ಕೊಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಲೆ ಎಂದರೆ ಸಮರ್ಥನೆ ಅಥವಾ ಸರಿಯಾದ ಕಾರಣವಿಲ್ಲದೆ ಕಾನೂನುಬಾಹಿರವಾಗಿ ಮತ್ತೊಬ್ಬ ಮನುಷ್ಯನ ಪ್ರಾಣ ತೆಗೆಯುವುದು, ವಿಶೇಷವಾಗಿ ಪೂರ್ವನಿಯೋಜಿತ ದುರುದ್ದೇಶದಿಂದ ಕಾನೂನುಬಾಹಿರವಾಗಿ ಮತ್ತೊಬ್ಬ ಮಾನವನ ಪ್ರಾಣ ತೆಗೆಯುವುದು.[೧] ನ್ಯಾಯವ್ಯಾಪ್ತಿಯನ್ನು ಆಧರಿಸಿ, ಈ ಮನಃಸ್ಥಿತಿಯು ಕೊಲೆಯನ್ನು ಕಾನೂನುಬಾಹಿರ ನರಹತ್ಯೆಯ ಇತರ ರೂಪಗಳಿಂದ ವ್ಯತ್ಯಾಸ ಮಾಡಬಹುದು. ನರಹತ್ಯೆ ಎಂದರೆ ದುರುದ್ದೇಶವಿಲ್ಲದೆ ಪ್ರಾಣ ತೆಗೆಯುವುದು, ಸಮಂಜಸವಾದ ಪ್ರಚೋದನೆ, ಅಥವಾ ಕುಗ್ಗಿದ ಸಾಮರ್ಥ್ಯದಿಂದ ಉಂಟಾದುದು. ಎಲ್ಲಿ ಗುರುತಿಸಲ್ಪಡುತ್ತದೆಯೊ ಅಲ್ಲಿ, ಅನೈಚ್ಛಿಕ ನರಹತ್ಯೆ ಎಂದರೆ ಅತ್ಯಂತ ಕ್ಷೀಣ ತಪ್ಪಿತಸ್ಥ ಉದ್ದೇಶವಾದ ಅಜಾಗರೂಕತೆಯಿಂದ ಪ್ರಾಣ ತೆಗೆಯುವುದು.

ಬಹುತೇಕ ಸಮಾಜಗಳು ಕೊಲೆಯನ್ನು ಅತ್ಯಂತ ಗಂಭೀರ ಅಪರಾಧವೆಂದು ಪರಿಗಣಿಸುತ್ತವೆ, ಮತ್ತು ಹಾಗಾಗಿ ಪಾಪ/ತಪ್ಪಿನ, ನಿರೋಧ, ಪುನರ್ವಸತಿ, ಅಥವಾ ಅಸಮರ್ಥಗೊಳಿಸುವಿಕೆಯ ಉದ್ದೇಶಗಳಿಗಾಗಿ ಆರೋಪಿತ ವ್ಯಕ್ತಿಯು ಕಠಿಣ ಶಿಕ್ಷೆಗಳನ್ನು ಪಡೆಯಬೇಕು ಎಂದು ನಂಬುತ್ತವೆ. ಬಹುತೇಕ ದೇಶಗಳಲ್ಲಿ, ಕೊಲೆಯ ಶಿಕ್ಷೆಗೆ ಒಳಗಾದ ವ್ಯಕ್ತಿಯು ಸಾಮಾನ್ಯವಾಗಿ ದೀರ್ಘಕಾಲದ ಜೈಲು ಶಿಕ್ಷೆಯನ್ನು ಎದುರಿಸುತ್ತಾನೆ, ಸಂಭಾವ್ಯವಾಗಿ ಜೀವಾವಧಿ ಶಿಕ್ಷೆ; ಮತ್ತು ಕೆಲವು ಸಂದರ್ಭಗಳಲ್ಲಿ ಮರಣದಂಡನೆಯನ್ನು ವಿಧಿಸಬಹುದು.

