 22ಕ್ಕೆ ಇದರ ಪ್ರದರ್ಶನವು ಅಂತ್ಯಗೊಂಡಿದ್ದು, ದೂರದರ್ಶನಕ್ಕಾಗಿ ಮೀಸಲಾದ ಟಾಮ್ ಮತ್ತು ಜೆರ್ರಿ ಆಧರಿತ ವ್ಯಂಗ್ಯಚಿತ್ರ ಮಾಲಿಕೆಯ ಪ್ರದರ್ಶನದಲ್ಲಿ ಇತ್ತೀಚಿನ ಈ ಕಿರುಚಿತ್ರವು ಗಮನಾರ್ಹವಾಗಿದೆ.
ಪುರಸ್ಕಾರ
[ಬದಲಾಯಿಸಿ]2009ರ ಜನವರಿಯಲ್ಲಿ, ಟಾಮ್ ಅಂಡ್ ಜೆರ್ರಿಯನ್ನು ಅಗ್ರಪಂಕ್ತಿಯ 100 ಚಲಿತ TV ಪ್ರದರ್ಶನಗಳ ಪೈಕಿ 66ನೇ ಅತ್ಯುತ್ತಮ ವ್ಯಂಗ್ಯಚಿತ್ರ ಮಾಲಿಕೆಯೆಂದು IGN ಹೆಸರಿಸಿದೆ.[೬] DVDಯ ಬಿಡುಗಡೆ ಸಮಾರಂಭದಲ್ಲಿ ಕಂಡುಬಂದ ಸಂದರ್ಶನವೊಂದರಲ್ಲಿ MADtvಯ ಹಲವಾರು ಕಲಾವಿದರು ತಮ್ಮ ಕೋಡಂಗಿ ಹಾಸ್ಯಕ್ಕಿರುವ ಅತಿದೊಡ್ಡ ಪ್ರೇರಣೆಗಳಲ್ಲಿ ಟಾಮ್ ಅಂಡ್ ಜೆರ್ರಿಯೂ ಒಂದು ಎಂದು ಹೇಳಿಕೊಂಡಿದ್ದಾರೆ.
ರೂಪಕ ಚಿತ್ರಗಳು
[ಬದಲಾಯಿಸಿ]- 1945ರಲ್ಲಿ ಬಂದ MGM ಸಂಸ್ಥೆಯ ಆಂಕರ್ಸ್ ಅವೇ ಎಂಬ ಜೀವಂತ-ನಟನೆಯ ಸಂಗೀತಮಯ ರೂಪಕಚಿತ್ರದಲ್ಲಿ ಜೆರ್ರಿಯು ಕಾಣಿಸಿಕೊಂಡಿದ್ದು, ವಿಶೇಷ ಪರಿಣಾಮಗಳ ಬಳಕೆಯ ನಡುವೆಯೂ ಜೀನ್ ಕೆಲ್ಲಿಯೊಂದಿಗೆ ಅವನು ನೃತ್ಯಾಭ್ಯಾಸವನ್ನು ಮಾಡುತ್ತಾನೆ. ಈ ಸರಣಿಯಲ್ಲಿ, ಶಾಲಾ ಮಕ್ಕಳ ವರ್ಗವೊಂದಕ್ಕೆ ಕಲ್ಪಿತ ಕಥೆಯೊಂದನ್ನು ಹೇಳುತ್ತಾ ಹೋಗುವ ಜೀನ್ ಕೆಲ್ಲಿ ತಾನು ಗೌರದ ಪದಕವನ್ನು ಹೇಗೆ ಸಂಪಾದಿಸಿದೆ ಎಂಬುದನ್ನು ವಿವರಿಸುತ್ತಾನೆ.
- ವ್ಯಂಗ್ಯಚಿತ್ರ ಮಾಲಿಕೆಯಲ್ಲಿ ಬರುವ ಪ್ರಾಣಿಗಳಿಂದ ತುಂಬಿರುವ ಮಾಯಾಪ್ರಪಂಚವೊಂದಕ್ಕೆ ಜೆರ್ರಿಯು ರಾಜನಾಗಿರುತ್ತಾನೆ. ತನಗೆ ನೃತ್ಯ ಮಾಡಲು ಬರುವುದಿಲ್ಲವಾದ್ದರಿಂದ ಆ ಇತರ ಪ್ರಾಣಿಗಳೂ ನೃತ್ಯ ಮಾಡದಂತೆ ಆತ ನಿಷೇಧಿಸಿರುತ್ತಾನೆ. ಆಗ ಅಲ್ಲಿಗೆ ಪ್ರವೇಶಿಸುವ ಜೀನ್ ಕೆಲ್ಲಿಯ ಪಾತ್ರವು ಸುದೀರ್ಘವಾದ ನೃತ್ಯಾಭ್ಯಾಸದ ಮೂಲಕ ಜೆರ್ರಿಗೆ ಮಾರ್ಗದರ್ಶನ ನೀಡುತ್ತದೆ. ಇದರ ಪ್ರತಿಫಲವಾಗಿ ಜೆರ್ರಿಯು ಅವನಿಗೆ ಪದಕವೊಂದನ್ನು ನೀಡಿ ಗೌರವಿಸುತ್ತಾನೆ. ಈ ಕಿರು ಚಲನಚಿತ್ರದಲ್ಲಿ ಜೆರ್ರಿಯು ಮಾತಾಡುವುದೇ ಅಲ್ಲದೇ ಹಾಡನ್ನೂ ಹಾಡುತ್ತಾನೆ.
- ಸಾರಾ ಬೆರ್ನರ್ ಅವನಿಗೆ ಧ್ವನಿ ನೀಡಿದ್ದಾರೆ. ಜೆರ್ರಿಯ ಸೇವಕರಲ್ಲಿ ಒಬ್ಬನಂತೆ ಟಾಮ್ ಈ ಸರಣಿಯಲ್ಲಿ ಒಂದು ಕಿರುದೃಶ್ಯದಲ್ಲಿ ಬರುತ್ತಾನೆ. ಡೇಂಜರಸ್ ವೆನ್ ವೆಟ್ ಎಂಬ ಮತ್ತೊಂದು ವಿಶಾಲ-ಪರದೆಯ, ಸಂಗೀತಮಯ ಚಿತ್ರದಲ್ಲಿನ ಕನಸಿನ ಸನ್ನಿವೇಶವೊಂದರಲ್ಲಿ ಎಸ್ಥರ್ ವಿಲಿಯಮ್ಸ್‌ಳೊಂದಿಗೆ ಟಾಮ್ ಅಂಡ್ ಜೆರ್ರಿ ಗಳಿಬ್ಬರೂ ಕಾಣಿಸಿಕೊಳ್ಳುತ್ತಾರೆ.
- ಈ ಚಿತ್ರದಲ್ಲಿ, ಟಾಮ್ ಮತ್ತು ಜೆರ್ರಿ ನೀರಿನಡಿಯಲ್ಲಿ ಪರಸ್ಪರರನ್ನು ಬೆನ್ನಟ್ಟುತ್ತಿದ್ದು, ಅವರಿಬ್ಬರೂ ಎಸ್ಥರ್ ವಿಲಿಯಮ್ಸ್ ಬಳಿಗೆ ಓಡಿಬಂದಾಗ, ಅವಳೊಂದಿಗೆ ಸಮನ್ವಯಗೊಳಿಸಿಕೊಂಡು ತಾವೂ ಈಜುವ ಅಭ್ಯಾಸವನ್ನು ಮುಂದುವರೆಸುತ್ತಾರೆ. ವಿಷಯಲಂಪಟ ಅಷ್ಟಪಾದಿಯೊಂದು (ಆಕ್ಟಪಸ್) ವಿಲಿಯಮ್ಸ್‌ಗೆ ಪ್ರಲೋಭನೆ ಒಡ್ಡಿ ತನ್ನ ಬಾಹುಗಳೊಳಗೆ ಅವಳನ್ನು ಸೆಳೆದುಕೊಂಡು ಓಲೈಸಲು ಪ್ರಯತ್ನಿಸಿದಾಗ, ಅವಳನ್ನು ಟಾಮ್ ಮತ್ತು ಜೆರ್ರಿಗಳಿಬ್ಬರೂ ರಕ್ಷಿಸಬೇಕಾಗಿ ಬರುತ್ತದೆ.
