ವಿಷಯಕ್ಕೆ ಹೋಗು

ದ್ವೈತ ದರ್ಶನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ತತ್ತ್ವಶಾಸ್ತ್ರ
ಸರಣಿಯ ಲೇಖನ
aum symbol
ಪಂಥಗಳು
ಸಾಂಖ್ಯ · ನ್ಯಾಯ
ವೈಶೇಷಿಕ · ಯೋಗ
ಪೂರ್ವ ಮೀಮಾಂಸಾ · ವೇದಾಂತ
ವೇದಾಂತ ಪಂಥಗಳು
ಅದ್ವೈತ · ವಿಶಿಷ್ಟಾದ್ವೈತ
ದ್ವೈತ
ಪ್ರಮುಖ ವ್ಯಕ್ತಿಗಳು
ಕಪಿಲ · ಗೋತಮ
ಕಣಾದ · ಪತಂಜಲಿ
ಜೈಮಿನಿ · ವ್ಯಾಸ
ಮಧ್ಯಕಾಲೀನ
ಆದಿಶಂಕರ · ರಾಮಾನುಜ
ಮಧ್ವ · ಮಧುಸೂದನ
ವೇದಾಂತ ದೇಶಿಕ · ಜಯತೀರ್ಥ
ಆಧುನಿಕ
ರಾಮಕೃಷ್ಣ · ರಮಣ
ವಿವೇಕಾನಂದ · ನಾರಾಯಣ ಗುರು
ಅರವಿಂದ ·ಶಿವಾನಂದ

ದ್ವೈತ ದರ್ಶನ- ಮಾಧ್ವ ಸಿದ್ಧಾಂತ

[ಬದಲಾಯಿಸಿ]

ದ್ವೈತ ಸಿದ್ಧಾಂತ ವೆಂದು ಪ್ರಸಿದ್ಧವಾಗಿರುವ ಮದ್ಧ್ವಾಚಾರ್ಯರಿಂದ ಪ್ರಚಾರಕ್ಕೆ ಬಂದ ಮಾಧ್ವ ಸಿದ್ಧಾಂತದ ಹೆಸರು, ಬ್ರಹ್ಮ ಮೀಮಾಂಸಾಶಾಸ್ತ್ರ, ಅಥವಾ ತತ್ವವಾದ. ಮಧ್ವಾಚಾರ್ಯರ ಇತರ ಹೆಸರುಗಳು ಆನಂದ ತೀರ್ಥ, ಪೂರ್ಣಪ್ರಜ್ಞ, ಪೂರ್ಣಬೋಧ. ಕ್ರಿ. ಶ. ೧೧೯೭ರಲ್ಲಿ [ಕ್ರಿಶ ೧೨೩೮ - ೧೩೧೭ ನಿಜವಾದ ಹೆಸರು ವಾಸುದೇವ ನಡ್ಡಿಲ್ಲಾಯ] ಉಡುಪಿಯ ಹತ್ತಿರ ಪಾಜಕದಲ್ಲಿ ಜನಿಸಿದ ಅವರು ೮೦ ವರ್ಷ ಬದುಕಿದ್ದರು. ಉಡುಪಿಯಲ್ಲಿ ೭೯ನೇ ವಯಸ್ಸಿನಲ್ಲಿ   ಅದೃಶ್ಯರಾದರು. ಅವರು ತಮ್ಮ ಅಸಾಧಾರಣ ವಿದ್ವತ್ತಿನಿಂದ ದ್ವೈತ ಸಿದ್ದಾಂತವನ್ನು ಪ್ರಚುರ ಪಡಿಸಿದ್ದಾರೆ. ತಮ್ಮ ಸಿದ್ದಾಂತದ ಸಮರ್ಥನೆಗಾಗಿ ಉಪನಿಷತ್ತಿನ ಭಾಷ್ಯಗಳು, ಮಹಾಭಾರತ ತಾತ್ಪರ್ಯನಿರ್ಣಯ ಮೊದಲಾದ ೩೭ ಗ್ರಂಥಗಳನ್ನು ರಚಿಸಿದ್ದಾರೆ. ಅವರ ಅನುಯಾಯಿಗಳು ಅವರನ್ನು ವಾಯುದೇವರ ಅವತಾರವೆಂದು ನಂಬಿದ್ದಾರೆ; ಹಾಗೆಂದು ಅವರೂ ಹೇಳಿಕೊಂಡಿದ್ದಾರೆ.

ಮಾಧ್ವ ಮತದ ಸಂಕ್ಷಿಪ್ತ ಪರಿಚಯ

[ಬದಲಾಯಿಸಿ]

ವೇದಾಂತ ದರ್ಶನದಲ್ಲಿ ಜೀವ -ಜಗತ್ - ಬ್ರಹ್ಮದಲ್ಲಿ ಅಬೇಧವೇ ಅಂತಿಮ ಸತ್ಯವೆಂದು ಹೇಳುವ ಅದ್ವೈತ ಒಂದು ತುದಿಯಾದರೆ - ಅವುಗಳಲ್ಲಿ ಆತ್ಯಂತಿಕ ಬೇಧವೇ ಇರುವುದೆನ್ನುವುದು ಇನ್ನೊಂದು ತುದಿ . ಬ್ರಹ್ಮವನ್ನು - ದೇವರನ್ನು ವೇದಾಂತ ಭಕ್ತಿಗಳಿಂದ ಸಮನ್ವಯಗೊಳಿಸಿದ ಮಧ್ವರ ಸಿದ್ಧಾಂತದ ಹೆಸರು ಬ್ರಹ್ಮ ಮೀಮಾಂಸಾ ಶಾಸ್ತ್ರ , ಅಥವಾ ತತ್ವವಾದ ; ಆದರೆ ಅದು ದ್ವೈತವೆಂದೇ ಪ್ರಸಿದ್ಧವಾಗಿದೆ. ಮಧ್ವರು ದೇಶಾದ್ಯಂತ ಸಂಚರಿಸಿ ತಮ್ಮ ಅಸಾಧಾರಣ ವಿದ್ವತ್ತಿನಿಂದ ದ್ವೈತ ಸಿದ್ಧಾಂತವನ್ನು ಪ್ರಚುರ ಪಡಿಸಿದರು. ಪಾಂಡಿತ್ಯ, ದೇಹಬಲ, ತರ್ಕಶಕ್ತಿಗಳಲ್ಲಿ ಅಸಮಾನ್ಯರಾದ ಅವರನ್ನು ವಾಯುದೇವರ ಅವತಾರವೆನ್ನುವರು. ಆನಂದ ತೀರ್ಥ , ಪೂರ್ಣ ಬೋಧ, ಪೂರ್ಣಪ್ರಜ್ಞ, ಎಂಬುವು ಅವರ ಇತರ ಹೆಸರುಗಳು . ಅವರು ಉಪನಿಷತ್ತು, ಬ್ರಹ್ಮ ಸೂತ್ರ, ಗೀತೆ, ಋಗ್ವೇದದ ನಲವತ್ತು ಸೂಕ್ತಗಳ ಮೇಲೆ ಭಾಷ್ಯಗಳನ್ನು ಬರೆದಿದ್ದಾರೆ. , ಮಹಾಭಾರತ ತಾತ್ಪರ್ಯನಿರ್ಣಯ , ವಿಷ್ಣುತತ್ವ ನಿರ್ಣಯ, ಮೊದಲಾದ ೩೭ ಗ್ರಂಥಗಳನ್ನು ಅವರ ಸರ್ವಮೂಲ ಗ್ರಂಥಗಳೆನ್ನುತ್ತಾರೆ. ಜಯತೀರ್ಥರು ಮಧ್ವರ ಭಾಷ್ಯಗಳಿಗೆ ಪಾಂಡಿತ್ಯ ಪೂರ್ಣ ಟೀಕೆಗಳನ್ನು ಬರೆದು ಸ್ವಮತ ಸ್ಥಾಪನೆ, ಪರಮತ ಖಂಡನೆ ಮಾಡಿದ್ದಾರೆ.

ಪ್ರತಿಪಕ್ಷ

[ಬದಲಾಯಿಸಿ]

ದ್ವೈತವು ಹರಿಸರ್ವೋತ್ತಮವನ್ನು ಪ್ರತಿಪಾದಿಸುವುದರಿಂದ , ಶೈವ , ಶಾಕ್ತ (ಶಕ್ತಿ-ಅಂಬಿಕೆ), ಇತ್ಯಾದಿ ಪಂಥಗಳಿಗೂ ಜೀವ -ಬ್ರಹ್ಮ ರಿಗೆ ಬೇಧವನ್ನು ಒತ್ತಿ ಹೇಳುವುದರಿಂದ ಅದ್ವೈತಕ್ಕೂ , ಪ್ರತಿ ಪಕ್ಷವಾಗಿದೆ. ಮದ್ವರು ಅದ್ವೈತವನ್ನು ಉಗ್ರವಾಗಿ ಖಂಡಿಸಿದ್ದಾರೆ. ಈವರಗೂ ದ್ವೈತ ಮಂಡನೆಗಿಂತ ಹೆಚ್ಚಾಗಿ ಖಂಡನೆಯೇ ನೆಡೆದಿದೆ.

