ವಿಷಯಕ್ಕೆ ಹೋಗು

ಶೃಂಗೇರಿ ಶಾರದಾಪೀಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Acharya: ಶ್ರೀ ಭಾರತಿ ತೀರ್ಥ
Location ಶೃಂಗೇರಿ
Founder ಆದಿ ಶಂಕರಾಚಾರ್ಯ
First Acharya ಮಂಡನ ಮಿಶ್ರ
Formation ೮೨೦ ಕ್ರಿ.ಪೂ
Website http://www.sringeri.net/
ಶಾರದಶೃಂಗೇರಿ ಕ್ಷೇತ್ರದ ದೇವಾಲಯಶೃಂಗೇರಿi

ಶೃಂಗೇರಿ ಶಾರದಾಪೀಠವು ೮ ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಮೊದಲನೆಯದು. ಇದನ್ನು ದಕ್ಷಿಣಾಮ್ನಾಯ ಪೀಠವೆನ್ನುತಾರೆ. ಶೃಂಗೇರಿಯ ಮಠವು ಯಜುರ್ವೇದದ ಉಸ್ತುವಾರಿ ಹೊಂದಿದೆ. ನವರಾತ್ರಿಯ ಸಂದರ್ಭದಲ್ಲಿ ಶಾರದಾ ದೇವಿಗೆ ಚಂಡಿಕಾ ಹವನ, ರಥೋತ್ಸವ, ಕುಂಕುಮಾರ್ಚನೆ, ಚಿನ್ನರಥ ಸೇವೆ ಮುಂತಾದ ಸೇವೆಗಳು ನಡೆಯುತ್ತವೆ.

ಐತಿಹ್ಯ

[ಬದಲಾಯಿಸಿ]

ಶೃಂಗೇರಿಯಲ್ಲಿ ಆದಿ ಶಂಕರಾಚಾರ್ಯರು ತಾಯಿ ಶಾರದೆಯನ್ನು ಪ್ರತಿಷ್ಠಾಪಿಸಿ ಮಠವನ್ನು ಸ್ಥಾಪಿಸಲು ಕಾರಣ ಈ ಕಥೆಯಲ್ಲಿದೆ. ಒಮ್ಮೆ ತುಂಗೆಯ ತಟಕ್ಕೆ ಶಂಕರಾಚಾರ್ಯರು ಬಂದಾಗ ಜೋರಾಗಿ ಬಿಸಿಲು ಇತ್ತು. ಆ ಸಂದರ್ಭದಲ್ಲಿ ಹಾವೊಂದು ಹೆಡೆ ಬಿಚ್ಚಿ ಕಪ್ಪೆಯೊಂದಕ್ಕೆ ರಕ್ಷಣೆ ನೀಡುತ್ತಿತ್ತಂತೆ. ಶತ್ರುಗಳು ಮಿತ್ರರಾಗಿ ಸಹಕಾರಕ್ಕೆ ನಿಂತ ಈ ಸ್ಥಳದಲ್ಲಿ ಅಭೂತಪೂರ್ವವಾದ ಶಕ್ತಿ ಇದೆ ಎಂಬುದನ್ನು ಮನಗಂಡ ಆಚಾರ್ಯರು ಈ ಪ್ರದೇಶವನ್ನು ಪವಿತ್ರ ಪುಣ್ಯ ಕ್ಷೇತ್ರ ಮಾಡಿದರೆಂದು ಹೇಳಲಾಗುತ್ತದೆ.

