ವಿಷಯಕ್ಕೆ ಹೋಗು

ಟೊಮೇಟೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೆಂಪ್ಲೇಟು:ಗೂರೆ ಹಣ್ಣು

Tomato
Cross-section and full view of a hothouse (greenhouse-grown) tomato
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
S. lycopersicum
Binomial name
Solanum lycopersicum[೧][೨]
Synonyms

Lycopersicon lycopersicum (L.) H. Karst.
Lycopersicon esculentum Mill.[೩]

ಟೊಮೇಟೊ/ಗೂರೆ ಹಣ್ಣು (ಸೊಲ್ಯಾನಮ್ ಲೈಕೋಪರ್ಸಿಕಮ್) ಸೋಲನೇಸಿ ಕುಟುಂಬಕ್ಕೆ ಸೇರಿದ ಒಂದು ಗಿಡ. ಮೂಲ - ಮಧ್ಯ ಅಮೇರಿಕ ಹಾಗೂ ದಕ್ಷಿಣ ಅಮೇರಿಕ. ಇದು ಅಲ್ಪಾಯುಶಿ ಗಿಡ - ವರ್ಷಕ್ಕೊಮ್ಮೆ ಬೆಳೆಯಲಾಗುತ್ತದೆ. ೧ - ೩ ಮೀ ಎತ್ತರ ಬೆಳೆಯುವ ಈ ಗಿಡ ತೆಳು ಕಾಂಡವನ್ನು ಹೊಂದಿದ್ದು ಉಳಿದ ಗಿಡಗಳ ಮೇಲೆ ಸುಲಭವಾಗಿ ಹರಡಿಕೊಳ್ಳುತ್ತದೆ. ಇದರ ಎಲೆಗಳು ೧೦-೨೫ ಸೆ ಮೀ ಉದ್ದವಿದ್ದು, ಎಲೆಗಳ ಮಧ್ಯೆ ತೆಳು ಪದರಗಳಿದ್ದು, ೮ -೯ಸೆ ಮೀ ನಷ್ಟು ಅಗಲವುಳ್ಳ ೫ - ೯ ಎಲೆಗಳ ಗುಂಪಿನಂತೆ ಕಾಣಸಿಗುತ್ತವೆ.

ಟೊಮೇಟೊ ಎಂಬ ಪದ Nahuatl ಭಾಷೆಯಿಂದ ಉಗಮಿಸಿದ ಪದ.

ಇತಿಹಾಸ

[ಬದಲಾಯಿಸಿ]

ಆರಂಭಿಕ ಇತಿಹಾಸ

[ಬದಲಾಯಿಸಿ]
ತರಕಾರಿ ಬೆಳೆಗಳ ಮಧ್ಯೆ ಟೊಮೇಟೊ

ಆಂಡ್ರ್ಯೂ ಎಫ್ ಸ್ಮಿತ್ ರವರ "ದಿ ಟೊಮೇಟೋ ಇನ್ ಅಮೇರಿಕ ಪುಸ್ತಕದ ಪ್ರಕಾರ ಟೊಮೇಟೋ ದಕ್ಷಿಣ ಅಮೇರಿಕದ ಎತ್ತರ ಪ್ರದೇಶಗಳಿಂದ ಬಂದದ್ದು. ಆದರೆ ಸ್ಮಿತ್ ಸ್ಪ್ಯಾನಿಶ್ ದಕ್ಷಿಣ ಅಮೇರಿಕದಲ್ಲಿ ಕಾಲಿಡುವ ಮುಂಚೆ ಟೋಮೇಟೋ ಕೃಷಿ ನಡೆಯುತ್ತಿದ್ದ ಬಗ್ಗೆ ಯಾವುದೇ ಪುರಾವೆಯೂ ಇಲ್ಲವೆಂದು ಕೂಡ ಬರೆದಿದ್ದರು. ಆದರೆ ಇತರ ಸಂಶೋಧಕರು ಈ ವಿಷಯವನ್ನು ಅಲ್ಲಗೆಳೆದಿದ್ದಾರೆ. ಪೆರುವಿನಲ್ಲಿ ಈಗ ಕೃಷಿ ಮಾಡಲಾಗುವ ಹಣ್ಣುಗಳಿಗೂ ಹೆಚ್ಚಿನ ಐತಿಹಾಸಿಕ ಪುರಾವೆ ಇಲ್ಲದ್ದರಿಂದ. ಹೆಚ್ಚಿನ ಕೃಷಿ ಜ್ಞಾನ ಯೂರೋಪಿಯನ್ನರು ಬಂದ ಮೇಲೆ ನಶಿಸಿ ಹೋಯಿತಂತೆ.

ಅದೇನಿದ್ದರೂ, ಟೊಮೇಟೊ ಹೇಗೋ ದಕ್ಷಿಣ ಅಮೇರಿಕಕ್ಕೆ ಹೊರಗಿನಿಂದ ಬಂದದ್ದು ಎಂದು ಹೇಳಲಾಗುತ್ತದೆ. ಮಾಯಾ ಮತ್ತು ಇತರ ಪಂಗಡಗಳ ಜನ ಈ‌ ಹಣ್ಣನ್ನು ಅಡುಗೆಯಲ್ಲುಪಯೋಗಿಸುತ್ತಿದ್ದರಂತೆ. ದಕ್ಷಿಣ ಮೆಕ್ಸಿಕೊದಲ್ಲಿ ೧೬ನೇ ಶತಮಾನದಲ್ಲಿ ಇದನ್ನು ಬೆಳೆಸುತ್ತಿದ್ದರಂತೆ.

