ವಿಷಯಕ್ಕೆ ಹೋಗು

ಪ್ರೇಕ್ಷಕರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಸ್ರೇಲ್ ನ ಟೆಲ್ ಅವಿವ್ ನಲ್ಲಿನ ಪ್ರೇಕ್ಷಕರು, ಬಾಟ್ಶೆವಾ ಡಾನ್ಸ್ ಕಂಪನಿಯ ಕಾರ್ಯಕ್ರಮ ನೋಡಲು ಕಾಯುತ್ತಿರುವುದು

ಪ್ರೇಕ್ಷಕರು ಎಂದರೆ ಒಂದು ಜನರ ಸಮೂಹವೆನಿಸಿದೆ.ಇವರು ಪ್ರದರ್ಶನ ಅಥವಾ ಕಲಾ ಕೃತಿ,ಸಾಹಿತ್ಯ(ಇದರಲ್ಲಿ ಅವರನ್ನು"ಓದುಗ"ಎನ್ನುತ್ತಾರೆ)ರಂಗಮಂದಿರ,ಸಂಗೀತ ಅಥವಾ ಯಾವುದೇ ಮಾಧ್ಯಮದ ಪ್ರಸಕ್ತ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಇವರು ಭಾಗಿಯಾಗುತ್ತಾರೆ. ಪ್ರೇಕ್ಷಕರ ಸದಸ್ಯರಲ್ಲಿನ ಹಲವರು ವಿವಿಧ ಬಗೆಯ ವಿವಿಧ ಕಲಾಪ್ರಕಾರಗಳಲ್ಲಿ ಪಾಲ್ಗೊಳ್ಳುತ್ತಾರೆ:ಕೆಲವು ಸಂದರ್ಭಗಳಲ್ಲಿ ಪ್ರೇಕ್ಷಕರನ್ನು ಪ್ರತ್ಯಕ್ಷವಾಗಿ ಭಾಗವಹಿಸುವಂತೆ ಆವ್ಹಾನಿಸಲಾಗುತ್ತದೆ.ಇನ್ನುಳಿದವರು ಕೇವಲ ಮೆಚ್ಚುಗೆಯ ಚಪ್ಪಾಳೆ ತಟ್ಟುವ ಮತ್ತು ಟೀಕೆ-ವಿಶ್ಲೇಷಣೆ ಮತ್ತು ಕೇವಲ ಸಾಂದರ್ಭಿಕ ಸ್ವೀಕರಣೆ ಮಾಡುವ ವರ್ಗವಿರುತ್ತದೆ.

ಮಾಧ್ಯಮ ವಲಯದ ಪ್ರೇಕ್ಷಕರ ಬಗ್ಗೆ ನಮ್ಮ ಶಿಕ್ಷಣ ತಜ್ಞರು ತಮ್ಮ ಮಾಧ್ಯಮ ಅಧ್ಯಯನಗಳಲ್ಲಿ ಇದರ ಪ್ರಭಾವವನ್ನು ಅಭ್ಯಸಿಸುತ್ತಿದ್ದಾರೆ. ಪ್ರೇಕ್ಷಕರ ಸಿದ್ದಾಂತವು ಪ್ರತಿಭಾವಂತಿಕೆಯ ಮೂಲಕ 'ಪ್ರೇಕ್ಷಕರ' ವರ್ಗದ ಒಳನೋಟದ ಬಗ್ಗೆ ವಿವರಿಸುತ್ತದೆ. ಇಂತಹ ಒಳನೋಟಗಳು ಪ್ರೇಕ್ಷಕರ ಪರಿಣಾಮಕಾರಿ ಸ್ವಭಾವಗಳ ಬಗ್ಗೆ ತಮ್ಮ ಜ್ಞಾನವನ್ನು ಮರುರೂಪಿಸಲು ನೆರವಾಗುತ್ತವೆ.ಅದಲ್ಲದೇ ಪ್ರೇಕ್ಷಕರು ವಿವಿಧ ಕಲಾಪ್ರಕಾರಗಳಿಗೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ.

ಪ್ರೇಕ್ಷಕರ ಪಾಲ್ಗೊಳ್ಳುವಿಕೆ[ಬದಲಾಯಿಸಿ]

ನ್ಯುಯಾರ್ಕ್ ನಗರದಲ್ಲಿನ ಬ್ರೂಕ್ ಲಿನ್ ಬುಕ್ ಫೆಸ್ಟಿವಲ್ ನಲ್ಲಿನ ಪ್ರೇಕ್ಷಕರು.

ಕೆಲವು ಮುಂದುವರೆದ ಪ್ರೇಕ್ಷಕರ ಪಾಲ್ಗೊಳ್ಳುವಿಕೆಯು ಸಾಮಾನ್ಯವಾಗಿ ರಂಗಮಂಚದ ನಾಲ್ಕನೆಯ ಗೋಡೆಯನ್ನು ಸರಿಸುತ್ತದೆ.(ಪ್ರೇಕ್ಷಕರು ಮತ್ತು ರಂಗಮಂಚದ ಮೇಲಿರುವವರ ನಡುವೆ ಇರುವ ಕಾಲ್ಪನಿಕ ಗೋಡೆ) ಉದಾಹರಣೆಗೆ ಸಾಂಪ್ರದಾಯಿಕ ಶೈಲಿಯ ಬ್ರಿಟಿಶ್ ರ ಮೂಕಾಭಿನಯದ ನಾಟಕಗಳು,ನಿಂತುಕೊಂಡು-ಹಾಸ್ಯ ಪ್ರದರ್ಶನ ಹಾಗು ಸೃಜನಾತ್ಮಕ ರಂಗಪ್ರದರ್ಶನಗಳಾದ ಜನಪ್ರಿಯ ಬ್ಲು ಮ್ಯಾನ್ ಗ್ರುಪ್ ಗಳು ಇದಕ್ಕೆ ಉದಾಹರಣೆಗಳಾಗಿವೆ.