ಮಾಧ್ವ ಮತದ ಸಂಗ್ರಹ:

[ಬದಲಾಯಿಸಿ]
ಮಧ್ವರ ದ್ವೈತ ದರ್ಶನ
ವ್ಯಾಸ ತೀರ್ಥರು (೧೪೭೮-೧೫೩೯) ೨ ಶ್ಲೋಕಗಳಲ್ಲಿ ಮಧ್ವ ಸಿದ್ಧಾಂತವನ್ನು ಹೇಳಿದ್ದಾರೆ.
ಶ್ರೀಮನ್ಮಧ್ವಮತೇ ಹರಿಃ ಪರತರಃ ಸತ್ಯಂಜಗತ್ ತತ್ವತೋ |
ಬೇಧೋ ಜೀವಗಣಾ ಹರೇರನುಚರಾ ನೀಚೋಚ್ಚಭಾವಂಗತಾಃ ||
ಮುಕ್ತಿರ್ನೈಜ ಸುಖಾನುಭೂತಿರಮಲಾ ಭಕ್ತಿಶ್ಚಸತ್ಸಾಧನಂ |
ಹ್ಯಕ್ಷಾದಿ ತ್ರಿತಯಂ ಪ್ರಮಾಣಮುಖಿ ಲಾಮ್ನಾಯೈಕವೇದ್ಯೋ ಹರಿಃ||
೧ : ಹರಿಸರ್ವೋತ್ತಮ, ೨ : ಜಗತ್ತು ಸತ್ಯ, :೩: ತತ್ವದಲ್ಲಿ ಬೇಧ ಪರಮಾರ್ಥಿಕವಾದದ್ದು ೪ : ಜೀವಿಗಳಲ್ಲಿ (ಹರೇರವಚರಾ) ಉಚ್ಚ -ನೀಚ ತಾರತಮ್ಯವಿದೆ ,೫ : ಮುಕ್ತಿ ಎಂದರೆ ನೈಜಸುಖ ಶುದ್ಧ ಭಕ್ತಿ ಮುಕ್ತಿಸಾಧನ; ೬ : ಪ್ರತ್ಯಕ್ಷ, ಅನುಮಾನ, ಆಗಮಗಳೆಂಬ ಮೂರು ಪ್ರಮಾಣಗಳು ;೭ : ನಿಗಮಾಗಮಗಳೆಲ್ಲವೂ ಶ್ರೀಹರಿಯನ್ನು ತಿಳಿಸುವುದಕ್ಕಾಗಿ ಇದೆ.

ತತ್ವ ಸಂಗ್ರಹ

ಹರಿಯು ಸರ್ವೋತ್ತಮನು

[ಬದಲಾಯಿಸಿ]
:ಸಾರಾಂಶ:ಹರಿಯು ಸರ್ವೋತ್ತಮನು; ಜಗತ್ತು ಸತ್ಯ ; ಬೇಧವು ಪರಮಾರ್ಥಿಕವಾದದ್ದು ; ಜೀವಿಗಳಲ್ಲಿ ಉಚ್ಚರು ನೀಚರು ಎಂಬ ಬೇಧವಿದೆ ; ಮುಕ್ತಿ ಎಂದರೆ ನೈಜ ಸುಖ ; ಶುದ್ಧ ಭಕ್ತಿಯು ಮುಕ್ತಿಸಾಧನ ; ಪ್ರಮಾಣಗಳು ಮೂರು : ಪ್ರತ್ಯಕ್ಷ, ಅನುಮಾನ , ಆಗಮ. ನಿಗಮಗಳು [ವೇದಗಳು]-- ಶ್ರೀಹರಿಯನ್ನು ತಿಳಿಸುವುದಕ್ಕಾಗಿ ಇದೆ.
  • ವೇದಗಳಲ್ಲಿ ಹೇಳಿರುವ ಬ್ರಹ್ಮ ಶಬ್ದವು ಶ್ರೀಹರಿಯನ್ನು ಕುರಿತದ್ದೇ ಆಗಿದೆ. ವಿಷ್ಣು ತತ್ವ ಒಂದೇ ಸ್ವತಂತ್ರ ತತ್ವ ಮತ್ತು ಪರಿಪೂರ್ಣ, ಕಲ್ಯಾಣ ಗುಣ ಪೂರ್ಣ. ಅವನ ಮುಕ್ತಿ ಪದ ರೂಪ- ವಾಸುದೇವ. ಲಕ್ಷ್ಮಿ - ಶಕ್ತಿ ಸ್ವರೂಪಿಣಿ; ಶ್ರೀಹರಿಯ ಅಧೀನ ; ಅವಳು ಅವನ ಶಕ್ತಿ ; ಆದರೆ ಅವನಿಂದ ಬೇರೆ.

ನಾನಾರೂಪ :- ವಿಷ್ಣು ಮಾಯಿ - ಲಕ್ಷ್ಮಿ ಮಾಯೆ; ಪ್ರಕೃತಿ ; ಹಾಗೆಯೇ ಅವರ ಬೇರೆ ರೂಪದ ಜೋಡಿ; ಸಂಕರ್ಷಣ-ಜಯಾ ; ಪ್ರದ್ಯುಮ್ನ - ಕೃತಿ [ಪ್ರದ್ಯುಮ್ನ ರೂಪ, ಸೃಷ್ಟಿಕರ್ತ]; ಅನಿರುದ್ಧ [ಪಾಲನೆಗಾಗಿ]- ಶಾಂತಿ ; ಲಕ್ಷ್ಮಿ ನಾಶವಿಲ್ಲದ ಅಕ್ಷರಾಳು ; ಸರ್ವವ್ಯಾಪಕಳು; ಅದೇ ಬ್ರಹ್ಮ ರುದ್ರಾದಿಗಳ ಶರೀರಕ್ಕೆ ನಾಶ ಉಂಟು.

ಹರಿ ಸರ್ವೋತ್ತಮ

ಮಧ್ವರ ಮತ/ತತ್ವ -ಹರಿ ಸರ್ವೋತ್ತಮ. ಸಗುಣ ಬ್ರಹ್ಮ (ಹರಿ)ಪರಮ ಸತ್ಯ;; ನಿರ್ಗುಣಬ್ರಹ್ಮ ವರ್ಣನೆ (ವೇದದಲ್ಲಿ ಇದ್ದರೂ) ಔಪಚಾರಿಕ. ಬ್ರಹ್ಮ ಶಬ್ದವು ವಿಷ್ಣುವನ್ನು ಕುರಿತದ್ದೇಆಗಿದೆ, ವೇದಗಳನ್ನು ಕರ್ಮಕಾಂಡ ಜ್ಞಾನಕಾಂಡವೆಂದು ಬೇರ್ಪಡಿಸಬಾರದು. ಎಲ್ಲಾ ವೇದ ಇತ್ಯಾದಿ ಗ್ರಂಥಗಳೂ ವಿಷ್ಣುವಿನ ಸರ್ವೋತ್ತಮತ್ವವನ್ನು ಸಾರುತ್ತವೆ.
ವಿಷ್ಣು ಸ್ವತಂತ್ರ ತತ್ವ.; ಉಳಿದ ತತ್ವಗಳು ಅಸ್ವತಂತ್ರ .; ಅವನು ಪರಿಪೂರ್ಣನು ; ಕಲ್ಯಾಣಗುಣ ಪೂರ್ಣ ; ಅವನಲ್ಲಿ ಕೊರತೆ ದೋಷಗಳಿಲ್ಲ. ಅವನನ್ನು ಪೂರ್ತಿಯಾಗಿ ತಿಳಿಯಲು ಸಾಧ್ಯವಿಲ್ಲ. ಅವನ ಶಕ್ತಿ ಸ್ವರೂಪಿಣಿ ಲಕ್ಷ್ಮಿ ; ಅವನ ಅಧೀನ ; ಅವನು ಪ್ರಪಂಚವನ್ನು ಲೀಲೆಗಾಗಿ ಸೃಷ್ಟಿಸಿದನು. ಅವನ ಮುಕ್ತಿ ಪದರೂಪ ವಾಸುದೇವ ; ಸೃಷ್ಟಿಗಾಗಿ ಪ್ರದ್ಯುಮ್ನರೂಪ. ; ಪಾಲನೆಗಾಗಿ ಅನಿರುದ್ಧ ರೂಪ ; ಭಕ್ತರ ರಕ್ಷಣೆಗಾಗಿ ಅವತಾರಗಳನ್ನೆತ್ತುತಾನೆ.

ವಿಷ್ಣುವು ಸೃಷ್ಟಿಗೆ ಕಾರಣನೂ ಹೌದು - ಉಪಾದಾನ ಕಾರಣ -ಪ್ರತ್ಯೇಕತೆ ಉಳಿಯುವುದಿಲ್ಲ. ಪ್ರಕೃತಿಯೇ ಲಕ್ಷಿ - ಉಪಾಧಾನ . ಹರಿಯು ವೇದಗಳ ಕರ್ತೃವಲ್ಲ ಉಪದೇಶಕ ; ಅವು ಅಪೌರುಷೇಯ ; ಅವನು ಮಹೋಪಾಧ್ಯಾಯ.

ಲಕ್ಷ್ಮಿ -ವಾಯು : ಬಿಂಬ - ಪ್ರತಿಬಿಂಬ ; ವಿಷ್ಣುವಿನ ನಂತರದ ಸ್ಥಾನ ಲಕ್ಷ್ಮಿಗೆ.; ಅವಳು ಅವನ ಶಕ್ತಿ ; ಅವನಿಗೆ ಅಧೀನಳು ; ಆದರೆ ಬೇರೆ (ಭಿನ್ನಳು); ಗುಣಗಳಲ್ಲಿ ಅವನಿಗಿಂತ ಸ್ವಲ್ಪ ಕಡಿಮೆ ; ನಿತ್ಯ ಮುಕ್ತಳು ,
ಅವನು ವಾಸುದೇವನಾದಾಗ ಅವಳು ಮಾಯಿ ; ಅವಳು ಮಾಯೆ -ಆಲಂಗಿತನಾಗಿರುವನು ; ಸಂಕರ್ಷಣನಾದಾಗ ಜಯಾ ; ಪ್ರದ್ಯುಮ್ನನಾದಾಗ -ಕೃತಿ ; ಅನಿರುದ್ಧನಾದಾಗ ಶಾಂತಿ ; ಅವಳದು ಅಪ್ರಾಕೃತ ಶರೀರ ; ನಾಶವಿಲ್ಲ - ಅಕ್ಷರಾ ; ಸರ್ವವ್ಯಾಪಕಳು.

ಸತ್ಯಂ ಜಗತ್

[ಬದಲಾಯಿಸಿ]
ಸಂಗ್ರಹ
ಜಗತ್ತು ಮತ್ತು ಬೇಧ ವಾದ
ಜಗತ್ತು ಸತ್ಯವೆಂಬುದು ಈ ದರ್ಶನದ ಪ್ರಮುಖ ತತ್ವ. ಆದ್ದರಿಂದಲೇ ಜಗತ್ತಿನ ಮಿಥ್ಯಾ ವಾದವನ್ನು ಉಗ್ರವಾಗಿ ಖಂಡಿಸಲಾಗಿದೆ . ಜಗತ್ತು ಸತ್ಯವೆಂಬುದು ಅನುಭವದಿಂದ ತಿಳಿಯುತ್ತದೆ. ಅದೇ ಪ್ರತ್ಯಕ್ಷ ಪ್ರಮಾಣ. ಸಾಕ್ಷಿಯೂ ಅದನ್ನು ಒಪ್ಪುತ್ತದೆ. ಆದ್ದರಿಂದ ಅದ್ವೈತಿಗಳೂ ಪ್ರತ್ಯಕ್ಷವನ್ನು ನಿರಾಕರಿಸಲಾರರು.ಜಗತ್ತು ಪ್ರತ್ಯಕ್ಷ ಅನುಭವವಾಗಿರುವುದರಿಂದ ಅನುಮಾನ ಪ್ರಮಾಣದಿಂದ ನಿರಾಕರಿಸಲು ಬರುವುದಿಲ್ಲ.
ಜಗತ್ತು ಸತ್ಯವೆಂಬುದು ಈ ದರ್ಶನದ ಪ್ರಮುಖ ತತ್ವ.
ಆದ್ದರಿಂದಲೇ ಜಗತ್ತಿನ ಮಿಥ್ಯಾ ವಾದವನ್ನು ಉಗ್ರವಾಗಿ ಖಂಡಿಸಲಾಗಿದೆ . ಜಗತ್ತು ಸತ್ಯವೆಂಬುದು ಅನುಭವದಿಂದ ತಿಳಿಯುತ್ತದೆ. ಅದೇ ಪ್ರತ್ಯಕ್ಷ ಪ್ರಮಾಣ. ಸಾಕ್ಷಿಯೂ ಅದನ್ನು ಒಪ್ಪುತ್ತದೆ. ಆದ್ದರಿಂದ ಅದ್ವೈತಿಗಳೂ ಪ್ರತ್ಯಕ್ಷವನ್ನು ನಿರಾಕರಿಸಲಾರರು. (ಉದಾ: "ನಹಿ ಶ್ರುತಿ ಶತಮಪಿ ಶೀತೋರಗ್ನಿರಪ್ರಕಾಶೋವೇತಿ ಬ್ರುವನ್ ಪ್ರಾಮಾಣ್ಯ ಮುಪೈತಿ". ಶಂಕರರು); ಮಧ್ವರೂ, - "ನಚ ಅನುಭವ ವಿರೋಧೇ ಆಗಮಸ್ಯ ಪ್ರಮಾಣ್ಯಂ" ; ಎನ್ನುತ್ತಾರೆ.). ಭ್ರಾಂತಿ - ಎಂದರೆ , ಚೆನ್ನಾಗಿ ಪರೀಕ್ಷಿಸಿದ ಮೇಲಿನ ಸತ್ಯ. ಅದನ್ನೇ ಈ ಜಗತ್ತಿಗೆ ಅನ್ವಯಿಸಿದರೆ ಯಾರಿಗಾದರೂ ಈ ಜಗತ್ತು ಇಲ್ಲವೆನ್ನಿಸುವುದೇ? ಆದ್ದರಿಂದ ಜಗತ್ತು ಸತ್ಯ. ; ಭ್ರಾಂತಿಯಲ್ಲಿ ಹಾವು, ಹಗ್ಗ ಎರಡೂ ಅನುಭವವಿದೆ. ಹಾವಲ್ಲದಿದ್ದರೆ ಅದು ಹಗ್ಗ;; ಜಗತ್ತು ಭ್ರಾಂತಿಯಾದರೆ ಅದರ ಬದಲಿಗೆ ಇನ್ನೊಂದು ನಿಜ ಜಗತ್ತು ಇರಬೇಕು ; ಹಾಗಿಲ್ಲ  ; ಆದ್ದರಿಂದ ಜಗತ್ತು ಸತ್ಯ. ; ಜಗತ್ತು ಪ್ರತ್ಯಕ್ಷ ಅನುಭವವಾಗಿರುವುದರಿಂದ ಅನುಮಾನ ಪ್ರಮಾಣದಿಂದ ನಿರಾಕರಿಸಲು ಬರುವುದಿಲ್ಲ. ; ಆಗಮ ಪ್ರಮಾನದಲ್ಲಿ - ಋಗ್ವೇದದಲ್ಲಿ ವಿಶ್ವಂ ಸತ್ಯಂ (೨-೨೪-೬) ಎಂಬ ವಾಕ್ಯವಿರುವುದರಿಂದ ಜಗತ್ತು ಸತ್ಯವು .
ಸತ್ಯವು ತ್ರಿಕಾಲಾಭಾದಿತವಾಗಿರಬೇಕಿಲ್ಲ. ಕಾಲ ದೇಶಗಳಲ್ಲಿದ್ದರೆ ಸತ್ಯ. ; ಸ್ವಪ್ನವು ಆ ಕಾಲದಲ್ಲಿ ಸತ್ಯ. ; ಭ್ರಾಂತಿಯೂ ಅದು ಇರುವವರೆಗೆ ಸತ್ಯ. ; ಕ್ರಿಯಾಕಾರಿತ್ವವಿರುವುದು ಸತ್ಯದ ಲಕ್ಷಣ . ಆದ್ದರಿಂದ "ಪಾರಮಾರ್ಥಿಕ ಸತ್ಯ; ವ್ಯಾವಹಾರಿಕ ಸತ್ಯ ; ಪ್ರಾತಿಭಾಸಿಕ " ಸತ್ಯ ಎಂದು ಮೂರು ಬಗೆ ಇಲ್ಲ. ಇದು ಮಧ್ವರ ವಾದ.

