ವೀರಪ್ಪ ಮೊಯ್ಲಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Veerappa Moily
ವೀರಪ್ಪ ಮೊಯ್ಲಿ

ಹಾಲಿ
ಅಧಿಕಾರ ಸ್ವೀಕಾರ 
ಜುಲೈ ೧೩, ೨೦೧೧
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್

ಅಧಿಕಾರ ಅವಧಿ
28 May 2009 – July 12, 2011
ಪ್ರಧಾನ ಮಂತ್ರಿ Manmohan Singh
ಪೂರ್ವಾಧಿಕಾರಿ Hansraj Bhardwaj
ಉತ್ತರಾಧಿಕಾರಿ Salman Khurshid

ಅಧಿಕಾರ ಅವಧಿ
19 November 1992 – 11 December 1994
ರಾಜ್ಯಪಾಲ Khurshed Alam Khan
ಪೂರ್ವಾಧಿಕಾರಿ S. Bangarappa
ಉತ್ತರಾಧಿಕಾರಿ H. D. Deve Gowda
Personal details
Born (1940-01-12) 12 ಜನವರಿ 1940 (ವಯಸ್ಸು Expression error: Unrecognized punctuation character "�".)
ಮೂಡಬಿದಿರೆ, British India
Political party Indian National Congress
Spouse(s) ಮಾಲತಿ ಮೊಯಿಲಿ
Children 3 daughters
1 son
Alma mater University College, Mangalore
Bangalore University
Website Official Websiteವೀರಪ್ಪ ಮೊಯ್ಲಿ

ವೀರಪ್ಪ ಮೊಯ್ಲಿ ಕರ್ನಾಟಕ ರಾಜ್ಯದ ೧೩ ನೇ ಮುಖ್ಯಮಂತ್ರಿ ಯಾಗಿ ಸೇವೆ ಸಲ್ಲಿಸಿದ್ದಾರೆ.

ವೀರಪ್ಪ ಮೊಯಿಲಿಯವರು ೧೯೪೦ ಜನೆವರಿ ೧೨ರಂದು ಜನಿಸಿದರು. ಇವರ ತಾಯಿ ಪೂವಮ್ಮ ; ತಂದೆ ತಮ್ಮಯ್ಯ ಮೊಯಿಲಿ.


ಶಿಕ್ಷಣ[ಬದಲಾಯಿಸಿ]

ಮೊಯಿಲಿಯವರು ತಮ್ಮ ಪ್ರಾಥಮಿಕ ಹಾಗು ಮಾಧ್ಯಮಿಕ ಶಿಕ್ಷಣಗಳನ್ನು ಮೂಡಬಿದಿರಿಯಲ್ಲಿ ಪೂರೈಸಿ, ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಅಧ್ಯಯನ ಪೂರೈಸಿ, ಪದವಿ ಪಡೆದರು. ಕರ್ನಾಟಕ ಸರಕಾರದ ಮೀನುಗಾರಿಕೆ ಇಲಾಖೆಯಲ್ಲಿ, ತನ್ನಂತರ ಭಾರತೀಯ ಜೀವವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದಂತೆಯೆ , ಬೆಂಗಳೂರಿನ ಸರಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್.ಪದವಿ ಪಡೆದರು.


ವೃತ್ತಿ ಜೀವನ[ಬದಲಾಯಿಸಿ]

ಕಾರ್ಕಳ ಹಾಗು ಮಂಗಳೂರುಗಳಲ್ಲಿ ವೃತ್ತಿಯನ್ನಾರಂಭಿಸಿದ ಮೊಯಿಲಿಯವರು , ಬೆಂಗಳೂರಿನಲ್ಲಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯವಾದಿ ವೃತ್ತಿಯನ್ನು ಮುಂದುವರಿಸಿದರು.


ರಾಜಕಾರಣ[ಬದಲಾಯಿಸಿ]

೧೯೬೮ರಲ್ಲಿ ಮೊಯಿಲಿಯವರು ಕಾಂಗ್ರೆಸ್ ಪಕ್ಷದ ಸದಸ್ಯರಾದರು. ೧೯೬೯ರಲ್ಲಿ ಕಿಸಾನ ಸಭಾ ಸ್ಥಾಪಿಸಿದರು.

