ನಾಗತಿಹಳ್ಳಿ ಚಂದ್ರಶೇಖರ್
| ನಾಗತಿಹಳ್ಳಿ ಚಂದ್ರಶೇಖರ್. | |
|---|---|
| ಜನನ | ೧೯೫೮ ಆಗಸ್ಟ್ ೧೫ ನಾಗತಿಹಳ್ಳಿ, ಮಂಡ್ಯ ಜಿಲ್ಲೆ, ಕರ್ನಾಟಕ |
| ವೃತ್ತಿ | ಸಿನಿಮಾ ನಿರ್ದೇಶಕರು, ನಿರ್ಮಾಪಕರು ಮತ್ತು ಬರಹಗಾರ |
| ಸಂಗಾತಿ(ಗಳು) | ಶೋಭ |
| ಮಕ್ಕಳು | ಸಿಹಿ, ಕನಸು |
| ಜಾಲತಾಣ http://www.nagathihalli.com/ |
|
ನಾಗತಿಹಳ್ಳಿ ಚಂದ್ರಶೇಖರ್ ಕನ್ನಡ ಸಿನಿಮಾ ನಿರ್ದೇಶಕರು. 'ಚಂದ್ರು' ಎಂಬ ಹೆಸರಲ್ಲೂ ಚಿರಪರಿಚಿತರಾದ ಇವರು ಸುಮಾರು ೧೫ ಕನ್ನಡ ಸಿನಿಮಾಗಳನ್ನು ಹಾಗು ೧೦ ಟಿವಿ ಸೀರಿಯಲ್ಲುಗಳನ್ನು ನಿರ್ದೇಶಿಸಿದ್ದಾರೆ. ಕಾದಂಬರಿ, ಸಣ್ಣ ಕಥೆಗಳನ್ನೂ ಬರೆದಿದ್ದಾರೆ.
ಪರಿವಿಡಿ |
ಜೀವನ [ಬದಲಾಯಿಸಿ]
ಕನ್ನಡ ಇವರ ಮಾತೃಭಾಷೆ. ಮಂಡ್ಯ ಜಿಲ್ಲೆಯ ನಾಗತಿಹಳ್ಳಿಯಲ್ಲಿ ೧೯೫೮ ಆಗಸ್ಟ್ ೧೫ರಂದು ಜನಿಸಿದರು. [೧] 1985ರ ಆಗಸ್ಟ್ 15.(ಇದು ನಾಗತಿಹಳ್ಳಿ ಅವರ ಜನ್ಮದಿನವೂ ಹೌದು). ಅದಾಗಲೇ ಕಥೆಗಾರರಾಗಿ ಹೆಸರು ಮಾಡಿದ್ದ ಚಂದ್ರಶೇಖರ್, ತಮ್ಮೂರು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ನಾಗತಿಹಳ್ಳಿಗೆ ಏನಾದರೂ ಸಹಾಯ ಮಾಡಬೇಕು. ಊರಿನ ಋಣ ತೀರಿಸಬೇಕು ಎಂದು ಬಯಸಿ "ಅಭಿವ್ಯಕ್ತಿ" ಸಾಂಸ್ಕೃತಿಕ ವೇದಿಕೆ ಎಂಬ ಹೆಸರಿನೊಂದಿಗೆ ನಾಗತಿಹಳ್ಳಿಯಲ್ಲಿ "ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ`"ಯನ್ನು ಆರಂಭಿಸಿದರು.ಮತ್ತು ಪ್ರತಿ ಯುಗಾದಿಯ ಸಂದರ್ಭದಲ್ಲಿ `ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ`ಕ್ಕೆ ಚಾಲನೆ ನೀಡಿದರು . ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿಯ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು ತೆರೆಯುವ ಮೂಲಕ ಗ್ರಾಮೀಣರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನೂ ಆರಂಭಿಸಿದರು.ಈ ವೇದಿಕೆಯು ಗ್ರಾಮೀಣರ ಆರ್ಥಿಕ ಸಮಸ್ಯೆಗಳಿಗೂ ಸ್ಪಂದಿಸುತ್ತಿರುವ ಸಂಗತಿ ನಾಗಮಂಗಲ ತಾಲ್ಲೂಕಿನ ಬಿದರಕೆರೆ, ಯರಗನಹಳ್ಳಿ, ಸಬ್ಬನಕುಪ್ಪೆ ಗ್ರಾಮಸ್ಥರಿಗೂ ಸ್ಫೂರ್ತಿ ನೀಡಿದೆ. ಈ ವೇದಿಕೆಯ ಆಶಯಗಳನ್ನೇ ಆ ಗ್ರಾಮಸ್ಥರು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ."ನಮನ"
ಶಿಕ್ಷಣ [ಬದಲಾಯಿಸಿ]
ಚಂದ್ರಶೇಖರ್ ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಮಾಸ್ಟರ್ಸ್ ಡಿಗ್ರಿ ಪಡೆದಿದ್ದಾರೆ. ಕನ್ನಡ ಎಂ.ಎ. ಪರೀಕ್ಷೆಯಲ್ಲಿ ಅತ್ಯುತ್ತಮ ಪ್ರತಿಭೆಗೆ ಎಂಟು ಚಿನ್ನದ ಪದಕ ಪಡೆದಿದ್ದರು.