ತತ್ವತೋ ಬೇಧಃ

[ಬದಲಾಯಿಸಿ]
ಅದ್ವೈತದ ಜಗನ್ಮಿಥ್ಯಾ ವಾದವನ್ನು ಉಗ್ರವಾಗಿ ಖಂಡಿಸಲಾಗಿದೆ.
ಹಾಗೆಯೇ ಬೇಧ ತತ್ವ .ಬೇಧವು ಈ ದರ್ಶನದ ಪ್ರಮುಖ ತತ್ವ . ಒಂದರಿಂದ ಮತ್ತೊಂದು ಬೇರೆ . ಅದರಿಂದಲೇ ,ವಸ್ತು ಮತ್ತು ವ್ಯಕ್ತಿಗಳನ್ನು ಗುರುತಿಸುವುದು. ಬೇಧವಿದ್ದರೆ ಗುರುತಿಸಲು ಸಾದ್ಯ. ಇದು ಪ್ರಾಣಿ ಪಕ್ಷಿಗಳಲ್ಲೂ ಇದೆ. ಬೇಧದ ಪ್ರತ್ಯಕ್ಷ ಪ್ರಮಾಣವೇ ಸಾಧನ (ಗುರುತಿಸಲು?). ಬೇಧವೇ ಜಗತ್ತಿನ ಸ್ವರೂಪ ; ನಮ್ಮ ಜ್ಞಾನದ ಆಧಾರ . ಎರಡು - ಒಂದಲ್ಲ ; ಒಂದು ಮತ್ತೊಂದರಂತೆ ಇಲ್ಲ. 'ಬೇಧಗಳು ಅಸಂಖ್ಯ. ಜಗತ್ತು ಬೇಧಗಳಿಂದ ತುಂಬಿದೆ - ಒಂದರಂತೆ ಮತ್ತೊಂದಿಲ್ಲ.
ಉದಾ : ಜಗತ್ತಿಗೂ ಈಶನಿಗೂ ಬೇಧವಿದ್ದರೆ ಅವನು ಜಗತ್ತಿನ ಆಚೆಗೂ ಇದ್ದಾನೋ ? ಎಂದರೆ ಹಾಗಲ್ಲ -ಅವನು ವ್ಯಾಪಿಸಿ ಪ್ರೇರೇಪಿಸುತ್ತಾನೆ . ಸರ್ವಂ ಖಲ್ವಿದಂ ಬ್ರಹ್ಮ ಎಂದರೆ ಎಲ್ಲವೂ ಬ್ರಹ್ಮವೆಂದಲ್ಲ. ಎಲ್ಲವೂ ಬ್ರಹ್ಮಕ್ಕೆ (ವಿಷ್ಣುವಿಗೆ) ಅಧೀನ ಎಂದರ್ಥ -ಅಬೇಧ ಎಂದಲ್ಲ.

ಜೀವ ಗಣಾ ಹರೇರಮಚರಾ

[ಬದಲಾಯಿಸಿ]
ಜೀವಿಗಳಲ್ಲಿ ಬೇಧ

ಜೀವನು ಈಶನ ಅಧೀನ. ಅವರಿಬ್ಬರೂ ಒಂದೇ ಎಂಬುದು ಅಸಂಬದ್ಧ -ಎಂದು ದ್ವೈತಿಗಳ ಮತ . ತತ್ವ ಮಸಿ ವಾಕ್ಯದ ಪೂರ್ಣರೂಪ , ಸ ಆತ್ಮಾ ತತ್ವಮಸಿ - ಅದ್ವೈತಿಗಳೆಂದಂತೆ ಅದು ನೀನೇ ಎಂದಲ್ಲ.

ಅದನ್ನು ಹೀಗೆ ಬಿಡಿಸ ಬೇಕು - ಆತ್ಮಾ+ಅತತ್ವಂ +ಅಸಿ -ಅದು ನೀನಲ್ಲ ; ಅಹಂ ಬ್ರಹ್ಮಾಸ್ಮಿ ಎಂದರೆ ನಾನು ಬ್ರಹ್ಮ ನಂತೆ ಆನಂದಾದಿ ಗುಣಗಳಿರುವವನು ಎಂದು ಅರ್ಥಮಾಡಿಕೊಳ್ಳಬೇಕು. - ಇತ್ಯಾದಿ .
ಮೋಕ್ಷದಲ್ಲೂ ಜೀವ ಈಶ್ವರರಿಗೆ ಬೇಧ ಉಂಟು . ಜೀವಿಗಳು ಅನಂತ -ಒಂದೊಂದೂ ಭಿನ್ನ -ಶಾಶ್ವತ . ಬಂಧ -ಮೋಕ್ಷ ; ಸುಖ-ದುಃಖ ನಿಜವಾದದ್ದು . ಈಶನ ಅನುಗ್ರಹದಿಂದಲೇ ಜೀವನ ಬದುಕು . ಮೋಕ್ಷದಲ್ಲಿ ಜೀವನ ಅಸ್ತಿತ್ವ ನಾಶವಾರೆ ಮೋಕ್ಷಕ್ಕೆ ಅರ್ಥವಿಲ್ಲ.

ಜೀವನಿಗೆ ಕರ್ತೃತ್ವ ಭೋಕ್ತೃತ್ವ ಎರಡೂ ಇವೆ. ಆದರೆ ಜೀವನು ಪರಮಾತ್ಮನ ಅಧೀನ . ಅಸ್ವತಂತ್ರನಾದರೂ ಅವನ ಅನುಗ್ರಹದಿಂದ ಕರ್ತೃತ್ವ ಭೋಕ್ತೃತ್ವ ಎರಡೂ ಇವೆ . ಹಸುವಿನ ಕೆಚ್ಚಲಲ್ಲಿ ಹಾಲಿದ್ದರೂ, ಪ್ರೇರಣೆಯಿಂದ ಮಾತ್ರಾ ಬರುವಂತೆ , ತಂದೆಯು ಮಗನ ಹಿತಕ್ಕಾಗಿ ತನಗೆ ನಮಸ್ಕಾರ ಮಾಡಿಸಿಕೊಂಡಂತೆ , ದೇವರ ಪ್ರೇರಣೆ ಕೆಲಸ ಮಾಡುತ್ತದೆ.

ಮುಖ್ಯ ಬೇಧಗಳು ಐದು ;
೧] ಜೀವ ಜೀವ ಬೇಧ ; ೨] ಜೀವ ಈಶ ಬೇಧ ; ೩] ಜೀವ ಜಡ ಬೇಧ ; ೪] ಜಡ ಜಡ ಬೇಧ ; ೫] ಜಡ ಈಶ ಬೇಧ. :ಚೈತನ್ಯವಲ್ಲದ್ದು ಜಡ; ಸಾಮಾನ್ಯವಾಗಿ ಪಂಚೇದ್ರಿಯಗಳಿಗೆ ಗೋಚರವಾದದ್ದು ಜಡ; ಈ ಜಗತ್ತು ಜಡ, ಈಶ್ವರ ಅಥವಾ ವಿಷ್ಣು ಚೈತನ್ಯ]
೧] ಜೀವ ಜೀವಗಳಲ್ಲಿ ತಾರತಮ್ಯ ಉಂಟು; ಉತ್ತಮ ಜೀವ , ನೀಚ ಜೀವ, ಅಧಮ ಜೀವ ಎಂಬ ಬೇಧವಿದೆ; ಹರಿ ಭಕ್ತರದು ಉತ್ತಮ ಜೀವವಾದರೆ ಅಲ್ಲದವರದು ನೀಚ ಅಥವಾ ಅಧಮ ಜೀವ. ನೀಚ ಅಧಮ ಜೀವಿಗಳು ನಿತ್ಯ ಸಂಸಾರಿಗಳು ಅಥವಾ ನಿತ್ಯ ನರಕ ವಾಸಿಗಳು.
೨] ಜೀವನು ಈಶನ ಅಧೀನ , ಅವನು ಈಶನಲ್ಲ ; ತತ್ ತ್ವಂ ಅಸಿ :: ಅದೇ ನೀನು -ಅಲ್ಲ; ; ಅದರಂತೆ ನೀನಿರುವೆ.- ಹೀಗೆ ಅರ್ಥ ಮಾಡಬೇಕು.
೩] ಜೀವವೂ ಜಡವೂ ಒಂದೇ ಅಲ್ಲ; ಇದಕ್ಕೆ ಪ್ರತ್ಯಕ್ಷವೇ ಪ್ರಮಾಣ.
೪] ಜಡ ವಸ್ತುಗಳು ಒಂದರಂತೆ ಒಂದಿಲ್ಲ ; ಆ ವ್ಯತ್ಯಾಸದಿಂದಲೇ ನಾವು ವಸ್ತುಗಳನ್ನು ಗುರುತಿಸುತ್ತೇವೆ.
೫] ಈಶನು ಜಡನಲ್ಲ ; ಆತನಲ್ಲಿ ಸ್ವಯಂ ಕ್ರಿಯಾಶಕ್ತಿ ಇದೆ; ಸೃಷ್ಟಿ ಕರ್ತ. ಜಡವು ಅಚೇತನ. .

