ಆಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತುಳು ಭಾಷೆ ಮಾತನಾಡುವವರು ವರ್ಷದ ೧೨ ತಿಂಗಳನ್ನು ಪಗ್ಗು, ಬೇಸ, ಕಾರ್ತೆಲ್, ಆಟಿ, ಸೋಣ, ನಿರ್ನಾಲ, ಬೊಂತೆಲ್, ಜಾರ್ತೆ, ಪೆರಾರ್ತೆ, ಪೊನ್ನಿ, ಮಾಯಿ, ಸುಗ್ಗಿ. ಹೀಗೆ ಕರೆಯುತ್ತಾರೆ. ತುಳುವರ ಈ ಹನ್ನೆರಡು ತಿಂಗಳುಗಳಲ್ಲಿ ಆಟಿ ತಿಂಗಳು ನಾಲ್ಕನೆಯ ತಿಂಗಳು.[೧][೨]

ತಿಂಗಳಗಳ ಪಟ್ಟಿ[ಬದಲಾಯಿಸಿ]

ಸಂಖ್ಯೆ ತಿಂಗಳು ಕನ್ನಡ ತಿಂಗಳು ಆಚರಣೆಗಳು
೦೧ ಪಗ್ಗು ಮಾರ್ಚ್-ಏಪ್ರಿಲ್ ಬಿಸು ಪರ್ಬ, ಕೈಬಿತ್ತ್ ದೀಡುನೆ, ನೇಜಿ ಪಾಡುನೆ(ಕೈ ಬೀಜ ಇಡುವುದು, ನೇಜಿ ಹಾಕುವುದು)
೦೨ ಬೇಸ ಏಪ್ರಿಲ್-ಮೇ ಪತ್ತನಾಜೆ
೦೩ ಕಾರ್ತೆಲ್/ಕಾರ್ತ್ಯೊಲ್ ಮೇ-ಜೂನ್ ಗುರುಕಾರ್ನೆರೆಗ್ ಬಲಸುನೆ(ಗುರು ಹಿರಿಯರಿಗೆ ಬಡಿಸುವುದು)
೦೪ ಆಟಿ ಜೂನ್-ಜುಲೈ ಆಟಿಕಲೆಂಜೆ ನಲಿಕೆ, ಆಟಿ ಕುಲ್ಲುನೆ (ಆಟಿ ಕುಳಿತುಕೊಳ್ಳುವುದು)
೦೫ ಸೋಣ ಜುಲೈ-ಆಗಸ್ಟ್ ಸೋನಂತ ಜೋಗಿ ನಲಿಕೆ
೦೬ ನಿರ್ನಾಲ ಆಗಸ್ಟ್-ಸೆಪ್ಟೆಂಬರ್
೦೭ ಬೊಂತ್ಯೊಲು ಸೆಪ್ಟೆಂಬರ್-ಅಕ್ಟೋಬರ್
೦೮ ಜಾರ್ದೆ ಅಕ್ಟೋಬರ್-ನವೆಂಬರ್
೦೯ ಪೆರಾರ್ದೆ ನವಂಬರ-ಡಿಸೆಂಬರ್
೧೦ ಪೊನ್ನಿ ದಶಂಬರ-ಜನವರಿ ಮಕರ ಸಂಕ್ರಾಂತಿ
೧೧ ಮಾಯಿ ಜನವರಿ-ಫೆಬ್ರವರಿ ಕರಂಗೋಲು ನಲಿಕೆ,ಶಿವರಾತ್ರಿ
೧೨ ಸುಗ್ಗಿ ಫೆಬ್ರವರಿ-ಮಾರ್ಚ್ ಸುಗ್ಗಿ ನಲಿಕೆ ಕಂಗೀಲು,ಕೆಡ್ಡೆಸ

ನಂಬಿಕೆ[ಬದಲಾಯಿಸಿ]

ತುಳುವರು ಆಟಿತಿಂಗಳನ್ನು ಒಂದು ಕಠಿಣ ತಿಂಗಳೆಂದು ನಂಬುತ್ತಿದ್ದರು. ಹಾಗಾಗಿ ಆಟಿ ತಿಂಗಳಲ್ಲಿ ಯಾವುದೇ ಶುಭಕಾರ್ಯಗಳು ನಡೆಯುತ್ತಿರಲಿಲ್ಲ. ಮದುವೆಯನ್ನು ಆಟಿತಿಂಗಳಲ್ಲಿ ನಡೆಸುತ್ತಿರಲಿಲ್ಲ.

