ಸ್ಥಾನಿಕ ಬ್ರಾಹ್ಮಣರು

ವಿಕಿಪೀಡಿಯ ಇಂದ
Jump to navigation Jump to search
ಸ್ಥಾನಿಕ ತುಳು ಬ್ರಾಹ್ಮಣರು
Jnanashakthi Subrahmanya.jpg
ಕುಲದೇವತೆ -ಶ್ರೀ ಸುಬ್ರಹ್ಮಣ್ಯ
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು
ಭಾರತದ ರಾಜ್ಯಗಳಾದ ಕರ್ನಾಟಕ, ಮಹಾರಾಷ್ಟ್ರ, ಕೇರಳ, ಆಂಧ್ರ ಪ್ರದೇಶ
ಭಾಷೆಗಳು
ತುಳು , ಕನ್ನಡ , ಸಂಸ್ಕೃತ
ಧರ್ಮ
ಹಿಂದೂ

ಸ್ಥಾನಿಕ ತುಳು ಬ್ರಾಹ್ಮಣರು (Sthanika Tulu Brahmins) ಸ್ಮಾರ್ತ ಬ್ರಾಹ್ಮಣರಾಗಿದ್ದು, ತುಳುವ ಬ್ರಾಹ್ಮಣರ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಪಂಚದ್ರಾವಿಡ ಬ್ರಾಹ್ಮಣರ ವರ್ಗಕ್ಕೆ ಸೇರಿದ ಸ್ಥಾನಿಕ ಬ್ರಾಹ್ಮಣರ ಕುಲದೈವ ಶ್ರೀ ಸುಬ್ರಹ್ಮಣ್ಯ ಸ್ವಾಮಿ. ಈ ಕಾರಣದಿಂದ ಸ್ಥಾನಿಕ ಬ್ರಾಹ್ಮಣರನ್ನು ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣರೆಂದೂ ಕರೆಯಲಾಗುತ್ತದೆ. ೧೯೨೪ ರಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠವು ದಕ್ಷಿಣ ಕನ್ನಡದ ಸ್ಮಾರ್ಥ ಬ್ರಾಹ್ಮಣರ ಈ ಪಂಥವನ್ನು ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣರು ಎಂದು ಕರೆಯಬಹುದೆಂದು ಘೋಷಿಸಿತು. ಸ್ಥಾನಿಕ ಬ್ರಾಹ್ಮಣರು ಶ್ರೀ ಆದಿಶಂಕರಾಚಾರ್ಯರ ಅನುಯಾಯಿಗಳಾಗಿದ್ದು, ಅದ್ವೈತ ತತ್ವವನ್ನು ಅನುಸರಿಸಿ, ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠದ ಶಿಷ್ಯತ್ವವನ್ನು ಸ್ವೀಕರಿಸಿರುತ್ತಾರೆ. ಶೃಂಗೇರಿ ಶಾರದಾ ಪೀಠದ ಪರಮಪೂಜ್ಯ ಜಗದ್ಗುರು ಶ್ರೀ ಶಂಕರಾಚಾರ್ಯರನ್ನು ಸ್ಠಾನಿಕ ಬ್ರಾಹ್ಮಣರು ತಮ್ಮ ಕುಲಗುರುಗಳಾಗಿ ಸ್ವೀಕರಿಸಿರುತ್ತಾರೆ.

ವ್ಯುತ್ಪತ್ತಿ[ಬದಲಾಯಿಸಿ]

ಸ್ಥಾ ಧಾತು ಇಂದ ಉತ್ಪತ್ತಿ ಹೊಂದಿದ ಸ್ಥಾನಿಕ ಪದವು ಸ್ಥಿರವಾಗಿ ನಿಲ್ಲು; ಸ್ಥಾಣು; ಅಧಿಕಾರ ಮಾಡು; ನಿಲ್ಲಿಸು; ಪ್ರತಿಷ್ಠೆ ಮಾಡು ಇಷ್ಟನ್ನು ಸುಚಿಸುತ್ತದೆ. ಸ್ಥಾನಿಕ ಪದವು - ಸ್ಥಾನಾಧಿಪತಿ, ಸ್ಥಾನಾಧ್ಯಕ್ಷ, ಸ್ಥಾನಾಧಿಕಾರಿ, ದೇವಸ್ಥಾನದ ಆಡಳಿತಾಧಿಕಾರಿ, ಮುಖ್ಯ ಪುರೋಹಿತ, ಮುಖ್ಯ ತಂತ್ರಾಗಾಮಿ, ದೇವಸ್ಥಾನಗಳ ಮೂಲ ಪ್ರತಿಷ್ಟಾಪನಾಚಾರ್ಯ,ರಾಜತಾಂತ್ರಿಕ,ರಾಜ್ಯಾಡಳಿತಗಾರ ಹೀಗೆ ಹಲವಾರು ಪರ್ಯಾಯ ಅರ್ಥಗಳನ್ನು ಹೊಂದಿರುತ್ತದೆ. ಇವತ್ತು ಈ ವೃತ್ತಿಗಳನ್ನು Governor, Commissioner, University vice Chancellor, Lower and High court Judges ಎಂದು ಸಂಭೊಧಿಸಲ್ಪಡುತ್ತದೆ.

ಜಾತಿ[ಬದಲಾಯಿಸಿ]

ಪಂಚ ದ್ರಾವಿಡ ಬ್ರಾಹ್ಮಣ ಗುಂಪಿಗೆ ಸೇರಿದ ಇವರು ತುಳುನಾಡಿನ ಅತ್ಯಂತ ಪುರಾತನ ಋಗ್ವೇದಿ ಸ್ಮಾರ್ಥ ಬ್ರಾಹ್ಮಣರು. ತುಳುನಾಡಿನ/ಪರಶುರಾಮಾ ಕ್ಷೇತ್ರದ ಆರ್ಯಕರಣದಲ್ಲಿ ಇವರು ಮೊದಲಿಗರು.ತುಳುನಾಡಿನ/ಪರಶುರಾಮ ಕ್ಷೇತ್ರದ ಎಲ್ಲ ದೇವಸ್ಥಾನಗಳು ಇವರಿಂದ ಸ್ಥಾಪಿಸಲ್ಪಟ್ಟದ್ದು[೧]

ಇತಿಹಾಸ[ಬದಲಾಯಿಸಿ]

