ಶ್ರೀನಾಥ್
ವಿಕಿಪೀಡಿಯ ಇಂದ
ಶ್ರೀನಾಥ್(೧೯೪೪-) - ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟರಲ್ಲಿ ಒಬ್ಬರು. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಶುಭಮಂಗಳ,ಮಾನಸ ಸರೋವರ ಮೊದಲಾದ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮಾನಸ ಸರೋವರ ನಿರ್ಮಿಸಿದ ಮಿತ್ರವೃಂದ ಮೂವೀಸ್ ನಿರ್ಮಾಪಕರಲ್ಲಿ ಒಬ್ಬರು. ಕನ್ನಡದ ಕಿರುತೆರೆ ವಾಹಿನಿ ಉದಯ ಟಿವಿಯ ನಿರ್ವಾಹಕರಲ್ಲೊಬ್ಬರಾಗಿದ್ದಾರೆ.ಲಗ್ನಪತ್ರಿಕೆ ಚಿತ್ರದ ಸಣ್ಣದೊಂದು ಪಾತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀನಾಥ್, ಚಿತ್ರರಂಗದಲ್ಲಿ ೪೦ ವರ್ಷಗಳನ್ನು ಪೂರೈಸಿದ್ದಾರೆ.
ಇವರು ಪ್ರಖ್ಯಾತ ನಟ ಸಿ.ಆರ್.ಸಿಂಹ ಅವರ ಸಹೊದರರು
[ಬದಲಾಯಿಸಿ] ಶ್ರೀನಾಥ್ ಅಭಿನಯದ ಕೆಲವು ಚಿತ್ರಗಳು
- ಶುಭಮಂಗಳ
- ಹಳ್ಳಿ ಹೈದ
- ಪಾಯಿಂಟ್ ಪರಿಮಳ
- ಮಾನಸ ಸರೋವರ
- ಧರಣಿಮಂಡಲ ಮಧ್ಯದೊಳಗೆ
- ಪಟ್ಟಣಕ್ಕೆ ಬಂದ ಪತ್ನಿಯರು
- ಶಿಕಾರಿ
- ಬದುಕು ಬಂಗಾರವಾಯಿತು
- ನಿನಗಾಗಿ ನಾನು
- ಕಿಲಾಡಿ ಜೋಡಿ
- ಎಸ್.ಪಿ.ಭಾರ್ಗವಿ
- ಹುಡುಗಾಟದ ಹುಡುಗಿ
- ಧರ್ಮಸೆರೆ
- ಬಂಗಾರದ ಮನುಷ್ಯ
- ಪಾವನಗಂಗಾ
ಪ್ರಸಕ್ತ ರಾಜಕೀಯದಲ್ಲು ಸಕ್ರಿಯರಾಗಿರುವ ಇವರು ಭಾರತೀಯ ಜನತಾ ಪಾರ್ಟಿಯ ವಿಧಾನ ಪರಿಷತ್ ಸದಸ್ಯರು.
|
|||||||