ಇವರ ಕೃತಿಗಳು [ಬದಲಾಯಿಸಿ]
- ಹದ್ದುಗಳು
- ನನ್ನ ಪ್ರೀತಿಯ ಹುಡುಗನಿಗೆ
- ಮಲೆನಾಡಿನ ಹುಡುಗಿ, ಬಯಲುಸೀಮೆಯ ಹುಡುಗ
- ಬಾ ನಲ್ಲೆ ಮಧುಚಂದ್ರಕೆ
- ಚುಕ್ಕಿ ಚಂದ್ರಮರ ನಾಡಿನಲ್ಲಿ
- ಸನ್ನಿಧಿ
- ಅಕಾಲ
- ಪ್ರೇಮ ಕಥಾ ಸಂಪುಟ
- ವಲಸೆ ಹಕ್ಕಿಯ ಹಾಡು
- ಅಮೇರಿಕ! ಅಮೇರಿಕ!!
- ಶತಮಾನದಂಚಿನಲ್ಲಿ
ಸಿನೆಮಾ [ಬದಲಾಯಿಸಿ]
ಚಂದ್ರಶೇಖರ್ ಸಿನಿಮಾ ಉದ್ಯಮದಲ್ಲಿ ಕಾರ್ಯ ಪ್ರಾರಂಭಿಸಿದ್ದು 'ಕಾಡಿನ ಬೆಂಕಿ' ಚಿತ್ರದ ಸಂಭಾಷಣೆ ಬರೆಯುವುದರ ಮೂಲಕ. ತದನಂತರ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ ಮಾತಾಡ್ ಮಾತಾಡು ಮಲ್ಲಿಗೆ ಚಿತ್ರ ೨೦೦೭ರಲ್ಲಿ ಕ್ಯಾನೆ ಚಿತ್ರೋತ್ಸವದಲ್ಲಿ ತೆರೆ ಕಂಡಿತ್ತು.
ಇವರು ನಿರ್ದೇಶಿಸಿರುವ ಸಿನಿಮಾಗಳು:
| va | ಚಿತ್ರ | - | - |
|---|---|---|---|
| 1 | ಉಂಡೂ ಹೋದ ಕೊಂಡೂ ಹೋದ | 1991 | - |
| 2 | ಬಾ ನಲ್ಲೆ ಮಧುಚಂದ್ರಕೆ | 1993 | - |
| 3 | ಕೊಟ್ರೇಶಿ ಕನಸು | 1994 | - |
| 4 | ಅಮೇರಿಕ ಅಮೇರಿಕ | 1996 | - |
| 5 | ನನ್ನ ಪ್ರೀತಿಯ ಹುಡುಗಿ | 2001 | - |
| 6 | ಹೂಮಳೆ | 1998 | - |
| 7 | ಸೂಪರ್ ಸ್ಟಾರ್ | 2002 | - |
| 8 | ಪ್ಯಾರಿಸ್ ಪ್ರಣಯ | 2003 | - |
| 9 | ಅಮೃತಧಾರೆ | 2005 | ಸಾಹಿತ್ಯ |
| 10 | ಮಾತಾಡ್ ಮಾತಾಡು ಮಲ್ಲಿಗೆ | 2007 | - |
| 11 | ಒಲವೆ ಜೀವನ ಲೆಕ್ಕಾಚಾರ | 2009 | |
| 12 | ನೂರು ಜನ್ಮಕೂ | 2010 |
ಚಿತ್ರಗೀತೆ-ಸಾಹಿತ್ಯ [ಬದಲಾಯಿಸಿ]
| # | ಚಿತ್ರ | ಚಿತ್ರಗೀತೆ | ವರ್ಷ | ಸಂಗೀತ | ಹಾಡಿದವರು |
|---|---|---|---|---|---|
| 1 | ಚೆಲುವೆಯೇ ನಿನ್ನೆ ನೋಡಲು | ಜನುಮದ ಜೋಡಿ ನನ್ ರಾಜಕುಮಾರ ... | ೨೦೦೯ | ವಿ ಹರಿಕೃಷ್ಣ | ಸೋನು ನಿಗಮ್ , ಸುನಿತಾ ಗೊಪರಾಜು |
