ಹನಿ ನೀರಾವರಿ
ಹನಿ ನೀರಾವರಿ ಅಥವಾ ಡ್ರಿಪ್ ಇರಿಗೇಶನ್ ಎನ್ನುವುದು ಒಂದು ರೀತಿಯ ಸೂಕ್ಶ್ಮ- ನೀರಾವರಿ ವ್ಯವಸ್ಥೆಯಾಗಿದೆ. ಮಣ್ಣಿನ ಮೇಲ್ಮೈಯಿಂದ ಅಥವಾ ಮಣ್ಣಿನ ಮೇಲ್ಮೈ ಕೆಳಗೆ ಹೂತುಹೋಗಿರುವ ಸಸ್ಯಗಳ ಬೇರುಗಳಿಗೆ ನೀರನ್ನು ನಿಧಾನವಾಗಿ ತೊಟ್ಟಿಕ್ಕಲು ಅನುವು ಮಾಡಿಕೊಟ್ಟು, ನೀರು ಮತ್ತು ಪೋಷಕಾಂಶಗಳನ್ನು ಉಳಿಸುವ ಸಾಮರ್ಥ್ಯವನ್ನು ಹನಿ ನೀರಾವರಿ ವ್ಯವಸ್ಥೆಯು ಹೊಂದಿದೆ. ನೀರನ್ನು ನೇರವಾಗಿ ಸಸ್ಯಬೇರಿನ ಮೂಲ ವಲಯಕ್ಕೆ ತಲುಪಿಸುವುದು ಮತ್ತು ನೀರಿನ ಆವಿಯಾಗುವಿಕೆಯನ್ನು ಕಡಿಮೆ ಮಾಡುವುದು ಈ ನೀರಾವರಿ ಪದ್ಧತಿಯ ಮೂಲ ಗುರಿಯಾಗಿದೆ. ಹನಿ ನೀರಾವರಿ ವ್ಯವಸ್ಥೆಗಳು ಕವಾಟಗಳು, ಕೊಳವೆಗಳು, ಮತ್ತು ಹೊರಸೂಸುವ ಜಾಲಗಳ ಮೂಲಕ ನೀರನ್ನು ವಿತರಿಸುತ್ತವೆ. ಹನಿ ನೀರಾವರಿ ವ್ಯವಸ್ಥೆಯನ್ನು ಎಷ್ಟು ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ, ಸ್ಥಾಪಿಸಲಾಗಿದೆ ಮತ್ತು ನಿರ್ವಹಿಸಲಾಗಿದೆ ಎಂಬುದರ ಆಧಾರದ ಮೇಲೆ, ಈ ನೀರಾವರಿ ವ್ಯವಸ್ಥೆಯು ಮೇಲ್ಮೈ ನೀರಾವರಿ ಅಥವಾ ಸಿಂಪಡಿಸುವ ನೀರಾವರಿಯಂತಹ ಇತರ ನೀರಾವರಿ ವ್ಯವಸ್ಥೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ಇತಿಹಾಸ
[ಬದಲಾಯಿಸಿ]ಪ್ರಾಚೀನ ಚೀನಾ
