ವಿಷಯಕ್ಕೆ ಹೋಗು

ಬಾದಾಮಿ (ಪದಾರ್ಥ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಾದಾಮಿ
ಕಾಯಿ ಬಿಟ್ಟಿರುವ ಬಾದಾಮಿ ಗಿಡ. ಮಜೋರ್ಕ, ಸ್ಪೇಯ್ನ್.
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
Subgenus:
ಪ್ರಜಾತಿ:
ಪಿ. ಡುಲ್ಸಿಸ್
Binomial name
ಪ್ರುನಸ್ ಡುಲ್ಸಿಸ್
(Mill.) D.A.Webb

ಬಾದಾಮಿಯು (ಸಕ್ಕರೆಬಾದಾಮಿ) ಮಧ್ಯಪ್ರಾಚ್ಯ ಹಾಗೂ ದಕ್ಷಿಣ ಏಷಿಯಾ ಪ್ರದೇಶದ ಒಂದು ಜಾತಿಯ ಮರ. ಇದು ಸುಮಾರು ೩೦ ಅಡಿ ಎತ್ತರಕ್ಕೆ ಸಮನಾಗಿ ಹರಡಿಕೊಂಡು ಬೆಳೆಯುವ ಮರ. ಅಲಂಕಾರಿಕ ಮತ್ತು ನೆರಳಿನ ಗಿಡವಾಗಿಯೂ ಬೆಳೆಯಲ್ಪಡುತ್ತದೆ. ಬಾದಾಮಿಯು ಖಾದ್ಯ ಮತ್ತು ವ್ಯಾಪಕವಾಗಿ ಬೆಳೆಯುವ ಈ ಮರದ ಬೀಜದ ಹೆಸರು ಕೂಡ ಆಗಿದೆ.

ಸಸ್ಯಶಾಸ್ತ್ರೀಯ ವರ್ಗೀಕರಣ

[ಬದಲಾಯಿಸಿ]

ರೋಸೇಸಿಯೆ ಕುಟುಂಬಕ್ಕೆ ಸೇರಿದ ಮರ. ಪ್ರುನಸ್ ಅಮಿಗ್ಡಾಲಸ್ ವೈಜ್ಞಾನಿಕ ಹೆಸರು.

ಏಷ್ಯಾದಲ್ಲಿ ಕೃಷಿ

[ಬದಲಾಯಿಸಿ]

ಪಶ್ಚಿಮ ಏಷ್ಯದಲ್ಲಿ-ಹೆಚ್ಚಾಗಿ ಕಾಶ್ಮೀರ, ಪಂಜಾಬ್, ಆಫ್ಘಾನಿಸ್ತಾನ ಮುಂತಾದ ತಂಪು ಪ್ರದೇಶಗಳಲ್ಲಿ-ಸಮೃದ್ಧವಾಗಿ ಬೆಳೆಯುತ್ತದೆ.

ಸಿಹಿಬಾದಾಮಿ ತೈಲ

[ಬದಲಾಯಿಸಿ]

ಸಿಹಿಬಾದಾಮಿಯಲ್ಲಿ ಶೇ. 56 ಭಾಗ ಎಣ್ಣೆ ದೊರೆಯುತ್ತದೆ-ಮುಖ್ಯವಾಗಿ ಆಲ್ಬ್ಯುಮಿನ್ ದ್ರವ್ಯ. ಇದು ನೀರಿನಲ್ಲಿ ಲೀನಿಸುತ್ತದೆ. ಹುದುಗುಹಾಕಿದ ಎಮಲ್ಷನ್ನಿನಲ್ಲಿ ಸೇಕಡಾ 3 ಲೋಳೆಸರ, ಶೇಕಡಾ 6 ಸಕ್ಕರೆ, ಸೇಕಡಾ 18.58 ಸಾರಜನಕ ದ್ರವ್ಯಗಳು ಮತ್ತು ಶೇಕಡಾ 3-5 ಬೂದಿ ಇವೆ. ಉಳಿದದ್ದು ನಿರುಪಯುಕ್ತ ಚರಟ.