;ಶೃಂಗೇರಿ ಶಾರದಾ ಪೀಠಕ್ಕೆ ಉತ್ತರಾಧಿಕಾರಿಗಳು-
ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಪೀಠಾರೋಹಣದ ರಜತ ಮಹೋತ್ಸವದ ಅಂಗವಾಗಿ ರವಿವಾರ (4-1-2015) ನಡೆದ ಗುರುವಂದನಾ ಸಭೆಯಲ್ಲಿ ಶ್ರೀಮಠದ ಉತ್ತರಾಧಿಕಾರಿಗಳನ್ನು ಘೋಷಿಸಲಾಯಿತು. ಸಭೆಯಲ್ಲಿ ಅನುಗ್ರಹ ಭಾಷಣ ಮಾಡಿದ ಭಾರತೀ ತೀರ್ಥರು, 37 ನೇ ಪೀಠಾಧಿಪತಿಯನ್ನಾಗಿ ಕುಪ್ಪೂರು ವೆಂಕಟೇಶ್ವರಪ್ರಸಾದ ಶರ್ಮರನ್ನು ತಾವು ಆಯ್ಕೆ ಮಾಡಿದ್ದು ಅವರಿಗೆ, 2015ರ ಜನವರಿ. 22 ಮತ್ತು 23ರಂದು ಸನ್ಯಾಸತ್ವ ನೀಡುವುದಾಗಿ (ಶಿಷ್ಯ ಪರಿಗ್ರಹ) ಹೇಳಿದರು. “ಎಲ್ಲ ಸದ್ಗುಣಗಳನ್ನು ಹೊಂದಿರುವ ಶಿಷ್ಯನನ್ನು ಆಯ್ಕೆ ಮಾಡಿದ್ದು, 5-6 ವರ್ಷಗಳಿಂದ ಶಾಸ್ತ್ರಾಭ್ಯಾಸ ನೀಡುತ್ತಿದ್ದೇವೆ. ತಮಗೆ 64(2015,ಜನವರಿ) ವರ್ಷವಾಗಿದ್ದು ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಜಗದಂಬೆ ಶ್ರೀ ಶಾರದೆ ನಮಗೆ ನೆನಪಿಸಿದ್ದಾರೆ,” ಎಂದು ತಿಳಿಸಿದರು [ಉಲ್ಲೇಖ-2]
.

ಪೀಠಾಧಿಪತಿಗಳು

[ಬದಲಾಯಿಸಿ]

ಆದಿ ಶಂಕರಾಚಾರ್ಯರಿಂದ ಮೊದಲಾಗಿ ಇಂದಿನವರೆವಿಗೆ ಒಟ್ಟು ೩೬ ಯತಿವರೇಣ್ಯರು ಶ್ರೀ ಮಠದಪೀಠಾಧಿಪತಿಗಳಾಗಿದ್ದಾರೆ.(ಪ್ರಸ್ತುತ ಶ್ರೀ ಭಾರತೀ ತೀರ್ಥರು 36ನೇ ಪೀಠಾಧಿಪತಿಗಳು) ಪೀಠಾರೋಹಣದ ರಜತ ಸಂಭ್ರಮವನ್ನಾಚರಿಸುತ್ತಿರುವ ಶೃಂಗೇರಿ ಜಗದ್ಗುರುಗಳು ತಾವು ಶಿಷ್ಯ ಸ್ವೀಕಾರ ಮಾಡುವುದಾಗಿ ಹೇಳಿ ೩೭ನೇ ಪೀಠಾಧಿಪತಿಯನ್ನಾಗಿ ಕುಪ್ಪೂರು ವೆಂಕಟೇಶ್ವರಪ್ರಸಾದ ಶರ್ಮರನ್ನು ಉತ್ತರಾಧಿಕಾರಿಯಾಗಿ ದಿ.4-1-2015 ರಂದು ಘೋಷಿಸಿದರು. [೧][೨]