ಪ್ರೇಕ್ಷಕರುಗಳ ಪಾಲ್ಗೊಳ್ಳುವಿಕೆಗೆ ಅತ್ಯಂತ ಪರಿಚಿತ ಉದಾಹರಣೆ ಎಂದರೆ ಅಂಗಚಲನೆಯ ಚಿತ್ರ ದಿ ರಾಕಿ ಹಾರರ್ ಪಿಕ್ಚರ್ ಶೊ ಅಲ್ಲದೇ ಅದರ ಆರಂಭಿಕ ರೂಪಾಂತರದ ದಿ ರಾಕಿ ಹಾರರ್ ಶೊ ಎನ್ನಬಹುದು. ಪ್ರೇಕ್ಷಕರ ಪಾಲ್ಗೊಳ್ಳುವಿಕೆಯು ಬಹಳಷ್ಟು ಬಾರಿ ಚಿತ್ರದ ಬಹುಮುಖ್ಯ ಭಾಗವಾಗಿವೆ ಎಂಬುದು ಬಿಂಬಿತವಾಗುತ್ತದೆ.ಆಲಿಸುವ ಕಾರ್ಯಕ್ರಮದ ಬಗೆಗೆ DVD ಆಯ್ಕೆ ಸಹ ಪ್ರೇಕ್ಷಕರ ಮುಂದಿದೆ.ಪ್ರೇಕ್ಷಕರು ಯಾವಾಗಲೂ ತಮ್ಮ ಆಯ್ಕೆಯನ್ನು ಮುಕ್ತವಾಗಿಡಲು ಯತ್ನಿಸುತ್ತಾರೆ. ರಾಕಿ ಹಾರರ್ ಪಿಕ್ಚರ್ ಶೊದಲ್ಲಿ ಪ್ರೇಕ್ಷಕರು "ತೀವ್ರಗತಿಯ ಪ್ರತಿಕ್ರಿಯೆ"ವ್ಯಕ್ತಪಡಿಸುವುದರಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಕಾಣಬಹುದು.ಚಿತ್ರದ ಕೆಲವು ಸನ್ನಿವೇಶಗಳಲ್ಲಿನ ನಿಶ್ಚಿತ ಸಂದರ್ಭಗಳಲ್ಲಿ ಪ್ರೇಕ್ಷಕರು ಪರದೆಯೆಡೆಗೆ ಕೂಗು ಹಾಕುತ್ತಾರೆ. ಅದಲ್ಲದೇ ಅಸಂಖ್ಯೆ ರಂಗಪರಿಕರಗಳನ್ನು ಬಳಸಲು ಅವರಿಗೆ ಸೂಚಿಸಲಾಗುತ್ತದೆ.ಚಲನಚಿತ್ರದ ಕೆಲ ಭಾಗಗಳಲ್ಲಿ ಪ್ರೇಕ್ಷಕರು ತಮಗೆ ಉಪಯೋಗಿಸಲು ನೀಡಿದ್ದನ್ನು ಎಸೆಯುತ್ತಾರೆ(ಪ್ರೊಕ್ಷಿಸುತ್ತಾರೆ). ಈ ರಂಗಪರಿಕರಗಳು ಇವುಗಳನ್ನೊಳಗೊಂಡಿವೆ:

 • ಅಕ್ಕಿಕಾಳು- ವಿವಾಹದ ಸನ್ನಿವೇಶಕ್ಕೆ
 • ಜಲ ಪಿಸ್ತೂಲ್ ಗಳು - ಬ್ರಾಡ್ ಮತ್ತು ಜಾನೆಟ್ ನಡೆಯುವಾಗ ಬರುವ ಮಳೆ ನಿಯಂತ್ರಣಕ್ಕೆ
 • ಶೌಚಾಲಯದ ಕಾಗದ - ಯಾವಾಗ ಡಾ.ಸ್ಕಾಟ್ ಪ್ರವೇಶವಾಗುತ್ತದೆಯೋ ಆಗ ಬ್ರಾಡ್ ಕಿರುಚುತ್ತಾನೆ "ಗ್ರೇಟ್ ಸ್ಕಾಟ್

!"

 • ಗದ್ದಲ ಮಾಡುವವರು- ಆರಂಭಿಕ ದೃಶ್ಯದ ನಿರ್ಮಾಣದಲ್ಲಿ
 • ಮಿಠಾಯಿ,ವಧುವರರತ್ತ ಎರಚುವ ವಿವಿಧ ಬಣ್ಣದ ಕಾಗದ- ಅಂತ್ಯದಲ್ಲಿ "ನಾನು ನಿನ್ನನ್ನು ಮನುಷ್ಯನಾಗಿಸುತ್ತೇನೆ" ಎಂದು ಹೇಳುವಾಗ ಬಳಸಲಾಗುವುದು.
 • ಬ್ರೆಡ್ ತುಣುಕು-ರಾತ್ರಿಯೂಟದ ಸನ್ನಿವೇಶದಲ್ಲಿ
 • ಪಾರ್ಟಿ ಹ್ಯಾಟ್ ಗಳು - ರಾತ್ರಿಯೂಟದ ಸನ್ನಿವೇಶದಲ್ಲಿ
 • ಇಸ್ಪೀಟೆಲೆಗಳು - "ನಾನು ಮನೆಗೆ ಹೋಗುತ್ತೇನೆ" ಎಂಬಲ್ಲಿ ಬಳಸಲು

ಪ್ರೇಕ್ಷಕರ ಪಾಲ್ಗೊಳ್ಳುವಿಕೆಯ ಉದಾಹರಣೆಗಳು[ಬದಲಾಯಿಸಿ]

ಹಾಂಗ್ ಕಾಂಗ್ ನಲ್ಲಿನ ಪ್ರದರ್ಶನವೊಂದರಲ್ಲಿ ಪ್ರೇಕ್ಷಕರು.