ಉಪಯೋಗಗಳು

[ಬದಲಾಯಿಸಿ]
ಬಾದಾಮಿ ಬೀಜಗಳು

ಸಿಹಿಬಾದಾಮಿ ಮರದ ತೊಗಟೆ ಮತ್ತು ಪಕ್ವವಾದ ಬೀಜಗಳು ಬಲು ಉಪಯುಕ್ತ ಪದಾರ್ಥಗಳು. ಇದರ ಕಾಯಿ ತಿನ್ನಲು ಉಪಯೋಗಿಸುವ, ಅಡಿಗೆಗೆ ಉಪಯೋಗಿಸುವ ಒಂದು ಬೀಜ. ಸಕ್ಕರೆಬಾದಾಮಿ ಬೀಜವನ್ನು ಹಸಿಯಾಗಿ ತಿನ್ನಬಹುದು. ಔಷಧ ಪದಾರ್ಥವಾಗಿಯೂ ಸೇವಿಸಬಹುದು. ಬಾದಾಮಿ ಮರಗಳು ಎರಡು ರೀತಿಯ ಕಾಯಿಯನ್ನು ಕೊಡುತ್ತವೆ. ಒಂದು ಸಿಹಿಯಾಗಿದ್ದರೆ ಇನ್ನೊಂದು ಕಹಿ ಕಾಯಿಯನ್ನು ಕೊಡುತ್ತವೆ.[][] ಸಿಹಿ ಕಾಯಿಗಳನ್ನು ವಿಶೇಷವಾಗಿ ಸಿಹಿತಿನಿಸುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಕಹಿಬಾದಾಮಿಯೂ ಉಂಟು. ಇದರ ತೈಲಕ್ಕೆ ಔಷಧೀಯ ಗುಣವಿದೆ. ಬಾದಾಮಿ ಕಾಯಿಗಳನ್ನು ಎಣ್ಣೆ ತೆಗೆಯಲೂ ಉಪಯೋಗಿಸುತ್ತಾರೆ.

ಯು.ಎಸ್.ಎ. ನಲ್ಲಿ ಬಾದಾಮಿ

[ಬದಲಾಯಿಸಿ]
Almonds
ಪೌಷ್ಟಿಕಾಂಶದ ಮೌಲ್ಯ ಶೇಕಡವಾರು 100 g (3.5 oz)
ಆಹಾರ ಚೈತನ್ಯ 2,408 kJ (576 kcal)
ಶರ್ಕರ ಪಿಷ್ಟ 21.69 g
- ಪಿಷ್ಟ 0.74 g
- ಸಕ್ಕರೆ 3.89 g
  - ಲಾಕ್ಟೋಸ್ 0.00 g
- ಆಹಾರ ನಾರು 12.2 g
ಕೊಬ್ಬು 49.42 g
ಪರಿಷ್ಕರಿಸಿದ ಕೊಬ್ಬು 3.731 g
ಏಕಪರ್ಯಾಪ್ತ ಕೊಬ್ಬು 30.889 g
ಬಹುಪರ್ಯಾಪ್ತ ಕೊಬ್ಬು 12.070 g
ಪ್ರೋಟೀನ್(ಪೋಷಕಾಂಶ) 21.22 g
- Tryptophan 0.214 g
- Threonine 0.598 g
- Isoleucine 0.702 g
- Leucine 1.488 g
- Lysine 0.580 g
- Methionine 0.151 g
- Cystine 0.189 g
- Phenylalanine 1.120 g
- Tyrosine 0.452 g
- Valine 0.817 g
- Arginine 2.446 g
- Histidine 0.557 g
- Alanine 1.027 g
- Aspartic acid 2.911 g
- Glutamic acid 6.810 g
- Glycine 1.469 g
- Proline 1.032 g
- Serine 0.948 g
ನೀರು 4.70 g
ವಿಟಮಿನ್ ಎ 1 IU
- beta-carotene 1 μg (0%)
- lutein and zeaxanthin 1 μg
Thiamine (vit. B1) 0.211 mg (18%)
Riboflavin (vit. B2) 1.014 mg (85%)
Niacin (vit. B3) 3.385 mg (23%)
Pantothenic acid (B5) 0.469 mg (9%)
Vitamin B6 0.143 mg (11%)
Folate (vit. B9) 50 μg (13%)
Choline 52.1 mg (11%)
ವಿಟಮಿನ್ ಇ 26.2 mg (175%)
ವಿಟಮಿನ್ ಕೆ 0.0 μg (0%)
ಕ್ಯಾಲ್ಸಿಯಂ 264 mg (26%)
ಕಬ್ಬಿಣ ಸತ್ವ 3.72 mg (29%)
ಮೆಗ್ನೇಸಿಯಂ 268 mg (75%)
ಮ್ಯಾಂಗನೀಸ್ 2.285 mg (109%)
ರಂಜಕ 484 mg (69%)
ಪೊಟಾಸಿಯಂ 705 mg (15%)
ಸೋಡಿಯಂ 1 mg (0%)
ಸತು 3.08 mg (32%)
Link to USDA Database entry
Percentages are roughly approximated
using US recommendations for adults.
Source: USDA Nutrient Database