ಟೊಮೆಟೊ (ಉಚ್ಚಾರಣೆಯನ್ನು ನೋಡಿ) ಎಂಬುದು ಸಾಮಾನ್ಯವಾಗಿ ಟೊಮ್ಯಾಟೊ ಸಸ್ಯ ಎಂದು ಕರೆಯಲ್ಪಡುವ ಸಸ್ಯ ಸೊಲೊನಮ್ ಲೈಕೊಪೆರ್ಸಿಕ್ಯುಮ್ [2] ಎಂಬ ಖಾದ್ಯ, ಹೆಚ್ಚಾಗಿ ಕೆಂಪು, ಹಣ್ಣು / ಬೆರ್ರಿ. ಈ ಸಸ್ಯವು ನೈಟ್ಸೇಡ್ ಕುಟುಂಬದ ಸೋಲನೇಸಿಗೆ ಸೇರಿದೆ. [1] ಈ ಜಾತಿಗಳು ಪಶ್ಚಿಮ ದಕ್ಷಿಣ ಅಮೆರಿಕದಲ್ಲಿ ಹುಟ್ಟಿಕೊಂಡಿವೆ. [2] [3] ನಾವಾಟಲ್ (ಅಜ್ಟೆಕ್ ಭಾಷೆಯ) ಪದ ಟೊಮಾಟ್ ಸ್ಪ್ಯಾನಿಷ್ ಪದ "ಟೊಮೆಟ್" ಗೆ ಕಾರಣವಾಯಿತು, ಇದರಿಂದಾಗಿ ಇಂಗ್ಲಿಷ್ ಪದ ಟೊಮೆಟೊ ಹುಟ್ಟಿಕೊಂಡಿತು. [3] [4] ಕೃಷಿಗೊಳಗಾದ ಆಹಾರವಾಗಿ ಇದರ ಬಳಕೆಯು ಮೆಕ್ಸಿಕೊದ ಸ್ಥಳೀಯ ಜನರ ಜೊತೆ ಹುಟ್ಟಿರಬಹುದು. [2] [5] ಅಮೆರಿಕದ ಸ್ಪ್ಯಾನಿಷ್ ವಸಾಹತುಶಾಹಿ ಸಂದರ್ಭದಲ್ಲಿ ಅಜ್ಟೆಕ್ ಜನರೊಂದಿಗೆ ತಮ್ಮ ಸಂಪರ್ಕದಿಂದ ಸ್ಪ್ಯಾನಿಶ್ ಟೊಮೆಟೊವನ್ನು ಕಂಡುಹಿಡಿದ ನಂತರ ಯುರೋಪ್ಗೆ ಮತ್ತು ಅಲ್ಲಿಂದ, 16 ನೇ ಶತಮಾನದಲ್ಲಿ ಯುರೋಪಿಯನ್ ವಸಾಹತುಶಾಹಿ ಪ್ರಪಂಚದ ಇತರ ಭಾಗಗಳಿಗೆ ತಂದಿತು. [2]

ಅನೇಕ ಭಕ್ಷ್ಯಗಳು, ಸಾಸ್ಗಳು, ಸಲಾಡ್ಗಳು ಮತ್ತು ಪಾನೀಯಗಳಲ್ಲಿನ ಒಂದು ಅಂಶವಾಗಿ ಕಚ್ಚಾ ಸೇರಿದಂತೆ ಟೊಮೇಟೊ ವೈವಿಧ್ಯಮಯ ರೀತಿಯಲ್ಲಿ ಸೇವಿಸಲಾಗುತ್ತದೆ. ಟೊಮೆಟೊಗಳು ಸಸ್ಯವಿಜ್ಞಾನದ ಬೆರ್ರಿ-ರೀತಿಯ ಹಣ್ಣುಗಳಾಗಿರುತ್ತವೆಯಾದರೂ, ಅವುಗಳನ್ನು ಪಾಕಶಾಲೆಯ ತರಕಾರಿಗಳನ್ನು ರುಚಿಕರವಾದ ಊಟಕ್ಕೆ ಅಥವಾ ಘಟಕಾಂಶದ ಆಹಾರವಾಗಿ ಭಕ್ಷ್ಯವಾಗಿ ಪರಿಗಣಿಸಲಾಗುತ್ತದೆ. [3] ವರ್ಷವಿಡೀ ಅದರ ಉತ್ಪಾದನೆಗೆ ಹಸಿರುಮನೆಗಳನ್ನು ಅನುಮತಿಸುವ ಮೂಲಕ ಹಲವಾರು ವಿಧದ ಟೊಮೆಟೊಗಳನ್ನು ವ್ಯಾಪಕವಾಗಿ ಪ್ರಪಂಚದಾದ್ಯಂತ ಸಮಶೀತೋಷ್ಣ ಹವಾಮಾನಗಳಲ್ಲಿ ಬೆಳೆಯಲಾಗುತ್ತದೆ. ಈ ಸಸ್ಯಗಳು ಸಾಮಾನ್ಯವಾಗಿ 1-3 ಮೀಟರ್ (3-10 ಅಡಿ) ಎತ್ತರಕ್ಕೆ ಬೆಳೆಯುತ್ತವೆ ಮತ್ತು ವ್ಯಾಪಿಸಿರುವ ದುರ್ಬಲ ಕಾಂಡವನ್ನು ಹೊಂದಿರುತ್ತವೆ. [2] ಇದು ತನ್ನ ಸ್ಥಳೀಯ ಆವಾಸಸ್ಥಾನದಲ್ಲಿ ದೀರ್ಘಕಾಲಿಕ, ಮತ್ತು ವಾರ್ಷಿಕ ಬೆಳೆಸಲಾಗುತ್ತದೆ. 0.5-4 ಇಂಚುಗಳಷ್ಟು (1.3-10.2 ಸೆಂ.ಮೀ.) ಅಗಲ ಶ್ರೇಣಿಯೊಂದಿಗೆ ತಳಿಯ ಗಾತ್ರದ ಪ್ರಕಾರ ಹಣ್ಣು ಗಾತ್ರವು ಬದಲಾಗುತ್ತದೆ. [2]

ಹೆಸರುಗಳು

ಟೊಮ್ಯಾಟೋಸ್

ವ್ಯುತ್ಪತ್ತಿ

"ಟೊಮೆಟೊ" ಎಂಬ ಪದವು ಸ್ಪ್ಯಾನಿಷ್ ಟೊಮೆಟ್ನಿಂದ ಬಂದಿದೆ, ಇದು ನಾಹೋವಾರ್ಡ್ ವರ್ಡ್ ಟೊಮಾಟ್ಲ್ನಿಂದ [ಟೊಮೆಟ್] ಬರುತ್ತದೆ, ಇದರ ಅರ್ಥ "ಊತ ಹಣ್ಣು". [4] ಸ್ಥಳೀಯ ಮೆಕ್ಸಿಕನ್ ಟೊಮೆಟಿಲೋ ಟೊಮೆಟ್ (ನಹೌತ್ನಲ್ಲಿ: ಟೊಮಾತ್ಲ್ ಉಚ್ಚಾರಣೆ (ಸಹಾಯ · ಮಾಹಿತಿ), "ಕೊಬ್ಬು ನೀರು" ಅಥವಾ "ಕೊಬ್ಬು ವಿಷಯ" ಎಂದರ್ಥ). [6] ಅಜ್ಟೆಕ್ಗಳು ​​ಆಂಡಿಯನ್ ಫಲವನ್ನು ದೊಡ್ಡದಾದ, ಸಿಹಿಯಾದ ಮತ್ತು ಕೆಂಪು ಎಂದು ಬೆಳೆಸಲು ಪ್ರಾರಂಭಿಸಿದಾಗ, ಅವರು ಹೊಸ ಜಾತಿಜಾತಿಗಳ (ಅಥವಾ ಜಟೊಮೆಟ್ಸ್) (ಉಚ್ಚಾರಣ)("ಹೊಕ್ಕುಳಿನಿಂದ ಕೊಬ್ಬು" ಅಥವಾ "ಹೊಕ್ಕುಳಿನೊಂದಿಗೆ ಕೊಬ್ಬಿನ ನೀರು" ಎಂದು ಕರೆಯುತ್ತಾರೆ) . ವೈಜ್ಞಾನಿಕ ಪ್ರಭೇದಗಳು ಎಪಿಥೆಟ್ಲಿಕೋಪರ್ಸಿಕಮ್ ಅಕ್ಷರಶಃ ಲ್ಯಾಟಿನ್ ಭಾಷೆಯಿಂದ 1753 ರಲ್ಲಿ ಸ್ಪೆಸಿಸ್ ಪ್ಲಾಂಟಾರಮ್ ಎಂಬ ಪುಸ್ತಕದಲ್ಲಿ "ವುಲ್ಫ್ಪೀಚ್" ಎಂದು ಅರ್ಥೈಸಲ್ಪಡುತ್ತವೆ, ಇಲ್ಲಿ ತೋಳವು ಲಿಕೊ ಮತ್ತು ಪೀಚ್ನಿಂದ ಬಂದದ್ದು ಪರ್ಸಿಕಮ್.

