ಉತ್ತರ ಕರ್ನಾಟಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Pattadakal Temple Complex, Pattadakallu
Gol Gumbaz, Vijapura

ಉತ್ತರ ಕರ್ನಾಟಕವು ದಕ್ಷಿಣ ಭಾರತದಲ್ಲಿ ಕರ್ನಾಟಕ ಪ್ರಾಂತದಲ್ಲಿರುವ ೩೦೦ರಿಂದ ೭೦೦ ಮೀಟರ್ ಎತ್ತರದಲ್ಲಿನ, ತುಲನಾತ್ಮಕವಾಗಿ ಪ್ರಸ್ಥಭೂಮಿಯ ಒಂದು ಶುಷ್ಕವಾದ ವಿಸ್ತಾರ. ಇದು ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಬೀದರ್, ಬಳ್ಳಾರಿ,ವಿಜಯನಗರ,ಗುಲ್ಬರ್ಗಾ, ಯಾದಗಿರಿ, ರಾಯಚೂರು, ಗದಗ್, ಧಾರವಾಡ, ಹಾವೇರಿ, ಕೊಪ್ಪಳ ಜಿಲ್ಲೆಗಳನ್ನು ಒಳಗೊಂಡಿದೆ. ಕೃಷ್ಣಾ ನದಿ ಮತ್ತು ಅದರ ಉಪನದಿಗಳಾದ ಭೀಮಾ, ಘಟಪ್ರಭಾ, ಮಲಪ್ರಭಾ ಮತ್ತು ತುಂಗಭದ್ರಾ ನದಿಗಳು ಈ ಪ್ರದೇಶದಲ್ಲಿ ಹರಿಯುತ್ತವೆ.ಉತ್ತರ ಕರ್ನಾಟಕದ ಜನರ ಮುಖ್ಯ ಆಹಾರವು ಬಿಳಿಜೊಳದ ರೊಟ್ಟಿ ,ವಿವಿಧ ತರಕಾರಿ ಅಥವಾ ಕಾಳುಗಳಿಂದ ತಯಾರಿಸಿದ ಪಲ್ಯಾ,ವಿವಿಧ ಚಟ್ನಿ ಮತ್ತು ಗಟ್ಟಿ ಮೊಸರು.

ಹವಾಮಾನ[ಬದಲಾಯಿಸಿ]

  • ಬೇಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ವಿಜಯಪುರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣತೆ ಅಂದರೆ 42.7 ಡಿಗ್ರಿವರೆಗೆ(ಏಪ್ರಿಲ್ ನಲ್ಲಿ) , ಅತೀ ಕಡಿಮೆ ಅಂದರೆ 9.5 ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
  • ಬೇಸಿಗೆ ಕಾಲ - 35 °C - 42 °C ಡಿಗ್ರಿ ಸೆಲ್ಸಿಯಸ್
  • ಚಳಿಗಾಲ ಮತ್ತು ಮಳೆಗಾಲ - 18 °C - 28°Cಡಿಗ್ರಿ ಸೆಲ್ಸಿಯಸ್
  • ಮಳೆ - ಪ್ರತಿ ವರ್ಷ ಮಳೆ 300 - 600ಮಿಮಿ ಗಳಸ್ಟು ಆಗಿರುತ್ತದೆ.
  • ಗಾಳಿ - ಗಾಳಿ ವೇಗ 18.2 ಕಿಮಿ/ಗಂ (ಜೂನ್), 19.6 ಕಿಮಿ/ಗಂ (ಜುಲೈ)ಹಾಗೂ 17.5 ಕಿಮಿ/ಗಂ (ಅಗಸ್ಟ್) ಇರುತ್ತದೆ.

ಸಾಂಸ್ಕೃತಿಕ[ಬದಲಾಯಿಸಿ]

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡ ವಿಜಯಪುರ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: ಜೋಳ, ಸಜ್ಜೆ, ಶೇಂಗಾ,ಚಿಕ್ಕು, ಸೂರ್ಯಕಾಂತಿ, ಉಳ್ಳಾಗಡ್ಡಿ (ಈರುಳ್ಳಿ). ದ್ರಾಕ್ಷಿ, ದಾಳಿಂಬೆ, ಕಬ್ಬು ನಿಂಬೆ ಹಣ್ಣುಗಳು ಪರರಾಜ್ಯ ಹಾಗೂ ಪರದೇಶಗಳಿಗೆ ರಫ್ತು ಆಗುತ್ತವೆ.

ಆಹಾರ[ಬದಲಾಯಿಸಿ]

ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ, ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ವಿಜಯಪುರದ ಜೋಳದ ರೊಟ್ಟಿ , ಸೇಂಗಾ ಚಟ್ನಿ, ಎಣ್ಣೆ ಬದನೆಕಾಯಿ ಪಲ್ಯ, ಕೆನೆಮೊಸರುಗಳು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಪ್ರಮುಖ ವ್ಯಕ್ತಿಗಳು[ಬದಲಾಯಿಸಿ]

shree abhinava pundalinga maharajaru sukhetra golasar

ಪರಶುರಾಮ (Pರಾಮ)==ಸಂಸ್ಕೃತಿ==

ಲಂಬಾಣಿ ಜನಾಂಗದ ಮಹಿಳೆ
ಉತ್ತರ ಕರ್ನಾಟಕದ ಊಟ
ಕೃಷ್ಣ ಗೋಪಾಲ ಜೋಶಿ

ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ.ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ. ಮಹಿಳೆ ಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.

ಕಲೆ[ಬದಲಾಯಿಸಿ]

ಲಾವಣಿ ಪದಗಳು, ಡೊಳ್ಳು ಕುಣಿತ, ಗೀಗೀ ಪದಗಳು, ಹಂತಿ ಪದಗಳು ಮತ್ತು ಮೊಹರಮ್ ಹೆಜ್ಜೆ ಕುಣಿತ ಮುಂತಾದವುಗಳು ಈ ನಾಡಿನ ಕಲೆಯಾಗಿದೆ.

ಉದ್ಯೋಗ[ಬದಲಾಯಿಸಿ]

ಫಲವತ್ತಾದ ಭೂಮಿ ಇದುವುದರಿಂದ ಸುಮಾರು 70% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಜಿಲ್ಲೆಯ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ತಯಾರಿಕೆ, ಕುರಿ ಮತ್ತು ಆಡು ಸಾಕಾಣಿಕೆ ಉಪ ಕಸುಬುಗಳಾಗಿವೆ.

ನದಿಗಳು[ಬದಲಾಯಿಸಿ]

ಉಗಮ ಸ್ಥಾನ

ಕೃಷ್ಣಾ ನದಿಯು ಮಹಾರಾಷ್ಟ್ರ ರಾಜ್ಯದ ಮಹಾಬಳೇಶ್ವರ ಸಮೀಪದ ಸಹ್ಯಾದ್ರಿ ಬೆಟ್ಟ ಪ್ರದೇಶದ ಹತ್ತಿರ ಸಮುದ್ರ ಮಟ್ಟಕ್ಕಿಂತ 1338 ಮೀಟರ ಎತ್ತರದಲ್ಲಿ ಉಗಮವಾಗಿ ಸುಮಾರು 1392 ಕಿ.ಮಿ.ಗಳಷ್ಟು ದೂರ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಹರಿಯುತ್ತದೆ. ದಕ್ಷಿಣ ಭಾರತದ ಎರಡನೆಯ ದೊಡ್ಡ ನದಿಯಾಗಿದೆ. ಮಲಪ್ರಭಾ, ಘಟಪ್ರಭಾ ಮತ್ತು ಡೋಣಿ ನದಿಗಳು ಕೃಷ್ಣಾ ನದಿಯ ಉಪನದಿಗಳಾಗಿವೆ.

