ಸಿದ್ದರಾಮಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿದ್ದರಾಮಯ್ಯ

ಕರ್ನಾಟಕದ ೨೨ನೆಯ ಮುಖ್ಯಮಂತ್ರಿ
ಹಾಲಿ
ಅಧಿಕಾರ ಸ್ವೀಕಾರ 
೨೦ ಮೇ ೨೦೨೩
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಪ್ರತಿನಿಧಿ ಡಿ.ಕೆ.ಶಿವಕುಮಾರ್
ಪೂರ್ವಾಧಿಕಾರಿ ಬಸವರಾಜ ಬೊಮ್ಮಾಯಿ (ಬಿಜೆಪಿ)
ಮತಕ್ಷೇತ್ರ ವರುಣ, ಮೈಸೂರು
ಅಧಿಕಾರ ಅವಧಿ
೧೩ ಮೇ ೨೦೧೩ – ೧೭ ಮೇ ೨೦೧೮
ಪೂರ್ವಾಧಿಕಾರಿ ಜಗದೀಶ್ ಶೆಟ್ಟರ್ (ಬಿಜೆಪಿ)
ಉತ್ತರಾಧಿಕಾರಿ ಬಿ. ಎಸ್. ಯಡಿಯೂರಪ್ಪ (ಬಿಜೆಪಿ)

ಕರ್ನಾಟಕದ ಉಪ ಮುಖ್ಯಮಂತ್ರಿ
ಅಧಿಕಾರ ಅವಧಿ
೩೧ ಮೇ ೧೯೯೬ – ೭ ಅಕ್ಟೋಬರ್ ೧೯೯೯
ಪೂರ್ವಾಧಿಕಾರಿ ಜೆ_ಹೆಚ್_ಪಟೇಲ್
ಉತ್ತರಾಧಿಕಾರಿ himself
ಮತಕ್ಷೇತ್ರ ಚಾಮುಂಡೇಶ್ವರಿ
ಅಧಿಕಾರ ಅವಧಿ
೨೮ ಮೇ ೨೦೦೪ – ೫ ಆಗಸ್ಟ್ ೨೦೦೫[೧]
ಪೂರ್ವಾಧಿಕಾರಿ himself
ಉತ್ತರಾಧಿಕಾರಿ ಮಠದ ಪಾಟೀಲ್ ಪ್ರಕಾಶ್
ಮತಕ್ಷೇತ್ರ ಚಾಮುಂಡೇಶ್ವರಿ
ವೈಯಕ್ತಿಕ ಮಾಹಿತಿ
ಜನನ (೧೯೪೮-೦೮-೧೨)೧೨ ಆಗಸ್ಟ್ ೧೯೪೮
ರಾಷ್ಟ್ರೀಯತೆ  ಭಾರತ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಪಾರ್ವತಿ
ಮಕ್ಕಳು ರಾಕೇಶ್, ಯತೀಂದ್ರ

ಸಿದ್ದರಾಮಯ್ಯ (ಜನನ: ೧೨ ಆಗಸ್ಟ್, ೧೯೪೮) ಕರ್ನಾಟಕದ ೨೨ನೇ ಮುಖ್ಯಮಂತ್ರಿ. ೨೦೧೩ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷದ ಸಂಸದೀಯ ಪಕ್ಷದ ನಾಯಕರಾಗಿ ಮತ್ತು ಕರ್ನಾಟಕದ ೨೨ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಅನುಭವಿ ರಾಜಕಾರಣಿ.[೨][೩][೪][೫][೬]

ಬಾಲ್ಯ

ಮೈಸೂರಿನ ವರುಣಾ ಹೋಬಳಿಯ ಸಿದ್ಧರಾಮನಹುಂಡಿಯಲ್ಲಿ ೧೯೪೮ರ ಆಗಸ್ಟ್ ೧೨ ರಂದು ಜನಿಸಿದರು. ಇವರ ತಂದೆ ಸಿದ್ಧರಾಮೇಗೌಡ, ತಾಯಿ-ಬೋರಮ್ಮ. ಇವರದು ತುಂಬು ಮನೆಯ ಅವಿಭಕ್ತ ಕುಟುಂಬ. ಚಿಕ್ಕಂದಿನಲ್ಲೇ ಜಾನಪದ ನೃತ್ಯ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯಗಳನ್ನು ಕಲಿತಿದ್ದಾರೆ. ಹತ್ತನೇ ವರ್ಷದವರೆಗೆ ಇವರು ಶಾಲೆಗೇ ಹೋಗಿರಲಿಲ್ಲ. ನೇರವಾಗಿ ಐದನೇ ತರಗತಿಗೆ ಶಾಲೆಗೆ ಪ್ರವೇಶ ಪಡೆದು ವಿದ್ಯಾಭ್ಯಾಸ ಮುಂದುವರೆಸಿದರು..[೭][೮][೯][೧೦][೧೧] [೧೨]