ಕ್ಯಾಲಿಫೋರ್ನಿಯಾ, ಸ್ಯಾನ್‌ಫ್ರಾನ್ಸಿಸ್ಕೊ, ಮಧ್ಯ ಕಣಿವೆ, ದಕ್ಷಿಣ ಕಣಿವೆ ಪ್ರಾಂತ್ಯಗಳ ಬಾದಾಮಿ ಬೆಳೆಗಾರರು ಎಂದಿಗೂ ಬರಕ್ಕೆ ಜಗ್ಗಿಲ್ಲ. ಕ್ಯಾಲಿಫೋರ್ನಿ­­­ಯಾದ ವಾರ್ಷಿಕ ಸರಾಸರಿ ಮಳೆ ಪ್ರಮಾಣ 250 ರಿಂದ 400 ಮಿ.ಮೀ. ಅದು ಕೂಡ ಅನಿಶ್ಚಿತ. ಹಾಗಾಗಿ, ಬಾದಾಮಿ ಬೆಳೆಗಾ­ರರು ಮಳೆಯ ನೀರಿನ ಜೊತೆಗೆ ದೂರದಲ್ಲಿರುವ ಸೆರೆನಾ ನೆವಡಾ ಎಂಬ ಹಿಮಬೆಟ್ಟದಲ್ಲಿ ಕರಗುವ ಮಂಜುಗಡ್ಡೆಗಳ ನೀರನ್ನೇ ಅವಲಂಬಿಸಿದ್ದಾರೆ. ಮಂಜಿನ ನೀರನ್ನು ಕಿರು ಜಲಾಶ­ಯ­­ಗಳಿಗೆ ತುಂಬಿಸಿ, ಕಾಲುವೆಗಳ ಮೂಲಕ ತೋಟಕ್ಕೆ ಹರಿಸಿ, ತುಂತುರು, ಹನಿ ನೀರಾವರಿ ಮೂಲಕ ಬಾದಾಮಿ ಗಿಡಗಳಿಗೆ ಪೂರೈಸುತ್ತಾರೆ. ಲಭ್ಯ ನೀರನ್ನೇ ಮಿತವಾಗಿ ಬಳಸುತ್ತ ಭರಪೂರ ಬಾದಾಮಿ ಬೆಳೆಯು­ತ್ತಿದ್ದಾರೆ. ನೀರಿನ ಕೊರತೆ ನಡುವೆಯೂ ಪ್ರತಿ ವರ್ಷ ಬಾದಾಮಿ ಬೆಳೆ ಕ್ಷೇತ್ರವನ್ನು ವಿಸ್ತರಿಸುತ್ತಿದ್ದಾರೆ. ಉತ್ಪಾದನೆಯನ್ನು ಕೂಡ ಹೆಚ್ಚಿಸುತ್ತಿದ್ದಾರೆ. ಜಗತ್ತಿನಲ್ಲಿ ಬಾದಾಮಿ ಉತ್ಪಾದನೆಯಲ್ಲಿ ಅಮೇರಿಕ ಮೊದಲ ಸ್ಥಾನದಲ್ಲಿದೆ. ಸುಮಾರು ೪.೫ ಲಕ್ಷ ಹೆಕ್ಟೇರಿನಲ್ಲಿ ೧.೪೧ ಮಿಲಿಯನ್ ಟನ್ ಬಾದಾಮಿ ಬೆಳೆ ತೆಗೆದು ಹಣದ ಹೊಳೆ ಹರಿಸಿದ್ದಾರೆ.