ಶಿಷ್ಯ ಸ್ವೀಕಾರದ ಆರಂಭದ ಕ್ರಿಯೆಗಳು

[ಬದಲಾಯಿಸಿ]
ದಿ,22-1-2015 ಗುರುವಾರ ಶೃಂಗೇರಿಯಲ್ಲಿನ ದಕ್ಷಿಣಾಮ್ನಾಯ ಶಾರದಾ ಪೀಠಾಧಿಪತಿ ಶಂಕರಾಚಾರ್ಯ ಭಾರತೀತೀರ್ಥ ಶ್ರೀಗಳ ಶಿಷ್ಯ ಸ್ವೀಕಾರ ಸಮಾರಂಭವು ಗುರು­ವಾರ ವಿಧ್ಯುಕ್ತವಾಗಿ ಆರಂಭಗೊಂಡಿತು.
ಪೀಠದ ಉತ್ತರಾಧಿಕಾರಿ­ಯಾಗಿ ನೇಮಕಗೊಳ್ಳಲಿರುವ ಬ್ರಹ್ಮ­ಚಾರಿ ಕುಪ್ಪ ವೆಂಕಟೇಶ್ವರ ಪ್ರಸಾದ ಶರ್ಮ ಅವರು ಬೆಳಿಗ್ಗೆ 8 ಗಂಟೆಗೆ ನರಸಿಂಹವನದಲ್ಲಿ ಭಾರತೀತೀರ್ಥರಿಗೆ ಗುರುವಂದನೆ ಸಲ್ಲಿಸಿದರು. ನಂತರ ಶಾರ­ದಾಂಬಾ ದೇವಾಲಯ ಪ್ರವೇಶಿಸಿದರು. ಶಕ್ತಿ ಗಣಪತಿ ಗುಡಿಯಲ್ಲಿ ನಡೆದ ಮಹಾ­ಗಣಪತಿ ಹೋಮದ ಪೂರ್ಣಾ­ಹು­ತಿಯಲ್ಲಿ ಪಾಲ್ಗೊಂಡು, ಶಾರದಾಂಬೆಯ ದರ್ಶನ ಪಡೆದರು.
ಬಳಿಕ ಪೀಠದ ಮುಖ್ಯಕಾರ್ಯ­ನಿರ್ವ­ಹಣಾಧಿಕಾರಿ ಮತ್ತು ಆಡಳಿ­ತಾಧಿಕಾರಿ ವಿ.ಆರ್‌.ಗೌರಿಶಂಕರ್‌ ಮತ್ತಿತರ ಹಿರಿಯ ಭಕ್ತಾದಿಗಳ ಜತೆ ದೇವಸ್ಥಾನ, ಹಿಂದಿನ ಅನೇಕ ಸ್ವಾಮೀಜಿಗಳ ವೃಂದಾವನ ಸಂದರ್ಶಿಸಿದರು. ಬಳಿಕ ಕೃಚ್ಛ್ರಾಚರಣೆ ವಿಧಿಯನ್ನು ನೆರವೇರಿಸಿದರು. ವಸ್ತ್ರ, ಹಿರಣ್ಯ, ಧಾನ್ಯ ಮೊದಲಾದುವುಗಳನ್ನು ದಾನ ಮಾಡಿ­ದರು.
ದೇವ ಋಣ, ಋಷಿ ಋಣ ಹಾಗೂ ಪಿತೃ ಋಣಗಳಿಂದ ಮುಕ್ತಿ ಪಡೆಯುವ ಸಲುವಾಗಿ ಅಷ್ಟಶ್ರಾದ್ಧ ವಿಧಿಯನ್ನು ನೆರವೇರಿಸಿದರು. ಈ ವಿಧಿಯ ಅಂಗವಾಗಿ 18 ವೈದಿಕರಿಗೆ ದಾನ ನೀಡಿ, ಅವರಿಂದ ಆಶೀರ್ವಾದ ಪಡೆದರು. ಗುರುವಾರ ರಾತ್ರಿ ಇಡೀ ಉಪವಾಸವಿದ್ದು ಜಪ ಹಾಗೂ ಪಾರಾಯಣಗಳೊಂದಿಗೆ ಜಾಗರಣೆ ನಡೆಸಿದರು.
ಶುಕ್ರವಾರ ಮುಂಜಾನೆ ಪುರುಷ­ಸೂಕ್ತ ಹೋಮ ಹಾಗೂ ವಿರಾಜ ಹೋಮಗಳನ್ನು ನೆರವೇರಿಸಲಿರುವ ಶರ್ಮ ಅವರು ತುಂಗೆಯ ತೀರದಲ್ಲಿ ಭಾರತೀ ತೀರ್ಥ ಮಹಾಸ್ವಾಮಿಗಳಿಂದ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ. ಈ ಸಮಾರಂಭವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ವಿಶ್ವದ ವಿವಿಧೆಡೆಗಳಿಂದ ಸಾವಿರಾರು ಭಕ್ತರು ಶೃಂಗೇರಿಗೆ ಬಂದಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ ರಾವ್‌, ಮದ್ರಾಸ್‌ ಹೈಕೋರ್ಟಿನ ನ್ಯಾಯಮೂರ್ತಿ ರಾಮ­ನಾಥನ್‌, ಮುಂತಾದ ಗಣ್ಯರು ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದರು.(ಪ್ರಜಾವಾಣಿ ವಾರ್ತೆ-Fri,23/01/2015)