ವಿದ್ಯಾಭ್ಯಾಸ

ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ವಿದ್ಯಾಭ್ಯಾಸವನ್ನು ತಮ್ಮ ಹುಟ್ಟೂರಿನಲ್ಲೂ, ಪಿ.ಯು.ಸಿ.ಯನ್ನು ಮೈಸೂರಿನಲ್ಲಿ, ಬಿ.ಎಸ್ಸಿಯನ್ನು ಯುವರಾಜ ಕಾಲೇಜಿನಲ್ಲಿ ಓದಿದರು. ನಂತರ ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದು, ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜೂನಿ ಯರ್ ಆಗಿ ನಂತರ ೧೯೭೮ರವರೆಗೆ ಸ್ವಂತ-ವಕೀಲಿ ವೃತ್ತಿ ನಡೆಸಿದರು.

ರಾಜಕೀಯ ಜೀವನ

  • ೧೯೮೩ರ ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದರು. ಭಾರತೀಯ ಲೋಕದಳದಿಂದ ಜನತಾ ಪಕ್ಷಕ್ಕೆ ಸೇರಿದಾಗ, ಇವರನ್ನು ಹೊಸದಾಗಿ ರಚಿಸಿದ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಗಡಿಭಾಗಗಳಾದ ಕಾಸರಗೋಡು, ಬೆಳಗಾವಿ, ಕೋಲಾರ ಮುಂತಾದೆಡೆ ಪ್ರವಾಸ ಕೈಗೊಂಡು ವರದಿ ಸಲ್ಲಿಸಿದರು.
  • ೧೯೮೫ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು. , ಪಶುಸಂಗೋಪನೆ ಸಚಿವರನ್ನಾಗಿ ನೇಮಕ. . ಸಂಪುಟ ಪುನರ್ರಚನೆಯ ನಂತರ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.
  • ೧೯೮೯ರ ಕಾಂಗ್ರೆಸ್ ಅಲೆಯಲ್ಲಿ ಚುನಾವಣೆ ಸೋತ ಸಿದ್ಧರಾಮಯ್ಯ, ಜನತಾ ಪಕ್ಷ ಹೋಳಾದಾಗ ಜನತಾದಳ ಸೇರಿದರು. ೧೯೯೨ರಲ್ಲಿ ದೇವೇಗೌಡರು ಸಮಾಜವಾದಿ ಜನತಾ ಪಕ್ಷದಿಂದ ಜನತಾದಳ ಸೇರಿದಾಗ, ಜನತಾದಳದ ಕಾರ್ಯದರ್ಶಿಯಾದರು.
  • ೧೯೯೪ರ ಚುನಾವನಣೆಯಲ್ಲಿ ಗೆದ್ದು ಹಣಕಾಸು ಸಚಿವರಾದರು.
  • ೧೯೯೯ರ ಚುನಾವಣೆಯ ಹೊತ್ತಿಗೆ ಜನತಾ ದಳ ೨ ಭಾಗವಾದಾಗ, ದೇವೇಗೌಡರೊಂದಿಗೆ ಸೇರಿ ಜಾತ್ಯತೀತ ಜನತಾದಳ ಪಕ್ಷದ ಅಧ್ಯಕ್ಷರಾದರು.
  • ೧೯೯೯ರ ಚುನಾವಣೆಯಲ್ಲಿ ಸೋಲು .
  • ೨೦೦೪ರ ಹೊತ್ತಿಗೆ ಜಾತ್ಯತೀತ ಜನತಾದಳದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾದರು.
  • ೨೦೦೪ರಲ್ಲಿ ಅತಂತ್ರ ವಿಧಾನಸಭೆ ರಚನೆಯಾದಾಗ, ಕಾಂಗ್ರೆಸ್ ಜತೆಗೂಡಿ ಸರ್ಕಾರ ರಚನೆಯಾದಾಗ ೨ ಬಾರಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದರು,[೧೩]
  • ೨೦೦೬ರ ಡಿಸೆಂಬರ್ ಉಪಚುನಾವಣೆಯಲ್ಲಿ ಸ್ಪರ್ಧಿಸಿದರು.
  • ೨೦೦೮ರಲ್ಲಿ ಗೆದ್ದ ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಗೆಲುವು.
  • ೨೦೧೩ರ ಚುನಾವಣೆಯ ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಅಭ್ಯರ್ಥಿ.
  • ಮೇ ೧೦ ೨೦೧೩ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ, ಮೇ ೧೩ ೨೦೧೪ರಂದು ಕರ್ನಾಟಕದ ೨೨ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. (೧೩ ಮೇ ೨೦೧೩ – )[೧೪]

