ಬಿ. ಎಸ್. ಲಿಂಗದೇವರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿ.ಎಸ್.ಲಿಂಗದೇವರು
ಜನನ೧೯೬೭
ಉದ್ಯೋಗಸಿನಿಮಾ ನಿರ್ದೇಶಕರು, ಸಿನಿಮಾ ನಿರ್ಮಾಪಕರು

ಬಿ.ಎಸ್.ಲಿಂಗದೇವರು ಕನ್ನಡದ ಕಿರುತೆರೆ ಮತ್ತು ಚಲನಚಿತ್ರ ನಿರ್ದೇಶಕರು ಮತ್ತು ನಿರ್ಮಾಪಕರು. ಹಲವಾರು ಧಾರಾವಾಹಿಗಳನ್ನು ಮತ್ತು ಸಿನೆಮಾಗಳನ್ನು ಮಾಡಿದ್ದಾರೆ. ಉತ್ತಮ ಕಾದಂಬರಿಯಾಧಾರಿತ ಧಾರಾವಾಹಿಗಳನ್ನು ಮತ್ತು ಸಿನೆಮಾಗಳನ್ನು ಮಾಡುವ ಮೂಲಕ ಪ್ರಶಂಸೆಗೊಳಗಾಗಿದ್ದಾರೆ. ೧೯೬೭ರಲ್ಲಿ ಜನಿಸಿದ ಲಿಂಗದೇವರು ಈ ಕ್ಷೇತ್ರಕ್ಕೆ ಬಂದಾಗಿನಿಂದ ನಟ, ನಿರ್ದೇಶಕ, ನಿರ್ಮಾಪಕರಾಗಿ ೧೯೯೦ನೇ ಇಸವಿಯಿಂದ ಸಾವಿರಕ್ಕೂ ಹೆಚ್ಚಿನ ಎಪಿಸೋಡುಗಳನ್ನು ತಯಾರಿಸಿದ್ದಾರೆ.

ಟೆಲಿ ಸೀರಿಯಲ್ ಗಳು[ಬದಲಾಯಿಸಿ]

ಮೆಗಾಧಾರಾವಾಹಿ[ಬದಲಾಯಿಸಿ]

ಕಲ್ಯಾಣಿ

ಸಿನೆಮಾಗಳು[ಬದಲಾಯಿಸಿ]

ಇತರ[ಬದಲಾಯಿಸಿ]

  • ಶರಣವಾಹಿನಿ - ೧೨ನೇ ಶತಮಾನದ ಅಪ್ರಸಿದ್ಧ ವಚನಕಾರರ ಬಗೆಗಿನ ಸರಣಿ
  • ವಾರ್ತಾ ಇಲಾಖೆ, ರೇಷ್ಮೆ ಇಲಾಖೆ, Department of Agriculture Marketing, DSERT, Central Institute of Indian Languages, ಭಾರತ ಕೇಂದ್ರ ಸರ್ಕಾರಗಳಿಗಾಗಿ ಡಾಕ್ಯುಮೆಂಟರಿಗಳನ್ನು ತಯಾರಿಸಿದ್ದಾರೆ.

ನಿರ್ವಹಿಸಿದ ಜವಾಬ್ದಾರಿಗಳು[ಬದಲಾಯಿಸಿ]

  • ಜ್ಯೂರಿ ಸದಸ್ಯ, ೨೦೧೦-೧೧, Natioanal film award, Government Of India.(2011)
  • ಸಬ್ಸಿಡಿ ಸಿನೆಮಾ ಆಯ್ಕೆ ಸಮಿತಿ ಅಧ್ಯಕ್ಷ, ೨೦೧೧, Government of Karnataka (2013)
  • ಜ್ಯೂರಿ ಸದಸ್ಯ, ೨೦೧೩, Natioanal film award, Government Of India.(2014).
  • Worked as Technical Director for a project titled, Information support system in Science and Mathematics for Rural higher secondary schools. Project sponsored by “The office of the Principal Scientific Advisor, Government of India.

ಪ್ರದರ್ಶನಗಳು/ಪ್ರಶಸ್ತಿಗಳು[ಬದಲಾಯಿಸಿ]

  • ಮೌನಿ ಚಿತ್ರವು ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇಂಡಿಯನ್ ಪನೋರಾಮಾ ವಿಭಾಗಕ್ಕೆ ಹಾಗೂ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ. ಅತ್ಯುತ್ತಮ ಕತೆಗಾಗಿ ರಾಜ್ಯಪ್ರಶಸ್ತಿ ದೊರೆತಿದೆ. ಮುಖ್ಯ ಪಾತ್ರಕ್ಕಾಗಿ jury “special mention” ರಾಷ್ಟೀಯ ಪ್ರಶಸ್ತಿ ದೊರೆತಿದೆ.
  • ಕಾಡಬೆಳದಿಂಗಳು ಚಿತ್ರವು ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇಂಡಿಯನ್ ಪನೋರಾಮಾ ವಿಭಾಗಕ್ಕೆ ಹಾಗೂ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ. ಈ ಚಿತ್ರದ ಕತೆಗಾಗಿ ಜೋಗಿಯವರಿಗೆ ಅತ್ಯುತ್ತಮ ಕತೆಗಾರ ರಾಜ್ಯಪ್ರಶಸ್ತಿ ದೊರೆತಿದೆ.
  • ನಾನು ಅವನಲ್ಲ... ಅವಳು ಸಿನೆಮಾದಲ್ಲಿ ಅತ್ಯುತ್ತಮ ನಟನೆಗಾಗಿ ವಿಜಯ್ ಅವರಿಗೆ ರಾಷ್ಟ್ರಪ್ರಶಸ್ತಿ ಹಾಗೂ ಅತ್ಯುತ್ತಮ ಮೇಕಪ್ ಗಾಗಿ ರಾಷ್ಟ್ರಪ್ರಶಸ್ತಿ.