ಜಗದೀಶ್ ಶೆಟ್ಟರ್
ವಿಕಿಪೀಡಿಯ ಇಂದ
| ಜಗದೀಶ್ ಶೆಟ್ಟರ್ | |
|
ಕರ್ನಾಟಕದ ೨೭ನೆಯ ಮುಖ್ಯಮಂತ್ರಿ
|
|
|---|---|
| ಹಾಲಿ | |
| ಅಧಿಕಾರ ಸ್ವೀಕಾರ ೧೨ ಜುಲೈ ೨೦೧೨ |
|
| ಪೂರ್ವಾಧಿಕಾರಿ | ಡಿ. ವಿ. ಸದಾನಂದ ಗೌಡ |
| ಮತಕ್ಷೇತ್ರ | ಹುಬ್ಬಳ್ಳಿ ಗ್ರಾಮೀಣ |
|
|
|
| ಜನನ | ಡಿಸೆಂಬರ್ ೧೭, ೧೯೫೫ ಕೆರೂರು ಗ್ರಾಮ, ಬಾದಾಮಿ ತಾಲೂಕು, ಬಾಗಲಕೋಟೆ ಜಿಲ್ಲೆ, ಕರ್ನಾಟಕ |
| ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
| ಪತಿ/ಪತ್ನಿ | ಶಿಲ್ಪ |
| ಮಕ್ಕಳು | ೨ ಮಕ್ಕಳು |
| ನಿವಾಸ | ನಂ೩೧, ಮಧುರಾ ಎಸ್ಟೇಟ್, ನಾಗ ಶೆಟ್ಟಿ ಕೊಪ್ಪ, ಹುಬ್ಬಳ್ಳಿ |
| ಉದ್ಯೋಗ | ನ್ಯಾಯವಾದಿ |
| ಧರ್ಮ | ಹಿಂದೂ ಧರ್ಮ |
| ಅಂತರ್ಜಾಲ ತಾಣ | http://jagadishshettar.com/ |
ಜಗದೀಶ್ ಶಿವಪ್ಪ ಶೆಟ್ಟರ್ (ಹುಟ್ಟಿದ್ದು: ೧೭-೧೨-೧೯೫೫) ಭಾರತೀಯ ಜನತಾ ಪಕ್ಷದ ಕರ್ನಾಟಕ ಘಟಕದ ಒಬ್ಬ ರಾಜಕಾರಣಿ ಮತ್ತು ಕರ್ನಾಟಕ ರಾಜ್ಯದ ಹಾಲಿ ಮುಖ್ಯಮಂತ್ರಿ. ಪ್ರಸ್ತುತ ಇವರು ಕರ್ನಾಟಕ ಸರ್ಕಾರದಲ್ಲಿ ವಿತ್ತ,ಗಣಿ,ಕನ್ನಡ ಮತ್ತು ಸಂಸ್ಕ್ರುತಿ,ಪ್ರವಾಸೋದ್ಯಮ ಖಾತೆ ಮುಂತಾದ ಹಲವು ಖಾತೆಗಳನ್ನು ನಿರ್ವಹಿಸುತ್ತಿದಾರೆ. ಇವರು ಎಚ್. ಡಿ. ಕುಮಾರಸ್ವಾಮಿರವರ ಸಂಪುಟದಲ್ಲಿ ಸಚಿವರಾಗಿದ್ದಾಗ ಕಂದಾಯ ಇಲಾಖೆಯ ಜವಾಬ್ದಾರಿವಹಿಸಿದ್ದರು. ಇವರು ೨೦೦೮-೨೦೦೯ ರಲ್ಲಿ ಕರ್ನಾಟಕ ವಿಧಾನ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ವೈಯಕ್ತಿಕ ಜೀವನ [ಬದಲಾಯಿಸಿ]
ಜನನ : ಕೆರೂರು , ಬಾದಾಮಿ ತಾಲೂಕು, ಬಾಗಲಕೋಟೆ ಜಿಲ್ಲೆ. ತಂದೆ : ಶಿವಪ್ಪ. ತಾಯಿ : ಬಸವಣೆಮ್ಮ. ಪತ್ನಿ : ಶಿಲ್ಪಾ. ಪುತ್ರರು: ಪ್ರಶಾಂತ ಹಾಗೂ ಸಂಕಲ್ಪ. ವಿದ್ಯಾರ್ಹತೆ: ಬಿ.ಕಾಂ. ಎಲ್.ಎಲ್.ಬಿ
ಜಗದೀಶ್ ಶೆಟ್ಟರ್ ಅಲಂಕರಿಸಿದ ಹುದ್ದೆಗಳು [ಬದಲಾಯಿಸಿ]
- ಸದಸ್ಯರು: ಎಬಿವಿಪಿ, ಅರ್.ಎಸ್.ಎಸ್
- ೧೯೯೦ : ಬಿಜೆಪಿ ಹುಬ್ಬಳ್ಳಿ ಗ್ರಾಮಾಂತರ ತಾಲ್ಲೂಕು ಘಟಕದ ಅಧ್ಯಕ್ಷ.
