ಹೆಚ್.ಎಲ್.ಎನ್. ಸಿಂಹ
ವಿಕಿಪೀಡಿಯ ಇಂದ
ವೃತ್ತಿ ರಂಗಭೂಮಿ ಹಾಗೂ ಕನ್ನಡ ಚಲನಚಿತ್ರ ಕ್ಷೇತ್ರದ ಆರಂಭಿಕ ಹಂತದಲ್ಲಿ ತಮ್ಮ ಕೊಡುಗೆ ನೀಡಿದವರು ಹೆಚ್.ಎಲ್.ಎನ್.ಸಿಂಹ. (ಜನನ: ಜುಲೈ ೨೫,೧೯೦೬ - ಜುಲೈ ೨,೧೯೭೨). ಜನ್ಮಸ್ಥಳ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಾರಹಲ್ಳಿ ಗ್ರಾಮ.ತಂದೆ ನರಸಿಂಹಯ್ಯ,ತಾಯಿ ಲಕ್ಷ್ಮಮ್ಮ.ಬಾಲನಟನಾಗಿ ರಂಗಭೂಮಿ ಸೇರಿದರು.ತಾವೇ ಸ್ಥಾಪಿಸಿದ "ಸಿಂಹಾಸ್ ಸೆಲೆಕ್ಟೆಡ್ ಆರ್ಟಿಸ್ಟ್ಸ್"ಸಂಸ್ಥೆಯ ಮೂಲಕ ರಂಗ ಪರಿಕರಗಳನ್ನು ಸರಳೀಕರಿಸಿ,ಅಭಿನಯಕ್ಕೆ ಒತ್ತು ಕೊಟ್ಟು ರಂಗಭೂಮಿಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದರು. ರಂಗಭೂಮಿಯ ನಾಟಕಗಳಲ್ಲಿ ಸಿಂಹರವರು ತೋರಿಸಿದ ಅಪ್ರತಿಮ ನಟನಾಕೌಶಲ್ಯ ,ಅವರನ್ನು ಕನ್ನಡ ಚಿತ್ರರಂಗಕ್ಕೆ ಎಳೆದು ತಂದಿತು.
ಇವರ ನಿರ್ದೇಶನದ ಕೆಲವು ಚಿತ್ರಗಳು [ಬದಲಾಯಿಸಿ]
- ಗುಣಸಾಗರಿ
- ಬೇಡರ ಕಣ್ಣಪ್ಪ
- ಅಬ್ಬಾ ಆ ಹುಡುಗಿ - ಷೇಕ್ಸ್ಪಿಯರ್ನ 'ಟೇಮಿಂಗ್ ಆಫ್ ದ ಶ್ರೂ' ಕನ್ನಡ ರೂಪಾಂತರ.
- ತೇಜಸ್ವಿನಿ
- ಅನುಗ್ರಹ - ಕೊನೆಯ ಚಿತ್ರ.