ವರ್ಗ:ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ಸಾಹಿತ್ಯ ಪ್ರಶಸ್ತಿಗಳಲ್ಲಿ ಜನಪ್ರಿಯವಾದುದು ಭಾರತೀಯ ಜ್ಞಾನಪೀಠ ಪ್ರಶಸ್ತಿ. ಸಾಹು ಜೈನ್ (ಟೈಮ್ಸ್ ಆಫ಼್ ಇಂಡಿಯಾ ಪತ್ರಿಕೆಯ ಮಾಲೀಕವರ್ಗ) ಹುಟ್ಟುಹಾಕಿದ ಭಾರತೀಯ ಜ್ಞಾನಪೀಠ ಟ್ರಸ್ಟ್, ವರ್ಷಕ್ಕೊಮ್ಮೆ ಕೊಡಮಾಡುವ ಈ ಪ್ರಶಸ್ತಿಯಲ್ಲಿ ೧೧ ಲಕ್ಷ ರೂಪಾಯಿ, ಫ಼ಲಕ ಮತ್ತು ಕಂಚಿನ ಸರಸ್ವತಿ ಪ್ರತಿಮೆಯನ್ನು ನೀಡಲಾಗುತ್ತದೆ.

೧೯೬೫ರಲ್ಲಿ ಶುರುವಾದಾಗ ಒಂದು ಸಾಹಿತ್ಯ ಕೃತಿಗೆ ಜ್ಞಾನಪೀಠ ಪ್ರಶಸ್ತಿ ನೀಡಲಾಗುತ್ತಿತ್ತು. ೧೯೮೬ರಿಂದ ಸಮಗ್ರ ಸಾಹಿತ್ಯ ಅಥವಾ ಆಯಾ ಭಾಷೆಗೆ ಕೊಟ್ಟ ಕೊಡುಗೆಗೆ ಪ್ರಶಸ್ತಿ ನೀಡಲಾಗುತ್ತಿದೆ.

ವರ್ಷ ಪ್ರಶಸ್ತಿ ಪುರಸ್ಕೃತ ಸಾಹಿತಿ ಪ್ರಶಸ್ತಿ ಪುರಸ್ಕೃತ ಕೃತಿ ಪ್ರಶಸ್ತಿ ಪುರಸ್ಕೃತ ಭಾಷೆ ಪ್ರಶಸ್ತಿ ಪುರಸ್ಕೃತರ ಭಾವಚಿತ್ರ
೧೯೬೫ ಜಿ. ಶಂಕರ ಕುರುಪ್ ಓಡಕ್ಕುಳುಳ್ (ಕೊಳಲು) ಮಲಯಾಳಂ
೧೯೬೬ ತಾರಾಶಂಕರ ಬಂದೋಪಾಧ್ಯಾಯ ಗಣದೇವತಾ ಬಂಗಾಳಿ
೧೯೬೭ ಕುವೆಂಪು ಶ್ರೀ ರಾಮಾಯನ ದರ್ಶನಂ ಕನ್ನಡ
೧೯೬೭ ಉಮಾಶಂಕರ ಜೋಷಿ ನಿಷಿತ ಗುಜರಾತಿ
೧೯೬೮ ಸುಮಿತ್ರಾನಂದನ ಪಂತ್ ಚಿದಂಬರ ಹಿಂದಿ
೧೯೬೯ ರಘುಪತಿ ಸಹಾಯ್ ಫಿರಾಕ್ ಗೋರಕ್ ಪುರಿ ಗುಲ್-ಏ-ನಘ್ಮಾ ಉರ್ದು
೧೯೭೦ ವಿಶ್ವನಾಥ ಸತ್ಯನಾರಾಯಣ ರಾಮಾಯಣ ಕಲ್ಪವೃಕ್ಷಮು ತೆಲುಗು
೧೯೭೧ ವಿಷ್ಣು ಡೇ ಸ್ಮೃತಿ ಸತ್ತ ಭವಿಷ್ಯತ್ ಬಂಗಾಳಿ
೧೯೭೨ ರಾಮಧಾರಿ ಸಿಂಗ್ ದಿನಕರ್ ಊರ್ವಶಿ ಹಿಂದಿ
೧೯೭೩ ದ ರಾ ಬೇಂದ್ರೆ ನಾಕು ತಂತಿ ಕನ್ನಡ
೧೯೭೩ ಗೋಪಿನಾಥ ಮೊಹಾಂತಿ ಮತಿಮತಲ್ ಒರಿಯಾ
೧೯೭೪ ವಿಷ್ಣು ಸಖಾರಾಮ್ ಖಾಂಡೇಕರ್ ಯಾಯಾತಿ ಮರಾಠಿ
೧೯೭೫ ಪಿ ವಿ ಅಖಿಲನ್ ಚಿತ್ತಪ್ಪಾವಿ ತಮಿಳು
೧೯೭೬ ಆಶಾಪೂರ್ಣ ದೇವಿ ಪ್ರಥಮ ಪ್ರತಿಸ್ರುತಿ ಬಂಗಾಳಿ
೧೯೭೭ ಶಿವರಾಮ ಕಾರಂತ ಮೂಕಜ್ಜಿಯ ಕನಸುಗಳು ಕನ್ನಡ
೧೯೭೮ ಸಚ್ಚಿದಾನಂದ ವಾತ್ಸಾಯನ ಕಿತ್ನಿ ನಾವೋ ಮೇ ಕಿತ್ನಿ ಬಾರ್ ಹಿಂದಿ
೧೯೭೯ ಬೀರೇಂದ್ರ ಕುಮಾರ ಭಟ್ಟಾಚಾರ್ಯ ಮೃತ್ಯುಂಜಯ ಅಸ್ಸಾಮಿ
೧೯೮೦ ಎಸ್ ಕೆ ಪೊಟ್ಟೆಕ್ಕಟ್ಟ ಒರು ದೇಸತಿಂತೆ ಕಥಾ ಮಲಯಾಳಂ
೧೯೮೧ ಅಮೃತಾ ಪ್ರೀತಮ್ ಕಾಗಜ್ ತೇ ಕಾನ್ವಾಸ್ ಪಂಜಾಬಿ
೧೯೮೨ ಮಹಾದೇವಿ ವರ್ಮಾ ಯಮ ಹಿಂದಿ
೧೯೮೩ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಚಿಕ್ಕವೀರ ರಾಜೇಂದ್ರ ಕನ್ನಡ
೧೯೮೪ ಟಿ. ಶಿವಶಂಕರ ಪಿಳ್ಳೈ ಕಾಯರ್ ಮಲಯಾಳಂ
೧೯೮೫ ಪನ್ನಾಲಾಲ್ ಪಟೇಲ್ ಮಾನಾವಿ ನಿ ಭಾವಾಯ್ ಗುಜರಾತಿ
೧೯೮೬ ಸಚ್ಚಿದಾನಂದ ರೌತ್ರೇಯ ಸಮಗ್ರ ಸಾಹಿತ್ಯ ಒರಿಯಾ
೧೯೮೭ ವಿಷ್ಣು ವಾಮನ ಶಿರ್ವಾಡ್ಕರ್(ಕುಸುಮಾಗ್ರಜ್) ಸಮಗ್ರ ಸಾಹಿತ್ಯ ಮರಾಠಿ
೧೯೮೮ ಸಿ ನಾರಾಯಣ ರೆಡ್ಡಿ ವಿಶ್ವಾಂಬರ ತೆಲುಗು
೧೯೮೯ ಖೈರತುಲೈನ್ ಹೈದರ್ ಅಖಿರೇ ಶಬ್ ಕೇ ಹಮ್ಸಫ಼ರ್ ಉರ್ದು
೧೯೯೦ ವಿ ಕೆ ಗೋಕಾಕ್ ಭಾರತ ಸಿಂಧು ರಶ್ಮಿ ಕನ್ನಡ
೧೯೯೧ ಸುಭಾಷ್ ಮುಖ್ಯೋಪಾಧ್ಯಾಯ ಪಾದಾತಿಕ್ ಬಂಗಾಳಿ
೧೯೯೨ ನರೇಶ ಮೆಹ್ತಾ ಸಮಗ್ರ ಸಾಹಿತ್ಯ ಹಿಂದಿ
೧೯೯೩ ಸೀತಾಕಾಂತ ಮಹಾಪಾತ್ರ ಸಮಗ್ರ ಸಾಹಿತ್ಯ ಒರಿಯಾ
೧೯೯೪ ಯು.ಆರ್.ಅನಂತಮೂರ್ತಿ ಸಮಗ್ರ ಸಾಹಿತ್ಯ ಕನ್ನಡ
