ಗಿರೀಶ್ ಕಾರ್ನಾಡ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಶ್ರೀ ಗಿರೀಶ್ ಕಾರ್ನಾಡ್

ಗಿರೀಶ್ ರಘುನಾಥ್ ಕಾರ್ನಾಡ್ (ಹುಟ್ಟು - ಮೇ ೧೯, ೧೯೩೮) ಕನ್ನಡಕ್ಕೆ ಏಳನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕನ್ನಡ ಸಾಹಿತ್ಯದ ನಾಟಕ ಕ್ಷೇತ್ರಕ್ಕೆ ಸಾಹಿತಿ. ಭಾರತದಲ್ಲೇ ನಾಟಕ ಸಾಹಿತ್ಯ ರಚನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದವರಲ್ಲಿ ಕಾರ್ನಾಡ್ ಮೊದಲಿಗರು.ಮತ್ತು ಇಬ್ಬರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕಾದಂಬರಿಗಳನ್ನು ಸಿನಿಮಾ ಮಾಡಿದ ಏಕೈಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೆಂಬ ಗೌರವಕ್ಕೆ ಕಾರ್ನಾಡ್ ಪಾತ್ರರಾಗಿದ್ದಾರೆ.

ಹೀಗಾಗಿ ಕಾರ್ನಾಡ್ ಪ್ರಶಸ್ತಿ ಬಂದಾಗ ಸೌಜನ್ಯದಿಂದಲೇ ಮರಾಠಿವಿಜಯ ತೆಂಡೂಲ್ಕರ್ ಅವರಂಥವರಿಗೆ ಈ ಪ್ರಶಸ್ತಿ ಬರಬೇಕಿತ್ತು ಎಂದು ಹೇಳಿ ದೊಡ್ಡತನ ಮೆರೆದಿದ್ದರು. ಕನ್ನಡದಲ್ಲಿ ನಾಟಕ ರಚಿಸುತ್ತ, ಇತರ ಭಾರತೀಯ ಭಾಷೆಗಳಲ್ಲಿ ಸಂಪರ್ಕವಿಟ್ಟುಕೊಂಡು ಸಾಂಸ್ಕೃತಿಕ ವಕ್ತಾರರಾದ ಕಾರ್ನಾಡ್ ನಟರಾಗಿ, ನಿರ್ದೇಶಕರಾಗಿ ಹೆಸರಾಗಿದ್ದಾರೆ. ಆರಂಭದಲ್ಲಿ ರಂಗಭೂಮಿ ನಟರಾಗಿದ್ದವರು ಹೊಸ ವಿಚಾರಗಳತ್ತ ಗಮನ ಹರಿಸಿ ನಾಟಕ ರಚನೆಗೆ ಚಿಂತಿಸಿದರು. ಹೀಗಾಗಿ ಪುರಾಣ, ಇತಿಹಾಸಗಳು ವಾಸ್ತವ ನೆಲೆಗಟ್ಟಿನಲ್ಲಿ ನೇಯಲ್ಪಟ್ಟವು.

ಪರಿವಿಡಿ

ಜೀವನ [ಬದಲಾಯಿಸಿ]

ಗಿರೀಶ ಕಾರ್ನಾಡ್‌ರು ೧೯೩೮ ಮೇ ೧೯ರಂದು ಮಹಾರಾಷ್ಟ್ರದ ಮಾಥೇರಾನದಲ್ಲಿ ಜನಿಸಿದರು. ತಂದೆ ಡಾ| ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾಬಾಯಿ. ಪ್ರಗತಿಶೀಲ ಮನೋಭಾವದ ಡಾ| ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದುಕೊ೦ಡರು. ಬಾಲ್ಯದಲ್ಲೇ ಮದುವೆಯಾಗಿ ಪತಿಯನ್ನು ಕಳೆದುಕೊಂಡಿದ್ದ ಕೃಷ್ಣಾಬಾಯಿಯನ್ನು, ಸಮಾಜದ ವಿರೋಧದ ನಡುವೆಯೂ ದಿಟ್ಟತನದಿಂದ ಕೈ ಹಿಡಿದರು. ಸಮಾಜ ಏನೆನ್ನುತ್ತದೆ ಅನ್ನುವುದಕ್ಕಿಂತ ಆದರ್ಶ ಹಾಗೂ ಪ್ರಗತಿಪರತೆ ರಘುನಾಥ್ ಕಾರ್ನಾಡರಲ್ಲಿ ಕಂಡುಬರುತ್ತದೆ. ಮುಂದೆ ಕಾರ್ನಾಡರಿಗೆ ಇಂಥ ಪ್ರಗತಿಪರ ವಾತಾವರಣವೇ ಬೆಳವಣಿಗೆಯಲ್ಲಿ ಸಹಾಯವಾಯಿತು.

ಗಿರೀಶರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗು ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಆಯಿತು.ಆ ಬಳಿಕ Rhodes scholarship ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು. ಗಿರೀಶ ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ ಕ್ಲಬ್ ಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಶಿಯನ್ ಆಗಿದ್ದಾರೆ.ಗೊದಾವರ


ತಮ್ಮ ಓದು, ಚರ್ಚೆಯನ್ನು ದೇಶ ವಿದೇಶದಲ್ಲೂ ಹರಡಿ ವಿದ್ವಾಂಸರ ಸಖ್ಯದಲ್ಲಿ, ಕಲಾಸೇವಕರ ಸಹವಾಸದಲ್ಲಿ ಗುರ್ತಿಸಿಕೊಂಡ ಕಾರ್ನಾಡ್ ಬುದ್ಧಿಜೀವಿ ಎನಿಸಿಕೊಂಡರು. ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಕಾರ್ನಾಡ್ ಸೇವೆ ಸಲ್ಲಿಸಿದರು. ವಿದೇಶದಲ್ಲಿದ್ದಾಗಲೇ ಕನ್ನಡ ನಾಟಕಗಳನ್ನು ಬರೆದು ಇಲ್ಲಿಗೆ ಬಂದು ಹೊಸ ನಾಟಕಗಳ ಓದು, ಪ್ರದರ್ಶನಕ್ಕೆ ದಾರಿ ಮಾಡಿಕೊಂಡರು. ಕನ್ನಡವಲ್ಲದೆ ಹಿಂದಿ, ಪಂಜಾಬಿ, ಮರಾಠಿ ಹಾಗೂ ಭಾರತೀಯ ಹಲವು ಭಾಷೆಗಳಿಗೆ ತಮ್ಮ ನಾಟಕಗಳು ಅನುವಾದಗೊಂಡು, ಪ್ರದರ್ಶನಗೊಂಡವು. ಬಹುಶಃ ಕನ್ನಡದ ಒಬ್ಬ ನಾಟಕಕಾರ ಇಷ್ಟೊಂದು ಭಾಷೆಗೆ ಪರಿಚಯವಾದದ್ದು ಪ್ರಥಮ. ಆಕ್ಸ್‌ಫರ್ಡ್‌ನಿಂದ ಬಂದ ನಂತರ ಮದ್ರಾಸ್‌ನಲ್ಲಿ ನೌಕರಿಯಲ್ಲಿದ್ದು ಧಾರವಾಡಕ್ಕೆ ವಾಪಾಸಾಗಿ ನಾಟಕ ಕ್ಷೇತ್ರದಲ್ಲಿ ಕೃಷಿ ನಡೆಸಿದರು.

ಹೆಸರಾಂತ ಹಿಂದಿ ಚಿತ್ರ ನಟಿ ಹೇಮಾ ಮಾಲಿನಿ ಗಿರೀಶ್ ಕಾರ್ನಾಡ್ ರನ್ನು ಮದುವೆಯಾಗುವಂತೆ ಒತ್ತಾಯಿಸಿದ್ದರಂತೆ.

ಶ್ರೀ ಗಿರೀಶ್ ಕಾರ್ನಾಡ್ ಕುರಿತ ಮತ್ತೊಂದು ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ.

ನಾಟಕರಚನೆ [ಬದಲಾಯಿಸಿ]