ರಾಜ್ಯದ 800 ಕಿ.ಮೀ ಉದ್ದದ 8.5 ಲಕ್ಷ ಎಕರೆ ಬಾದಾಮಿ ತೋಪಿನಲ್ಲಿ ಈ ವಿಧಾನ. ಹನಿ ನೀರಾವರಿಗೆ ಅಲ್ಲಿ ಸರ್ಕಾರ ಸಹಾಯಧನ ನೀಡುವುದಿಲ್ಲ. ಒಂದು ಬಾದಾಮಿ ಮರಕ್ಕೆ ವರ್ಷದಲ್ಲಿ 48 ಇಂಚು ಮಳೆ ನೀರಿನ ಅಗತ್ಯವಿದೆ. ಆದರೆ ಎಂದೆಂದೂ ಅಷ್ಟು ಮಳೆ ಬರುವುದಿಲ್ಲ. ಹೀಗಾಗಿ ಹಿಮಬೆಟ್ಟಗಳಿಂದ ಬರುವ ನೀರನ್ನೇ ಅವಲಂಬಿಸಿದ್ದಾರೆ. ಎಷ್ಟು ನೀರು ಲಭ್ಯವೋ ಅಷ್ಟನ್ನೇ ಮಿತ ಬಳಕೆಮಾಡಿ ಬಾದಾಮಿ ಬೆಳೆಯುತ್ತಿದ್ದಾರೆ.

ಎಚ್ಚರಿಕೆಯಿಂದ ‘ತೇವಾಂಶ ಸಂರಕ್ಷಣೆ’

ಪ್ರತಿ ಬಾದಾಮಿ ಮರಗಳ ನಡುವೆ ಹನಿ ನೀರಾವರಿ ಪೈಪ್‌ಗಳನ್ನು ಜೋಡಿಸುತ್ತಾರೆ. ಮರಗಳ ಬುಡದಲ್ಲೇ ಹನಿ ನೀರಾವರಿ ಪೈಪುಗಳು ಅಂತರ್ಗತವಾಗಿ (ಇನ್ ಲೈನ್) ಇರುತ್ತವೆ. ಮರಗಳ ಸಾಲಿನಲ್ಲಿ ಮುಚ್ಚಿಗೆ ಬೆಳೆ ಬೆಳೆಸಿದ್ದಾರೆ. ಈ ವಿಧಾನದಿಂದ ಗಿಡಗಳ ಬೇರಿಗೆ ನೇರವಾಗಿ ನೀರು ತಲುಪುತ್ತದೆ. ಮುಚ್ಚಿಗೆ ಬೆಳೆಗಳು ತೇವಾಂಶ ರಕ್ಷಿಸುವ ಜೊತೆಗೆ, ಮಣ್ಣಿಗೆ ಸಾರಜನಕ ಸ್ಥಿರೀಕರಿಸಿ, ಬೇರು ಗಟ್ಟಿಗೊಳಿ­ಸುತ್ತವೆ’ ಎನ್ನುವುದು ಮಣ್ಣು ತಜ್ಞರ ಅಭಿಪ್ರಾಯ. ಈಗ(2014) ಅಮೆರಿಕದ ಕ್ಯಾಲಿಫೋರ್ನಿಯಾ ಬಾದಾಮಿ ಬೆಳೆಯ ವಾರ್ಷಿಕ ವಹಿವಾಟಿನಲ್ಲಿ ಶತಕೋಟಿ ಡಾಲರ್‌ಗಳ ಗಡಿ ದಾಟಿದೆ.

