ವಿಷಯಕ್ಕೆ ಹೋಗು

ವೀರಪ್ಪ ಮೊಯ್ಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಎಂ. ವೀರಪ್ಪ ಮೊಯಿಲಿ ಇಂದ ಪುನರ್ನಿರ್ದೇಶಿತ)
ವೀರಪ್ಪ ಮೊಯ್ಲಿ

ಹಾಲಿ
ಅಧಿಕಾರ ಸ್ವೀಕಾರ 
ಜುಲೈ ೧೩, ೨೦೧೧
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್

ಅಧಿಕಾರ ಅವಧಿ
28 ಮೇ 2009 – ಜುಲೈ 12, 2011
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್
ಪೂರ್ವಾಧಿಕಾರಿ ಹಂಸರಾಜ್ ಭಾರದ್ವಾಜ್
ಉತ್ತರಾಧಿಕಾರಿ ಸಲ್ಮಾನ್ ಖುರ್ಷಿದ್

ಅಧಿಕಾರ ಅವಧಿ
19 ನವೆಂಬರ್ 1992 – 11 ಡಿಸೆಂಬರ್ 1994
ರಾಜ್ಯಪಾಲ ಖುರ್ಶೆದ್ ಆಲಂ ಖಾನ್
ಪೂರ್ವಾಧಿಕಾರಿ ಎಸ್. ಬಂಗಾರಪ್ಪ
ಉತ್ತರಾಧಿಕಾರಿ ದೇವೇಗೌಡ
ವೈಯಕ್ತಿಕ ಮಾಹಿತಿ
ಜನನ (1940-01-12) ೧೨ ಜನವರಿ ೧೯೪೦ (ವಯಸ್ಸು ೮೪)
ಮೂಡಬಿದಿರೆ, ಬ್ರಿಟಿಷ್ ಇಂಡಿಯಾ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಮಾಲತಿ ಮೊಯಿಲಿ
ಮಕ್ಕಳು 4
ಅಭ್ಯಸಿಸಿದ ವಿದ್ಯಾಪೀಠ ಯೂನಿವರ್ಸಿಟಿ ಕಾಲೇಜು, ಮಂಗಳೂರು
ಬೆಂಗಳೂರು ವಿಶ್ವವಿದ್ಯಾಲಯ
ಜಾಲತಾಣ Official Website
ವೀರಪ್ಪ ಮೊಯ್ಲಿ

ವೀರಪ್ಪ ಮೊಯ್ಲಿ ಕರ್ನಾಟಕ ರಾಜ್ಯದ ೧೩ ನೇ ಮುಖ್ಯಮಂತ್ರಿ ಯಾಗಿ ಸೇವೆ ಸಲ್ಲಿಸಿದ್ದಾರೆ. ವೀರಪ್ಪ ಮೊಯಿಲಿಯವರು ೧೯೪೦ ಜನೆವರಿ ೧೨ರಂದು ಜನಿಸಿದರು. ಇವರ ತಾಯಿ ಪೂವಮ್ಮ ; ತಂದೆ ತಮ್ಮಯ್ಯ ಮೊಯಿಲಿ.

ಶಿಕ್ಷಣ

[ಬದಲಾಯಿಸಿ]

ಮೊಯಿಲಿಯವರು ತಮ್ಮ ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣಗಳನ್ನು ಮೂಡಬಿದಿರಿಯಲ್ಲಿ ಪೂರೈಸಿ, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಅಧ್ಯಯನ ಪೂರೈಸಿ, ಪದವಿ ಪಡೆದರು. ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆಯಲ್ಲಿ, ತನ್ನಂತರ ಭಾರತೀಯ ಜೀವವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದಂತೆಯೆ , ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್.ಪದವಿ ಪಡೆದರು.

ವೃತ್ತಿ ಜೀವನ

[ಬದಲಾಯಿಸಿ]

ಕಾರ್ಕಳ ಹಾಗು ಮಂಗಳೂರುಗಳಲ್ಲಿ ವೃತ್ತಿಯನ್ನಾರಂಭಿಸಿದ ಮೊಯಿಲಿಯವರು , ಬೆಂಗಳೂರಿನಲ್ಲಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿ ವೃತ್ತಿಯನ್ನು ಮುಂದುವರಿಸಿದರು.

ರಾಜಕಾರಣ

[ಬದಲಾಯಿಸಿ]

೧೯೬೮ರಲ್ಲಿ ಮೊಯಿಲಿಯವರು ಕಾಂಗ್ರೆಸ್ ಪಕ್ಷದ ಸದಸ್ಯರಾದರು. ೧೯೬೯ರಲ್ಲಿ ಕಿಸಾನ ಸಭಾ ಸ್ಥಾಪಿಸಿದರು.
೧೯೭೨ರಿಂದ ೧೯೯೯ರವರೆಗೆ ಮೊಯಿಲಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದರು.ಮಂಗಳೂರು ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಸೋಲು ಅನುಭವಿಸಿ ಕೊನೆಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಆರಿಸಿ ಬಂದರು.
೧೯೭೪ರಿಂದ ೧೯೭೭ರವರೆಗೆ ಮೊಯಿಲಿಯವರು ಸಣ್ಣ ಕೈಗಾರಿಕೆ ಖಾತೆಯ ಮಂತ್ರಿಯಾಗಿದ್ದರು.

೧೯೮೦ರಿಂದ ೧೯೮೨ರವರೆಗೆ ಹಣಕಾಸು ಮತ್ತು ಯೋಜನಾ ಖಾತೆಯ ಮಂತ್ರಿಯಾಗಿದ್ದರು.
೧೯೮೩ರಿಂದ ೧೯೮೫ರವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು.

ಸಿ ಭೈರೇಗೌಡರನ್ನು ೨ ಲಕ್ಷ ರೂಪಾಯಿ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ಸೆಳೆಯಲು ಮೊಯಿಲಿ ಆಮಿಷ ಒಡ್ಡಿದರು ಎಂಬ ಹಗರಣ ೧೯೮೩ರಲ್ಲಿ ದೊಡ್ಡ ಸುದ್ದಿಯಾಯಿತು. ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಸಿ. ಎಂ. ಸ್ಟೀಫನ್ ರಾಮಕೃಷ್ಣ ಹೆಗಡೆ ಸರ್ಕಾರವನ್ನು ಉರುಳಿಸುವುದಾಗಿ ಘೋಷಿಸಿದ್ದ ವೇಳೆ, ಈ ಹಗರಣ ಬಂದುದು, ಮೊಯಿಲಿಯವರ ರಾಜಕೀಯ ಬದುಕಿಗೆ ಆಘಾತ ನೀಡಿತ್ತು. ನ್ಯಾ. ಆರ್. ಜಿ. ದೇಸಾಯಿ ನೇತೃತ್ವದ ವಿಚಾರಣಾ ಆಯೋಗ ಮೊಯಿಲಿಯವರು ನಿರ್ದೋಷಿ ಎಂದು ವರದಿ ಸಲ್ಲಿಸಿತು. []
[] [] ೧೯೮೯ರಿಂದ ೧೯೯೨ರ ವರೆಗೆ ವಿವಿಧ ಇಲಾಖೆಗಳ ಸಚಿವರಾಗಿದ್ದ ಮೊಯಿಲಿ,
೧೯೯೨ರಿಂದ ೧೯೯೪ರವರೆಗೆ ಕರ್ನಾಟಕದ ೧೩ನೆಯ ಮುಖ್ಯ ಮಂತ್ರಿಗಳಾಗಿ ಸೇವೆ ಸಲ್ಲಿಸಿದರು.

ಸಾಹಿತ್ಯ

[ಬದಲಾಯಿಸಿ]

ವೀರಪ್ಪ ಮೊಯಿಲಿಯವರು ಸಾಹಿತಿಗಳೂ ಆಗಿದ್ದಾರೆ. ಅವರ ಹೆಂಡತಿ ಮಾಲತಿ ಮೊಯಿಲಿ ಸಹ ಲೇಖಕಿಯಾಗಿದ್ದಾರೆ. ಮೊಯಿಲಿಯವರ ಕೃತಿಗಳು ಇಂತಿವೆ:

