ಅಂಬರೀಷ್ ಮತ್ತು ಪತ್ನಿ ಕನ್ನಡ ನಟಿ ಸುಮಲತಾ
ಅಂಬರೀಶ್ -(ಮೇ ೨೯ ,೧೯೫೨) [೧]- ಕನ್ನಡ ಚಿತ್ರರಂಗದ ಪ್ರಮುಖ ಚಲನಚಿತ್ರ ನಟ.(ಅಂಬರೀಶ್ ರವರ ಮೊದಲ ಹೆಸರು ಮಳವಳ್ಳಿ ಹುಚ್ಚೆ ಗೌಡ ಅಮರನಾಥ್. ) ರೆಬೆಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಇವರು, ಕನ್ನಡ ಚಲನಚಿತ್ರ ರಂಗಕ್ಕೆ ೧೯೭೩ರಲ್ಲಿ, ಪುಟ್ಟಣ್ಣ ಕಣಗಾಲ್ ನಿರ್ದೇಶನದ "ನಾಗರಹಾವು" ಚಿತ್ರದ (ಜಲೀಲನ ಪಾತ್ರ) ಮೂಲಕ ಪಾದಾರ್ಪಣೆ ಮಾಡಿದರು.
ಜೋಸೈಮನ್ ನಿರ್ದೇಶನದಲ್ಲಿ, ೧೯೮೯ರಲ್ಲಿ ಬಿಡುಗಡೆಯಾದ ಹಾಂಕಾಂಗ್‍ನಲ್ಲಿ ಏಜೆಂಟ್ ಅಮರ್ ಇವರ ನೂರನೇ ಚಿತ್ರ. ಇವರು ಇಲ್ಲಿಯವರೆಗೆ ಸುಮಾರು ೨೦೦ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕದ ಪ್ರಖ್ಯಾತ ಪಿಟೀಲುವಾದಕರಾದ ಟಿ. ಚೌಡಯ್ಯನವರ ಮೊಮ್ಮಗನಾದ ಅಂಬರೀಶ್, ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಸಂಸತ್ ಸದಸ್ಯರಾಗಿದ್ದರು. ಪ್ರಸ್ತುತ ೨೦೧೩ರಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿರುವ ಅವರು, ಶ್ರೀ ಸಿದ್ಧರಾಮಯ್ಯನವರ ಸಂಪುಟದಲ್ಲಿ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಬರೀಶ್ ಅವರ ಪತ್ನಿ ಕನ್ನಡ ಚಿತ್ರನಟಿ ಸುಮಲತಾ. ಪುತ್ರನ ಹೆಸರು ಅಭಿಷೇಕ್ ಗೌಡ.
ಅಂಬರೀಶ್ ನಟಿಸಿರುವ ಚಿತ್ರಗಳು [ಬದಲಾಯಿಸಿ]