- 1998ರಲ್ಲಿ, ಟಚ್‌ಸ್ಟೋನ್/ಆಂಬ್ಲಿನ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯ ಆಸ್ಕರ್ ಪ್ರಶಸ್ತಿ ವಿಜೇತ ಚಲನಚಿತ್ರವಾದ ಹೂ ಫ್ರೇಮ್ಡ್ ರೋಜರ್ ರ್ಯಾಬಿಟ್ ನಲ್ಲಿ ಕಾಣಿಸಿಕೊಳ್ಳಲು ಈ ಜೋಡಿಯು ಸಿದ್ಧವಾಗಿತ್ತು. ಈ ಚಿತ್ರವು ಅಮೆರಿಕಾದ ಶಿಷ್ಟ ಅನಿಮೇಷನ್ ಚಿತ್ರಗಳಿಗೆ ಸಲ್ಲಿಸಿದ ಗೌರವವೂ ಆಗಿತ್ತು. ಆದರೆ ಕಾನೂನಿನ ತೊಡಕುಗಳ ಕಾರಣದಿಂದಾಗಿ ಚಿತ್ರದಲ್ಲಿ ಅವರಿಬ್ಬರ ಸೇರ್ಪಡೆಗೆ ಭಂಗವುಂಟಾಯಿತು.[೭]
- 1992ರಲ್ಲಿ ಯುರೋಪ್‌ನ ಚಿತ್ರಮಂದಿರಗಳಲ್ಲಿ ಟಾಮ್ ಅಂಡ್ ಜೆರ್ರಿ: ದಿ ಮೂವಿ ಯು ಸಾಗರೋತ್ತರವಾಗಿ ಬಿಡುಗಡೆಯಾಗುವುದರ ಮೂಲಕ ಆ ವರ್ಷದಲ್ಲಿ ಮೊಟ್ಟಮೊದಲಬಾರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾದಂತಾಯಿತು. ಇದಾದ ನಂತರ ಸ್ವದೇಶದಲ್ಲಿ 1993ರಲ್ಲಿ ಈ ಚಿತ್ರವು ಮಿರಾಮ್ಯಾಕ್ಸ್ ಫಿಲ್ಮ್ಸ್ ಸಂಸ್ಥೆಯಿಂದ ಬಿಡುಗಡೆಯಾಯಿತು. ಪಾತ್ರಗಳ ಸಹ-ಸೃಷ್ಟಿಕರ್ತರಾದ ಜೋಸೆಫ್ ಬಾರ್ಬೆರಾ ಈ ಚಲನಚಿತ್ರಕ್ಕೆ ಸೃಜನಶೀಲ ಸಮಾಲೋಚಕರಾಗಿ ಕಾರ್ಯನಿರ್ವಹಿಸಿದರು.
- ಈ ಚಿತ್ರವನ್ನು ಫಿಲ್ ರೋಮನ್ ನಿರ್ಮಿಸಿ, ನಿರ್ದೇಶಿಸಿದರು. ಮೆಟ್ರೋ-ಗೋಲ್ಡ್‌ವಿನ್-ಮೇಯರ್ ಸಂಸ್ಥೆಯ ದಿ ವಿಜರ್ಡ್ ಆಫ್ ಆಸ್ ಮತ್ತು ಸಿಂಗಿಂಗ್ ಇನ್ ದಿ ರೈನ್ ಎಂಬ ಪ್ರಚಂಡ ಚಿತ್ರಗಳನ್ನು ಹೋಲುವಂತಿದ್ದ ಈ ಸಂಗೀತಮಯ ಚಲನಚಿತ್ರವು ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಕಟುಟೀಕೆಗೆ ಒಳಗಾಯಿತು. ಚಲನಚಿತ್ರದಾದ್ಯಂತ ಟಾಮ್ ಮತ್ತು ಜೆರ್ರಿಯ ಜೋಡಿಗೆ ಸಂಭಾಷಣೆಯನ್ನು (ಮತ್ತು ಹಾಡುಗಳನ್ನು) ನೀಡಿದ್ದಕ್ಕಾಗಿ ಹಾಗೂ ಚಿತ್ರದ ಸನ್ನಿವೇಶಗಳನ್ನು ಮುಂಚಿತವಾಗಿಯೇ ಊಹಿಸಬಹುದಾಗಿರುವಂತೆ ಇದ್ದುದಕ್ಕಾಗಿ ಈ ಟೀಕೆಯನ್ನು ಕೇಳಬೇಕಾಗಿ ಬಂತು.
- ಇದರ ಪರಿಣಾಮವಾಗಿ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸೋಲನುಭವಿಸಬೇಕಾಗಿ ಬಂತು. 2001ರಲ್ಲಿ, ಈ ಜೋಡಿಯ ಮೊಟ್ಟಮೊದಲ ಡೈರೆಕ್ಟ್-ಟು-ವಿಡಿಯೋ ಸ್ವರೂಪದ ಚಲನಚಿತ್ರವಾದ ಟಾಮ್ ಅಂಡ್ ಜೆರ್ರಿ: ದಿ ಮ್ಯಾಜಿಕ್ ರಿಂಗ್ ನ್ನು ವಾರ್ನರ್ ಬ್ರದರ್ಸ್ ಸಂಸ್ಥೆಯು (ಅಷ್ಟು ಹೊತ್ತಿಗಾಗಲೇ ಈ ಸಂಸ್ಥೆಯು ಟರ್ನರ್‌ನೊಂದಿಗೆ ವಿಲೀನಗೊಂಡು, ಅದರ ಸ್ವತ್ತುಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು) ಬಿಡುಗಡೆ ಮಾಡಿತು. ಧರಿಸಿದಾತನಿಗೆ ಅತೀಂದ್ರಿಯ ಶಕ್ತಿಯನ್ನು ನೀಡುವ ಉಂಗುರವೊಂದಕ್ಕಾಗಿ ಟಾಮ್ ದುರಾಸೆಯನ್ನು ವ್ಯಕ್ತಪಡಿಸುವ, ಆದರೆ ಅಕಸ್ಮಾತ್ತಾಗಿ ಆ ಉಂಗುರವು ಜೆರ್ರಿಯ ತಲೆಯೊಳಗೆ ಸಿಕ್ಕಿಕೊಳ್ಳುವ ಸನ್ನಿವೇಶವು ಈ ಚಿತ್ರದಲ್ಲಿ ಬರುತ್ತದೆ.
- ದಿ ಮ್ಯಾಜಿಕ್ ರಿಂಗ್ ಚಿತ್ರವು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿಲಿಯಮ್ ಹಾನ್ನಾ ಮರಣ ಹೊಂದಿದರು. ಆದ್ದರಿಂದ ಹಾನ್ನಾ ಮತ್ತು ಬಾರ್ಬೆರಾರ ಸಹ-ನಿರ್ಮಾಣದಲ್ಲಿ ಕೊನೆಯ ಬಾರಿಗೆ ಹೊರಬಂದ ಟಾಮ್ ಅಂಡ್ ಜೆರ್ರಿ ಚಲನಚಿತ್ರವಾಗಿ ಈ ಚಿತ್ರವು ಗುರುತಿಸಲ್ಪಡುತ್ತದೆ.ನಾಲ್ಕು ವರ್ಷಗಳ ನಂತರ ಸ್ಟುಡಿಯೋಗಾಗಿ, ಬೆಕ್ಕು ಮತ್ತು ಇಲಿಯನ್ನೊಳಗೊಂಡ ಮತ್ತೆರಡು ರೂಪಕ ಚಿತ್ರಗಳಿಗೆ ಬಿಲ್ ಕಾಪ್ ಚಿತ್ರಕಥೆಯನ್ನು ರಚಿಸಿ ನಿರ್ದೇಶಿಸಿದರು. ಟಾಮ್ ಅಂಡ್ ಜೆರ್ರಿ: ಬ್ಲಾಸ್ಟ್ ಆಫ್ ಟು ಮಾರ್ಸ್ ಮತ್ತು ಟಾಮ್ ಅಂಡ್ ಜೆರ್ರಿ: ದಿ ಫಾಸ್ಟ್ ಅಂಡ್ ದಿ ಫ್ಯೂರಿ ಎಂಬ ಈ ಎರಡು ಚಿತ್ರಗಳ ಪೈಕಿ ಎರಡನೆಯದು ಬಾರ್ಬೆರಾರ ಕಥೆಯೊಂದನ್ನು ಆಧರಿಸಿತ್ತು.