ಸ್ಥಾನಿಕ ತುಳು ಬ್ರಾಹ್ಮಣರು ಅತ್ಯಂತ ಪುರಾತನ ಅಂದರೆ ಕ್ರಿ.ಪೂ. ೩೮೦ ದಿಂದ ಸಹ ಮೊದಲು ತುಳುನಾಡಿನಲ್ಲಿ ನೆಲೆಸಿರುವ ಕಾರಣ ಇವರನ್ನು ಶಿಲಾ ಶಾಸನಗಳಲ್ಲಿ "ತುಳು ಬ್ರಾಹ್ಮಣರು", ಎಂದು ಹಾಗು ಸ್ಥಾನಿಕ ಹುದ್ದೆಯನ್ನು ಸ್ಥಾನಿಕ; ಸ್ಥಾನಪದಿಯ; ಬುದ್ಧಿವಂಥ; ಸ್ಥಾನಾಧ್ಯಕ್ಷ; ಸ್ಥಲತ್ಥರ್; ಸ್ಥಾನಾಧಿಕಾರಿ; ಸ್ಥಾನಪನ್ಥುಲು; ಸ್ಥಾನಿಕರ್; ಸ್ಥಾನತ್ಥರ್; ಥಾನಿಕೆರ್; ಸಂಭೋಧಿಸಲ್ಪಡುತ್ತದೆ. ಸ್ಥಾನಿಕ ತುಳು ಬ್ರಾಹ್ಮಣರ ಉಲ್ಲೇಖ ತಮಿಳ್ ಸಂಗಮ್ ಸಾಹಿತ್ಯ ಹಾಗು ಸಿಲಪದ್ದಿಕರಮ್, ಕೈರಲೋತ್ತ್ಪತಿ ಆದಿ ಗ್ರಂಥಗಳಲ್ಲಿ ಕಂಡುಬರುತ್ತದೆ. ಸ್ಥಾನಿಕ ಪದವು ಕೌಟಿಲ್ಯ ಅರ್ಥ ಶಾಸ್ತ್ರದಲ್ಲಿ ಸವಿಸ್ತಾರವಾಗಿ ವಿವರಿಸಲ್ಪಟ್ಟಿದೆ. ಖ್ಯಾತ ಇತಿಹಾಸ ತಜ್ಞ ಶ್ರೀರಾಮಾ ಸಾಟೇ ಅವರ ಪ್ರಕಾರ ಕೌಟಿಲ್ಯ/ ಚಾಣಾಕ್ಯನ ಕಾಲವು ಕ್ರಿ.ಪೂ ೨ ನೇ ಶತಮಾನ ಎಂದು ನಿರ್ಧರಿಸಲ್ಪಟ್ಟಿದೆ. ಕೆಲವು ವಿದ್ವಾನರ ಪ್ರಕಾರ ಸ್ಥಾನಿಕ ತುಳು ಬ್ರಾಹ್ಮಣರ ಅಸ್ತಿತ್ವವು ೫೦೦೦ ವರ್ಷದಿಂದ ಮೊದಲೇ ದಕ್ಷಿಣ ಭಾರತದಲ್ಲಿ ಕಂಡುಬರುತ್ತದೆ. ಪರಶುರಾಮ ಕ್ಷೇತ್ರವು ಕೇರಳವನ್ನು ಒಳಪಟ್ಟಿದೆ. ಕೇರಳದಲ್ಲಿ ಸಿಗುವಂತಹ ಶಿಲಾಶಾಸನಗಳಲ್ಲಿ ಇವರನ್ನು ತುಳು ಬ್ರಾಹ್ಮಣ ಎಂದು ಗುರುತಿಸಲ್ಪಟ್ಟಿದೆ. (ಉದಾ-.ತಿರುವನಂಥಪುರದ ಪದ್ಮನಾಭಸ್ವಾಮಿ ದೇವಸ್ಥಾನವನ್ನು ಕಲಿಯುಗದ ಪ್ರಾರಂಭದ ೯೬೪ ನೇ ದಿನ ಅಂದ್ರೇ ೫೦೦೦ ವರ್ಷ ಮೊದಲು ಸ್ಥಾಪಿಸಿದ ದಿವಾಕರ ಮುನಿ ತುಳು ಬ್ರಾಹ್ಮಣ ಎಂದು ಗುರುತಿಸಿದ್ದಾರೆ. ಆ ಕಾಲದಲ್ಲಿ ಪರಷುರಾಮ ಕ್ಷೇತ್ರದಲ್ಲಿ ಬೇರೆ ಬ್ರಾಹ್ಮಣರ ಅಗಮನ ಆಗಿರಲಿಲ್ಲ. ಸ್ಥಾನಿಕರು ಮಾತ್ರ ಇದ್ದದ್ದು). ತುಳು ಪದವು ಕೇವಲ ಒಂದು ಬಾಷೆಯ ದ್ಯೊತಕವಾಗದೆ ಒಂದು ನಾಡಿನ ಲಕ್ಷಣ ಕೂಡ ದ್ಯೊತಿಸುತ್ತದೆ. ತುಳುನಾಡು ಅಂದರೆ ಯಾವ ಭೂಮಿಯ ಮಣ್ಣು ತೆಳುವಾಗಿ ತುಂಬ ನೀರನ್ನು ಹಿರಿಕೊಳ್ಳುವಂತಹದ್ದೋ, ಅದನ್ನು "ತುಳು","ತೆಳುವೆ" ಅಂತ ಕರೆಯುತ್ತಾರೆ. ಈ ತುಳುನಾಡು ಮೊದಲು ಮದುರೈವರೇಗೆ ವಿಸ್ತಾರವಾಗಿತ್ತು ಹಾಗು ಪಲ್ಲವರು, ಪಾಂಡ್ಯರು, ಚೋಳರು, ಚೇರರು ಇದನ್ನು ಆಳುತಿದ್ದರು ಹಾಗು ಇದನ್ನು ಸಾತ್ಯಪುತ್ರ ಕ್ಷೇತ್ರ ಎಂದು ಕರೆಯಲ್ಪಡುತ್ತಿತ್ತು. ಈ ಕಾರಣಕ್ಕಾಗಿ ವಿಜಯನಗರ ಸಾಮ್ರಾಜ್ಯವನ್ನು "ತುಳುವ ರಾಜ್ಯ" ಎಂದು ಸಂಭೊದಿಸಲ್ಪಡುತ್ತಿತ್ತು. ಭೂತಾಳ ಪಾಂಡ್ಯನ ರಾಜ್ಯ ರಾಜಧಾನಿ ಬಾರ್ಕೂರು ಆಗಿತ್ತು. ಸ್ಥಾನಿಕ ತುಳು ಬ್ರಾಹ್ಮಣರೇ ನೈಜಾರ್ಥದಲ್ಲಿ ತುಳುನಾಡಿನ ಆಧ್ಯ ತುಳು ಬ್ರಾಹ್ಮಣರು. ಇವರು ತುಳುನಾಡಿನ ಅಂದರೆ ಪರಶುರಾಮ ಕ್ಶೇತ್ರದ ಎಲ್ಲ ದೇವಸ್ಥಾನಗಳ ಮೂಲ ಪ್ರಥಿಷ್ಟಾಪನಾಚಾರ್ಯರು ಹಾಗು ಮುಖ್ಯ ಅರ್ಚಕರು ಮತ್ತು ತಂತ್ರಾಗಾಮಿಗಳು ಆಗಿದ್ದರು. ಕೇರಳ ಪ್ರಾಂತ್ಯದ ಪರಷುರಾಮ ಕ್ಷೇತ್ರದ ನಂಬೂಧರಿಗಳು ಕ್ರಿ ಶ. ೯ನೆ ಶತಮಾನದಲ್ಲಿ ಬಂದವರು ಎಂದು ಖ್ಯಾತ ಇತಿಹಾಸ ತಜ್ನ ಸಿರಿಯಾಕ್ ಪುಲಪಿಲ್ಲಿ ಅವರ ಅಭಿಮತ. ನಂಬೂಧರಿಗಳು ಬರುವ ಮೊದಲೆ ಸ್ಥಾನಿಕ ತುಳು ಬ್ರಾಹ್ಮಣರು ಕೆರಳದಲ್ಲಿ ಕೂಡ ದೇವಸ್ಥಾನದಲ್ಲಿ ಅರ್ಚನೆ ಹಾಗು ತಂತ್ರಾಗಮ ಮತ್ತು ಸ್ಥಾನೀಕಮ್ ಹುದ್ದೆಯನ್ನು ನಿರ್ವಹಿಸುತ್ತಿದ್ದರು. ತುಳುನಾಡಿನ ನಾಗಾರಾದನೆ ಮತ್ತು ಶಿವರುದ್ರಾಣಿ, ಸ್ಕಂದ ಹಾಗು ದೈವಗಳನ್ನು ಶಿವಗಣಗಳೆಂದು, ಪ್ರತಿಷ್ಟಾಪಿಸಿದ್ದಾರೆ. ಮೊದಲಿನ ಕಾಲದಲ್ಲಿ ದೇವಸ್ಥಾನಗಳು ಕೇವಲ ಧಾರ್ಮಿಕ ಕೇಂದ್ರ ಆಗಿರದೆ ಒಂದು ರಾಜನ ಆಡಳಿತ ಕೇಂದ್ರವೂ ಆಗಿತ್ತು. ಯಾವುದೇ ರಾಜತಾಂತ್ರಿಕ ವ್ಯವಹಾರ ಗ್ರಾಮ, ಸೀಮೆ, ಮಾಗಣೆ, ಗಟಿಕಸ್ಥಾನ, ಸಂಸ್ಥಾನ, ಮಹಾಸಂಸ್ಥಾನ ಎಂಬುವಂತಹ ದೇವಸ್ಥಾನಗಳಿಂದ ರುಜುವಾತು ಮಾಡಲ್ಪಡುತ್ತಿತ್ತು. ಇದನ್ನು ಸಂಪೂರ್ಣವಾಗಿ ನೊಡುಕೊಳ್ಳುತ್ತಿದ್ದ ಅಧಿಕಾರಿಯನ್ನು ಸ್ಥಾನಿಕ ಎಂದು ಕರೆಯಲ್ಪಡುತ್ತಿತ್ತು. ಈ ಸ್ಥಾನವನ್ನು ಪಾರಂಪರಗತವಾಗಿ ಪರಷುರಾಮ ಕ್ಷೇತ್ರದಲ್ಲಿ ಕೆಲವು ನಿರ್ದಿಷ್ಟ ವೈದಿಕ (ಅಗ್ನಿಹೊತ್ರಿ) ಸ್ಮಾರ್ತ ತುಳು ಬ್ರಾಹ್ಮಣ ಕುಟುಂಬಗಳಿಗೆ ಮಾತ್ರ ಕೊಡಲ್ಪಡುತ್ತಿತ್ತು. ಹೀಗಾಗಿ ಇವರನ್ನು ಸ್ಥಾನಿಕ ತುಳು ಬ್ರಾಹ್ಮಣರು ಎಂದು ಅನ್ವರ್ಥ್ವವಾಗಿ ಸಂಬೊಧಿಸಲ್ಪಡುತ್ತಿತ್ತು. ಇವರಲ್ಲಿ ಮೊದಲು ವೇದದ ೭ ಶಾಕೆಯವರು (ಋಗ್ವೇದ ಶಾಕಲ ಶಾಕೆ, ಕ್ರಿಶ್ಣ ಯಜುರ್ವೇದ ತೈತ್ತರಿಯ ಶಾಕೆ, ಮೈತ್ರಾಯಣಿ ಶಾಕೆ,ಶುಕ್ಲ ಯಜುರ್ವೇದ ಕಾಣ್ವ ಶಾಕೆ, ಸಾಮವೇದ ಕೌಥಮಶಾಕೆ, ರಾಣಾಯನಿಯ ಶಾಕೆ, ಅಥರ್ವವೇದ ಶೊನಕ ಶಾಕೆ) ಇದ್ದರು ಎಂದು ತಿಳಿದು ಬರುತ್ತದೆ. ಈಗ ಕೇವಲ ರಿಗ್ವೇದಿಗಳು ಪ್ರಸಕ್ತ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯನ್ನು ಒಳಗೊಂಡಂತ ತುಳುನಾಡಿನಲ್ಲಿ ಉಳಿದಿದ್ದಾರೆ. ಕ್ರಿ.ಶ ೧೫ನೇ ಶತಮಾನದಲ್ಲಿ ಉಡುಪಿಯಲ್ಲಿ ಆದ ಶೈವ - ಮಾಧ್ವ/ವೈಷ್ಣವ ತಿಕ್ಕಾಟದಲ್ಲಿ ಹಾಗು ಅಂಗ್ಲರ/ಬ್ರಿಟಿಷರ ವಿರುದ್ಧ ಆದ ಅಮರ ಸುಳ್ಯ ದಂಗೆ - ಕಲ್ಯಾಣಪ್ಪ ಮತ್ತು ದೀವಾನ್ ಲಕ್ಶ್ಮಿನಾರಾಯಣಪ್ಪಯ್ಯನ ನೇತ್ರತ್ವದಲ್ಲಿ ಭಾಗವಹಿಸಿದ ಕಾರಣ ಅವರು ಅವರ ಮುಖ್ಯ ಸ್ಥಾನದಿಂದ ತೆಗೆಯಲ್ಪಟ್ಟರು. ಬ್ರಿಟಿಷರ ವಿರುದ್ಧ ಹೊರಾಡಿದ ಸ್ಮಾರ್ತ ತುಳುವ ಬ್ರಾಹ್ಮಣರಲ್ಲಿ ಇವರು ಏಕೈಕರು ಹಾಗು ಅಗ್ರಗಣ್ಯರು.[೨][೩]

ನೆಲೆಸಿರುವ ಸ್ಥಳಗಳು[ಬದಲಾಯಿಸಿ]

ಇವರು ಮುಖ್ಯವಾಗಿ ತುಳುನಾಡಿನ ಉಡುಪಿ, ಕುಂದಾಪುರ, ಮಂಗಳೂರು ,ಪುತ್ತೂರು, ಸುಳ್ಯ, ವಿಟ್ಲ, ಸುಬ್ರಹ್ಮಣ್ಯ, ಬೆಳ್ತಂಗಡಿ, ಉಜಿರೆ ಹಾಗು ಕೇರಳ, ಮಹಾರಾಷ್ತ್ರ,ತಮಿಳುನಾಡು, ಆಂಧ್ರದಲ್ಲಿ ನೆಲೆಸಿದ್ದಾರೆ.