ನೀಚೋಚ್ಛಭಾವಂಗತಾ

[ಬದಲಾಯಿಸಿ]
ಅನಂತ ಕೋಟಿ ಜೀವಾತ್ಮರಲ್ಲಿ ಒಂದಕ್ಕೊಂದು ಸಮವಲ್ಲ. ಜೀವಿಗಳಲ್ಲಿ ಉಚ್ಚ-ನೀಚ ತಾರತಮ್ಯವಿದೆ . ಈರೀತಿ ಹೇಳಿದವರು ಮಧ್ವರೊಬ್ಬರೇ !
ಜೀವರು ಮೂರು ವಿಧ . ಮುಕ್ತಿಯೋಗ್ಯ , ತಮೋಯೋಗ್ಯ , ನಿತ್ಯ ಸಂಸಾರಿ . ದೇವ , ಮನುಷ್ಯ, ಪಿತೃ , ಚಕ್ರವರ್ತಿ , ಮನಷ್ಯೋತ್ತಮರು ಮುಕ್ತಿಯೋಗ್ಯರು .
ದೈತ್ಯ, ರಾಕ್ಷಸ , ಪಿಶಾಚ , ಮನುಷ್ಯಾಧಮರು ತಮೋ ಯೋಗ್ಯರು , ಇವರಿಗೆ ಸಂಸಾರಿಕ ಸುಖವೇ ಸುಖ . ಇವರ ಸ್ವರೂಪವೇ ದುಃಖ ;ನಿಜ ಸುಖವಿಲ್ಲ. ಕೊನೆಗೆ ನರಕವಾಸ ವೆಂಬ ಸ್ಥಿತಿ .
ನಿತ್ಯ ಸಂಸಾರಿ. ಅವರವರ ಕರ್ಮಾನುಸಾರ ಸ್ವರ್ಗನರಕ ಭೂಲೋಕಗಳಲ್ಲಿ ಸ್ವರ್ಗನರಕ ಭೂಲೋಕಗಳಲ್ಲಿ ಸಂಚರಿಸುವರು. ;ಹೀಗೆ ಬೇಧ ಭಾವದಿಂದ ಇರುವುದೇ ಸರಿ. ಇಲ್ಲದಿದ್ದರೆ ದುರಾಚಾರಕ್ಕೆ ಆಸ್ಪದವಾಗುವುದು. ಮೇಲು ಕೀಳು ಎಂಬ ಭಾವ ಇರಬೇಕು. ಸ್ವಾಮಿ-ಭೃತ್ಯ ಬಾವದಿಂದ ಇರುವುದೇ ಸರಿ.

ಅಮಲಾ ಭಕ್ತಿಶ್ಚ ತತ್ಸಾಧನಂ

[ಬದಲಾಯಿಸಿ]
ಮುಕ್ತಿ
ಮುಕ್ತಿಗೆ ಪರಮಾತ್ಮನ ಅಪರೋಕ್ಷ ಜ್ಞಾನವು ಅವಶ್ಯ. ಅದು ಅಖಂಡ ಭಕ್ತಿಯಿಂದ ಸಾಧ್ಯ. ಭಕ್ತಿ ಎಂದರೇನು ;
ಮಾಹಾತ್ಮ್ಯ ಜ್ಞಾನ ಪೂರ್ವಸ್ತು ಸುದೃಡಃ ಸರ್ವತೋಧಿಕಃ |
ಸ್ನೇಹೋಭಕ್ತಿರಿತಿ ಪ್ರೋಕ್ತಸ್ತಯಾ ಮುಕ್ತಿರ್ನಚಾನ್ಯಥಾ ||
ದೇವರ ಮಹಿಮೆಯ ಜ್ಞಾನವುಳ್ಳ ಅಚಲ ಸ್ನೇಹವೇ ಭಕ್ತಿ . ಅದೇ ಮುಕ್ತಿಸಾಧನ . ಬೇರೆ ಅಲ್ಲ . ಜ್ಞಾನವೆಂದರೆ ಶಾಸ್ತ್ರ ಜ್ಞಾನ .

ಮುಕ್ತಿರ್ನ್ಶೆಜ ಸುಖಾನುಭೂತಿ

[ಬದಲಾಯಿಸಿ]
ಮುಕ್ತಿ ಎಂದರೆ ಅವಿದ್ಯೆಯೆಂಬ ಬಂಧದಿಂದ ಬಿಡುಗಡೆ. ಸಂಸಾರಕ್ಕೆ ಅವಿದ್ಯೆ ಕಾರಣ .ಆದರೆ ಅದು ಮಿಥ್ಯೆಯಲ್ಲ . ಮುಕ್ತಿಯು ಆನಂದಮಯವಾದುದು. ಅದಕ್ಕೆ ಅವ್ಯಾಕೃತ ಆಕಾಶ , ಪರಮ ಪದ , ವೈಕುಂಠ , ಶ್ವೇತದ್ವೀಪ , ಮೊದಲಾದ ಹೆಸರುಗಳಿವೆ . ಪ್ರಕೃತಿ ಮಂಡಲಕ್ಕೂ ಪರಮಪದಕ್ಕೂ ಮಧ್ಯೆ ವಿರಜಾ ನದಿ ಇದೆ. ಮುಕ್ತರು ಅಣು ರೂಪರಾದರೂ ಭೋಗಕ್ಕೆ ಅನುಗುಣವಾಗಿ ಪರಿಮಾಣಹೊಂದಿ , ಕ್ಷೀರಸಾಗರ , ಅಶ್ವತ್ಥವನಗಳಲ್ಲಿ , ಭೋಗವನ್ನು ಅನುಭವಿಸುವರು. ಮುಕ್ತಿಯೆಂದರೆ ಜೀವ - ಪರಮಾತ್ಮರ ಐಕ್ಯವಲ್ಲ . ಸ್ವರೂಪ ನಾಶವಾದರೆ. ಮುಕ್ತಿಯಿಂದ ಏನು ಪ್ರಯೋಜನ ? ಮುಕ್ತಿಯಲ್ಲಿ ಅರ್ಹತೆಗೆ ತಕ್ಕಂತೆ ತಾರತಮ್ಯವುಂಟು .
ದೇವರ ಪ್ರೀತಿಗಾಗಿ ಕರ್ಮ(ನಿತ್ಯ-ನೈಮಿತ್ತಿಕ) ಮಾಡಬೇಕು. ಸ್ತ್ರೀ ಶೂದ್ರರಿಗೆ ವೇದಾಧಿಕಾರವಿಲ್ಲ. ಆದರೆ ಪುರಾಣ ಶ್ರವಣ ಮಾಡಬಹುದು. ಹರಿಭಕ್ತಿ ಬೆಳೆಸಬಹುದು .
ಮುಕ್ತಿ ಎಂದರೆ ಅವಿದ್ಯೆಯಿಂದ ಬಿಡುಗಡೆ ; ಅವಿದ್ಯೆಯು ಮಿಥ್ಯೆಯಲ್ಲ - ಸತ್ಯ. ; ಪ್ರಕೃತಿ ಮಂಡಲಕ್ಕೂ ಪರಮ ಪದಕ್ಕೂ ಮಧ್ಯೆ ವಿರಜಾ ಎಂಬ ನದಿ ಇದೆ. ಉತ್ತಮ ಜೀವಿಗಳು ಹರಿ ಭಕ್ತಿಯಿಂದ ಮುಕ್ತಿ ಪಡೆದು ಆ ನದಿಯನ್ನು ದಾಟಿ, ಕ್ಷೀರ ಸಾಗರ, ಅಶ್ವತ್ಥ ವನ, ವೈಕುಂಠವೇ ಮೊದಲಾದ ಕಡೆ ಆನಂದ ಮಯವಾದ ಭೋಗವನ್ನು ಅನುಭವಿಸುವರು.
ಮೋಕ್ಷದಲ್ಲೂ ಜೀವ ಈಶ್ವರರಿಗೆ ಬೇಧವುಂಟು. ಜೀವಿಗಳು ಅನಂತ - ಒಂದೊಂದೂ ಭಿನ್ನ - ಶಾಶ್ವತ; ಮೋಕ್ಷದಲ್ಲಿ ಜೀವನ ಅಸ್ತಿತ್ವ ನಾಶವಾದರೆ ಮೋಕ್ಷಕ್ಕೆ ಅರ್ಥವಿಲ್ಲ [ಜೀವನು ಬ್ರಹ್ಮನಲ್ಲಿ ಲೀನವಾದರೆ].
ರಾಜಸ ಮತ್ತು ತಾಮಸ ಜೀವಿಗಳಿಗೆ ಮೋಕ್ಷವಿಲ್ಲ. ಸಾತ್ವಿಕ ಜೀವಿಗಳಿಗೆ ಮಾತ್ರ ಮೋಕ್ಷ.
ರಾಜಸ ತಾಮಸ ಜೀವಗಳು ಸಾತ್ವಿಕ ಜೀವಿಗಳಾಗಿ ಬದಲಾವಣೆ ಹೊಂದಲಾರರು. ರಾಜಸ ರು ನಿತ್ಯಸಂಸಾರಿಗಳು ;
ತಾಮಸ ಜೀವಿಗಳು ನಿತ್ಯ ನರಕವಾಸಿಗಳು.
ಮುಕ್ತಿಗೆ ಪರಮಾತ್ಮನ ಅಪರೋಕ್ಷ ಜ್ಞಾನವು ಅವಶ್ಯ. ಅದು ಅಖಂಡ ಭಕ್ತಿಯಿಂದ ಸಾಧ್ಯ. ಭಕ್ತಿ ಎಂದರೇನು ;
ಮಾಹಾತ್ಮ್.ತ್ಯ ಜ್ಞಾನ ಪೂರ್ವಸ್ತು ಸುದೃಡಃ ಸರ್ವತೋಧಿಕಃ |
ಸ್ನೇಹೋಭಕ್ತಿರಿತಿ ಪ್ರೋಕ್ತಸ್ತಯಾ ಮುಕ್ತಿರ್ನಚಾನ್ಯಥಾ ||
ದೇವರ ಮಹಿಮೆಯ ಜ್ಞಾನವುಳ್ಳ ಅಚಲ ಸ್ನೇಹವೇ ಭಕ್ತಿ . ಅದೇ ಮುಕ್ತಿಸಾಧನ . ಬೇರೆ ಅಲ್ಲ . ಜ್ಞಾನವೆಂದರೆ ಶಾಸ್ತ್ರ ಜ್ಜಾನ .