- DVDಯ ಸ್ವರೂಪದಲ್ಲಿ ಈ ಎರಡೂ ಚಿತ್ರಗಳು 2005ರಲ್ಲಿ ಬಿಡುಗಡೆಯಾಗುವುದರ ಮೂಲಕ ಟಾಮ್ ಮತ್ತು ಜೆರ್ರಿಯ 65ನೇ ವಾರ್ಷಿಕೋತ್ಸವದ ಆಚರಣೆಯನ್ನು ದಾಖಲಿಸಿದವು. ಟಾಮ್ ಅಂಡ್ ಜೆರ್ರಿ: ಶಿವರ್ ಮಿ ವಿಸ್ಕರ್ಸ್ ಎಂಬ, ಡೈರೆಕ್ಟ್-ಟು-ವಿಡಿಯೋ ಸ್ವರೂಪದ ಮತ್ತೊಂದು ಚಿತ್ರವು 2006ರಲ್ಲಿ ಬಿಡುಗಡೆಯಾಯಿತು. ನಿಧಿಯನ್ನು ಹುಡುಕುವುದಕ್ಕಾಗಿ ಈ ಜೋಡಿಯು ಒಟ್ಟಾಗಿ ಮಾಡಬೇಕಾಗಿ ಬಂದ ಕೆಲಸಗಳ ಕುರಿತಾದ ಕಥೆಯನ್ನು ಈ ಚಿತ್ರವು ಹೇಳುತ್ತದೆ.
- ಟಾಮ್ ಅಂಡ್ ಜೆರ್ರಿ: ಎ ನಟ್‌ಕ್ರಾಕರ್ ಟೇಲ್ ಎಂಬ ಮತ್ತೊಂದು ರೂಪಕ ಚಿತ್ರದ ಕುರಿತಾಗಿ ಹಾಗೂ ಷೈಕೋವ್ಸ್‌ಕಿಯ ನಟ್‌ಕ್ರಾಕರ್ ಸ್ಯೂಟ್ ನಿಂದ ತೆಗೆದುಕೊಂಡ ಸಂಗೀತಕ್ಕೆ ತೆರೆಯ-ಮೇಲಿನ ನಟನೆಗಳನ್ನು ಮಿಳಿತಗೊಳಿಸುವ ಆರಂಭಿಕ ಪರಿಕಲ್ಪನೆಯ ಕುರಿತಾಗಿ ಒಂದು ಕಥೆಯ ಎಳೆಯನ್ನು ಜೋ ಸಿದ್ಧಪಡಿಸಿದ. 2006ರ ಡಿಸೆಂಬರ್‌ನಲ್ಲಿ ಜೋ ಬಾರ್ಬೆರಾ ಮರಣಹೊಂದಿದ್ದರಿಂದಾಗಿ, ಸ್ಪೈಕ್ ಬ್ರಾಂಡ್ ಮತ್ತು ಟೋನಿ ಸೆರ್ವೋನ್‌ರಿಂದ ನಿರ್ದೇಶಿಸಲ್ಪಟ್ಟ ಈ DTVಯು ಜೋ ಬಾರ್ಬೆರಾನ ಕೊನೆಯ ಟಾಮ್ ಅಂಡ್ ಜೆರ್ರಿ ಯೋಜನೆ ಎನಿಸಿಕೊಂಡಿದೆ.
- ರಜಾದಿನವನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾದ ಈ ಚಲಿತ ಚಲನಚಿತ್ರವು DVDಯ ಸ್ವರೂಪದಲ್ಲಿ 2007ರ ಅಂತ್ಯದ ವೇಳೆಗೆ ಬಿಡುಗಡೆಯಾಗಿ, ಬಾರ್ಬೆರಾಗೆ ಅರ್ಪಿಸಲ್ಪಟ್ಟಿತು. ಟಾಮ್ ಮತ್ತು ಜೆರ್ರಿಯ ತಾರಾಗಣವನ್ನು ಹೊಂದಿರುವ, ಚಿತ್ರಮಂದಿರದಲ್ಲಿ ಬಿಡುಗಡೆಯಾಗುವ ಚಲನಚಿತ್ರವೊಂದನ್ನು ನಿರ್ಮಿಸಲು ವಾರ್ನರ್ ಬ್ರದರ್ಸ್ ಸಂಸ್ಥೆಯು ಯೋಜಿಸಿದೆ.
- ವೆರೈಟಿ ಸಂಸ್ಥೆಯ ಪ್ರಕಾರ, ಈ ಚಲನಚಿತ್ರವು "ಒಂದು ಮೂಲದ ಕಥೆಯ ಚಿತ್ರವಾಗಿದ್ದು, ಟಾಮ್ ಮತ್ತು ಜೆರ್ರಿಗಳಿಬ್ಬರೂ ಮೊಟ್ಟಮೊದಲು ಭೇಟಿಯಾಗಿದ್ದು ಹೇಗೆ ಹಾಗೂ ಚಿಕಾಗೋದಲ್ಲಿ ಕಳೆದುಹೋಗುವುದಕ್ಕೆ ಮುಂಚಿತವಾಗಿ ಅವರು ತಮ್ಮ ನಡುವೆ ದ್ವೇಷವನ್ನು ನಿರ್ಮಿಸಿಕೊಂಡಿದ್ದು ಹೇಗೆ ಮತ್ತು ಪ್ರಯಾಸಪಟ್ಟುಕೊಂಡು ಮನೆಯ ಕಡೆಗೆ ಪ್ರಯಾಣಿಸುವ ಸಂದರ್ಭದಲ್ಲಿ ಅವರು ಮನಸ್ಸಿಲ್ಲದ ಮನಸ್ಸಿನಿಂದ ಹೇಗೆ ಒಟ್ಟಾಗಿ ಕೆಲಸ ಮಾಡಿದರು ಎಂಬುದರ ಕುರಿತು ಈ ಚಿತ್ರವು ತಿಳಿಸುತ್ತದೆ". ಡ್ಯಾನ್ ಲಿನ್ ಈ ಚಿತ್ರವನ್ನು ನಿರ್ಮಿಸಲಿದ್ದಾರೆ[೮]
ಇತರ ಸ್ವರೂಪಗಳು
[ಬದಲಾಯಿಸಿ]- ಅವರ್ ಗ್ಯಾಂಗ್ ಕಾಮಿಕ್ಸ್ ನಲ್ಲಿನ ವೈಶಿಷ್ಟ್ಯತೆಗಳಲ್ಲೊಂದಾಗಿರುವಂತೆ ಟಾಮ್ ಅಂಡ್ ಜೆರ್ರಿ ಜೋಡಿಯು 1942ರಲ್ಲಿ ಕಾಮಿಕ್ ಪುಸ್ತಕಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿತು. MGM ಸಂಸ್ಥೆಯ ಜೀವಂತ-ನಟನೆಯ ಅವರ್ ಗ್ಯಾಂಗ್ ಕಿರುಚಿತ್ರಗಳು ಐದು ವರ್ಷ ಮುಂಚಿತವಾಗಿ ತಯಾರಿಕೆಯನ್ನು ನಿಲ್ಲಿಸಿದ್ದರಿಂದಾಗಿ 1949ರಲ್ಲಿ ಈ ಸರಣಿಯನ್ನು ಟಾಮ್ ಅಂಡ್ ಜೆರ್ರಿ ಕಾಮಿಕ್ಸ್ ಎಂದು ಮರುನಾಮಕರಣ ಮಾಡಲಾಯಿತು. 20ನೇ ಶತಮಾನದ ಉಳಿದ ಅವಧಿಯಲ್ಲಿ ಬಂದ ವಿವಿಧ ಪುಸ್ತಕಗಳಲ್ಲಿ ಈ ಜೋಡಿಯು ಕಾಣಿಸಿಕೊಳ್ಳುತ್ತಲೇ ಹೋಯಿತು.[೯]
- ನಿಂಟೆಂಡೋ ಎಂಟರ್‌ಟೈನ್‌ಮೆಂಟ್ ಸಿಸ್ಟಮ್ ಮತ್ತು ಸೂಪರ್ NES ಹಾಗೂ ನಿಂಟೆಂಡೊ 64ನಿಂದ ಮೊದಲ್ಗೊಂಡು ಪ್ಲೇಸ್ಟೇಷನ್ 2, Xಬಾಕ್ಸ್ ಹಾಗೂ ನಿಂಟೆಂಡೊ ಗೇಮ್‌ಕ್ಯೂಬ್‌ಗಳಿಗಾಗಿ ಬಂದ ತೀರಾ ಇತ್ತೀಚಿನ ಕೃತಿಗಳವರೆಗೂ ಬಂದ ಅಸಂಖ್ಯಾತ ವಿಡಿಯೋ ಆಟಗಳಲ್ಲಿಯೂ ಸಹ ಈ ಜೋಡಿಯು ಕಾಣಿಸಿಕೊಂಡಿದೆ.