ಭಾಷೆ[ಬದಲಾಯಿಸಿ]

ಸ್ಥಾನಿಕ ತುಳು ಬ್ರಾಹ್ಮಣರ ಮಾತೃಭಾಷೆ ತುಳು ಮತ್ತು ಅವರು ಬ್ರಾಹ್ಮಣ ಸಮುದಾಯದ, ಸಂಸ್ಕೃತ ಪದಗಳನ್ನೊಳಗೊಂಡ ಅನನ್ಯ ತುಳುವನ್ನು ಮಾತನಾಡುತ್ತಾರೆ. ಕನ್ನಡ ಭಾಷೆಯನ್ನೂ ಕೂಡ ಬಳಸುತ್ತಾರೆ. ಸಂಸ್ಕ್ರತ ಇವರ ಮುಖ್ಯ ಧಾರ್ಮಿಕ ಭಾಷೆ ಆಗಿದೆ. ಬ್ರಾಹ್ಮಣರ ತುಳುವಿನಲ್ಲಿ ಕನ್ನಡ, ಸಂಸ್ಕೃತ ಪದಗಳ ಬಳಕೆ ಅಧಿಕವಾಗಿರುತ್ತದೆ. ಕ್ಷೇಮ, ಹರ, ಈಶ್ವರ, ಶಿವ, ಯಥೇಷ್ಟ, ಸಾವಕಾಶ, ನಿಧಾನ, ಮೊದಲಾದ ಪದಗಳು ಹೆಚ್ಚಾಗಿ ಬಳಕೆಯಲ್ಲಿದೆ. ಬ್ರಾಹ್ಮಣೇತರ ತುಳುವಿನಲ್ಲಿ ‘ಲ’ ಕಾರವಿರುವಲ್ಲಿ ಬ್ರಾಹ್ಮಣರ ತುಳುವಿನಲ್ಲಿ ‘ಳ” ಕಾರವಿರುವುದು ಕಂಡುಬರುತ್ತದೆ. ಈ ತುಳುವನ್ನು ಸ್ಥಾನಿಕ ತುಳು ಬ್ರಾಹ್ಮಣರು ಮಾತನಾಡುತ್ತಾರೆ.

ಗುರು ಪರಂಪರೆ[ಬದಲಾಯಿಸಿ]

ಸ್ಥಾನಿಕ ತುಳು ಬ್ರಾಹ್ಮಣರು ಜಗದ್ಗುರು ಆದಿ ಶಂಕರಾಚಾರ್ಯ ಸ್ಥಾಪಿತ ಶ್ರಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಟವನ್ನು ಗುರು ಪೀಠವಾಗಿ ಸ್ವೀಕರಿಸುತ್ತಾರೆ.

ವ್ರತ್ತಿ ಹಾಗು ಪ್ರವ್ರತ್ತಿ[ಬದಲಾಯಿಸಿ]

ಇವರ ಮುಖ್ಯ ವೃತ್ತಿ ಋಗ್ವೇದ ಪಾರಾಯಣ ಹಾಗು ಅಗ್ನಿ ಔಪಸನಾ ಆಗಿ ಬ್ರಾಹ್ಮಣನಿಗೆ ಹೇಳಲ್ಪಟ್ಟ ಎಲ್ಲಾ ಷಟ್ಕರ್ಮಗಳನ್ನು ಆಚರಿಸ್ತಾರೆ. ಗಾಯತ್ರೀ ಉಪಾಸನೆ ಇವರ ರಕ್ತದಲ್ಲಿ ಬೆರೆತುಹೊಗಿದೆ. ಶೈವ ಆಗಮ ಆಚರಣೆ ಹಾಗು ಅಭ್ಯಾಸ ಇವರ ಪ್ರವ್ರತ್ತಿಗಳಲ್ಲಿ ಒಂದು ಬಹು ಮುಖ್ಯ ದಿನಚರಿ. ಇವರು ಸ್ವಯಂಪಾಕಿ ಅಗ್ನಿಹೊತ್ರಿ/ಅಗ್ನಿ ಔಪಾಸನಿಗಳಾದ ಷಟ್ಕರ್ಮಿ ಬ್ರಾಹ್ಮಣರಾದ ಕಾರಣ ಇವರು ದೇವಸ್ಥಾನಗಳಲ್ಲಿ ಸೊಮಯಾಗದ ಆಹಿತವಾದ ಮಥಿತ ಪವಿತ್ರ ಅಗ್ನಿಯಿಂದ ನೈವೇದ್ಯಮ್/ಹವಿಷ್ಯನ್ನವನ್ನು ಮತ್ತು ದೇವರಿಗೆ ನಂದಾದೀಪವನ್ನು ಬೆಳಗಿಸುತ್ತಾರೆ. ಸೊಮಯಾಗದಂತ ಸತ್ರಯಾಗ ಮಾಡುವಂತ ಋಥ್ವಿಜ್ನ್ಯರು, ದೀಕ್ಷಿತರು ಬೇರೆಯವರ ಒಟ್ಟಿಗೆ ಊಟ ಮಾಬಾರದು ಎಂಬುದು ಶಾಸ್ತ್ರಸಮ್ಮತ. ಅದನ್ನು ಮೊದಲು ಭೊಜನದ ಅಗ್ರಪಂಕ್ಥಿ ಅಂತ ಕರೆಯಲ್ಪಡುತ್ತಿತ್ತು. ಬ್ರಾಹ್ಮಣನಾದವನಿಗೆ ಎಲ್ಲರಕ್ಕಿಂತ ಬಹುಮುಖ್ಯವಾದ ಪವಿತ್ರ ವ್ರತ್ತಿ ಅಗ್ನಿಹೊತ್ರ. ಅಗ್ನಿಯೇ ಬ್ರಾಹ್ಮಣನಿಗೆ ಬಹು ಮುಖ್ಯ. ಮೊದಲು ಕ್ರಿ.ಶ. ೧೮೪೫ ಇಸವಿ ತನಕ ಇವರು ಪರಷುರಾಮ ಕ್ಶೆತ್ರದ/ತುಳುನಾಡಿನ ಎಲ್ಲ ದೇವಸ್ಥಾನಗಳಲ್ಲಿ ಮುಖ್ಯ ಅರ್ಚಕತನ ಹಾಗು ತಂತ್ರ ವರ್ಗವನ್ನು ಮಾಡುತಿದ್ಧರು.

ತಾಳೇ ಒಲಿ ಗ್ರಂಥಗಳು[ಬದಲಾಯಿಸಿ]

ಸ್ಥಾನಿಕ ತುಳು ಬ್ರಾಹ್ಮಣರ ಹತ್ತಿರ ಇದ್ದಷ್ಟು ತುಳು, ಮಲಯಾಳ, ಗ್ರಂಥ ಲಿಪಿ ತಾಳೇ ಒಲಿ ಗ್ರಂಥಗಳು ಬೇರೆ ಎಲ್ಲಿಯೂ ಕಾಣಸಿಗದು. ಮಂತ್ರ, ತಂತ್ರ, ಪೌರೋಹಿತ್ಯ, ಅಯುರ್ವೇದ, ವೇದಾಂತ,ಸಪ್ತಷತಿ ಪಾರಾಯಣ, ರಾಮಾಯಣ, ಮಹಾಭಾರತ, ಯಕ್ಷಗಾನ ಪ್ರಸಂಗಗಳು ಕಾಣ ಸಿಗುತ್ತವೆ. ಶ್ರೊತ ಕರ್ಮಗಳಿಗೆ ಗ್ರಂಥಗಳು-ಅಗ್ನಿಹೊತ್ರ ಚಂದ್ರಿಕ, ಶ್ರೊತ ಕರ್ಮ ಪ್ರದೀಪಿಕ, ಐತರೆಯ ಬ್ರಾಹ್ಮಣ,ಆಷ್ವಾಲಾಯನ ಶ್ರೊತ ಸೂತ್ರ ಸ್ಮಾರ್ಥ ಕರ್ಮಗಳಿಗೆ ಗ್ರಂಥಗಳು-ರಿಗ್ವೇದಿಯ ಬ್ರಹ್ಮ ಕರ್ಮ ಸಮುಚ್ಚಯ,ಆಷ್ವಲಯನ ಪ್ರಾಯೋಗ ರತ್ನ,ಪ್ರಯೋಗ ಪಾರಿಜಾತ,ಧರ್ಮ ಸಿಂಧು, ನಿರ್ಣಯ ಸಿಂಧು,ಚತುರ್ವರ್ಗ ಚಿಂತಾಮಣಿ,ಸ್ಮ್ರಿತಿ ಮುಕ್ತಾ ಫಲ,ವೀರ ಮಿತ್ರೊದಯ,ಸ್ಮ್ರಿತಿ ಕೌಸ್ತಭ,ಕಾಲ ಮಾಧವ. ತಂತ್ರ ಕರ್ಮಗಲಳಿಗೆ ಗ್ರಂಥಗಳು-ತಂತ್ರ ಸಮುಚ್ಚಯ,ಸೇಷ ಸಮ್ಮುಚ್ಚಯ,ಕುಳಿಕಾಟ್ಟು ಪಚ್ಚ, ಲಕ್ಶ್ಣ ಚಂದ್ರಿಕ,ಅನುಷ್ಟಾನ ಪದ್ಧತ್ತಿ,ಕ್ರಿಯಾ ಸಾರ,ವಿನಾಯಕೋದಯ,ವಿಷ್ಣು ಸಂಹಿತಾ. ಇವುಗಳು ತಂತ್ರದಲ್ಲಿ ಕೆಲವು ಮಾತ್ರ.ಇನ್ನು ಹಲವು ನೈಜ ತಂತ್ರ ಗ್ರಂಥಗಳು ಗೊಪ್ಯಗಳಾಗಿ ಇವೆ.

ಆಚರಣೆ[ಬದಲಾಯಿಸಿ]

ಸ್ಥಾನಿಕ ತುಳು ಬ್ರಾಹ್ಮಣರು ಮುಖ್ಯವಾಗಿ ಸ್ಮಾರ್ಥ ವೈದಿಕ/ತಂತ್ರಾಗಮಿಕ (ನಿಗಮ/ಅಗಮ ಅನುಸರಿಸುವ) ಬ್ರಾಹ್ಮಣರು ಆಗಿದ್ದು ಮುಖ್ಯವಾಗಿ ಶೈವ ಶಾಕ್ತ ಪಂಥದಲ್ಲಿ ತಮ್ಮ ಆಚರಣೆ ನಡೆಸುವವರು. ಇವರು ಭಸ್ಮ/ವಿಭೂತಿ ಧಾರಿ ಬ್ರಾಹ್ಮಣರು. ಇವರು ರಿಗ್ವೇದ ಪಾರಾಯಣ, ನಿತ್ಯ ಪಂಚಾಯತನ ಪೂಜಾ ಅನುಷ್ಟಾನಾ; ಕೂರ್ಮಪೀಟಸ್ಥ ಪೂರ್ಣ ಮಹಾಮೇರು ಶ್ರೀ ಚಕ್ರಾ ಆರಾಧನೆ ಅಂದರೆ ಶ್ರೀ ವಿಧ್ಯಾ ಉಪಾಸನೆ, ಶಿವಲಿಂಗ ಅರ್ಚನೆಯನ್ನು ಆಚರಿಸುತ್ತಾರೆ. ವಿಶೇಷ ಸಂದರ್ಭ ಇರುವಾಗ ಪಂಚ ದುರ್ಗಾ ದೀಪ ನಮಸ್ಕಾರ ವಿಧಿ, ತಂತ್ರಿಕ್ ತ್ರಿಕಾಲ ಪೂಜಾ ವಿಧಿ; ಶತ, ಸಹಸ್ರ ರುದ್ರಾಭಿಷೇಕವನ್ನು ಆಚರಿಸುತ್ತಾರೆ. ಆಶ್ವಲಾಯನ ಗ್ರುಹ್ಯ ಸೂತ್ರದಲ್ಲಿ ಹೇಳಿದ ಎಲ್ಲಾ ಷೋಡಷ ಸಂಸ್ಕಾರಗಳನ್ನು ಮಾಡುತ್ತಾರೆ. ಎಲ್ಲ ಷೋಡಷ ಪರ್ವಗಳನ್ನು,ಹಬ್ಬ ಹರಿದಿನಗಳನ್ನು ಆಚರಿಸಿ ಹಾಗು ಪತ್ತನಾಜೆ ಹಾಗು ದೀಪಾವಳಿ ಪಾಡ್ಯ ದಿವಸ ದೈವಗಳಿಗೆ ಪರ್ವಗಳನ್ನು ನಿವೇದಿಸುತ್ತಾರೆ. ಉಪನಿಷತ್ ಗಳ ಮತ್ತು ಆದಿ ಶಂಕರರ ಅದ್ವೈತ ತತ್ತ್ವ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಾರೆ ಹಾಗು ಅನುಸರಿಸುತ್ತಾರೆ. ಅದ್ವೈತ ಸಿದ್ಧಾಂತ ಪಾಲನೆ ಅವರ ಮುಖ್ಯ ಜೀವನದ ಗುರಿ ಆಗಿದೆ

ಸಂಸ್ಕಾರದಿಂದ ಸಂಸ್ಕರಿಸಲ್ಪಡುತ್ತ ಮನುಷ್ಯನು ಬಾಳ್ವೆಯ ಒಂದೊಂದು ಮಜಲುಗಳನ್ನೇರುತ್ತಾ ಜೀವನದ ಸಾರ್ಥಕ ಆದ್ವೈತ ತತ್ವ ಸಿದ್ಧಾಂತದ ಗುರಿಯೆಡೆಗೆ ಸಾಗುತ್ತಿರಬೇಕು. ಇದಕ್ಕಾಗಿಯೇ ಗರ್ಭಾದಾನದಿಂದ ವಿವಾಹದವರೆಗೆ ಪೂರ್ವ ಸಂಸ್ಕಾರಗಳೆಂದು ಹದಿನಾರು ಸಂಸ್ಕಾರಗಳೂ, ಮರಣಾನಂತರದ ಹದಿನಾರು ಸಂಸ್ಕಾರಗಳೂ ವೈದಿಕ ಧರ್ಮದಲ್ಲಿ ವಿಧಿಸಲ್ಪಟ್ಟಿವೆ. ಯಾವುದೇ ಸಂಸ್ಕಾರದ ಆರಂಭದಲ್ಲಿ ಗಣಪತಿ ಪೂಜೆಯನ್ನು ಸರ್ವ ವಿಘ್ನನಾಶಕ್ಕಾಗಿ ಮಾಡುತ್ತಾರೆ. ದಿನವೂ ಪುಣ್ಯಪ್ರದವಾಗಲಿ ಎಂದು ಬ್ರಾಹ್ಮಣರು ಮಾಡುವ ವಾಚನಕ್ಕೆ ಪುಣ್ಯಾಹ ವಾಚನ ಎನ್ನುವರು. ಕುಲದ ಕಲ್ಯಾಣವಾಗಬೇಕೆಂದು ಕುಲದೇವತೆಯಲ್ಲಿ ಬೇಡಿಕೊಳ್ಳುವ ಪೂಜೆ ಮಾತೃಕ ಪೂಜೆ, ಪಿತೃಗಳ ಆತ್ಮಕ್ಕೆ ಶಾಂತಿ ಸಿಗಬೇಕೆಂದು ಪಿತೃಗಳಿಗೋಸ್ಕರ ಶ್ರಾದ್ಧವನ್ನು ವರ್ಷಕ್ಕೊಮ್ಮೆ ಮಾಡುತ್ತಾರೆ. ಸತ್ತವರ ಮಕ್ಕಳೆಲ್ಲಾ ಸೇರಿ ಪಿಂಡ ಹಾಕುವ ಕಾರ್ಯಕ್ರಮ. ಮೂರು ತಲೆಮಾರಿನವರಿಗೆ ಪಿಂಡ ಪ್ರದಾನ ಮಾಡುತ್ತಾರೆ.

ಅ.ಗರ್ಭಾದಾನ

 • ಪುಂಸವನ: ಪುತ್ರ ಜನ್ಮವಾಗಬೇಕೆಂದು ಆಚರಿಸುವುದೇ ಈ ಸಂಸ್ಕಾರದ ಉದ್ಧೇಶವಾಗಿದೆ.

ಆ.ಸೀಮಂತೋನ್ನಯನ: ಗರ್ಭದ ಶಕ್ತಿಯು ಹೆಚ್ಚಾಗಿ ಅದು ಸ್ಥಿರವಾಗಿರಬೇಕೆಂದು ಈ ಕಾರ್ಯಕ್ರಮವನ್ನು ಮಾಡುತ್ತಾರೆ. ೭ ತಿಂಗಳಾದ ಗರ್ಭಿಣಿಗೆ ಸೀಮಂತದ ಕಾರ್ಯಕ್ರಮ ಮಾಡುತ್ತಾರೆ. ಊರಿನ ಮುತ್ತೈದೆಯರೆಲ್ಲಾ ಸೇರಿ ಆರತಿ ಮಾಡಿ ಮಡಿಲು ತುಂಬಿಸುವ ಕಾರ್ಯ ಮಾಡುತ್ತಾರೆ. ಪತಿಯು ಎರಡು ಕಾಯಿಗಳಿಗಿರುವ ಔದುಂಬರದ ಟೊಂಗೆ, ಮೂರು ಚುಕ್ಕೆಗಳಿರುವ ಮುಳ್ಳು ಮತ್ತು ದರ್ಭೆಗಳಿಂದ ಪತ್ನಿಯ ತಲೆಯನ್ನು ಬಾಚಬೇಕು. ದೂರ್ವ ರಸವನ್ನು ಮೂಗಿನಲ್ಲಿ ನಸ್ಯ ಬಿಡಬೇಕು. ತಲೆಯ ಮೇಲೆ ಪಿಂಗರಾ ಹಾಗು ಅಡಿಕೆ ಕಟ್ಟುವುದು ಮತ್ತೆ ಕರ್ಮ ಆದನಂತರ ಅಡಿಕೆ ನೆಡುವುದು ವಾಡಿಕೆ. ಈ ಸಂದರ್ಭದಲ್ಲಿ ಗರ್ಭಿಣಿಗೆ ಉಡುಗೊರೆಯನ್ನಿತ್ತು ಸಂತೋಷಗೊಳಿಸುತ್ತಾರೆ. ಇಷ್ಟವಾದ ಸಿಹಿ ತಿಂಡಿಗಳನ್ನು ಮಾಡುತ್ತಾರೆ.

ಇ.ಜಾತಕರ್ಮ: ಗಂಡು ಮಗು ಜನಿಸಿದ ಕೂಡಲೇ ಗಂಟೆಯನ್ನು ಬಾರಿಸುತ್ತಾರೆ. ಹೆಣ್ಣು ಹುಟ್ಟಿದರೆ ಶಂಖವನ್ನು ಊದುತ್ತಾರೆ. ಮಗು ಹುಟ್ಟಿದೊಡನೆಯೇ ಬಂಗಾರದ ಕಡ್ಡಿಯಿಂದ ತುಪ್ಪ ಮತ್ತು ಜೇನನ್ನು ಮಗುವಿಗೆ ಕುಡಿಸಲಾಗುತ್ತದೆ. ನಂತರ ಅದೇ ಬಂಗಾರದ ಕಡ್ಡಿಯಿಂದ ಮಗುವಿಗೆ ಕಿವಿ ಚುಚ್ಚಿ ಅದರ ಸ್ಮರಣಶಕ್ತಿಯನ್ನು ವರ್ಧಿಸಲಾಗುತ್ತದೆ,

ಈ.ನಾಮಕರಣ ಮಗು ಹುಟ್ಟಿದ ೧೧ನೇ ದಿನದಂದು ನಾಮಕರಣ ಮಾಡುತ್ತಾರೆ. ಆಗ ಕುಟುಂಬದವರಿಗೆ ಬಿಡುವಿಲ್ಲದಿದ್ದರೆ ಹುಟ್ಟಿದ ೧೬, ೨೭, ೪೦ ದಿನಗಳಲ್ಲಿ ಮಾಡುತ್ತಾರೆ. ಮಗುವಿಗೆ ನಾಲ್ಕು ವಿಧದ ಹೆಸರಿಡುವ ಪರಿಪಾಠವಿದೆ.

 • ಕುಲದೇವತಾ ಭಕ್ತನಾಮ
 • ಹುಟ್ಟಿದ ತಿಂಗಳ ಸಂಕೇತವಾಗಿ
 • ಜನ್ಮ ನಕ್ಷತ್ರದ ಅರ್ಧಾಕ್ಷರವಿರುವ ಹೆಸರು
 • ಲೌಕಿಕ ನಾಮ: ನಾಮಕರಣದಂದು ಮಗುವನ್ನು ಸಾಯಂಕಾಲ ತೊಟ್ಟಿಲಿಗೆ ಹಾಕುವ ಕಾರ್ಯಕ್ರಮವನ್ನು ಮಾಡುತ್ತಾರೆ. ಬಜೆಯನ್ನು ತೇದು ಜೇನು ತುಪ್ಪದೊಂದಿಗೆ ಮಗುವಿನ ಬಾಯಿಗೆ ಮುಟ್ಟಿಸುತ್ತಾರೆ.

ಉ.ನಿಷ್ಕ್ರಾಮಣ ಆಯಸ್ಸು, ಮಾನಸಿಕ ಶಾರೀರಿಕ ಶಕ್ತಿಗಳು ಹೆಚ್ಚಾಗಬೇಕೆಂಬ ಉದ್ಧೇಶದಿಂದ ಮಗುವನ್ನು ಮನೆಯಿಂದ ಹೊರತಂದು ಸೂರ್ಯ, ಚಂದ್ರ, ಅಗ್ನಿ, ದನ, ದಿಕ್ಪಾಲ, ಸಮೀಪದ ಬಂಧುಗಳ ದರ್ಶನ ಮಾಡಿಸುವುದು ಆ ಸಂಸ್ಕಾರದ ಮುಖ್ಯ ಉದ್ದೇಶ.

ಊ.ಅನ್ನಪ್ರಾಷನ: ಮಗುವಿಗೆ ಆಯಸ್ಸು, ವರ್ಚಸ್ಸು, ಶಾರೀರಿಕ ಶಕ್ತಿ, ದಾರ್ಢ್ಯ ಇತ್ಯಾದಿಗಳ ವೃದ್ಧಿಯಾಗಬೇಕೆಂಬ ಉದ್ದೇಶದಿಂದ ಕೈಯಲ್ಲಿ ಸುವರ್ಣವನ್ನು ಹಿಡಿದು ಅದರಿಂದ ಅನ್ನವನ್ನು ಉಣಿಸುವುದು. ಈ ಅನ್ನಪಾಶನ ಕಾರ್ಯಕ್ರಮ ನಾಮಕರಣದಂದು ಅಥವಾ ಬೇರೆ ದಿವಸಗಳಲ್ಲಿ ದೆವಸ್ಥಾನ ಸನ್ನಿಧಿಯಲ್ಲಿ ಮಾಡಿಸುತ್ತಾರೆ.

ಋ.ಚೂಡಾಕರ್ಮ: ಶಿಖೆಯನ್ನು ಕಲ್ಪಿಸುವ ಸಂಸ್ಕಾರ ಎಂದರ್ಥ, ಆಯಸ್ಸು, ಬ್ರಹ್ಮ ತೇಜಸ್ಸು, ಸಕಲಶ್ರೊಉತ ಸ್ಮರ್ತ ಕರ್ಮಸಿದ್ಧಿ,ಮಂತ್ರಸಿದ್ಧಿ ಮುಂತಾದವುಗಳು ವೃದ್ಧಿಸಬೇಕೆಂಬ ಉದ್ದೇಶದಿಂದ ಇದನ್ನು ಮಾಡಲಾಗುತ್ತದೆ.

ಎ.ಉಪನಯನ : ಉಪ ಎಂದರೆ ಆಚಾರ್ಯನ, ಗುರುವಿನ ಸಮೀಪ. ನಯನ ಎಂದರೆ ಕೊಂಡೊಯ್ಯುವುದು. ಗಾಯತ್ರಿಯ ಉಪದೇಶ ಪಡೆಯಲು, ವೇದ, ಶಾಸ್ತ್ರಗಳನ್ನು ಅಭ್ಯಸಿಸಲು, ಗುರುವಿನ ಬಳಿ ಸೇರುವುದು, ಕಟಿಸೂತ್ರ, ಕೌಪೀನವಸ್ತ್ರ, ಅಜೀನ, ಯಜ್ಞೋಪವೀತ, ದಂಡ ಇತ್ಯಾದಿಗಳ ಧಾರಣ ಮುಂತಾದ ಪ್ರಧಾನ ವಿಧಿಗಳು ಸೆರಿಕೊಂಡಿವೆ. ಈ ಸಂಸ್ಕಾರದಿಂದ ಮುನುಷ್ಯನಿಗೆ ಪುನರ್ಜನ್ಮವೇ ದೊರೆತಂತಾಗಿ ದ್ವಿಜತ್ವ ಪ್ರಾಪ್ತವಾಗುತ್ತದೆ.ಇದರ ಪ್ರಯುಕ್ತ ವಿನಾಯಕ ಶಾಂತಿ,ಗುರು ಶಾಂತಿ,ರಿಗ್ವೇದಿಯ ಕೂಷಮಾಂಡ ಹವನ, ಕ್ರಚ್ರಾಚರಣೆ, ೧೨೦೦೦ ಗಾಯತ್ರಿ ಜಪ ಮಾಡುದು ರೂಡಿ

ಏ.ಮಹಾನೌಮೀ

ಐ.ಮಹಾವ್ರತ

ಒ.ಉಪನಿಷದ್ ವ್ರತ

ಓ.ಕೇಶಾಂತ

ಔ.ಗೋದಾನ: ಇವುಗಳನ್ನು ಒಟ್ಟಿಗೆ ವೇದವ್ರತಗಳೆಂದು ಕರೆಯುತ್ತಾರೆ. ಗುರುಕುಲದಲ್ಲಿ ಗುರುವಿನ ಬಳಿ ಸಕಲ ವೇದಗಳನ್ನು ಈ ಕಾಲದಲ್ಲಿ ಅಧ್ಯಯನ ಮಾಡುವುದು, ವೇದಾಧ್ಯಯನವಾದ ಮೇಲೆ ಕ್ಷೌರಮಾಡಿಸಿ ಸ್ನಾನ ಮಾಡುವುದಕ್ಕೆ ಕೇಶಾಂತ ಎನ್ನುತ್ತಾರೆ. ದಕ್ಷಿಣಾರೂಪದಲ್ಲಿ ಗುರುವಿಗೆ ಗೋವನ್ನು ಅರ್ಪಿಸುವುದು ಗೋದಾನ.

ಅಂ.ಸಮಾವರ್ತನ: ಗೃಹಸ್ಥಾಶ್ರಮ ಸ್ವೀಕಾರಕ್ಕೆ ಗುರುವಿನಿಂದ ಅನುಮತಿ ಪಡೆದು ಉಪಯುಕ್ತವಾದ ವಿಶಿಷ್ಟ ಉಪದೇಶಗಳನ್ನು ಪಡೆಯುವುದಾಗಿದೆ.

ಅಃ. ವಿವಾಹ: ಧಾರ್ಮಿಕವಾಗಿ ವಿವಾಹವು ಗೃಹಸ್ಥಾಶ್ರಮ ಪ್ರವೇಶಿಸಲು ಮಾಡುವ ದಾರಿ ಎನ್ನಬಹುದು. ಧರ್ಮಶ್ರದ್ಧೆಯುಳ್ಳ ಉತ್ತಮ ಸಂತಾನಾಭಿವೃದ್ಧಿಯೇ ವಿವಾಹದ ಮುಖ್ಯ ಉದ್ದೇಶ. ಇದಕ್ಕೆ ಧಾರ್ಮಿಕ ಮಹತ್ವದಷ್ಟೇ ಸಾಮಾಜಿಕ ಮಹತ್ವವೂ ಇದೆ. ಈ ಸಂಸ್ಕಾರದಲ್ಲಿ ಈ ಕೆಳಗಿನ ಪ್ರದಾನ ವಿಧಿಗಳನ್ನು ಆಚರಿಸುತ್ತಾರೆ.

 • ನಿಶ್ಚಯ: ವರನ ಕಡೆಯವರು ವಧುವಿನ ಕಡೆಯವರು ಪರಸ್ಪರ ಒಪ್ಪಿದ ನಂತರ ಮದುವೆ ದಿನವನ್ನು ನಿಗದಿಪಡಿಸುವುದಕ್ಕಾಗಿ ನಿಶ್ಚಯ ಕಾರ್ಯಕ್ರಮವನ್ನು ಹೆಣ್ಣಿನ ಮನೆಯಲ್ಲಿ ಮಾಡುತ್ತಾರೆ. ಪುರೋಹಿತರ ಮೂಲಕ ಮದುವೆ ದಿನವನ್ನು ನಿಶ್ಚಯಿಸಿ, ವರನ ಕಡೆಯವರು ವಧುವಿಗೆ ವಸ್ತ್ರ,ಆಭರಣಗಳನ್ನು ನೀಡಿ ಸಂತುಷ್ಟಗೊಳಿಸುತ್ತಾರೆ.
 • ನಾಂದಿ: ಮದುವೆಗೆ ಎರಡು ದಿನ ಇರುವ ಮೊದಲು ಗಣಹೋಮವನ್ನು ಮಾಡಿ ಮದುವೆ ಕಾರ್ಯಕ್ಕೆ ಯಾವುದೇ ವಿಘ್ನಗಳು ಬರಬಾರದೆಂದು ಈ ಕಾರ್ಯಕ್ರಮವನ್ನು ಮಾಡುತ್ತಾರೆ. ನಾಂದಿಯ ನಂತರ ಅಮೆ, ಸೂತಕಗಳು ಬಂದರೂ ಕೂಡ ಮದುವೆಯನ್ನು ನಿಲ್ಲಿಸಲಾಗುವುದಿಲ್ಲ.
 • ಸೀಮಾಂತ ಪೂಜನ: ವಧೂ ಪಕ್ಷದವರು ದಿಬ್ಬಣ ಸಮೇತ ಬಂದ ವರನನ್ನು ಮತ್ತು ಅವನ ಪಕ್ಷದವರನ್ನು ಸ್ವಾಗತಿಸುವುದು.
 • ಮಧುಪರ್ಕ: ವಿವಾಹಕ್ಕಾಗಿ ಬಂದ ವರನ ಪೂಜೆ, ಕಾಲು ತೊಳೆಯುವುದು, ಜೇನು ಕಲಸಿದ ಮೊಸರನ್ನು ದೇವತೆಗಳಿಗೆ ಅರ್ಪಿಸುವುದು,
 • ಗೌರಿಹರ ಪೂಜೆ: ಸೌಭಾಗ್ಯ ಸಿದ್ಧಿಗಾಗಿ ವಧುವು ಗೌರಿಹರನನ್ನು ಪೂಜಿಸುವುದು.
 • ಮಂಗಲಾಷ್ಟಕ: ನಿಶ್ಚಿತವಾದ ಮಂಗಲ ಮೂಹೂರ್ತದಲ್ಲಿ ಪುರೋಹಿತರ ಮಂಗಲಾಷ್ಟಕ ಪಠಣದೊಂದಿಗೆ ವಧೂವರರು ಪರಸ್ಪರ ಮುಖದರ್ಶನ ಮಾಡಿ ಪುಷ್ವಮಾಲೆಗಳನ್ನು ಹಾಕಿಕೊಳ್ಳುತ್ತಾರೆ.
 • ಕನ್ಯಾದಾನ: ವಧುವಿನ ಮಾತಾಪಿತರು ಪ್ರತಿಜ್ಞಾ ಪೂರ್ವಕವಾಗಿ ವರನ ಕೈಮೇಲೆ ನೀರಿನ ಧಾರೆ ಎರೆದು ಕನ್ಯೆಯನ್ನು ದಾನ ಮಾಡುವುದು.
 • ಸೂತ್ರವೇಷ್ಟನ: ಮುತ್ತೈದೆ ಚಿಹ್ನೆಯಾದ ಮಂಗಲಸೂತ್ರವನ್ನು ಕಟ್ಟುವುದು. ಬ್ರಾಹ್ಮಣರು ಮಂತ್ರ ಘೋಷದೊಡನೆ ವಧೂವರರಿಗೆ ಸೂತ್ರವೇಷ್ಟನ ಮಾಡಿ ಆದಾರವನ್ನು ಪರಸ್ಪರರು ಕಂಕಣ ಬಂಧವಾಗಿ ಧರಿಸುವಂತೆ ಕಟ್ಟಿಸುವುದು.
 • ವಿವಾಹಹೋಮ: ವಧುವಿಗೆ ಭಾರ್ಯಾತ್ವ ಸಿದ್ಧಿಗಾಗಿ ಈ ಹೋಮವನ್ನು ಮಾಡಲಾಗುತ್ದೆ. ಇದರಲ್ಲಿ ಲಾಜಹೋಮ, ಪಾಣಿಗ್ರಹಣ, ಶಿಲಾ ಅರೊಹಣ, ಪರಿಣಯನ ಅಶ್ವಾರೋಹಣ, ಸಪ್ತಪದಿ ಮುತಾಂದ ಕರ್ಮಗಳಿವೆ.
 • ಗೃಹಪ್ರವೇಶನೀಯ ಹೋಮ: ಗೃಹಸ್ಥಾಶ್ರಮ ಸಿದ್ಧಿಗಾಗಿ ಗೃಹಾಗ್ನಿಯ ಸ್ಥಾಪನೆ.
 • ಗೃಹಪ್ರವೇಶ: ನೂತನ ವಧುವಿನೊಂದಿಗೆ ವರನು ಗೃಹಪ್ರವೇಶ ಮಾಡುವುದು.
 • ಅಂತ್ಯಸಂಸ್ಕಾರ: ಹುಟ್ಟಿದ ಮಾನವನು ಒಂದಿಲ್ಲೊಂದು ದಿನ ಸಾಯಲೇಬೇಕು. ಹುಟ್ಟು ಆಕಸ್ಮಿಕ, ಬದುಕು ಅನಿವಾರ್ಯ, ಸಾವು ನಿಶ್ಚಿತ. ತೀರಿಕೊಂಡ ಬಂಧುಗಳಿಗೆ ಅಂತ್ಯ ಸಂಸ್ಕಾರವಾಗಬೇಕೆಂದು ಹಿಂದೂ ಧರ್ಮದ ಸಂಪ್ರದಾಯವಾಗಿದೆ. ತೀರಿದ ವ್ಯಕ್ತಿಗಳನ್ನು ಹೊತ್ತಿಸಿ ಸಂಸ್ಕಾರ ಕಾರ್ಯಗಳನ್ನು ಮಡುತ್ತಾರೆ. ತೀರಿಕೊಂಡ ವ್ಯಕ್ತಿಯ ಕುಟುಂಬದವರಿಗೆ ೧೦ ದಿನ ಸೂತಕವಿರುತ್ತದೆ. ೧೧ನೇ ದಿನಕ್ಕೆ ದಿನ ಶದ್ಧವಾಗುತ್ತದೆ. ೧೨ಕ್ಕೆ ಶ್ರವಣಾರಾಧನೆಯಾಗುತ್ತದೆ. ಗೋದಾನ, ವಸ್ತ್ರದಾನ, ಇನ್ನಿತರ ದಾನಗಳನ್ನು ಈ ಸಮಯದಲ್ಲಿ ನಡೆಸಬೇಕು. ೧ ವರ್ಷ ತಿಂಗಳು ತಿಂಗಳು ಮಾಸಿಕ(ಚಿಕ್ಕ ಶ್ರಾದ್ಧ) ಮಾಡಬೇಕು. ನಂತರ ಪ್ರತಿ ವರ್ಷ ಶ್ರಾದ್ಧವನ್ನು ಮಾಡಬೇಕು. ಸತ್ತವರ ಆತ್ಮಕ್ಕೆ ಶಾಂತಿ ದೊರಕಬೇಕೆಂಬುದೇ ಇದರ ಆಶಯ ಹಾಗೂ ಕುಟುಂದವರ ಶ್ರೇಯೋಭಿವೃದ್ಧಿಗೋಸ್ಕರ ಕೂಡ ಮಾಡಬೇಕಾಗುತ್ತದೆ.

ಈಶ್ವರ ಭಕ್ತಿ ಹಾಗು ಶಿವನೈವೇದ್ಯಮ್ ಸೇವನೆ[ಬದಲಾಯಿಸಿ]

ಸ್ಥಾನಿಕ ತುಳು ಬ್ರಾಹ್ಮಣರು ಆನಾದಿಕಲದಿಂದಲು ಈಶ್ವರ ಭಕ್ತರು. ಅವರನ್ನು ಶಿವಭಕ್ತ ಧುರರಂಧರರು, ನಿಃಸ್ಸಿಮಮಹಿಮ ಶಿವಪ್ರೀತಿ ಇರುವವರು ಎಂದು ಗುರುತಿಸಲಾಗಿದೆ. ಗಾಯತ್ರಿ ಜಪದ ವಜ್ರಕವಚದೊಂದಿಗೆ, ಶಿವಭಕ್ತಿಯ ಭದ್ರತಳಪಾಯದಿಂದ ಜಗತ್ಜನನಿ ಆದಿಪರಾಶಕ್ತಿ ಲಲಿತ ತ್ರಿಪುತರಸುಂದರಿ ಶ್ರೀ ರಾಜ ರಾಜೆಶ್ವರಿಯನ್ನು ಆರಾಧಿಸಿಕೊಂಡು ಬಂದಿದ್ದಾರೆ. ಇವರಲ್ಲಿ ಶಿವನನ್ನು ಲಿಂಗ ರೂಪದಲ್ಲಿ ಆರಾಧಿಸುವ ಪರಿಪಾಟ ಇದೆ. ಶಿವಲಿಂಗವು ಚರ ಹಾಗು ಸ್ಥಿರಾ ಎಂದು ಎರಡು ಬಗೇ. ಚರ ಲಿಂಗವು,ನರ್ಮದಾ ನದಿ ಉತ್ಪನ್ನ; ಸ್ಫಟಿಕ; ಬಾಣ,ಸ್ವರ್ಣ,ರಜತ,ಲೊಹ, ಕಾಂಸ್ಯ ಮಣಿ,ಪಾರ್ಥಿವ ,ಪಾರದ (ರಸ) ಹೀಗೆ ನಾನಾ ಬಗೆ. ಸ್ಥಿರ ಲಿಂಗವು, ಜ್ಯೊತಿರ್ಲಿಂಗ, ಉಧ್ಭವಲಿಂಗ ಹಾಗು ಚಂಡಾಧಿಕಾರ ಇರುವ ಪಂಚಸೂತ್ರಿಯ ವಿಧಾನದಿಂದ ಮಾಡಿದ ಪಷಾಣ ಲಿಂಗ. ಇ ಎಲ್ಲ ಲಿಂಗಗಳಾ,[ಚಂಡಾಧಿಕಾರ ಇರುವಂತವನ್ನು ಹೊರತುಪಡಿಸಿ] ನೈವೇದ್ಯವನ್ನು ಬಕ್ಷಿಸಿದರೆ ಯಾವುದೇ ದೊಷ ಇಲ್ಲ ಅಂತ ಶೃತಿ ಸ್ಮ್ರಿತಿಗಳು ಹಾಗು ಎಲ್ಲ ಶೈವ, ವೈಖನಸ ಹಾಗು ಪಾಂಚರಾತ್ರ ಆಗಮವು ಸಾರುತ್ತಾವೆ. ತುಳುನಾಡಿನಲ್ಲಿ ಇರುವಂತ ಎಲ್ಲ ಶಿವಾಲಯಗಳು ಉಧ್ಭವಲಿಂಗಗಳು. (ಭೀಮ ಹಾಗು ಪೂರೂಷಮೃಗರ ಕಾಳಗದಲ್ಲಿ ಹನೂಮಂತನ ರೊಮಪಾತನದಿಂದ ಹುಟ್ಟಿದ್ದು. ಹನೂಮಂತನ ರೊಮಪಾತ ಎಲ್ಲಲ್ಲಿ ಆಗುತ್ತಿತ್ತೊ ಅಲ್ಲಲ್ಲಿ ಶಿವಲಿಂಗ ಉತ್ಪತ್ತಿ ಅಗುವಂತ ಪ್ರತೀತಿ. ಸರ್ವಶ್ರೇಷ್ಟ ರಾಮಭಕ್ತಿಯ ಕೊನೆಹಂತದ ಲಕ್ಷಣವೆ ಇದು). ಹೀಗಾಗಿ ಈ ಶಿವಾಲಯಗಳ ನೈವೇದ್ಯ ಪರಮ ಪವಿತ್ರ ಹಾಗು ತಾಪತ್ರಯ ನಿವಾರಕ ಏವಂ ಜೀವನ್ಮುಕ್ತಿ, ವೈರಾಗ್ಯ ದಾಯಕ. ಚಂಡಾಧಿಕಾರ (ಬಾಣಾ, ರಾವಣ, ಚಂಡೆಷ, ನಂದಿ, ಬ್ರುಂಗಿ, ಜಟಾ ) ಇರುವಂಥ ಪಂಚಸೂತ್ರಿಯ ಲಿಂಗಗಳ ನೈವೇದ್ಯಮ್ ಕೂಡಾ ವಿಶೇಷ ಆಗಮೊಕ್ತವಿಧಿವಿಧಾನಗಳಿಂದ ಪರಿಷ್ಕರಿಸಿ ಸ್ಥಾನಿಕ ತುಳು ಬ್ರಾಹ್ಮಣರು ಸೇವಿಸತಕ್ಕದ್ದು ಹಾಗು ಇದರಿಂದ ಯಾವುದೇ ಪಾತಿತ್ಯ ಉತ್ಪನ್ನ ಆಗುದಿಲ್ಲ