ಶಿಷ್ಯ ಸ್ವೀಕಾರ

[ಬದಲಾಯಿಸಿ]
ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಉತ್ತರಾಧಿಕಾರಿ­ಯಾಗಿ ನಿಯುಕ್ತ­ರಾದ ಕುಪ್ಪಾ ವೆಂಕಟೇ­ಶ್ವರ ಪ್ರಸಾದ ಶರ್ಮಾ ಅವರಿಗೆ ಶುಕ್ರ­ವಾರ ಶಿಷ್ಯ ಸ್ವೀಕಾರದ ನಂತರ ಜಗ­ದ್ಗುರು ಭಾರತೀ ತೀರ್ಥರು ‘ವಿಧುಶೇಖರ ಭಾರತಿ’ ಎಂಬ ಯೋಗ ಪಟ್ಟ ನೀಡಿದರು.
ದೇಶ ವಿದೇಶಗಳಿಂದ ಶೃಂಗೇರಿಗೆ ಬಂದಿದ್ದ ಸಹಸ್ರಾರು ಭಕ್ತರ ಸಮಕ್ಷಮ­ದಲ್ಲಿ ಬೆಳಿಗ್ಗೆ 7 ಗಂಟೆಗೆ ನರಸಿಂಹವನದ ಅಧಿಷ್ಠಾನ ಮಂದಿರದಲ್ಲಿ ಪುರುಷಸೂಕ್ತ ಹೋಮ, ವೀರಾಜ ಹೋಮಗಳು ನಡೆ­ದವು. ನಂತರ ತುಂಗಾನದಿ­ಯಲ್ಲಿ­ರುವ ಸಂಧ್ಯಾ ಮಂಟಪದ ಬಳಿ ನದಿ ನೀರಿನಲ್ಲಿ ನಿಂತ ವೆಂಕಟೇಶ್ವರ ಪ್ರಸಾದ ಶರ್ಮಾ ಅವರು ಶಿಖಾ, ಯಜ್ಞೋಪವೀತ, ಶ್ವೇತವಸ್ತ್ರ ಪರಿತ್ಯಾಗ ಮಾಡಿದರು.
ಜಗದ್ಗುರು ಭಾರತೀ ತೀರ್ಥರು ಶಿಷ್ಯ­ನಿಗೆ ಕಾಷಾಯ ವಸ್ತ್ರ, ದಂಡ, ಕಮಂಡಲ­ಗಳನ್ನು ನೀಡಿ ಆಶೀರ್ವದಿ­ಸಿದರು. ಕಾಷಾಯ ವಸ್ತ್ರಧಾರಿಗಳಾದ ಶ್ರೀದ್ವಯರು ಚಂದ್ರಶೇಖರ ಭಾರತೀ, ಸಚ್ಚಿದಾ­ನಂದ ಶಿವಾನುಭವ ನೃಸಿಂಹ ಭಾರತೀ ಹಾಗೂ ಅಭಿನವ ವಿದ್ಯಾ­ತೀರ್ಥರ ಅಧಿಷ್ಠಾನಗಳಿಗೆ ತೆರಳಿದರು.
ಅಲ್ಲಿ ಜಗದ್ಗುರು ಭಾರತೀ ತೀರ್ಥರು ಶಿಷ್ಯನಿಗೆ ಪ್ರಣವೋಪದೇಶ, ಮಹಾ­ವ್ಯಾಕ್ಯೋಪದೇಶ ನೀಡಿದರು. ನಂತರ ತುಂಗಾ­ನದಿಯಲ್ಲಿ ಹಂಸ ಪಕ್ಷಿಯನ್ನು ಹೋಲು­ವಂತೆ ಸಿದ್ಧಪಡಿಸಿದ್ದ ನಾಡ­ದೋಣಿ­­ಯಲ್ಲಿ ವೆಂಕಟೇಶ್ವರ ಪ್ರಸಾದ ಶರ್ಮಾ ಅವರು ನದಿಯನ್ನು ದಾಟಿದ ನಂತರ ಪರ್ಯಂಕ ಶೌಚ ಕಾರ್ಯ ನಡೆಯಿತು.
