ಬಿ.ಎಸ್.ರಂಗಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ಬಿ.ಎಸ್.ರಂಗಾ'

'ಬಿಂಡಿಗ ನವಿಲೆ ಶ್ರೀನಿವಾಸ ಅಯ್ಯಂಗಾರ್', (ಜನನ ೧೯೧೭ ನವೆಂಬರ್ ೧೧)ಬಿ.ಎಸ್.ರಂಗಾ-ಕನ್ನಡ ಚಿತ್ರರಂಗ ಕಂಡ ಬಹುಮುಖ ಪ್ರತಿಭಾವಂತರಲ್ಲಿ ಪ್ರಮುಖರು. ಛಾಯಾಗ್ರಹಣ, ನಿರ್ದೇಶನ, ನಿರ್ಮಾಣ ಹೀಗೆ ಮೂರು ವಿಭಾಗಗಳಲ್ಲಿ ರಂಗಾ ಅವರು ಕನ್ನಡ ಚಿತ್ರರಂಗಕ್ಕೆ ಸಲ್ಲಿಸುರುವ ಸೇವೆ ಅಮೂಲ್ಯವಾದದ್ದು.1956ರಲ್ಲಿ ಮದರಾಸಿನಲ್ಲಿ "ವಿಕ್ರಂ ಸ್ಟುಡಿಯೋಸ್" ಆರಂಭಿಸಿದ ರಂಗಾ, ಹೊರ ರಾಜ್ಯದಲ್ಲಿ ಸ್ಟುಡಿಯೋ ಆರಂಭಿಸಿದ ಮೊದಲ ಕನ್ನಡಿಗ. ಅಂದಿನ ದಿನಗಳಲ್ಲಿ ಕಚ್ಚಾಫಿಲಂ ದೊರಕುತ್ತಿದ್ದುದು ಕೇವಲ ಸ್ಟುಡಿಯೋ ಮಾಲೀಕರಿಗೆ ಮಾತ್ರ. ರಂಗಾ ಸ್ಟುಡಿಯೋ ಸ್ಥಾಪಿಸಿ ಈ ಸ್ಟುಡಿಯೋದಲ್ಲಿ ತಯಾರಿಸಿದ ಪ್ರಥಮ ಚಿತ್ರ ‘ಭಕ್ತ ಮಾರ್ಕಂಡೇಯ’ (1957) ಕನ್ನಡ, ತಮಿಳು ಮತ್ತು ತೆಲುಗು ಮೂರು ಭಾಷೆಗಳಲ್ಲಿ ತಯಾರಾಗಿದೆ. ಬೆಂಗಳೂರು ಅಮೆಚೂರ್ ಡ್ರಮಾಟಿಕ್ ಅಸೋಸಿಯೇಷನ್ ‘ಭಕ್ತ ಮಾರ್ಕಂಡೇಯ’ ನಾಟಕ ಆಡುತ್ತಿತ್ತು. ಅದನ್ನೇ ರಂಗಾ ಚಲನಚಿತ್ರ ಮಾಡಿದರು.ಇವರು ವಿವಿಧ ಭಾಷೆಗಳಲ್ಲಿ 65ಕ್ಕೂ ಹೆಚ್ಚು ಚಿತ್ರ ನಿರ್ಮಾಣ ಮಾಡಿರುವರು.'ಚಲನಚಿತ್ರವೆಂಬ ಕಲ್ಪನೆ' ಇನ್ನೂ ರೂಪುಗೊಳ್ಳುತ್ತಿದ್ದ ಕಾಲದಲ್ಲಿ 'ಪೌರಾಣಿಕ ಚಿತ್ರ'ಗಳನ್ನು ನಿರ್ಮಿಸಿ, 'ಸ್ಟುಡಿಯೊ ಸ್ಥಾಪಿಸಿ', 'ಚಿತ್ರೋದ್ಯಮದ ಆತ್ಮವಿಶ್ವಾಸ ಹೆಚ್ಚಿಸಿದರು'.