ಸಾಂಸ್ಕೃತಿಕ ಪ್ರಭಾವಗಳು
[ಬದಲಾಯಿಸಿ]- "ಬೆಕ್ಕು ಮತ್ತು ಇಲಿಯ ಕಿತ್ತಾಟ"ದ ಸಂಬಂಧಿತ ರೂಪಕಾಲಂಕಾರದಂತೆಯೇ, ಟಾಮ್ ಅಂಡ್ ಜೆರ್ರಿ ಎನ್ನುವ ಪದ ಮತ್ತು ಶೀರ್ಷಿಕೆಗಳು ಅನೇಕ ವರ್ಷಗಳಿಂದಲೂ ಎಂದೂ-ಮುಗಿಯದ ದ್ವೇಷಕ್ಕೆ ಅಕ್ಷರಶಃ ಪರ್ಯಾಯ ಪದಗಳಾಗಿಬಿಟ್ಟಿವೆ. ಇಷ್ಟಾಗಿಯೂ, ಅತಿ ಶಕ್ತಿವಂತ ನಾದವನು (ಟಾಮ್) ಟಾಮ್ ಅಂಡ್ ಜೆರ್ರಿ ಯಲ್ಲಿ ಸಾಮಾನ್ಯವಾಗಿ ಮೇಲುಗೈ ಸಾಧಿಸಿಲ್ಲ.ಪ್ಯಾಲಿಸ್ಟೀನಿಯಾದ ಅಧ್ಯಕ್ಷರಾದ ಯಾಸ್ಸರ‍್ ಅರಾಫತ್ ಈ ವಾಸ್ತವವನ್ನು ಗಮನಿಸಿದ್ದು, "ಬೆಕ್ಕಿನ ಬದಲಿಗೆ, ಪುಟ್ಟ ಜೀವಿಯಾಗಿರುವ ಇಲಿಯೇ ಯಾವಾಗಲೂ ಗೆಲುವು ಸಾಧಿಸಿರುವುದೇ" ಅವರು ಈ ವ್ಯಂಗ್ಯಚಿತ್ರ ಮಾಲಿಕೆಯ ಪ್ರದರ್ಶನವನ್ನು ಇಷ್ಟಪಡಲು ಕಾರಣವಾಗಿದೆ [೧೦]
- ಕ್ರಸ್ಟಿ ದಿ ಕ್ಲಾನ್ ಷೋನಲ್ಲಿ ಬಿತ್ತರವಾಗುವ ನಾಮಸೂಚಕ ವ್ಯಂಗ್ಯಚಿತ್ರ ಮಾಲಿಕೆಯ ದಿ ಸಿಂಪ್ಸನ್ಸ್ ನ ಇಚಿ ಅಂಡ್ ಸ್ಕ್ರಾಚಿ ಪಾತ್ರಗಳು, ಟಾಮ್ ಅಂಡ್ ಜೆರ್ರಿ ಯ ಅಣಕು ಶೈಲಿ ಅಥವಾ ಅನುಕರಣೆಗಳಾಗಿದ್ದು, "ವ್ಯಂಗ್ಯಚಿತ್ರ ಮಾಲಿಕೆಯೊಳಗೊಂದು ವ್ಯಂಗ್ಯಚಿತ್ರ ಮಾಲಿಕೆ" ಎಂಬ ಪರಿಕಲ್ಪನೆಗೆ ಉದಾಹರಣೆಗಳಾಗಿವೆ.[೧೧] ನಿಷ್ಕಾರಣವಾದ, ರಕ್ತಸಿಕ್ತವಾದ ಹಲವು ಹನ್ನೊಂದು ಶೈಲಿಗಳಲ್ಲಿ ಸ್ಕ್ರಾಚಿಯನ್ನು ಇಚಿಯು (ಇಲಿಯು) ಸಾಯುವಂತೆ ಬಡಿಯುವುದರಿಂದ, ಟಾಮ್ ಅಂಡ್ ಜೆರ್ರಿ ಸರಣಿಯಲ್ಲಿ ಕಂಡುಬರುವ ಮಿತಿಮೀರಿದ ಹಿಂಸೆಯು ಇಲ್ಲಿ ವಿಕೃತವಾಗಿ ಅನುಕರಣೆಯಾದಂತಾಗಿದೆ ಮತ್ತು ಇನ್ನೂ ತೀವ್ರಗೊಳಿಸಿದಂತಾಗಿದೆ.
- ಸಿಂಪ್ಸನ್ಸ್ ಕಂತಿನಲ್ಲಿ ಒಂದಾದ ಇಚಿ ಅಂಡ್ ಸ್ಕ್ರಾಚಿ ಅಂಡ್ ಮಾರ್ಗ್ ನಲ್ಲಿ, TVಯಿಂದ ನಿಷೇಧಿಸಲ್ಪಟ್ಟಿರುವ ಹಿಂಸೆಗೆ ಮಾರ್ಗ್ ಈಡಾಗಬೇಕಾಗುತ್ತದೆ ಹಾಗೂ ಇಚಿ ಮತ್ತು ಸ್ಕ್ರಾಚಿಗಳು ಸ್ನೇಹಿತರಾಗುವುದರಿಂದ (ಅವುಗಳ ಭಾರೀ ಪರಿಚಯವು ಪರಸ್ಪರ ಬಹುಮಾನಗಳನ್ನು ಬದಲಿಸಿಕೊಳ್ಳುವುದರ ಮೂಲಕ ಬದಲಾಯಿಸಲ್ಪಟ್ಟಿದೆ), ಸದರಿ ಸರಣಿಯ ಜನಪ್ರಿಯತೆ ಕುಸಿಯುವಂತಾಯಿತು.
- ಆದರೆ, ಮೈಕೆಲಾಂಜೆಲೋನ ಡೇವಿಡ್ನ ನಗ್ನತೆಯನ್ನು ಮುಚ್ಚುವುದು ಮಾರ್ಗ್‌ಳಿಗೆ ಇಷ್ಟವಿರಲಿಲ್ಲವಾದ್ದರಿಂದ ಕಲೆಗೆ ಕತ್ತರಿ ಪ್ರಯೋಗ ಮಾಡಬಾರದು ಎಂದು ಅವಳು ನಿರ್ಧರಿಸಿದ್ದಳು. ಆದ್ದರಿಂದ ಕಾಲಾನಂತರದಲ್ಲಿ ಎಂದಿನ ಶೈಲಿಗೆ ಇದನ್ನು ಬದಲಿಸಲಾಯಿತು.ಜೀನ್ ಡೀಚ್ ಯುಗದ ವ್ಯಂಗ್ಯಚಿತ್ರ ಮಾಲಿಕೆಗಳನ್ನೂ ಸಹ ದಿ ಸಿಂಪ್ಸನ್ಸ್ ವಿಕೃತವಾಗಿ ಅನುಕರಿಸಿತು.ಕ್ರಸ್ಟಿ ಗೆಟ್ಸ್ ಕ್ಯಾನ್ಸೆಲ್ಡ್ ಕಂತಿನಲ್ಲಿನ ಇಚಿ ಅಂಡ್ ಸ್ಕ್ರಾಚಿ ಪಾತ್ರಗಳನ್ನು ಕೆಟ್ಟದಾಗಿ ರೂಪಿಸಲ್ಪಟ್ಟ ವರ್ಕರ್ ಅಂಡ್ ಪ್ಯಾರಾಸೈಟ್ ಪಾತ್ರಗಳಿಂದ ಬದಲಾಯಿಸಲಾಗಿದೆ.
- "ಕ್ಯಾಟ್ ’ಎನ್’ ಮೌಸ್" ಎಂಬ ಕಿರು ಕಥೆಯೊಂದನ್ನು ಸ್ಟೀವನ್ ಮಿಲ್‌ಹೌಸರ್ ಎಂಬ ಲೇಖಕ ಬರೆದಿದ್ದು, ಸಾಹಿತ್ಯ ಕೃತಿಯಲ್ಲಿ ಪ್ರತಿನಾಯಕ ಹಾಗೂ ನಾಯಕರು ಸೆಣಸಾಡುವಂತೆಯೇ ಈ ಜೋಡಿಯು ಒಂದರ ವಿರುದ್ಧ ಮತ್ತೊಂದು ಸೆಣಸಾಡುವಂತೆ ಅದರಲ್ಲಿ ಚಿತ್ರಿಸಲಾಗಿದೆ.ವ್ಯಂಗ್ಯಚಿತ್ರ ಮಾಲಿಕೆಯಲ್ಲಿ ಯಾವುದನ್ನು ತೋರಿಸಿಲ್ಲವೋ ಅಥವಾ ಯಾವ ರೀತಿ ತೋರಿಸಿಲ್ಲವೋ ಆ ಮಾರ್ಗದಲ್ಲಿ ಈ ಎರಡೂ ಪಾತ್ರಗಳ ಆಲೋಚನೆಗಳು ಹಾಗೂ ಭಾವನೆಗಳನ್ನು ಓದುಗರು ಅನುಭವಿಸಲು ಅಥವಾ ಕಂಡುಕೊಳ್ಳಲು ಲೇಖಕ ಮಿಲ್‌ಹೌಸರ‍್ ಈ ಕಥೆಯಲ್ಲಿ ಅನುವು ಮಾಡಿಕೊಟ್ಟಿದ್ದಾನೆ.