ಉಚ್ಚಾರಣೆ

"ಟೊಮೆಟೋ" ನ ಸಾಮಾನ್ಯ ಉಚ್ಚಾರಣೆಗಳು / tmeto / (ಸಾಮಾನ್ಯವಾಗಿ ಅಮೆರಿಕನ್ ಇಂಗ್ಲಿಷ್ನಲ್ಲಿ) ಮತ್ತು / tometo / (ಸಾಮಾನ್ಯವಾಗಿ ಬ್ರಿಟಿಷ್ ಇಂಗ್ಲಿಷ್ನಲ್ಲಿ). [7] ಇರಾ ಮತ್ತು ಜಾರ್ಜ್ ಗೆರ್ಶ್ವಿನ್ ಅವರ 1937 ಹಾಡಿನ "ಲೆಟ್ಸ್ ಕಾಲ್ ದಿ ಹೋಲ್ ಥಿಂಗ್ ಆಫ್" ("ನೀವು ಇಷ್ಟಪಡುತ್ತೀರಾ / pteto / ಮತ್ತು ನಾನು ಇಷ್ಟಪಡುತ್ತೇನೆ / təmeɪtoʊ / ಮತ್ತು ನಾನು ಇಷ್ಟಪಡುತ್ತೇನೆ / tmto /") ಎಂಬ ಶಬ್ದದ ದ್ವಂದ್ವ ಉಚ್ಚಾರಣೆಗಳು ಶಾಶ್ವತವಾಗಿವೆ. ಉಚ್ಚಾಟನೆಯ ವಿವಾದಗಳನ್ನು nitpicking ಒಂದು ಸಂಕೇತವಾಗಿದೆ. [ಸಾಕ್ಷ್ಯಾಧಾರ ಬೇಕಾಗಿದೆ] ಈ ಸಾಮರ್ಥ್ಯದಲ್ಲಿ, ಇದು ಸಹ ಅಮೆರಿಕನ್ ಮತ್ತು ಬ್ರಿಟಿಷ್ ಗ್ರಾಮ್ಯ ಪದವಾಗಿದೆ: "/ tmeto tmto /" ಎಂದು ಹೇಳಿದಾಗ ಎರಡು ಆಯ್ಕೆಗಳು "ಏನು ವ್ಯತ್ಯಾಸ?" ಅಥವಾ "ಅದು ನನಗೆ ಒಂದೇ ಆಗಿರುತ್ತದೆ". [ಸಾಕ್ಷ್ಯಾಧಾರ ಬೇಕಾಗಿದೆ]

ಹಣ್ಣು ವಿರುದ್ಧ ತರಕಾರಿ ಸಂದರ್ಭವನ್ನು ಅವಲಂಬಿಸಿ ಟೊಮ್ಯಾಟೊ ಹಣ್ಣು ಅಥವಾ ತರಕಾರಿ ಎಂದು ಪರಿಗಣಿಸಲಾಗುತ್ತದೆ. ಎನ್ಸೈಕ್ಲೋಪೀಡಿಯಾ ಬ್ರಿಟಾನಿಕ ಪ್ರಕಾರ, ಟೊಮೆಟೊಗಳು ಕಿರಾಣಿ ಅಂಗಡಿಯಲ್ಲಿ ತರಕಾರಿಯಾಗಿ (ರುಚಿ) ಮತ್ತು ಪೌಷ್ಟಿಕಾಂಶದ ಉದ್ದೇಶದಿಂದ ಲೇಬಲ್ ಮಾಡಲಾದ ಹಣ್ಣುಗಳಾಗಿವೆ. [3] ಟೊಮ್ಯಾಟೋಸ್ ಸರಳ ಮತ್ತು ಹಲ್ಲೆ ಸಸ್ಯೀಯವಾಗಿ, ಒಂದು ಟೊಮೆಟೊ ಒಂದು ಹೂಬಿಡುವ ಸಸ್ಯವಾದ ಅದರ ಬೀಜಗಳೊಂದಿಗೆ ಅಂಡಾಶಯವನ್ನು ಒಳಗೊಂಡಿರುವ ಹಣ್ಣು, ಬೆರ್ರಿ. ಆದಾಗ್ಯೂ, ಟೊಮೆಟೊವನ್ನು "ಪಾಕಶಾಲೆಯ ತರಕಾರಿ" ಎಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದು ಪಾಕಶಾಲೆಯ ಹಣ್ಣುಗಳಿಗಿಂತ ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುತ್ತದೆ; ಇದು ಸಿಹಿಯಾಗಿ ಬದಲಾಗಿ ಸಲಾಡ್ ಅಥವಾ ಆಹಾರದ ಮುಖ್ಯ ಕೋರ್ಸ್ ಭಾಗವಾಗಿ ಕಾರ್ಯನಿರ್ವಹಿಸುತ್ತದೆ. ಈ ದ್ವಂದ್ವಾರ್ಥತೆಯಿಂದ ಟೊಮ್ಯಾಟೋಸ್ ಏಕೈಕ ಆಹಾರ ಮೂಲವಲ್ಲ; ಬೆಳ್ಳಿಯ ಮೆಣಸುಗಳು, ಸೌತೆಕಾಯಿಗಳು, ಹಸಿರು ಬೀನ್ಸ್, ಬಿಳಿಬದನೆಗಳು, ಆವಕಾಡೊಗಳು, ಮತ್ತು ಎಲ್ಲಾ ರೀತಿಯ ಕುಂಬಳಕಾಯಿಗಳು (ಕುಂಬಳಕಾಯಿಯನ್ನು ಹೋಲುವ ಚೀನೀಕಾಯಿ ಮತ್ತು ಕುಂಬಳಕಾಯಿಗಳು ಮುಂತಾದವು) ಎಲ್ಲಾ ಸಸ್ಯೀಯ ಹಣ್ಣುಗಳು, ಆದರೆ ತರಕಾರಿಗಳಾಗಿ ಬೇಯಿಸಲಾಗುತ್ತದೆ. ಇದು ಯುನೈಟೆಡ್ ಸ್ಟೇಟ್ಸ್ನಲ್ಲಿ ಕಾನೂನು ವಿವಾದಕ್ಕೆ ಕಾರಣವಾಗಿದೆ. 1887 ರಲ್ಲಿ, ಯು.ಎಸ್ ಸುಂಕದ ಕಾನೂನುಗಳು ತರಕಾರಿಗಳ ಮೇಲೆ ಕರ್ತವ್ಯವನ್ನು ವಿಧಿಸಿದವು, ಆದರೆ ಹಣ್ಣುಗಳ ಮೇಲೆ ಅಲ್ಲ, ಟೊಮೆಟೊದ ಸ್ಥಿತಿ ಕಾನೂನುಬದ್ಧ ಪ್ರಾಮುಖ್ಯತೆಗೆ ಕಾರಣವಾಯಿತು. ಅಮೆರಿಕದ ಸುಪ್ರೀಂ ಕೋರ್ಟ್ ಮೇ 10, 1893 ರಂದು ಈ ವಿವಾದವನ್ನು ಟೊಮೆಟೊ ಒಂದು ತರಕಾರಿ ಎಂದು ಘೋಷಿಸಿ, ಜನಪ್ರಿಯ ವ್ಯಾಖ್ಯಾನದ ಆಧಾರದ ಮೇಲೆ ತರಕಾರಿಗಳನ್ನು ವರ್ಗೀಕರಣದಿಂದ ವರ್ಗೀಕರಿಸುತ್ತದೆ ಎಂದು ಹೇಳುವ ಮೂಲಕ ಅವರು ಸಾಮಾನ್ಯವಾಗಿ ಭೋಜನ ಮತ್ತು ಸಿಹಿಭಕ್ಷ್ಯದೊಂದಿಗೆ ಸೇವಿಸಲ್ಪಡುತ್ತಾರೆ (ನಿಕ್ಸ್ ವಿ. ಹೆಡೆನ್ (149 ಯುಎಸ್. 304)). ಈ ಪ್ರಕರಣದ ಹಿಡುವಳಿ 1883 ರ ಸುಂಕದ ವ್ಯಾಖ್ಯಾನಕ್ಕೆ ಮಾತ್ರ ಅನ್ವಯಿಸುತ್ತದೆ, ಮತ್ತು ಸಸ್ಯವು ಟೊಮೆಟೊವನ್ನು ಸಸ್ಯವಿಜ್ಞಾನ ಅಥವಾ ಇತರ ಉದ್ದೇಶಗಳಿಗಾಗಿ ಪುನಃ ಜೋಡಿಸಲು ಉದ್ದೇಶಿಸಿಲ್ಲ.

