ಕರ್ನಾಟಕ ವಿಶ್ವವಿದ್ಯಾಲಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಕರ್ನಾಟಕ ವಿಶ್ವವಿದ್ಯಾಲಯ
ಕರ್ನಾಟಕ ವಿಶ್ವವಿದ್ಯಾಲಯ
ಕರ್ನಾಟಕ ವಿಶ್ವವಿದ್ಯಾಲಯ
ಸ್ಥಾಪನೆ ೧೯೫೬
ಪ್ರಕಾರ ಸಾರ್ವಜನಿಕ
ಕುಲಪತಿಗಳು '-'
ಉಪಕುಲಪತಿಗಳು ಡಾ. ಎಚ್. ಬಿ. ವಾಲೀಕಾರ
ಸಿಬ್ಬಂದಿ '-'
ವಿದ್ಯಾರ್ಥಿಗಳ ಸಂಖ್ಯೆ '-'
ಪದವಿ ಶಿಕ್ಷಣ '-'
ಸ್ನಾತಕೋತ್ತರ ಶಿಕ್ಷಣ '-'
ಡಾಕ್ಟರೇಟ್ ಪದವಿ '-'
ಇತರೆ '-'
ಆವರಣ ಗ್ರಾಮಾಂತರ
ಅಂತರ್ಜಾಲ ತಾಣ www.kud.ernet.in
KarnatakaUniversityLogo.jpg
'ಅರಿವೇ ಗುರು'


ಕರ್ನಾಟಕ ವಿಶ್ವವಿದ್ಯಾಲಯ - ಕರ್ನಾಟಕ ಹಾಗು ಭಾರತದಲ್ಲಿನ ಪ್ರಮುಖ ವಿಶ್ವವಿದ್ಯಾಲಯಗಳಲ್ಲೊಂದು. ಏಕೀಕೃತ ಕರ್ನಾಟಕದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಮೈಸೂರು ವಿಶ್ವವಿದ್ಯಾನಿಲಯದ ನಂತರದ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾಗಿದೆ.

ಪರಿವಿಡಿ

ಸ್ಥಾಪನೆ [ಬದಲಾಯಿಸಿ]

ಕರ್ನಾಟಕ ಏಕೀಕರಣ ೧೯೫೬ನೆಯ ಇಸವಿಯಲ್ಲಿ ಆಯಿತು. ಆವರೆಗೂ ಆಗಿನ ಮುಂಬಯಿ ಪ್ರಾಂತದಲ್ಲಿದ್ದ ಕನ್ನಡ ಪ್ರದೇಶಗಳನ್ನು ಮುಂಬಯಿ ಕರ್ನಾಟಕ ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶದಲ್ಲಿದ್ದ ಕಾಲೇಜುಗಳ ಅವಶ್ಯಕತೆಯನ್ನು ಗುರುತಿಸಿ ೧೯೪೯ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು. ಸ್ಥಾಪನೆಯಾದಾಗ ಈ ವಿಶ್ವವಿದ್ಯಾಲಯ ಇದ್ದದ್ದು ಮುಂಬಯಿಯಲ್ಲಿ! ೧೯೫೦ರಲ್ಲಿ ವಿಶ್ವವಿದ್ಯಾಲಯವನ್ನು ಧಾರವಾಡಕ್ಕೆ ಸ್ಥಳಾಂತರಿಸಲಾಯಿತು ಹಾಗು ೧೯೫೦ ಮಾರ್ಚ್ ತಿಂಗಳಲ್ಲಿ ಔಪಚಾರಿಕವಾಗಿ ಉದ್ಘಾಟಿಸಲಾಯಿತು.

ಉಪಕುಲಪತಿಗಳು [ಬದಲಾಯಿಸಿ]

ರಾಮದುರ್ಗ ಮೂಲದ ಶ್ರೀ ಆರ್.ಎ. ಜಹಾಗೀರದಾರಇವರು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದವರು, ಕರ್ನಾಟಕ ವಿಶ್ವವಿದ್ಯಾಲಯದ ಪ್ರಥಮ ಉಪಕುಲಪತಿಗಳಾದರು. ೧೯೫೪ ರಿಂದ ೧೯೬೭ರವರೆಗೆ ಶ್ರೀ ಡಿ.ಸಿ.ಪಾವಟೆ ಉಪಕುಲಪತಿಗಳಾಗಿದ್ದರು. ಈ ಅವಧಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ವಿಶೇಷ ಪ್ರಗತಿಯನ್ನು ಸಾಧಿಸಿತೆನ್ನಲಾಗಿದೆ.

ಅಂಕಿ ಅಂಶಗಳು [ಬದಲಾಯಿಸಿ]

  • ಸ್ನಾತಕೋತ್ತರ ವಿಭಾಗಗಳು : ೪೮
  • ಸ್ನಾತಕೋತ್ತರ ಅಧ್ಯಾಪಕರು : ೨೬೪
  • ಪದವಿ ತರಗತಿಗಳ ಅಧ್ಯಾಪಕರು : ೪೨೫೨
  • ಸ್ನಾತಕೋತ್ತರ ವಿದ್ಯಾರ್ಥಿಗಳು : ೪೫೩೧
  • ಪದವಿಪೂರ್ವ ವಿದ್ಯಾರ್ಥಿಗಳು : ೧,೦೧,೧೪೨
ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಕಚೇರಿ

ಇವನ್ನೂ ನೋಡಿ [ಬದಲಾಯಿಸಿ]