ಇನ್ನೊಂದು ಕೊಲೆ ರಹಸ್ಯ ನಿರೂಪಿಸುವ ರಂಗರೂಪಕವೆಂದರೆ "ದಿ ಮಿಸ್ಟ್ರಿ ಆಫ್ ಎಡ್ವಿನ್ ಡ್ರೂಡ್ ",ಬ್ರಾಡ್ ವೆ ಸಂಗೀತ ಆಧಾರಿತ ಚಾರ್ಲ್ಸ್ ಡಿಕೆನ್ಸ್ ನ ಅಂತಿಮ ಅಪೂರ್ಣಗೊಂಡ ಕೆಲಸದ ಮೇಲೆ ನಿರೂಪಿತವಾದುದು. ಇದರಲ್ಲಿ ಪ್ರೇಕ್ಷಕರು ಕೊಲೆಗಾರ ಯಾರು ಎಂಬುದನ್ನು ಮತ ಹಾಕುವ ಮೂಲಕ ಊಹೆ ಮಾಡಬಹುದಾಗಿದೆ.ಅಲ್ಲದೇ ನಿಜ ಪತ್ತೆದಾರ ಎಂಬುದನ್ನೂ ಪತ್ತೆ ಹಚ್ಚಬೇಕಾಗುತ್ತದೆ.ಹೀಗೆ ಈ ಜೋಡಿಯು ದೃಶ್ಯದಲ್ಲಿ ಒಟ್ಟಿಗೆ ಅದೃಶ್ಯಗೊಳ್ಳುತ್ತದೆ.

ಆಗ ೧೯೮೪ರ ಸಮ್ಮರ್ ಒಲಿಂಪಿಕ್ಸ್ ನ ಸಂದರ್ಭದಲ್ಲಿ ಒಲಿಂಪಿಕ್ ಸ್ಟೇಡಿಯಮ್ ನ ಆಸನಗಳಲ್ಲಿ ಕಾರ್ಡ್ ಗಳನ್ನು ತೂರಿಸಲಾಗಿತ್ತು. ಇದಕ್ಕಾಗಿ ಉದ್ಘೋಷಕನು ಮೊದಲು ಪ್ರಕಟಣೆ ನೀಡುತ್ತಾನೆ.ಆಗ ಪ್ರೇಕ್ಷಕರಿಗೆ ಕಾರ್ಡುಗಳನ್ನು ತೋರಿಸಲು ಸೂಚಿಸುತ್ತಾನೆ,ಭಾಗವಹಿಸುವ ಎಲ್ಲಾ ದೇಶಗಳ ಧ್ವಜಗಳನ್ನು ಪ್ರಕಟಪಡಿಸುತ್ತಾನೆ.

ಟೊನಿ ಅಂಡ್ ಟೀನಾಸ್ ವೆಡ್ಡಿಂಗ್ ನಲ್ಲಿ ಪ್ರೇಕ್ಷಕರು ಪಾಲ್ಗೊಂಡ ಬಗೆಯು ಉತ್ತಮ ಉದಾಹರಣೆಯ ರೂಪವಾಗಿದೆ.ಇಲ್ಲಿ ಏಕಕಾಲದಲ್ಲಿ ಎಲ್ಲಾ ಪ್ರೇಕ್ಷಕರನ್ನು ಈ ಸಂದರ್ಭದಲ್ಲಿ ಭಾಗಿಯಾಗುವಂತೆ ಮಾಡಲಾಗುತ್ತದೆ.ಮದುವೆಯ ಸನ್ನಿವೇಶದ ಕಥಾನಿರೂಪಣೆಯ ಶೈಲಿಯಲ್ಲಿ ಎಲ್ಲಾ ಪ್ರೇಕ್ಷಕರು ಪಾಲ್ಗೊಂಡು "ಅತಿಥಿಗಳು"ಎಂದೆನಿಸಿಕೊಳ್ಳುತ್ತಾರೆ.

ಅದರಲ್ಲೂ ಈ ಬ್ರಿಟಿಶ್ ಪ್ಯಾನಲ್ ಗೇಮ್ QI ನಲ್ಲಿ ಪ್ರೇಕ್ಷಕರು ಆಗಾಗ ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಯತ್ನಿಸುವಂತೆ ಅನುಮತಿ ನೀಡಲಾಗುತ್ತದೆ. ಸದ್ಯ ಪ್ರೇಕ್ಷಕರು ಒಂದು ಪ್ರದರ್ಶನದಲ್ಲಿ ಗೆದ್ದಿದ್ದಾರೆ,ಇನ್ನೊಂದರಲ್ಲಿ ಕೊನೆಯ ಸಾಲಿಗೆ ಬಂದಿದ್ದಾರೆ.

ಜಾದೂ ಪ್ರದರ್ಶನಗಳು ಸಾಮಾನ್ಯವಾಗಿ ಕೆಲವು ಪ್ರೇಕ್ಷಕರ ಭಾಗವಹಿಸುವಿಕೆಯನ್ನು ನಿರೀಕ್ಷಿಸುತ್ತವೆ. ಮನಶ್ಯಾಸ್ತ್ರೀಯ ಯಕ್ಷಿಣಿಗಾರ ಡೆರ್ರೆನ್ ಬ್ರೌನ್ ಯಾವಾಗಲೂ ತಮ್ಮ ಜಾದೂ ಪ್ರದರ್ಶಗಳಿಗಾಗಿ ಹೆಚ್ಚಾಗಿ ಪ್ರೇಕ್ಷಕರ ಭಾಗವಹಿಸುವಿಕೆಯನ್ನೇ ಅವಲಂಬಿಸುತ್ತಾರೆ.