ಕಾದಂಬರಿ

[ಬದಲಾಯಿಸಿ]
  • ಸುಳಿಗಾಳಿ
  • ಸಾಗರದೀಪ
  • ಕೊಟ್ಟ
  • ತೆಂಬರೆ

ನಾಟಕಗಳು

[ಬದಲಾಯಿಸಿ]
  • ಮಿಲನ
  • ಪ್ರೇಮವೆಂದರೆ
  • ಪರಾಜಿತ
  • ಮೂರು ನಾಟಕಗಳು

ಕವನ ಸಂಕಲನ

[ಬದಲಾಯಿಸಿ]
  • ಹಾಲು ಜೇನು
  • ಮತ್ತೆ ನಡೆಯಲಿ ಸಮರ
  • ಯಕ್ಷಪ್ರಶ್ನೆ
  • ಜೊತೆಯಾಗಿ ನಡೆಯೋಣ ( ಮಾಲತಿ ಮೊಯಿಲಿಯವರ ಜೊತೆಯಲ್ಲಿ)

ಮಹಾಕಾವ್ಯ

[ಬದಲಾಯಿಸಿ]
  • ಶ್ರೀರಾಮಾಯಣ ಮಹಾನ್ವೇಷಣಂ
  • ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ

ಪುರಸ್ಕಾರ

[ಬದಲಾಯಿಸಿ]
  • ೨೦೦೦ನೆಯ ಸಾಲಿನಲ್ಲಿ ಮೊಯಿಲಿಯವರಿಗೆ ಅಲ್-ಅಮೀನ್ ಸದ್ಭಾವನಾ ಪ್ರಶಸ್ತಿ ಲಭಿಸಿತು.
  • ೨೦೦೧ನೆಯ ಸಾಲಿನಲ್ಲಿ ಹಿಂದುಳಿದ ಹಾಗು ಅಲ್ಪಸಂಖ್ಯಾತ ವರ್ಗದವರ ಸುಧಾರಣೆಗಾಗಿ ಕೊಡಮಾಡುವ ದೇವರಾಜ ಅರಸ ಪ್ರಶಸ್ತಿ ದೊರೆಯಿತು.
  • ೨೦೦೧ಆರ್ಯಭಟ ಪುರಸ್ಕಾರ ದೊರೆತಿದೆ.
  • ೨೦೦೨ರಲ್ಲಿ ಗೊರೂರು ಪ್ರತಿಷ್ಠಾನದ ಸಮಗ್ರ ಸಾಹಿತ್ಯ ಪುರಸ್ಕಾರ ಲಭಿಸಿತು.
  • ೨೦೧೪ - ಸರಸ್ವತಿ ಸನ್ಮಾನ[] []
  • ೨೦೨೦ - ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ - ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯ ಮಹಾಕಾವ್ಯಕ್ಕೆ.[]

ಉಲ್ಲೇಖಗಳು

[ಬದಲಾಯಿಸಿ]
  1. http://indiatoday.intoday.in/story/independent-mla-accuses-veerappa-moily-of-giving-him-rs-2-lakh-to-defect-to-congressi/1/372241.html
  2. http://indiatoday.intoday.in/story/independent-mla-accuses-veerappa-moily-of-giving-him-rs-2-lakh-to-defect-to-congressi/1/372241.html
  3. http://www.thehindu.com/todays-paper/tp-national/tp-karnataka/price-of-an-mla-went-up-1250-times-in-26-years/article844148.ece
  4. http://www.dnaindia.com/india/report-veerappa-moily-gets-saraswati-samman-for-his-kannada-poem-ramayana-mahaveshanam-2067290
  5. ಒನ್ ಇಂಡಿಯ (ಕನ್ನಡ) March 10, 2015 'ವೀರಪ್ಪ ಮೊಯ್ಲಿ ಅವರಿಗೆ ಸರಸ್ವತಿ ಸಮ್ಮಾನ್ ಪುರಸ್ಕಾರ'
  6. {{cite news|url=https://www.prajavani.net/amp/karnataka-news/veerappa-moily-and-arundhathi-subramania-among-others-to-receive-sahitya-akademi-award-2020-812698.html%7Ctitle=ವೀರಪ್ಪ ಮೊಯಿಲಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ|trans-title=Sahitya akademi award for Veerappa Moily|language=Kannada|work=Prajavani|date=12 March 2021}