ವಿಷಯಕ್ಕೆ ಹೋಗು

ಆಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತುಳು ಭಾಷೆ ಮಾತನಾಡುವವರು ವರ್ಷದ ೧೨ ತಿಂಗಳನ್ನು ಪಗ್ಗು, ಬೇಸ, ಕಾರ್ತೆಲ್, ಆಟಿ, ಸೋಣ, ನಿರ್ನಾಲ, ಬೊಂತೆಲ್, ಜಾರ್ತೆ, ಪೆರಾರ್ತೆ, ಪೊನ್ನಿ, ಮಾಯಿ, ಸುಗ್ಗಿ. ಹೀಗೆ ಕರೆಯುತ್ತಾರೆ. ತುಳುವರ ಈ ಹನ್ನೆರಡು ತಿಂಗಳುಗಳಲ್ಲಿ ಆಟಿ ತಿಂಗಳು ನಾಲ್ಕನೆಯ ತಿಂಗಳು.[೧][೨]

ತಿಂಗಳಗಳ ಪಟ್ಟಿ

[ಬದಲಾಯಿಸಿ]
ಸಂಖ್ಯೆ ತಿಂಗಳು ಕನ್ನಡ ತಿಂಗಳು ಆಚರಣೆಗಳು
೦೧ ಪಗ್ಗು ಮಾರ್ಚ್-ಏಪ್ರಿಲ್ ಬಿಸು ಪರ್ಬ, ಕೈಬಿತ್ತ್ ದೀಡುನೆ, ನೇಜಿ ಪಾಡುನೆ(ಕೈ ಬೀಜ ಇಡುವುದು, ನೇಜಿ ಹಾಕುವುದು)
೦೨ ಬೇಸ ಏಪ್ರಿಲ್-ಮೇ ಪತ್ತನಾಜೆ
೦೩ ಕಾರ್ತೆಲ್/ಕಾರ್ತ್ಯೊಲ್ ಮೇ-ಜೂನ್ ಗುರುಕಾರ್ನೆರೆಗ್ ಬಲಸುನೆ(ಗುರು ಹಿರಿಯರಿಗೆ ಬಡಿಸುವುದು)
೦೪ ಆಟಿ ಜೂನ್-ಜುಲೈ ಆಟಿಕಲೆಂಜೆ ನಲಿಕೆ, ಆಟಿ ಕುಲ್ಲುನೆ (ಆಟಿ ಕುಳಿತುಕೊಳ್ಳುವುದು)
೦೫ ಸೋಣ ಜುಲೈ-ಆಗಸ್ಟ್ ಸೋನಂತ ಜೋಗಿ ನಲಿಕೆ
೦೬ ನಿರ್ನಾಲ ಆಗಸ್ಟ್-ಸೆಪ್ಟೆಂಬರ್
೦೭ ಬೊಂತ್ಯೊಲು ಸೆಪ್ಟೆಂಬರ್-ಅಕ್ಟೋಬರ್
೦೮ ಜಾರ್ದೆ ಅಕ್ಟೋಬರ್-ನವೆಂಬರ್
೦೯ ಪೆರಾರ್ದೆ ನವಂಬರ-ಡಿಸೆಂಬರ್
೧೦ ಪೊನ್ನಿ ದಶಂಬರ-ಜನವರಿ ಮಕರ ಸಂಕ್ರಾಂತಿ
೧೧ ಮಾಯಿ ಜನವರಿ-ಫೆಬ್ರವರಿ ಕರಂಗೋಲು ನಲಿಕೆ,ಶಿವರಾತ್ರಿ
೧೨ ಸುಗ್ಗಿ ಫೆಬ್ರವರಿ-ಮಾರ್ಚ್ ಸುಗ್ಗಿ ನಲಿಕೆ ಕಂಗೀಲು,ಕೆಡ್ಡೆಸ

ನಂಬಿಕೆ

[ಬದಲಾಯಿಸಿ]

ತುಳುವರು ಆಟಿತಿಂಗಳನ್ನು ಒಂದು ಕಠಿಣ ತಿಂಗಳೆಂದು ನಂಬುತ್ತಿದ್ದರು. ಹಾಗಾಗಿ ಆಟಿ ತಿಂಗಳಲ್ಲಿ ಯಾವುದೇ ಶುಭಕಾರ್ಯಗಳು ನಡೆಯುತ್ತಿರಲಿಲ್ಲ. ಮದುವೆಯನ್ನು ಆಟಿತಿಂಗಳಲ್ಲಿ ನಡೆಸುತ್ತಿರಲಿಲ್ಲ.