| 2 | ಒಲವೆ ಜೀವನ ಲೆಕ್ಕಾಚಾರ | ನನ್ನ ಪ್ರೀತಿಯ ಗೆಳೆಯ ಕೇಳೊ ಒಲವಿನ ಕತೆಯಾ ಕಣ್ಣ ಮುಚ್ಚಿದರೂನು, ಬಿಚ್ಚಿರಲೇನು ಎಲ್ಲಾ ನೀನು.. |
೨೦೦೯ | - | - |
| 3 | ಸವಿ ಸವಿ ನೆನಪು | ಸವಿಯೊ ಸವಿಯೊ | ೨೦೦೭ | ಆರ್.ಪಿ.ಪಟ್ನಾಯಕ್ | ಸೋನು ನಿಗ೦, ಶ್ರೇಯ ಘೋಶಲ್ |
| 4 | ಮನಸೆಲ್ಲ ನೀನೆ | ಫಳ ಫಳ ಹೊಳೆಯುವ. | ೨೦೦೨ | ರವಿ ರಾಜ್ | - |
| 5 | ಪ್ಯಾರಿಸ್ ಪ್ರಣಯ | ಕೃಷ್ಣ ನೀ ಬೇಗನೆ ಬಾರೋ | ೨೦೦೩ | - | - |
| 6 | ಅಮೃತಧಾರೆ | ಮನೆ ಕಟ್ಟಿ ನೋಡು | ೨೦೦೫ | ಮನೊ ಮೂರ್ತಿ | ರಾಜು ಅನಂತಸ್ವಾಮಿ, ನಂದಿತ |
| 7 | ಅಮೃತಧಾರೆ | ಹುಡುಗ ಹುಡುಗ ಓ ನನ್ನ ಮುದ್ದಿನ ಹುಡುಗ | ೨೦೦೫ | ಮನೊ ಮೂರ್ತಿ | - |
ಚಿತ್ರ ಕಥೆ [ಬದಲಾಯಿಸಿ]
| # | ಚಿತ್ರ | ವರ್ಷ | - |
|---|---|---|---|
| - | - | - | - |
ಧಾರಾವಾಹಿ [ಬದಲಾಯಿಸಿ]
ಧಾರಾವಾಯಿ ಉದಯ ಟಿವಿಯಲ್ಲಿ
| # | ಧಾರಾವಾಹಿ | ವರ್ಷ | - | ಕಿರುತೆರೆ ವಾಹಿನಿ |
|---|---|---|---|---|
| 1 | ಪ್ರತಿಬಿಂಬ | - | - | - |
| 2 | ಕಾವೇರಿ | - | - | - |
| 3 | ಭಾಗ್ಯನಮ್ಮ | - | - | - |
| 4 | ಅಪಾರ್ಟ್ಮೆಂಟ್ | - | - | - |
| 5 | ಒಲವೇ ನಮ್ಮ ಬದುಕು | - | - | - |
| 6 | ವಟಾರ | - | - | - |
ಹೊರಗಿನ ಸಂಪರ್ಕಗಳು [ಬದಲಾಯಿಸಿ]
- Official Website of Nagathihalli Chandrashekhar
- Nagathihalli back to roots
- Profile on IMDB
- Nagathihalli true colors
- Nagathihalli slapped Andrita
- Andrita Blames Nagathihalli
- Nagathihalli apology to Andrita
References [ಬದಲಾಯಿಸಿ]
|
|||||