ನದಿಗೆ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಗ್ರಾಮದ ಬಳಿ ಹಿಪ್ಪರಗಿ ಆಣೆಕಟ್ಟು, ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಆಲಮಟ್ಟಿ ಹತ್ತಿರ ಆಲಮಟ್ಟಿ ಆಣೆಕಟ್ಟು ಮತ್ತು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಬಾಚಿಹಾಳ - ಸಿದ್ದಾಪುರ ಹತ್ತಿರ ನಾರಾಯಣಪುರ ಆಣೆಕಟ್ಟುನ್ನು ಕಟ್ಟಲಾಗಿದೆ. ಕೃಷ್ಣಾ ನದಿಯ ಒಟ್ಟು ಜಲಾನಯನ ಪ್ರದೇಶ ಸುಮಾರು 2,60,000 ಚದುರು ಕಿ.ಮಿ. ಇರುತ್ತದೆ.

ಕೃಷ್ಣಾ ನದಿಗೆ ಅಡ್ಡಲಾಗಿ ಸುಮಾರು 10ಕ್ಕೂ ಹೆಚ್ಚು ಸೇತುವೆ ಮತ್ತು ಬ್ಯಾರೇಜುಗಳನ್ನು ನಿರ್ಮಿಸಿದ್ದಾರೆ. ದಕ್ಷಿಣ ಭಾರತದಲ್ಲಿ ಅತಿ ಉದ್ದವಾದ ಸೇತುವೆಯನ್ನು ವಿಜಯಪುರ ಜಿಲ್ಲೆಯ ಕೊಲ್ಹಾರ ಗ್ರಾಮದ ಬಳಿ ಅಡ್ಡಲಾಗಿ ನಿರ್ಮಿಸಲಾಗಿದೆ. ಕೃಷ್ಣಾ ನದಿಯನ್ನು ಉತ್ತರ ಕರ್ನಾಟಕದಲ್ಲಿ ಹಿರಿ ಹೊಳಿಯಂತಲು ಕರೆಯುತ್ತಾರೆ. ಕರ್ನಾಟಕ ರಾಜ್ಯದಲ್ಲಿಯೇ ಅತಿ ದೊಡ್ಡ ನೀರಾವರಿ ಯೋಜನೆಯಾದ ಕೃಷ್ಣಾ ಮೇಲ್ದಂಡೆ ಯೋಜನೆ ನ್ನು ಈ ನದಿಯಿಂದ ಕೈಗಿತ್ತಿಕೊಳ್ಳಲಾಗಿದೆ. ಈ ನದಿಯು ಉತ್ತರ ಕರ್ನಾಟಕದ ಜೀವ ನದಿಯಾಗಿದೆ. ರಾಯಚೂರ ಜಿಲ್ಲೆಯ ಕುಡ್ಲು ಎಂಬಲ್ಲಿ ಭೀಮಾ ನದಿಯು ಕೃಷ್ಣಾ ನದಿಯನ್ನು ಸೇರುತ್ತದೆ.

ಶಿಲಾನ್ಯಾಸ

1962ರಲ್ಲಿ ಭಾರತಪ್ರಧಾನ ಮಂತ್ರಿಯಾದ ಶ್ರೀ ಲಾಲ ಬಹಾದ್ದೂರ ಶಾಸ್ತ್ರಿಯವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಡಿಗಲ್ಲನ್ನಿಟ್ಟರು. ಈ ಯೋಜನೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಆಲಮಟ್ಟಿ ಜಲಾಶಯ ಹಾಗು ಅದರ ಕೆಳಗೆ ಸುಮಾರು 70 ಕಿ.ಮಿ. ದೂರದಲ್ಲಿ ಕೃಷ್ಣಾ ಹಾಗು ಮಲಪ್ರಭಾ ಗಳ ಸಂಗಮದ ಕೆಳಭಾಗದಲ್ಲಿ ನಾರಾಯಣಪುರ ಜಲಾಶಯಗಳಿವೆ. 1994ರಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ರಚನೆಯಾಯಿತು. ಆಬಳಿಕ ಕೆಲಸ ಚುರುಕಾಗಿ ನಡೆದರೂ ಸಹ ಆಂಧ್ರ ಹಾಗು ಮಹಾರಾಷ್ಟ್ರ ರಾಜ್ಯಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ತಕರಾರು ಮಾಡಿದ್ದರಿಂದ, ಆಣೆಕಟ್ಟಿನ ಪುರ್ಣಪ್ರಮಾಣದ ಎತ್ತರವಾದ 524 ಮೀಟರುಗಳ ಬದಲಾಗಿ 519.60 ಮೀಟರುಗಳಿಗೆ ಕಾಮಗಾರಿಯನ್ನು ಮಿತಿಗೊಳಿಸಲಾಗಿದೆ.