DVD ಮೂಲಕ ಬಂದಿರುವ ಟಾಮ್ ಅಂಡ್ ಜೆರ್ರಿ
[ಬದಲಾಯಿಸಿ]- ಪ್ರಾಂತ್ಯ 1ರಲ್ಲಿ (ಸಂಯುಕ್ತ ಸಂಸ್ಥಾನಗಳು ಹಾಗೂ ಕೆನಡಾ ಸೇರಿರುವುದು) ಟಾಮ್ ಅಂಡ್ ಜೆರ್ರಿ ಯ ಹಲವಾರು DVDಗಳು ಬಿಡುಗಡೆಯಾಗಿದ್ದು, ಅವುಗಳಲ್ಲಿ ಟಾಮ್ ಅಂಡ್ ಜೆರ್ರಿ ಸ್ಪಾಟ್‌ಲೈಟ್ ಕಲೆಕ್ಷನ್ ಎಂದು ಗುರುತಿಸಲಾಗುವ ಎರಡು-ಡಿಸ್ಕ್‌ಗಳ ಸರಣಿಯೂ ಸೇರಿವೆ. ಸಂಪುಟ 1 ಮತ್ತು ಸಂಪುಟ 2ರಲ್ಲಿ ಒಂದೊಂದರಲ್ಲೂ ಸೇರ್ಪಡೆಗೊಂಡಿರುವ ಕೆಲವೊಂದು ವ್ಯಂಗ್ಯಚಿತ್ರ ಮಾಲಿಕೆಗಳಲ್ಲಿ, ಮ್ಯಾಮಿ ಟೂ ಷೂಸ್ ಪಾತ್ರದ ಸಂಭಾಷಣೆಯು ಕತ್ತರಿ ಪ್ರಯೋಗಕ್ಕೆ ಒಳಪಟ್ಟಿರುವುದರಿಂದ ಮತ್ತು ಮರುಮಾತಿನ ಲೇಪನ ಮಾಡಲ್ಪಟ್ಟಿರುವುದರಿಂದ ಅವಕ್ಕೆ ಋಣಾತ್ಮಕ ಪ್ರತಿಕ್ರಿಯೆಗಳು ಲಭಿಸಿದವು.
- ಆದ್ದರಿಂದ, ಕತ್ತರಿ ಪ್ರಯೋಗಕ್ಕೆ ಈಡಾಗದ ಈ ಕಿರುಚಿತ್ರಗಳ ಆವೃತ್ತಿಗಳನ್ನು DVD ರೂಪದಲ್ಲಿ ನೀಡುವ ಮೂಲಕ ಬದಲಾಯಿಸಿ ಕೊಡುವ ಯೋಜನೆಯೊಂದನ್ನು ಕೆಲ ಕಾಲದ ನಂತರ ಪ್ರಕಟಿಸಲಾಯಿತು. 3ನೇ ಸಂಪುಟದ ಜೋಡಿ ಡಿಸ್ಕ್‌ಗಳಿಂದ ಮೌಸ್ ಕ್ಲೀನಿಂಗ್ ಮತ್ತು ಕ್ಯಾಸನೋವಾ ಕ್ಯಾಟ್ ಕಂತುಗಳನ್ನು ತೆಗೆದುಹಾಕಲಾಗಿದ್ದರಿಂದಾಗಿ ಹಾಗೂ ಹಿಸ್ ಮೌಸ್ ಫ್ರೈಡೆ ಕಂತಿನ ಕೊನೆಯಲ್ಲಿ ಅತೀವ ಪ್ರಮಾಣದ ಝೂಮಿಂಗ್-ಇನ್ ಇದ್ದುದರಿಂದಾಗಿ, 3ನೇ ಸಂಪುಟಕ್ಕೂ ಸಹ ಋಣಾತ್ಮಕ ಪ್ರತಿಕ್ರಿಯೆಗಳು ಬಂದಿವೆ. ಪ್ರಾಂತ್ಯ 2ರಲ್ಲಿ ಟಾಮ್ ಅಂಡ್ ಜೆರ್ರಿ ಯ ಎರಡು ಜೊತೆ DVDಗಳು ಬಂದಿವೆ.
- ಪಶ್ಚಿಮ ಯುರೋಪ್‌ನಲ್ಲಿ ಟಾಮ್ ಅಂಡ್ ಜೆರ್ರಿ ಯ ಬಹುತೇಕ ಕಿರುಚಿತ್ರಗಳು (ದಿ ಮಿಲಿಯನ್ ಡಾಲರ್ ಕ್ಯಾಟ್ ಮತ್ತು ಬ್ಯುಸಿ ಬಡ್ಡೀಸ್ ಎಂಬ ಎರಡು ಕಿರುಚಿತ್ರಗಳನ್ನು ಮಾತ್ರ ಸೇರಿಸಲಾಗಿಲ್ಲ) ಟಾಮ್ ಅಂಡ್ ಜೆರ್ರಿ - ದಿ ಕ್ಲಾಸಿಕ್ ಕಲೆಕ್ಷನ್ ಎಂಬ ಹೆಸರಿನ ಅಡಿಯಲ್ಲಿ ಬಿಡುಗಡೆಗೊಂಡಿವೆ. ಹೆಚ್ಚೂ ಕಡಿಮೆ ಎಲ್ಲ ಕಿರುಚಿತ್ರಗಳೂ ಮ್ಯಾಮಿ ಟೂ ಷೂಸ್ ಪಾತ್ರಕ್ಕೆ ಮರು-ಮಾತಿನ ಲೇಪ ಮಾಡಲಾಗಿರುವ ಧ್ವನಿಪಥಗಳನ್ನು ಹೊಂದಿವೆ. ಈ ರೀತಿಯ ಕತ್ತರಿ ಪ್ರಯೋಗಗಳಿಗೆ ಒಳಗಾಗಿದ್ದರೂ ಸಹ, ಟಾಮ್ ಅಂಡ್ ಜೆರ್ರಿ ಸರಣಿಯ ಹಿಸ್ ಮೌಸ್ ಫ್ರೈಡೆ ಯಂತಹ ಏಕೈಕ ವ್ಯಂಗ್ಯಚಿತ್ರ ಮಾಲಿಕೆಯನ್ನು ವರ್ಣಭೇದ ನೀತಿಯ ಪ್ರಸ್ತಾವನೆಯ ಕಾರಣಕ್ಕಾಗಿ ಕೆಲವೊಂದು ದೇಶಗಳಲ್ಲಿ ಪ್ರಸಾರದಿಂದ ಹಿಂದಕ್ಕೆ ಪಡೆಯಲಾಗಿತ್ತು.
- ಆದರೆ ವರ್ಣಭೇದನೀತಿಯ ಒಂದು ನಿರ್ದಿಷ್ಟ ಪಾತ್ರವನ್ನು ತೋರಿಸುವುದನ್ನು ತಪ್ಪಿಸುವ ಸಲುವಾಗಿ ಕಂತಿನ ಅಂತ್ಯದಲ್ಲಿರುವ ತೀವ್ರ ಸ್ವರೂಪದ ಝೂಮಿಂಗ್-ಇನ್ ಪರಿಣಾಮವನ್ನು ಹೊರತುಪಡಿಸಿ, ಯಾವುದೇ ಕತ್ತರಿ ಪ್ರಯೋಗವಿಲ್ಲದಂತೆ ಹಿಸ್ ಮೌಸ್ ಫ್ರೈಡೆ ವ್ಯಂಗ್ಯಚಿತ್ರ ಮಾಲಿಕೆಯನ್ನು ಸೇರಿಸಲಾಗಿದೆ. ಇವು 1990ರ ದಶಕದಲ್ಲಿ U.S.ನಿಂದ ಕಳಿಸಲ್ಪಡುತ್ತಿದ್ದ ನಿಯಮಿತವಾದ TV ಮುದ್ರಿಕೆಗಳಾಗಿವೆ. ಸಿನೆಮಾಸ್ಕೋಪ್‌ನಲ್ಲಿ ನಿರ್ಮಿಸಲ್ಪಟ್ಟ ಕಿರುಚಿತ್ರಗಳನ್ನು ಪ್ಯಾನ್ ಮತ್ತು ಸ್ಕ್ಯಾನ್ ಸ್ವರೂಪದಲ್ಲಿ ಅರ್ಪಿಸಲಾಗಿದೆ.ಅದೃಷ್ಟವಶಾತ್, ಮೌಸ್ ಕ್ಲೀನಿಂಗ್ ಮತ್ತು ಕ್ಯಾಸನೋವಾ ಕ್ಯಾಟ್ ಕಂತುಗಳನ್ನು ಕತ್ತರಿ ಪ್ರಯೋಗಕ್ಕೆ ಒಳಪಡಿಸದೆ ಈ ಜೋಡಿ ಡಿಸ್ಕ್‌ಗಳ ಭಾಗವಾಗಿ ಅರ್ಪಿಸಲಾಗಿದೆ.