ಪ್ರೇಕ್ಷಕರುಗಳ ವಿಧಗಳು[ಬದಲಾಯಿಸಿ]

ವಿಶಿಷ್ಟ(ನೈಜ) ಪ್ರೇಕ್ಷಕರುಗಳು[ಬದಲಾಯಿಸಿ]

ಇನ್ನು ಸಾಮಾನ್ಯವಾಗಿ ವಾಗ್ಮಿಕಲೆಗಳಲ್ಲಿ ವಿಶಿಷ್ಟ ಪ್ರೇಕ್ಷಕರು ಅಲ್ಲಿನ ವಿಶಿಷ್ಟ ಸಂದರ್ಭಗಳು ಮತ್ತು ಪರಿಸ್ಥಿತಿಗಳ ಮೇಲೆ ಅವಲಂಬಿಸುತ್ತಾರೆ.ಹೀಗೆ ಅವರು ವೈಯಕ್ತಿಕವಾಗಿ ಪ್ರೇಕ್ಷಕ ವರ್ಗದಿಂದ ಬರುವ ಮೂಲಕ ಪ್ರೇಕ್ಷಕರೆನಿಸಿಕೊಳ್ಳುತ್ತಾರೆ. ಈ ವಿಶಿಷ್ಟ ಪ್ರೇಕ್ಷಕರುಗಳು ಮನವೊಲಿಕೆಯಿಂದ ಬಂದಿರುತ್ತಾರೆ,ಅಲ್ಲದೇ ಆ ಸಂದರ್ಭದಲ್ಲಿ ಭಾಷಣಕಾರನ ತತ್ವದೊಂದಿಗೆ ಮಿಳಿತಗೊಳ್ಳುತ್ತಾರೆ. ಆಯಾ ಗಾತ್ರ ಮತ್ತು ಸಂಯೋಜನೆಗೆ ಅನುಗುಣವಾಗಿ ಈ ವಿಶಿಷ್ಟ ಪ್ರೇಕ್ಷಕರುಗಳು ಒಂದೆಡೆ ಸೇರಿ "ಸಂಯೋಜಿತ ಸಂಯುಕ್ತ" ವಿಭಿನ್ನ ಪ್ರೇಕ್ಷಕ ವರ್ಗವಾಗಿ ಗುಂಪುಗಳಲ್ಲಿ ಗುರುತಿಸಿಕೊಳ್ಳುತ್ತಾರೆ.

ಸಾಕ್ಷಾತ್ ಪ್ರೇಕ್ಷಕರುಗಳು[ಬದಲಾಯಿಸಿ]

ಪ್ರತ್ಯಕ್ಷ ಅಥವಾ ಸಾಕ್ಷಾತ್ ಪ್ರೇಕ್ಷಕರುಗಳು ಎಂದರೆ ವಿಶಿಷ್ಟ ಪ್ರೇಕ್ಷಕರು ಸದಸ್ಯ ಗುಂಪುಗಳಾಗಿ ಭಾಷಣಕಾರನೊಂದಿಗೆ ಮುಖಾ-ಮುಖಿ ನೇರ ಸಂಭಾಷಣೆಗೆ ತೊಡಗುತ್ತಾರೆ.ವಾಗ್ಮಿಕಾರನ ಪಠ್ಯ ಅಥವಾ ಭಾಷಣಕ್ಕೆ ಪ್ರತ್ಯಕ್ಷ ಸಾಕ್ಷಿಗಳಾಗುತ್ತಾರೆ. ಈ ಪ್ರಕಾರದ ಪ್ರೇಕ್ಷಕರು ನೇರವಾಗಿ ಶ್ರೋತೃಗಳಾಗಿ,ಅದರೊಳಗೆ ಒಂದಾಗಿ ಆ ವಾಗ್ಮಿಯತೆಯಲ್ಲಿ ತತ್ ಕ್ಷಣದಲ್ಲಿಯೇ ಯಾರದೇ ಮಧ್ಯಪ್ರದೇಶವಿಲ್ಲದೇ ಭಾಗಿಗಳಾಗುತ್ತಾರೆ. ಹೀಗೆ ತತ್ ಕ್ಷಣದಲ್ಲಿನ ಪ್ರೇಕ್ಷಕರ ಪ್ರತಿಕ್ರಿಯೆ ಮತ್ತು ಸ್ಪಂದನೆಯಿಂದಾಗಿ ಭಾಷಣಕಾರರು ವೈಯಕ್ತಿಕ ಸಂದರ್ಶನಗಳು,ಮೆಚ್ಚುಗೆ ಮತ್ತು ಶಾಬ್ದಿಕ ವಿಮರ್ಶೆಗಳು ಭಾಷಣದ ಮಧ್ಯೆ ಅಥವಾ ಅದರ ನಂತರ ಪಡೆಯಬಹುದಾಗಿದೆ.

ಮಾಧ್ಯಮವಾಗಿರುವ ಪ್ರೇಕ್ಷಕರುಗಳು[ಬದಲಾಯಿಸಿ]