ಸಾಮಾನ್ಯ ಕಾನೂನಿನಲ್ಲಿ ಕೊಲೆಯ ಅಂಶಗಳೆಂದರೆ ಕಾನೂನುಬಾಹಿರವಾದುದು, ಪ್ರಾಣ ತೆಗೆಯುವುದು, ಅಪರಾಧ ಕೃತ್ಯ ಅಥವಾ ಲೋಪ, ಮಾನವನಿಗೆ ಸಂಬಂಧಿಸಿದ್ದು, ಮತ್ತೊಬ್ಬ ಮನುಷ್ಯನಿಂದ ಮಾಡಲ್ಪಟ್ಟದ್ದು, ಮತ್ತು ಪೂರ್ವನಿಯೋಜಿತ ದುರುದ್ದೇಶಪೂರಿತವಾದುದು. ಅನೇಕ ನ್ಯಾಯವ್ಯಾಪ್ತಿಗಳು ಕೊಲೆಗಳನ್ನು ದರ್ಜೆಗಳಾಗಿ ವಿಭಜಿಸುತ್ತವೆ. ಅವೆಂದರೆ ಪ್ರಥಮ ದರ್ಜೆ ಕೊಲೆ, ದ್ವಿತೀಯ ದರ್ಜೆ ಕೊಲೆ ಮತ್ತು ತೃತೀಯ ದರ್ಜೆ ಕೊಲೆ. ಅತ್ಯಂತ ಸಾಮಾನ್ಯ ವಿಭಜನೆ ಪ್ರಥಮ ಮತ್ತು ದ್ವಿತೀಯ ದರ್ಜೆ ಕೊಲೆಗಳ ನಡುವೆ ಇರುತ್ತದೆ. ಸಾಮಾನ್ಯವಾಗಿ ದ್ವಿತೀಯ ದರ್ಜೆ ಕೊಲೆಯು ಸಾಮಾನ್ಯ ಕಾನೂನಿನ ಕೊಲೆಯಾಗಿರುತ್ತದೆ, ಮತ್ತು ಪ್ರಥಮ ದರ್ಜೆ ಕೊಲೆಯು ಗಂಭೀರ ರೂಪದ ಕೊಲೆ. ಪ್ರಥಮ ದರ್ಜೆ ಕೊಲೆಯ ಗಂಭೀರ ಅಂಶಗಳು ನ್ಯಾಯವ್ಯಾಪ್ತಿಯನ್ನು ಅವಲಂಬಿಸಿವೆ, ಆದರೆ ಕೊಲ್ಲುವ ನಿರ್ದಿಷ್ಟ ಉದ್ದೇಶ, ಪೂರ್ವಯೋಜನೆ, ಅಥವಾ ಸಾವಧಾನತೆಯನ್ನು ಒಳಗೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ, ಉಸಿರು ಕಟ್ಟಿಸುವಿಕೆ, ವಿಷಪ್ರಯೋಗ, ಅಥವಾ ಕಾಯುವ ಕೃತ್ಯಗಳಿಂದ ಮಾಡಲ್ಪಟ್ಟ ಕೊಲೆಗಳು ಕೂಡ ಪ್ರಥಮ ದರ್ಜೆಯ ಕೊಲೆಗಳೆಂದು ಕಾಣಲಾಗುತ್ತದೆ.

ಕೆಲವು ನ್ಯಾಯವ್ಯಾಪ್ತಿಗಳು ಪೂರ್ವನಿಯೋಜಿತ ಕೊಲೆಯನ್ನು ಕೂಡ ವ್ಯತ್ಯಾಸ ಮಾಡುತ್ತವೆ. ಇದು ಯಶಸ್ಸಿನ ಸಾಧ್ಯತೆಯನ್ನು ಹೆಚ್ಚಿಸಲು, ಅಥವಾ ಪತ್ತೆಹಚ್ಚುವಿಕೆ ಅಥವಾ ಬಂಧನ ತಪ್ಪಿಸಿಕೊಳ್ಳಲು, ವಿವೇಚನೆಯಿಂದ ಸಮಯ ಅಥವಾ ವಿಧಾನವನ್ನು ಪರಿಗಣಿಸಿದ ನಂತರ, ಅನ್ಯಾಯವಾಗಿ ಮತ್ತು ಉದ್ದೇಶಪೂರ್ವಕವಾಗಿ ಮತ್ತೊಬ್ಬ ಮನುಷ್ಯನ ಮರಣವನ್ನು ಉಂಟುಮಾಡುವ ಅಪರಾಧ. ಪೂರ್ವನಿಯೋಜಿತ ಕೊಲೆಯು ನರಹತ್ಯೆಯ ಅತ್ಯಂತ ಗಂಭೀರ ರೂಪಗಳಲ್ಲಿ ಒಂದಾಗಿದೆ, ಮತ್ತು ಇದರ ಶಿಕ್ಷೆಯೂ ಉಗ್ರವಾಗಿರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. West's Encyclopedia of American Law Volume 7 (Legal Representation to Oyez). West Group. 1998. ISBN 0314201602. Retrieved 10 September 2017. ("The unlawful killing of another human being without justification or excuse.")
"https://kn.wikipedia.org/w/index.php?title=ಕೊಲೆ&oldid=817396" ಇಂದ ಪಡೆಯಲ್ಪಟ್ಟಿದೆ