ಮುಳುಗಡೆ ಪ್ರದೇಶ

ಆಲಮಟ್ಟಿಯಿಂದ ಹಿಪ್ಪರಗಿವರೆಗೆ 136 ಕಿ.ಮಿ.ವರೆಗೆ ಹಿನ್ನೀರು ವ್ಯಾಪಿಸಿದ್ದು 201 ಗ್ರಾಮಗಳು ಹಾಗು ಬಾಗಲಕೋಟೆಯ ಬಹುತೇಕ ಭಾಗ ಮುಳುಗಡೆಯಾಗಿವೆ.

ಜಲ ಸಂಗ್ರಹ

ಹಿಪ್ಪರಗಿಯಲ್ಲಿ 13 ಟಿ.ಎಮ್.ಸಿ., ಆಲಮಟ್ಟಿಯಲ್ಲಿ 123 ಟಿ.ಎಮ್.ಸಿ. (519.60 ಮೀಟರವರೆಗೆ) ಹಾಗು ನಾರಾಯಣಪುರದಲ್ಲಿ 37 ಟಿ.ಎಮ್.ಸಿ. ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ಬಚಾವತ್ ಆಯೋಗದ ಸ್ಕೀಮ್ ಎ ದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ನೀಡಲಾದ 173 ಟಿ.ಎಮ್.ಸಿ. ನೀರಿನ ಪುರ್ಣ ಸಂಗ್ರಹವಾದಂತಾಗಿದೆ.

ನೀರಾವರಿ ಪ್ರದೇಶ

ಪ್ರಥಮ ಘಟ್ಟದಲ್ಲಿ 119 ಟಿ.ಎಮ್.ಸಿ. ನೀರನ್ನು ಬಳಸಿಕೊಂಡು ಸುಮಾರು 6,22,000 ಹೆಕ್ಟೇರ್ ಜಮೀನಿಗೆ ಹಾಗು ದ್ವಿತೀಯ ಘಟ್ಟದಲ್ಲಿ ಸ್ಕೀಮ್ ಬಿ ಯಲ್ಲಿ ದೊರೆಯುವ ನೀರನ್ನೂ ಸಹ ಬಳಸಿಕೊಂಡು ಹೆಚ್ಚಿನ 3,97,000 ಹೆಕ್ಟೇರ್ ಜಮೀನಿಗೆ ನೀರಾವರಿ ಒದಗಿಸುವ ಉದ್ದೇಶವಿದೆ.

ವಿದ್ಯುತ್ ಉತ್ಪಾದನೆ

15 ಮೆಗಾವ್ಯಾಟ್ ಉತ್ಪಾದಿಸುವ 1 ಹಾಗು 55 ಮೆಗಾವ್ಯಾಟ್ ಉತ್ಪಾದಿಸುವ 3 ಘಟಕಗಳನ್ನು ಸ್ಥಾಪಿಸಲಾಗಿದೆ.

ವೆಚ್ಚ

ಜಲಾಶಯ ನಿರ್ಮಾಣಕ್ಕಾಗಿ 5500 ಕೋಟಿ, ಸಂಪರ್ಕ ವ್ಯವಸ್ಥೆಗಾಗಿ 400 ಕೋಟಿ ಹಾಗು ಪುನರ್ವಸತಿಗಾಗಿ 2100 ಕೋಟಿ ರೂಪಾಯಿಗಳಷ್ಟು ವೆಚ್ಚವನ್ನು ಮಾಡಲಾಗಿದೆ.