ಅಕ್ಷಾದಿ ತ್ರಿತ್ರಯಂ ಪ್ರಮಾಣಂ

[ಬದಲಾಯಿಸಿ]
ಮಧ್ವರು ಪ್ರತ್ಯಕ್ಷ . ಅನುಮಾನ., ಮತ್ತು ಆಗಮ , ಈ ಮೂರು ಪ್ರಮಾಣಗಳನ್ನು ಒಪ್ಪುತ್ತಾರೆ.
ಕೇವಲ ಪ್ರಮಾಣ ವೆಂದರ ಜ್ಞಾನವೇ , ನೆನಪೂ ಪ್ರಮಾಣವೇ , ಪಂಚೇದ್ರಿಯಗಳು, ಮನಸ್ಸು, ಸಾಕ್ಷಿ , ಈ ಏಳು ಜ್ಞಾನ ಸಾಧನಗಳು . ಜ್ಞಾನದಲ್ಲಿ ತಾರತಮ್ಯ ಉಂಟು. ಪುಣ್ಯ ಹೆಚ್ಚಿದಹಾಗೆ ಜ್ಞಾನ ಹೆಚ್ಚುವುದು . ಪುಣ್ಯಕ್ಕೆ ಭಕ್ತಿ ಸಾಧನ . ದೋಷವಿಲ್ಲದ ಇಂದ್ರಿಯಗಳ ಅನುಭವ- ಪ್ರತ್ಯಕ್ಷ .; ನಿದ್ರೆಯ ಸುಖವನ್ನು ಸಾಕ್ಷಿ ತಿಳಿಯುತ್ತದೆ - ಉಳಿದುದನ್ನು ಇಂದ್ರಿಯಗಳು ತಿಳಿಯುವುವು.

ದೋಷ ರಹಿತ ತರ್ಕವೇ ಅನುಮಾನ ಪ್ರಮಾಣ .(• inference=The reasoning involved in drawing a conclusion or making a logical judgment on the basis of circumstantial evidence and prior conclusions rather than on the basis of direct observation)

ಆಗಮೋದುಷ್ಟ ವಾಕ್ಯಮ್

[ಬದಲಾಯಿಸಿ]
ಮಧ್ವರ ವಾದಕ್ಕೆ ಅವರು ವೇದ ಪುರಾಣ, ಪಂಚರಾತ್ರಾ-ವೈಷ್ಣವಾಗಮಗಳನ್ನು ಪ್ರಮಾಣವಾಗಿ ತೆಗೆದುಕೊಂಡಿದ್ದಾರೆ.
ಶಬ್ದ ಪ್ರಮಾಣ : ಆಗಮ , ರಾಮಾಯಣ, ಮಹಾಭಾರತ, ಭಾಗವತ , ಇವು ಪ್ರಮಾಣ . ಪುರಾಣಗಳು ಪೌರುಷೇಯವಾಗಿದ್ದು ಉತ್ಪತ್ತಿ ಇದ್ದರೂ , ನಾಶವಿಲ್ಲ. ವೇದಗಳು ಮತ್ತು ಮೇಲಿನವುಗಳೆಲ್ಲವೂ. ಹರಿಸರ್ವೊತ್ತಮತ್ವ ಪ್ರತಿಪಾದನೆ ಮಾಡುತ್ತವೆ .
ಪದಾರ್ಥ ವಿಭಾಗ. ಪದಾರ್ಥಗಳು ಹತ್ತು . ದ್ರವ್ಯ , ಗುಣ , ಕರ್ಮ, ಸಾಮಾನ್ಯ , ವಿಶೇಷ , ಅಭಾವ , ವಿಶಿಷ್ಟ , ಅಂಶಿ ಶಕ್ತಿ , ಮತ್ತು ಸಾದೃಶ್ಯ. ; ದ್ರವ್ಯಗಳು ಇಪ್ಪತ್ತು.

ಬಿಂಬ ವಾದ

[ಬದಲಾಯಿಸಿ]
  • ವಿಷ್ಣುವಿನ ನಂತರದ ಸ್ಥಾನ ಲಕ್ಷ್ಮಿಗೆ . ಅವಳು ಅವನ ಶಕ್ತಿ ; ಆದರೆ ಅವನಿಂದ ಬೇರೆ -ಸ್ವಲ್ಪ ಕಡಿಮೆಯ ಸ್ಥಾನ. ಲಕ್ಷ್ಮಿಯ ನಂತರದ ಸ್ಥಾನ-ವಾಯುವಿಗೆ ; ಅವನೇ ಪ್ರಾಣದೇವರು ; ಅವನೇ ಹರಿಯ ಪ್ರತಿಬಿಂಬ ; ಅವನಿಗೆ ರುದ್ರ ಗರುಡರು ಪ್ರತಿಬಿಂಬಗಳು ; ಅವರಿಗೆ ಪ್ರತಿಬಿಂಬರು ಪ್ರಾಣ, ಅನಿರುದ್ಧರು. ಸೂರ್ಯ ಚಂದ್ರರು. ಅವರಿಗೆ ಪ್ರತಿಬಿಂಬಗಳು ಋಷಿ ಮುನಿಗಳು. ಹೀಗೆ ಬಿಂಬ ಪ್ರತಿಬಿಂಬ ವ್ಯವಸ್ಥೆ - ಸೃಷ್ಟಿಯ ಕ್ರಮ ; ಬಿಂಬಕ್ಕಿಂತ ಪ್ರತಿಬಿಂಬ ಶತಾಂಶ ಶೂನ್ಯ [ಕಡಿಮೆ ಶಕ್ತಿಯುಳ್ಳದ್ದು].

ಪದಾರ್ಥ ವಿಭಾಗ

[ಬದಲಾಯಿಸಿ]
  • ಜಗತ್ತು -ದ್ರವ್ಯ :- ಪದಾರ್ಥಗಳು ಹತ್ತು -ದ್ರವ್ಯಗಳು ಇಪ್ಪತ್ತು-ಪ್ರಕೃತಿ ಎಂಬ ದ್ರವ್ಯವು ವಿಶ್ವದ ಮೂಲ. ಅವಿದ್ಯೆ ಅಥವಾ ಮಾಯೆಯೂ ಒಂದು ದ್ರವ್ಯವೇ; ಅದು ಒಬ್ಬೊಬ್ಬರಿಗೂ ಬೇರೆಬೇರೆ. ಕಾಲವೂ ದ್ರವ್ಯವೇ. ಅದು ಪ್ರಕೃತಿಯಿಂದ ಹುಟ್ಟುತ್ತದೆ. ಎಲ್ಲಾ ಪದಾರ್ಥಗಳಿಗೂ ಆಧಾರವಾಗಿದೆ.

ಕರ್ಮ :-ಇದು ಫಲಕಾರಕ ; ವಿಶೇಷಣವಿರುವುದು (ಗುಣ) ; ಈಶನ ಶಕ್ತಿ ಅಚಿಂತ್ಯ ; ಸಹಜ ; ಆಧೇಯ (ಅವಲಂಬಿತ)

ಪದ (ಮಾತು ): ಎಲ್ಲಾಶಬ್ದಗಳಿಗೂ ಪರಮಾತ್ಮ ಪರ ಅರ್ಥ ಇದೆ,ಉದಾ : ಅಗ್ನಿ - ಎಂದರೆ ಬೆಂಕಿಯೂ ಹೌದು ,ದೇವತೆಯೂ ಹೌದು.
ಎಲ್ಲರೂ ದೇವರ ಪ್ರೀತಿಗಾಗಿ ನಿತ್ಯ ನೈಮಿತ್ತಿಕ ಕರ್ಮಗಳನ್ನು ಮಾಡಬೇಕು. ಸ್ತ್ರೀ ಶೂದ್ರಾದಿಗಳು ಹರಿ ಭಕ್ತಿಯಿಂದ ಪುರಾಣ ಶ್ರವಣ ಮಾಡಬಹುದು. ಅವರಿಗೆ ವೇದಾಧಿಕಾರವಿಲ್ಲ.

ಇತರ ದ್ವೈತ ಪಂಥಗಳು

[ಬದಲಾಯಿಸಿ]

ಇತರ ದ್ವೈತ ಪಂಥಗಳಲ್ಲಿ ನಿಂರ್ಬಾಕ‍ ರ ಬೇಧಾಬೇಧ , ವಲ್ಲಭಾಚಾರ್ಯ ರ (೧೫ನೇ ಶ.ದ) ಪುಷ್ಟಿಮಾರ್ಗ / ಶುದ್ಧಾದ್ವೈತ ; ಚೈತನ್ಯ ರ (೧೪೮೫-೧೫೩೩) ಮಾಧ್ವಮತದ ಗೌಡೀಯ ಶಾಖೆ - ಅಚಿಂತ್ಯ ಬೇಧಾಬೇಧ ಇವು ಮುಖ್ಯವಾದುವು .