ಇಂಗ್ಲಂಡಿಗೆ ತೆರಳುವ ಮೊದಲೆ ಗಿರೀಶ ಕಾರ್ನಾಡರ ಮೊದಲ ಸಾಹಿತ್ಯಕೃತಿ "ಯಯಾತಿ" ನಾಟಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು. ಇಂಗ್ಲಂಡಿನಿಂದ ಮರಳಿದ ಬಳಿಕ "ತುಘಲಕ" ಹಾಗೂ "ಹಯವದನ" ಪ್ರಕಟವಾದವು. ಈ ನಡುವೆ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್‍ನ ನಿರ್ದೇಶಕರಾಗಿದ್ದು,ಮತ್ತೆ ಅದನ್ನು ಬಿಟ್ಟು ಮುಂಬಯಿಗೆ ಬಂದ ಕಾರ್ನಾಡರು ಕೆಲವು ಚಲನಚಿತ್ರಗಳಲ್ಲಿ ನಟಿಸಿದರು. ಆ ರಂಗವನ್ನೂ ತ್ಯಜಿಸಿ ಮತ್ತೆ ಬೆಂಗಳೂರಿಗೆ ಬಂದರು. ಅಲ್ಲಿಂದ ರಚಿತವಾದ ಅವರ ನಾಟಕಗಳು:"ಅಂಜುಮಲ್ಲಿಗೆ", "ನಾಗಮಂಡಲ", "ತಲೆದಂಡ" ಹಾಗು "ಅಗ್ನಿ ಮತ್ತು ಮಳೆ". ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಶನ್ ಇವರಿಗಾಗಿ ಬರೆದುಕೊಟ್ಟ ನಾಟಕ:"ಟಿಪ್ಪುವಿನ ಕನಸುಗಳು".

ಚಿತ್ರರಂಗ [ಬದಲಾಯಿಸಿ]

"ಸಂಸ್ಕಾರ" ಚಲನಚಿತ್ರವು ಕನ್ನಡದ ಪ್ರಥಮ ಕಲಾತ್ಮಕ ಚಲನಚಿತ್ರ. ಯು.ಆರ್.ಅನಂತಮೂರ್ತಿಯವರ ಕಾದಂಬರಿಯನ್ನು ಆಧರಿಸಿದ ಈ ಚಲನಚಿತ್ರದಲ್ಲಿ ಗಿರೀಶ ಕಾರ್ನಾಡರದು ಪ್ರಮುಖ ಪಾತ್ರ, ಪ್ರಾಣೇಶಾಚಾರ್ಯರದು.ಪಿ.ಲಂಕೇಶಅವರದು ವಿರುದ್ಧ ವ್ಯಕ್ತಿತ್ವದ ಪಾತ್ರ.ಈ ಚಿತ್ರದ ನಿರ್ದೇಶಕರು ಪಟ್ಟಾಭಿರಾಮರೆಡ್ಡಿ ಅವರು. ಇದು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ತಂದು ಕೊಟ್ಟ ಚಿತ್ನ. ಆ ನಂತರ ಎಸ್.ಎಲ್. ಭೈರಪ್ಪನವರ ವಂಶವೃಕ್ಷ ಕಾದಂಬರಿಯನ್ನು ಆಧರಿಸಿ, ಬಿ. ವಿ. ಕಾರಂತರ ಜೊತೆಗೂಡಿ ವಂಶವೃಕ್ಷ ಚಿತ್ರವನ್ನು ನಿರ್ದೇಶನ ಮಾಡಿದರು. ಇದು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪುರಸ್ಕಾರ ಪಡೆಯಿತು. ಮುಂದೆ "ತಬ್ಬಲಿಯು ನೀನಾದೆ ಮಗನೆ", "ಕಾಡು", "ಒಂದಾನೊಂದು ಕಾಲದಲ್ಲಿ" ಚಿತ್ರಗಳನ್ನು ನಿರ್ದೇಶಿಸಿದರು. "ಕಾಡು" ಹಲವಾರು ಪ್ರಶಸ್ತಿ ಪುರಸ್ಕಾರ ಪಡೆಯಿತು. ನಂತರ "ಉತ್ಸವ", "ಗೋಧೂಳಿ" ಎಂಬ ಹಿಂದಿ ಚಿತ್ರಗಳನ್ನು ನಿರ್ದೇಶಿಸಿದರು.

ರಾಷ್ಟ್ರಕವಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡಿತಿ ಕಾದಂಬರಿಯನ್ನು ಆಧರಿಸಿ "ಕಾನೂರು ಹೆಗ್ಗಡಿತಿ" ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರವು ರಾಜ್ಯ ಪ್ರಶಸ್ತಿ, ರಾಷ್ಟ್ರೀಯ ಪುರಸ್ಕಾರ ಪಡೆದು, ಪನೋರಮಕ್ಕೂ ಆಯ್ಕೆಯಾಯಿತು.

