ಗಿರೀಶ್ ಕಾಸರವಳ್ಳಿ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗಿರೀಶ್ ಕಾಸರವಳ್ಳಿ

ಗಿರೀಶ್ ಕಾಸರವಳ್ಳಿ,ಭಾರತದ ಅತ್ಯಂತ ಪ್ರತಿಭಾನಿತ್ವ ಚಲನಚಿತ್ರ ನಿರ್ದೇಶಕರಲ್ಲೊಬ್ಬರು. ಮೂಲತಃ ಕರ್ನಾಟಕ ರಾಜ್ಯದ ಶಿವಮೊಗ್ಗದವರಾದ ಗಿರೀಶ್ ಕಾಸರವಳ್ಳಿಯವರು ತಮ್ಮ ೨೭ ವರ್ಷಗಳ ವೃತ್ತಿ ಜೀವನದಲ್ಲಿ ಕೇವಲ ೧೦ ಕನ್ನಡ ಚಿತ್ರಗಳನ್ನು ಮಾತ್ರ ನಿರ್ದೇಶಿಸಿದರೂ, ಹಲವಾರು ರಾಷ್ಟ್ರೀಯ ಹಾಗು ಅ೦ತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರ ಚಿತ್ರಗಳು ಅನೇಕ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿಯೂ ಸಹ ಪ್ರದರ್ಶಿತವಾಗಿದೆ. ಸಮಾನಾಂತರ ಚಿತ್ರ ಆಂದೋಲನದ ಬಾವುಟವನ್ನು ಹಾರಿಸುತ್ತ ಶ್ರೀಯುತರು ಜನಪ್ರಿಯ ಅಥವಾ ವಾಣಿಜ್ಯಮಯ ಚಿತ್ರಗಳಿಂದ ಮೊದಲಿನಿಂದಲು ದೂರ ಇದ್ದಾರೆ. ಪುಣೆಯಲ್ಲಿರುವ ಭಾರತೀಯ ದೂರದರ್ಶನ ಹಾಗು ಚಲನಚಿತ್ರ ಸಂಸ್ಥೆಯಿಂದ ಎಫ್ ಟಿ ಐ ಐ ಬಂಗಾರದ ಪದಕದೊಂದಿಗೆ ಪದವಿ ಪಡೆದ ಗಿರೀಶ್ ಕಾಸರವಳ್ಳಿಯವರು, ತಮ್ಮ ಪದವಿಪ್ರಾಪ್ತಿಗಾಗಿ ಮಾಡಿದ ಚಿತ್ರ ಅವಶೇಷಕ್ಕಾಗಿ ಸಣ್ಣ ಚಿತ್ರ ವಿಭಾಗದಲ್ಲಿ, ಭಾರತದ ರಾಷ್ಟ್ರಪತಿಗಳಿಂದ ರಜತ ಕಮಲ ಪ್ರಶಸ್ತಿಯನ್ನು ಪಡೆದರು. ೧೯೭೭ರಲ್ಲಿ ತಮ್ಮ ಪ್ರಥಮ ಚಲನಚಿತ್ರ ಘಟಶ್ರಾದ್ಧಕ್ಕಾಗಿ ಭಾರತದ ರಾಷ್ಟ್ರಪತಿಗಳಿಂದ ಸ್ವರ್ಣ ಕಮಲ ಪ್ರಶಸ್ತಿಯನ್ನು ಪಡೆದನಂತರ ಇನ್ನೂ ೩ ಸ್ವರ್ಣಕಮಲಗಳನ್ನು (ಒಟ್ಟಾರೆ ೪) ಪಡೆದು ಸತ್ಯಜಿತ್ ರೇ( ೬ ಸ್ವರ್ಣ ಕಮಲಗಳು) ನಂತರ ಅತಿ ಹೆಚ್ಚು ಸ್ವರ್ಣ ಕಮಲಗಳನ್ನು ಪಡೆದವರಾಗಿದ್ದಾರೆ. ಗಿರೀಶ್ ಕಾಸರವಳ್ಳಿಯವರ ಪತ್ನಿ ವೈಶಾಲಿ ಕಾಸರವಳ್ಳಿ ಕನ್ನಡ ಚಲನಚಿತ್ರ ನಟಿ ಹಾಗು ದೂರದರ್ಶನ ಧಾರಾವಾಹಿಗಳ ನಿರ್ದೇಶಕಿ. 'ನೀನಾಸಂ-ರಂಗಶಾಲೆ'ಯ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ಗಿರೀಶ್ ಕಾಸರವಳ್ಳಿಯವರ ಹತ್ತಿರದ ಸಂಬಂಧಿ.