೧. ಬೇಧಾಬೇಧ

[ಬದಲಾಯಿಸಿ]
ಬೇಧಾಬೇಧ -ಶುದ್ಧಾದ್ವೈತ -ದ್ವೈತಾದ್ವೈತ

ನಿಂಬಾರ್ಕ : ತೆಲಗು ಬ್ರಾಹ್ಮಣ , ಶ್ರೇಷ್ಠ ಸಂತರೆಂದು ತಿಳಿದುಬಂದಿದೆ ; ಕಾಲ ಸುಮಾರು ೧೪ನೆಯ ಶತಮಾನ . ಮಧ್ವಮುಖಮರ್ದನವೆಂಬ ಗ್ರಂಥ ಅವರದ್ದೆಂದು ಹೇಳುತ್ತಾರೆ . ಪರಮತ ಖಂಡನೆ ಇಲ್ಲದ , ಬ್ರಹ್ಮ ಸೂತ್ರ ಭಾಷ್ಯ,, ದಶ ಶ್ಲೋಕೀ , ಶ್ರೀ ಕೃಷ್ಟಸ್ತವರಾಜ , ಅವರು ಸಂಕ್ಷಿಪ್ತವಾಗಿ ಬರೆದ ಗ್ರಂಥಗಳು . ವ್ಯಾಖ್ಯಾನದಿಂದಲೇ ಅದರ ಅರ್ಥ ತಿಳಿಯಬೇಕು . ಅವರ ವೇದಾಂತಕ್ಕೆ ಬೇಧಾಬೇಧ - ದ್ವೈತಾದ್ವೈತ ಎಂದು ಕರೆಯುತ್ತಾರೆ. ರಾಮಾನುಜರ ಸಿದ್ಧಾಂತಗಳನ್ನು ಬಹಳವಾಗಿ ಹೋಲುತ್ತದೆ .

೨. ವಲ್ಲಭರ ಶುದ್ಧಾದ್ವೈತ

[ಬದಲಾಯಿಸಿ]
ವಲ್ಲಭಾಚಾರ್ಯರು (೧೫ನೇ ಶತಮಾನ) ಇವರ ವೇದಾಂತಕ್ಕೆ ಶುದ್ಧಾದ್ವೈತ , ಅಥವಾ ಪುಷ್ಟಿಮಾರ್ಗ ಎಂದು ಕರೆಯುತ್ತಾರೆ. ಅವರು ತೈಲಂಗ ಬ್ರಾಹ್ಮಣರು. ಇವರು ಅಲಹಾಬಾದಿನ ಅಲೇದದಲ್ಲಿ ನೆಲಸಿದರು . ಬ್ರಹ್ಮಸೂತ್ರಭಾಷ್ಯ (ಅಣು ಭಾಷ್ಯ) ತತ್ವದೀಪ ನಿಬಂಧ , ಇತ್ಯಾದಿ ಗ್ರಂಥಗಳನ್ನು ರಚಿಸಿದರು .
ಸಕಲ ಕಲ್ಯಾಣ ಗುಣ ನಿಧಿ ಶ್ರೀ ಕೃಷ್ಣನೇ ಬ್ರಹ್ಮ ; ಆನಂದ ಸ್ವರೂಪಿ ; ಜೀವ -ಜಗತ್ತುಗಳೆರಡೂ ಅವನೇ ಅವು ಮಾಯಾಕಲ್ಪಿತವಲ್ಲ ; ಹೀಗೆ ಮಾಯೆಯ ನೆರವಿಲ್ಲದೆ ಜೀವ ಜಗತ್ತುಗಳನ್ನು ವಿವರಿಸುವುದರಿಂದ ಶುದ್ಧಾದ್ವೈತ .

೩. ಚೈತನ್ಯರ ಅಚಿಂತ್ಯ ಬೇಧಾಬೇಧ

[ಬದಲಾಯಿಸಿ]
ಚೈತನ್ಯ ಮಹಾಪ್ರಭು (೧೪೮೫-೧೫೩೩) ; ಮಾಧ್ವಮತದ ಗೌಡೀಯ ಶಾಖೆಯೆಂದು ಇವರವೇದಾಂತಕ್ಕೆ ಹೆಸರಿದೆ . ಇದಕ್ಕೆ ಅಚಿಂತ್ಯಬೇಧಾಬೇಧ ವೆನ್ನುತ್ತಾರೆ. ಅವರು ಗ್ರಂಥಗಳನ್ನು ರಚಿಸದಿದ್ದರೂ ಅವರ ಶಿಷ್ಯ -ಪ್ರಶಷ್ಯರು ಗ್ರಂಥಗಳನ್ನು ರಚಿಸಿದರು. ಚೈತನ್ಯರು ಶ್ರೀಕೃಷ್ಣೇ ಪರಬ್ರಹ್ಮ ವೆನ್ನುತ್ತಾರೆ. ಅವನೇ ಅನಂತಗುಣ -ಶಕ್ತಿವಂತ. ಆ ಶಕ್ತಿಗೆ ವಿಶೇಷ ವೆಂದು ಹೆಸರು. ; ಬೇಧವು ಇಲ್ಲದಿದ್ದರೂ ಬೇಧವು ತೋರುವುದು- ವಿಶೇಷ. ಸರ್ವವ್ಯಾಪಿಯಾದರೂ ಮೂರ್ತರೂಪ ಧರಿಸಿರುವುದು / ತಾಳುವುದು- ವಿಶೇಷ . ಅವನು ಜಗತ್ತಿಗೆ ನಿಮಿತ್ತ ಕಾರಣ; ಶಕ್ತಿಯೊಂದಿಗೆ ಸೇರಿದಾಗ ಉಪಾದಾನ ಕಾರಣ. ಇತ್ಯಾದಿ

ದ್ವೈತ ಮತ್ತು ಅದ್ವೈತ

[ಬದಲಾಯಿಸಿ]
  • ದ್ವೈತದಲ್ಲಿ ತಾತ್ವಿಕವಾಗಿ ಸ್ವತಂತ್ರ ಮತ್ತು ಅಸ್ವತಂತ್ರ ಎಂದು ತತ್ವಗಳು ಎರಡು ವಿಧ. ಹರಿ ಎಂಬುದು ಒಂದೇ ಸ್ವತಂತ್ರ ತತ್ವ ; ಉಳಿದವೆಲ್ಲಾ ಅಸ್ವತಂತ್ರ ತತ್ವಗಳು. ಹೀಗೆ ಮಧ್ವರ ಪ್ರಕಾರ ಎರಡು ಬಗೆಯ ತತ್ವಗಳಿವೆ. ಅಸ್ವತಂತ್ರ ತತ್ವಗಳು, ಮಾಯೆ ಅಥವಾ ಮಿಥ್ಯೆಯಲ್ಲ - ಎರಡೂ ಇದೆ. ಶಂಕರರ ಪ್ರಕಾರ ಪಾರಮಾರ್ಥಿಕವಾಗಿ ಇರುವುದು ಒಂದೇ ತತ್ವ - ಎರಡಾಗಿ ಕಾಣುತ್ತದೆ. ಅಸ್ವತಂತ್ರ ತತ್ವಗಳು ಕೇವಲ ಅಭಾಸ ; ತಾತ್ಕಾಲಿಕ ಸತ್ಯ ಅಥವಾ ವ್ಯವಹಾರಿಕ ಸತ್ಯ -ಪ್ರಾಪಂಚಿಕ ಸತ್ಯ - ಪ್ರತಿಭಾಸಿಕ [ತೋರಿಕೆಯ]ಸತ್ಯ ; ಜ್ಞಾನವಾದಾಗ ತೋರಿಕೆಯ ಸತ್ಯ ಇಲ್ಲವಾಗಿ ಹೋಗುತ್ತದೆ. ಆದರೆ ಮಧ್ವರ ಪ್ರಕಾರ ಎರಡೂ ಸತ್ಯವೇ -ಎರಡಾಗಿಯೇ ಇರುತ್ತದೆ ; ಆದರೆ ಎರಡು ಸ್ವತಂತ್ರ ಸಮಾನ ತತ್ವಗಳಲ್ಲ. ಹೀಗೆ ಪಶ್ಚಿಮದ ಡ್ಯೂಅಲಿಸಮ್ (ಎರಡು ಸಮಾನ-ಸ್ವತಂತ್ರ ತ್ತತ್ವಗಳು) ಅಲ್ಲ  ; ಒಂದೇ ಒಂದು ತತ್ವವೇ ಸ್ವತಂತ್ರ - ಅದು ವಿಷ್ಣು ತತ್ವ ; ಇನ್ನುಳಿದವು ಅದಕ್ಕೆ ಅಧೀನ ತತ್ವಗಳು.

