ಆರತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಆರತಿ ಕನ್ನಡ ಸಿನೆಮಾ ನಟಿ, ಕಲಾವಿದೆ ಹಾಗೂ ನಿರ್ದೇಶಕರು. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅರತಿಯವರು "ಗೆಜ್ಜೆ ಪೂಜೆ" ಚಿತ್ರದಲ್ಲಿ ನಾಯಕ ಗಂಗಾಧರರವರ ತಂಗಿ ಪಾತ್ರವನ್ನು ಮಾಡುವ ಮೂಲಕ ಚಿತ್ರರಂಗ ಪ್ರವೇಶಿಸಿದರು.

ಇವರು ಇತ್ತೀಚೆಗೆ ಮಿಠಾಯಿ ಮನೆ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ.

[ಬದಲಾಯಿಸಿ] ನಟಿಸಿರುವ ಚಿತ್ರಗಳು

  1. ರಂಗನಾಯಕಿ, (೧೯೮೧)
  2. ಹೊಂಬಿಸಿಲು, (೧೯೭೮)
  3. ಉಪಾಸನೆ, (೧೯೭೪)
  4. ರಾಜ ನನ್ನ ರಾಜ, (೧೯೭೬)
  5. ಸಿಪಾಯಿರಾಮು, (೧೯೭೧)
  6. ನಾಗರಹಾವು, (೧೯೭೨)
  7. ಬಂಗಾರದ ಪಂಜರ, (೧೯೭೩)
  8. ಪ್ರೇಮದ ಕಾಣಿಕೆ, (೧೯೭೬)
  9. ಎಡಕಲ್ಲು ಗುಡ್ಡದ ಮೇಲೆ, (೧೯೭೩)
  10. ಸತಿ ಸಕ್ಕೂಬಾಯಿ, (೧೯೮೫)
  11. ಮುಳ್ಳಿನ ಗುಲಾಬಿ, (೧೯೮೨)
  12. ಶುಭಮಂಗಳ (೧೯೭೫)
  13. ವಸಂತ ಲಕ್ಷ್ಮಿ (೧೯೭೮)
  14. ಬಿಳಿ ಹೆಂಡ್ತಿ (೧೯೭೫)
  15. ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ (೧೯೭೧)
  16. ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಮಹಾತ್ಮೆ (೧೯೮೧)
  17. ಭಕ್ತ ಸಿರಿಯಾಳ (೧೯೮೦)
  18. ಹಾವು ಏಣಿಯಾಟ (೧೯೮೫)
  19. ತಿರುಗುಬಾಣ (೧೯೮೩)
  20. ಗಂಧರ್ವ ಗಿರಿ (೧೯೮೩)
  21. ಬಂಗಾರದ ಜಿಂಕೆ (೧೯೮೦)
  22. ಮುತ್ತೈದೆ ಭಾಗ್ಯ (೧೯೮೩)
  23. ಕಲಿಯುಗ (೧೯೮೪)
  24. ಜಿದ್ದು (೧೯೮೪)
  25. ಪೆದ್ದ ಗೆದ್ದ (೧೯೮೨)
  26. ಗಣೇಶ ಮಹಿಮೆ (೧೯೮೧)
  27. ಸುವರ್ಣ ಸೇತುವೆ (೧೯೮೨)
  28. ಲಕ್ಷ್ಮಿ ಕಟಾಕ್ಷ (೧೯೮೫)

ಹಾಗೂ ಇನ್ನೂ ಅನೇಕ...

ಇವುಗಳಲ್ಲಿ, ರಂಗನಾಯಕಿ, ಹೊಂಬಿಸಿಲು, ಉಪಾಸನೆ, ಶುಭಮಂಗಳ ಚಿತ್ರಗಳು ಆರತಿಯವರಿಗೆ ಭಾರೀ ಹೆಸರು ತಂದು ಕೊಟ್ಟವು. ೭೦/೮೦ ರ ದಶಕದಲ್ಲಿ, ಕನ್ನಡದ ಬಹುತೇಕ ಎಲ್ಲ ಪ್ರಮುಖ ನಟರೊಂದಿಗೂ ಆರತಿಯವರು ಅಭಿನಯಿಸಿದ್ದಾರೆ. ಕಸ್ತೂರಿ ನಿವಾಸ, ರಾಜಾ ನನ್ನ ರಾಜಾ, ಸಿಪಾಯಿ ರಾಮು, ಬಂಗಾರದ ಪಂಜರ, ಪ್ರೇಮದ ಕಾಣಿಕೆ ಮುಂತಾದ ಚಿತ್ರಗಳಲ್ಲಿ ಡಾ.ರಾಜ್ ಕುಮಾರ್ ಅವರೊಂದಿಗೆ ನಟಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಅನೇಕ ಅತ್ಯುತ್ತಮ ಚಿತ್ರಗಳಲ್ಲಿ ಮಿಂಚಿದ ಆರತಿಯವರು ನಂತರ ಸುಮಾರು ೧೮ ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದು, ಅಮೇರಿಕಾದಲ್ಲಿ ನೆಲೆಸಿದ್ದರು. ೮೦ ರ ದಶಕದಲ್ಲಿ ದೂರದರ್ಶನಕ್ಕ್ಕಾಗಿ ಧಾರಾವಾಹಿಯನ್ನೂ ನಿರ್ಮಿಸಿದ್ದರು. ಈಗ "ಮಿಠಾಯಿಮನೆ" ಚಿತ್ರದ ಮೂಲಕ ಆರತಿಯವರು ಕನ್ನದ ಚಿತ್ರರಂಗಕ್ಕೆ ಪುನರಾಗಮಿಸಿದ್ದಾರೆ, ಆದರೆ ನಟಿಯಾಗಿ ಅಲ್ಲ, ನಿರ್ದೇಶಕಿಯಾಗಿ. ಆರತಿಯವರ ಮಗಳು ಯಶಸ್ವಿನಿ ಅವರು ಬರೆದ ಕಥೆಯ ಆಧಾರದ ಮೇಲೆ ಈ ಚಿತ್ರ ನಿರ್ಮಾಣವಾಗುತ್ತಿದೆ.

[ಬದಲಾಯಿಸಿ] ನಿರ್ದೇಶಿಸಿರುವ ಚಿತ್ರಗಳು



Film reel and film.jpg

ಕನ್ನಡ ಸಿನೆಮಾ: ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕರು | ಕನ್ನಡ ಚಲನಚಿತ್ರ ನಾಯಕಿಯರು | ಕನ್ನಡ ಚಲನಚಿತ್ರ ನಿರ್ದೇಶಕರು | ಕನ್ನಡ ಚಲನಚಿತ್ರ ನಾಯಕರು | ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕಿಯರು |



"http://kn.wikipedia.org/w/index.php?title=ಆರತಿ&oldid=263713" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು