ವಿಷಯಕ್ಕೆ ಹೋಗು

ಶಿಂಶಾ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿಂಷಾ ಭಾರತದ ಕರ್ನಾಟಕ ರಾಜ್ಯದಲ್ಲಿ ಹರಿಯುವ ಒಂದು ನದಿಯಾಗಿದೆ. ಇದು ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದಾದ ಕಾವೇರಿ ನದಿಯ ಉಪನದಿಯಾಗಿದೆ.ತುಮಕೂರು ಜಿಲ್ಲೆಯ ದೇವ ರಾಯನದುರ್ಗ ಬೆಟ್ಟದ ದಕ್ಷಿಣ ಭಾಗದಲ್ಲಿ ಉಗಮಿಸುವ ಈ ನದಿಯು ೨೨೧ ಕಿ.ಮೀ. ದೂರವನ್ನು ಕ್ರಮಿಸಿ ಕಾವೇರಿ ನದಿಯನ್ನು ಸೇರುತ್ತದೆ. ಶಿಂಶಾ ನದಿಯು ಸರಾಸರಿ ಸಮುದ್ರ ಮಟ್ಟದಿಂದ ಸುಮಾರು ೯೧೪ ಮೀ ಎತ್ತರದಿಂದ ಹರಿದುಬರುತ್ತದೆ. ಶಿಂಶಾ ನದಿಯು ಹುಟ್ಟಿ ಬರುವ ಸ್ಥಳ ದೇವರಾಯನದುರ್ಗ ಬೆಟ್ಟ. ದೇವರಾಯನದುರ್ಗ ಬೆಟ್ಟದಲ್ಲಿ ನರಸಿಂಹಸ್ವಾಮಿಯ ಎರಡು ದೇವಾಲಯಗಳಿವೆ. ತುಮಕೂರು ಜಿಲ್ಲೆಯಲ್ಲಿ ಹುಟ್ಟಿ ಬರುವ ಶಿಂಶಾ ನದಿ ಮಂಡ್ಯ ಜಿಲ್ಲೆಯನ್ನು ಸೇರುತ್ತದೆ. ಮಂಡ್ಯ ಜಿಲ್ಲೆಯಲ್ಲಿನ ಮಳವಳ್ಳಿ ತಾಲೂಕಿನಲ್ಲಿ ಶಿಂಶಾ ನದಿಯ ಒಂದು ಜಲಪಾತವಿದೆ. ಮರ್ಕೊಣಹಳ್ಳಿ ಅಣೆಕಟ್ಟನ್ನು ಶಿಂಶಾ ನದಿಯ ಅಡ್ಡಲಾಗಿ ಕಟ್ಟಲಾಗಿದೆ.

ಶಿಂಶಾ ನದಿ

ಉಲ್ಲೇಖಗಳು []

ಉಲ್ಲೇಖಗಳು

[ಬದಲಾಯಿಸಿ]