ಉದ್ಘಾಟನೆ

21 ಆಗಸ್ಟ್ 2006ರಂದು ಭಾರತದ ಆಗಿನರಾಷ್ಟ್ರಪತಿಯಾಗಿದ್ದ ಶ್ರೀ ಅಬ್ದುಲ್ ಕಲಾಂ ಅವರು ಲಾಲ ಬಹಾದ್ದೂರ ಶಾಸ್ತ್ರಿ ಎಂದು ನಾಮಕರಣಗೊಂಡ ಆಲಮಟ್ಟಿ ಜಲಾಶಯವನ್ನು ರಾಷ್ಟ್ರಕ್ಕೆ ಅರ್ಪಿಸಿದರು.

ಮಲಪ್ರಭಾ ನದಿಯು ಕೃಷ್ಣಾ ನದಿಉಪನದಿ.

ಉಗಮ

ಮಲಪ್ರಭಾ ನದಿಯು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕನಕುಂಬಿ ಗ್ರಾಮದಿಂದ ಪಶ್ಚಿಮಕ್ಕೆ ೧೬ ಕಿಲೊಮೀಟರ ದೂರದಲ್ಲಿ, ಸಮುದ್ರ ಮಟ್ಟದಿಂದ ೭೯೨ ಮೀಟರ ಎತ್ತರದಲ್ಲಿ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಹುಟ್ಟುತ್ತದೆ. ೩೦೪ ಕಿಲೊಮೀಟರುಗಳವರೆಗೆ ಹರಿದು ಕೃಷ್ಣಾ ನದಿಯನ್ನು, ಸಮುದ್ರಮಟ್ಟದಿಂದ ೪೮೮ ಮೀಟರ ಎತ್ತರದಲ್ಲಿರುವ ಕೂಡಲ ಸಂಗಮದಲ್ಲಿ ಕೂಡುತ್ತದೆ. ಸಂಗಮದ ವರೆಗೆ ಇದರ ಜಲಾನಯನ ಪ್ರದೇಶದ ವಿಸ್ತೀರ್ಣ ೧೧,೫೪೯ ಚದುರು ಕಿಲೊಮೀಟರುಗಳು.

ಉಪನದಿಗಳು

ಬೆಣ್ಣಿಹಳ್ಳ, ಹಿರೆಹಳ್ಳ, ತುಪರಿಹಳ್ಳ ಹಾಗು ತಾಸಹಳ್ಳಗಳು ಮಲಪ್ರಭಾ ನದಿಯನ್ನು ಸಂಗಮಿಸುವ ಕೆಲವು ಪ್ರಮುಖ ಹಳ್ಳಗಳು.

ರೇಣುಕಾಸಾಗರ

ಮಲಪ್ರಭಾ ನದಿಗೆ ಅಡ್ಡಲಾಗಿ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಹತ್ತಿರ ನವಿಲುತೀರ್ಥ ದಲ್ಲಿ ಕಲ್ಲಿನ ಬಾಂಧಕಾಮಿನ ಆಣೆಕಟ್ಟು ಕಟ್ಟಲಾಗಿದೆ. ಈ ಆಣೆಕಟ್ಟು ೧೫೪.೫೩ ಮೀಟರ ಉದ್ದವಿದ್ದು ೪೦.೨೩ ಮೀಟರ ಎತ್ತರವಿದೆ. ಆಣೆಕಟ್ಟಿನ ಸಂಗ್ರಹ ಸಾಮರ್ಥ್ಯವು ೩೦.೨೬ ಘನ ಮೀಟರಗಳಿಷ್ಟಿದೆ. ಆಣೆಕಟ್ಟಿನ ಹಿನ್ನೀರಿನಲ್ಲಿ ೧೩,೫೭೮ ಹೆಕ್ಟೇರುಗಳಷ್ಟು ಪ್ರದೇಶವು ಮುಳುಗಡೆಯಾಗಿದೆ. ಈ ಜಲಾಶಯಕ್ಕೆ ರೇಣುಕಾ ಜಲಾಶಯವೆಂದು ಕರೆಯಲಾಗುತ್ತದೆ.

ಕಾಲುವೆಗಳು

ಮಲಪ್ರಭಾ ಆಣೆಕಟ್ಟಿನ ಎಡದಂಡೆಯ ಕಾಲುವೆಯು ೧೫೦ ಕಿಮೀ ಉದ್ದವಿದ್ದು, ಇದರಿಂದ ೫೩,೧೩೬ ಹೆಕ್ಟೇರ್ ಜಮೀನಿಗೆ ನೀರಾವರಿಯಾಗುತ್ತದೆ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ರೂವಾರಿಯಾದ ಇಂಜನಿಯರ ಎಸ್.ಜಿ.ಬಾಳೆಕುಂದ್ರಿಯವರ ಗೌರವಾರ್ಥ ಈ ಕಾಲುವೆಗೆ ಬಾಳೆಕುಂದ್ರಿ ಕಾಲುವೆ ಎಂದು ಹೆಸರಿಡಲಾಗಿದೆ.

ಬಲದಂಡೆಯು ೧೪೨ ಕಿಮೀ ಉದ್ದವಿದ್ದು ೧,೩೯,೯೨೧ ಹೆಕ್ಟೇರ್ ಭೂಮಿಗೆ ನೀರುಣ್ಣಿಸುತ್ತದೆ.

ರೇಣುಕಾ ಜಲಾಶಯ ದಿಂದ ಹುಬ್ಬಳ್ಳಿ ಹಾಗು ಧಾರವಾಡ ನಗರಗಳಿಗೆ ನೀರಿನ ಪೂರೈಕೆಯಾಗುತ್ತದೆ.

ಯಾತ್ರಾಸ್ಥಳಗಳು

ರೇಣುಕಾ ಜಲಾಶಯಕ್ಕೆ ಸುಮಾರು ೧೫ ಕಿಮೀ ದೂರದಲ್ಲಿ ಹೆಸರಾಂತ ಎಲ್ಲಮ್ಮ ನ ಗುಡಿ ಇರುತ್ತದೆ. ಕರ್ನಾಟಕ ಹಾಗು ಮಹಾರಾಷ್ಟ್ರದ ಲಕ್ಷಾಂತರ ಜನರು ಎಲ್ಲಮ್ಮ ದೇವಿಯ ಭಕ್ತರಿರುತ್ತಾರೆ. ಪ್ರತಿ ವರ್ಷ ಭಾರತ ಹುಣ್ಣಿಮೆ ದಿನ ಎಲ್ಲಮ್ಮನ ಜಾತ್ರೆ ಯಾಗುತ್ತದೆ.

ಹತ್ತಿರದಲ್ಲಿಯೆ ಸೊಗಲ ಗ್ರಾಮವಿದ್ದು ಪುರಾತನ ಸೋಮೇಶ್ವರ ಗುಡಿ ಯಿಂದಾಗಿ ಹಾಗು ಮನೋಹರವಾದ, ಚಿಕ್ಕ ಜಲಪಾತಕ್ಕಾಗಿ ಆಕರ್ಷಕವಾದ ಯಾತ್ರಾಸ್ಥಳ ಹಾಗು ಪ್ರವಾಸಿ ತಾಣವಾಗಿದೆ.

ಗೋಕಾಕ್ ಜಲಪಾತ

ಘಟಪ್ರಭಾ ಕೃಷ್ಣಾ ನದಿಯ ಉಪನದಿ.

ಉಗಮ

ಘಟಪ್ರಭಾ ನದಿಯು ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ ೮೮೪ ಮೀಟರ ಎತ್ತರದಲ್ಲಿ ಜನಿಸುತ್ತದೆ. ೨೮೩ ಕಿಮೀ ದೂರದಷ್ಟು ಹರಿದ ಬಳಿಕ ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದಿಂದ ಈಶಾನ್ಯ ದಿಕ್ಕಿಗೆ ೩೫ ಕಿಮೀ ದೂರದಲ್ಲಿ ಕೃಷ್ಣಾ ನದಿಯನ್ನು ಸಂಗಮಿಸುತ್ತದೆ. ಘಟಪ್ರಭಾ ನದಿಯ ಜಲಾನಯನ ಪ್ರದೇಶವು ೮೮೨೯ ಚದುರು ಕಿಮೀ ವಿಸ್ತಾರವಾಗಿದೆ.

ಉಪನದಿಗಳು

ಹಿರಣ್ಯಕೇಶಿ ಹಾಗು ತಾಮ್ರಪಣಱ ಮಾರ್ಕಂಡೇಯ ನದಿಗಳು ಘಟಪ್ರಭಾದ ಉಪನದಿಗಳಾಗಿವೆ.

ಆಣೆಕಟ್ಟುಗಳು

ಘಟಪ್ರಭಾ ನದಿಗೆ ಗೋಕಾಕ ತಾಲೂಕಿನ ಧೂಪದಾಳ ಗ್ರಾಮದ ಹತ್ತಿರ ೧೮೯೭ ನೆಯ ಇಸವಿಯಲ್ಲಿ ಒಂದು ತಡೆಗೋಡೆಯನ್ನು (wier) ನಿರ್ಮಿಸಲಾಗಿದೆ. ಈ ತಡೆಗೋಡೆಯಿಂದ ೭೧ ಕಿಮೀ ಉದ್ದದ ಕಾಲುವೆ ಮಾಡಲಾಗಿದ್ದು, ಇದರಿಂದ ೪೨,೫೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುತ್ತಿದೆ. ಸ್ವಾತಂತ್ರ್ಯಾನಂತರ ಕರ್ನಾಟಕ ಸರಕಾರವು ಈ ಕಾಲುವೆಯನ್ನು ೧೦೯ ಕಿಮೀವರೆಗೆ ನಿರ್ಮಾಣ ಮಾಡಿದೆ. ಹಾಗು ಹಿಡಕಲ್ ಗ್ರಾಮದ ಹತ್ತಿರ ಕಟ್ಟಲಾದ ಜಲಾಶಯದಿಂದ ೬೫೯ ದಶಲಕ್ಷ ಘನಮೀಟರುಗಳಷ್ಟು ನೀರನ್ನು ಸಂಗ್ರಹಿಸಲಾಗುತ್ತಿದೆ. ಇದರಿಂದಾಗಿ ನೀರಾವರಿ ಪ್ರದೇಶದ ಒಟ್ಟು ವಿಸ್ತೀರ್ಣವು ೧,೩೯,೬೧೪ ಹೆಕ್ಟೇರ್‍ನಷ್ಟು ವಿಸ್ತಾರವಾಗಿದೆ.

ಮುಂದಿನ ಯೋಜನೆ

ಹಿಡಕಲ್ ಜಲಾಶಯದ ಎತ್ತರವನ್ನು ಹೆಚ್ಚಿಸುವ ಯೋಜನೆಯನ್ನು ಎತ್ತಿಕೊಳ್ಳಲಾಗಿದೆ. ಇದರಿಂದ ೧೪೪೮ ದಶಲಕ್ಷ ಘನ ಮೀಟರುಗಳಷ್ಟು ಸಂಗ್ರಹವನ್ನು ಮಾಡುವ ಯೋಜನೆಯಿದ್ದು ೨೦೨ ಕಿಮೀ ಉದ್ದದ ಬಲದಂಡೆ ಕಾಲುವೆಯನ್ನು ನಿರ್ಮಿಸಲಾಗುತ್ತಿದೆ.

ಇವೆಲ್ಲ ಕಾರ್ಯಕ್ರಮಗಳ ಮೂಲಕ ಘಟಪ್ರಭಾ ನದಿಯಿಂದ ಒಟ್ಟು ೩,೩೧,೦೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುವದು.

ಜಲಪಾತ

ಗೋಕಾಕ ಪಟ್ಟಣದಿಂದ ೧೦ ಕಿಮೀ ದೂರದಲ್ಲಿ ಘಟಪ್ರಭಾ ನದಿಯು ೫೩ ಮೀಟರು ಆಳಕ್ಕೆ ಧುಮುಕುತ್ತ ಸುಂದರ ಜಲಪಾತವನ್ನು ನಿರ್ಮಿಸಿದೆ. ಜಲಪಾತದ ಮೇಲ್ಗಡೆ ಒಂದು ಹಳೆಯ ತೂಗುಸೇತುವೆ ಇದ್ದು ಪ್ರವಾಸಿಗರಿಗೆ ಆಕರ್ಷಕವಾಗಿದೆ. ಈ ಜಲಪಾತದ ಸಹಾಯದಿಂದ ಅಲ್ಪ ಪ್ರಮಾಣದಲ್ಲಿ ವಿದ್ಯುತ್ ಶಕ್ತಿಯನ್ನು ಸಹ ಉತ್ಪಾದಿಸಲಾಗುತ್ತಿದೆ. ಪಕ್ಕದಲ್ಲಿಯೆ ಒಂದು ಅತ್ಯಂತ ಹಳೆಯ ಅರಳೆ ಗಿರಣಿ ಇದೆ.

ಉಗಮ ಮತ್ತು ಸಂಗಮ

ಭೀಮಾ ನದಿಯು ಮಹಾರಾಷ್ಟ್ರದಲ್ಲಿ ಪುಣೆಗೆ ಹತ್ತಿರವಾಗಿರುವ ಭೀಮಾಶಂಕರ ಅರಣ್ಯಪ್ರದೇಶದಲ್ಲಿ ಜನಿಸಿದೆ. ಭೀಮಾ ನದಿಯು ಕೃಷ್ಣಾ ನದಿಯ ಉಪನದಿಯಾಗಿದೆ. ವಿಜಯಪುರ ಜಿಲ್ಲೆಯ ದೆಸೂರ ಎಂಬಲ್ಲಿ ಕರ್ನಾಟಕವನ್ನು ಪ್ರವೇಶಿಸುತ್ತದೆ.

ಕರ್ನಾಟಕದಲ್ಲಿ ರಾಯಚೂರು ಜಿಲ್ಲೆಯ ಕಡ್ಲೂರು ಊರ ಹತ್ತಿರ, ಆಂಧ್ರಪ್ರದೇಶದ ಗಡಿಗೆ ಸಮೀಪವಾಗಿ ಈ ನದಿಯು ಕೃಷ್ಣಾ ನದಿಯನ್ನು ಕೂಡುತ್ತದೆ. ಕರ್ನಾಟಕದಲ್ಲಿ ಈ ನದಿಯ ಉದ್ದ ಸುಮಾರು 300 ಕಿ.ಮೀ.ಗಳಷ್ಟು ಹರಿದಿದೆ.

ಉಪನದಿಗಳು

ಕರ್ನಾಟಕದಲ್ಲಿ ಅಮರಜಾ, ಮುಲ್ಲಾಮಾರಿ, ಗಂಡೋರಿ ಹಳ್ಳ, ಕಾಗಿನಾ ಹಾಗು ಬೆಣ್ಣೆತೊರಾ ಇವು ಭೀಮಾನದಿಯ ಉಪನದಿಗಳು.

ಡೋಣಿ ನದಿಯು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ಹತ್ತಿರ ಉಗಮವಾಗುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಸುಮಾರು 250ಕಿ.ಮೀ. ಹರಿದು ಗುಲ್ಬರ್ಗಾ ಜಿಲ್ಲೆಯ ಕೋಡೆ ಕಲ್ಲ ಹತ್ತಿರ ಕೃಷ್ಣಾ ನದಿಯನ್ನು ಸೇರುತ್ತದೆ. ವಿಜಯಪುರ ಜಿಲ್ಲೆಯಲ್ಲಿ ಜೋಳದ ಬೆಳೆಯನ್ನು ಡೋಣಿ ನದಿಯ ದಡದಲ್ಲಿ ಚೆನ್ನಾಗಿ ಬೆಳೆಯುತ್ತಾರೆ. ಡೋಣಿ ಬೆಳೆದರೆ ಓಣಿಲ್ಲ ಜೋಳಯಂಎಬ ನಾಣ್ಣುಡಿಯಿದೆ. ಇಲ್ಲಿ ಬೆಳೆದ ಜೋಳ ಕರ್ನಾಟಕದ ತುಂಬೆಲ್ಲ ವಿಜಯಪುರ ಜೋಳ ಎಂದು ಪ್ರಸಿದ್ದವಾಗಿದೆ.v

ಬಾಹ್ಯ ಸಂಪರ್ಕಗಳು[ಬದಲಾಯಿಸಿ]