[ಬದಲಾಯಿಸಿ]ಪ್ರಾಚೀನ ಕಾಲದಿಂದಲೂ ಹನಿ ನೀರಾವರಿ ವ್ಯವಸ್ಥೆಯು ಬಳಕೆಯಲ್ಲಿದೆ. ಕ್ರಿಸ್ತ ಪೂರ್ವ ೧ನೇ ಶತಮಾನದಲ್ಲಿ ಚೀನಾದಲ್ಲಿ ಬರೆಯಲಾದ ಫ್ಯಾನ್ ಶೆಂಗ್ಜಿ ಶು ಎಂಬ ಕೃಷಿ-ಸಂಬಂಧಿತ ಪುಸ್ತಕದಲ್ಲಿ, ಮೆರುಗುಗೊಳಿಸದ ಮಣ್ಣಿನ ಮಡಿಕೆಗಳಲ್ಲಿ ನೀರನ್ನು ತುಂಬಿಸಿ, ಮಣ್ಣಿನ ಕೆಳಗೆ ಈ ಮಡಿಕೆಗಳನ್ನು ಹೂಳುವುದರಿಂದಾಗುವ ಉಪಯೋಗಗಳನ್ನು ವಿವರಿಸಲಾಗಿದೆ. ಇದನ್ನು ಒಲ್ಲಾಸ್ ಎಂದು ಕರೆಯಲಾಗಿದ್ದು, ನೀರಾವರಿಯ ಒಂದು ಸಾಧನವಾಗಿ ಬಳಸಲಾಗುತ್ತದೆ.[೧][೨]
ಆಧುನಿಕ ಅಭಿವೃದ್ಧಿ
[ಬದಲಾಯಿಸಿ]ಜರ್ಮನಿ:ಉಪಮೇಲ್ಮೈ ಪೈಪ್
[ಬದಲಾಯಿಸಿ]ಆಧುನಿಕ ಹನಿ ನೀರಾವರಿಯು ೧೮೬೦ ರಲ್ಲಿ ಜರ್ಮನಿಯಲ್ಲಿ ಆರಂಭವಾಯಿತು. ಸಂಶೋಧಕರು ಸಂಯೋಜನೆಯ ನೀರಾವರಿ ಮತ್ತು ಒಳಚರಂಡಿ ವ್ಯವಸ್ಥೆಯನ್ನು ರಚಿಸಲು, ಮಣ್ಣಿನ ಪೈಪ್ ಅನ್ನು ಬಳಸಿಕೊಂಡು ಭೂಗರ್ಭ ನೀರಾವರಿಯ ಪ್ರಯೋಗವನ್ನು ಪ್ರಾರಂಭಿಸಿದರು.[೩]
ರಂಧ್ರ ಪೈಪ್
[ಬದಲಾಯಿಸಿ]ಸಂಶೋಧನೆಯು ನಂತರ ೧೯೨೦ರ ದಶಕದಲ್ಲಿ ರಂಧ್ರ ಪೈಪ್ ವ್ಯವಸ್ಥೆಗಳ ಅನ್ವಯವನ್ನು ಸೇರಿಸಲು ವಿಸ್ತರಿಸಲಾಯಿತು.[೪]
ಆಸ್ಟ್ರೇಲಿಯಾ:ಪ್ಲಾಸ್ಟಿಕ್ ಬಳಕೆ
[ಬದಲಾಯಿಸಿ]ಹನಿ ನೀರಾವರಿಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಲು ಮತ್ತು ಸಸ್ಯಗಳಿಗೆ ವಿತರಿಸಲು ಪ್ಲಾಸ್ಟಿಕ್ ಬಳಕೆಯನ್ನು ನಂತರ ಆಸ್ಟ್ರೇಲಿಯಾದಲ್ಲಿ ಹ್ಯಾನಿಸ್ ಥಿಲ್ ಎಂಬುವವರು ಅಭಿವೃದ್ಧಿಪಡಿಸಿದರು.[೫]
ಇಸ್ರೇಲ್:ಪ್ಲಾಸ್ಟಿಕ್ ಎಮಿಟರ್
[ಬದಲಾಯಿಸಿ]ಹನಿ ನೀರಾವರಿಯಲ್ಲಿ ಪ್ಲಾಸ್ಟಿಕ್ ಎಮಿಟರ್ ಬಳಕೆಯನ್ನು ಸಿಮ್ಟಾ ಬ್ಲಾಸ್ ಮತ್ತು ಅವರ ಮಗ ಯೆಶಾಯಾಹು ಅಭಿವೃದ್ದಿಪಡಿಸಿದ್ದಾರೆ.[೬] ಸಣ್ಣರಂಧ್ರಗಳ ಮೂಲಕ ನೀರನ್ನು ಬಿಡುಗಡೆ ಮಾಡುವಾಗ ರಂಧ್ರಗಳು ಇತರ ಸಣ್ಣಕಣಗಳಿಂದ ಸುಲಭವಾಗಿ ನಿರ್ಬಂಧಿಸಲ್ಪಡುತ್ತವೆ. ಇದರ ಬದಲಿಗೆ ಪ್ಲಾಸ್ಟಿಕ್ ಎಮಿಟರ್ ಗಳನ್ನು ಉಪಯೋಗಿಸಿ, ನೀರಿನ ವೇಗವನ್ನು ನಿಧಾನಗೊಳಿಸಲು ಘರ್ಷಣೆಯನ್ನು ಬಳಿಸಿ, ನೀರನ್ನು ದೊಡ್ಡದಾದ ಮತ್ತು ಉದ್ದವಾದ ಪೈಪ್‍ಗಳಲ್ಲಿ ಬಿಡುಗಡೆಗೊಳಿಸುವಂತೆ ಮಾಡಿದರು. ಈ ಪ್ರಕಾರದ ಮೊದಲ ಪ್ರಾಯೋಗಿಕ ವ್ಯವಸ್ಥೆಯನ್ನು ೧೯೫೯ರಲ್ಲಿ ಬ್ಲಾಸ್ ಸ್ಥಾಪಿಸಿದರು. ನಂತರ ಅವರು ಕಿಬ್ಬುಟ್ಜ್ ಹ್ಯಾಟ್ಜೆರಿಮ್ ಜೊತೆಗೆ ನೇಟಾಫಿಮ್ ಎಂಬ ನೀರಾವರಿ ಕಂಪನಿಯನ್ನು ರಚಿಸುವಲ್ಲಿ ಪಾಲುದಾರರಾದರು. ಒಟ್ಟಾಗಿ ಅವರು ಮೊದಲ ಪ್ರಾಯೋಗಿಕ ಮೇಲ್ಮೈ ಹನಿ ನೀರಾವರಿ ಹೊರಸೂಸುವಿಕೆಯನ್ನು ಅಭಿವೃದ್ದಿಪಡಿಸಿ, ಪೇಟೆಂಟ್ ಪಡೆದರು.[೩][೭]
ಯುಎಸ್:ಡ್ರಿಪ್ ಟೇಪ್
[ಬದಲಾಯಿಸಿ]ಯುನೈಟೆಡ್ ಸ್ಟೇಟ್‍ನಲ್ಲಿ,ಡ್ಯೂ ಹೋಸ್ ಎಂದು ಕರೆಯಲ್ಪಡುವ ಮೊದಲ ಡ್ರಿಪ್ ಟೇಪ್ ಅನ್ನು ೧೯೬೦ರ ದಶಕದ ಆರಂಭದಲ್ಲಿ ಚಾಪಿನ್ ವಾಟರ್ ಮಾಟಿಕ್ಸ್ ನ ರಿಚರ್ಡ್ ಚಾಪಿನ್ ಅಭಿವೃದ್ಧಿಪಡಿಸಿದರು.[೮][೯][೧೦] ಡ್ರಿಪ್ ಟೇಪ್ ನ ಆವಿಷ್ಕಾರದಿಂದಾಗಿ, ಡ್ರಿಪ್ ಟೇಪ್ಅನ್ನು ಬಳಸಿ, ದೊಡ್ಡಮಟ್ಟದಲ್ಲಿ ಪ್ಲಾಸ್ಟ್ರೋ ನೀರಾವರಿಯ ಮೂಲಕ ೧೯೮೭ರಲ್ಲಿ ಟಿ-ಟೇಪ್ ಅನ್ನು ಪರಿಚಯಿಸಲಾಯಿತು. ಇದು ಮೊದಲ ಸ್ಲಿಟ್ ಔಟ್ಲೆಟ್ ಮತ್ತು ಲ್ಯಾಮಿನಾರ್ ಪ್ಲೋ ಟ್ಯ್ರಾಕ್ ಅನ್ನು ಹೊಂದಿತ್ತು. ಕ್ರಮೇಣ ಪ್ರಕ್ಶುಬ್ಧ ಹರಿವನ್ನು ನಿಯಂತ್ರಿಸುವ ಹರಿವಿನ ಟ್ರ್ಯಾಕ್ ಆಗಿ ವಿಕಸನಗೊಂಡಿತು. ಚಾಪಿನ್ ವಾಟರ್ ಮಾಟಿಕ್ಸ್ ಅನ್ನು ೨೦೦೬ರಲ್ಲಿ ಜೈನ್ ನೀರಾವರಿ ಸ್ವಾಧೀನಪಡಿಸಿಕೊಂಡಿತು ಮತ್ತು ಅದು ಯುನೈಟೆಡ್ ಸ್ಟೇಟ್‍ನ ಅಂಗಸಂಸ್ಥೆಯಾದ ಜೈನ್ ನೀರಾವರಿ ಇಂಕ್, ಯುಎಸ್‍ಎ ಯ ಅಡಿಯಲ್ಲಿದೆ.[೧೧][೧೨][೧೩]
೧೯೬೦ರ ದಶಕದ ಉತ್ತರಾರ್ಧದಲ್ಲಿ ಕ್ಯಾಲಿಪೋರ್ನಿಯಾದಲ್ಲಿ ಇದನ್ನು ಮೊದಲು ಪರಿಚಯಿಸಲಾಯಿತು. ೧೯೮೮ರ ವೇಳೆಗೆ ಕೇವಲ ೫% ನೀರಾವರಿ ಭೂಮಿಯಲ್ಲಿ ಈ ವ್ಯವಸ್ಥೆಯನ್ನು ಬಳಸಲಾಯಿತು. ೨೦೧೦ರ ಹೊತ್ತಿಗೆ, ಕ್ಯಾಲಿಪೋರ್ನಿಯಾದಲ್ಲಿ ೪೦% ನೀರಾವರಿ ಭೂಮಿಯಲ್ಲಿ ಈ ವ್ಯವಸ್ಥೆಯನ್ನು ಬಳಸಲಾಯಿತು.[೧೪]
ಅನುಕೂಲಗಳು ಮತ್ತು ಅನಾನುಕೂಲಗಳು
[ಬದಲಾಯಿಸಿ]ಅನುಕೂಲಗಳು
[ಬದಲಾಯಿಸಿ]- ಗೊಬ್ಬರ ಮತ್ತು ಪೋಷಕಾಂಶಗಳ ನಷ್ಟವನ್ನು ಕಡಿಮೆಗೊಳಿಸುತ್ತದೆ.
- ಮರುಬಳಕೆ ಮಾಡದ, ಕುಡಿಯಲು ಯೋಗ್ಯವಲ್ಲದ ನೀರನ್ನು ಸುರಕ್ಷಿತವಾಗಿ ಬಳಸಬಹುದು.
- ಮಣ್ಣಿನ ಸವಕಳಿಯನ್ನು ಕಡಿಮೆಗೊಳಿಸುತ್ತದೆ.[೧೫]
- ಕಳೆಗಿಡಗಳ ಬೆಳವಣಿಗೆಯನ್ನು ಕಡಿಮೆಗೊಳಿಸುತ್ತದೆ.
- ಕಾರ್ಮಿಕರ ವೆಚ್ಚವು ಇತರ ನೀರಾವರಿ ವಿಧಾನಗಳಿಗಿಂತ ಕಡಿಮೆಯಾಗಿದೆ.
- ರೋಗದ ಅಪಾಯವನ್ನು ಕಡಿಮೆಮಾಡುತ್ತದೆ.[೧೬]
ಅನಾನುಕೂಲಗಳು
[ಬದಲಾಯಿಸಿ]- ಹನಿ ನೀರಾವರಿಗಾಗಿ ಬಳಸುವ ಕೊಳವೆಗಳ ಮೇಲೆ ಸೂರ್ಯನ ಬೆಳಕಿನ ಪರಿಣಾಮದಿಂದ ಅದರ ಜೀವಿತಾವಧಿ ಕಡಿಮೆಯಾಗುತ್ತದೆ.
- ಸರಿಯಾಗಿ ಅಳವಡಿಸದಿದ್ದರೆ ನೀರು ಮತ್ತು ಸಮಯ ವ್ಯರ್ಥಗೊಳ್ಳುತ್ತದೆ.
- ಪಿವಿಸಿ ಪೈಪ್‍ಗಳು ಸುಲಭವಾಗಿ ಹಾನಿಗೊಳದಗಾಗುತ್ತವೆ.