ಹಬ್ಬ ಹರಿದಿನಗಳು[ಬದಲಾಯಿಸಿ]

ತುಳು ನಾಡಿನಲ್ಲಿ ಆಚರಿಸುವ ಎಲ್ಲಾ ಹಬ್ಬ ಹರಿದಿನಗಳನ್ನು ಸ್ಥಾನಿಕ ತುಳು ಬ್ರಾಹ್ಮಣರು ಆಚರಿಸುತ್ತಾರೆ. ಆಟಿ(ಆಷಾಡ) ತಿಂಗಳ ಬಿರುಮಳೆಯ ದಿನಗಳನ್ನು ಬಿಟ್ಟರೆ ವರ್ಷದುದ್ದಕ್ಕೂ ಬೇರೆ ಬೇರೆ ಬಗೆಯ ಹಬ್ಬಗಳನ್ನು ಆಚರಿಸುತ್ತಾರೆ. ಆಟಿ ತಿಂಗಳಲ್ಲಿ ವಿಶೇಷವಾಗಿ ೧೨ ದುರ್ಗ ದೀಪ ನಮಸ್ಕಾರ ವಿಧಿಯನ್ನು ಆಚರಿಸುತ್ತಾರೆ. ವಿಷು ಆಚರಣೆ ಇವರಿಗೆ ಬಹಳ ಮುಖ್ಯ. ಚೌತಿ, ಅಷ್ಟಮಿ, ನಾಗರಪಂಚಮಿ, ಷಷ್ಟಿ, ಅನಂತ ಚತುರ್ದಶಿ, ನರಕ ಚತುರ್ದಶಿ, ಬಲಿಪಾಡ್ಯ, ತುಳಸಿ ಹಬ್ಬ, ದೀಪಾವಳಿ, ನವರಾತ್ರಿ, ಯುಗಾದಿ ಇತ್ಯಾದಿಗಳನ್ನು ವಿಶಿಷ್ಟವಾದ ರೀತಿಯಲ್ಲಿ ಆಚರಿಸುತ್ತಾರೆ. ಮುಡಿಪು ಆಚರಣೆ ಸ್ಥಾನಿಕರಲ್ಲಿ ಬಹು ವಿಶೇಷ. ಆಯಾ ಹಬ್ಬಗಳಿಗೆ ಆಗಬೇಕಾದ ಪೂಜಾಕ್ರಮ, ತಿಂಡಿ, ಪಲ್ಯ ಇತ್ಯಾದಿಗಳಲ್ಲೂ ನಿರ್ದಿಷ್ಟತೆ ಇದೆ. ಇನ್ನು ಮನೆ ತುಂಬಿಸುವುದು, ಹೊಸ ಊಟ(ಪೊಸರ್), ನೂಲ ಹುಣ್ಣಿಮೆ ಇತ್ಯಾದಿ ಸಂದರ್ಭಗಳಲ್ಲಿ ಬೇರೆ ಬಗೆಯದೇ ಆದ ಆಚರಣೆ ನಡೆಯುತ್ತದೆ. ಸೋಣ ತಿಂಗಳು ವಿಶೇಷವಾಗಿ ಎರಡು ಹೊತ್ತು ಹೊಸ್ತಿಲ ಪೂಜೆ ನಡೆಯುತ್ತದೆ. ಪ್ರಾತಃಕಾಲ ದಿನವೂ ತುಳಸಿ ಪೂಜೆ ಮಾಡುತ್ತಾರೆ.

ಅಯುರ್ವೇದ ಹಾಗು ತುಳು ಮಂತ್ರ ಚಿಕಿತ್ಸೆ[ಬದಲಾಯಿಸಿ]

ಸ್ಥಾನಿಕ ತುಳು ಬ್ರಾಹ್ಮಣರು ಅಯುರ್ವೇದ ಚಿಕಿತ್ಸೆಯಲ್ಲಿ ಹಾಗು ಸಿದ್ಧ ಔಷಧಿ ನೀಡುವುದರಲ್ಲಿ ಚಣಾಕ್ಷರು.ತುಳು ಮಂತ್ರಗಳಿಂದ ಚಿಕಿತ್ಸೆ ಮಾಡುತ್ತಿದ್ದರು. ಅದನ್ನು ಮುಟ್ಟಾಸು ಅಂತ ಕರೆಯುತ್ತಿದ್ದರು. ಉದಾ: ನಿದ್ರೆ ಬಾರದವನಿಗೆ ಮುಟ್ಟಾಸು -- : "ಅರಿಗರುಡಾ, ಮುರಿಗರುಡಾ,ಪಾತಳಾಗರುಡಾ ಒಉಲಮೈ ಮುಟ್ಟಂತೆ ದೇವೆರೆನ ರೆಕ್ಕೆತಡಿಟ ಶಯನಮ್ ಪಾತ ಮಾಧವ". ಪ್ರತಿ ರೋಗಗಳಿಗೂ ಇಂಥ ಸಿದ್ಧ ಮುಟ್ಟಾಸುಗಳು ಇರುತ್ತಿದ್ದವು.

ಯಕ್ಷಗಾನ, ಕರ್ನಾಟಕೀಯ ಸಂಗೀತ ಹಾಗು ಭರತನಾಟ್ಯ[ಬದಲಾಯಿಸಿ]

ಸ್ಥಾನಿಕ ತುಳು ಬ್ರಾಹ್ಮಣರ ಪಂಚ ಪ್ರಾಣ ಹಾಗು ಉಸಿರು ಈ ಕಲೆಗಳು. ಯಕ್ಷಗಾನದ ವೇಷಭೂಷಣದಲ್ಲಿ ದಿ.ಅಡೂರು ಕೆರೆಮೂಲೆ ಶ್ರೀಧರರಾಯರು ಸ್ನಾತಕೋತ್ತರ ಪದವಿಯನ್ನು ಗಳಿಸಿದ್ದರು. ಅವರು ದೇವರ ಕಿರೀಟವೇಷ ವಿನ್ಯಾಸದಲ್ಲಿ ನಿಪುಣರು.

ಆಟೋಟಗಳು[ಬದಲಾಯಿಸಿ]

ಎಲ್ಲಾ ಜನಾಂಗಳಲ್ಲೂ, ಪ್ರದೇಶಗಳಲ್ಲೂ ಹಿಂದಿನ ದಿನಗಳಿಂದಲೇ ಪ್ರಚಲಿತವಾಗಿರುವ ಅನೇಕ ಜನಪದ ಆಟಗಳಿವೆ. ಆಟಗಳು ಪ್ರಾಚೀನ ಸಂಸ್ಕೃತಿಯನ್ನು ತಕ್ಕಮಟ್ಟಿಗೆ ಬಿಂಬಿಸುವುದು ಕೂಡ ಆಗಿದೆ. ಅಜ್ಜಿಯಾಟ, ತೋಳತೊಟ್ಟಿಲಾಟ, ಕೋಳಿಕಾದುವಿಕೆ, ಕುದುರೆ ಆಟ, ಬೀಸು ಹೊಡೆತ, ಉಪ್ಪಾಟ, ಕಪ್ಪೆಲಾಗ, ಉಸಿರು ಕಟ್ಟಿಸುವುದು, ಡೊಂಕ ಹಾಕುವುದು, ಕಾಗೆ-ಗಿಳಿ, ಕಬಡ್ಡಿ, ಹುಲಿದನ, ಪುಣಿಚ್ಚೆಲ್ ಆಟ, ಪಲ್ಲಿಪತ್, ಮರಕೋತಿಯಾಟ, ನೇಲಾಟ, ಅವಿತುಕೊಳ್ಳುವಾಟ, ದುರ್ಸುಬಾಣ, ನೀರಮೇಲೆ ಕಪ್ಪೆಲಾಗ,ತಪ್ಪಂಗಾಯಿ, ಚೆಂಡು ಹೊಡೆತ, ಕುಟ್ಟಿದೊಣ್ಣೆ, ಏಳುಪಲ್ಲೆಯಾಟ, ಬುಗುರಿ, ಜುಬುಲಿ, ಗೋಲಿಯಾಟ, ಏಳು ಗುಳಿಯ ಆಟ, ಕಣ್ಣಾಮುಚ್ಚಾಲೆ, ಗಾಡಿಯಾಟ, ಗೇರುಬೀಜದಾಟ ಮುಂತಾದವು ಹೊರಾಂಗಣ ಆಟಗಳನ್ನು ಜನರು ಆಡುತ್ತಿದ್ದರು. ಚೆನ್ನಮಣೆ, ಪಗಡೆ, ಕಲ್ಲಾಟ, ಕವಡೆ ಆಟ, ಹೊಂಗಾರನ ಕಾಯಿ, ಗಜ್ಜುಗ, ಮಂಜೊಟ್ಟಿ, ಹುಣಸೇ ಬೀಜಗಳಿಂದ ಆಡುವ ಆಟ ಮುಂತಾದ ಒಳಾಂಗಣ ಆಟಗಳನ್ನು ಸ್ಥಾನಿಕ ತುಳು ಬ್ರಾಹ್ಮಣರು (ಮಕ್ಕಳು) ಇತರರಂತೆ ಆಡುತ್ತಿದ್ದರು. ಇವು ಎಳೆಯರ ಸತ್ವಪೂರ್ಣ ಬೆಳವಣಿಗೆಗೆ ಸಹಕಾರಿಯಾಗಬಲ್ಲುದು. ಎಲ್ಲಾ ಆಟಗಳು ಕೆಲವೊಂದು ನಿಯಮಗಳ ಚೌಕಟ್ಟಿನಲ್ಲಿ ಸಾಗುವುದರಿಂದ ಪರ್ಯಾಯವಾಗಿ ಒಂದು ಬಗೆಯ ಶಿಸ್ತನ್ನು ಮೂಡಿಸುತ್ತವೆ ಎನ್ನಬಹುದು.