ಸ್ಪೇಯ್ನ್ ನಲ್ಲಿ

[ಬದಲಾಯಿಸಿ]

ದಕ್ಷಿಣ ಅಮೇರಿಕವನ್ನು ಸ್ಪೇಯ್ನಿನವರು ಆಕ್ರಮಿಸಿದಾಗ, ಕೆರಿಬ್ಬಿಯನ್ನ ಅವರ ಕಾಲೋನಿಗಳಲ್ಲಿ ಟೊಮೇಟೊ ವಿತರಿಸಿದರು. ಫಿಲಿಪ್ಪೀನ್ಸ್ ದೇಶಕ್ಕೆ ಕೂಡ ಇದನ್ನು ತೆಗೆದುಕೊಂಡು ಹೋದರು. ಅಲ್ಲಿಂದ ಏಶಿಯಾ ಖಂಡಕ್ಕೂ ಬಂದಿತೆಂದು ಹೇಳಲಾಗುತ್ತದೆ.

ಸ್ಪೇಯ್ನಿನವರು ಯೂರೋಪಿಗೂ ಟೊಮೇಟೊ ತಂದರು. ಅಲ್ಲಿನ ವಾತಾವರಣಕ್ಕೆ ಅದು ಹುಲುಸಾಗಿ ಬೆಳೆಯಿತು, ೧೫೪೦ನೇ ಇಸವಿಯಷ್ಟೊತ್ತಿಗೆ ಬೇಸಾಯ ಪ್ರಾರಂಭವಾಗಿತ್ತು. ಸ್ಪೇಯ್ನಿನಲ್ಲಿ ೧೬೦೦ ಸಮಯದಲ್ಲಿ ಆಗಲೇ ಸಾಕಷ್ಟು ಅಡುಗೆಗಳಲ್ಲಿ ಟೊಮೇಟೋ ಬಳಸಲಾಗುತ್ತಿತ್ತು.

ಟೊಮೇಟೋ ದಾಖಲೆಗಳು

[ಬದಲಾಯಿಸಿ]

ಗೊರ್ಡೊನ್ ಗ್ರಹಾಮ್, ಇಂಗ್ಲೆಂಡ್, ಒಕ್ಲೊಹೋಮ (೧೯೮೬) ಬೆಳೆದ 3.51 kg ತೂಕವಿರುವ ಟೊಮೇಟೊ ಇದುವರೆಗೂ ಅತ್ಯಂತ ಭಾರವಾಗಿರುವ ಟೊಮೇಟೊ. ಅತಿ ದೊಡ್ಡ ಟೊಮೆಟೊ ಗಿಡ 'ಸನ್ ಗೋಲ್ಡ್' ಅನ್ನು ಇಂಗ್ಲೆಂಡಿನ ನ್ಯೂಟ್ರಿಕಲ್ಚರ್ ಕಂಪನಿಯು ೨೦೦೦ ಇಸವಿಯಲ್ಲಿ ಬೆಳೆಸಿದೆ. ಇದರ ಉದ್ದ ೧೯.೮ ಮೀ (೬೫ ಅಡಿ) ಯಾಗಿದೆ.

ಇದರಿಂದ ಹೃದಯದ ತೊಂದರೆಗೆ ಲಂಡನ್ನಿನಲ್ಲಿ ಮಾತ್ರೆತಯಾರಿಸುವ ಬಗ್ಗೆ ಪ್ರಯೋಗ ನಡೆಯುತ್ತಿದೆ

ಔಷಧೀಯ ಗುಣ

[ಬದಲಾಯಿಸಿ]

ಹೃದಯದ ರಕ್ತ ನಾಳದಲ್ಲಿರುವ ಕೊಬ್ಬು ನಿವಾರಣೆಗೆ ಟೊಮೆಟೋ ಸಾರದ ಮಾತ್ರೆ ಉಪಯೋಗಕರ. ಟೊಮೆಟೋ ಉಪಯೋಗಗಳು [೪] ಕೇವಲ ರುಚಿಗೆ ಮಾತ್ರವಲ್ಲದೆ ಸೌಂದರ್ಯಕ್ಕೆ ಲಾಭಗಳು ನೀಡುತ್ತದೆ. ಒಂದೆಡೆ ಇದನ್ನು ತರಕಾರಿಗೆ ಸೇರಿಸುವುದರಿಂದ ಅದರ ರುಚಿಯನ್ನು ಹೆಚ್ಚಿಸುತ್ತದೆ. ಇನ್ನೊಂದೆಡೆ ಟೊಮೆಟೊ ವಿಟಮಿನ್-ಎ, ವಿಟಮಿನ್-ಸಿ, ಫೈಬರ್, ಫೋಲೇಟ್ ಮತ್ತು ಕ್ಯಾಲ್ಸಿಯಂನಂತಹ ಅನೇಕ ಅಗತ್ಯ ಗುಣಗಳಿಂದ ಸಮೃದ್ಧವಾಗಿದೆ. ಚರ್ಚೆಪುಟ:ಟೊಮೇಟೊ