ಅದಕ್ಕೆ ತದ್ವಿರುದ್ದವಾಗಿ ತತ್ ಕ್ಷಣದ ಪ್ರೇಕ್ಷಕರುಗಳು,ಮಧ್ಯವರ್ತಿ ಪ್ರೇಕ್ಷಕರುಗಳು ಎಂದರೆ ವ್ಯಕ್ತಿಗಳ ಗುಂಪೊಂದು ಸಂಯೋಜನೆಗೊಳ್ಳುತ್ತದೆ.ಹೀಗೆ ಅದು ಭಾಷಣಕಾರನ ಪಠ್ಯವನ್ನು ವಿವಿಧ ಕಾಲ ಅಥವಾ ಸ್ಥಳ ಇತ್ಯಾದಿಗಳ ಮೇಲೆ ವಿಶ್ಲೇಷಿಸುತ್ತದೆ. ಇಂತಹ ಪಠ್ಯಗಳು ಅಥವಾ ಭಾಷಣಗಳನ್ನುಟೆಲಿವಿಜನ್ ಮೂಲಕ,ರೇಡಿಯೊ ಮತ್ತು ಇಂಟರ್ ನೆಟ್ ಮುಖಾಂತರ ಬರುವುವನ್ನು ಮಧ್ಯವರ್ತಿ ಪ್ರೇಕ್ಷಕರೆಂದು ಹೇಳಬಹುದು.ಯಾಕೆಂದರೆ ಈ ಮಾಧ್ಯಮಗಳು ವಾಗ್ಮಿಕಲೆ ಮತ್ತು ಪ್ರೇಕ್ಷಕರನ್ನು ಪ್ರತ್ಯೇಕಿಸುತ್ತವೆ. ಇಂತಹ ಮಧ್ಯವರ್ತಿ ಪ್ರೇಕ್ಷಕರ ಮೂಲಕ ಬರುವ ವಿಮರ್ಶೆಗಳ ಗಾತ್ರ ಮತ್ತು ಸಂಯೋಜನೆಗಳನ್ನು ಆ ಕೂಡಲೇ ಅರ್ಥ ಮಾಡಿಕೊಳ್ಳುವುದು ಕಷ್ಟಸಾಧ್ಯ ಕಾರ್ಯವಾಗಿದೆ.ಯಾಕೆಂದರೆ ಟೆಲೆವಿಜನ್,ರೇಡಿಯೊ ಮತ್ತು ಇಂಟರ್ ನೆಟ್ ಮಾಧ್ಯಮಗಳು ಆಗಾಗ ಪ್ರೇಕ್ಷಕರನ್ನು ಕಾಲಕಾಲಕ್ಕೆ ಸ್ಥಳಾಂತರಗೊಳಿಸುವ ಸಾಧ್ಯತೆ ಇರುತ್ತದೆ.ಈ ವಾಗ್ಮಿಕಲೆಯ ಪಠ್ಯ ಅಥವಾ ಭಾಷಣದ ಮೂಲವನ್ನು ಆಯಾ ಸಂದರ್ಭಕ್ಕೆ ತಕ್ಕಂತೆ ಬದಲಾವಣೆಗೆ ಒಳಪಡಿಸುವ ಸಾಧ್ಯತೆಗಳೇ ಹೆಚ್ಚು. ಮಾಧ್ಯಮಗಳ ಮಧ್ಯವರ್ತಿಗಳ ಮೂಲಕ ಪ್ರತಿಕ್ರಿಯಿಸುವ ಮತ್ತು ಸ್ಪಂದಿಸುವ ಪ್ರೇಕ್ಷಕರ ಅಭಿಪ್ರಾಯಗಳು ಮತಗಣನೆ ಮತ್ತು ದರ ನಿಗದಿಯನ್ನು ಅವಲಂಬಿಸಿವೆ.ಅದೇ ರೀತಿಯಾಗಿ ವಿಮರ್ಶೆಗಳು ಮತ್ತು ಟೀಕಾ ವೇದಿಕೆಗಳು ವೆಬ್ ಸೈಟ್ ಮೇಲೆ ತಮ್ಮ ಪ್ರಾತಿನಿಧ್ಯ ಸ್ಥಾಪಿಸಿದವು.

ಸೈದ್ಧಾಂತಿಕ (ಕಲ್ಪನಾಲೋಕದ) ಪ್ರೇಕ್ಷಕರುಗಳು[ಬದಲಾಯಿಸಿ]

ಈ ಸೈದ್ಧಾಂತಿಕ ಪ್ರೇಕ್ಷಕರುಗಳನ್ನು ಭಾಷಣಕಾರನ ಸಂಯೋಜನೆ ಸಂದರ್ಭದಲ್ಲಿ ಅವರ ಕಾಲ್ಪನಿಕ ಪಠ್ಯದ ಬಗ್ಗೆ ನೆರವಾಗುವರು ಎಂದು ಹೇಳಲಾಗುತ್ತದೆ;ಅಥವಾ ಅವರಿಗೆ ನೆರವಾಗುವ ನಿಟ್ಟಿನಲ್ಲಿ ಓರ್ವ ಟೀಕಾಕಾರನಾಗಿ ವಿಷಯ ಅರ್ಥೈಸುತ್ತಾರೆ.ಅಲ್ಲದೇ ಭಾಷಣಕಾರನ ಸಿದ್ಧಾಂತಗಳ ಮೇಲೆ ವಾದ ಮಂಡಿಸುವ ಸಾಮರ್ಥ್ಯ ಹೊಂದಿರುತ್ತಾರೆ.

ಸ್ವಯಂ ಪ್ರೇಕ್ಷಕರಾಗಿ (ಸ್ವಯಂ-ವಿವೇಚನೆಯುಳ್ಳವರಾಗಿ)[ಬದಲಾಯಿಸಿ]

