ಸುಕ್ಕು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುಖದ ಮೇಲೆ ಸುಕ್ಕುಗಳಿರುವ ಒಬ್ಬ ವೃದ್ಧ ಮಹಿಳೆ

ಸುಕ್ಕು ಎಂದರೆ ಚರ್ಮ ಅಥವಾ ಬಟ್ಟೆಯಂತಹ, ಇತರ ವಿಷಯಗಳಲ್ಲಿ ನಯವಾಗಿರುವ ಮೇಲ್ಮೈಯಲ್ಲಿ ಕಾಣುವ ಮಡಿಕೆ, ಏಣುಗೆರೆ ಅಥವಾ ನಿರಿಗೆ. ಚರ್ಮದ ಸುಕ್ಕುಗಳು ಸಾಮಾನ್ಯವಾಗಿ ಗ್ಲೈಕೇಶನ್, ಅಭ್ಯಾಸವಾಗಿರುವ ಮಲಗುವ ಭಂಗಿಗಳು,[೧] ದೇಹರಾಶಿಯ ಕಳೆತ, ಸೂರ್ಯ ಹಾನಿಯಂತಹ ವಯಸ್ಸಾಗುವಿಕೆಯ ಪ್ರಕ್ರಿಯೆಗಳ ಪರಿಣಾಮವಾಗಿ, ಅಥವಾ ತಾತ್ಕಾಲಿಕವಾಗಿ, ನೀರಿನಲ್ಲಿ ದೀರ್ಘಕಾಲ ಮುಳುಗಿಸಿದ ಪರಿಣಾಮವಾಗಿ ಕಾಣಿಸಿಕೊಳ್ಳುತ್ತವೆ. ಚರ್ಮದಲ್ಲಿ ವಯಸ್ಸಿನ ಸುಕ್ಕಾಗುವಿಕೆಯು ಅಭ್ಯಾಸವಾಗಿರುವ ಮುಖಭಾವಗಳು, ವಯಸ್ಸಾಗುವಿಕೆ, ಸೂರ್ಯ ಹಾನಿ, ಧೂಮಪಾನ, ಕಳಪೆ ಜಲಸಂಚಯ, ಮತ್ತು ವಿವಿಧ ಇತರ ಅಂಶಗಳಿಂದ ಪ್ರೋತ್ಸಾಹಿತವಾಗುತ್ತದೆ.[೨] ಮಾನವರಲ್ಲಿ, ಇದನ್ನು ಸ್ವಲ್ಪ ಮಟ್ಟಿಗೆ ವಿಪರೀತವಾಗಿ ಸೂರ್ಯನಿಗೆ ಚರ್ಮವನ್ನು ಒಡ್ಡುವುದನ್ನು ತಪ್ಪಿಸಿ ಹಾಗೂ ಆಹಾರದ ಮೂಲಕವೂ ತಡೆಯಬಹುದು.

ಉಲ್ಲೇಖಗಳು[ಬದಲಾಯಿಸಿ]

  1. American Academy of Dermatology. "Causes of Aging". AgingSkinNet. American Academy of Dermatology. Retrieved 5 March 2013.
  2. Anderson, Laurence. 2006. Looking Good, the Australian guide to skin care, cosmetic medicine and cosmetic surgery. AMPCo. Sydney. ISBN 0-85557-044-X.
"https://kn.wikipedia.org/w/index.php?title=ಸುಕ್ಕು&oldid=920613" ಇಂದ ಪಡೆಯಲ್ಪಟ್ಟಿದೆ