ಶಾರದಾಂಬಾ ದೇವಾಲಯ­ದಲ್ಲಿ­ರುವ ವ್ಯಾಖ್ಯಾನ ಸಿಂಹಾಸನದಲ್ಲಿ ಜಗ­ದ್ಗುರು­ಗಳು ತಮ್ಮ ಶಿಷ್ಯನನ್ನು ಕುಳ್ಳಿರಿಸಿ ಅವರ ತಲೆಯ ಮೇಲೆ ಸಾಲಿಗ್ರಾಮ­ವಿಟ್ಟು ಪೂಜೆ ನೆರವೇರಿಸಿ­ದರು.ಶ್ರೀ ಶಂಕರಾ­ಚಾರ್ಯರು ನೀಡಿರುವ ದಶನಾಮ­ಗಳಲ್ಲಿ (ಭಾರತೀ, ಸರಸ್ವತಿ, ಆಶ್ರಮ, ಗಿರಿ,ತೀರ್ಥ, ಅರಣ್ಯ, ಪರ್ವತ, ಸಾಗರ, ಪುರಿ ಹಾಗೂ ವನ) ಒಂದನ್ನು ಆಯ್ಕೆ ಮಾಡಿ ನೂತನ ಶಿಷ್ಯನಿಗೆ ಹಿಂದಿನ ಗುರುಗಳಾದ ಚಂದ್ರಶೇಖರ ಭಾರತೀ ಹಾಗೂ ಅಭಿನವ ವಿದ್ಯಾತೀರ್ಥರ ನಾಮವನ್ನು ಒಳಗೊಂಡ ‘ವಿಧುಶೇಖರ ಭಾರತೀ’ ಎಂಬ ಯೋಗ ಪಟ್ಟವನ್ನು ನೀಡಿ­ದರು.
ನೂತನ ಶ್ರೀಗಳು ವ್ಯಾಖ್ಯಾನ ಸಿಂಹಾಸನದಲ್ಲಿ ಜಗದ್ಗುರು ಭಾರತೀ ತೀರ್ಥರನ್ನು ಕುಳ್ಳಿರಿಸಿ ಪಾದಪೂಜೆ ಸಲ್ಲಿಸಿದರು. ನಂತರ ನಡೆದ ಮಹಾಸಭೆಯಲ್ಲಿ ಎಡತೊರೆ, ಶಿವಗಂಗಾ, ಆನೆಗುಂದಿ, ಹೆಬ್ಬೂರು ಮತ್ತು ಧರ್ಮಪುರಿ ಮಠಾಧೀಶರು, ಕೇಂದ್ರ ಸಚಿವ ಅನಂತ­ಕುಮಾರ್‌, ಸೀಮಾಂಧ್ರ ವಿಧಾನಸಭೆ ಸಭಾಪತಿ ಒಡಲ ಶಿವಪ್ರಸಾದ್, ರಾಜ್ಯ ಕಾನೂನು ಸಚಿವ ಟಿ.ಬಿ.ಜಯಚಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಅಭಯ­ಚಂದ್ರ ಜೈನ್, ಸಂಸದರಾದ ಬಿ.ಎಸ್. ಯಡಿ­ಯೂರಪ್ಪ, ಶೋಭಾ ಕರಂದ್ಲಾಜೆ, ಶಾಸಕರಾದ ಡಿ.ಎನ್. ಜೀವರಾಜ್, ವಿಜಯ­ಕುಮಾರ್,
ಬಿಸಿಸಿಐ ಅಧ್ಯಕ್ಷ ಸ್ಥಾನ­ದಿಂದ ಅಮಾನತುಗೊಂಡಿರುವ ಎನ್. ಶ್ರೀನಿ­ವಾಸನ್, ಟಾಫೆ ಕಂಪನಿ ಮುಖ್ಯಸ್ಥೆ ಮಲ್ಲಿಕಾ ಶ್ರೀನಿವಾಸನ್, ಸಿಂಪ್ಸನ್ ಸಂಸ್ಥೆಯ ಮುಖ್ಯಸ್ಥ ಎ. ಕೃಷ್ಣಮೂರ್ತಿ, ಸ್ಯಾಂಗ್‌ಸುಯಿ ಸಂಸ್ಥೆಯ ಮುಖ್ಯಸ್ಥ ರಾಮಾ ಸುಬ್ರಹ್ಮಣ್ಯ ರಾಜ, ಮದ್ರಾಸ್ ಹೈಕೋರ್ಟ್ ನ್ಯಾಯ­ಮೂರ್ತಿ ರಾಮ­ನಾಥನ್, ಅಮೆರಿಕದ ಅನಿವಾಸಿ ಭಾರತೀಯ ಉದ್ಯಮಿ ಯಜ್ಞ ಸುಬ್ರಹ್ಮಣ್ಯಂ, ಮಠದ ಆಡಳಿತಾಧಿಕಾರಿ ವಿ.ಆರ್. ಗೌರಿಶಂಕರ್‌ ಇದ್ದರು. ಸಭಾ ಕಾರ್ಯಕ್ರಮದ ಬಳಿಕ ರಾತ್ರಿ 9ರಿಂದ ಭಾರತೀ ಬೀದಿಯಲ್ಲಿ ಉಭಯಶ್ರೀಗಳ ಸ್ವರ್ಣ ಹಾಗೂ ಬೆಳ್ಳಿಯ ಪಲ್ಲಕ್ಕಿ ಉತ್ಸವ ನಡೆಯಿತು.(ಪ್ರಜಾವಾಣಿ-೨೪-೧-೨೦೧೫)

