ಘಂಟಸಾಲ
ಜಗದೇಕವೀರನ ಕಥೆ - ಕನ್ನಡ ಚಲನಚಿತ್ರದ ಸುಮಧುರ ಗೀತೆ ಶಿವಶಂಕರಿ,ಶಿವಾನಂದಲಹರಿಯನ್ನು ಕೇಳಿ ಆನಂದಿಸದ ಕನ್ನಡಿಗನಿಲ್ಲ.ಈ ಗೀತೆಗೆ ಜೀವ ತುಂಬಿದ ಅಮರ ಗಾಯಕ ವೆಂಕಟರಾವ್ ಘಂಟಸಾಲ.ಘಂಟಸಾಲ ಅವರು ಕನ್ನಡ ಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕರಲ್ಲೊಬ್ಬರು.
ಪರಿವಿಡಿ |
ಹಿನ್ನೆಲೆ [ಬದಲಾಯಿಸಿ]
ಘಂಟಸಾಲ ಜನಿಸಿದ್ದು ಡಿಸೆಂಬರ್ ೪,೧೯೨೨ರಲ್ಲಿ ,ಆಂಧ್ರಪ್ರದೇಶದ ಕೃಷ್ಣಾಜಿಲ್ಲೆಯ ಚೌಟಿಪಾಲ್ ಎಂಬ ಗ್ರಾಮದಲ್ಲಿ.ತಂದೆ ಸೂರ್ಯನಾರಾಯಣರಾವ್ ಕೂಡಾ ಪ್ರಸಿದ್ಧ ಗಾಯಕರು. ತಮ್ಮ ೧೨ನೇ ವಯಸ್ಸಿಗೇ ತಂದೆಯನ್ನು ಕಳೆದುಕೊಂಡ ಘಂಟಸಾಲ ಬೆಳೆದಿದ್ದು ಚಿಕ್ಕಪ್ಪ ರಾಮಯ್ಯನ ಆಶ್ರಯದಲ್ಲಿ.ಸಂಗೀತದ ಆಸಕ್ತಿ ಇವರನ್ನು ಕಲಿಕೆಗೆ ಅವಕಾಶವಿಲ್ಲದ ಚಿಕ್ಕಪ್ಪನ ಮನೆಯಿಂದ ವಿಜಯನಗರಿಗೆ ಓಡಿಹೋಗುವಂತೆ ಪ್ರೇರೇಪಿಸಿತು.ಅಲ್ಲಿ ಸಂಗೀತಶಾಲೆ ಸೇರಿ ,ಕಠಿಣ ಪರಿಶ್ರಮ ನಡೆಸಿ,’ಸಂಗೀತ ವಿದ್ವಾನ್’ ಪದವಿ ಗಳಿಸಿದರು.ಆ ವೇಳೆಗೆ ದೇಶಾದ್ಯಂತ ಹಬ್ಬಿದ್ದ "ಕ್ವಿಟ್ ಇಂಡಿಯಾ ಚಳಿವಳಿ"ಗೆ ಸೇರಿ ,೧೮ ತಿಂಗಳ ಸೆರೆಮನೆವಾಸ ಅನುಭವಿಸಿದರು.ಸೆರೆಮನೆಯಲ್ಲಿ ಪರಿಚಿತರಾದ ಸಮುದ್ರಾಲಾರಿಂದ ಚಿತ್ರರಂಗದತ್ತ ಒಲವು ಬೆಳೆಯಿತು.ಆಕಾಶವಾಣಿಯಲ್ಲಿ ಹಾಡುವ ಅವಕಾಶ ಸಿಕ್ಕಿತಾದರೂ,ಹೆಚ್‌ಎಮ್‌ವಿಕಂಪೆನಿ ಅವರ ಧ್ವನಿ ಸರಿ ಇಲ್ಲವೆಂದು ತಿರಸ್ಕರಿಸಿತು.ನಂತರ ಘಂಟಸಾಲ ಅವರು ಪ್ರಭಾತ್ ಫಿಲಂಸ್‌ನ ತೆಲುಗು ಚಿತ್ರ ’ಸೀತಾರಾಮ ಜನನಂ’ ಮೂಲಕ ಹಿನ್ನೆಲೆ ಗಾಯಕರಾಗಿ ಚಿತ್ರರಂಗಕ್ಕೆ ಪದಾರ್ಪಣ ಮಾಡಿದರು.ಭಾಗ್ಯಚಕ್ರ ಚಿತ್ರದ "ದೇವಾ ನಿನ್ನ ರಾಜ್ಯದ ನ್ಯಾಯವಿದೇನಾ" ಇವರು ಹಾಡಿದ ಮೊದಲ ಕನ್ನಡ ಚಿತ್ರಗೀತೆ.
