ಕೊಪ್ಪಳ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಕೊಪ್ಪಳ
ಕೊಪ್ಪಳ
kn
ಪಟ್ಟಣ

Lua error in Module:Location_map at line 301: No value was provided for longitude.Location in Karnataka, India

Coordinates: 15°21′N 76°09′E / 15.35°N 76.15°E / 15.35; 76.15Coordinates: 15°21′N 76°09′E / 15.35°N 76.15°E / 15.35; 76.15
Country  ಭಾರತ
ರಾಜ್ಯ ಕರ್ನಾಟಕ
ಪ್ರಾಂತ್ಯ ಬಯಲುಸೀಮೆ
ಜಿಲ್ಲೆ ಕೊಪ್ಪಳ ಜಿಲ್ಲೆ
Area
 • Total ೨೮.೭೮
Elevation ೫೨೯
Population (2001)
 • Total ೫೬,೧೬೦
 • Density ೧,೯೫೧.೩೬
ಭಾಷೆ
 • ಅಧಿಕೃತ ಕನ್ನಡ
Time zone IST (UTC+5:30)
PIN 583 231
Telephone code 08539
Vehicle registration KA-37
Website www.koppalcity.gov.in


ಕೊಪ್ಪಳ ಜಿಲ್ಲೆ ೧-೪-೧೯೯೮ ರಂದು ಆರಂಭವಾದ ಕರ್ನಾಟಕ ರಾಜ್ಯದ ಹೊಸ ಜಿಲ್ಲೆಗಳಲ್ಲಿ ಒಂದಾಗಿದೆ. ೭೧೯೦ ಚ.ಕಿಮಿ ವಿಸ್ತೀರ್ಣ ಮತ್ತು ೧೮೭೭೪೧೬6 ಜನಸಂಖ್ಯೆ ( ೨೦೦೧ ರ ಜನಗಣತಿ)ಕೊಪ್ಪಳ ಜಿಲ್ಲೆ ಹೊಂದಿರುತ್ತದೆ.ಗಂಗಾವತಿ, ಕೊಪ್ಪಳ,ಯಲಬುರ್ಗಾ ಮತ್ತು ಕುಷ್ಟಗಿ ಈ ಜಿಲ್ಲೆಯಲ್ಲಿರುವ ತಾಲೂಕುಗಳು. ಐತಿಹಾಸಿಕವಾಗಿ, ಸಾಂಸ್ಕ್ರತಿಕವಾಗಿ ಕೊಪ್ಪಳ ಪ್ರಸಿದ್ಧವಾಗಿದೆ.

ಉಲ್ಲೇಖ[ಬದಲಾಯಿಸಿ]

ಕವಿರಾಜ ಮಾರ್ಗದಲ್ಲಿ "ವಿದಿತ ಮಹಾ ಕೋಪಣ ನಗರ" ವೆಂದು ಕೊಪ್ಪಳದ ಬಗ್ಗೆ ಉಲ್ಲೇಖವಿದೆ.


ಪ್ರಾಮುಖ್ಯತೆ[ಬದಲಾಯಿಸಿ]

ಅಶೋಕ ಚಕ್ರವರ್ತಿಯ ಶಿಲಾ ಶಾಸನಗಳು, ಶಿಲಾಯುಗದ ಜನರು ವಾಸಿಸುತ್ತಿದ್ದ ಗವಿಗಳು, ವಿಜಯನಗರ ಸಾಮ್ರಾಜ್ಯದ ಪ್ರಥಮ ರಾಜಧಾನಿ ಆನೆಗೊಂದಿ, ಫ್ರೆಂಚರ ಸಹಾಯ ಪಡೆದು ಟಿಪ್ಪು ಸುಲ್ತಾನ ನಿರ್ಮಿಸಿದ ಕೊಪ್ಪಳ ಕೋಟೆ, ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಮರ್ದಾನ ದರ್ಗಾ, ಹಲವು ನೂರು ವರ್ಷಗಳಿಂದ ಕೋಮು ಸಾಮರಸ್ಯ, ಶಿಕ್ಷಣ ಮತ್ತು ಧರ್ಮ ಪ್ರಚಾರಕ್ಕಾಗಿ ಹೆಸರುವಾಸಿಯಾಗಿರುವ ಕೊಪ್ಪಳದ ಗವಿಮಠ, ಸುಪ್ರಸಿದ್ಧ ಕಿನ್ನಾಳ ಕಲೆ, ಇಟಗಿಯ ಮಹದೇವ ದೇವಸ್ಥಾನ ಹೀಗೆ ಹಲವಾರು ಕಾರಣಗಳಿಗಾಗಿ ಕೊಪ್ಪಳ ಜಿಲ್ಲೆ ಹೆಸರುವಾಸಿಯಾಗಿದೆ.