ಕರ್ನಾಟಕ ಮತ್ತು ಟೊಮೇಟೋ

[ಬದಲಾಯಿಸಿ]
ಕರ್ನಾಟಕದ ಟೊಮೇಟೋ

ಕರ್ನಾಟಕದಲ್ಲಿ ಬೆಂಗಳೂರಿನ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ಅರ್ಕಾರಕ್ಷಕ್‌’ ಟೊಮೆಟೊ ಬೆಳೆ ರೈತರ ಪಾಲಿಗೆ ವರದಾನವಾಗಿದೆ.ಅರ್ಕಾರಕ್ಷಕ್‌ ಟೊಮೆಟೊ ತಳಿಯು ಅತಿ ಹೆಚ್ಚು ಇಳುವರಿ ನೀಡುವ ಹಾಗೂ ಮೂರು ಮುಖ್ಯ ರೋಗಗಳನ್ನು ತಡೆಯುವ ಸಾಮರ್ಥ್ಯವುಳ್ಳ ತಳಿ ಇದು ಎಂದು ಈ ತಳಿಯನ್ನು ಅಭಿವೃದ್ಧಿಪಡಿಸಿರುವ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ.ಎ.ಟಿ. ಸದಾಶಿವ ಹೇಳುತ್ತಾರೆ.ಟೊಮೆಟೊ ಬೆಳೆಗೆ ಬರುವ ಸೊರುಗು ರೋಗ, ಎಲೆಮುರುಟು ರೋಗ ಹಾಗೂ ಎಲೆಚುಕ್ಕೆ ರೋಗಗಳನ್ನು ತಡೆಯುವ ಶಕ್ತಿ ಅರ್ಕಾರಕ್ಷಕ್‌ ತಳಿಗಿದೆ ಎನ್ನುತ್ತಾರೆ.

 • ಈ ತಳಿಯಿಂದಹೆಕ್ಟೇರ್‌ಗೆ 40 ರಿಂದ 50 ಸಾವಿರ ಟನ್‌ (?) ಇಳುವರಿ ದೊರೆಯುತ್ತದೆ. ಗಿಡವೊಂದಕ್ಕೆ ಕನಿಷ್ಠ 10 ರಿಂದ 12 ಕೆ.ಜಿ ಫಸಲು ಸಿಗುತ್ತದೆ. ಎಂದರೆ ಒಂದು ಎಕರೆಗೆ ೧೬/16 ಸಾವಿರ ಟನ್ !!.ಗಾತ್ರ ಹಾಗೂ ಆಕಾರ , ಹಣ್ಣಿನ ಬಣ್ಣ ಆಕರ್ಷಣೀಯವೂ ಆಗಿದ್ದು ಮತ್ತು ಗಟ್ಟಿಯಾಗಿದ್ದು ಮಾರಾಟಕ್ಕೆ ಅನುಕೂಲಕರವಾಗಿದೆ. ಫಸಲು ಕೊಯ್ದ ನಂತರ 15–20 ದಿನಗಳಷ್ಟು ಕಾಲ ಕೆಡದೇ ಉಳಿಯುವ ಸಾಮರ್ಥ್ಯವನ್ನು ಹೊಂದಿದೆ. ಆಧುನಿಕ ಬೇಸಾಯ ಪದ್ಧತಿಯಿಂದ ಕಡಿಮೆ ನೀರಿದ್ದರೂ ಇದನ್ನು ಬೆಳೆಯಬಹುದು.
ಬೀಜವನ್ನು ತಂದು 25 ದಿನಗಳ ಕಾಲ ನರ್ಸರಿಯಲ್ಲಿ ಬೆಳೆಸಿದ ನಂತರ ನಾಟಿ ಮಾಡಬೇಕು. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿ ಪಡಿಸಿರುವ ಔಷಧಿಯನ್ನು ತಿಂಗಳಿಗೊಮ್ಮೆ ಸಿಂಪರಣೆ ಮಾಡಬೇಕು.ಸಾಲಿನಿಂದ ಸಾಲಿಗೆ ನಾಲ್ಕು ಅಡಿಗಳ ಅಂತರವಿರಬೇಕು. ಗಿಡದಿಂದ ಗಿಡಕ್ಕೆ 2 ಅಡಿಗಳ ಅಂತರದಂತೆ ಒಂದು ಎಕರೆಯಲ್ಲಿ ಅಂದಾಜು 6 ಸಾವಿರ ಗಿಡಗಳನ್ನು ನಾಟಿ ಮಾಡಬೇಕು (ವಿಜ್ಞಾನಿ ಡಾ.ಎ.ಟಿ. ಸದಾಶಿವ).ಟೊಮೆಟೊ ಬೆಳೆಯಲು ಹನಿ ನೀರಾವರಿಗೆ ವೆಚ್ಚ ಬರಬಹುದು. ಇದಕ್ಕೆ ಸರ್ಕಾರ ಶೇ 90 ರಷ್ಟು ಸಬ್ಸಿಡಿ ನೀಡುವುದು.ಇತರ ಕೃಷಿ ವೆಚ್ಚ ಸೇರಿ ಆಧುನಿಕ ಕೃಷಿಗೆ ಎಕರೆಗೆ ₨ 4 ಲಕ್ಷ ಆಗಬಹುದು (2014).ಬೆಂಗಳೂರು ಸಂಶೋಧನಾ ಸಂಸ್ಥೆಯಲ್ಲಿ ಈ ಟೊಮೆಟೊ ಬೀಜ ಅರ್ಧ ಬೆಲೆಗೆ ಸಿಗುತ್ತದೆ. 10 ಗ್ರಾಂಗೆ ₨ 300 ನಿಗದಿ ಪಡಿಸಿದ್ದಾರೆ (2014).ಅರ್ಕಾರಕ್ಷಕ್‌’ ಟೊಮೆಟೊ ಬೆಳೆಯನ್ನು ಹೆನ್ನಾಗರದ ಪ್ರಗತಿಪರ ರೈತ ಹಾಗೂ ಹಾಪ್‌ಕಾಮ್‌್ಸ ನಿರ್ದೇಶಕ ಎಂ.ಬಾಬು ಅವರ ಐದು ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದು ಭರ್ಜರಿ ಬೆಳೆ ತೆಗೆದಿದ್ದಾರೆ(2014)


 • [ಚಿತ್ರ:Kg-as-vegetable-prices-surge-in-delhi.jpg ಕರ್ನಾಟಕದ ಟೊಮೇಟೋ]
 • [ಚಿತ್ರ:Image0140.jpg|thumb|right|ಕರ್ನಾಟಕದ ಟೊಮೇಟೊ]

ಭಾರತದಲ್ಲಿ ಬೆಳೆ

[ಬದಲಾಯಿಸಿ]

ಭಾರತದಲ್ಲಿ ಟೊಮೆಟೊ ಬೆಳೆಯನ್ನು ಸುಮಾರು 880 ಸಾವಿರ ಹೆಕ್ಟೇರ್‌ ಭೂ ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತದೆ. ಪ್ರತಿ ಹೆಕ್ಟೇರ್‌ಗೆ 20.7 ಮೆಟ್ರಿಕ್ ಟನ್ ಸರಾಸರಿ ಉತ್ಪತ್ತಿಯಿಂದ ಒಟ್ಟು 18,227 ಸಾವಿರ ಮೆಟ್ರಿಕ್ ಟನ್ ಉತ್ಪಾದನೆಯೊಂದಿಗೆ ವಿಶ್ವದ ಒಟ್ಟು ಉತ್ಪಾದನೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

ಅಡುಗೆಗೆ ಮಾತ್ರವಲ್ಲದೇ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಕಾರಣ, ಟೊಮೆಟೊಗೆ ಎಲ್ಲಾ ಕಾಲದಲ್ಲಿಯೂ ಬೇಡಿಕೆ ಇದ್ದದ್ದೇ. ಹೀಗೆ ಬಹು ಬೇಡಿಕೆಯಿರುವ ಟೊಮೆಟೊಗೆ ಕಾಯಿ ಕೊರೆಯುವ ಹುಳುಗಳು ಬಹು ದೊಡ್ಡ ಸವಾಲು. ಈ ಕೀಟಗಳು ಸುಮಾರು ಶೇ 50ಕ್ಕಿಂತಲೂ ಹೆಚ್ಚು ಬೆಳೆನಾಶಪಡಿಸಿ ದೊಡ್ಡ ಮೊತ್ತದ ನಷ್ಟ ಉಂಟುಮಾಡುತ್ತದೆ.

ಭಾರತದಲ್ಲಿ ಕೀಟ ಬಾಧೆ ಮತ್ತು ಪರಿಹಾರ

[ಬದಲಾಯಿಸಿ]

ಕೀಟಗಳ ಜೀವನ ಪರಿಚಯ

[ಬದಲಾಯಿಸಿ]
 1. ತಂಬಾಕು ಎಲೆ ತಿನ್ನುವ ಹುಳು (ಸ್ಪೊಡಾಪ್ಟರ ಲಿಟೂರ) : ಮೊಟ್ಟೆಯೊಡೆದ ಚಿಕ್ಕ ಮರಿಹುಳುಗಳು (ಕ್ಯಾಟರ್‌ಪಿಲ್ಲರ್ / ಲಾರ್ವ) ೩.೫ ರಿಂದ ೪ ಸೆಂಟಿ ಮೀಟರ್ ಉದ್ದವಿರುತ್ತದೆ, ನಂತರ ಬೆಳೆಯುತ್ತ ಸುಮಾರು ೩ ರಿಂದ ೪ ಇಂಚು ಉದ್ದವಾಗುತ್ತದೆ. ಇದರ ಕಡು ಹಸಿರು ಬಣ್ಣದ ದೇಹ ಕಂದು ಮಚ್ಚೆಗಳಿಂದ ಕೂಡಿರುತ್ತದೆ. ಈ ಹುಳು ಸುಮಾರು ೨೦ ರಿಂದ ೨೫ ದಿನಗಳಲ್ಲಿ ತನ್ನ ಪ್ರೌಢಾವಸ್ಥೆಯಿಂದ ಕೋಶಾವಸ್ಥೆಗೆ ಹೋಗುತ್ತದೆ. ಕೋಶಾವಸ್ಥೆಯ ೬ ರಿಂದ ೮ ದಿನಗಳ ನಂತರ ಪತಂಗವಾಗಿ ಹೊರಬರುತ್ತದೆ. ಹೊರಬಂದ ಪತಂಗಗಳು ಸಂತಾನಾಭಿವೃದ್ಧಿಯಲ್ಲಿ ತೊಡಗಿಕೊಳ್ಳುತ್ತವೆ. ಸುಮಾರು ೫೦೦ ರಿಂದ ೩ ಸಾವಿರಗಳಷ್ಟು ಮೊಟ್ಟೆಗಳನ್ನು ಗುಂಪು ಗುಂಪಾಗಿ ಇಡುವ ಹೆಣ್ಣು ಪತಂಗ ಅವುಗಳನ್ನು ತನ್ನ ಬಾಲದ ತುದಿಯ ಕೂದಲುಗಳಿಂದ ಮುಚ್ಚುತ್ತದೆ. ಈ ರೀತಿ ಮುಚ್ಚಲಾದ ಮೊಟ್ಟೆಗಳು ಭಕ್ಷಕ ಕೀಟಗಳಿಂದ ರಕ್ಷಣೆ ಪಡೆದುಕೊಳ್ಳುತ್ತವೆ.
 2. ಅಮೆರಿಕನ್ ಬೋಲ್ ವರ್ಮ್ (ಹೆಲಿಕೊವರ್ಪ ಅರ್ಮಿಜರ): ಇವು ತನ್ನ ಜೀವಿತಾವಧಿಯಲ್ಲಿ ಸುಮಾರು 500ರಷ್ಟು ಮೊಟ್ಟೆಗಳನ್ನು ಇಡುತ್ತವೆ. ಚಿಕ್ಕ ಮುತ್ತಿನಾಕಾರದ (೦.೪ ಮಿ.ಮೀ. ನಿಂದ ೦.೬ ಮಿ.ಮೀ.) ಮೊಟ್ಟೆಗಳನ್ನು ಒಂದೊಂದಾಗಿ ಗಿಡದ ಮೇಲ್ಭಾಗ ಮತ್ತು ಎಲೆಗಳ ಹಿಂಭಾಗದಲ್ಲಿ ಮತ್ತು ಹೂಗಳ ಮೇಲೆ ಇಡುತ್ತವೆ. ಮೊಟ್ಟೆಯೊಡೆದು ಚಿಕ್ಕ ಮರಿಹುಳು (ಕ್ಯಾಟರ್‌ಪಿಲ್ಲರ್ / ಲಾರ್ವ)ಗಳ ದೇಹ ಹಳದಿ ಅಥವಾ ಹಸಿರು ಬಣ್ಣದಿಂದ ಕೂಡಿದ್ದು, ೧.೫ ಮಿ.ಮೀ. ನಷ್ಟು ಉದ್ದವಿರುತ್ತದೆ. ನಂತರ ಬೆಳೆಯುತ್ತ ೬ ಹಂತಗಳಲ್ಲಿ ಸುಮಾರು ೧೫ ರಿಂದ ೧೭ ದಿನಗಳಲ್ಲಿ ೩೦ ರಿಂದ ೩೨ ಮಿ.ಮೀ. ಉದ್ದವಾಗುತ್ತದೆ. ವಯಸ್ಕ ಹುಳುವಿನ ದೇಹ ಕಡು ಹಳದಿ ಅಥವಾ ಹಸಿರು ಬಣ್ಣದ ದೇಹದ ಮೇಲ್ಭಾಗವು ಕಂದು ಪಾರ್ಶ್ವ ಗೆರೆಗಳಿಂದ ಕೂಡಿರುತ್ತದೆ. ಈ ಹುಳು ಸುಮಾರು ೨೦ ರಿಂದ ೨೫ ದಿನಗಳಲ್ಲಿ ತನ್ನ ಪ್ರೌಢಾವಸ್ಥೆಯಿಂದ ಕೋಶಾವಸ್ಥೆಗೆ ಹೋಗುತ್ತದೆ. ಕೋಶಾವಸ್ಥೆಯ ೬ ರಿಂದ ೮ ದಿನಗಳ ನಂತರ ಪತಂಗವಾಗಿ ಹೊರಬರುತ್ತದೆ. ಹೊರಬಂದ ಪತಂಗಗಳು ಸಂತಾನಾಭಿವೃದ್ಧಿಯಲ್ಲಿ ತೊಡಗಿಕೊಳ್ಳುತ್ತವೆ.

ಹಾನಿಯ ಲಕ್ಷಣಗಳು

[ಬದಲಾಯಿಸಿ]

ಮೊಟ್ಟೆಯಿಂದ ಹೊರಬಂದ ಚಿಕ್ಕ ಮರಿಹುಳುಗಳು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ, ನಂತರ ಗಿಡದ ಮೊಗ್ಗು, ಹೂಗಳನ್ನು ತಿನ್ನುತ್ತವೆ. ಕಾಯಿ ಕಟ್ಟುತ್ತಿದ್ದಂತೆ ಕಾಯಿಯ ಮೇಲೆ ದಾಳಿಮಾಡುತ್ತವೆ, ಕಾಯಿ ಕೊರೆದು ತಿನ್ನುತ್ತದೆ, ಹಾಗೆ ತನ್ನ ದೇಹದ ಅರ್ಧ ಭಾಗದಷ್ಟು ಮಾತ್ರ ಕಾಯಿಯ ಒಳಗೆ ರಂಧ್ರ ಕೊರೆದು ತಿನ್ನುತ್ತದೆ ಮತ್ತು ತನ್ನ ತ್ಯಾಜ್ಯ ಹೊರಹಾಕುತ್ತದೆ, ಹೊರಹಾಕಿದ ತ್ಯಾಜ್ಯ ಕಾಯಿಯೊಂದಿಗೆ ಕೊಳೆತು ಕೆಟ್ಟ ವಾಸನೆ ಬರುತ್ತದೆ. ಇಂತಹ ಟೊಮೆಟೊ ಮಾರುಕಟ್ಟೆಯ ಮೌಲ್ಯ ಕಳೆದುಕೊಳ್ಳುತ್ತವೆ. ಈ ಕೀಟಗಳು ಎಳೆಯ ಕಾಯಿಯಿಂದ ಹಿಡಿದು ಸಂಪೂರ್ಣ ಹಣ್ಣಾದ ಎಲ್ಲಾ ಹಂತದ ಕಾಯಿಗಳನ್ನು ಕೊರೆದು ತಿನ್ನುತ್ತವೆ. ಹೀಗಾಗಿ ಇಳುವರಿಯು ಗಣನೀಯವಾಗಿ ಕಡಿಮೆಯಾಗುತ್ತದೆ. ಅಧ್ಯಯನದ ಪ್ರಕಾರ, ಶೇ ೨೦ ರಿಂದ ೩೫ ಬೆಳೆ ಹಾನಿ ಮತ್ತು ನಷ್ಟದ ಪ್ರಮಾಣ ದಾಖಲಾಗಿದೆ. ಈ ಕೀಟಗಳು ವರ್ಷದಾದ್ಯಂತ ಬೆಳೆಯ ಎಲ್ಲಾ ಹಂತಗಳಲ್ಲಿ ಬರುತ್ತವೆ. ಚಿಕ್ಕಬಳ್ಳಾಪುರ, ಚಿಂತಾಮಣಿ, ದೇವನಹಳ್ಳಿ, ಹೊಸಕೋಟೆ, ಮಾಲೂರು, ಬಂಗಾರಪೇಟೆ, ಕೆ.ಜಿ.ಎಫ್., ಕೋಲಾರ, ಬೆಂಗಳೂರು ಗ್ರಾಮಾಂತರ ತಾಲ್ಲೂಕಿನ ಹಳ್ಳಿಗಳಲ್ಲಿ, ಪ್ರತಿ ವರ್ಷವೂ ಈ ಕೀಟಗಳು ಕಾಣಸಿಕ್ಕಿವೆ. ಮಾತ್ರವಲ್ಲದೆ ಇಳುವರಿಯು ಗಣನೀಯವಾಗಿ ಕಡಿಮೆಯಾಗುತ್ತದೆ.

ಕೀಟಗಳ ನಿರ್ವಹಣೆ

[ಬದಲಾಯಿಸಿ]

ಬೇಸಿಗೆಯಲ್ಲಿ, ಆಳವಾಗಿ ಉಳುಮೆ ಮಾಡಬೇಕು. ಈ ರೀತಿ ಮಾಡುವುದರಿಂದ ಮಣ್ಣಿನಲ್ಲಿ ಹುದುಗಿರುವ ಹುಳುಗಳು, ಕೋಶಾವಸ್ಥೆಯ ಕೀಟಗಳು ಸಹ ಮೇಲೆ ಬರುತ್ತವೆ. ಇವುಗಳನ್ನು ಕೀಟ ಭಕ್ಷಕಪಕ್ಷಿಗಳು ಹೆಕ್ಕಿ ತಿನ್ನುತ್ತವೆ ಮತ್ತು ಸೂರ್ಯನ ಬಿಸಿಲಿನ ಶಾಖದಿಂದಲೂ ಹುಳುಗಳು ಸಾಯುತ್ತವೆ.

ಗಿಡಗಳ ಮೇಲೆ ಕಾಣುವ ಕೀಟಗಳನ್ನು ಹಿಡಿದು ನಾಶಪಡಿಸುವುದು. ಈ ಕೀಟಗಳು ಎಲೆಯ ಕೆಳಭಾಗದಲ್ಲಿ ಹೂಗಳ ಹತ್ತಿರ ಇಡುವ ಮೊಟ್ಟೆಗಳನ್ನು ಗುರುತಿಸಿ ನಾಶಪಡಿಸುವುದು. ಟೊಮೆಟೊ ಸುತ್ತ ಅಡೆ ಸಾಲು ಬೆಳೆಯಾಗಿ ಹರಳು ಅಥವಾ ತಂಬಾಕು ಅಥವಾ ಮುಸುಕಿನ ಜೋಳ ಅಥವಾ ಸೇವಂತಿಗೆ ಹೂ ಬೆಳೆದರೆ, ಈ ಕೀಟಗಳು ಹರಳು ಅಥವಾ ಸೇವಂತಿಗೆ ಹೂ ಗಿಡಗಳಿಗೆ ಹೆಚ್ಚು ಆಕರ್ಷಿತವಾಗುತ್ತದೆ ಮತ್ತು ಟೊಮೆಟೊ ಬೆಳೆಗೆ ಹಾನಿ ಕಡಿಮೆಯಾಗುತ್ತದೆ.

ಸಾರಜನಕಯುಕ್ತ (ಯೂರಿಯಾ) ರಸಗೊಬ್ಬರದ ಬಳಕೆ ಕಡಿಮೆ ಮಾಡಬೇಕು. ಸಾರಜನಕ ಹೆಚ್ಚಾದರೆ, ಗಿಡಗಳು ದಟ್ಟವಾಗಿ ಬೆಳೆದು ಕೀಟಗಳಿಗೆ ಉತ್ತಮ ಆಹಾರವಾಗುತ್ತದೆ. ಮೋಹಕ ಅಥವಾ ಆಕರ್ಷಿತ ಬಲೆ (ಮಾರುಕಟ್ಟೆಯಲ್ಲಿ ಲಭ್ಯ) ಅಳವಡಿಸಿದರೆ ಪತಂಗಗಳು ಬಂದು ಈ ಬಲೆಯೊಳಗೆ ಬೀಳುತ್ತವೆ.

ಟ್ರೈಕೋಗ್ರಾಮ ಎಂಬ ಪರಾವಲಂಬಿ ದುಂಬಿಗಳು ಟ್ರೈಕೋಕಾರ್ಡ್ ರೂಪದಲ್ಲಿ ಮಾರುಕಟ್ಟೆಯಲ್ಲಿ ಲಭ್ಯ, ಇವುಗಳನ್ನು ಎಕರೆಗೆ ೧.೫ ಸೀ.ಸೀ. ಕಾರ್ಡ್‌ಗಳನ್ನು ಗಿಡಗಳಿಗೆ ಕಟ್ಟಬಹುದು. ಟ್ರೈಕೋಗ್ರಾಮ ದುಂಬಿಯು, ಈ ಹುಳುಗಳ ಮೊಟ್ಟೆಯ ಒಳಗೆ ತನ್ನ ಮೊಟ್ಟೆಯಿಡುತ್ತವೆ ಹಾಗೂ ಟ್ರೈಕೋಗ್ರಾಮ ಮೊಟ್ಟೆಯಿಂದ ಹೊರಬಂದ ಮರಿದುಂಬಿಹುಳುಗಳು ಈ ಹುಳುಗಳ ಮೊಟ್ಟೆಯನ್ನು ಒಳಗಿನಿಂದಲೇ ತಿಂದು ಬೆಳೆಯುತ್ತವೆ. ಹಾಗಾಗಿ ಈ ಹುಳುಗಳ ಮೊಟ್ಟೆ ನಾಶವಾಗಿ ಈ ಕೀಟಗಳ ನಿಯಂತ್ರಣವಾಗುತ್ತದೆ.

ನ್ಯೂಕ್ಲಿಯರ್ ಪಾಲಿ ಹೈಡ್ರೋಸಿಸ್ ವೈರಸ್‌ ಅನ್ನು ಶೇ ೨ರಷ್ಟು ಹಾಕಬೇಕು. ಇದು ಮಾರುಕಟ್ಟೆಯಲ್ಲಿ ಲಭ್ಯ. ಪ್ರತಿ ಲೀಟರ್ ನೀರಿಗೆ ೧ ಮೀ.ಲೀ. ಬೆರೆಸಿ ಸಿಂಪಡಿಸಬಹುದು.ಬೇವಿನ ಬೀಜಗಳನ್ನು ನೆನೆಸಿದ ದ್ರಾವಣ ಅಥವಾ ಬೇವಿನ ಎಣ್ಣೆ ೫-೧೦ ಮೀ.ಲೀ. ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು.

ಪ್ರಕೃತಿಗೆ ಹಾನಿಯಾಗದ ಹಾಗೆ ಅತ್ಯಂತ ಕಡಿಮೆ ರಾಸಾಯನಿಕಗಳನ್ನು ಬಳಸಿ ಕೀಟಗಳ ನಿರ್ವಹಣೆ ಮಾಡಬೇಕು ಮತ್ತು ಕೀಟಗಳ ಸಂಖ್ಯೆ ಕಡಿಮೆ ಇರುವಾಗಲೇ ಹತೋಟಿ ಕ್ರಮ ಕೈಗೊಳ್ಳುವುದು ಉತ್ತಮ. ಸ್ಪೀನೋಸಾಡ್ ಅಥವಾ ಫ್ಲೂಬೆಂಡಾಮೈಡ್ ಅಥವಾ ಇಂಡಾಕ್ಸಾಕಾರ್ಬ್ ೦.೫ ರಿಂದ ೦.೮ ಮಿ.ಲೀ. ಅಥವಾ ಕ್ವೀನಾಲ್ಫಾಸ್ ೧ ಮೀ.ಲೀ. ಅಥವಾ ಪಾಸಲೋನ್ ೧.೩ ಮೀ.ಲೀ. ಯಾವುದಾದರೂ ಒಂದನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು

ಮರ ಟೊಮೇಟೊ

[ಬದಲಾಯಿಸಿ]
 • ಫ್ಲೋರಿಡಾದ ವಾಲ್ಟ್‌ ಡಿಸ್ನೆ ವರ್ಡ್‌ ರೆಸಾರ್ಟ್‌ ಗ್ರೀನ್‌ ಹೌಸ್‌ನಲ್ಲಿ-: ೩೨ಸಾವಿರ ಟೊಮೆಟೊ ಕೊಟ್ಟ ಮರ![[೧]]

ಹೊರಗಿನ ಸಂಪರ್ಕಗಳು ಹಾಗೂ ಉಲ್ಲೇಖಗಳು

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
 1. ೧.೦ ೧.೧ ೧.೨ "Slow Food® Upstate" (PDF). Renato Vicario. Archived from the original (PDF) on 4 ಮಾರ್ಚ್ 2016. Retrieved 1 January 2014.
 2. "Solanum lycopersicum- Tomato". Encyclopedia of Life. Retrieved 1 January 2014.
 3. "Solanaceae Source: Phylogeny of the genus Solanum". Natural History Museum. Archived from the original on 2012-06-04. Retrieved 2015-03-22. Molecular phylogenetic analyses have established that the formerly segregate genera Lycopersicon, Cyphomandra, Normania, and Triguera are nested within Solanum, and all species of these four genera have been transferred to Solanum
 4. "ಟೊಮೆಟೊ ಆರೋಗ್ಯ ಪ್ರಯೋಜನಗಳು". kannadanews.today.
"https://kn.wikipedia.org/w/index.php?title=ಟೊಮೇಟೊ&oldid=1129237" ಇಂದ ಪಡೆಯಲ್ಪಟ್ಟಿದೆ