ಜನನ, ಬಾಲ್ಯ ಹಾಗೂ ವೃತ್ತಿ-ಜೀವನ[ಬದಲಾಯಿಸಿ]

'ಬಿ. ಎಸ್. ರಂಗಾ' ರವರು, ಸನ್, ೧೯೧೭ ರ, ನವೆಂಬರ್, ೧೧ ರಂದು, ಬೆಂಗಳೂರಿಗೆ ಸಮೀಪದಲ್ಲಿರುವ 'ಮಾಗಡಿ'ಯಲ್ಲಿ ಜನಿಸಿದರು. ತಮ್ಮ ೧೭ ನೇ ವಯಸ್ಸಿನ ಪ್ರಾಯದಲ್ಲೇ ಫೋಟೋಗ್ರಫಿ ಯಲ್ಲಿ ಆಕರ್ಷಿತರಾದರು. ಆ ವಲಯದಲ್ಲಿ ಅತ್ಯಂತ ಮಹತ್ವದ ಕೊಡುಗೆಗಳನ್ನು ಕೊಟ್ಟಬಳಿಕ, 'ಲಂಡನ್ ನ, ರಾಯಲ್ ಫೋಟೋಗ್ರಫಿಕ್ ಸೊಸೈಟಿಯ ಆನರ್ ಫೆಲೋ ಆಗಿ ಆಯ್ಕೆಯಾದರು. ೧೯೩೭ರಲ್ಲಿ ಕಾಲೇಜು ತೊರೆದು, ತಂದೆ ಬಿ.ಶ್ರೀನಿವಾಸ ಅಯ್ಯಂಗಾರ್ಯರ ಮುದ್ರಣ ಕಾರ್ಯದಲ್ಲಿ ಸಹಾಯಕರಾಗಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ತಂದೆ, 'ಅಮೆಚೂರ್ ಡ್ರಾಮಾಟಿಕ್ ಅಸೋಸಿಯೇಷನ್' ಹುಟ್ಟುಹಾಕಿದವರು. ಈ ಅಸೋಸಿಯೇಷನ್ ಮೂಲಕ ರಂಗಾ ಅವರಿಗೆ ಹಲವಾರು ಸಾಹಿತಿಗಳ, ರಂಗಪಟುಗಳ ಪರಿಚಯವಾಯಿತು. ಅದು ಅವರಲ್ಲಿ ಚಲನಚಿತ್ರರಂಗದಲ್ಲಿ ಆಸಕ್ತಿ ರೂಪುಗೊಳ್ಳುವಂತೆ ಮಾಡಿತು. ಎಲ್ಲಾ ವಿಭಾಗಗಳಿಗಿಂತ ಛಾಯಾಗ್ರಹಣದತ್ತ ಆಸಕ್ತರಾದ ಅವರು ಮುಂಬಯಿಗೆ ತೆರಳಿ, 'ಭಾರತದ ಪ್ರಥಮ ಆಟೋಮ್ಯಾಟಿಕ್ ಪ್ರೊಸೆಸಿಂಗ್ ಲ್ಯಾಬೋರೇಟರಿ' ಸ್ಥಾಪಕರಾದ 'ಕೃಷ್ಣಗೋಪಾಲ್' ರವರ ಸಹಾಯಕರಾಗಿ ಕೆಲಸಕ್ಕೆ ಸೇರಿದರು. ಹಿಂದಿ ಚಿತ್ರರಂಗದ ದಿಗ್ಗಜರ ಒಡನಾಟ ಲಭ್ಯವಾಯಿತು. ಹಲವು ಚಿತ್ರಗಳಿಗೆ 'ಸಹಾಯಕ ಛಾಯಾಗ್ರಹಕ' ರಾಗಿ ದುಡಿಯುವ ಅವಕಾಶವೂ ದೊರೆಯಿತು. 'ರಂಗಾ' ಅವರು 'ಸ್ವತಂತ್ರ ಛಾಯಾಗ್ರಹಕ'ರಾಗಿ ದುಡಿದದ್ದು ಭಕ್ತ ನಾರದರ್ ಎಂಬ ತಮಿಳು ಚಲನಚಿತ್ರ. ೧೯೪೭-೪೯ ರ ಅವಧಿಯಲ್ಲಿ, 'ಮಾಗೋಪಿ' ಯೆಂಬ ತೆಲುಗು ಚಿತ್ರವನ್ನು ಸ್ವತಂತ್ಯವಾಗಿ ಚಿತ್ರೀಕರಿಸಿ, ನಿರ್ದೇಶಿಸಿದರು ಸಹಿತ. ಛಾಯಾಗ್ರಾಹಕರಾಗಿ,ಅಕ್ಕಿನೇನಿ ನಾಗೇಶ್ವರ ರಾವ್, ಸಾವಿತ್ರಿ ಅಭಿನಯದ, 'ದೇವದಾಸು, ಸೇರಿದಂತೆ, ಹಲವು ಚಿತ್ರಗಳಿಗೆ ಕ್ಯಾಮರಮನ್ ಆಗಿ ಕೆಲಸಮಾಡಿದರು.