ಇದಲ್ಲದೆ"ಕನಕ ಪುರಂದರ","ದ.ರಾ.ಬೇಂದ್ರೆ" ಹಾಗು "ಸೂಫಿ ಪಂಥ" ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದರು. ಪರಿಸರ ವಿನಾಶ ಕುರಿತು "ಚೆಲುವಿ" ಕಿರಚಿತ್ರವನ್ನು ನಿರ್ದೇಶಿಸಿದರು. ೨೦೦೭ ರಲ್ಲಿ ತೆರೆ ಕಂಡ ಆ ದಿನಗಳು ಚಿತ್ರಕ್ಕೆ ಅಗ್ನಿ ಶಶ್ರೀಧರ್ ಅವರ ಜೊತೆದಗೂಡಿ ಚಿತ್ರಕಥೆಯನ್ನು ಬರೆದಿದ್ದಾರೆ.

ಗೌರವ,ಪ್ರಶಸ್ತಿ [ಬದಲಾಯಿಸಿ]

ಕರ್ನಾಟಕ ವಿಶ್ವವಿದ್ಯಾಲಯ ಕಾರ್ನಾಡರ ಸಾಹಿತ್ಯ-ಸಿನಿಮಾ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. "ಕಾರ್ನಾಡರು ವಸ್ತುವನ್ನು ಗ್ರಹಿಸುವ ಕ್ರಮದಲ್ಲೇ ಅವರ ಅನನ್ಯತೆ ಇದೆ. ಈ ಗ್ರಹಿಕೆಗೆ ಪೂರಕವಾದ ರಚನಾಕ್ರಮವನ್ನು ಅವರು ಕಂಡುಕೊಂಡಿದ್ದಾರೆ. ಒಂದು ಸಮಸ್ಯೆಯನ್ನು ನಾಟಕ ರೂಪಕ್ಕೆ ಒಗ್ಗಿಸಿಕೊಂಡು ಅದಕ್ಕೊಂದು structure ಕೊಟ್ಟು ಜನರ ಮುಂದಿಡುವುದರಲ್ಲೇ ನಾಟಕಕಾರನ ಸೋಲು ಗೆಲುವು ಎರಡೂ ಅಡಗಿದೆ." ಎಂದು ಕಾರ್ನಾಡರ ನಾಟಕಗಳ ವಸ್ತು, ಗ್ರಹಿಕೆ ಬಗ್ಗೆ ಭಾರತೀಯ ರಂಗಭೂಮಿಯ ಹಿರಿಯ ನಿರ್ದೇಶಕ ಬಿ. ವಿ. ಕಾರಂತರು ದಾಖಲಿಸುತ್ತಾರೆ.

ಕಾರ್ನಾಡರಿಗೆ ಹಲವಾರು ಹುದ್ದೆಗಳು, ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪ್ರತಿಷ್ಠಿತ ಪದ್ಮಶ್ರೀ, ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿಗಳ ಗೌರವ ದೊರೆಕಿದೆ. ಕಾರ್ನಾಡ್ ಕೇಂದ್ರ ಸಂಗೀತ-ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ನೆಹರು ಸೆಂಟರ್‌ನ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

೨೦೦೮ -೦೯ ರ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಮಂಡಳಿ ಘೋಷಿಸಿದ್ದ " ಪುಟ್ಟಣ್ಣ ಕಣಗಾಲ್ "ಪ್ರಶಸ್ತಿಯನ್ನು ಪ್ರಶಸ್ತಿಯನ್ನು ಗಿರೀಶ್ ಕಾರ್ನಾಡ್ ತಿರಸ್ಕರಿಸಿದ್ದಾರೆ .

ಜೀವಮಾನ ಸಾಧನೆಗಾಗಿ ಕೆಎಸ್ಆರ್ ದಾಸ್ ಅವರಿಗೆ ನೀಡಲಾಗಿದ್ದ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ಕೆಲ ಕ್ಷಣಗಳಲ್ಲಿಯೇ ಹಿಂದಕ್ಕೆ ಪಡೆದು ಅದನ್ನು ಗಿರೀಶ್ ಕಾರ್ನಾಡ್ ಅವರಿಗೆ ನೀಡಲಾಗಿತ್ತು. (ದಾಸ್ ಅವರಿಗೆ ಪ್ರಶಸ್ತಿ ನೀಡಿದ್ದನ್ನು ಘೋಷಿಸಿದ ಕೂಡಲೆ "ಕೆಎಸ್ಆರ್ ದಾಸ್" ಅವರು ಕನ್ನಡ ಚಿತ್ರರಂಗಕ್ಕೆ ಹೆಚ್ಚಿನ ಸೇವೆ ಸಲ್ಲಿಸಿಲ್ಲವೆಂಬುದು ಪತ್ರಕರ್ತರಿಂದ ಪ್ರತಿಭಟನೆ ವ್ಯಕ್ತವಾಗಿದ್ದರಿಂದ ಅದನ್ನು ಕೂಡಲೆ ಹಿಂದೆ ಪಡೆದು ಅದನ್ನು ಕಾರ್ನಾಡ್ ಅವರಿಗೆ ಭಾರ್ಗವ ನೀಡಿದರು.