ಆಟಿ ತಿಂಗಳ ಆಚರಣೆಗಳು

[ಬದಲಾಯಿಸಿ]
  1. ಅಟಿಕಳೆಂಜ
  2. ಆಟಿ ಕುಲ್ಲುನಿ(ಆಟಿ ಕುಳಿತುಕೊಳ್ಳುವುದು) : ಆಟಿ ಕುಳಿತುಕೊಳ್ಳುವುದು. ಮದುವೆಯಾದ ನಂತರ ಬರುವ ಆಟಿ ತಿಂಗಳಲ್ಲಿ ಮದುಮಗಳು ಗಂಡನ ಮನೆಯಿಂದ ತವರು ಮನೆಯಲ್ಲಿ ಸ್ವಲ್ಪದಿನ ಕುಳಿತುಕೊಂಡು ಬರುವುದು ರೂಢಿಯಲ್ಲಿದೆ.
  3. ಆಟಿದ ಅಗೆಲ್ ಬಳಸುನಿ(ಆಟಿಯಲ್ಲಿ ಭೂತಗಳಿಗೆ ಅಗೆಲು ಬಡಿಸುವುದು)

ಆಟಿ ಕಳಂಜ ಕುಣಿತ

[ಬದಲಾಯಿಸಿ]
ಆಟಿ ಕಳೆಂಜ

ಆಟಿ ಕಳೆಂಜ ಆಟಿ ತಿಂಗಳಿನಲ್ಲಿ ಮನೆಮನೆಗೆ ಬರುತ್ತಿದ್ದರು. ಇದನ್ನು ನಲಿಕೆ ಜನರ ಪಂಗಡ ನಡೆಸಿಕೊಂಡು ಬಂದಿದ್ದಾರೆ. ಆಟಿ ಕಳಂಜನ ವೇಷದಲ್ಲಿ ಸೊಂಟಕ್ಕೆ ತೆಂಗಿನ ತಿರಿ, ಕಾಲಿಗೆ ಗಗ್ಗರ, ಕೈಗೆ-ಮೈಗೆ ಬಣ್ಣ, ಗಡ್ಡ ಮತ್ತು ಮೀಸೆ, ಅಡಿಕೆ ಹಾಳೆಯಿಂದ ಮಾಡಿದ ಮತ್ತು ಕಿಸಗಾರ ಹೂವಿನಿಂದ ಸಿಂಗರಿಸಿದ ಟೊಪ್ಪಿ ಇರುತ್ತದೆ. ಕೈಯಲ್ಲಿ ತಾಳೆಗರಿಯ ಛತ್ರಿ ಇರುತ್ತದೆ. ಜೊತೆಗೆ ಹಿಮ್ಮೇಳದಲ್ಲಿ ಇರುವವರು "ತೆಂಬರೆ"ಯೊಂದಿಗೆ ಪಾಡ್ದನ ಹೇಳಿಕೊಂಡು ಮನೆಮನೆಗೆ ಬರುತ್ತಾರೆ. ಇವರಿಗೆ ಧವಸ ಧಾನ್ಯ, ತೆಂಗಿನಕಾಯಿ ನೀಡುತ್ತಾರೆ. ತುಳು ಪಾಡ್ದನಗಳ ಪ್ರಕಾರ ಆಟಿ ಕಳೆಂಜ ಬಂದು ರೋಗ ರುಜುನೆಗಳನ್ನು ಕಡಿಮೆಮಾಡುತ್ತಾನೆ ಎಂದು. ಈಗ ಈ ಆಚರೆಯನ್ನು ನಗರ ಪ್ರದೇಶದಲ್ಲಿ ಕಾಣಲು ಸಾಧ್ಯವಿಲ್ಲ. ಆದರೆ ಹಳ್ಳಿಗಳಲ್ಲಿ ಈ ಆಚರಣೆ ಇವೆ.[೩]