ಇಲ್ಲಿ ಈ ಬೋಧಕ ಭಾಷಣಕಾರನು ಗಹನವಾದ ವಿಷಯ ಪರಿಗಣಿಸಿ,ಯಾವಾಗ ಪ್ರಶ್ನೆಗಳನ್ನು ಕೇಳುತ್ತಾನೋ, ಅದೇ ವೇಳೆಗೆ ಸಾರಾಂಶದ ವಿಚಾರಗಳನ್ನು ಪ್ರೇಕ್ಷಕರಿಗೆ ಮನದಟ್ಟು ಮಾಡುತ್ತಾನೆ.ಇದನ್ನೇ ನಾವು ಸ್ವಯಂ ಅಥವಾ ಸ್ವಯಂ-ವಿವೇಚನಾಶೀಲ ಪ್ರೇಕ್ಷಕರೆಂದೂ ಆಗ ಅವರೇ ಉದ್ದೇಶಿತ ವಿಷಯ ಮಂಡಿಸುತ್ತಾರೆ. ಅಂದರೆ ಇಲ್ಲಿ ಭಾಷಣಕಾರರು ತಮ್ಮ ನಿಗದಿತ ಪ್ರೇಕ್ಷಕರ ಉದ್ದೇಶಕ್ಕೆ ಹೊಂದುವ ಅಭಿಪ್ರಾಯಗಳನ್ನು ಬಿತ್ತರಿಸುತ್ತಾರೆ. ವಿದ್ವಾಂಸರಾದ ಚೇಮ್ ಪೆರೆಲ್ಮನ್ ಮತ್ತು ಎಲ್ ಒಲ್ಬ್ರೇಕ್ಟ್ಸ್ ಟಿಟಿಕಾ ಅವರು ತಮ್ಮ ಪುಸ್ತಕ ದಿ ನಿವ್ ರಿಟೊರಿಕ: ಎ ಟ್ರೀಟೈಜ್ ಆನ್ ಆರ್ಗ್ಯುಮೆಂಟೇಶನ್ } [೧]ನಲ್ಲಿ ಕಲ್ಪನಾ ಲೋಕವು ವಾಗ್ಮಿಯು ತನ್ನ ಭಾವಗಳ ಬಗ್ಗೆ ತನ್ನದೇ "ಆದ ಮೌಲ್ಯಗಳನ್ನು ವಾದಗಳ ಮೂಲಕ ಪ್ರಚುರಪಡಿಸುತ್ತಾನೆ.ಬೋಧಕನಿಗೆ ತನ್ನದೇ ಆದ ವಾದ ಸರಣಿ ಇರುತ್ತದೆ.ಅಂತಹವುಗಳು ಯಾರೇ ಪರೀಕ್ಷೆಗೊಳಪಡಿಸಿದರೂ ತಮ್ಮ ವಿಚಾರಗಳನ್ನು ಖಚಿತಪಡಿಸುತ್ತವೆ." ಈ ಸ್ವಯಂ ಪ್ರೇಕ್ಷಕರು ಎಲ್ಲಾ ವಾಗ್ಮಿಗಳ ಕಲೆಗಳಿಗೆ ಅಂತ್ಯದ ಸೇವೆ ಮಾಡದೇ ಅಥವಾ ಆಯಾ ಸಂದರ್ಭಗಳನ್ನು ಪರಿಗಣಿಸಿ ಆ ವಾಗ್ಮಿತ್ವದ ಬಗ್ಗೆ ಅದೇ ಅಭಿಪ್ರಾಯಗಳನ್ನು ಹೊಂದಿರುತ್ತಾರೆ.ಆದರೆ ಇಲ್ಲಿ ಅವರು ಸ್ವಯಂ-ಸಹಾಯಕರಂತೆ ವರ್ತಿಸದೇ ಆ ಪರಿಸ್ಥಿತಿಯ ಒಂದು ವಾಹಕವಾಗಿರುತ್ತಾರೆ.ಅದಲ್ಲದೇ ಈ ಪ್ರಕಾರದ ಪ್ರೇಕ್ಷಕ ವರ್ಗವು ಸಾಕಷ್ಟು ಕಾರ್ಯಚಟುವಟಿಕೆಯಲ್ಲಿ ನಿರತವಾಗಿರುತ್ತದೆ.ಭಾಷಣದ ಸಾರದ ಲಭ್ಯತೆ ಅನುಸರಿಸಿ ಇಲ್ಲಿ ಇಂತಹ ವರ್ಗ ತನ್ನ ಸಲಹೆ ಸೂಚನೆ ನೀಡುತ್ತದೆ.ಇಲ್ಲಿ ಹುಡುಕಾಟದ ಒಂದು ಅವಕಾಶವೂ ತೆರೆದುಕೊಂಡಿರುತ್ತದೆ.ಭಾಷಣಕಾರರ ಅರ್ಥಗಳ ಬೆನ್ನಟ್ಟಲು ಪ್ರೇಕ್ಷಕರಿಗೆ ಒಂದು ರೀತಿಯ ರಿಯಾಯತಿ ಇರುತ್ತದೆ.

ಸರ್ವವ್ಯಾಪಿ ಪ್ರೇಕ್ಷಕರು[ಬದಲಾಯಿಸಿ]

ಈ ಸರ್ವವ್ಯಾಪಿ ಮತ್ತು ಸರ್ವತ್ರ ಪ್ರೇಕ್ಷಕರದು ಒಂದು ಕಾಲ್ಪನಿಕ ವರ್ಗವಾಗಿದೆ.ಇವರು ವಾಗ್ಮಿಕಾರರಿಗಾಗಿಯೇ ಒಂದು ನೈತಿಕ ಮತ್ತು ವಾದ ಮಂಡಿಸುವ ಪರೀಕ್ಷಕರಾಗಿರುತ್ತಾರೆ. ಈ ಸಂದರ್ಭವು ಭಾಷಣಕಾರನಿಗೆ ಸಂಯುಕ್ತವಾಗಿರುವ ಕಾಲ್ಪನಿಕ ವ್ಯಕ್ತಿತ್ವದ ಪ್ರೇಕ್ಷಕ ಗುಂಪಾಗಿರುತ್ತದೆ.ಈ ವರ್ಗವು ವಿಭಿನ್ನ ಹಿನ್ನಲೆಗಳಿಂದ ಬಂದಿರುತ್ತದೆ.ತಾವು ಮಾಡುವ ಭಾಷಣದ ವ್ಯತ್ಯಾಸಗಳ ಅರಿವು ಅಥವಾ ಈ ಭಾಷಣದ ಅಂಶವು ಪಠ್ಯಕ್ಕೆ ಅನುಗುಣವಾಗಿದೆಯೇ ಇಲ್ಲವೇ ಭಾಷಣಕ್ಕೆ ಪೂರಕವೇ ಎಂದು ಅಂದಾಜಿಸಬಹುದಾಗಿದೆ.ಅದೇ ಪ್ರೇಕ್ಷಕ ವರ್ಗದಲ್ಲಿರುವ ವ್ಯಕ್ತಿಗತ ಪ್ರೇಕ್ಷಕರಿಗೆ ಅರ್ಥವಾಗುತ್ತದೆಯೇ ಎಂದು ಕೂಲಂಕಷವಾಗಿ ನೋಡಬೇಕಾಗುತ್ತದೆ. ವಿದ್ವಾಂಸರಾದ ಪೆರ್ಲೆಮನ್ ಮತ್ತು ಒಲ್ಬ್ರೆಕ್ಟ್ಸ್-ಟಿಟೆಕಾ ಅವರ ಪ್ರಕಾರ ಸಾರ್ವತ್ರಿಕ ಪ್ರೇಕ್ಷಕರಿಗೆ ನೀಡಿದ ಭಾಷಣವು "ಓದುಗನಿಗೆ ಮಂಡಿಸಿದಂತೆ ಅದು ಅಲ್ಲಿನ ಗುಣಲಕ್ಷಣಗಳ ಮೇಲೆ ಅನುವರ್ತಿಸುತ್ತದೆಯೇ ಎಂಬುದನ್ನು ತಿಳಿಯಬೇಕು.ಅಲ್ಲಿ ಪ್ರಸ್ತಾಪಿಸಿದ ವಿಷಯವಸ್ತು ಸ್ವಯಂ-ಪುರಾವೆಯಂತೆ ಅಲ್ಲದೇ ಅದು ಖಚಿತ ಹಾಗು ಕಾಲಗಣನೆಗೂ ಮೀರಿದ ಮೌಲ್ಯ ಹೊಂದಿರಬೇಕಾಗುತ್ತದೆ."[೨] ಈ ಸಾರ್ವತ್ರಿಕ ಪ್ರೇಕ್ಷಕರ ಪರಿಕಲ್ಪನೆಯು ಕೇವಲ ಆದರ್ಶಪ್ರಾಯದಂತೆ ಕಾಣುತ್ತದೆ ಎಂದು ಟೀಕಿಸಲಾಗುತ್ತದೆ.ಯಾಕೆಂದರೆ ಇದು ಕೆಲವು ನಿಗದಿತ ಪ್ರೇಕ್ಷಕರಗಳನ್ನು ಆಕರ್ಷಿಸಲು ಅಷ್ಟಾಗಿ ಪರಿಣಾಮಕಾರಿಯಲ್ಲವೆಂಬ ಭಾವನೆಯೂ ಇದೆ. ಆದಾಗ್ಯೂ ಭಾಷಣಕಾರನಿಗೆ ಇದೊಂದು ನೈತಿಕ ಮಾರ್ಗದರ್ಶಿಯಾಗಿರುತ್ತದೆ.ಅದಲ್ಲದೇ ಓದುಗನಿಗೆ ಅಥವಾ ಪ್ರೇಕ್ಷಕನಿಗೆ ಇದೊಂದು ಟೀಕೆಯ ಸರಕೂ ಆಗಿದೆ.