ಆಟಿ ತಿಂಗಳ ಆಚರಣೆಗಳು[ಬದಲಾಯಿಸಿ]

  1. ಅಟಿಕಳೆಂಜ
  2. ಆಟಿ ಕುಲ್ಲುನಿ(ಆಟಿ ಕುಳಿತುಕೊಳ್ಳುವುದು) : ಆಟಿ ಕುಳಿತುಕೊಳ್ಳುವುದು. ಮದುವೆಯಾದ ನಂತರ ಬರುವ ಆಟಿ ತಿಂಗಳಲ್ಲಿ ಮದುಮಗಳು ಗಂಡನ ಮನೆಯಿಂದ ತವರು ಮನೆಯಲ್ಲಿ ಸ್ವಲ್ಪದಿನ ಕುಳಿತುಕೊಂಡು ಬರುವುದು ರೂಢಿಯಲ್ಲಿದೆ.
  3. ಆಟಿದ ಅಗೆಲ್ ಬಳಸುನಿ(ಆಟಿಯಲ್ಲಿ ಭೂತಗಳಿಗೆ ಅಗೆಲು ಬಡಿಸುವುದು)

ಆಟಿ ತಿಂಗಳ ಗಾದೆಗಳು[ಬದಲಾಯಿಸಿ]

  1. ಅಟಿಡ್ ತೆಡಿಲ್‍ ಬತ್ತ್ಂಡ ಆಟ್ಟ ಪೊಲಿಪೋವು, ಸೋಣೊಡು ತೆಡಿಲ್‍ ಬತ್ತ್ಂಡ ಸೊಂಟ ಪೊಲಿಪೋವು - ಆಟಿ(ಆಷಾಡ)ಯಲ್ಲಿ ಸಿಡಿಲು ಬಂದರೆ ಅಟ್ಟ ಮುರಿದು ಹೋಗಬಹುದು. ಸೋಣ(ಶ್ರಾವಣ)ದಲ್ಲಿ ಸಿಡಿಲು ಬಂದರೆ ಸೊಂಟ ಮುರಿಯುತ್ತದೆ.
  2. ಆಟಿಡ್‍ ಕಣೆ ಬತ್ತ್ಂಡ ಆಟ್ಟ ಪೊಲಿಪೋವು, ಸೋಣೊಡು ಕಣೆ ಬತ್ತ್ಂಡ ಸೊಂಟ ಪೊಲಿಪೋವು - ಆಟಿ(ಆಷಾಡ)ಯಲ್ಲಿ ಕಳೆ ಬಂದರೆ ಅಟ್ಟ ಮುರಿದು ಹೋಗಬಹುದು. ಸೋಣ(ಶ್ರಾವಣ)ದಲ್ಲಿ ಕಳೆ ಬಂದರೆ ಸೊಂಟ ಮುರಿದು ಹೋಗಬಹುದು.
  3. ಆಟಿದ ಪೆಲಕಾಯಿ ನಂಜಿ ಮಗಾ- ಆಮ್ಮೆ ಬರ್ಪೆನಾ ತೂಲ ಮಗಾ - ಆಟಿ(ಆಷಾಡ)ದ ಹಲಸಿನಕಾಯಿ ನಂಜು ಮಗಾ, ಅಪ್ಪ ಬರುತ್ತಾನಂತ ನೋಡು ಮಗ
  4. ಅಟಿಡ್‍ ಪೊಣ್ಣು ಪುಟ್ಟುನು ಹೆಚ್ಚಗೆ -ಆಟಿ(ಆಷಾಡ) ತಿಂಗಳಲ್ಲಿ ಹೆಣ್ಣು ಹುಟ್ಟುವುದು ಹೆಚ್ಚು.
  5. ಆಟಿದ ದೊಂಬು ಆನೆದ ಬೆರಿ ಪುಡಾವು - ಆಟಿ(ಆಷಾಡ)ದ ಬಿಸಿಲು ಆನೆಯ ಬೆನ್ನು ಒಡೆದೀತು.

ಉಲ್ಲೇಖ[ಬದಲಾಯಿಸಿ]

  1. http://www.suddi9.com/?p=36729
  2. http://ravirajkateel.blogspot.in/2014/07/blog-post.html
"https://kn.wikipedia.org/w/index.php?title=ಆಟಿ&oldid=1201595" ಇಂದ ಪಡೆಯಲ್ಪಟ್ಟಿದೆ