ಮಂಗಳೂರು ಮೂಲದ ಗುರುಕಿರಣ್ ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರುಗಳಲ್ಲೊಬ್ಬರು.
ಇವರ ಸಂಗೀತ ನಿರ್ದೇಶನದಲ್ಲಿ ತೆರೆಕಂಡ ಆಪ್ತಮಿತ್ರ(೨೦೦೪) ಮತ್ತು ಜೋಗಿ(೨೦೦೫) ಚಿತ್ರಗಳಲ್ಲಿನ ಸಂಗೀತ ಅತ್ಯಂತ ಜನಪ್ರಿಯತೆಯನ್ನು ಗಳಿಸಿದ್ದವು.
ಹಲವಾರು ಚಲನಚಿತ್ರಗಳಲ್ಲಿ ಹಾಡಿರುವ ಗುರುಕಿರಣ್ ಅವರು ಹಿನ್ನೆಲೆ ಗಾಯಕರೂ ಕೂಡ.
ಉಪೇಂದ್ರ, ಕುಟುಂಬ, ನಿಷ್ಕರ್ಷ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಓಂಕಾರ, ಆಟೋಶಂಕರ್ ಇತ್ಯಾದಿ ಚಿತ್ರಗಳಲ್ಲಿ ಕೆಲವು ಗೀತೆಗಳನ್ನು ರಚಿಸಿದ್ದಾರೆ. ಇವರ ಸಂಗೀತ ನಿರ್ದೇಶನದ ಮೊದಲ ಕನ್ನಡ ಚಿತ್ರ ಏ.
[ಬದಲಾಯಿಸಿ] ಸಂಗೀತ ನಿರ್ದೇಶನದ ಚಿತ್ರಗಳು
| ವರ್ಷ |
ಚಿತ್ರ |
| ೧೯೯೮ |
ಏ, ಇದು ಎಂಥಾ ಪ್ರೇಮವಯ್ಯಾ |
| ೧೯೯೯ |
ಉಪೇಂದ್ರ |
| ೨೦೦೦ |
ಮಜ್ನು |
| ೨೦೦೧ |
ಚಿತ್ರ, ಧ್ರುವ, ಧಮ್, ಪ್ರೇಮಿ ನಂಬರ್ ೧ |
| ೨೦೦೨ |
ಅಪ್ಪು, ಅಸುರ, ಹಾಲಿವುಡ್, ನಿನಗಾಗಿ, ತುಂಟಾಟ |
| ೨೦೦೩ |
ಅಭಿ, ಕರಿಯ, ಚಂದು, ಖುಷಿ, ಶ್ರೀರಾಮ್, ಪಾರ್ಥ, ಸಚ್ಚಿ, ಕುಟುಂಬ, ಲವ್ ಯೂ, ನಂದಿ, ಪಾಂಚಾಲಿ |
| ೨೦೦೪ |
ಆಪ್ತಮಿತ್ರ, ಕಂಠಿ, ಮೌರ್ಯ, ಗೋಕರ್ಣ, ಓಂಕಾರ |
| ೨೦೦೫ |
ಜೋಗಿ, ನ್ಯೂಸ್, ರಿಷಿ, ಆದಿ, ಆಟೋ ಶಂಕರ್, ನಮ್ಮ ಬಸವ, ನಮ್ಮಣ್ಣ, ಸ್ವಾಮಿ, ಸೈ, ವಾಲ್ಮೀಕಿ |
| ೨೦೦೬ |
ರಾಮ ಶಾಮ ಭಾಮ, ಮಂಡ್ಯ, ಶುಭಂ, ಚೆಲ್ಲಾಟ, ಗಂಡ ಹೆಂಡತಿ, ಗಂಡುಗಲಿ ಕುಮಾರರಾಮ |
| ೨೦೦೭ |
ಗಂಡ ಹೆಂಡ್ತಿ, ಏಕದಂತ, ಸಂತ, ಮಸ್ತಿ, ಪಲ್ಲಕ್ಕಿ, ಸತ್ಯವಾನ್ ಸಾವಿತ್ರಿ, ಬೆಳದಿಂಗಳಾಗಿ ಬಾ, ಬಿಂದಾಸ್, ಸತ್ಯ ಇನ್ ಲವ್ |