ಆದರ್ಶಪ್ರಾಯ ಪ್ರೇಕ್ಷಕರು[ಬದಲಾಯಿಸಿ]

ಆದರ್ಶ ಪ್ರೇಕ್ಷಕರ ವರ್ಗದವರು ವಾಗ್ಮಿಯ ಕಾಲ್ಪನಿಕ ಉದ್ದೇಶಿತ ಒಂದು ಪ್ರಮಾಣಿತ ಕೇಳುಗರೆನಿಸಿದ್ದಾರೆ. ಒಂದು ಭಾಷಣದ ಪಠ್ಯವನ್ನು ಸಿದ್ದಪಡಿಸುವುದು-ಒಂದು ವಾಗ್ಮಿಯ ಉದ್ದೇಶಿತ ನಿಗದಿತ ಪ್ರೇಕ್ಷಕರ ಕಾಲ್ಪನಿಕತೆಯನ್ನು ಸೃಷ್ಟಿಸುತ್ತದೆ.ಅಥವಾ ಈ ಭಾಷಣದ ಇಲ್ಲವೆ ಪಠ್ಯದ ಪರಿಣಾಮಕಾರಿತ್ವವನ್ನು ಬಿಂಬಿಸುತ್ತದೆ. ಇಂತಹ ಪ್ರಕಾರದ ಪ್ರೇಕ್ಷಕರನ್ನು ಕಾಲ್ಪನಿಕ ಎಂದು ವಿಭಾಗಿಸಬೇಕಿಲ್ಲ,ಇವರು ಅತ್ಯಂತ ಸ್ಪಂದನಾಶೀಲ ಪ್ರೇಕ್ಷಕರಾಗಿದ್ದಾರೆ.ಆದರೆ ವಿಶಿಷ್ಟ ಭವಿಷ್ಯತ್ ನ ಪ್ರೇಕ್ಷಕರು ವಾಗ್ಮಿಯೊಂದಿಗೆ ಚರ್ಚೆಯಲ್ಲಿ ಭಾಗವಹಿಸುತ್ತಾರೆ. ಇಂತಹ ಪ್ರೇಕ್ಷಕರನ್ನು ಕಲ್ಪಿಸಿಕೊಳ್ಳುವುದನ್ನು ಆ ಅಲಂಕಾರಿಕ ಭಾಷಣ ಅನುಮತಿಸುತ್ತದೆ.ಅಲ್ಲಿರುವ ಪ್ರೇಕ್ಷಕರನ್ನು ಆ ಸಂದರ್ಭದಲ್ಲಿ ಒಳಗೊಳ್ಳುವಂತೆ ಮಾಡಲು ಇದೂ ಕೂಡ ಉತ್ತಮ ಅವಕಾಶವಾಗಿದೆ. ಈ ಆದರ್ಶದ ಪ್ರೇಕ್ಷಕನನ್ನು ಪರಿಗಣಿಸಿದ ವಾಗ್ಮಿಯು ಮಧ್ಯವರ್ತಿ ವಾಹಕಗಳ ಭವಿಷ್ಯದ ಬಗ್ಗೆ ಊಹೆ ಮಾಡಲು ಸಾಧ್ಯವಾಗುತ್ತಿತ್ತು.ಗಾತ್ರ,ಜನಸಂಖ್ಯೆಗಳು ಮತ್ತು ಪ್ರೇಕ್ಷಕರ ಆಂತರಿಕ ನಂಬುಗೆಯ ವಿಧಾನಗಳನ್ನು ಇಲ್ಲಿ ಪರಿಶೀಲಿಸಲಾಗುತ್ತದೆ.

