ಅಶರೀರವಾಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ಪುರಾಣ, ಕಾವ್ಯ, ದಂತಕಥೆ,ಐತಿಹ್ಯಗಳಲ್ಲಿ ಸಾಮಾನ್ಯವಾಗಿ ದೇವರುಗಳು ಧ್ವನಿಯ ಮೂಲಕ ಕೊಡುವ ಸೂಚನೆ.ಅಥವಾ ಘೋಷಣೆ. ಯಾರದು ಈ ಧ್ವನಿಯೋ ಅವರ ಶರೀರವು ಕಣ್ಣಿಗೆ ಕಾಣದ್ದರಿಂದ ಶರೀರವಿಲ್ಲದೆ ಬಂದ ಮಾತು ಎಂಬ ಅರ್ಥ ಈ ಶಬ್ದಕ್ಕೆ. ಆಕಾಶವಾಣಿ ಎಂಬ ಶಬ್ದವನ್ನೂ ಇದೇ ಅರ್ಥ ಕೊಡುತ್ತಿತ್ತಾದರೂ , ಈಗ ಅದನ್ನು ಭಾರತ ಸರಕಾರದ ರೇಡಿಯೋ ವ್ಯವಸ್ಥೆಯನ್ನು ಸೂಚಿಸಲು ಬಳಸಲಾಗುತ್ತಿದೆ.