ಪ್ರೇಂ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪ್ರೇಮ್



ಪ್ರೇಮ್ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲೊಬ್ಬರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕರಿಯ ಚಿತ್ರದ ಮೂಲಕ ನಿರ್ದೇಶನ ಪ್ರಾರಂಭಿಸಿದ ಪ್ರೇಮ್, ನಂತರ ಎಕ್ಸ್‍ಕ್ಯೂಸ್ ಮಿ ಮತ್ತು ಶಿವರಾಜ್ ಕುಮಾರ್ ಜೊತೆಜೋಗಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಮೂರೂ ಚಿತ್ರಗಳು ಶತದಿನೋತ್ಸವದ ಯಶಸ್ಸನ್ನು ಕಂಡಿರುವುದು ಗಮನಾರ್ಹ. ಇವರ ನಿರ್ದೇಶನದ ನಾಲ್ಕನೆ ಚಿತ್ರ 'ಪ್ರೀತಿ ಏಕೆ ಭೂಮಿ ಮೇಲಿದೆ?'. ಈ ಚಿತ್ರದಲ್ಲಿ ಪ್ರೇಮ್ ನಾಯಕನಟನಾಗಿ ನಟಿಸಿದ್ದಾರೆ. ನಿರ್ದೇಶನದ ಐದನೆ ಚಿತ್ರ ಪುನೀತ್ ರಾಜ್ ಕುಮಾರ್ ಜೊತೆ ರಾಜ್ ದಿ ಶೋ ಮ್ಯಾನ್. ನಿರ್ದೇಶನದ ಆರನೆ ಚಿತ್ರ ಶಿವರಾಜ್ ಕುಮಾರ್ ಜೊತೆ ಜೋಗಯ್ಯ ಚಿತ್ರದಲ್ಲಿ ಪತ್ನಿ ರಕ್ಷಿತಾ ನಿರ್ಮಾಪಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಜೋಗಿ ಚಿತ್ರಕ್ಕೆ ಗೀತರಚನೆ ಮಾಡುವ ಮೂಲಕ, ಪ್ರೇಮ್ ಚಿತ್ರಸಾಹಿತಿಯಾಗಿಯೂ ಕೆಲಸ ಮಾಡಿದ್ದಾರೆ. ಇದೇ ಚಿತ್ರದಲ್ಲಿನ ಹೊಡಿ ಮಗ ಹೊಡಿ ಮಗ ಮತ್ತು ಬೇಡುವನು ವರವನ್ನು ಹಾಡುಗಳಿಗೆ ಹಿನ್ನೆಲೆಗಾಯನ ಮಾಡಿದ್ದಾರೆ.


ಪರಿವಿಡಿ

[ಬದಲಾಯಿಸಿ] ಪ್ರೇಂ ನಿರ್ದೇಶನದ ಚಿತ್ರಗಳು

[ಬದಲಾಯಿಸಿ] ಪ್ರೇಮ್ ಹಿನ್ನೆಲೆಗಾಯನ ಮಾಡಿರುವ ಹಾಡುಗಳು

ವರ್ಷ ಚಿತ್ರ ಹಾಡು
೨೦೦೩ ಎಕ್ಸ್ ಕ್ಯೂಸ್ ಮಿ ಬ್ರಹ್ಮ ವಿಷ್ಣು ಶಿವ
೨೦೦೫ ಜೋಗಿ ಹೊಡಿ ಮಗ ಹೊಡಿ ಮಗ
ಬೇಡುವನು ವರವನ್ನು

[ಬದಲಾಯಿಸಿ] ಪ್ರೇಮ್ ಅಭಿನಯದ ಚಿತ್ರಗಳು

[ಬದಲಾಯಿಸಿ] ಪ್ರೇಮ್ ಗೀತಸಾಹಿತ್ಯದಲ್ಲಿನ ಚಿತ್ರಗಳು

"http://kn.wikipedia.org/w/index.php?title=ಪ್ರೇಂ&oldid=189891" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