ಮದ್ರಾಸ್ ನಲ್ಲಿ, 'ವಿಕ್ರಂ ಪ್ರೊಡಕ್ಷನ್ ಕಂಪೆನಿ'ಯ ಸ್ಥಾಪನೆ[ಬದಲಾಯಿಸಿ]

'ಯಶಸ್ವಿ ಛಾಯಾಗ್ರಾಹಕ ವೃತ್ತಿ'ಯ ನಂತರ ವಿಕ್ರಂ ಪ್ರೊಡಕ್ಷನ್ ಸಂಸ್ಥೆ ಸ್ಥಾಪಿಸಿದರು. ೧೯೫೦ರಲ್ಲಿ ಅದರ ವಿಸ್ತರಣವಾಗಿ '`ವಿಕ್ರಂ ಸ್ಟುಡಿಯೊಸ್ ಅಂಡ್ ಲ್ಯಾಬ್ ಸಂಸ್ಥೆ' ಸ್ಥಾಪನೆಯಾಯಿತು. ೧೯೫೫ರಲ್ಲಿ ಮದ್ರಾಸಿನಲ್ಲಿ 'ಸುಸಜ್ಜಿತ ಸ್ಟುಡಿಯೊ' ಸ್ಥಾಪಿಸಿದರು. 'ಬೆಂಗಳೂರಿನ ಹಿರಿಯ ನಿವೃತ್ತ ಪೋಲೀಸ್ ಆಫೀಸರ್', 'ಶ್ರೀ. ಬಿ. ಎಸ್. ಗರುಡಾಚಾರ್', 'ಬಿ.ಎಸ್. ರಂಗಾ'ರವರ ಕಿರಿಯ ಸೋದರರು. ಬಿ.ಎಸ್.ರಂಗಾ ಬೆಂಗಳೂರಿನ ಕೆಂಗಲ್ ಹನುಮಂತಯ್ಯ ರಸ್ತೆಯಲ್ಲಿ ವಸಂತ್ ಕಲರ್ ಲ್ಯಾಬ್ ಸಂಸ್ಕರಣ ಕೇಂದ್ರವನ್ನು ಸ್ಥಾಪಿಸಿದ್ದಾರೆ.

ರಂಗಾರವರ ಪ್ರಥಮ ಚಲನಚಿತ್ರ[ಬದಲಾಯಿಸಿ]

'ರಂಗಾ' ನಿರ್ದೇಶಿಸಿ, ನಿರ್ಮಿಸಿದ ಮೊದಲ ಚಿತ್ರ ಭಕ್ತ ಮಾರ್ಕಂಡೇಯ. ನಂತರ ಮಹಿಷಾಸುರ ಮರ್ಧಿನಿ ಹಾಗು ಅಮರಶಿಲ್ಪಿ ಜಕಣಾಚಾರಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸಿದರು. ಅಮರಶಿಲ್ಪಿ ಜಕಣಾಚಾರಿ ಚಿತ್ರವು 'ಕನ್ನಡ ಚಿತ್ರರಂಗದಲ್ಲಿಯೇ ಪ್ರಪ್ರಥಮವಾಗಿ ಸಂಪೂರ್ಣವಾಗಿ ವರ್ಣಚಿತ್ರವಾಗಿ ನಿರ್ಮಾಣ'ಗೊಂಡಿತು. 'ಗೀತೆಗಳು ಅತ್ಯಂತ ಯಶಸ್ವಿ'ಯಾದುದಲ್ಲದೆ ಗಳಿಕೆ ದೃಷ್ಟಿಯಿಂದಲೂ 'ದಾಖಲೆ'ಯನ್ನು ನಿರ್ಮಿಸಿತು. ಅವರು ನಿರ್ದೇಶಿಸಿದ, 'ಚಂದ್ರಹಾಸ', 'ಬಾಲನಾಗಮ್ಮ' ಚಿತ್ರಗಳು ಜನಪ್ರಿಯವಾದವು.