ಬಾದಾಮಿ ಕೊಯಿಲು-ಸಂಸ್ಕರಣ-ಯಾಂತ್ರೀಕರಣ

[ಬದಲಾಯಿಸಿ]
  • ಬಾದಾಮಿ ಮರದಲ್ಲಿ ಬಾದಾಮಿ ಕಾಯಿಗಳು ಕೊಯ್ಲಿಗೆ ಬಂದಾಗ ಟ್ರಾಕ್ಟರ್ ಅಥವಾ ಯುದ್ಧ ಟ್ಯಾಂಕರ್‌ನಂಥ ದೊಡ್ಡ ಕೈಗಳುಳ್ಳ ಯಂತ್ರ ಮರವನ್ನು ಅಲುಗಾಡಿಸಿ ಕಾಯಿ ಉದುರಿಸುವುದು. ಆ ಯಂತ್ರ 15 ರಿಂದ 20 ನಿಮಿಷದಲ್ಲಿ ಒಂದು ಸಾಲಿನ ಬಾದಾಮಿ ಮರಗಳಿಂದ ಕಾಯಿಗಳನ್ನು ಕೊಯ್ಲು ಮಾಡುವುದು.
  • ನಂತರ ಅಷ್ಟೇ ಗಾತ್ರದ ಯಂತ್ರವೊಂದು ಬಂದಿತು. ಅದಕ್ಕೆ ಮುಂದೆ ಮತ್ತು ಹಿಂದೆ ಎರಡು ಕೈಗಳಲ್ಲಿ ಬ್ರಷ್‍ಗಳಿದ್ದು ಆ ಯಂತ್ರ ಒಂದು ಸಾರಿ ಬಾದಾಮಿ ಕೊಯ್ಲಾದ ಜಾಡಿನಲ್ಲಿ ಚಲಿಸುತ್ತಾ, ನೆಲದ ಮೇಲೆ ಹರಡಿಕೊಂಡಿದ್ದ ಬಾದಾಮಿ ಕಾಯಿಗಳನ್ನೆಲ್ಲ ಸಿಪ್ಪೆ ಸಹಿತ ನುಂಗಿ, ಹಿಂಬದಿಯಲ್ಲಿದ್ದ ಟ್ರೇಲರ್‌ಗೆ ತುಂಬಿಸಿಕೊಂಡು, ಬಾದಾಮಿ ತೋಟದ ಕೊನೆಯಲ್ಲಿ ನಿಂತಿದ್ದ ಲಾರಿಗೆ ಹಾಕುವುದು. ಕೆಲವೇ ಗಂಟೆಗಳಲ್ಲಿ ಒಂದು ಎಕರೆ ಬಾದಾಮಿ ತೋಟದ ಕೊಯ್ಲು ಮುಗಿಯುತ್ತದೆ.
  • ಸಣ್ಣ ಹಿಡುವಳಿದಾರರು ಬಾಡಿಗೆ ಯಂತ್ರಗಳನ್ನು ಬಳಸುತ್ತಾರೆ. ಕೆಲವು ದೊಡ್ಡ ಕಂಪೆನಿಗಳು ಯಂತ್ರಗಳನ್ನೇ ಖರೀದಿಸಿಬಿಡುತ್ತವೆ. ಬಾದಾಮಿ ಕೊಯ್ಲಿಗಾಗಿ ವೈವಿಧ್ಯಮಯ ಯಂತ್ರಗಳು ಬಳಕೆಯಲ್ಲಿವೆ. ಕೊಯ್ಲು, ಕಾಯಿ ಸಂಗ್ರಹ, ಸಿಪ್ಪೆ ಬಿಡಿಸುವುದು, ಕಸ, ಕಡ್ಡಿಗಳ ಬೇರ್ಪಡಿಸುವಿಕೆ, ಕಾಯಿಗಳ ಗ್ರೇಡಿಂಗ್ ಹೀಗೆ ಎಲ್ಲಕ್ಕೂ ಪ್ರತ್ಯೇಕ ಯಂತ್ರಗಳನ್ನೇ ಬಳಸುತ್ತಾರೆ. ಹಂಗ್ಸನ್ ನಟ್‌ನಂತಹ ಕಂಪೆನಿಗಳು, ವಿವಿಧ ಕೆಲಸಗಳನ್ನು ಮಾಡುವಂತಹ ಒಂದೇ ಯಂತ್ರವನ್ನು ಬಳಕೆ ಮಾಡುತ್ತವೆ. ಇಂಥ ಯಂತ್ರಗಳು ಬಾದಾಮಿ ಕಾಯಿ ಕೊಯ್ಲು ಮಾಡಿ, ಅವುಗಳನ್ನು ನೆಲಕ್ಕೆ ಬೀಳಿಸದೇ, ಹಿಂಬದಿಯ ಟ್ರೈಲರ್‌ಗಳಲ್ಲಿ ಸಂಗ್ರಹಿಸಿ, ಕಸ ಬೇರ್ಪಡಿಸಿ, ಸಿಪ್ಪೆ ತೆಗೆದು, ಸಂಸ್ಕರಣಾ ಘಟಕದ ಕ್ಯಾಬಿನ್‍ಗಳಲ್ಲಿ ತುಂಬಿಸುತ್ತದೆ.
  • ಗುಣಮಟ್ಟ, ಪೌಷ್ಟಿಕಾಂಶದಲ್ಲಿ ಕ್ಯಾಲಿಫೋರ್ನಿಯಾ ಬಾದಾಮಿ ಜಾಗತಿಕ ಮಟ್ಟದಲ್ಲಿ ಖ್ಯಾತಿಹೊಂದಿದೆ.
  • ಲೋಹ ಪರಿಶೋಧಕಗಳಿಂದ ತಪಾಸಣೆ, ಎಲೆಕ್ಟ್ರಾನಿಕ್ ಉಪಕರಣಗಳಿಂದ ಶುದ್ಧತೆ ಪರಿಶೀಲನೆ, ಕೆಟ್ಟು ಹೋಗಿರುವ ಅಥವಾ ಕಹಿ ರುಚಿ ಹೊಂದಿರುವ ಬಾದಾಮಿ ಕಾಯಿಗಳನ್ನು ಪತ್ತೆ ಹಚ್ಚುವುದು ಇತ್ಯಾದಿ, ಎಲ್ಲದಕ್ಕೂ ಯಾಂತ್ರಿಕ ಉಪಕರಣಗಳನ್ನು ಬಳಸುತ್ತಾರೆ.