ಆಟಿ ಕುಲ್ಲುನೆ

[ಬದಲಾಯಿಸಿ]

ಆಟಿ ತಿಂಗಳಿನಲ್ಲಿ ಮದುವೆಯಾದ ದಂಪತಿ ತಮ್ಮ ಹಿರಿಯರಲ್ಲಿಗೆ ಹೋಗಿ ಅವರ ಆಶೀರ್ವಾದ ತೆಗೆದುಕೊಂಡು ಬರುವ ಈ ಆಚರಣೆಗೆ ಆಟಿ ಕುಲ್ಲುನೆ ಎನ್ನುತ್ತಾರೆ. ಇದನ್ನು ಈಗ ಹೆಚ್ಚಿನವರು ಮಾಡುತ್ತಿಲ್ಲ. ಈ ಆಚರಣೆ ತುಂಬಾ ವಿರಳವಾಗಿದೆ ಎಂದು ಮನೆಯ ತೋಟದ ಕೆಲಸಕ್ಕೆ ಬಂದ ರಾಮಣ್ಣನ ಬಳಿ ತಿಳಿದುಕೊಂಡೆ. ಆಟಿದ ಅಗೆಲ್ ಕುಲ್ಲುನೆ: ಆಟಿ ತಿಂಗಳಿನಲ್ಲಿ ತುಳು ಜನಾಂಗದಲ್ಲಿ ಸತ್ತವರಿಗೆ ಬಡಿಸುವ ಕಾರ್ಯಕ್ರಮವನ್ನೇ ಅಗೆಲ್ ಕುಲ್ಲುನೆ ಎನ್ನುತ್ತಾರಂತೆ. ಇದಕ್ಕೆ ಕೋಳಿ ಪದಾರ್ಥ, ಚೇಟ್ಲ ಪದಾರ್ಥ ಮಾಡುತ್ತಾರೆ. ಇದು ರಾತ್ರಿ ಕುಟುಂಬದ ಸದಸ್ಯರು ನಡೆಸುವ ಆಚರಣೆ.[೪]

ಆಟಿ ಅಮಾವಾಸ್ಯೆ

[ಬದಲಾಯಿಸಿ]

ಆಟಿ ತಿಂಗಳಿನಲ್ಲಿ ಬರುವ ಅಮಾವಾಸ್ಯೆಯಂದು ಹಾಲೆ (ಸಪ್ತಪರ್ಣಿ) ಮರದ ತೊಗಟೆಯನ್ನು ಕಡೆದು ಹಾಲು ಕುಡಿಯುತ್ತಾರೆ. ಅಥವಾ ಸಪ್ತಪರ್ಣಿ ಮರದ ತೊಗಟೆಯ ಕಷಾಯ ಮಾಡಿ ಕುಡಿಯುತ್ತಾರೆ. ಇದರಲ್ಲಿ ಒಂದು ವಿಶೇಷತೆ ಎಂದರೆ ತೊಗಟೆಯನ್ನು ಸೂರ್ಯನ ಬೆಳಕು ಹರಿಯುವ ಮೊದಲೇ ಕಲ್ಲಿನಿಂದ ಜಜ್ಜಿ ತೆಗೆಯುತ್ತಾರೆ. ಯಾರು ಕತ್ತಿಯನ್ನು ಬಳಸಿ ತೊಗಟೆಯನ್ನು ತುಂಡರಿಸುವುದಿಲ್ಲ. ಇದಕ್ಕೆ ಕಾರಣ ಕತ್ತಿ ತಾಗಿದರೆ ವಿಷ ಎಂದು ಹೇಳುತ್ತಾರೆ.[೫]