'ಹಾಸ್ಯರತ್ನ ತೆನ್ನಾಲಿ ರಾಮಕೃಷ್ಣ' ಎಂಬ ತೆಲುಗು ಚಿತ್ರ ತಯಾರಿಸಿ ಪ್ರಸಿದ್ಧರಾದರು[ಬದಲಾಯಿಸಿ]

ನಂತರ ಮಹಾಸತಿ ಅನುಸೂಯ, ಪಾರ್ವತಿ ಕಲ್ಯಾಣ, ಮಿಸ್ಟರ್ ರಾಜ್‍ಕುಮಾರ್ ಮುಂತಾದ ಅದ್ದೂರಿ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ, ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದರು. ಸುಳಿ ಚಿತ್ರದ ನಂತರ ಅಲ್ಪಕಾಲ ದೂರ ಉಳಿದಿದ್ದ 'ರಂಗಾ', ನಂತರ ೧೯೮೨ರಲ್ಲಿ ಹಾಸ್ಯರತ್ನ ರಾಮಕೃಷ್ಣ ಎಂಬ ಹಾಸ್ಯಪ್ರಧಾನ ಚಿತ್ರವನ್ನು ನಿರ್ಮಿಸಿದರು.ಈ ಚಿತ್ರದಲ್ಲಿ ಹಲವಾರು ನಟರ ಜೊತೆಗೆ, ಆಗಿನ ಕಾಲದ ಅತ್ಯಂತ ಬೇಡಿಕೆಯ ಸುಪ್ರಸಿದ್ಧ ನಟರಾಗಿದ್ದ, 'ಎನ್.ಟಿ.ರಾಮರಾವ್', ಹಾಗೂ 'ಅಕ್ಕಿನೇನಿ ನಾಗೇಶ್ವರರಾವ್' ಸಹಿತ ನಟಿಸಿದ್ದರು. ತಮ್ಮ ವೃತ್ತಿಜೀವನದಲ್ಲಿ, ಸುಮಾರು ೪೫ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ-ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

'ಪ್ಯಾರ್ ಕಿಯಾ ತೊ ಡರ್ನಾ ಕ್ಯಾ' ಯೆಂಬ ಹಿಂದಿ ಚಿತ್ರವೂ ಸೇರಿದೆ[ಬದಲಾಯಿಸಿ]

ಈ ಹಿಂದಿ ಚಲನಚಿತ್ರದಲ್ಲಿ, ಕಲಾಕಾರರ ಸಮ್ಮಿಲನದ ಜೊತೆ, 'ಶಮ್ಮಿಕಪೂರ್' ನಾಯಕನಾಗಿ ನಟಿಸಿದ್ದಾರೆ. ಅವರ ವಿರುದ್ಧ, ನಾಯಕಿಯಾಗಿ, ಕನ್ನಡದ ಬಹುಭಾಷಾತಾರೆ, 'ಬಿ.ಸರೋಜಾದೇವಿ' ಅಭಿನಯಿಸಿದ್ದಾರೆ.

ಕಿರುತೆರೆಯಲ್ಲಿಯೂ ಕೊಡುಗೆಯನ್ನು ಕೊಟ್ಟಿರುತ್ತಾರೆ[ಬದಲಾಯಿಸಿ]

ರಂಗಾ ಅವರು ಕೆಲಕಾಲ 'ಕನ್ನಡ ಕಿರುತೆರೆ'ಯಲ್ಲಿಯೂ ಸಕ್ರಿಯರಾಗಿದ್ದರು. ಕನ್ನಡ ಚಿತ್ರರಂಗಕ್ಕೆ ರಂಗಾ ಅವರ ಸೇವೆಯನ್ನು ಪರಿಗಣಿಸಿದ 'ಕರ್ನಾಟಕ ರಾಜ್ಯ ಸರ್ಕಾರ' ೧೯೮೮-೮೯ನೇ ಸಾಲಿನ * ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