- ಟಾಮ್ ಅಂಡ್ ಜೆರ್ರಿ - ದಿ ಕ್ಲಾಸಿಕ್ ಕಲೆಕ್ಷನ್ ಸಂಪುಟವು ಎರಡು-ಬದಿಗಳ 6 DVDಗಳಲ್ಲಿ (ಯುನೈಟೆಡ್ ಕಿಂಗ್‌ಡಂನಲ್ಲಿ ನೀಡಲಾಗಿದೆ) ಮತ್ತು ಏಕ-ಪದರದ 12 DVDಗಳಲ್ಲಿ (ಯುನೈಟೆಡ್ ಕಿಂಗ್‌ಡಂ ಸೇರಿದಂತೆ, ಪಶ್ಚಿಮ ಯುರೋಪ್‌ನಾದ್ಯಂತ ನೀಡಲಾಗಿದೆ) ಲಭ್ಯವಿದೆ.
ಪ್ರಾಂತ್ಯ 2ರ ಮತ್ತೊಂದು ಟಾಮ್ ಅಂಡ್ ಜೆರ್ರಿ DVD ಜೋಡಿಯು ಜಪಾನ್‌ನಲ್ಲಿ ಲಭ್ಯವಿದೆ. ಪಶ್ಚಿಮ ಯುರೋಪ್‌ನಲ್ಲಿನ ಟಾಮ್ ಅಂಡ್ ಜೆರ್ರಿ - ದಿ ಕ್ಲಾಸಿಕ್ ಕಲೆಕ್ಷನ್ ಸಂಪುಟದಂತೆಯೇ, ಹೆಚ್ಚೂ ಕಡಿಮೆ ಎಲ್ಲಾ ಕಿರುಚಿತ್ರಗಳೂ (ಹಿಸ್ ಮೌಸ್ ಫ್ರೈಡೆ ಚಿತ್ರವೂ ಸೇರಿದಂತೆ) ಕತ್ತರಿ ಪ್ರಯೋಗಕ್ಕೆ ಒಳಗಾಗಿವೆ.
- ಸ್ಲಿಕ್ಡ್-ಅಪ್ ಪಪ್ , ಟಾಮ್ಸ್ ಫೋಟೋ ಫಿನಿಷ್ , ಬ್ಯುಸಿ ಬಡ್ಡೀಸ್ , ದಿ ಎಗ್ ಅಂಡ್ ಜೆರ್ರಿ , ಟಾಪ್ಸ್ ವಿತ್ ಪಾಪ್ಸ್ ಮತ್ತು ಫೀಡಿಂಗ್ ದಿ ಕಿಡ್ಡೀ ಇವೇ ಮೊದಲಾದ ಚಿತ್ರಗಳನ್ನು ಈ ಜೋಡಿಗಳಿಂದ ಹೊರಗಿಡಲಾಗಿದೆ. ಸಿನೆಮಾಸ್ಕೋಪ್‌ನಲ್ಲಿ ನಿರ್ಮಿಸಲಾದ ಕಿರುಚಿತ್ರಗಳನ್ನು ಪ್ಯಾನ್ ಮತ್ತು ಸ್ಕ್ಯಾನ್ ಸ್ವರೂಪದಲ್ಲಿ ಅರ್ಪಿಸಲಾಗಿದೆ.
- ಚೆಕ್ ಜೋನ್ಸ್-ಯುಗದ ಟಾಮ್ ಅಂಡ್ ಜೆರ್ರಿ ಕಿರುಚಿತ್ರಗಳನ್ನು ಟಾಮ್ ಅಂಡ್ ಜೆರ್ರಿ: ದಿ ಚಕ್ ಜೋನ್ಸ್ ಕಲೆಕ್ಷನ್ ಎಂಬ ಶೀರ್ಷಿಕೆಯನ್ನೊಳಗೊಂಡ ಎರಡು-ಡಿಸ್ಕ್‌ಗಳ ಜೋಡಿಯಲ್ಲಿ 2009ರ ಜೂನ್ 23ರಂದು ಬಿಡುಗಡೆ ಮಾಡಲಾಯಿತು.[೧೨]
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ಗಮನಾರ್ಹವಾದ ಕಿರುಚಿತ್ರಗಳು
[ಬದಲಾಯಿಸಿ]ಟಾಮ್ ಮತ್ತು ಜೆರ್ರಿಯ ನಾಟಕೀಯ ಕಿರು ವ್ಯಂಗ್ಯಚಿತ್ರ ಮಾಲಿಕೆಗಳ ಪಟ್ಟಿ ಗಾಗಿ, ಟಾಮ್ ಅಂಡ್ ಜೆರ್ರಿ ವ್ಯಂಗ್ಯಚಿತ್ರ ಮಾಲಿಕೆಗಳ ಪಟ್ಟಿಯನ್ನು ನೋಡಿ. ಅತ್ಯುತ್ತಮ ಕಿರುಚಿತ್ರ ವಿಷಯ: ವ್ಯಂಗ್ಯಚಿತ್ರ ಮಾಲಿಕೆಗಳು ಎಂಬ ವರ್ಗದಲ್ಲಿ ಈ ಕೆಳಕಂಡ ವ್ಯಂಗ್ಯಚಿತ್ರ ಮಾಲಿಕೆಗಳಿಗೆ ಅಕೆಡೆಮಿ ಪ್ರಶಸ್ತಿ (ಆಸ್ಕರ್) ಲಭಿಸಿದೆ.[೧೩]: 32
- 1943: ದಿ ಯಾಂಕೀ ಡೂಡ್ಲ್ ಮೌಸ್
- 1944: ಮೌಸ್ ಟ್ರಬಲ್
- 1945: ಕ್ವೈಟ್ ಪ್ಲೀಸ್
- 1946: ದಿ ಕ್ಯಾಟ್ ಕನ್ಸರ್ಟೋ
- 1948: ದಿ ಲಿಟ್ಲ್ ಆರ್ಫನ್
- 1951: ದಿ ಟೂ ಮಸ್ಕೆಟಿಯರ್ಸ್
- 1952: ಜೋಹಾನ್ ಮೌಸ್
ಈ ಕೆಳಗಿನ ವ್ಯಂಗ್ಯಚಿತ್ರ ಮಾಲಿಕೆಗಳನ್ನು ಅತ್ಯುತ್ತಮ ಕಿರುಚಿತ್ರ ವಿಷಯ: ವ್ಯಂಗ್ಯಚಿತ್ರ ಮಾಲಿಕೆಗಳು ಎಂಬ ವರ್ಗದ ಅಡಿಯಲ್ಲಿ ಅಕೆಡೆಮಿ ಪ್ರಶಸ್ತಿಗಾಗಿ ನಾಮನಿರ್ದೇಶನ ಮಾಡಲಾಗಿತ್ತು, ಆದರೆ ಅವು ಗೆಲ್ಲಲಿಲ್ಲ:
- 1940: ಪುಸ್ ಗೆಟ್ಸ್ ದಿ ಬೂಟ್
- 1941: ದಿ ನೈಟ್ ಬಿಫೋರ್ ಕ್ರಿಸ್ಮಸ್
- 1947: Dr. ಜೆಕಿಲ್ ಅಂಡ್ ಮಿ. ಮೌಸ್
- 1949: ಹ್ಯಾಚ್ ಅಪ್ ಯುವರ್ ಟ್ರಬಲ್ಸ್
- 1950: ಜೆರ್ರೀಸ್ ಕಸಿನ್
- 1954: ಟೂಷೆ, ಪುಸ್ಸಿ ಕ್ಯಾಟ್!