ಘಂಟಸಾಲ ಸಂಗೀತ ನಿರ್ದೇಶನದ ಚಲನಚಿತ್ರಗಳು [ಬದಲಾಯಿಸಿ]
ಇವರು ಹಲವಾರು ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ.
ಘಂಟಸಾಲ ಅವರು ಹಾಡಿರುವ ಕೆಲವು ಚಲನಚಿತ್ರಗೀತೆಗಳು [ಬದಲಾಯಿಸಿ]
- ಸ್ವಾಭಿಮಾನದ ನಲ್ಲೆ, ಸಾಕು ಸಂಯಮ ಬಲ್ಲೆ - ವೀರಕೇಸರಿ
- ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲ್ಯಾವುದೋ - ಸತ್ಯ ಹರಿಶ್ಚಂದ್ರ
- ಮೆಲ್ಲುಸಿರೇ ಸವಿ ಗಾನ ಎದೆ ಝಲ್ಲನೆ ಹೂವಿನ ಬಾಣ - ವೀರಕೇಸರಿ
- ಬಾಳೊಂದು ನಂದನ, ಅನುರಾಗ ಬಂಧನ - ಜೇನುಗೂಡು
- ಈ ದೇಹದಿಂದ ದೂರವಾದೆ ಏಕೆ ಆತ್ಮವೇ - ಓಹಿಲೇಶ್ವರ
- ಯಾರಿಗೆ ಯಾರುಂಟು ಎರವಿನ ಸಂಸಾರ -ಗಾಳಿಗೋಪುರ
- ಏನೊ ಎಂತೋ ಝಂ ಎಂದಿತು ಮನವು -ಅಮರಶಿಲ್ಪಿ ಜಕಣಾಚಾರಿ
- ಆಹಾ ನನ್ನ ಮದುವೆಯಂತೆ, ಓಹೋ ನನ್ನ ಮದುವೆಯಂತೆ -ಮಾಯಾಬಜಾರ್
- ಹನುಮನ ಪ್ರಾಣ... - ಶ್ರೀ ರಾಮಾಂಜನೇಯ ಯುದ್ಧ
ಕನ್ನಡದಲ್ಲಿ ಒಟ್ಟಾರೆ ೬೦ ಚಿತ್ರಗೀತೆಗಳನ್ನು ಹಾಡಿದ್ದಾರೆ.ಕನ್ನಡ,ತೆಲುಗು ಮುಂತಾದ -೮ ಭಾಷೆಗಳಲ್ಲಿ ಒಟ್ಟು ೧೦,೦೦೦ ಚಿತ್ರಗೀತೆಗಳನ್ನು ಹಾಡಿ,೮೭ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.ವಿದೇಶಗಳಲ್ಲೂ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.ಭಕ್ತಿಗೀತೆಗಳಿಗೂ ಪ್ರಸಿದ್ಧರಾದ ಇವರ ಭಗವದ್ಗೀತೆ ಮತ್ತು ವೆಂಕಟೇಶ್ವರ ಸುಪ್ರಭಾತಗಳು ಇಂದಿಗೂ ಜನಪ್ರಿಯವಾಗಿವೆ."ನಮನ"
ಪ್ರಶಸ್ತಿ /ಪುರಸ್ಕಾರ [ಬದಲಾಯಿಸಿ]
ಘಂಟಸಾಲ ಅವರು ಫೆಬ್ರುವರಿ ೧೧ ,೧೯೭೪ರಲ್ಲಿ ಮರಣ ಹೊಂದಿದರು.
ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು [ಬದಲಾಯಿಸಿ]
ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ | ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್-ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ.ಎಂ.ಕೀರವಾಣಿ | ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥನ್ | ಕೆ.ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ವಿ.ಹರಿ ಕೃಷ್ಣ | ಎಂ.ವೆಂಕಟರಾಜು ಉಪಾಸನ ಮೊಹನ
