ಹಾವೇರಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಹಾವೇರಿ ಕರ್ನಾಟಕದ ಒಂದು ಜಿಲ್ಲೆ. ೧೯೯೭ ರಲ್ಲಿ ಧಾರವಾಡ ದಕ್ಷಿಣದ ಏಳು ತಾಲ್ಲೂಕುಗಳನ್ನು ಪತ್ಯೇಕಿಸಿ ಹಾವೇರಿ ಜಿಲ್ಲೆಯನ್ನು ಸ್ಥಾಪಿಸಲಾಯಿತು.ಜಿಲ್ಲೆಯ ವಿಸ್ತೀರ್ಣ ೪,೮೨೩ ಚದರ ಕಿ,ಮೀ ಗಳಾಗಿದ್ದು, ಜಿಲ್ಲೆಯ ಜನಸಂಖ್ಯೆ ೨೦೧೧ರ ಜನಗಣತಿಯಂತೆ ೧೫,೯೭,೬೬೮ ಆಗಿದೆ. ಇದರಲ್ಲಿ ಪುರುಷರು ೮,೧೯,೧೨೮ ಮತ್ತು ಮಹಿಳೆಯರು ೭,೭೮,೫೪೦ ಆಗಿರುತ್ತದೆ. ಚದರ ಕಿ.ಮೀಗೆ ೨೯೮ ಜನರ ಸಾಂದ್ರತೆ ಇದೆ. ಲಿಂಗಾನುಪಾತ ಪ್ರತೀ ೧೦೦೦ ಪುರುಷರಿಗೆ ೯೫೦ ಸ್ತ್ರೀಯರು ಇದ್ದಾರೆ.

ಕೃಷಿ ಪ್ರಧಾನವಾದ ಜಿಲ್ಲೆ. ಇದು ಕರ್ನಾಟಕ ನಕಾಶೆಯಲ್ಲಿ ಮದ್ಯಭಾಗದಲ್ಲಿದೆ. ವರದಾ ನದಿ ಹಾಗೂ ತುಂಗಭದ್ರ ನದಿಯು ಪ್ರಮುಖವಾಗಿ ಕೃ‌‌ಷಿ ಚಟುವಟಿಕೆಗಳಿಗೆ ಪ್ರಮುಖ ಪಾತ್ರವನ್ನು ವಹಿತ್ತಿವೆ. ಹಾವೇರಿ ಐತಿಹಾಸಿಕವಾಗಿ ತನ್ನದೆಯಾದ ಕೊಡುಗೆಯನ್ನು ನೀಡಿದ ಜಿಲ್ಲೆ. ಬ್ಯಾಡಗಿಯ ಮೆಣಸಿನಕಾಯಿ ಲೋಕಪ್ರಸಿದ್ಧ.

ತಾಲ್ಲೂಕುಗಳು[ಬದಲಾಯಿಸಿ]

ಬ್ಯಾಡಗಿ

ಹಾನಗಲ್

ಹಾವೇರಿ ಇದು ಶಿಶುನಾಳ ಶರೀಪರು ಐಕ್ಯವಾಗಿರುವ ಜಿಲ್ಲೆ

ಹಿರೇಕೇರೂರು

ರಾಣೇಬೆನ್ನೂರು

ಸವಣೂರ

ಶಿಗ್ಗಾಂವ

ಪ್ರವಾಸೀ ತಾಣಗಳು[ಬದಲಾಯಿಸಿ]

ಸವಣೂರು: ಇದು ನವಾಬರ ಸಂಸ್ಥಾನ, ಸೂಫಿ ಶರಣರ ಭಾವೈಕ್ಯದ ನೆಲೆಬೀಡು, ಸತ್ಯಬೋಧ ಮಹಾಸ್ವಾಮಿಗಳವರ ಕರ್ಮಭೂಮಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿನಾಯಕ ಕೃಷ್ಣ ಗೋಕಾಕರ ಜನ್ಮ ಸ್ಥಳ

ವನ್ಯಜೀವಿ

ರಾಣಿಬೇನ್ನೂರು, ಕೃಷ್ಣಮೃಗ ಅಭಯಾರಣ್ಯ

ಚರಿತ್ರೆ ಮತ್ತು ಧರ್ಮ


ಪುರಸಿದ್ಧೇಶ್ವರ ದೇವಸ್ಥಾನ, ಹಾವೇರಿ (ಪುರಾತನ ಕಲ್ಲಿನ ಶಿಲ್ಪಕಲೆ)

ಶ್ರೀ ಹುಕ್ಕೇರಿ ಮಠ, ಹಾವೇರಿ

ಶ್ರೀ ಹುಕ್ಕೇರಿ ಮಠ, ಪ್ರೊಡ ಶಾಲೆ ಹಾವೇರಿ ಬಹಳ ಪ್ರಸಿದ್ದವಾಗಿದೆ. ಅಬಲೂರು , ಸರ್ವಜ್ಞನ ಜನ್ಮಸ್ಥಳ

ಸಾತೇನಹಳ್ಳಿ ಶಾಂತೇಶ (ಹನುಮಂತ ದೇವರು) ದೇವಸ್ಥಾನ

ಕಾಗೀನೆಲೆ , ಕನಕದಾಸರ ಜನ್ಮಸ್ಥಳ

ಹಾವನೂರಿನ ದ್ಯಾಮವ್ವನ ದೆವಸ್ತಾನ.(ಹಾವೆರಿ ತಾಲುಕು).

ಕದರಮಂಡಲಗಿಯ ಕಾಂತೇಶ(ಹನುಮಂತ ದೇವರು) ದೇವಸ್ಥಾನ

ದೇವರಗುಡ್ಡ (ಮಾಲತೇಶ ಸ್ವಾಮಿ ದೇವಸ್ಥಾನ)

ಗಂಗೀಭಾವಿ (ಜಾನ್ಹವಿ ಋಷಿಗಳು ಸ್ಥಾಪಿಸಿದ ರಾಮಲಿಂಗೇಶ್ವರ ದೇವಸ್ಥಾನ ಶಿಗ್ಗಾಂವದ ಹತ್ತಿರ)

ಭೈರನಪಾದ (ಭೈರವೇಶ್ವರ ದೇವಸ್ಥಾನ)

ಶ್ರೀ ಕ್ಷೇತ್ರ ಗುಡ್ಡದಮಲ್ಲಾಪೂರ,ಶ್ರೀ ಮುಕಪ್ಪ ಮಹಾಸ್ವಾಮಿಗಳ ಹಾಗೂ ಕತೃ,ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿದ್ಯ.

ಶ್ರೀ ಗುಬ್ಬಿನಂಜುಂಡೇಶ್ವರ ಮಠ {ಹೊಂಕಣ} [ಶ್ರೀ ಪರಮ ಪೂಜ್ಯ ಪಾವನ ಗುಬ್ಬಿನಂಜುಂಡೇಶ್ವರ ಮಹಾಸ್ವಾಮಿಗಳ ಗದ್ದುಗೆ]

ಪ್ರಮುಖ ವ್ಯಕ್ತಿಗಳು[ಬದಲಾಯಿಸಿ]

ಸರ್ವಜ್ಞ


ಶಿಶುನಾಳ ಶರೀಫ

ಸು. ರಂ. ಎಕ್ಕುಂಡಿ

ಗುದ್ಲೆಪ್ಪ ಹಳ್ಳಿಕೇರಿ

ಕಾದಂಬರಿಕಾರ ಗಳಗನಾಥರು

ಮೈಲರ ಮಹದೆವಪ್ಪ ಸಮದ್ ಸಾಹೇಬ ಜ್ಞಾನಪೀಠ ಪುರಸ್ಕೃತ ವಿನಾಯಕ ಕೃಷ್ಣ ಗೋಕಾಕ ನಾಟಕ ರತ್ನಾಕರ ಎನ್. ಎಸ್. ಜೋಷಿ ಚಂದ್ರಶೇಖರ ಪಾಟೀಲ(ಚಂಪಾ) ಗೋವಿಂದಮೂರ್ತಿ ದೇಸಾಯಿ ಪಾಟೀಲ ಪುಟ್ಟಪ್ಪ ಮಹಾದೇವ ಬಣಕಾರ ಸತೀಶ ಕುಲಕರ್ಣಿ ನಾಟಕ ರತ್ನಾಕರ ಎನ್.ಎಸ್. ಜೋಷಿ ಹಜರೇಸಾಬ ಬಿ. ನದಾಫ ಗಿರಿಜಾದೇವಿ ದುರ್ಗದಮಠ ಫಕ್ಕಣ್ಣ ಅರಗೋಳ

ಇದನ್ನೂ ನೋಡಿ[ಬದಲಾಯಿಸಿ]


ರಮಾನಂದ ಮನ್ನಂಗಿ, ಜಂಗಮನಕೊಪ್ಪ (ಸ್ವತಂತ್ರ ಹೋರಾಟಗಾರರು ಮತ್ತು ಗಾಂಧೀವಾದಿಗಳು)


Karnataka-icon.jpg
ಕರ್ನಾಟಕದ ಜಿಲ್ಲೆಗಳು
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿಕ್ಕಬಳ್ಳಾಪುರ | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ಯಾದಗಿರಿ | ರಾಯಚೂರು | ರಾಮನಗರ | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ

ಕರ್ನಾಟಕದ ಕಬೀರ: ಸಂತ ಶ್ರೀ ಶಿಶುವಿನಹಾಳ ಶರೀಫ಼ ಸಾಹೇಬರು ಹಾವೇರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಜನಿಸಿದರು.

"http://kn.wikipedia.org/w/index.php?title=ಹಾವೇರಿ&oldid=522644" ಇಂದ ಪಡೆಯಲ್ಪಟ್ಟಿದೆ