ಹೆಚ್.ಡಿ.ಕುಮಾರಸ್ವಾಮಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ
H. D. Kumaraswamy
HD Kumaraswamy.jpg

ಅಧಿಕಾರ ಅವಧಿ
೦೩-ಫೆಬ್ರುವರಿ-೨೦೦೬ – ೦೯-ಅಕ್ಟೋಬರ-೨೦೦೭
ರಾಜ್ಯಪಾಲ ಟಿ. ಎನ್. ಚರ್ತುವೇದಿ
ಪೂರ್ವಾಧಿಕಾರಿ ಧರಮ್ ಸಿಂಗ್
ಉತ್ತರಾಧಿಕಾರಿ ಬಿ.ಎಸ್. ಯಡಿಯೂರಪ್ಪ
Personal details
Born (1959-12-16) 16 ಡಿಸೆಂಬರ್ 1959 (ವಯಸ್ಸು Expression error: Unrecognized punctuation character "�".)
ರಾಮನಗರ, ಕರ್ನಾಟಕ
Political party ಜನತಾದಳ(ಎಸ್)
Spouse(s) ಅನಿತಾ ಕುಮಾರಸ್ವಾಮಿ ಮತ್ತು ರಾಧಿಕ ಕುಮಾರಸ್ವಾಮಿ (೨ನೇ ಹೆಂಡತಿ)
Children ೧ ಮಗ ನಿಖಿಲ್ (ಅನಿತಾ ) ಮತ್ತು ೧ ಮಗಳು ಶಮಿಕ (ರಾಧಿಕ )
Residence ಬೆಂಗಳೂರು, ಭಾರತ
Alma mater ವಿಜಯಾ ಕಾಲೇಜ,ಬೆಂಗಳೂರು (ಪಿಯುಸಿ)
ನ್ಯಾಶನಲ್ ಕಾಲೇಜ ,ಬೆಂಗಳೂರು (ಬಿಎಸ್ಸಿ)
Religion ಹಿಂದು ವಕ್ಕಲಿಗ
Website http://kumaraswamy.bengalu.ru/

ಹೆಚ್.ಡಿ. ಕುಮಾರಸ್ವಾಮಿ (ಜನನ: ೧೯ ಡಿಸೆಂಬರ್,೧೯೫೯) ಕರ್ನಾಟಕದ ೧೮ನೆ ಮುಖ್ಯಮಂತ್ರಿ. ಕುಮಾರಸ್ವಾಮಿ, ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ತೃತೀಯ ಪುತ್ರ ಹಾಗು ಕರ್ನಾಟಕ ರಾಜ್ಯ ಜನತಾದಳ (ಎಸ್) ಪಕ್ಷದ ಶಾಸಕಾಂಗ ನಾಯಕ. ಕುಮಾರಸ್ವಾಮಿ ಚಲನಚಿತ್ರ ನಿರ್ಮಾಪಕರೂ ಕೂಡ.

ಜೀವನ[ಬದಲಾಯಿಸಿ]

ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿಯವರ ಜನ್ಮ ಡಿಸೆಂಬರ್ ೧೯, ೧೯೫೯ರಲ್ಲಾಯಿತು.ರಾಜಕೀಯ ಅನುಭವವಿಲ್ಲದಿದ್ದರೂ ೧೯೯೬ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ೧೯೯೮ರಲ್ಲಿ ಕನಕಪುರ ಲೋಕಸಭೆ ಕ್ಷೇತ್ರದಿಂದ ಮತ್ತು ೧೯೯೯ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಕಂಡ ಕುಮಾರಸ್ವಾಮಿ, ೨೦೦೪ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾದರು. ಕಾಂಗ್ರೆಸ್ ಮತ್ತು ಜನತಾದಳ(ಎಸ್) ಮೈತ್ರಿಕೂಟದ ಸರ್ಕಾರ ಸ್ಥಾಪನೆಯ ಕಾಲದಲ್ಲಿ ಕುಮಾರಸ್ವಾಮಿ ಜನತಾದಳದ ಕಾರ್ಯಾಧ್ಯಕ್ಷರಾರಾದರು. ೨೦೦೫ ಡಿಸೆಂಬರ್ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯದೊಂದಿಗೆ ಬದಲಾದ ರಾಜಕೀಯ ಪರಿಸ್ಥಿತಿ ಹಾಗು ಕಾಂಗ್ರೆಸ್ ಮತ್ತು ಜನತಾದಳದಿಂದ ನಿರ್ಗಮಿಸಿದ್ದ ಸಿದ್ದರಾಮಯ್ಯನವರ ನೆಡುವಿನ ಮೈತ್ರಿಯ ಮಾತುಕತೆಯಿಂದ ಅಸಂತುಷ್ಟರಾದ ಕುಮಾರಸ್ವಾಮಿ ೧೮ ಜನವರಿ, ೨೦೦೬ರೊಂದು, ತಮ್ಮ ತಂದೆ ಎಚ್.ಡಿ. ದೇವೇಗೌಡರ ಇಚ್ಚೆಯ ವಿರುದ್ದ, ತಮ್ಮ ಪಕ್ಷದ ೪೬ ಶಾಸಕರೊಡನೆ ರಾಜ್ಯಪಾಲರೊಡನೆ ಕಾಂಗ್ರೆಸ್‌ನ ಧರಂ ಸಿಂಗ್ ನೇತೃತ್ವದ ಸರ್ಕಾರಕ್ಕೆ ಕೊಟ್ಟ ಬೆಂಬಲ ಹಿಂದೆಗೆದುಕೊಂಡರು. ಕುಮಾರಸ್ವಾಮಿ ಫೆಬ್ರುವರಿ ೩, ೨೦೦೬ರೊಂದು ಭಾರತೀಯ ಜನತಾ ಪಕ್ಷದ ಸಹಕಾರದೊಂದಿಗೆ ಸ್ಥಾಪಿಸಲಾದ ನೂತನ ಸರ್ಕಾರದ ನೇತೃತ್ವ ವಹಿಸಿ ಕರ್ನಾಟಕದ ೧೮ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ೨೦೦೭ ನವೆಂಬರ್ ೨ ರಂದು ಬಿ.ಜೆ.ಪಿ.ಗೆ ಅಧಿಕಾರ ಹಸ್ತಾಂತರಿಸದೆ ಬಹುಮತ ಕಳೆದುಕೊಂಡರು .