'ಬಿ.ಎಸ್.ರಂಗಾ' ನಿರ್ದೇಶನದ ಚಲನಚಿತ್ರಗಳು[ಬದಲಾಯಿಸಿ]

ವರ್ಷ ಚಿತ್ರ
೧೯೫೬ ಭಕ್ತ ಮಾರ್ಕಂಡೇಯ
೧೯೫೯ ಮಹಿಷಾಸುರಮರ್ಧಿನಿ
೧೯೬೪ ಅಮರಶಿಲ್ಪಿ ಜಕಣಾಚಾರಿ
೧೯೬೪ ಪ್ರತಿಜ್ಞೆ
೧೯೬೫ ಚಂದ್ರಹಾಸ
೧೯೬೫ ಮಹಾಸತಿ ಅನುಸೂಯ
೧೯೬೭ ಪಾರ್ವತಿ ಕಲ್ಯಾಣ
೧೯೬೯ ಭಲೇ ಬಸವ
೧೯೭೦ ಮಿಸ್ಟರ್ ರಾಜ್‌ಕುಮಾರ್
೧೯೭೧ ಸಿಡಿಲ ಮರಿ
೧೯೭೪ ಮಣ್ಣಿನ ಮಗಳು
೧೯೭೮ ಸುಳಿ
೧೯೮೨ ಹಾಸ್ಯರತ್ನ ರಾಮಕೃಷ್ಣ
೧೯೮೪ ಹುಲಿಯಾದ ಕಾಳ
೧೯೮೭ ಶಿವಭಕ್ತ ಮಾರ್ಕಂಡೇಯ
೧೯೮೯ ಬಂಗಾರದ ಬದುಕು

ನಿಧನ[ಬದಲಾಯಿಸಿ]

೯೩ ವರ್ಷ ಪ್ರಾಯದ ತುಂಬು ಜೀವನವನ್ನು ನಡೆಸಿದ 'ಬಿ.ಎಸ್. ರಂಗಾ'ರವರು, ಸ್ವಲ್ಪಸಮಯದಿಂದ 'ವಯಸ್ಸಿಗೆ ಸಂಬಂಧಿಸಿದ ಕಾಯಿಲೆ'ಯಿಂದ ನರಳುತ್ತಿದ್ದು, 'ಚೆನ್ನೈನ ಖಾಸಗಿ ಆಸ್ಪತ್ರೆ'ಯೊಂದರಲ್ಲಿ, ಚಿಕಿತ್ಸೆ ಪಡೆಯುತ್ತಿದ್ದರು. ಸನ್, ೨೦೧೦ ರ, ಡಿಸೆಂಬರ್, ೧೨ ರ 'ರವಿವಾರ'ದಂದು, ಬೆಳಿಗ್ಯೆ, ೮-೪೫ ರ ಹೊತ್ತಿಗೆ, ತಮ್ಮ ಮನೆಯಲ್ಲಿ, ಉಪಹಾರ ಸೇವಿಸಿದ ಬಳಿಕ, ಮಂಚದ ಹತ್ತಿರದಲ್ಲಿ ಕುಸಿದು ಬಿದ್ದು, ತಮ್ಮ ಕೊನೆಯುಸಿರೆಳೆದರು. ಮೃತರು, ಪತ್ನಿ 'ಶ್ಯಾಮಲಾದೇವಿ', ಹಾಗೂ ಮಕ್ಕಳಾದ, 'ವಸಂತ್', 'ರಾಮಕುಮಾರ್', 'ಕೃಷ್ಣ ಕುಮಾರ್'ರನ್ನು ಅಗಲಿ ತೆರಳಿದ್ದಾರೆ. ಬೆಂಗಳೂರಿನ ವಸಂತ್ ಸ್ಟುಡಿಯೋ ಮಾಲೀಕ,ನಿರ್ಮಾಪಕ ವಸಂತ್ ಅವರು ಬಿ.ಎಸ್.ರಂಗಾ ಅವರ ಪುತ್ರ....'ಬಿ.ಎಸ್.ರಂಗಾರವರನ್ನು ಕನ್ನಡದ 'ವರ್ಣ ಚಿತ್ರಗಳ ಶಿಲ್ಪಿ "ಎಂದು ಕರೆಯುತ್ತಾರೆ.ನಮನ

ಆಕರಗಳು[ಬದಲಾಯಿಸಿ]