ಉಪಸಂಹಾರ

[ಬದಲಾಯಿಸಿ]
  • ದ್ವೈತ ದರ್ಶನವು ಜಗತ್ತನ್ನು ಸತ್ಯವೆಂದು ಹೇಳಿರುವುದರಿಂದ ವಾಸ್ತವ ವಾದಿ ದೃಷ್ಟಿಯನ್ನು ಹೊಂದಿದಂತೆ ತೋರುತ್ತದೆ. ಮಧ್ವರು ರಾಮಾನುಜರ ಬೇಧವಾದವನ್ನು ಅಥವಾ ಬೇಧಾಬೇಧ ವಾದವನ್ನು ಮುಂದುವರಿಸಿ ಬೇಧ ವಾದವನ್ನು ಪೂರ್ಣಗೊಳಿಸಿದರು. ಅದ್ವೈತದ ಪ್ರತ್ಯಯ ವಾದವನ್ನು ಖಂಡಿಸಿ ಜೀವಿಯ ಅನನ್ಯತೆಗೆ ಮಹತ್ವ ಕೊಟ್ಟರು .
  • ಇವರು ಜ್ಞಾನ ಕರ್ಮಗಳನ್ನು ಭಕ್ತಿಗೆ ಅಧೀನವಾಗಿಸಿದ್ದಾರೆ. ಆದರೆ ಇವರು ಪ್ರತಿಪಾದಿಸಿದ ಜೀವಿಗಳ ತಾರತಮ್ಯವಾದವು (ಅದೂ ತಮೋಯೋಗ್ಟೀಯ ಜೀವಿಗಳ (ಗತಿಯಿಲ್ಲದ ಜೀವಿಗಳ) ವಾದವು ಟೀಕೆಗೆ ಒಳಗಾಗಿದೆ. :ವೇದೋಪನಿಷತ್ತುಗಳಿಗೆ ವೈಷ್ಣವ ದೃಷ್ಟಿಕೋನ ಕೊಟ್ಟಿರುವುದು ಮತ್ತು ಹರಿ-ಗುರು-ವಾಯುಗಳಿಗೆ ಅತಿಯಾದ ಮಹತ್ವ ಕೊಟ್ಟಿರುವುದು ವಿಶಿಷ್ಟವಾಗಿದೆ. (ಇದು ಕ್ರೈಸ್ತ ಮತದ ತಂದೆ - ಮಗ - ಪವಿತ್ರಾತ್ಮ ಈ ತತ್ವದ ಕೊಡುಗೆ ಎನ್ನುವವರಿದ್ದಾರೆ -ಆದರೆ ಅದರಲ್ಲಿ ಸತ್ಯವಿಲ್ಲ.)[][][]
--ಓಂ ತತ್ಸತ್ --

ಮಹಾಭಾರತ ತಾತ್ಪರ್ಯ ನಿರ್ಣಯ

[ಬದಲಾಯಿಸಿ]
  • ಶ್ರೀ ಮಧ್ವಾಚಾರ್ಯರು ಬರೆದ ಮಹಾಭಾರತ ತಾತ್ಪರ್ಯ ನಿರ್ಣಯ ಅಥವಾ ಶ್ರೀಮನ್ಮಹಾಭಾರತಮ್ ಗ್ರಂಥದಲ್ಲಿ ಬರುವ ದ್ವೈತ ಸಿದ್ಧಾಂತದ ಅನುಸಾರ ಬರುವ ಕೆಲವು ವಿಷ್ಣುಪರ ದ್ವೈತವಾದವನ್ನೂ ಅದ್ವೈತ ಮತ್ತು ಇತರ ಮತಖಂಡನೆಯನ್ನೂ ಉದಾಹರಣೆಗಾಗಿ ಆರಿಸಿಕೊಂಡಿದೆ. ಇದು ಅವರ ನಿಶ್ಚಿತ ದ್ವೈತ ಅಭಿಮಾನವನ್ನು ತೋರಿಸುತ್ತದೆ. ವಿವರಕ್ಕೆ -ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ
  • ಒಂಭತ್ತು ವಿಧದ ವಿಷ್ಣು ವಿರುದ್ಧ ಧರ್ಮಗಳು -ಅಂಧತಮವನ್ನು ಹೊಂದಿಸುವ ಸಾಧನಗಳು ;

(ಮಧ್ವರ ಪ್ರಕಾರ ಈ ಕೆಳಗಿನ ತತ್ವಗಳನ್ನು ಅನುಸರಿಸುವವರು ಮೋಕ್ಷಕ್ಕೆ ಅಥವಾ ಸ್ವರ್ಗಕ್ಕೆ ಅರ್ಹರಲ್ಲ-ಅವರು ಅಧಮರು.)

  • ೧] ವಿಷ್ಣುವಿಗೆ ಬ್ರಹ್ಮ ರುದ್ರರು ಸಮರು - ಎಂದು ಹೇಳುವುದು.
  • ೨] ರುದ್ರನು ವಿಷ್ಣುವಿಗಿಂತಲೂ ಉತ್ತಮನು. - ಎಂದು ಹೇಳುವುದು.
  • ೩] ತ್ರಿಮೂರ್ತಿಗಳಿಗೆ ಬೇಧವಿಲ್ಲ. - ಎಂದು ಹೇಳುವುದು.
  • ೪] ಶ್ರೀಹರಿಯ ಅವತಾರ ಗುಣ ಕರ್ಮಗಳಲ್ಲಿ ಬೇಧವಿದೆ. - ಎಂದು ಹೇಳುವುದು.
  • ೫] ಶ್ರೀಹರಿಯ ದೇಹವು ಭೌತಿಕವು. ಅವನು ಜೀವನಂತೆ ದುಃಖಿಯು. - ಎಂದು ಹೇಳುವುದು.
  • ೬] ಹರಿಭಕ್ತರಲ್ಲಿ ತಾರತಮ್ಯವಿಲ್ಲ. - ಎಂದು ಹೇಳುವುದು.
  • ೭] ವಿಷ್ಣು - ವೈಷ್ಣವರಿಗೆ ದ್ರೋಹ ಮಾಡಬೇಕು. - ಎಂದು ಹೇಳುವುದು.
  • ೮] ಶ್ರೀಹರಿಯು ಸ್ವತಂತ್ರನಲ್ಲ. - ಎಂದು ಹೇಳುವುದು
  • ೯] ಶ್ರೀಶನು ಅಪೂರ್ಣನು ಎಂದು ಹೇಳುವುದು[]
  • - ಓಂ ತತ್ಸತ್.
ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;.ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಭಾರತೀಯ ತತ್ತ್ವಶಾಸ್ತ್ರದಲ್ಲಿ ಮೋಕ್ಷ

  • ಇಂಗ್ಲಿಷ್ ವಿಕಿಪೀಡಿಯಾ -ಮಧ್ವಾಚಾರ್ಯ- ದ್ವೈತ ದರ್ಶನ
  • ಆಧಾರ: ಭಾರತೀಯ ತತ್ವ ಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ. (ಕಾಪಿ ರೈಟಿನಿಂದ ಮುಕ್ತವಾಗಿದೆ)
  • ಮಹಾಭಾರತ ತಾತ್ಪರ್ಯ ನಿರ್ಣಯ ಅಥವಾ ಶ್ರೀಮನ್ಮಹಾಭಾರತಮ್ (ಮಧ್ವರ ಶ್ರೀಮನ್ಮಹಾಭಾರತ) ವಿದ್ವಾನ್ ಘೂಳೀ ಕೃಷ್ಣಮೂರ್ತಾಚಾರ್ಯ ರ ಕನ್ನಡ ಅನುವಾದ; ಪ್ರಕಾಶಕರು : ಶ್ರೀಮದಾನಂದತೀರ್ಥ ವಿದ್ಯಾಪೀಠ, ಶ್ಯಾನುಭೋಗ ನಾರಾಯಣಪ್ಪ ರಸ್ತೆ, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯ ಪುರ, ಅಂಚೆ: ಬೆಂಗಳೂರು ೫೬೦೦೯೭.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

http://www.dlshq.org/download/hinduismbk.htm#_VPID_97

ಉಲ್ಲೇಖ

[ಬದಲಾಯಿಸಿ]
  1. ಮಹಾಭಾರತ ತಾತ್ಪರ್ಯ ನಿರ್ಣಯ ಅಥವಾ ಶ್ರೀಮನ್ಮಹಾಭಾರತಮ್ (ಮಧ್ವರ ಶ್ರೀಮನ್ಮಹಾಭಾರತ) ವಿದ್ವಾನ್ ಘೂಳೀ ಕೃಷ್ಣಮೂರ್ತಾಚಾರ್ಯ ರ ಕನ್ನಡ ಅನುವಾದ; ಪ್ರಕಾಶಕರು : ಶ್ರೀಮದಾನಂದತೀರ್ಥ ವಿದ್ಯಾಪೀಠ, ಶ್ಯಾನುಭೋಗ ನಾರಾಯಣಪ್ಪ ರಸ್ತೆ, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯ ಪುರ, ಅಂಚೆ: ಬೆಂಗಳೂರು ೫೬೦೦೯೭.
  2. ಹಿಂದೂಧರ್ಮದ ಪರಿಚಯ: ಏದುರ್ಕಳ ಶಂಕರನಾರಾಯಣ ಭಟ್
  3. ಭಾರತೀಯ ತತ್ವಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ.
  4. ಮಧ್ವರ ಶ್ರೀಮನ್ ಮಹಾಭಾರತಮ್ (ಪುಟ ೬೯೧ :)