ಪರೋಕ್ಷ ಪ್ರೇಕ್ಷಕರು[ಬದಲಾಯಿಸಿ]

ಈ ಪರೋಕ್ಷ ಪ್ರೇಕ್ಷಕರನ್ನು ಕಾಲ್ಪನಿಕ ಪ್ರೇಕ್ಷಕರೆನ್ನಲಾಗುತ್ತಿದ್ದು,ಇವರನ್ನು ಒಬ್ಬ ಲೆಕ್ಕಪರಿಶೋಧಕ ಅಥವಾ ಓದುಗ ಎಂದು ಹೇಳಲಾಗುವುದಲ್ಲದೇ ಇವರು ಪಠ್ಯದ ರಾಚನಿಕ ಸಂರಚಿತ ಪ್ರೇಕ್ಷಕರಾಗಿರುತ್ತಾರೆ.ರಹಸ್ಯ ಅಥವಾ ತೆರೆಮರೆಯ ಪ್ರೇಕ್ಷಕ ವರ್ಗಕ್ಕೆ ಇದು ಸೂಕ್ತ ವ್ಯಾಖ್ಯಾನವಾಗಿದೆ. ಈ ಪರೋಕ್ಷ ಪ್ರೇಕ್ಷಕರು ನಿಜವಾದ ಪ್ರೇಕ್ಷಕರಾಗಿರುವುದಿಲ್ಲ,ಆದರೆ ಇವರನ್ನು ನಾವು ಓದುವುದರ ಅಥವಾ ಪಠ್ಯದ ಸಾಮಾನ್ಯ ತಾರ್ಕಿಕ ವಿಶ್ಲೇಷಣೆ ಮಾಡುವವರನ್ನು ಈ ಮೂಲಕ ಗುರುತಿಸಬಹುದಾಗಿದೆ. ಸಂಪರ್ಕ-ಸಂಹನಗಳ ವಿದ್ವಾಂಸ ಎಡ್ವಿನ್ ಬ್ಲ್ಯಾಕ್ ತನ್ನ ಪ್ರಬಂಧ,ದಿ ಸೆಕೆಂಡ್ ಪರ್ಸೊನಾ ದಲ್ಲಿ ಈ ಪರೋಕ್ಷ ಪ್ರೇಕ್ಷಕರ ಪರಿಕಲ್ಪನೆಯಲ್ಲಿ ಇನ್ನೊಬ್ಬರ ವಿಚಾರಗಳನ್ನು ಎರಡು ವಿಧಗಳಲ್ಲಿ ವಿಭಜಿಸುತ್ತಾರೆ.ಇಲ್ಲಿ ಇಬ್ಬರು ವ್ಯಕ್ತಿಗಳ ಪರಸ್ಪರ ವಿಚಾರಗಳನ್ನು ಅವರು ವಿಶ್ಲೇಷಣೆಗೆ ಬಳಸುತ್ತಾರೆ.[೩] ಮೊದಲ ವ್ಯಕ್ತಿಯು ರಹಸ್ಯ ವಾಗ್ಮಿ (ಅಂದರೆ ಭಾಷಣಕಾರನ ಆಲೋಚನೆಯನ್ನು ಪ್ರೇಕ್ಷಕರು ವ್ಯಾಖ್ಯಾನಿಸಿದ್ದು)ಹಾಗು ಎರಡನೆಯ ವ್ಯಕ್ತಿಯು ರಹಸ್ಯ ಅಥವಾ ಅಡಗಿದ ಪ್ರೇಕ್ಷಕರು(ಇಲ್ಲಿ ಪ್ರೇಕ್ಷಕರ ವಿಚಾರವನ್ನು ಭಾಷಣದ ಸಂದರ್ಭದಲ್ಲಿ ವಿವರಕ್ಕಾಗಿ ಬಳಕೆ ಮಾಡುವ ವರ್ಗವಿರುತ್ತದೆ.)ಇಲ್ಲಿ ವ್ಯಕ್ತಿಗಳು ವಿಭಿನ್ನವಾಗಿದ್ದರೂ ಅವರ ವಿಚಾರಧಾರೆಗಳು ಸಾಂದರ್ಭಿಕವಾಗಿ ಉಪಯೋಗಿಸಲ್ಪಡುತ್ತವೆ. ಓರ್ವ ವಿಮರ್ಶಕ ಕೂಡ ಪಠ್ಯಕ್ಕಾಗಿ ಪ್ರೇಕ್ಷಕರಿಗೆ ಏನು ಅಗತ್ಯವಿದೆಯೆಂಬುದನ್ನು ನಿರ್ಧರಿಸುತ್ತಾನೆ;ಅಥವಾ ಏನಾಗಬೇಕು ಎಂಬುದನ್ನು ಆ ಭಾಷಣದ ಪರಿಸ್ಥಿತಿಗಳನ್ನು ಅರ್ಥೈಸಿಕೊಳ್ಳುತ್ತಾನೆ.

ಉಲ್ಲೇಖಗಳು‌‌[ಬದಲಾಯಿಸಿ]

 1. ಪೆರೆಲ್ ಮನ್, ಕೇಮ್ ಅಂಡ್ ಎಲ್. ಒಲ್ಬ್ರೆಕ್ಟ್ಸ್-ಟೈಟಿಕಾ. ದಿ ನಿವ್ ರಿಟೊರಿಕ್ : ಎ ಟ್ರೀಟೈಜ್ ಆನ್ ಆರ್ಗ್ಯುಮೆಂಟೇಶನ್. ನೊಟ್ರೆ ಡೇಮ್ : ಯುನ್ವರ್ಸಿಟಿ ಆಫ್ ನೊಟ್ರೆ ಡೇಮ್ ಪ್ರೆಸ್, ೧೯೬೧. ಮುದ್ರಣ.
 2. ಪೆರೆಲ್ ಮನ್, ಕೇಮ್ ಅಂಡ್ ಎಲ್. ಒಲ್ಬ್ರೆಕ್ಟ್ಸ್-ಟೈಟಿಕಾ. ದಿ ನಿವ್ ರಿಟೊರಿಕ್ : ಎ ಟ್ರೀಟೈಜ್ ಆನ್ ಆರ್ಗ್ಯುಮೆಂಟೇಶನ್. ನೊಟ್ರೆ ಡೇಮ್ : ಯುನ್ವರ್ಸಿಟಿ ಆಫ್ ನೊಟ್ರೆ ಡೇಮ್ ಪ್ರೆಸ್, ೧೯೬೧. ಮುದ್ರಣ.
 3. ಬ್ಲ್ಯಾಕ್, ಎಡ್ವಿನ್. "ದಿ ಸೆಕೆಂಡ್ ಪರ್ಸೊನಾ." ಕ್ವಾರ್ಟರ್ಲಿ ಜರ್ನಲ್ ಆಫ್ ಸ್ಪೀಚ್ ೫೬.೨ (೧೯೭೦): ೧೦೯-೧೧೯. ಮುದ್ರಣ.