[೧೫]

  • ಮುಖ್ಯಮಂತ್ರಿಯಾಗಿ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯಗಳಂತಹ ಯೋಜನೆಗಳನ್ನು ಮಾಡಿದರು ಮತ್ತು ದಲಿತವರ್ಗಗಳಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸನ್ನು ನೀಡಿದ್ದರು.[೧೬]
  • ೧೨-೦೫-೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಅವುಗಳಲ್ಲಿ ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿದ್ದರು.[೧೭], [೧೮]
  • 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು 24ನೇ ಮುಖ್ಯಮಂತ್ರಿ ಆದರು.
  • 2023 ರ ಪ್ರಸಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಯೋಜನೆಗಳನ್ನು ಜಾರಿಗೆ ತಂದರು.

ಉಲ್ಲೇಖಗಳು

  1. Special Correspondent: Siddaramaiah, two others dropped. Archived 2006-03-02 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಹಿಂದೂ,Aug 06, 2005.
  2. "ಬಾಳಪಯಣ" [Biography] (in Kannada). Archived from the original on 30 ಮಾರ್ಚ್ 2016. Retrieved 25 March 2016.{{cite web}}: CS1 maint: unrecognized language (link)
  3. "I'm Sidda-Rama and 100% Hindu: Karnataka CM Siddaramaiah".
  4. Raghuram, M. (10 May 2013). "Siddaramaiah: How a Mysore boy made it to the top". DNA. Mysore. Retrieved 2013-05-11.
  5. Kulkarni, Mahesh (8 May 2013). "Siddaramaiah - Profiling the front runner for K'taka CM". Business Standard. ಬೆಂಗಳೂರು. Retrieved 2013-05-09.
  6. "Siddaramaiah sworn in as Karnataka chief minister". Southmonitor.com. Archived from the original on 2013-12-24. Retrieved 2017-09-21.
  7. "Rakesh Siddaramaiah, Karnataka CM's son, dies in Belgium". The Indian Express. ನವ ದೆಹಲಿ. 2016-07-30. Retrieved 2016-07-31.
  8. http://www.rediff.com/news/2008/apr/21spec.htm
  9. http://scroll.in/article/662088/today-could-be-former-prime-minister-deve-gowdas-last-hurrah
  10. Sudhir, T. S. (10 May 2013). "Deve Gowda, Kumaraswamy mutely watch Siddaramaiah's rise". Firstpost.com. Retrieved 2013-05-11.
  11. Hegde, Bhaskar (10 May 2013). "If denied CM gaddi, irked Siddaramaiah likely to revive AHINDA". Deccan Chronicle. Bengaluru. Archived from the original on 2013-06-09. Retrieved 2013-05-11.
  12. Bennur, Shankar (11 May 2013). "Siddaramanahundi celebrates elevation of its proud son". The Hindu. Siddaramanahundi. Retrieved 2013-05-11.
  13. Rajendran, S. (10 May 2013). "A decade-long wait ends for Siddaramaiah". ದಿ ಹಿಂದೂ. Bangalore. Retrieved 2013-05-11.
  14. "Siddaramaiah rated fourth most popular Chief Minister in the country". Archived from the original on 2017-05-14. Retrieved 2017-09-21.
  15. "Siddaramaiah journey so far". ದಿ ಟೈಮ್ಸ್ ಆಫ್‌ ಇಂಡಿಯಾ. Bangalore. 8 June 2009. Archived from the original on 2013-11-28. Retrieved 2013-05-09.
  16. https://kannada.oneindia.com/news/karnataka/ten-hand-picked-popular-schemes-by-siddaramaiah-government/articlecontent-pf38597-093766.html
  17. ತವರಿನಲ್ಲೇ ಸಿದ್ದರಾಮಯ್ಯಗೆ ಹೀನಾಯ ಸೋಲು - ಪ್ರಜಾವಾಣಿ ವರದಿ
  18. "ಬಾದಾಮಿ ಕ್ಷೇತ್ರದಲ್ಲಿ ಎದ್ದೂ ಬಿದ್ದೂ ಗೆದ್ದ ಸಿದ್ದರಾಮಯ್ಯ - ವಿಜಯವಾಣಿ ವರದಿ". Archived from the original on 2018-07-19. Retrieved 2018-07-26.

ಹೊರಕೊಂಡಿಗಳು