ಅವಿಚ್ಛಿನ್ನ ಗುರುಶಿಷ್ಯಪರಂಪರೆ

[ಬದಲಾಯಿಸಿ]

ಗುರು ಪರಂಪರೆಯಲ್ಲಿ ದೈವತ್ವದ ಸಮೂಹ

[ಬದಲಾಯಿಸಿ]
 • ಸದಾಶಿವ
 • ನಾರಾಯಣ
 • ಬ್ರಹ್ಮ

ಪರಮ ಋಷಿಗಳ ಪರಂಪರೆ

[ಬದಲಾಯಿಸಿ]
 • ವಶಿಷ್ಠ ಮಹರ್ಷಿ
 • ಶಕ್ತಿ ಮಹರ್ಷಿ
 • ಪರಾಶರ ಮಹರ್ಷಿ
 • ವೇದ ವ್ಯಾಸ
 • ಶ್ರೀ ಶುಕ್ಲಾಚಾರ್ಯ
 • ಶ್ರೀ ಗೌಡಪಾದ ಆಚಾರ್ಯ
 • ಶ್ರೀ ಗೋವಿಂದ ಭಗವತ್ಪಾದ
 • ಶ್ರೀ ಶಂಕರ ಭಗವತ್ಪಾದ (788-820)

ಪೀಠಾಧಿಪತಿಗಳ ಪಟ್ಟಿ

[ಬದಲಾಯಿಸಿ]
ಕ್ರಮಸಂಖ್ಯೆ ಪೀಠಾಧಿಪತಿಗಳು ಸನ್ಯಾಸ ಸ್ವೀಕಾರ (ಕ್ರಿ.ಶ.) ದೇಹ ಮುಕ್ತಿ (ಕ್ರಿ.ಶ.)
ಶ್ರೀ ಶಂಕರ ಭಗವತ್ಪಾದದರು 788 820
ಶ್ರೀ ಸುರೇಶ್ವರಾಚಾರ್ಯ 813 834
ಶ್ರೀ ನಿತ್ಯ ಭೋಧ ಘನ 818 848
ಶ್ರೀ ಜ್ಞಾನ ಘನ 846 910
ಶ್ರೀ ಜ್ಞಾನೋತ್ತಮ 905 954
ಶ್ರೀ ಜ್ಞಾನ ಗಿರಿ 950 1038
ಶ್ರೀ ಸಿಂಹಗಿರಿ 1036 1098
ಶ್ರೀ ಈಶ್ವರ ತೀರ್ಥ 1097 1146
ಶ್ರೀ ನರಸಿಂಹ ತೀರ್ಥ 1146 1229
೧೦ ಶ್ರೀ ವಿದ್ಯಾಶಂಕರ ತೀರ್ಥ 1228 1333
೧೧ ಶ್ರೀ ಭಾರತೀ ಕೃಷ್ಣ ತೀರ್ಥ 1328 1380
೧೨ ಶ್ರೀ ವಿದ್ಯಾರಣ್ಯ 1331 1386
೧೩ ಶ್ರೀ ಚಂದ್ರಶೇಖರ ಭಾರತೀ ತೀರ್ಥ (1) 1368 1389
೧೪ ಶ್ರೀ ನರಸಿಂಹ ಭಾರತೀ ತೀರ್ಥ (1) 1388 1408
೧೫ ಶ್ರೀ ಪುರುಷೋಮ ಭಾರತೀ ತೀರ್ಥ(1) 1406 1448
೧೬ ಶ್ರೀ ಶಂಕರ ಭಾರತೀ ತೀರ್ಥ 1429 1455