೧೯೯೫ ಎಂ.ಟಿ.ವಾಸುದೇವನ್ ನಾಯರ್ ಸಮಗ್ರ ಸಾಹಿತ್ಯ ಮಲಯಾಳಂ
೧೯೯೬ ಮಹಾಶ್ವೇತಾ ದೇವಿ ಹಜಾರ್ ಚೌರಾಶೀರ್ ಮಾ ಬಂಗಾಳಿ
೧೯೯೭ ಅಲಿ ಸರ್ದಾರ್ ಜಾಫ಼್ರಿ ಸಮಗ್ರ ಸಾಹಿತ್ಯ ಉರ್ದು
೧೯೯೮ ಗಿರೀಶ್ ಕಾರ್ನಾಡ್ ಸಮಗ್ರ ಸಾಹಿತ್ಯ ಕನ್ನಡ
೧೯೯೯ ನಿರ್ಮಲ್ ವರ್ಮಾ ಸಮಗ್ರ ಸಾಹಿತ್ಯ ಹಿಂದಿ
೨೦೦೦ ಇಂದಿರಾ ಗೋಸ್ವಾಮಿ ಸಮಗ್ರ ಸಾಹಿತ್ಯ ಅಸ್ಸಾಮಿ
೨೦೦೧ ರಾಜೇಂದ್ರ ಶಾ ಸಮಗ್ರ ಸಾಹಿತ್ಯ ಗುಜರಾತಿ
೨೦೦೨ ಡಿ. ಜಯಕಾಂತನ್ ಸಮಗ್ರ ಸಾಹಿತ್ಯ ತಮಿಳು
೨೦೦೩ ವಿಂದಾ ಕರಂದೀಕರ್ ಸಮಗ್ರ ಸಾಹಿತ್ಯ ಮರಾಠಿ
೨೦೦೪ ರೆಹಮಾನ್ ರಾಹಿ ಸುಭುಕ್ ಸೋದ, ಕಲಾಮಿ ರಾಹಿ ಮತ್ತು ಸಿಯಾಹ್ ರೋದೆ ಜರೇನ್ ಮಂಜ಼್ ಕಾಶ್ಮೀರಿ
೨೦೦೫ ಕುನ್ವರ್ ನಾರಾಯಣ್ ಸಮಗ್ರ ಸಾಹಿತ್ಯ ಹಿಂದಿ
೨೦೦೬ ರವೀಂದ್ರ ಕೇಲೇಕರ್ ಸಮಗ್ರ ಸಾಹಿತ್ಯ ಕೊಂಕಣಿ
೨೦೦೬ ಸತ್ಯವ್ರತ ಶಾಸ್ತ್ರಿ ಸಮಗ್ರ ಸಾಹಿತ್ಯ ಸಂಸ್ಕೃತ
೨೦೦೭ ಓ ಎನ್ ವಿ ಕುರುಪ್ ಸಮಗ್ರ ಸಾಹಿತ್ಯ ಮಲಯಾಳಂ
೨೦೦೮ ಅಖ್ಲಾಕ್ ಮೊಹಮ್ಮದ್ ಖಾನ್ ಶಹರ್ಯಾರ್ ಸಮಗ್ರ ಸಾಹಿತ್ಯ ಉರ್ದು
೨೦೦೯ ಅಮರ್ ಕಾಂತ್ ಸಮಗ್ರ ಸಾಹಿತ್ಯ ಹಿಂದಿ
೨೦೧೦ ಚಂದ್ರಶೇಖರ ಕಂಬಾರ ಸಮಗ್ರ ಸಾಹಿತ್ಯ ಕನ್ನಡ
೨೦೧೧ ಪ್ರತಿಭಾ ರೇ ಸಮಗ್ರ ಸಾಹಿತ್ಯ ಒರಿಯಾ
೨೦೧೨ ರವುರಿ ಭಾರದ್ವಾಜ ಸಮಗ್ರ ಸಾಹಿತ್ಯ ತೆಲುಗು

"ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿಗಳು" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ಪುಟವೊಂದು ಇದೆ.