ಉಪಯೋಗಗಳು
[ಬದಲಾಯಿಸಿ]ಹನಿ ನೀರಾವರಿಯನ್ನು ತೋಟಗಳು, ವಾಣಿಜ್ಯ ಹಸಿರು ಮನೆಗಳು ಮತ್ತು ವಸತಿ ತೋಟಗಳಲ್ಲಿ ಬಳಸಲಾಗುತ್ತದೆ. ಹನಿ ನೀರಾವರಿಯನ್ನು ತೀವ್ರವಾದ ನೀರಿನ ಕೊರತೆಯುಳ್ಳ ಪ್ರದೇಶಗಳಲ್ಲಿ ಮತ್ತು ತೆಂಗಿನಕಾಯಿ, ದ್ರಾಕ್ಷಿಬಳ್ಳಿಗಳು, ಬಾಳೆಹಣ್ಣುಗಳು, ಕಬ್ಬು, ಹತ್ತಿ, ಜೋಳ ಮತ್ತು ಟೊಮೆಟೊಗಳಂತಹ ತರಕಾರಿ-ಹಣ್ಣುಗಳ ಗಿಡಮರಗಳನ್ನು ಬೆಳೆಸುವ ಪ್ರದೇಶಗಳಲ್ಲಿ ವ್ಯಾಪಕವಾಗಿ ಅಳವಡಿಸಿಕೊಳ್ಳುತ್ತಾರೆ.[೧೭]
ಹನಿ ನೀರಾವರಿ ಅಳವಡಿಸುವಾಗ ತಿಳಿದಿರಬೇಕಾದ ವಿಷಯ
[ಬದಲಾಯಿಸಿ]- ಹನಿ ನೀರಾವರಿ ಅಳವಡಿಸಿಕೊಳ್ಳುವಾಗ ಪಂಪಿನ ಕ್ಷಮತೆ ಸರಿಯಾಗಿರಬೇಕು.
- ತೆರೆದ ಬಾವಿಯ ನೀರಾದರೆ ಅದರ ಗುಣಮಟ್ಟವನ್ನು ತಿಳಿದಿರಬೇಕು.
- ಗುರುತ್ವ ಶಕ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರಬೇಕು.
ಉಲ್ಲೇಖಗಳು
[ಬದಲಾಯಿಸಿ]- ↑ s:zh:氾勝之書 以三斗瓦甕埋著科中央,令甕口上與地平。盛水甕中,令滿。
- ↑ Bainbridge, David A (June 2001). "Buried clay pot irrigation: a little known but very efficient traditional method of irrigation". Agricultural Water Management. 48 (2): 79–88. doi:10.1016/S0378-3774(00)00119-0.
- ↑ ೩.೦ ೩.೧ R. Goyal, Megh (2012). Management of drip/trickle or micro irrigation. Oakville, California: Apple Academic Press. p. 104. ISBN 978-1926895123.
- ↑ name="irrigation.learnabout.info"
- ↑ name="irrigation.learnabout.info"
- ↑ "The History of Drip Irrigation".
- ↑ name="irrigation.learnabout.info"
- ↑ US 4807668, Roberts, James C., "Drip irrigation tape", published 1989-02-28
- ↑ "US Patent # 5,387,307. Drip irrigation tape and method of manufacture - Patents.com". www.patents.com. Retrieved 30 September 2017.
- ↑ US 4047995, Leal-Diaz, Jaime, "Hoses for irrigation by dripping and the like and the process to manufacture the same", published 1977-09-13
- ↑ "Jain Irrigation". www.JainsUSA.com. Retrieved 19 December 2017.
- ↑ "Jain Irrigation buys Chapin for $6 mn". Business Standard India. Press Trust of India. 3 May 2006. Retrieved 30 September 2017.
- ↑ "New AG International – Jain Irrigation Announces Acquisition of Chapin Watermatics Inc". www.newaginternational.com (in ಬ್ರಿಟಿಷ್ ಇಂಗ್ಲಿಷ್). Archived from the original on 30 ಸೆಪ್ಟೆಂಬರ್ 2017. Retrieved 30 September 2017.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Zilberman, Taylor; David, Rebecca (26 July 2015). "The Diffusion of Process Innovation: The Case of Drip Irrigation in California" (PDF).
- ↑ https://vijaykarnataka.com/news/chamarajnagara/drip-irrigation-increase-yiedl/articleshow/50357100.cms
- ↑ https://www.thehindu.com/news/cities/Tiruchirapalli/drip-irrigation-gaining-ground-among-farmers/article7148745.ece
- ↑ https://vijaykarnataka.com/news/chamarajnagara/drip-irrigation-increase-yiedl/articleshow/50357100.cms