ಬಾದಾಮಿ ಕೃಷಿ ಅಭಿವೃದ್ಧಿ

[ಬದಲಾಯಿಸಿ]
  • ಯು.ಎಸ್.ಎ.ಯಲ್ಲಿ ೨೦೦೩ರಲ್ಲಿ ೫.೫೦ ಲಕ್ಷ ಎಕರೆ ಇದ್ದ ಬೆಳೆ ೨೦೧೩ ರ ವೇಳೆಗೆ ೮.೧೦ ಲಕ್ಷ ಎಕರೆ ಆಗಿದೆ. ೧೧೭೩ ದಶಲಕ್ಷ ಪೌಂಡಿನಷ್ಟಿದ್ದ ಬಾದಾಮಿ ಉತ್ಪಾದನೆ ೨೦೧೩-೧೪ ರವೇಳೆಗೆ ೨೨೩೮ ದಶಲಕ್ಷ ಪೌಂಡಿನಷ್ಟಾಗಿದೆ. ಬಾದಾಮಿಯನ್ನು ಅಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಯು.ಎಸ್.ಎ. ಯಿಂದ ೨೦೦೬-೭ ರಲ್ಲಿ ೫೮ ದಶಲಕ್ಷ ಪೌಂಡಿನಷ್ಟು ಬಾದಾಮಿಯನ್ನು ಅಮದು ಮಾಡಿಕೊಳ್ಳತ್ತಿದ್ದ ಭಾರತ ೨೦೧೨-೧೩ ರಲ್ಲಿ ೧೨೫ ದಶಲಕ್ಷ ಪೌಂಡ್ ಆಮದು ಮಾಡಿಕೊಳ್ಳುತ್ತಿದೆ.

ಭಾರತದ ಅಮದು ೨೦೧೫

[ಬದಲಾಯಿಸಿ]

ಸುಮಾರು ೬೦,೦೦೦ ಟನ್ ಬಾದಾಮಿಯ ಶೇಕಡಾವಾರು.

ದೇಶದಿಂದ? ಕವಚಸಹಿತ-ಪ್ರಮಾಣ(ಶೇಕಡಾ) ಶಿ ದೇಶದಿಂದ ಕವಚ ರಹಿತ ಪ್ರಮಾಣ(ಶೇಕಡಾ)
ಅಮೇರಿಕ 81.3 ಅಮೇರಿಕ 33.7
ಆಸ್ಟ್ರೇಲಿಯ 18.1 ಇರಾನ್ 33.9
ಆಫ್ಘಾನಿಸ್ತಾನ 0.5 ಆಫ್ಘಾನಿಸ್ತಾನ 17.8
ಇತರೆ 0.1 ಸಿರಿಯಾ 10.7
ಆಸ್ಟ್ರೇಲಿಯ 3.2
ಉತ್ಪಾದನೆ (ಶೇಕಡಾವಾರು)
ಅಮೇರಿಕ 84.1 ಆಸ್ಟ್ರೇಲಿಯ 4.9
ಯೂರೋಪ್ 8.2 ಚಿಲಿ 0.9
ಟರ್ಕಿ 1.5 ಇತರೆ 3.2

[] || || || ಇತರೆ||0.7

ಉಲ್ಲೇಖಗಳು

[ಬದಲಾಯಿಸಿ]
  1. Karl-Franzens-Universität (Graz). "Almond (Prunus dulcis [Mill.] D. A. Webb.)". Archived from the original on 14 May 2011. Retrieved 10 April 2011.
  2. "Almond and bitter almond". from Quirk Books: www.quirkbooks.com. Archived from the original on 11 May 2011. Retrieved 8 April 2011.
  3. 02/08/2016:ಪ್ರಜಾವಾಣಿ


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: