ಮೈಸೂರು ವಿಶ್ವವಿದ್ಯಾಲಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮೈಸೂರು ವಿಶ್ವವಿದ್ಯಾಲಯ
ಮೈಸೂರು ವಿಶ್ವವಿದ್ಯಾಲಯದ ಆಡಳಿತ ಕಛೇರಿ, ಕ್ರಾಫರ್ಡ್ ಹಾಲ್
ಧ್ಯೇಯ 'ನ ಹಿ ಜ್ಞಾನೇನ ಸದೃಶಂ'
ಸ್ಥಾಪನೆ ೧೭, ಜುಲೈ , ೧೯೧೬
ಪ್ರಕಾರ ಸಾರ್ವಜನಿಕ
ಕುಲಪತಿಗಳು '-'
ಉಪಕುಲಪತಿಗಳು ಪ್ರೊಫೆಸರ್ ಕೆ.ಎಸ್.ರಂಗಪ್ಪ
ಸಿಬ್ಬಂದಿ '-'
ವಿದ್ಯಾರ್ಥಿಗಳ ಸಂಖ್ಯೆ ೪೦೦೦+
ಪದವಿ ಶಿಕ್ಷಣ '-'
ಸ್ನಾತಕೋತ್ತರ ಶಿಕ್ಷಣ '-'
ಡಾಕ್ಟರೇಟ್ ಪದವಿ '-'
ಇತರೆ '-'
ಆವರಣ ಶಹರ
ಅಂತರ್ಜಾಲ ತಾಣ www.uni-mysore.ac.in
'The University emblem is adapted from the Royal Emblem of Mysore. It depicts the bird Gandabherunda flanked on either side by the lion-elephant Sharabha (mythical creature believed to be stronger than the lion and the elephant, and upholder of righteousness), surmounted by a lion.'


ಮೈಸೂರು ವಿಶ್ವವಿದ್ಯಾಲಯವು ಭಾರತದ ಒಂದು ಪ್ರಮುಖ ವಿಶ್ವವಿದ್ಯಾಲಯ. ಮೈಸೂರು ವಿಶ್ವವಿದ್ಯಾಲಯ ೩೯ ಇಲಾಖೆಗಳನ್ನು ಹೊಂದಿದೆ. ಒಟ್ಟು ೬೫ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್ ಡಿ ಪದವಿಗಳನ್ನು ಇಲ್ಲಿ ಪಡೆಯಬಹುದಾಗಿದೆ.

ಇತಿಹಾಸ[ಬದಲಾಯಿಸಿ]

ಮೈಸೂರು ವಿಶ್ವವಿದ್ಯಾಲಯವು ೧೯೧೬ರ ಜುಲೈ ೧೭ರಂದು ಮೈಸೂರಿನ ಆಗಿನ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಫಲವಾಗಿ ಪ್ರಾರಂಭವಾದದ್ದು. ಥಾಮಸ್ ಡೆನ್ಹಾಮ್ ಮತ್ತು ಸಿ.ಆರ್.ರೆಡ್ಡಿ ಅವರು, ಅಮೆರಿಕ ಪ್ರವಾಸ ನಂತರ ಸಲ್ಲಿಸಿದ ವರದಿಯ ಆಧಾರದ ಮೇಲೆ ಈ ವಿಶ್ವವಿದ್ಯಾಲಯವನ್ನು ಮಹಾರಾಜರು ಸ್ಥಾಪಿಸಿದರು. ಮುಖ್ಯವಾಗಿ ಷಿಕಾಗೊ ವಿಶ್ವವಿದ್ಯಾಲಯ, ವಿಸ್ಕಾನ್ಸಿನ್ ವಿಶ್ವವಿದ್ಯಾಲಯ, ಆಕ್ಸ್ ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳ ರಚನೆ ಮತ್ತು ಆಡಳಿತಗಳ ಆಳವಾದ ವಿಶ್ಲೇಷಣೆಯ ಮೇಲೆ ಮೈಸೂರು ವಿಶ್ವವಿದ್ಯಾಲಯವನ್ನು ಆಧರಿಸಲಾಯಿತು. ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರೋತ್ಸಾಹದಿಂದ ವಿಶ್ವವಿದ್ಯಾಲಯವು ಭಾರತದಲ್ಲಿಯೇ ಅಪ್ರತಿಮ ವಿದ್ಯಾಕೇಂದ್ರಗಳಲ್ಲಿ ಒಂದೆನಿಸಿತು. ಪ್ರಸ್ತುತ ಪ್ರೊ.ಕೆ.ಎಸ್ ರಂಗಪ್ಪ ಅವರು ಉಪಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಶ್ವವಿದ್ಯಾನಿಲಯ ಸಂಜೆ ಕಾಲೇಜು[ಬದಲಾಯಿಸಿ]