ಸರಳ, ಸಜ್ಜನಿಕೆಯ ನಡೆನುಡಿಯುಳ್ಳ ಸ್ಥಾನಿಕ ತುಳು ಬ್ರಾಹ್ಮಣರು ಎಲ್ಲಾ ಧಾರ್ಮಿಕ ಆಚರಣೆಗಳನ್ನು ಕಾಲಕ್ಕೆ ತಕ್ಕಂತೆ ವಿಧಿವತ್ತಾಗಿ ಆಚರಿಸುತ್ತಾರೆ. ಹಬ್ಬ ಹರಿದಿನಗಳನ್ನು ಮಾಡುತ್ತಾರೆ. ಎಲ್ಲಾ ರಂಗದಲ್ಲಿಯೂ ಸ್ಥಾನಿಕ ತುಳು ಬ್ರಾಹ್ಮಣರು ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ ಎನ್ನಬಹುದು.

ಗೊತ್ರ ಇತ್ಯಾದಿ[ಬದಲಾಯಿಸಿ]

ಗೊತ್ರ[ಬದಲಾಯಿಸಿ]

ಇವರಲ್ಲಿ ಸಪ್ತ ಗೊತ್ರದವರು ಈಗ ಇದ್ದಾರೆ.

ಉಪನಾಮಗಳು[ಬದಲಾಯಿಸಿ]

 • ಅಯ್ಯ- ತಮಿಳ್ ಅಯ್ಯರ್ ಶಬ್ದದ ತದ್ಭವ; ಸಂಸ್ಕ್ರತ ದಲ್ಲಿ ಆರ್ಯ- ಅಂದ್ರೆ ಕುಲಿನ ಹಾಗು ಸಭ್ಯರು ಎಂದರ್ಥ.
 • ಒಜ- ಅಂದ್ರೆ ಮಂತ್ರವಾದಿ, ತಂತ್ರಿ,ಆಗಮ ಶಾಸ್ತ್ರಕ್ಕೆ ಮೂಲ ಪುರುಷರು-ಉದಾಹರಣೆ -ಚೇರ ನಟ್ಟೊಜ ಕುಟುಂಬ- ಇವರು ವಿಶ್ವಾಮಿತ್ರ ಗೋತ್ರದವರು ಆಗಿದ್ದು ಪೊಳಲಿ ರಾಜರಾಜೇಶ್ವರಿ, ಪುತ್ತೂರು ಮಹಾಲಿಂಗೇಶ್ವರ ಹಾಗು ವಿಟ್ಲ ಪಂಚಲಿಂಗೇಶ್ವರ, ದೇವಸ್ಥಾನಗಳ ಮೂಲ ಪ್ರತಿಷ್ಟಾಪನಾಚಾರ್ಯರು, ಮೊರೊಜ ಕುಟುಂಬ- ಇವರು ಕುಕ್ಕೆ ಸುಬ್ರಹ್ಮಣ್ಯದೇವಸ್ಥಾನದ ಮೂಲ ಪ್ರತಿಷ್ಟಾಪನಾಚಾರ್ಯರು.
 • ಅಗ್ನಿಹೊತ್ರೀ: ಮೂರು ಆಹಿತ ಶ್ರೊತ ಅಗ್ನಿಯನ್ನು (ಆವಾಹನೀಯ,ದಾಕ್ಷಾಯಣನೀಯ ಹಾಗು ಗಾರ್ಹಪತ್ಯ) ಪೂಜಿಸುವವರು.
 • ಶಾಸ್ತ್ರಿ : ಆರು ವೇದಾಂಗವನ್ನು (ಶಿಕ್ಷಾ, ವ್ಯಾಕರಣ,ನಿರುಕ್ತ,ಜ್ಯೊತಿಷ,ಕಲ್ಪ,ಛಂದಸ್) ಕಲಿಸುವವರು
 • ಶರ್ಮ : ಆರು ಉಪಾಂಗವಾದ ದರ್ಶನ ಶಾಸ್ತ್ರವನ್ನು ಬೊಧನೆ (ನ್ಯಾಯ,ವೈಷೆಶಿಕ,ಸಾಂಖ್ಯ, ಯೊಗ,ಮೀಮಾಂಸ, ವೇದಾಂತ) ಮಾಡುವವರು.
 • ಉಪಾಧ್ಯಾಯ : ವ್ಯಾಕರಣ ಸಹಿತ ಸಂಸ್ಕ್ರತ ಕಾವ್ಯ ಸಾಹಿತ್ಯ ಕಲಿಸುವವರು.
 • ಅವಧಾನೀ.: ವೇದಾಂಗ ಜ್ಯೊತಿಷ ಕಲಿಸುವವರು.
 • ದ್ವಿವೇದಿ, ತ್ರಿವೇದಿ, ಚತುರ್ವೇದಿ, ಘನಪಾಟಿ : ಎಷ್ಟು ವೇದವನ್ನು ಯಾವ ಮಟ್ಟಿನ ನೈಪುಣ್ಯತೆಯವರಗೆ ಕಲಿತವರು ಎಂದು ತಿಳಿಸುವಂತದ್ದು. ಒಂದು ಉಪಾಧಿ ಹಾಗು ಬಿರುದಾವಳಿ.
 • ಜೋಯಿಷ : ಹೊರಾ ಶಾಸ್ತ್ರದ ಫಲಿತ ಭಾಗವನ್ನು ವಿವರಿಸುವವರು ಹಾಗು ದೇವಪ್ರಷ್ಣ ಭಾಗವನ್ನು ದೇವಸ್ಥಾನಗಳಲ್ಲಿ ನಡೆಸುವವರು.
 • ಹೆಬ್ಬಾರ್ : ಬಹಳ ದೊಡ್ಡ ಮನೆತನದವರು.
 • ರಾವ್/ರಾಯ : ರಾಜನಿಂದ ರಾಜತಂತ್ರಿಕ ವ್ಯವಹಾರಕ್ಕೆ ದೇವಸ್ಥಾನಮುಖೇನ ಅಧಿಕಾರವನ್ನು ನಡೆಸುವವನು.

ಮುಖ್ಯ ಕುಟುಂಬಗಳು[ಬದಲಾಯಿಸಿ]

 • ಚೇರ ನಟ್ಟೊಜ : ನಟ್ಟೊಜ ಅಂದ್ರೆ ಶಿಕ್ಷಕ.ಚೇರ ಪೆರುಮಾನ್ನ್ವ ರಾಜವಂಶದಿಂದ ನೇಮಿಸಲ್ಪಟ್ಟವರು.ಇವರು ವಿಶ್ವಾಮಿತ್ರ ಗೋತ್ರದವರು ಅಗಿದ್ದುಕೊಂಡು ತಂತ್ರ,ಆಗಮ,ಮಂತ್ರವಾದ, ಪೌರೋಹಿತ್ಯ,ಚತುರ್ವೇದಾಪಾರಾಯಣವನ್ನು ಪಾಟ ಮಾಡುವವರಾಗಿರುವರು.
 • ಮೊರೊಜಾ : ಮಾಯೂರವರ್ಮ ರಾಜನ ಕುಟುಂಬಕ್ಕೆ ಹಾಗು ಕುಕ್ಕೆಲಿಂಗ ಸ್ವರೂಪಿ ಸುಬ್ರಹ್ಮಣ್ಯೇಶ್ವರನಿಗೆ ಪೂಜೆ ಮತ್ತು ತಂತ್ರಾಗಮ ಮಾಡುವವರು
 • ಕ್ಯಾದಿಗೆ : ಆಯುರ್ವೇದ ಕ್ಶೇತ್ರದಲ್ಲಿ ಇವರು ಸಿದ್ಧ ಹಸ್ತರು
 • ಪರಾರೀ : ಇವರು ನಂದಾವರ ಹಾಗು ಕಾರಿಂಜೆಶ್ವರ ದೇವಸ್ಥಾನದ ಮೂಲ ಪ್ರತಿಷ್ಟಾಪನಾಚಾರ್ಯರ ಕುಟುಂಬ
 • ಆಧಿಕಾರಬೈಲ್ : ಇವರು ಕ್ಯಾದಿಗೆ ಕುಟುಂಬದ್ದೇ ಒಂದು ಕವಲು
 • ಕೌಳಿಗೇ : ರಾಜತಾಂತ್ರಿಕ ಕುಟುಂಬ
 • ಬೊಕ್ಕಸ : ರಾಜನ ಬೊಕ್ಕಸ ನಿರ್ವಹಣೆ ಮಾಡುವವರು
 • ಬಯಂಬು : ಇವರು ಅಜ್ಜಾವರ ಮಹೀಷಮರ್ದಿನಿ ದೇವಸ್ಥಾನದ ಮುಖ್ಯ ಪವಿತ್ರಪಾಣಿ.

ಸ್ಥಾನಿಕ ತುಳು ಬ್ರಾಹ್ಮಣರ ಹಲವಾರು ಬಹು ಪುರಾತನ ಕಾಲದಿಂದ ಕಂಡು ಬರುವ ಕುಟುಂಬಗಳಲ್ಲಿ ಇವು ಕೆಲವು ಮಾತ್ರ.

ಆಹಾರ ಪದ್ದತಿ[ಬದಲಾಯಿಸಿ]

ಸ್ಥಾನಿಕ ತುಳು ಬ್ರಾಹ್ಮಣರು ಶುದ್ಧ ಸಸ್ಯಾಹಾರಿಗಳಾಗಿರುತ್ತಾರೆ

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]