ಈ ಕೆಳಗಿನ ವ್ಯಂಗ್ಯಚಿತ್ರ ಮಾಲಿಕೆಗಳು ವೈಯಕ್ತಿಕ ಸಾಧನೆಗಳ, ಪಾತ್ರದ ಅನಿಮೇಷನ್ ಸಂಬಧಿತ ವರ್ಗದಲ್ಲಿನ ಆನ್ನೀ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದ್ದವು. ಆದರೆ ಅವು ಗೆಲ್ಲಲಿಲ್ಲ:
- 1946: ಸ್ಪ್ರಿಂಗ್‌ಟೈಮ್ ಫಾರ್ ಥಾಮಸ್
- 1955: ದಟ್ಸ್ ಮೈ ಮಮ್ಮಿ
- 1956: ಮಸಲ್ ಬೀಚ್ ಟಾಮ್
- 2005: ದಿ ಕರಾಟೆಗಾರ್ಡ್
ದೂರದರ್ಶನ ಪ್ರದರ್ಶನಗಳು
[ಬದಲಾಯಿಸಿ]- ದಿ ಟಾಮ್ ಅಂಡ್ ಜೆರ್ರಿ ಷೋ (ABC, 1975)
- ದಿ ಟಾಮ್ ಅಂಡ್ ಜೆರ್ರಿ ಕಾಮಿಡಿ ಷೋ (CBS, 1980–1982)
- ಟಾಮ್ ಅಂಡ್ ಜೆರ್ರಿ ಕಿಡ್ಸ್ (FOX, 1990–1993)
- ಟಾಮ್ ಅಂಡ್ ಜೆರ್ರಿ ಟೇಲ್ಸ್ (ದಿ CW, 2006–2008)
ಒಟ್ಟಾರೆ ಪ್ರದರ್ಶನಗಳು ಹಾಗೂ ಕಾರ್ಯಕ್ರಮದ ವಿಭಾಗಗಳು
[ಬದಲಾಯಿಸಿ]- ಟಾಮ್ ಅಂಡ್ ಜೆರ್ರಿ (CBS, 1960ರ ದಶಕದ ಮಧ್ಯದಲ್ಲಿ)
- TBSನಲ್ಲಿ ಪ್ರಸಾರವಾಗುವ ಟಾಮ್ ಅಂಡ್ ಜೆರ್ರಿಯ ಫನ್ಹೌಸ್ (TBS, 1986-1989)
- ಕಾರ್ಟೂನ್ ನೆಟ್ವರ್ಕ್ನ ಟಾಮ್ ಅಂಡ್ ಜೆರ್ರಿ ಷೋ (ಕಾರ್ಟೂನ್ ನೆಟ್‌ವರ್ಕ್, 1992 ರಿಂದ ಇಲ್ಲಿಯವರೆಗೆ)
ದೂರದರ್ಶನದ ವಿಶೇಷ ಕಾರ್ಯಕ್ರಮಗಳು
[ಬದಲಾಯಿಸಿ]- ಎ ಯಬ್ಬಾ ಡಬ್ಬಾ ಡೂ ಸೆಲೆಬ್ರೇಷನ್: 50 ಇಯರ್ಸ್ ಆಫ್ ಹಾನ್ನಾ-ಬಾರ್ಬೆರಾ (TNT, 1989)
- ಟಾಮ್ ಅಂಡ್ ಜೆರ್ರಿ: ದಿ ಮ್ಯಾನ್‌ಷನ್ ಕ್ಯಾಟ್ (ಕಾರ್ಟೂನ್ ನೆಟ್‌ವರ್ಕ್, 2000)
ನಾಟಕೀಯ ಚಲನಚಿತ್ರಗಳು
[ಬದಲಾಯಿಸಿ]- ಟಾಮ್ ಅಂಡ್ ಜೆರ್ರಿ: ದಿ ಮೂವಿ (ಟರ್ನರ್ ಪಿಕ್ಚರ್ಸ್/ಫಿಲ್ಮ್ ರೋಮನ್/WMG/ಲೈವ್ ಎಂಟರ್‌ಟೈನ್‌ಮೆಂಟ್/ಮಿರಾಮ್ಯಾಕ್ಸ್, 1992)
- ಟಾಮ್ ಅಂಡ್ ಜೆರ್ರಿ (ವಾರ್ನರ್ ಬ್ರದರ್ಸ್ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್, TBA)[೮]
ಡೈರೆಕ್ಟ್-ಟು-ವಿಡಿಯೋ ಸ್ವರೂಪದ ಚಲನಚಿತ್ರಗಳು
[ಬದಲಾಯಿಸಿ]- ಟಾಮ್ ಅಂಡ್ ಜೆರ್ರಿ: ದಿ ಮ್ಯಾಜಿಕ್ ರಿಂಗ್ (ವಾರ್ನರ್ ಹೋಮ್ ವಿಡಿಯೋ, 2001)
- ಟಾಮ್ ಅಂಡ್ ಜೆರ್ರಿ: ಬ್ಲಾಸ್ಟ್ ಆಫ್ ಟು ಮಾರ್ಸ್ (ವಾರ್ನರ್ ಹೋಮ್ ವಿಡಿಯೋ, 2005)
- ಟಾಮ್ ಅಂಡ್ ಜೆರ್ರಿ: ದಿ ಫಾಸ್ಟ್ ಅಂಡ್ ದಿ ಫ್ಯೂರಿ (ವಾರ್ನರ್ ಹೋಮ್ ವಿಡಿಯೋ, 2005)
- ಟಾಮ್ ಅಂಡ್ ಜೆರ್ರಿ: ಶಿವರ್ ಮಿ ವಿಸ್ಕರ್ಸ್ (ವಾರ್ನರ್ ಹೋಮ್ ವಿಡಿಯೋ, 2006)
- ಟಾಮ್ ಅಂಡ್ ಜೆರ್ರಿ: ಎ ನಟ್‌ಕ್ರಾಕರ್ ಟೇಲ್ (ವಾರ್ನರ್ ಹೋಮ್ ವಿಡಿಯೋ, 2007)
ಇದನ್ನೂ ನೋಡಿರಿ
[ಬದಲಾಯಿಸಿ]- ದಿ ಗೋಲ್ಡನ್ ಏಜ್ ಆಫ್ ಅಮೆರಿಕನ್ ಅನಿಮೇಷನ್
- ಮೆಟ್ರೋ-ಗೋಲ್ಡ್‌ವಿನ್-ಮೇಯರ್ ಕಾರ್ಟೂನ್ ಸ್ಟುಡಿಯೋ ಅಂಡ್ MGM ಅನಿಮೇಷನ್/ವಿಷುಯಲ್ ಆರ್ಟ್ಸ್
- ಹಾನ್ನಾ-ಬಾರ್ಬೆರಾರ ಅನಿಮೇಷನ್ ಕಾರ್ಯಗಳನ್ನು ಆಧರಿಸಿದ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಲನಚಿತ್ರಗಳು
- ಹರ್ಮನ್ ಅಂಡ್ ಕಟ್ನಿಪ್
- ಇಚಿ ಅಂಡ್ ಸ್ಕ್ರಾಚಿ (ದಿ ಸಿಂಪ್ಸನ್ ನಿಂದ)
- ಪಿಕ್ಸಿ ಅಂಡ್ ಡಿಕ್ಸಿ ಅಂಡ್ ಮಿ. ಜಿಂಕ್ಸ್
- ಪಿಯರ್ಸ್ ಎಗಾನ್
- ಸಿಲ್ವೆಸ್ಟರ್ ಅಂಡ್ ಟ್ವೀಟಿ
- ನ್ಯೂ, ಪೊಗೊಡಿ!
ಆಕರಗಳು
[ಬದಲಾಯಿಸಿ]- ಆಡಮ್ಸ್, T.R. (1991). ಟಾಮ್ ಅಂಡ್ ಜೆರ್ರಿ: ಫಿಫ್ಟಿ ಇಯರ್ಸ್ ಆಫ್ ಕ್ಯಾಟ್ ಅಂಡ್ ಮೌಸ್ . ಕ್ರೆಸೆಂಟ್ ಬುಕ್ಸ್. ISBN 0-517-05688-7.
- ಬ್ಯಾರಿಯರ್, ಮೈಕೇಲ್ (1999). ಹಾಲಿವುಡ್ ಕಾರ್ಟೂನ್ಸ್: ಅಮೆರಿಕನ್ ಅನಿಮೇಷನ್ ಇನ್ ಇಟ್ಸ್ ಗೋಲ್ಡನ್ ಏಜ್ . ಆಕ್ಸ್‌ಫರ್ಡ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್. ISBN 0-19-503759-6.