ಅಭಿನಯಿಸಿದ ತೆಲುಗು ಚಿತ್ರಗಳು [ಬದಲಾಯಿಸಿ]

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

ಕನ್ನಡ: ಕುವೆಂಪು | ದ.ರಾ.ಬೇಂದ್ರೆ | ವಿ.ಕೃ.ಗೋಕಾಕ | ಶಿವರಾಮ ಕಾರಂತ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಯು.ಆರ್.ಅನಂತಮೂರ್ತಿ | ಗಿರೀಶ್ ಕಾರ್ನಾಡ್ | ಚಂದ್ರಶೇಖರ ಕಂಬಾರ
ಹಿಂದಿ: ಮಹಾದೇವಿ ವರ್ಮ | ನಿರ್ಮಲಾ ವರ್ಮ | ಸುಮಿತ್ರಾ ನಂದನ್ ಪಂತ್ | ರಾಮ್‍ಧಾರಿ ಸಿಂಘ್ ದಿನಕರ್ | ಅಜ್ಞೇಯ | ನರೇಶ್ ಮೆಹ್ತಾ
ಬೆಂಗಾಲಿ: ತಾರಾಶಂಕರ ಬಂದೋಪಾಧ್ಯಾಯ | ಬಿಷ್ಣು ಡೆ | ಆಶಾಪೂರ್ಣ ದೇವಿ | ಸುಭಾಷ್ ಮುಖ್ಯೋಪಾಧ್ಯಾಯ | ಮಹಾಶ್ವೇತಾದೇವಿ
ಮಲಯಾಳಂ: ಎಂ.ಟಿ.ವಾಸುದೇವನ್ ನಾಯರ್ | ಜಿ. ಶಂಕರ ಕುರುಪ್ | ಎಸ್.ಕೆ.ಪೊಟ್ಟೆಕ್ಕಾಡ್ | ಟಿ. ಶಿವಶಂಕರ ಪಿಳ್ಳೈ
ಗುಜರಾತಿ: ಉಮಾಶಂಕರ್ ಜೋಶಿ | ಪನ್ನಾಲಾಲ್ ಪಟೇಲ್ | ರಾಜೇಂದ್ರ ಕೇಶವ್‌ಲಾಲ್ ಷಾ
ಒರಿಯಾ: ಗೋಪಿನಾಥ್ ಮೊಹಾಂತಿ | ಎಸ್. ರೌತ್ ರಾಯ್ | ಸೀತಾಕಾಂತ್ ಮಹಾಪಾತ್ರ|ಪ್ರತಿಭಾ ರೇ
ಉರ್ದು: ಫಿರಾಕ್ ಗೋರಕ್ ಪುರಿ | ಕುರ್ರಾತುಲೈನ್ ಹೈದರ್ | ಅಲಿ ಸರ್ದಾರ್ ಜಾಫ್ರಿ
ತೆಲುಗು: ವಿಶ್ವನಾಥ ಸತ್ಯನಾರಾಯಣ | ಸಿ. ನಾರಾಯಣ ರೆಡ್ಡಿ | ರವುರಿ ಭಾರದ್ವಾಜ
ತಮಿಳು: ಪಿ.ವಿ. ಅಕಿಲಾಂಡಮ್ | ಡಿ. ಜಯಕಾಂತನ್
ಪಂಜಾಬಿ: ಅಮೃತ ಪ್ರೀತಮ್ | ಗುರ್ದಿಯಲ್ ಸಿಂಘ್
ಅಸ್ಸಾಮೀಸ್ ಬಿ.ಕೆ. ಭಟ್ಟಾಚಾರ್ಯ | ಇಂದಿರಾ ಗೋಸ್ವಾಮಿ
ಮರಾಠಿ: ವಿಷ್ಣು ಸಖಾರಾಮ್ ಖಾಂಡೇಕರ್ | ವಿಂದಾ ಕರಂದೀಕರ್ | ಕುಸುಮಾಗ್ರಜ್