ಮೈಸೂರು ವಿಶ್ವವಿದ್ಯಾನಿಲಯದ ಹೆಮ್ಮೆಯ ಅಂಗ ಸಂಸ್ಥೆಯಾದ ವಿಶ್ವ ವಿದ್ಯಾನಿಲಯ ಸಂಜೆ ಕಾಲೇಜು ೧೯೬೫ ರಲ್ಲಿ ಸ್ಥಾಪಿಸಲ್ಪಟ್ಟಿತು. ಪ್ರಸ್ತುತ ತನ್ನ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿರುವ (೨೦೧೫) ಈ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದಾನ ಮಾಡಿದ, ಮಾಡುತ್ತಿರುವ ಮೈಸೂರಿನ ಹೆಮ್ಮೆಯ ವಿದ್ಯಾಸಂಸ್ಥೆ. ಇಲ್ಲಿ ತರಗತಿಗಳು ಸಂಜೆ ವೇಳೆ ನಡೆಯುವುದರಿಂದ ಬಹುತೇಕ ಉದ್ಯೋಗಸ್ಥರ ಅಕ್ಷರ ದಾಹವನ್ನು ನೀಗುತ್ತಿರುವ ಸಂಜೆ ಮಲ್ಲಿಗೆ ಇದು. ಪ್ರಸ್ತುತ ಬಿ.ಎ. ಬಿ.ಕಾಂ ಮತ್ತು ಬಿ.ಬಿ.ಎಂ ಪದವಿಗಳಿಗೆ ಇಲ್ಲಿ ಪ್ರವೇಶಾತಿ ಉಂಟು. ೨೦೧೩-೧೪ನೇ ಸಾಲಿನಿಂದ ಮೈಸೂರು ವಿ.ವಿ.ಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸಂಜೆ ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ಆರಂಭವಾಗುತ್ತಿದೆ. ಈ ಸಾಲಿನಿಂದ ಎಂ.ಎ. ಇತಿಹಾಸದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪ್ಸಿಸಲಾಗಿದೆ. ಪ್ರಸ್ತುತ ೧೮ ಅಧ್ಯಾಪಕರು ಮತ್ತು ಸುಮಾರು ೩೦ ಮಂದಿ ಅತಿಥಿ ಉಪನ್ಯಾಸಕರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸುಮಾರು ೮೦೦ ವಿದ್ಯಾರ್ಥಿಗಳಿದ್ದಾರೆ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ[ಎನ್.ಎಸ್.ಎಸ್] ಮತ್ತು ರಾಷ್ಟ್ರೀಯ ಸೇವಾದಳ[ಎನ್.ಸಿ.ಸಿ] ಘಟಕಗಳು ಸಕ್ರಿಯವಾಗಿವೆ. ಕಾಲೇಜಿನಿಂದ "ಸಂಜೆ ಮಲ್ಲಿಗೆ" ಎಂಬ ವಾರ್ಷಿಕ ಸಂಚಿಕೆ ಹೊರಬರುತ್ತಿದೆ.

 • ಈ ಬಾರಿ ಎಂ ಎ.ಇತಿಹಾಸ ಸ್ನಾತಕೋತ್ತರ ಪದವಿಯನ್ನು ಆರಂಭಿಸಲಾಗಿದ್ದು 'ಎ'ಯೋಜನೆ[ಸ್ಕೀಮ್] ಅಡಿಯಲ್ಲಿ ೧೪ ಸೀಟುಗಳು ಮತ್ತು 'ಬಿ'ಯೋಜನೆ[ಸ್ಕೀಮ್] ಅಡಿಯಲ್ಲಿ ೭ ಸೀಟುಗಳು ಲಭ್ಯವಿವೆ.

ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳ ಪಟ್ಟಿ[ಬದಲಾಯಿಸಿ]

ಕ್ರಿ.ಶ.೧೯೧೬ರಲ್ಲಿ ಪ್ರಾರಂಭಗೊಂಡ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಈವರೆವಿಗೂ ಅಂದರೆ ೨೦೧೪ರವರೆವಿಗೆ ಸೇವೆಸಲ್ಲಿಸಿರುವ/ಸಲ್ಲಿಸುತ್ತಿರುವ ಕುಲಪತಿಗಳ ವಿವರಣೆಯಲ್ಲಿ ಇಲ್ಲಿ ಕೊಡಲಾಗಿದೆ.