- ಮಾಲ್ಟಿನ್, ಲಿಯೋನಾರ್ಡ್ (1980, ಪರಿಷ್ಕೃತಗೊಂಡಿದ್ದು 1987ರಲ್ಲಿ). ಆಫ್ ಮೈಸ್ ಅಂಡ್ ಮ್ಯಾಜಿಕ್: ಎ ಹಿಸ್ಟರಿ ಆಫ್ ಅಮೆರಿಕನ್ ಅನಿಮೇಟೆಡ್ ಕಾರ್ಟೂನ್ಸ್ . ನ್ಯೂಯಾರ್ಕ್: ಪೆಂಗ್ವಿನ್ ಬುಕ್ಸ್. ISBN 0-452-25993-2.
ಟಿಪ್ಪಣಿಗಳು
[ಬದಲಾಯಿಸಿ]- ↑ Hanna, William (1989). The Art of Hanna-Barbera: Fifty Years of Creativity. New York, NY: Viking Studio Books. ISBN 0-67082-978-1.
{{cite book}}
: Unknown parameter|coauthors=
ignored (|author=
suggested) (help) - ↑ Smoodin, Eric. "Cartoon and Comic Classicism: High-Art Histories of Lowbrow Culture". American Literary History. 4 (1 (Spring, 1992)). Oxford, England: Oxford University Press.
- ↑ Barbera, Joseph (1994). My Life in "Toons": From Flatbush to Bedrock in Under a Century. Atlanta, GA: Turner Publishing. p. 76. ISBN 1-57036-042-1.
- ↑ BBC NEWS | ಎಂಟರ್‌ಟೈನ್‌ಮೆಂಟ್ | ಸ್ಮೋಕ್ಸ್ ನೋ ಜೋಕ್ ಫಾರ್ ಟಾಮ್ ಅಂಡ್ ಜೆರ್ರಿ
- ↑ ಕಿಡ್ಸ್ WB! ಆನ್ ದಿ CW ಅನೌನ್ಸಸ್ 2006-2007 "ಟೂ ಬಿಗ್ ಫಾರ್ ಯುವರ್ TV" ಸಾಟರ್ಡೆ ಮಾರ್ನಿಂಗ್ ಪ್ರೋಗ್ರಾಮಿಂಗ್ ಷೆಡ್ಯೂಲ್- ಕಾರ್ಟೂನ್ಸ್ - ToyNewsI.com
- ↑ "ಆರ್ಕೈವ್ ನಕಲು". Archived from the original on 2013-05-11. Retrieved 2009-10-23.
- ↑
- ಪ್ರೈಸ್, ಜೆಫ್ರಿ ಅಂಡ್ ಸೀಮನ್, ಪೀಟರ್ ಎಸ್. (ಸೆಪ್ಟೆಂಬರ್ 6, 1986). ಹೂ ಷಾಟ್ ರೋಜರ್ ರ್ಯಾಬಿಟ್? [ಚಿತ್ರಕಥೆ]. "ಟೂನ್‌ಟೌನ್"ನ ಮಾಲೀಕನಾದ ಮಾರ್ವಿನ್ ಆಕ್ಮೆಯ ಅಂತ್ಯಸಂಸ್ಕಾರದಲ್ಲಿ ಟಾಮ್ ಮತ್ತು ಜೆರ್ರಿ ಜೋಡಿಯು ಪಾಲ್ಗೊಳ್ಳಬೇಕೆಂದು ಹೂ ಫ್ರೇಮ್ಡ್ ರೋಜರ್ ರ್ಯಾಬಿಟ್ ಚಿತ್ರದ ಚಿತ್ರಕಥೆಯ ಮೂರನೇ ಕರಡು ಪ್ರತಿಯು ಅಪೇಕ್ಷಿಸುತ್ತದೆ. ಆದರೆ ಕೊನೆಗೆ ಈ ಸನ್ನಿವೇಶವನ್ನು ಸದರಿ ಚಿತ್ರಕ್ಕಾಗಿ ಚಿತ್ರಿಸಲಿಲ್ಲ.
- ↑ ೮.೦ ೮.೧ ವೆರೈಟಿ | ಎಂಟರ್‌ಟೈನ್‌ಮೆಂಟ್ | ಟಾಮ್ ಅಂಡ್ ಜೆರ್ರಿ ಹೆಡ್ ಟು ದಿ ಬಿಗ್ ಸ್ಕ್ರೀನ್
- ↑ [೧] Tom and Jerry Comics
- ↑ http://web. archive.org/web/20050216224826/ http://www.time Archived 2013-07-13 ವೇಬ್ಯಾಕ್ ಮೆಷಿನ್ ನಲ್ಲಿ.. com/time/ classroom/ glenspring 2005/ pg26. html
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedDailyTeleL
- ↑ ಚಕ್ ಜೋನ್ಸ್‌ರವರ ಕಿರುಚಿತ್ರಗಳನ್ನು ಟಾಮ್ ಅಂಡ್ ಜೆರ್ರಿ ಎಂಬ ಹೊಸ 2-DVD ಜೋಡಿಯು ಒಂದು ಸಗಟು ಕಂತೆಯಲ್ಲಿ ಸಂಗ್ರಹಿಸಿ ನೀಡುತ್ತದೆ Archived 2012-10-18 ವೇಬ್ಯಾಕ್ ಮೆಷಿನ್ ನಲ್ಲಿ..
- ↑ Vallance, Tom (2006-12-20). "Joseph Barbera: Animation pioneer whose creations with William Hanna included the Flintstones and Tom and Jerry". The Independent (London).
- Pages with reference errors
- Pages using the JsonConfig extension
- CS1 errors: unsupported parameter
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Film articles using image size parameter
- ಚಲಿತ ಚಲನಚಿತ್ರಗಳ ಸರಣಿ
- ಅಮೆರಿಕಾದ ಚಲಿತ ದೂರದರ್ಶನ ಸರಣಿ
- CBS ನೆಟ್‌ವರ್ಕ್ ಪ್ರದರ್ಶನಗಳು
- 1958ರ ದೂರದರ್ಶನ ಸರಣಿ ಮುಕ್ತಾಯಗಳು
- 1960ರ ದೂರದರ್ಶನ ಸರಣಿ ಪ್ರಥಮ ಪ್ರದರ್ಶನಗಳು
- 1962ರ ದೂರದರ್ಶನ ಸರಣಿ ಮುಕ್ತಾಯಗಳು
- 1963ರ ದೂರದರ್ಶನ ಸರಣಿ ಪ್ರಥಮ ಪ್ರದರ್ಶನಗಳು
- 1967ರ ದೂರದರ್ಶನ ಸರಣಿ ಮುಕ್ತಾಯಗಳು
- 2005ರ ದೂರದರ್ಶನ ಸರಣಿ ಪ್ರಥಮ ಪ್ರದರ್ಶನಗಳು
- 2005ರ ದೂರದರ್ಶನ ಸರಣಿ ಮುಕ್ತಾಯಗಳು
- ಮಕ್ಕಳ ಹಾಸ್ಯ ಸರಣಿ
- ಕಲ್ಪಿತಕಥೆಯ ಜೋಡಿಗಳು
- MGM ಸಂಸ್ಥೆಯ ಚಲಿತ ಕಿರುಚಿತ್ರಗಳು
- ಗೋಲ್ಡ್ ಕೀ ಕಾಮಿಕ್ಸ್ ಶೀರ್ಷಿಕೆಗಳು
- ಡೆಲ್ ಕಾಮಿಕ್ಸ್ ಶೀರ್ಷಿಕೆಗಳು
- ಕಲ್ಪಿತ ಕಥೆಯ ಬೆಕ್ಕುಗಳು
- ಕಲ್ಪಿತ ಕಥೆಯ ಇಲಿಗಳು ಮತ್ತು ಬೆಕ್ಕುಗಳು
- ಟಾಮ್ ಅಂಡ್ ಜೆರ್ರಿ
- ಕಾರ್ಟೂನ್ ನೆಟ್ವರ್ಕ್ನ ಮೂಲ ಕಾರ್ಯಕ್ರಮಗಳು
- 1940ರ ಪರಿಚಯಗಳು
- MGM ವ್ಯಂಗ್ಯಚಿತ್ರ ಮಾಲಿಕೆಯ ಪಾತ್ರಗಳು
- ಮಾನವರೂಪಿ ಪಾತ್ರಗಳನ್ನು ಒಳಗೊಂಡಿರುವ ದೂರದರ್ಶನ ಕಾರ್ಯಕ್ರಮಗಳು
- Pages using ISBN magic links