೧೭ ಶ್ರೀ ಚಂದ್ರಶೇಖರ ಭಾರತೀ ತೀರ್ಥ (2) 1449 1464
೧೮ ಶ್ರೀ ನರಸಿಂಹ ಭಾರತೀ ತೀರ್ಥ(2) 1464 1479
೧೯ ಶ್ರೀ ಪುರುಷೋಮ ಭಾರತೀ ತೀರ್ಥ (2) 1473 1517
೨೦ ಶ್ರೀ ರಾಮಚಂದ್ರ ಭಾರತೀ ತೀರ್ಥ 1508 1560
೨೧ ಶ್ರೀ ನರಸಿಂಹ ಭಾರತೀ ತೀರ್ಥ (3) 1557 1573
೨೨ ಶ್ರೀ ನರಸಿಂಹ ಭಾರತೀ ತೀರ್ಥ (4) 1563 1576
೨೩ ಶ್ರೀ ನರಸಿಂಹ ಭಾರತೀ ತೀರ್ಥ(5) 1576 1600
೨೪ ಶ್ರೀ ಅಭಿನವ ನರಸಿಂಹ ಭಾರತೀತೀರ್ಥ (1) 1559 1623
೨೫ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ(1) 1622 1663
೨೬ ಶ್ರೀ ನರಸಿಂಹ ಭಾರತೀ ತೀರ್ಥ (6) 1663 1706
೨೭ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ(2) 1706 1741
೨೮ ಶ್ರೀ ಅಭಿನವ ಸಚ್ಚಿದಾನಂದಭಾರತೀ ತೀರ್ಥ (1) 1741 1767
೨೯ ಶ್ರೀ ನರಸಿಂಹ ಭಾರತೀ ತೀರ್ಥ (7) 1767 1770
೩೦ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ(3) 1770 1814
೩೧ ಶ್ರೀ ಅಭಿನವ ಸಚ್ಚಿದಾನಂದಭಾರತೀ ತೀರ್ಥ (2) 1814 1817
೩೨ ಶ್ರೀ ನರಸಿಂಹ ಭಾರತೀ ತೀರ್ಥ (8) 1817 1879
೩೩ ಶ್ರೀ ಸಚ್ಚಿದಾನಂದ ಶಿವಾಭಿನವನರಸಿಂಹ ಭಾರತೀ ತೀರ್ಥ 1866 1912
೩೪ ಶ್ರೀ ಚಂದ್ರಶೇಖರ ಭಾರತೀ ತೀರ್ಥ (3) 1912 1954
೩೫ ಶ್ರೀ ಅಭಿನವ ವಿದ್ಯಾ ತೀರ್ಥ 1931 1989
೩೬ ಶ್ರೀ ಭಾರತೀ ತೀರ್ಥ 1974 --}