ಇತಿಹಾಸ[ಬದಲಾಯಿಸಿ]

ತುಂಗಭದ್ರಾ ನದಿಯ ತೀರದಲ್ಲಿರುವ ಆನೆಗೊಂದಿ ರಾಮಾಯಣ ಕಾಲದ ವಾಲಿ, ಸುಗ್ರೀವರಿದ್ದ ಕಿಷ್ಕಿಂಧೆಯ ಭಾಗವಾಗಿತ್ತೆಂದು ಹೇಳಲಾಗುತ್ತದೆ.ವಿಜಯನಗರ ಸಾಮ್ರಾಜ್ಯದಲ್ಲಿ ಆನೆಗಳನ್ನು ಆನೆಗೊಂದಿಯಲ್ಲಿ ಇರಿಸಲಾಗುತ್ತಿದ್ದರಿಂದ ಈ ಸ್ಥಳಕ್ಕೆ ಆನೆಗೊಂದಿಯೆಂಬ ಹೆಸರು ಬಂದಿತೆಂದೂ ಹೇಳಲಾಗುತ್ತದೆ. ೧೫೬೫ ವರ್ಷದಲ್ಲಿ ರಕ್ಕಸ-ತಂಗಡಿ ಯುದ್ಧದಲ್ಲಿ ಸೋಲಾಗಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಹಂಪಿ ಮತ್ತು ಆನೆಗೊಂದಿಯನ್ನು ವಿಜಯಿ ಮುಸ್ಲಿಂ ಯೋಧರು ಹಾಳುಗೆಡವಿದರು.೧೭೭೬ ವರ್ಷದಲ್ಲಿ ಟಿಪ್ಪೂ ಸುಲ್ತಾನ್ ಸೇನೆ ಆನೆಗೊಂದಿಯನ್ನು ಹಾಳುಗೆಡವಿತು.

ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

ಇಂದಿನ ಆನೆಗೊಂದಿ, ಗಂಗಾವತಿ ತಾಲ್ಲೂಕಿನಲ್ಲಿದೆ. ಆನೆಗೊಂದಿಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳೆಂದರೆ ಗಗನ ಅರೆಮನೆ, ಆನೆಗೊಂದಿ ಕೋಟೆ,ಪಂಪ ಸರೋವರ, 64 ಕಂಭಗಳಿರುವ ಕೃಷ್ಣದೇವರಾಯನ ಸಮಾಧಿ,ನವ ಬೃಂದಾವನ,ಮರದ ಮೇಲೆ ಮಾಡಿರುವ ಸೂಕ್ಷ್ಮ ಕೆತ್ತೆನೆಯಂತೆ, ಕಲ್ಲಿನ ಮೇಲೆ ಕೆತ್ತನೆ ಮಾಡಿರುವ ಗರ್ಭಗುಡಿಯಿರುವ ಶ್ರೀ ಗಣಪತಿ ದೇವಸ್ಥಾನ, ಶ್ರೀ ಗವಿ ರಂಗನಾಥ ದೇವಸ್ಥಾನ, ಶಿಲೆಯಲ್ಲಿ ಕೆತ್ತಿರುವ ಸಂಪೂರ್ಣ ರಾಮಾಯಣ ಮೊದಲಾದ ಅಪೂರ್ವ ಶಿಲ್ಪಕಲಾ ಕೆತ್ತನೆಯ ಬೀಡಾಗಿರುವ ಹುಚ್ಚಪ್ಪಯ್ಯನ ಮಠ ಮತ್ತು ಚಿಂತಾಮಣಿ ಶಿವನ ದೇವಸ್ಥಾನ.

  • ಗಂಗಾವತಿ ತಾಲೂಕಿನಲ್ಲಿ, ಗಂಗಾವತಿಯಿಂದ ೧೩ ಮೈಲು ದೂರದಲ್ಲಿರುವ ಕನಕಗಿರಿಯನ್ನು ಮೊದಲು ಸ್ವರ್ಣಗಿರಿಯಂದು ಕರೆಯಲಾಗುತ್ತಿತು." ಕಾಲಿದ್ದವರು ಹಂಪಿ ನೋಡಬೇಕು, ಕಣ್ಣಿದ್ದವರು ಕನಕಗಿರಿ ನೋಡಬೇಕು" ಎಂಬ ನಾಣ್ಣುಡಿ ಇಲ್ಲಿ ಪ್ರಚಲಿತದಲ್ಲಿದೆ. ಶ್ರೀ ಕನಕಾಚಲಪತಿ ದೇವಸ್ಥಾನವು ವಿಜಯನಗರ ಕಾಲದ ವಾಸ್ತುಶಿಲ್ಪದ ಒಂದು ಉತ್ತಮ ಉದಾಹರಣೆಯಾಗಿದೆ.ಕನಕಗಿರಿಯ ಹೊರವಲಯದಲ್ಲಿ ರಾಜಾ ವೆಂಕಟಪ್ಪ ನಾಯಕ ನಿರ್ಮಿಸಿರುವ ರಾಜನ ಸ್ನಾನದ ಕೊಳವಿದೆ.
  • ಕುಷ್ಟಗಿ ತಾಲೂಕಿನಲ್ಲಿ ತಾವರಗೇರಾದಿಂದ ೫ ಮೈಲಿ ದೂರದಲ್ಲಿರುವ ಊರು ಪುರಇಲ್ಲಿ ೧ ಕೋಟಿ ಲಿಂಗಗಳಿವೆ. ಇಲ್ಲಿ ಸುಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ಕೋಟಿ ಲಿಂಗಗಳಿದ್ದು, ಶ್ರಾವಣ ಮಾಸದಲ್ಲಿ ಜಾತ್ರೆ ನೆಡೆಯುತ್ತದೆ.
  • ಕುಕನೂರು, ಇದು ಪ್ರಸಿದ್ಧ ಗ್ರಾನೈಟ್ ಉದ್ಯಮ ಕೇಂದ್ರವಾಗಿದೆ. ಸ್ವಾತಂತ್ರ್ಯಪೂರ್ವದಿಂದ ನೆಡೆಯುತ್ತಿರುವ ಪ್ರಸಿದ್ಧ [[vidayananda gurukul. ಕರ್ನಾಟಕದಲ್ಲಿ ನೆಡೆದ ಹೈದ್ರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟದಲ್ಲಿ ಕುಕನೂರು ಪೋಲಿಸ್ ಠಾಣೆಯ ಮೇಲೆ ಅನ್ನದಾನಯ್ಯ ಪುರಾಣಿಕ ನೇತ್ರತ್ವದಲ್ಲಿ ಮುಂಡರಗಿ ಶಿಬಿರದ ಯುವಕರು, ಯಶಸ್ಡಿ ದಾಳಿ ನೆಡೆಸಿ ನಿಜಾಂ ಪೋಲಿಸರು ಮತ್ತು ರಜಾಕಾರರನ್ನು ಸೋಲಿಸಿದ ಘಟನೆ, ಹೈದರಾಬಾದು ಪ್ರಾಂತ್ಯ ವಿಮೋಚನಾ ಹೋರಾಟಕ್ಕೆ ಹೊಸ ತಿರುವನ್ನು ನೀಡಿತು. ಕುಕನೂರಿನಲ್ಲಿರುವ ಮಹಾಮಾಯಾ ದೇವಸ್ಥಾನವು, ಈ ಭಾಗದ ಜನರ ನಂಬಿಕೆಯಂತೆ ಕೊಲ್ಹಾಪುರದ ಮಹಾಲಕ್ಷ್ಮಿಯ ವಾಸಸ್ಥಾನವಾಗಿದೆ.
  • ಭಾಗ್ಯನಗರ, ಇದು ಕೊಪ್ಪಳ ನಗರದ ಭಾಗವಾಗಿದ್ದು, ಸೀರೆ ಮತ್ತು ಉಡುಪುಗಳ ನೇಯ್ಗೆಗೆ ಪ್ರಸಿದ್ಧವಾಗಿದೆ. ರಾಜ್ಯದಲ್ಲಿ, ಮಾನವರ ತಲೆಕೂದಲನ್ನು ತಿರುಪತಿ ಮೊದಲಾದ ಕಡೆಯಿಂದ ಸಂಗ್ರಹಿಸಿ, ವ್ಯಾಪಾರ ಮಾಡುವ ಕೇಂದ್ರವೆಂದೂ ಇದು ಪ್ರಸಿದ್ಧವಾಗಿದೆ
  • ಇಟಗಿ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲುಕಿನ ಇಟಗಿಯಲ್ಲಿ "ದೇವಾಲಯಗಳ ಚರ್ಕವರ್ತಿ" ಎಂಬ ಬಿರುದಾಂಕಿತ ಶ್ರೀ ಮಹಾದೇವ ದೇವಾಲಯವಿದೆ .ಇದು ಕೊಪ್ಪಳದಿಂದ ೨೦ ಕಿ.ಮೀ. ದೂರದಲ್ಲಿದೆ . ಕುಕನೂರಿನಿಂದ ೭ ಕಿ.ಮೀ, ದೂರದಲ್ಲಿದೆ.ಈ ದೇವಾಲಯವನ್ನು ಕಲ್ಯಾಣಿಚಾಲುಕ್ಯರ್ ಪ್ರಸಿದ್ದ ದೊರೆಯಾದ ೬ನೇ ವಿಕ್ರಮಾದಿತ್ಯನ ಸಾಮಂತನಾಗಿದ್ದ "ಮಹಾದೇವ ದಂಡನಾಯಕ " ಈ ದೇವಾಲಯವನ್ನು ಕಟ್ಟಿಸಿದ್ದಾನೆ.ಯಲಬುಗ್ರಾ ತಾಲುಕಿನ ಕಲ್ಲುರಲ್ಲಿ ಕಲ್ಯಾಣಿಚಾಲುಕ್ಯರ್ ಪ್ರಸಿದ್ದ ದೊರೆಯಾದ ೬ನೇ ವಿಕ್ರಮಾದಿತ್ಯನ ಕಟ್ಟಿಸಿದ ಪ್ರಸಿದ್ದ ಕಲ್ಲಿನಾಥೆಶ್ವರ ದೇವಸ್ತಾನವು ಇಲ್ಲಿದೆ.

ಇದನ್ನೂ ನೋಡಿ[ಬದಲಾಯಿಸಿ]

ಕಲ್ಲಿನಾಥ ಶಾಸ್ರೀ ಪುರಾಣಿಕ ಚೆನ್ನ ಕವಿಗಳು ಮರಿಶಾಂತವೀರ ಸ್ವಾಮಿಗಳು,ಗವಿಮಠ ಸಿದ್ದಯ್ಯ ಪುರಾಣಿಕ ಅನ್ನದಾನಯ್ಯ ಪುರಾಣಿಕ ಬಸವರಾಜ ರಾಯರೆಡ್ಡಿ


Karnataka-icon.jpg
ಕರ್ನಾಟಕದ ಜಿಲ್ಲೆಗಳು
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿಕ್ಕಬಳ್ಳಾಪುರ | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ಯಾದಗಿರಿ | ರಾಯಚೂರು | ರಾಮನಗರ | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ
"http://kn.wikipedia.org/w/index.php?title=ಕೊಪ್ಪಳ&oldid=483839" ಇಂದ ಪಡೆಯಲ್ಪಟ್ಟಿದೆ