೧೯೭೨ರಿಂದ ೧೯೯೯ರವರೆಗೆ ಮೊಯಿಲಿಯವರು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದರು. ೧೯೭೪ರಿಂದ ೧೯೭೭ರವರೆಗೆ ಮೊಯಿಲಿಯವರು ಸಣ್ಣ ಕೈಗಾರಿಕೆ ಖಾತೆಯ ಮಂತ್ರಿಯಾಗಿದ್ದರು. ೧೯೮೦ರಿಂದ ೧೯೮೨ರವರೆಗೆ ಹಣಕಾಸು ಮತ್ತು ಯೋಜನಾ ಖಾತೆಯ ಮಂತ್ರಿಯಾಗಿದ್ದರು. ೧೯೮೩ರಿಂದ ೧೯೮೫ರವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು. ೧೯೮೯ರಿಂದ ೧೯೯೨ರ ವರೆಗೆ ವಿವಿಧ ಇಲಾಖೆಗಳ ಸಚಿವರಾಗಿದ್ದ ಮೊಯಿಲಿ, ೧೯೯೨ರಿಂದ ೧೯೯೪ರವರೆಗೆ ಕರ್ನಾಟಕದ ೧೩ನೆಯ ಮುಖ್ಯ ಮಂತ್ರಿಗಳಾಗಿ ಸೇವೆ ಸಲ್ಲಿಸಿದರು.


ಸಾಹಿತ್ಯ[ಬದಲಾಯಿಸಿ]

ವೀರಪ್ಪ ಮೊಯಿಲಿಯವರು ಗಣ್ಯ ಸಾಹಿತಿಗಳೂ ಆಗಿದ್ದಾರೆ. ಅವರ ಪತ್ನಿ ಶ್ರೀಮತಿ ಮಾಲತಿ ಮೊಯಿಲಿ ಸಹ ಲೇಖಕಿಯಾಗಿದ್ದಾರೆ. ಮೊಯಿಲಿಯವರ ಕೃತಿಗಳು ಇಂತಿವೆ:

ಕೃತಿಗಳು[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

 • ಸುಳಿಗಾಳಿ
 • ಸಾಗರದೀಪ
 • ಕೊಟ್ಟ
 • ತೆಂಬರೆ

ನಾಟಕಗಳು[ಬದಲಾಯಿಸಿ]

 • ಮಿಲನ
 • ಪ್ರೇಮವೆಂದರೆ
 • ಪರಾಜಿತ
 • ಮೂರು ನಾಟಕಗಳು

ಕವನ ಸಂಕಲನ[ಬದಲಾಯಿಸಿ]

 • ಹಾಲು ಜೇನು
 • ಮತ್ತೆ ಮಡೆಯಲಿ ಸಮರ
 • ಯಕ್ಷಪ್ರಶ್ನೆ
 • ಜೊತೆಯಾಗಿ ನಡೆಯೋಣ (ಶ್ರೀಮತಿ ಮಾಲತಿ ಮೊಯಿಲಿಯವರ ಜೊತೆಯಲ್ಲಿ)

ಮಹಾಕಾವ್ಯ[ಬದಲಾಯಿಸಿ]

 • ಶ್ರೀರಾಮಾಯಣ ಅನ್ವೇಷಣಂ

ಪುರಸ್ಕಾರ[ಬದಲಾಯಿಸಿ]

 • ೨೦೦೦ನೆಯ ಸಾಲಿನಲ್ಲಿ ಮೊಯಿಲಿಯವರಿಗೆ ಅಲ್-ಅಮೀನ್ ಸದ್ಭಾವನಾ ಪ್ರಶಸ್ತಿ ಲಭಿಸಿತು.
 • ೨೦೦೧ನೆಯ ಸಾಲಿನಲ್ಲಿ ಹಿಂದುಳಿದ ಹಾಗು ಅಲ್ಪಸಂಖ್ಯಾತ ವರ್ಗದವರ ಸುಧಾರಣೆಗಾಗಿ ಕೊಡಮಾಡುವ ದೇವರಾಜ ಅರಸ ಪ್ರಶಸ್ತಿ ದೊರೆಯಿತು.
 • ೨೦೦೧ಆರ್ಯಭಟ ಪುರಸ್ಕಾರ ದೊರೆತಿದೆ.
 • ೨೦೦೨ರಲ್ಲಿ ಗೊರೂರು ಪ್ರತಿಷ್ಠಾನದ ಸಮಗ್ರ ಸಾಹಿತ್ಯ ಪುರಸ್ಕಾರ ಲಭಿಸಿತು.