ಇತ್ತೀಚಿನ ಕೆಲಜಗದ್ಗುರುಗಳ ಪೂರ್ವಾಶ್ರಮ

[ಬದಲಾಯಿಸಿ]
ಹೆಸರುಜಗದ್ಗುರುಗಳಾಗಿ ಸೇವೆ ಸಲ್ಲಿಸಿದ ವರ್ಷಗಳುಹುಟ್ಟಿದ ಊರುಪೂರ್ವಾಶ್ರಮದ ಹೆಸರು
ಸಚ್ಚಿದಾನಂದ ಶಿವಾಭಿನವ ನರಸಿಂಹ ಭಾರತಿ೧೮೭೨-೧೯೧೨ಮೈಸೂರುಶಿವಸ್ವಾಮಿ
ಚಂದ್ರಶೇಖರ ಭಾರತಿ೧೯೧೨-೧೯೫೪ಶೃಂಗೇರಿನರಸಿಂಹ ಶಾಸ್ತ್ರಿ
ಅಭಿನವ ವಿದ್ಯಾತೀರ್ಥ೧೯೫೪-೧೯೮೯ಬೆಂಗಳೂರುಶ್ರೀನಿವಾಸ ಶಾಸ್ತ್ರಿ
ಭಾರತಿ ತೀರ್ಥ೧೯೮೯-ಇಲ್ಲಿಯವರೆಗುಮಚಲೀಪಟ್ನಂಸೀತಾರಾಮ ಆಂಜನೇಯುಲು

ಉಲ್ಲೇಖಗಳು

[ಬದಲಾಯಿಸಿ]

ಹೊರಕೊಂಡಿಗಳು

[ಬದಲಾಯಿಸಿ]


ಶ್ರೀ ಆದಿ ಶಂಕರಾಚಾರ್ಯ ಸ್ಥಾಪಿತ ಮಠಗಳು
ದ್ವಾರಕಾ ಪೀಠಪುರಿ ಗೋವರ್ಧನ ಪೀಠಬದರೀನಾಥ ಜ್ಯೋತಿರ್ಮಠ ಪೀಠಶೃಂಗೇರಿ ಶಾರದಾಪೀಠ