ಪರಿವಿಡಿ

[ಬದಲಾಯಿಸಿ] ೨೦೦೯ ನೇ ಸಾಲಿನ, 'ದಕ್ಷಿಣ ಏಷ್ಯಾ ಫೆಡರೇಷನ್ ನ ಕ್ರಿಸ್ಟಲ್ ಗ್ಲೋಬ್ ಪ್ರಶಸ್ತಿ', 'ಗಿರೀಶ್ ಕಾಸರವಳ್ಳಿ'ಯವರಿಗೆ, ದೊರೆತಿದೆ

ಭಾರತದ ಹೈಕಮೀಶನರ್ ಆದ, 'ನಳಿನ್ ಸೂರಿ',ಯವರು, 'ಲಂಡ'ನ್ ನಲ್ಲಿ ಈ ಪ್ರಶಸ್ತಿಯನ್ನುಗಿರೀಶ್ ಕಾಸರವಳ್ಳಿರವರಿಗೆ ಪ್ರದಾನಮಾಡಿದರು. ಸ್ವಾತಂತ್ರ್ಯಾನಂತರದ ಕಳೆದ ೬ ದಶಕಗಳಲ್ಲಿ ’ಘಟಶ್ರಾದ್ಧ'ದಿಂದ, ’ಗುಲಾಬಿ ಟಾಕೀಸ್’ ವರೆಗಿನ 'ಗಿರೀಶ್ ಕಾಸರವಳ್ಳಿ'ಯವರು ನಿರ್ದೇಶಿಸಿದ ಕನ್ನಡ ಚಿತ್ರಗಳು ಸಾಮಾಜಿಕ ಜೀವನದ ಸಂಘರ್ಷಗಳನ್ನು ಪ್ರತಿಬಿಂಬಿಸಿವೆ.

[ಬದಲಾಯಿಸಿ] ದಕ್ಷಿಣ ಏಷ್ಯ ಸಿನಿಮಾ ಪ್ರತಿಷ್ಠಾನದ ಕ್ರಿಶ್ಟಲ್ ಗ್ಲೋಬ್ ಪ್ರಶಸ್ತಿ’ಯನ್ನು ಪಡೆದ ಚಿತ್ರನಿರ್ದೇಶಕರು,

[ಬದಲಾಯಿಸಿ] ಚಂದ್ರಪ್ರಕಾಶ್ ದ್ವಿವೇದಿ’ಯವರಿಗೆ,’ಸಾಂಸ್ಕೃತಿಕ ಬದಲಾವಣೆಯ ಪ್ರಶಸ್ತಿ,’

’ಟೀವಿ’ ಮತ್ತು ’ಜನಪ್ರಿಯ ಸಿನೆಮಾ’ಗಳ ಮೂಲಕ, ’ಪ್ರಾಚೀನ ಭಾರತದ ಸಾಂಸ್ಕೃತಿ’ ಮತ್ತು ’ಇತಿಹಾಸ’ವನ್ನು ಬಿಂಬಿಸುವ ಮೂಲಕ ನಡೆಸಿದ ಅನ್ವೇಷಣಾತ್ಮಕ ಕೆಲಸಗಳನ್ನು ಗೌರವಿಸಿ ’ಚಂದ್ರಪ್ರಕಾಶ್ ದ್ವಿವೇದಿ’ಯವರಿಗೆ ’ಸಾಂಸ್ಕೃತಿಕ ಬದಲಾವಣೆಯ ಪ್ರಶಸ್ತಿ,’ ಯನ್ನು ನೀಡಲಾಗಿದೆ.

[ಬದಲಾಯಿಸಿ] ಚಿತ್ರಗಳು


 ಹೆಸರು  ವರ್ಷ  ಪ್ರಶಸ್ತಿ
 ಘಟಶ್ರಾದ್ಧ
 ೧೯೭೭   ಸ್ವರ್ಣ ಕಮಲ ಪ್ರಶಸ್ತಿ 
 ಆಕ್ರಮಣ
 ೧೯೭೯  
 ಮೂರು ದಾರಿಗಳು     ೧೯೮೧  
 ತಬರನ ಕಥೆ  ೧೯೮೭  ಸ್ವರ್ಣ ಕಮಲ ಪ್ರಶಸ್ತಿ 
 ಬಣ್ಣದ ವೇಷ  ೧೯೮೯  
 ಮನೆ   ೧೯೮೯  
 ಕ್ರೌರ್ಯ     ೧೯೯೬  
 ತಾಯಿ ಸಾಹೇಬ  ೧೯೯೮  ಸ್ವರ್ಣ ಕಮಲ ಪ್ರಶಸ್ತಿ 
 ದ್ವೀಪ     ೨೦೦೨  ಸ್ವರ್ಣ ಕಮಲ ಪ್ರಶಸ್ತಿ 
 ಹಸೀನಾ     ೨೦೦೫  ಉತ್ತಮ ಕುಟುಂಬ ಕಲ್ಯಾಣ ಚಿತ್ರ 
 ನಾಯಿ ನೆರಳು     ೨೦೦೬  ಓಶಿಯನ್ ಸಿನಿಫ್ಯಾನ್ ಏಶಿಯಾ ಚಿತ್ರೋತ್ಸವದ ವಿಶೇಷ ಜ್ಯೂರಿ ಪ್ರಶಸ್ತಿ 
 ಗುಲಾಬಿ ಟಾಕೀಸ್     ೨೦೦೮


ವೈಯಕ್ತಿಕ ಉಪಕರಣಗಳು
ಇತರ ಭಾಷೆಗಳು