ಚೆಂಬೈ ವೈದ್ಯನಾಥ ಭಾಗವತರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೆಂಬೈ ವೈದ್ಯನಾಥ ಭಾಗವತರು ೧೮೯೬ರಲ್ಲಿ ಕೇರಳ ದ ಪಾಲ್ಘಾಟ್ ಜಿಲ್ಲೆಯ ಚೆಂಬೈ ಎಂಬ ಗ್ರಾಮದಲ್ಲಿ ಜನಿಸಿದರು.ಇವರ ತಂದೆ ಅನಂತರಾಮ ಭಾಗವತರು ಕೂಡಾ ಪ್ರಸಿದ್ಧ ಸಂಗೀತಗಾರರು.ಇವರೇ ವೈದ್ಯನಾಧ ಭಾಗವತರಿಗೆ ಮೊದಲ ಗುರುಗಳು.ತಮ್ಮ ೨೨ನೇ ವಯಸ್ಸಿನಲ್ಲಿ ಮದ್ರಾಸಿನ ಗೋಖಲೆ ಹಾಲಿನಲ್ಲಿ ಪ್ರಥಮ ಸಂಗೀತ ಕಛೇರಿ ಕೊಟ್ಟ ಇವರು ಅನಂತರದ ದಿನಗಳಲ್ಲಿ ಸಾವಿರಾರು ಕಛೇರಿ ನಡೆಸಿಕೊಟ್ಟಿದ್ದು,ಆ ಕಾಲದ ಪ್ರಸಿದ್ಢರಾದ ಟಿ.ಚೌಡಯ್ಯ,ಪಾಲ್ಘಾಟ್ ಮಣಿ ಅಯ್ಯರ್ ಮುಂತಾದವರು ಕೂಡಾ ಇವರಿಗೆ ಪಕ್ಕವಾದ್ಯ ನುಡಿಸಿದ್ದರು.ಉತ್ತಮ ಶಾರೀರ, ಕಂಚಿನ ಕಂಠಶ್ರೀ,ಕಾಲ ಪ್ರಮಾಣ,ಗಾಂಭೀರ್ಯ ಇವರ ಕಛೇರಿಯ ಪ್ರಮುಖ ವೈಶಿಷ್ಟ್ಯಗಳಾಗಿದ್ದವು.ಇವರ ಶಿಷ್ಯರಲ್ಲಿ ಕೆ.ಜೆ.ಯೇಸುದಾಸ್ ಅತ್ಯಂತ ಪ್ರಸಿದ್ಧರು. ಇವರು ೧೯೭೪ರ ಅಕ್ಟೋಬರ್ ೧೦ ರಂದು ತಾನು ಪ್ರಥಮ ಕಛೇರಿ ನೀಡಿದ ಒಟ್ಟುಪಾಲಯಮ್ ನ ದೇವಸ್ಥಾನದಲ್ಲಿ ತನ್ನ ಪ್ರೀತಿಯ 'ಕರುಣೈ ಚೈವನ್ ಎಂಡು ತಾಮಸಮ್ ಕೃಷ್ಣ '(ಕರುಣೆ ತೋರಲು ತಡ ಯಾಕೆ ಕೃಷ್ಣಾ?)ಎಂಬ ಕೀರ್ತನೆಯನ್ನು ಹಾಡಿ ಕೊನೆಯುಸಿರೆಳೆದರು.

ಗೌರವ ಹಾಗೂ ಪ್ರಶಸ್ತಿಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]