- ೧೯೯೪ : ಬಿಜೆಪಿ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ.
- ೧೯೯೪ : ಮೊದಲ ಬಾರಿಗೆವಿಧಾನಸಭೆಪ್ರವೇಶ ಹುಬ್ಬಳ್ಳಿ ಗ್ರಾಮಾಂತರ ಪ್ರದೇಶದ ಶಾಸಕರಾಗಿ
- ೧೯೯೯ : ಬಿಜೆಪಿ ರಾಜ್ಯ ಕಾರ್ಯದರ್ಶಿ ಸ್ಥಾನ ನಿರ್ವಹಣೆ
- ೧೯೯೯ : ಎರಡನೇ ಬಾರಿಗೆವಿಧಾನಸಭೆಪ್ರವೇಶ
- ೧೯೯೯ : ೧೧ನೇ ವಿಧಾನಸಭೆಯ ವಿರೋದ ಪಕ್ಷದ ನಾಯಕ
- ೨೦೦೪ : ಮೂರನೇ ಬಾರಿಗೆವಿಧಾನಸಭೆಪ್ರವೇಶ
- ೨೦೦೫ : ಬಿಜೆಪಿ ರಾಜ್ಯಾಧ್ಯಕ್ಷ (ಕರ್ನಾಟಕದ ರಾಜ್ಯ)
- ೨೦೦೬ : ಕಂದಾಯ ಇಲಾಖೆಯ ಮಂತ್ರಿ (ಬಿಜೆಪಿ ಮತ್ತು ಜೆಡಿ(ಎಸ್)) ಸಮ್ಮಿಶ್ರ ಸರ್ಕಾರ
- ೨೦೦೮ : ನಾಲ್ಕ ನೇ ಬಾರಿಗೆವಿಧಾನಸಭೆಪ್ರವೇಶ
- ೨೦೦೮ : ೧೩ ನೇ ವಿಧಾನಸಭೆ ಸಭಾದ್ಯಕ್ಷರು
- ೨೦೦೯ : ಗಾಮೀಣ ಅಭಿವ್ರುದ್ದಿ (ಪಂಚಾಯತ್ ರಾಜ್ )ಇಲಾಖೆಯ ಸಚಿವರು( (ಬಿಜೆಪಿ )) ಸರ್ಕಾರ)
- ೨೦೧೨ : ಜುಲೈ ೧೨ರ ಗುರುವಾರ ಮಧ್ಯಾಹ್ನ, ೧೨-೦೦ ಕ್ಕೆ ಸರಿಯಾಗಿ ಕರ್ನಾಟಕದ ೨೭ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.
ಬಾಹ್ಯ ಸಂಪರ್ಕಗಳು [ಬದಲಾಯಿಸಿ]
| ಪೂರ್ವಾಧಿಕಾರಿ: ಡಿ. ವಿ. ಸದಾನಂದ ಗೌಡ |
ಕರ್ನಾಟಕದ ಮುಖ್ಯಮಂತ್ರಿ ೧೨ ಜುಲೈ ೨೦೧೨–till date |
ಉತ್ತರಾಧಿಕಾರಿ: ... |
|
|||||||