 • ೧.ಶ್ರೀಎಚ್.ವಿ.ನಂಜುಂಡಯ್ಯ - ೧೯೧೬-೧೯೨೦
 • ೨.ಶ್ರೀಕೆ.ಟಿ.ಬ್ರಜೇಂದ್ರನಾಥ್ ಸೀಲ್ - ೧೯೨೧-೧೯೨೯
 • ೩.ಡಾ.ಇ.ಪಿ.ಮೆಟ್ಕಾಲ್ಫೇ -೧೯೩೦-೧೯೩೭
 • ೪.ಶ್ರೀಎನ್.ಎಸ್.ಸುಬ್ಬರಾವ್ - ೧೯೩೭-೧೯೪೨
 • ೫.ಶ್ರೀಇ.ಜಿ.ಮೆಕಾಲ್ಫೀನ್ -೧೯೪೨-೧೯೪೪
 • ೬.ಶ್ರೀಟಿ.ಸಿಂಗಾರವೇಲು ಮೊದಲಿಯಾರ್ -೧೯೪೪-೧೯೪೬
 • ೭.ಶ್ರೀಸುಲ್ತಾನ್ ಮೊಹಿಯುದ್ದೀನ್ -೧೯೪೬-೧೯೪೮
 • ೮.ಶ್ರೀಆರ್.ಕಸ್ತೂರಿರಾಜ್ ಶೆಟ್ಟಿ - ೧೯೪೮-೧೯೫೦
 • ೯.ಡಾ.ಬಿ.ಎಲ್.ಮಂಜುನಾಥ್ - ೧೯೫೦-೧೯೫೪
 • ೧೦.ಪ್ರೊ.ವಿ.ಎಲ್.ಡಿ'ಸೋಜ - ೧೯೫೪-೧೯೫೬
 • ೧೧.ಡಾ.ಕೆ.ವಿ.ಪುಟ್ಟಪ್ಪ[ಕುವೆಂಪು] - ೧೯೫೬-೧೯೬೦
 • ೧೨.ಶ್ರೀಎನ್.ಎ.ನಿಕ್ಕಮ್ -೧೯೬೦-೧೯೬೨
 • ೧೩.ಶ್ರೀಕೆ.ಎಂ.ಫಣೀಕರ್ - ೧೯೬೨-೧೯೬೪
 • ೧೪.ಡಾ.ಕೆ.ಎಲ್,ಶ್ರೀಮಲಿ - ೧೯೬೪-೧೯೬೯
 • ೧೫.ಪ್ರೊ.ದೇ.ಜವರೇಗೌಡ - ೧೯೬೯-೧೯೭೫
 • ೧೬.ಶ್ರೀಡಿ.ವಿಜಯದೇವರಾಜ ಅರಸ್ -೧೯೭೬-೧೯೭೯
 • ೧೭.ಪ್ರೊ.ಕೆ.ಎಸ್.ಹೆಗಡೆ - ೧೯೭೯-೧೯೮೫
 • ೧೮.ಡಾ.ವೈ.ಪಿ.ರುದ್ರಪ್ಪ -೧೯೮೫-೧೯೮೮
 • ೧೯.ಡಾ.ಪಿ.ಸೆಲ್ವಿದಾಸ್ -೧೯೮೮=೧೯೯೧
 • ೨೦.ಪ್ರೊ.ಎಂ.ಮಾದಯ್ಯ - ೧೯೯೧-೧೯೯೭
 • ೨೧.ಪ್ರೊ.ಎಸ್.ಎನ್.ಹೆಗಡೆ - ೧೯೯೭-೨೦೦೩
 • ೨೨.ಪ್ರೊ.ಜೆ.ಶಶಿಧರಪ್ರಸಾದ್ - ೨೦೦೩-೨೦೦೭
 • ೨೩.ಪ್ರೊ.ವಿ.ಜಿ.ತಳವಾರ್ -೨೦೦೮ -೨೦೦೧೩
 • ೨೪.ಪ್ರೊ.ಕೆ.ಎಸ್.ರಂಗಪ್ಪ -೨೦೧೩ -

ಲಾಂಛನದ ವೈಶಿಷ್ಟ್ಯತೆ[ಬದಲಾಯಿಸಿ]

ಮೈಸೂರು ವಿಶ್ವವಿದ್ಯಾಲಯದ ಲಾಂಛನವು ವಿಶೇಷತೆಯಿಂದ ಕೂಡಿರುವಂತಹುದು. ಅದರ ಎರಡು ಪಾರ್ಶ್ವಗಳಲ್ಲೂ ಶರಭಪ್ರಾಣಿಯನ್ನು ಹೊಂದಿ, ನಡುವೆ ಎರಡು ಶಿರಗಳುಳ್ಳ 'ಗಂಡುಭೇರುಂಡ, ಪಕ್ಷಿಯಿಂದ ಕೂಡಿದೆ. ಆ ಶರಭಪ್ರಾಣಿಗೆ ಆನೆಯ ತರಹದ ಸೊಂಡಿಲಿದೆ. ಇವೆರಡು ಪೌರಾಣಿಕ/ಕಾಲ್ಪನಿಕ ಪ್ರಾಣಿ-ಪಕ್ಷಿಗಳಾಗಿವೆ. ಈ ಸಂಕೇತಗಳು ವಿದ್ಯಾವಂತರಲ್ಲಿರಬೇಕಾದ ಜಾಗೃತಿ, ಶೀಲ, ಏಕತೆ, ಧೈರ್ಯ, ಔದಾರ್ಯ ಸಮರಸ ಬಾಳ್ವೆ ಮತ್ತು ಸತ್ಯವನ್ನು ಪ್ರತಿನಿಧಿಸುತ್ತವೆ. ಈ ಲಾಂಛನದ ಮೇಲೆ "ನ ಹಿ ಜ್ಞಾನೇನ ಸದೃಶಂ" ಎಂಬ ಧ್ಯೇಯವಾಕ್ಯವಿದೆ. ಅಂದರೆ "ಜ್ಞಾನಕ್ಕೆ ಸಮನಾದುದು ಬೇರೊಂದಿಲ್ಲ" ಎಂಬರ್ಥವಿದೆ. ಅಲ್ಲದೆ ಈ ಲಾಂಛನದಲ್ಲಿ ಮತ್ತೊಂದು ಸಂಸ್ಕೃತ ನುಡಿಯಾದ 'ಸತ್ಯಮೇವೂದ್ಧರಾಮ್ಯಹಂ'ನ್ನು ರೇಖಿಸಲ್ಪಟ್ಟಿದೆ. ಅಂದರೆ ನಾನು ಯಾವಾಗಲೂ ಸತ್ಯವನ್ನೇ ಎತ್ತಿ ಹಿಡಿಯುತ್ತೇನೆ, ಸತ್ಯವಂತರಿಂದಾಗಿ ಈ ಭೂಮಿ ಉಳಿದಿದೆ ಎಂಬ ಆದರ್ಶ ಪರಿಕಲ್ಪನೆ ಇಲ್ಲಿದೆ.

ಕ್ಯಾಂಪಸ್ ಸೌಂದರ್ಯ[ಬದಲಾಯಿಸಿ]

ಭಾರತದ ವಿದ್ಯಾಕ್ಷೇತ್ರದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಹೇಗೆ ತನ್ನದೇ ಆದ ಛಾಪು ಮೂಸಿಡಿದೆಯೋ ಅದೇ ರೀತಿ ವಿ.ವಿ.ಯ ಕ್ಯಾಂಪಸ್ ಸೌಂದರ್ಯವು ತನ್ನದೇ ಆದ ವೈಶಿಷ್ಟ್ಯಗಳಿಂದ ಕೂಡಿದೆ . ಸುಮಾರು ೬೫೦ ಎಕರೆಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿ ಹಸಿರು ಮತ್ತು ನೀರಿನ ಸಮ್ಮಿಲನದಿಂದ ಹೆಣೆದುಕೊಂಡಿರುವ ಈ ವಿದ್ಯಾಕ್ಷೇತ್ರ ನೋಡುಗರ ಮನವನ್ನು ಸೆಳೆಯುತ್ತಿದೆ. ಈ ಕ್ಯಾಂಪಸ್ ನ ಮುಖ್ಯ ಆಕರ್ಷಣೆ ಪ್ರಸಿದ್ಧ ಕುಕ್ಕರಹಳ್ಳಿ ಕೆರೆ .

ಸಾಮಾಜಿಕ ಜವಾಬ್ದಾರಿ[ಬದಲಾಯಿಸಿ]

ಮೈಸೂರು ವಿಶ್ವ ವಿದ್ಯಾನಿಲಯವು ಇದೊಂದು ಸಾಮಾಜಿಕ ಜವಾಬ್ದಾರಿಯುತ ತಾಣವಾಗಿದೆ. ಅನೇಕ ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು ಇಲ್ಲಿನ ಪರಿಸರದಲ್ಲಿನ ಬದಲಾವಣೆಯನ್ನು ಗಮನಿಸಿ ಅವರಿಗೂ ಸಹ ತಮ್ಮ ಮೇಲಿನ ಜವಾಬ್ದಾರಿ ತಿಳಿಯಲು ಅನುಕೂಲಕರವಾದ ವಾತಾವರಣ ಸೃ‌‌ಷ್ಟಿಸುತ್ತದೆ.


ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]