ಕನ್ನಡ ವಿಶ್ವವಿದ್ಯಾಲಯ
| ಕನ್ನಡ ವಿಶ್ವವಿದ್ಯಾಲಯ | |
|---|---|
ಕನ್ನಡ ವಿಶ್ವವಿದ್ಯಾಲಯ |
|
| ಸ್ಥಾಪನೆ | ೧೯೯೧ |
| ಪ್ರಕಾರ | ಸಾರ್ವಜನಿಕ |
| ಕುಲಪತಿಗಳು | ಡಾ ಎ.ಮುರಿಗೆಪ್ಪ |
| ಉಪಕುಲಪತಿಗಳು | '-' |
| ಸಿಬ್ಬಂದಿ | '-' |
| ವಿದ್ಯಾರ್ಥಿಗಳ ಸಂಖ್ಯೆ | '-' |
| ಪದವಿ ಶಿಕ್ಷಣ | '-' |
| ಸ್ನಾತಕೋತ್ತರ ಶಿಕ್ಷಣ | '-' |
| ಡಾಕ್ಟರೇಟ್ ಪದವಿ | '-' |
| ಇತರೆ | '-' |
| ಆವರಣ | ಗ್ರಾಮಾಂತರ |
| ಅಂತರ್ಜಾಲ ತಾಣ | www.kannadauniversity.org |
| 'ಮಾತೆಂಬುದು ಜ್ಯೋತಿರ್ಲಿಂ ಗ' | |
ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಸ್ಥಾಪಿತವಾಗಿರುವ ವಿಶ್ವವಿದ್ಯಾನಿಲಯ. ಚಂದ್ರಶೇಖರ ಕಂಬಾರರು ಇದರ ಮೊದಲ ಕುಲಪತಿಗಳಾಗಿದ್ದರು. ಪ್ರಸ್ತುತ ಡಾ ಎ.ಮುರಿಗೆಪ್ಪ ಕುಲಪತಿಯಾಗಿದ್ದಾರೆ. ಕರ್ನಾಟಕ ಹಾಗು ಕನ್ನಡದ ಬಗೆಗೆ ಸಂಶೋಧನೆ ನಡೆಸಲು ಈ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ. ಎಲ್ಲ ರೀತಿಯ ಅರಿವು ಕನ್ನಡದಲ್ಲಿ ಸಿಗುವಂತಾಗಬೇಕು. ಹಾಗೆಯೇ ಕನ್ನಡ ಮತ್ತು ಕರ್ನಾಟಕದ ಬಗೆಗೆ ಬೇರೆ ಭಾಷೆಗಳಲ್ಲಿ ಅರಿವು ದೊರಕುವಂತೆ ಮಾಡುವುದು ಈ ವಿಶ್ವವಿದ್ಯಾಲಯದ ಉದ್ದೇಶ. ವಿಶ್ವವಿದ್ಫಾಲಯದ ಮೂಲ ಕೇಂದ್ರವು ಹಂಪಿಗೆ ೫ ಕಿ.ಮೀ. ದೂರದಲ್ಲಿ ಹೊಸಪೇಟೆಯಿಂದ ೧೬ ಕಿ.ಮೀ. ದೂರದಲ್ಲಿ ವಿದ್ಯಾರಣ್ಯ ಎಂಬ ೮೦೦ ಎಕರೆಗಳ ಆವರಣದಲ್ಲಿದೆ. ಇದಲ್ಲದೆ ಬಾದಾಮಿ, ಕುಪ್ಪಳಿ, ಕೂಡಲಸಂಗಮ ಗಳಲ್ಲಿ ಉಪಗ್ರಹ ಕೇಂದ್ರಗಳನ್ನು ಹೊಂದಿದೆ.