ಆಟಿ ತಿಂಗಳ ಗಾದೆಗಳು

[ಬದಲಾಯಿಸಿ]
  1. ಅಟಿಡ್ ತೆಡಿಲ್‍ ಬತ್ತ್ಂಡ ಆಟ್ಟ ಪೊಲಿಪೋವು, ಸೋಣೊಡು ತೆಡಿಲ್‍ ಬತ್ತ್ಂಡ ಸೊಂಟ ಪೊಲಿಪೋವು - ಆಟಿ(ಆಷಾಡ)ಯಲ್ಲಿ ಸಿಡಿಲು ಬಂದರೆ ಅಟ್ಟ ಮುರಿದು ಹೋಗಬಹುದು. ಸೋಣ(ಶ್ರಾವಣ)ದಲ್ಲಿ ಸಿಡಿಲು ಬಂದರೆ ಸೊಂಟ ಮುರಿಯುತ್ತದೆ.
  2. ಆಟಿಡ್‍ ಕಣೆ ಬತ್ತ್ಂಡ ಆಟ್ಟ ಪೊಲಿಪೋವು, ಸೋಣೊಡು ಕಣೆ ಬತ್ತ್ಂಡ ಸೊಂಟ ಪೊಲಿಪೋವು - ಆಟಿ(ಆಷಾಡ)ಯಲ್ಲಿ ಕಳೆ ಬಂದರೆ ಅಟ್ಟ ಮುರಿದು ಹೋಗಬಹುದು. ಸೋಣ(ಶ್ರಾವಣ)ದಲ್ಲಿ ಕಳೆ ಬಂದರೆ ಸೊಂಟ ಮುರಿದು ಹೋಗಬಹುದು.
  3. ಆಟಿದ ಪೆಲಕಾಯಿ ನಂಜಿ ಮಗಾ- ಆಮ್ಮೆ ಬರ್ಪೆನಾ ತೂಲ ಮಗಾ - ಆಟಿ(ಆಷಾಡ)ದ ಹಲಸಿನಕಾಯಿ ನಂಜು ಮಗಾ, ಅಪ್ಪ ಬರುತ್ತಾನಂತ ನೋಡು ಮಗ
  4. ಅಟಿಡ್‍ ಪೊಣ್ಣು ಪುಟ್ಟುನು ಹೆಚ್ಚಗೆ -ಆಟಿ(ಆಷಾಡ) ತಿಂಗಳಲ್ಲಿ ಹೆಣ್ಣು ಹುಟ್ಟುವುದು ಹೆಚ್ಚು.
  5. ಆಟಿದ ದೊಂಬು ಆನೆದ ಬೆರಿ ಪುಡಾವು - ಆಟಿ(ಆಷಾಡ)ದ ಬಿಸಿಲು ಆನೆಯ ಬೆನ್ನು ಒಡೆದೀತು.

ಉಲ್ಲೇಖ

[ಬದಲಾಯಿಸಿ]
  1. http://www.suddi9.com/?p=36729
  2. http://ravirajkateel.blogspot.in/2014/07/blog-post.html
  3. "ಮಾರಿ ತಡೆವ ಬೇಲಿ: ಮನೆಮನೆಯ ಮಾರಿ ಕಳೆವ 'ಆಟಿ ತಿಂಗಳ ಆಟಿ ಕಳಂಜ'". Retrieved 15 July 2024.
  4. "ಆಟಿ ತಿಂಗಳ ಆಚರಣೆಗಳು". Retrieved 15 July 2024.
  5. "ಆಟಿ ಅಮಾವಾಸ್ಯೆಗೆ ಕಷಾಯ ಕುಡಿದ್ರಾ? ಈ ದಿನ ಮತ್ತು ತಿಂಗಳ ವಿಶೇಷ ತಿಳಿಯಿರಿ". Kannada Hindustan Times. Retrieved 15 July 2024.
"https://kn.wikipedia.org/w/index.php?title=ಆಟಿ&oldid=1235135" ಇಂದ ಪಡೆಯಲ್ಪಟ್ಟಿದೆ