ಈ ವಿಶ್ವವಿದ್ಯಾಲಯದಲ್ಲಿ ವಿದ್ಯೆಯನ್ನು ಕಲಿಸುವುದಕ್ಕಿಂತ ಸಂಶೋಧನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಂಶೋಧನೆಯ ಫಲಿತಗಳನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸುತ್ತದೆ. ಇದುವರೆವಿಗೂ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿರುವ ಪುಸ್ತಕಗಳ ಸಂಖ್ಯೆ ಸಾವಿರವನ್ನು ದಾಟಿದೆ. ಈ ವಿಶ್ವವಿದ್ಯಾಲಯದ ಭಾಷಾಂತರ ಕೇಂದ್ರವು ಕನ್ನಡದ ಶ್ರೇಷ್ಟ ಸಾಹಿತ್ಯ ಪಠ್ಯಗಳನ್ನು ಇಂಗ್ಲಿಶ್ ಭಾಷೆಗೆ ಅನುವಾದಿಸಿ ಪ್ರಕಟಿಸುತ್ತಿದೆ. ಇದುವರೆವಿಗೂ ಮೂರು ಸಂಪುಟಗಳು ಹೊರಬಂದಿವೆ.
ಈ ವಿಶ್ವವಿದ್ಯಾಲಯದ ಸ್ವರೂಪ ಈ ವಿಶ್ವವಿದ್ಯಾಲಯದಲ್ಲಿ ಮೂರು ಅಂಗಗಳಿವೆ: ೧. ಅಧ್ಯಯನಾಂಗ ೨. ಆಡಳಿತಾಂಗ ೩. ಪ್ರಸಾರಾಂಗ
ವಿಶ್ವವಿದ್ಯಾಲಯದಲ್ಲಿ ಮೂರು ನಿಕಾಯಗಳಿವೆ: ೧. ಭಾಷಾ ನಿಕಾಯ, ೨. ಸಮಾಜ ವಿಜ್ಞಾನ ನಿಕಾಯ, ೩. ಲಲಿತಕಲಾ ನಿಕಾಯ
ಭಾಷಾ ನಿಕಾಯದಲ್ಲಿರುವ ವಿಭಾಗಗಳು: ೧. ಭಾಷಾಂತರ ಅಧ್ಯಯನ ವಿಭಾಗ ೨. ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ ೩. ಕನ್ನಡ ಭಾಷಾಧ್ಯಯನ ವಿಭಾಗ ೪. ದ್ರಾವಿಡ ಸಂಸ್ಕೃತಿ ವಿಭಾಗ ೫. ಹಸ್ತಪ್ರತಿ ವಿಭಾಗ ೬. ಮಹಿಳಾ ಅಧ್ಯಯನ ವಿಭಾಗ
ಸಮಾಜ ವಿಜ್ಞಾನ ನಿಕಾಯದಲ್ಲಿರುವ ವಿಭಾಗಗಳು: ೧. ಪುರಾತತ್ವ ಮತ್ತು ಪ್ರಾಚೀನ ಇತಿಹಾಸ ವಿಭಾಗ ೨. ಚರಿತ್ರೆ ವಿಭಾಗ ೩. ಜಾನಪದ ಅಧ್ಯಯನ ವಿಭಾಗ ೪. ಬುಡಕಟ್ಟು ಅಧ್ಯಯನ ವಿಭಾಗ ೫. ಅಭಿವೃದ್ಧಿ ಅಧ್ಯಯನ್ ವಿಭಾಗ
ಲಲಿತಕಲಾ ನಿಕಾಯದಲ್ಲಿರುವ ವಿಭಾಗಗಳು: ೧. ಸಂಗೀತ ವಿಭಾಗ ೨. ದೃಶ್ಯಕಲಾವಿಭಾಗ ೩. ಶಿಲ್ಪಕಲಾ ವಿಭಾಗ
ಇದಲ್ಲದೆ ಈ ಕೆಳಗಿನ ಅಧ್ಯಯನ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ: ೧. ಕುವೆಂಪು ಕನ್ನಡ ಅಧ್ಯಯನ ಕೇಂದ್ರ, ಕುಪ್ಪಳಿ ೨. ಮಹಿಳಾ ಅಧ್ಯಯನ ಕೇಂದ್ರ, ಹಂಪಿ ೩. ಭಾಷಾಂತರ ಕೇಂದ್ರ, ಹಂಪಿ ೪. ಅಂತರರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ, ಕೂಡಲ ಸಂಗಮ {ಚುಟುಕು}}